` srinidhi shetty, - chitraloka.com | Kannada Movie News, Reviews | Image

srinidhi shetty,

  • ಕೆಜಿಎಫ್ ಚಾಪ್ಟರ್ 2 : ಪ್ರಚಾರವೂ ತೂಫಾನ್..!

    ಕೆಜಿಎಫ್ ಚಾಪ್ಟರ್ 2 : ಪ್ರಚಾರವೂ ತೂಫಾನ್..!

    ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಿದೆ. ಲಿರಿಕಲ್ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಅತೀ ಹೆಚ್ಚು ವೀಕ್ಷಣೆ ಪಡೆದಿದೆ ತೂಫಾನ್ ಸಾಂಗ್.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಏಪ್ರಿಲ್ 14ಕ್ಕೆ. ಆ ಸಮಯಕ್ಕೆ ದೊಡ್ಡ ದೊಡ್ಡ ಚಿತ್ರಗಳ ಪೀಕ್ ಟೈಂ ಡೌನ್ ಆಗಿರುತ್ತೆ. ಹೀಗಾಗಿಯೇ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ. ಇದೆಲ್ಲವೂ ನಿರೀಕ್ಷಿತವೇ ಆಗಿದ್ದರೂ ಚಿತ್ರತಂಡ ಪ್ರಚಾರವನ್ನು ವಿಭಿನ್ನವಾಗಿಯೇ ಮಾಡುತ್ತಿದೆ.

    ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕಳಿಸಬೇಕು. ಅದೇನ್ ಮಹಾ ಎಂದುಕೊಳ್ಳಬೇಡಿ. ಅದನ್ನು ಬರೆದು ಕಳಿಸಬೇಕು. ಆ ಪೋಸ್ಟರ್‍ನ್ನು ಚಿತ್ರದ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಬಳಸಿಕೊಳ್ಳುತ್ತೆ ಕೆಜಿಎಫ್ ಟೀಂ. ಗೆಟ್ ರೆಡಿ..

  • ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2, 50 ದಿನ ಪೂರೈಸಿದೆ. ಇಂಡಿಯಾದಲ್ಲಿ 390ಕ್ಕೂ ಹೆಚ್ಚು ಕೇಂದ್ರಗಳಲ್ಲಿ, ವಿದೇಶಗಳಲ್ಲಿ 10 ಕೇಂದ್ರಗಳಲ್ಲಿ 50 ದಿನ ಪೂರೈಸಿರುವುದು ಒಂದು ದಾಖಲೆಯೇ. ವಿಶ್ವದಾಖಲೆಯೇ.

    ಈ ಹಾದಿಯಲ್ಲಿ ಕೆಜಿಎಫ್ ಎದುರು ನಿಂತ ಚಿತ್ರಗಳು ಸಣ್ಣ ಚಿತ್ರಗಳೇನೂ ಅಲ್ಲ. ಪ್ರಾದೇಶಿಕ ಚಿತ್ರಗಳ ಜೊತೆಗೆ ಬಾಲಿವುಡ್ ಚಿತ್ರಗಳೂ ಬಂದವು. ಹಾಲಿವುಡ್ ಚಿತ್ರಗಳೂ ಬಂದವು. ಕೆಲವು ಗೆದ್ದವು. ಇನ್ನೂ ಕೆಲವು ಬಿದ್ದವು. ಅವೆಲ್ಲವನ್ನೂ ಎದುರಿಸಿಯೇ ಗೆದ್ದ ಚಿತ್ರ ಕೆಜಿಎಫ್ ಚಾಪ್ಟರ್ 2.

