` congress, - chitraloka.com | Kannada Movie News, Reviews | Image

congress,

 • Malashree To Join Congress?

  will malashree join congress?

  As the Assembly elections approach there are more and more film actors who are ready to join politics and give it a try. The latest it seems is Malashree. Producer Ramu and actress Malashree have remained far away from politics all these years.

  Malashree was the reigning star of the film industry in the 80s and 90s. Her popularity was no less than that of any hero. Even today she acts in lead roles in films which cannot be said of many other stars. She surprised everyone today by meeting DK Shivakumar, one of the top Congress politician in Karnataka and the Energy Minister. The details of the meeting was not revealed. But it left no doubt that Malashree will be joining Congress and is also likely to contest in the upcoming Assembly elections.

  Sources said that she is likely to contest from Bengaluru itself. That is what the Congress wants her to contest from sources said. But nothing is confirmed yet. 

 • ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿದ ಭಾವನಾ

  bhavana ramanna quits congress, joins bjp

  ಭಾವನಾ ರಾಮಣ್ಣ.. ಹಾಗೆಂದರೆ ಗೊಂದಲವಾಗಬಹುದು. ಚಂದ್ರಮುಖಿ ಖ್ಯಾತಿಯ ಭಾವನಾ ಎಂದರೆ ಕಣ್ಣರಳುತ್ತವೆ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ, ಪಕ್ಷಕ್ಕಾಗಿ, ಸಂಘಟನೆಗಾಗಿ ಓಡಾಡುತ್ತಿದ್ದ ಭಾವನಾ, ಈಗ ಬಿಜೆಪಿ ಸೇರಿದ್ದಾರೆ. ಚುನಾವಣೆಗೆ ಮೂರು ದಿನಗಳಿರುವಾಗ ಕಾಂಗ್ರೆಸ್ ತೊರೆದಿರುವ ಭಾವನಾ, ಬಿಜೆಪಿ ಸೇರಿದ್ದಾರೆ.

  ಮೂಲತಃ ದಾವಣಗೆರೆಯವರಾದ ಭಾವನಾ, ಈ ಬಾರಿ ಚಿತ್ರದುರ್ಗದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕ್ಷೇತ್ರದಲ್ಲಿ ಕೆಲಸವನ್ನು ಮಾಡಿ, ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಬಹಿರಂಗವಾಗಿ ಯಾರ ವಿರುದ್ಧವೂ ಮಾತನಾಡದ ಭಾವನಾ, ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್, ಭಾವನಾ ಅವರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ ಭಾವನಾ.

 • ರಾಜಕೀಯದ ಎಫೆಕ್ಟ್.. ಖುಷ್‍ಬೂ ಹೆಸರು ಬದಲಾವಣೆ

  khusbhoo sundar changes her name for political reasons

  ರಣಧೀರನ ಬೆಡಗಿ ಖುಷ್‍ಬೂ ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕಿ. ಮದುವೆಯಾದ ಮೇಲೆ ತಮ್ಮ ಹೆಸರನ್ನು ಖುಷ್‍ಬೂ ಸುಂದರ್ ಎಂದು ಬದಲಿಸಿಕೊಂಡಿರುವ ಖುಷ್‍ಬೂ, ಬಿಜೆಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಹೀಗೆ ತರಾಟೆಗೆ ತೆಗೆದುಕೊಳ್ಳುವ ಖುಷ್‍ಬೂರನ್ನು ಬಿಜೆಪಿಯ ಟ್ವಿಟ್ಟಿಗರು, ಖುಷ್‍ಬೂ ಅವರ ನಿಜವಾದ ಹೆಸರು ಖುಷ್‍ಬೂ ಅಲ್ಲ, ನಖಟ್‍ಖಾನ್. ರಾಜಕೀಯಕ್ಕಾಗಿ ಖುಷ್‍ಬೂ ತಮ್ಮ ಹೆಸರು ಮರೆಮಾಚಿ, ಖುಷ್‍ಬೂ ಸುಂದರ್ ಎಂದಿಟ್ಟುಕೊಂಡಿದ್ದಾರೆ ಎಂದು ಹುಯಿಲೆಬ್ಬಿಸಿದರು.

  ಇದಕ್ಕೆ ಟ್ವಿಟರ್‍ನಲ್ಲಿ ತಿರುಗೇಟು ನೀಡಿದ ಖುಷ್‍ಬೂ, ತಮ್ಮ ಖಾತೆಯ ಹೆಸರನ್ನು ಖುಷ್‍ಬೂ ಸುಂದರ್, ಬಿಜೆಪಿಯವರಿಗಾಗಿ ನಖಟ್‍ಖಾನ್ ಎಂದು ಬದಲಾಯಿಸಿದರು.

  ಖುಷ್‍ಬೂ ಮುಸ್ಲಿಂ ಮನೆತನದವರು. ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರು ಬದಲಾಯಿಸಿಕೊಂಡಿದ್ದರು. ಟ್ವಿಟರ್ ಹೆಸರು ಬದಲಿಸಿಕೊಂಡ ಖುಷ್‍ಬೂ, ಭಕ್ತರೇ, ನನ್ನ ಹೆಸರು ಇಡೀ ಭಾರತಕ್ಕೆ ಗೊತ್ತು. ಎರಡು ಹೆಸರುಗಳೂ ಗೊತ್ತು. ಅದನ್ನು ನಾನು ಮುಚ್ಚಿಟ್ಟಿಲ್ಲ. ಈಗ ನೀವು ಮುಚ್ಚಿಕೊಂಡಿರುವ ನಿಮ್ಮ ಮುಖವನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery