ಕೆಜಿಎಫ್ ಟ್ರೇಲರ್ ಬಂತು. ಹವಾ ಎಬ್ಬಿಸಿತು. ಕನ್ನಡದಲ್ಲಷ್ಟೇ ಅಲ್ಲ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಕೆಜಿಎಫ್ ಬಗ್ಗೆ ಇರುವ ಕ್ರೇಜ್ ಗೊತ್ತಾಯ್ತು. ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು ಎಂದರು ಯಶ್. ಅತಿಶಯೋಕ್ತಿಯೇನೂ ಇರಲಿಲ್ಲ. ಕನಸು ಕಂಡವರು ಪ್ರಶಾಂತ್ ನೀಲ್. ನರ್ವಸ್ ಆಗಿದ್ದೇನೆ ಎಂದು ಪ್ರಾಮಾಣಿಕವಾಗಿಯೇ ಹೇಳಿಕೊಂಡರು. ಶಾರೂಕ್ ಝೀರೋಗೆ ಎದುರಾಗಿ ಬರುತ್ತಿದೆ ಎಂಬ ಮಾತಿಗೆ `ನಾನೂ ಶಾರೂಕ್ ಅಭಿಮಾನಿ. ಅದೊಂದು ಗೌರವ' ಎಂದರು ಯಶ್. ಯಶ್ ನನ್ನ ತಮ್ಮನಿದ್ದ ಹಾಗೆ ಎಂದರು ವಿಶಾಲ್. ಹೀಗೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕೆಜಿಫ್ ಟ್ರೇಲರ್‍ಗೆ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಏನ್ ಹೇಳಿದ್ದಾರೆ ಗೊತ್ತಾ..?
ಕಿಚ್ಚ ಸುದೀಪ್ : ಜ್ವಾಲಾಮುಖಿ ಇನ್ನೇನು ಸ್ಫೋಟಗೊಳ್ಳುವ ಹಾಗಿದೆ. ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ನಿರ್ದೇಶಕ ಪ್ರಶಾಂತ್ ನೀಲ್‍ಗೆ ಹ್ಯಾಟ್ಸಾಫ್. ಯಶ್ ಲುಕ್ ಚೆನ್ನಾಗಿದೆ. ಹೊಂಬಾಳೆ ಫಿಲಂಸ್‍ಗೆ ಅಭಿನಂದನೆಗಳು.
ನವರಸನಾಯಕ ಜಗ್ಗೇಶ್ : ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ನವಿಲುಗರಿ. ಭಾರತದ ದಶದಿಕ್ಕು ತಲುಪಲಿ ಕನ್ನಡಿಗರ ಕಾಯಕ.
ರಾಣಾ ದಗ್ಗುಬಾಟಿ : ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು.
ರಾಮ್‍ಗೋಪಾಲ್ ವರ್ಮಾ : ಕೆಜಿಎಫ್ ಟ್ರೇಲರ್ ನೀವು ನೋಡಲೇಬೇಕು. ಉ.ಭಾರತದ ಚಿತ್ರಗಳಿಗಿಂತ ದ.ಭಾರತದ ಚಿತ್ರಗಳು ಬೆಳೆಯುತ್ತಿವೆ.
ಶ್ರೀಮುರಳಿ : ಒಂದೊಳ್ಳೆ ಅನುಭವಕ್ಕಾಗಿ ಕೆಜಿಎಫ್ ನೋಡಿ. ನಾನೂ ಕೂಡಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.
ಶಶಾಂಕ್, ನಿರ್ದೇಶಕ - ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಎಂದರೆ ಇದೇ.. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ತಂಡಕ್ಕೆ ಶುಭಾಶಯಗಳು
ಡ್ಯಾನಿಶ್ ಸೇಠ್ : ವ್ಹಾವ್... ವ್ಹಾವ್... ವ್ಹಾವ್.. ಕೆಜಿಎಫ್ ಅದ್ಭುತ ಟ್ರೇಲರ್.
ಹರಿಪ್ರಿಯಾ : ಟ್ರೇಲರ್ ಅದ್ಭುತವಾಗಿದೆ. ಸಿನಿಮಾ ನೋಡಲು ಕಾತುರಳಾಗಿದ್ದೇನೆ.
ರಶ್ಮಿಕಾ ಮಂದಣ್ಣ : ಓ ಮೈ ಗಾಡ್.. ಓ ಮೈ ಗಾಡ್.. ಓ ಮೈ ಗಾಡ್.. ಅದ್ಭುತ ಟ್ರೇಲರ್.
ಕೃಷ್ಣ, ನಿರ್ದೇಶಕ : ಟ್ರೇಲರ್ ನಿಜಕ್ಕೂ ಗಮನ ಸೆಳೆಯುತ್ತಿದೆ. ಸುದೀರ್ಘ ವರ್ಷಗಳ ಶ್ರಮ, ಪ್ರತಿಭೆ ಎದ್ದು ಕಾಣುತ್ತಿದೆ.
ಆರ್ಯ : ಅತ್ಯದ್ಭುತ ಟ್ರೇಲರ್. 3 ವರ್ಷಗಳ ಶ್ರಮ ಹೇಗಿದೆ ಅನ್ನೋದಕ್ಕೆ ಟ್ರೇಲರ್ ಸಾಕ್ಷಿ.
ಪವನ್ ಒಡೆಯರ್ : ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ರೋಮಾಂಚನಗೊಳಿಸುವ ಟ್ರೇಲರ್.
ಶೃತಿ ಹರಿಹರನ್ : ಟ್ರೇಲರ್ ಥ್ರಿಲ್ ನೀಡುತ್ತಿದೆ.
ರಿಷಬ್ ಶೆಟ್ಟಿ : ಇದು ಮಾಸ್. ಇದು ಕ್ಲಾಸ್. ಅಥವಾ ಆ ಎರಡನ್ನೂ ಮೀರಿದ್ದು. ಕನ್ನಡ ಸಿನಿಮಾ ಎಂದರೆ ಇದು. ಪ್ರಶಾಂತ್ ನೀಲ್ ಮತ್ತೊಮ್ಮೆ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಯಶ್ ಅವರನ್ನು ಬಣ್ಣಿಸಲು ಪದಗಳಿಲ್ಲ.
ಹೇಮಂತ್ ರಾವ್ : ಇದೊಂದು ಎಪಿಕ್. ಆ ದೃಶ್ಯ ವೈಭವ, ಮೇಕಿಂಗ್ ಅದ್ಭುತ.