    ಅಂದಹಾಗೆ ಇವತ್ತಿನಿಂದ ಕೆಜಿಎಫ್ ಚಾಪ್ಟರ್ 2, ಒಟಿಟಿಯಲ್ಲಿ ನೇರವಾಗಿಯೇ ಸಿಗಲಿದೆ. ಅಂದರೆ ಇದುವರೆಗೆ ಇದ್ದ ದುಡ್ಡು ಕೊಟ್ಟು ವೀಕ್ಷಿಸುವ ಅಗತ್ಯವಿಲ್ಲ. ಅಮೇಜಾನ್ ಪ್ರೈಂ ಇದ್ದವರು ಉಚಿತವಾಗಿಯೇ ನೋಡಬಹುದು. ಇದುವರೆಗೆ ಸಬ್‍ಸ್ಕ್ರಿಪ್ಷನ್ ಇದ್ದರೂ, 199 ರೂ. ಕೊಟ್ಟು ನೋಡಬೇಕಿತ್ತು.

    ಅಂದಹಾಗೆ ಇದುವರೆಗೆ ಈ ಚಿತ್ರ ಥಿಯೇಟರುಗಳಲ್ಲಿ 1240 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದೂ ದಾಖಲೆಯೇ..

  • ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಶೆಟ್ಟಿ

    ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಶೆಟ್ಟಿ

    ಕನ್ನಡ ಚಿತ್ರರಂಗಕ್ಕೆ ಹೊಸ ಚರಿತ್ರೆ ಬರೆಯಲಿದೆ ಎಂಬ ನಿರೀಕ್ಷೆ ಮೂಡಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರುವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಚಿತ್ರದ ನಾಯಕಿ ರೀನಾ ದೇಸಾಯಿ ಪಾತ್ರದಲ್ಲಿ ನಟಿಸಿರೋ ಶ್ರೀನಿಧಿ ಶೆಟ್ಟಿ, ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್ ಚಾಪ್ಟರ್ 2. ಯಶ್ ಹೀರೋ ಆಗಿದ್ದರೆ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇನ್ನಿತರ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಚಿತ್ರದ ಉಳಿದವರ ಡಬ್ಬಿಂಗ್ ಮುಗಿದಿದೆ.

    ಇನ್ನು ನಾಯಕಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಬಿಟ್ಟರೆ ಒಪ್ಪಿಕೊಂಡಿರುವ ಇನ್ನೊಂದು ಸಿನಿಮಾ ತಮಿಳಿನ ಕೋಬ್ರಾ. ಆ ಚಿತ್ರದಲ್ಲಿ ವಿಕ್ರಂ ಹೀರೋ.

  • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..!

    news about kgf chapter 2 telugu remake rights is false

    ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

    ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

  • ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

    ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

    ಕೆಜಿಎಫ್ ಚಾಪ್ಟರ್ 1ನ ಮಾತು ಬಿಡಿ.. ನಿರೀಕ್ಷೆಗಳು ಕಡಿಮೆಯಿದ್ದವು. ಸಿಕ್ಕ ಗೆಲುವು ಬೋನಸ್. ಆದರೆ ಕೆಜಿಎಫ್ ಚಾಪ್ಟರ್ 2 ಹಾಗಲ್ಲ.. ನಿರೀಕ್ಷೆಗಳು ಬೆಟ್ಟದಷ್ಟಿವೆ. ಆ ಬೆಟ್ಟದಷ್ಟು ನಿರೀಕ್ಷೆ ಹುಟ್ಟೋಕೆ ಕಾರಣ ಚಾಪ್ಟರ್ 1 ಸೃಷ್ಟಿಸಿದ ಇತಿಹಾಸ. ಹಾಗಾದರೆ ಚಾಪ್ಟರ್ 2 ಹೇಗಿದೆ? ಅರೆ.. ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದೂವರೆ ತಿಂಗಳು ಟೈಮಿದೆ. ಈಗ್ಲೇ ಹೇಗ್ ಹೇಳೋಕಾಗುತ್ತೆ ಅನ್ನಬೇಡಿ. ಅದನ್ನು ನೋಡಿದವರೊಬ್ಬರು ಮೊದಲ ವಿಮರ್ಶೆ ಕೊಟ್ಟಿದ್ದಾರೆ.

    ಕೆಜಿಎಫ್ 2 ಸಿನಿಮಾ ನೋಡಿದ್ದು ಮನಸ್ಸಿಗೆ ಮುದ ನೀಡಿತು. ವಿಜಯ್ ಕಿರಗಂದೂರು ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಪ್ರಶಾಂತ್ ನೀಲ್ ಹೊಸ ಸ್ಟಾಂಡರ್ಡ್ ಸೆಟ್ ಮಾಡಿದ್ದಾರೆ. ಇದು ಪೃಥ್ವಿರಾಜ್ ಸುಕುಮಾರನ್ ಕೊಟ್ಟಿರೋ ವಿಮರ್ಶೆ.

    ಕೆಜಿಎಫ್ ಪ್ರಚಾರಕ್ಕೆ ತಯಾರಿ ಆರಂಭಿಸಿರುವ ಚಿತ್ರತಂಡ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಅವರನ್ನು ಭೇಟಿ ಮಾಡಿದೆ. ಮಲಯಾಳಂಣಲ್ಲಿ ಕೆಜಿಎಫ್ ವಿತರಣೆ ಹಕ್ಕು ಅವರದ್ದೇ. ಮಲಯಾಳಂನಲ್ಲಿ ವಿಭಿನ್ನ ಕಥಾಹಂದರದ ಚಿತ್ರಗಳಿಂದಲೇ ಸಕ್ಸಸ್ ಕಂಡಿರೋ ನಟ ಪೃಥ್ವಿರಾಜ್. ಈಗ ಕೆಜಿಎಫ್ 2 ವಿತರಣೆ ಮಾಡುತ್ತಿದ್ದಾರೆ. ಮಲಯಾಳಂನಲ್ಲಿ. 

  • ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಲೇಟು. ಏನ್ ಕಾರಣ ಗೊತ್ತಾ..?

    dela in kgf chapter 2 shooting

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಚಾಪ್ಟರ್ 2 ಭಯಂಕರ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಾಪ್ಟರ್ 2 ಬಗ್ಗೆ ನಿರೀಕ್ಷೆಗಳೂ ಮೌಂಟ್ ಎವರೆಸ್ಟ್ ಎತ್ತರದಲ್ಲಿವೆ. ಇನ್ನು ಚಿತ್ರದ ಕೆಲವು ಪಾತ್ರಗಳಿಗಾಗಿ ಭರ್ಜರಿಯಾಗಿಯೇ ಅಡಿಷನ್ ನಡೆಸಿದೆ ಕೆಜಿಎಫ್ ಟೀಂ. ಆದರೆ, ಶೂಟಿಂಗ್ ಮಾತ್ರ ಇನ್ನೂ ಶುರುವಾಗಿಲ್ಲ. 

    ಕೆಜಿಎಫ್ ಶೂಟಿಂಗ್ ವಿಳಂಬಕ್ಕೆ ಏನು ಕಾರಣ ಎಂದು ಹುಡುಕುತ್ತಾ ಹೋದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೆಟ್ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವೇ ಶೂಟಿಂಗ್ ವಿಳಂಬಕ್ಕೂ ಕಾರಣ ಎನ್ನಲಾಗುತ್ತಿದೆ. 

    ನಿರ್ದೇಶಕ ಪ್ರಶಾಂತ್ ನೀಲ್, ವಿಭಿನ್ನ ಕಲ್ಪನೆಯ ಸೆಟ್ ಹಾಕಿಸುತ್ತಿದ್ದು, ಅದು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಕೇಳುತ್ತಿದೆಯಂತೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ, ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್ ಎಂದಿದ್ದಾರೆ. ಯಶ್ ಕೂಡಾ ಚೆನ್ನಾಗಿ ಬರುವವರೆಗೆ ಕಾಯೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ವಿಳಂಬವಾಗುತ್ತಿದೆ.

  • ಕೆಜಿಎಫ್ ಟ್ರೇಲರ್‍ನ ಪವರ್‍ಫುಲ್ ಡೈಲಾಗ್ಸ್

    kgf dialogues goes viral

    ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್‍ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..

    ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?

    ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..

    ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.

    ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.

    ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..?  ಮಾಸ್ಟರ್ ಯಶ್ ಡೈಲಾಗ್ : ದುನಿಯಾ

    ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ.  ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.

    ಹೀಗೆ ಶುರುವಾಗುವ ಟ್ರೇಲರ್‍ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.

  • ಕೆಜಿಎಫ್ ನಾಯಕಿ ಕಥೆಯ ರಹಸ್ಯ ಹೇಳಿಬಿಟ್ರಾ..?

    srinidhi shetty talks about her role in kgf

    ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ. ಆಕೆಗಿದು ಮೊದಲ ಸಿನಿಮಾ. ಆದರೆ, ಕೆಜಿಎಫ್ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದರೂ, ಆಕೆ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅದಕ್ಕೆ ಕಾರಣ ಬೇರೆ ಯಾರೂ ಅಲ್ಲ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. 

    ಕಥೆ, ತಮ್ಮ ಪಾತ್ರದ ಕುರಿತು ಯಾರೊಬ್ಬರೂ ಹೊರಗೆ ಮಾತನಾಡಬಾರದು ಅನ್ನೊದು ಪ್ರಶಾಂತ್ ನೀಲ್, ಯಶ್ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರಿಗೂ ವಿಧಿಸಿರುವ ಕಟ್ಟಪ್ಪಣೆ. ಅದನ್ನು ಎಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ ಅನ್ನೋದೂ ಸತ್ಯ. ಇದರ ನಡುವೆ ಶ್ರೀನಿಧಿ ಶೆಟ್ಟಿ ಪಾತ್ರ ಏನು..? ಈ ಕುತೂಹಲವನ್ನು ಮುಂದಿಟ್ಟುಕೊಂಡೇ ಕೇಳಿರೋ ಪ್ರಶ್ನೆ ಇದು.

    ಕೆಜಿಎಫ್‍ನಲ್ಲಿ ನಾಯಕಿ ಡಾನ್ ಮಗಳಂತೆ. ಆಕೆಯನ್ನು ಕೊಲ್ಲಲೆಂದೇ ಹೀರೋ ಯಶ್ ಸುಪಾರಿ ತಗೊಂಡು ಕೆಜಿಎಫ್‍ಗೆ ಬರ್ತಾರಂತೆ. ಹೌದಾ ಅಂದ್ರೆ..

    ಕಥೆ ಸೂಪರ್ ಆಗಿದೆ ಎಂದು ಗಹಗಹಿಸಿ ನಕ್ಕಿದ್ದಾರೆ ಶ್ರೀನಿಧಿ. ಅಷ್ಟೆಲ್ಲ ಆಗಿ, ನೀವು ಹೇಳ್ತಿರೋ ಕಥೆ ಚಿತ್ರದಲ್ಲಿದೆಯೋ ಇಲ್ವೋ ನಂಗೆ ಗೊತ್ತಿಲ್ಲ. ನಾನೂ ರಿಲೀಸ್‍ಗೆ ಕಾಯ್ತಿದ್ದೇನೆ ಎಂದಿದ್ದಾರೆ.

  • ಕೆಜಿಎಫ್ ನಾಯಕಿ ಹೇಳಿದ ಸೀಕ್ರೆಟ್

    kgf heroine srinidhi

    ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ. 

    ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.

    ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.

    ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.

     

  • ಕೆಜಿಎಫ್ ನಾಯಕಿಗೆ ಕಲರಿಪಯಟ್ಟು ಪ್ರಾಕ್ಟೀಸ್ ಏಕೆ..?

    kgf heroine srinishi shetty

    ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ. ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್‍ನ ಈ ಸಿನಿಮಾ, ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ಚಿತ್ರೀಕರಣದಲ್ಲಿರುವ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ, ಈಗ ಕಲರಿಪಯಟ್ಟು ಪ್ರಾಕ್ಟೀಸ್ ಮಾಡುತ್ತಿದ್ದಾರೆ.

    ಕಲರಿಪಯಟ್ಟು ಕೇರಳದ ಸಮರಕಲೆ. ಭಾರತೀಯ ಪ್ರಕಾರದ ಮಾರ್ಷಲ್ ಆಟ್ರ್ಸ್. ಮರ್ಮ ಕಲೈ ಅಂತಾನೂ ಕರೀತಾರೆ. ಈ ಸಮರಕಲೆಯನ್ನ ಶ್ರೀನಿಧಿ ಶೆಟ್ಟಿ ಇದ್ದಕ್ಕಿದ್ದಂತೆ ಪ್ರಾಕ್ಟೀಸ್ ಮಾಡ್ತಿರೋದು ಏಕೆ..? ಕೆಜಿಎಫ್ ಸಿನಿಮಾಗೂ ಕಲರಿಪಯಟ್ಟು ಕಲೆಗೂ ಏನು ಸಂಬಂಧ..? ಗೊತ್ತಿಲ್ಲ.

    ಶ್ರೀನಿಧಿ ಶೆಟ್ಟಿಯವರ ಕಲರಿಪಯಟ್ಟು ಪ್ರಾಕ್ಟೀಸ್ ಫೋಟೋ, ಕೆಜಿಎಫ್ ಕುರಿತು ಇನ್ನಷ್ಟು ಕುತೂಹಲ ಸೃಷ್ಟಿಸಿರುವುದಂತೂ ಸತ್ಯ.

  • ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

    ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ನಂತರ ಹಲವು ಸ್ಟಾರ್‍ಗಳು ಚಿತ್ರವನ್ನು ನೋಡಿದ್ದಾರೆ. ಮೆಚ್ಚಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರನಟರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೀಗ ಶಿವ ರಾಜಕುಮಾರ್ ಕೂಡಾ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್`ನಲ್ಲಿ ಕೆಜಿಎಫ್ ನೋಡಿದ ಶಿವಣ್ಣ ಚಿತ್ರವನ್ನು ಮನಸಾರೆ ಹೊಗಳಿದರು. ಇದು ನಮ್ಮ ಚಿತ್ರರಂಗದ ಅದ್ಧೂರಿ ಸಿನಿಮಾ ಎಂದು ಪ್ರಶಂಸಿಸಿದರು.

    ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಹೆಮ್ಮೆ ಆಗುತ್ತೆ. ಡೈಲಾಗ್‍ಗಳಂತೂ ಅದ್ಧೂರಿಯಾಗಿವೆ. ಸೌಂಡಿಂಗ್ ಕೂಡಾ ಸಖತ್ತಾಗಿದೆ. ಕೆಜಿಎಫ್ ನಮ್ಮ ಸಿನಿಮಾ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ ಎಂದ ಶಿವಣ್ಣ ಯಶ್ ನನ್ನ ತಮ್ಮನಿದ್ದಂತೆ. ಯಶ್ ಮೇಲೆ ನನಗೆ ಸಪರೇಟ್ ಪ್ರೀತಿ ಇದೆ. ಅವರ ಹಾರ್ಡ್ ವರ್ಕಿಂಗ್ ಸೂಪರ್. ಯಶ್‍ನ ನೋಡ್ತಾ ಇದ್ರೆ ನನ್ನ ತಮ್ಮ ನೆನಪಾಗ್ತಾನೆ. ನನ್ನ ತಮ್ಮನೇ ಮುಂದೆ ಬಂದಂತೆ ಅನ್ನಿಸುತ್ತೆ ಎಂದರು ಶಿವಣ್ಣ.

    ಪ್ರಶಾಂತ್ ನೀಲ್ ನಿರ್ದೇಶನವನ್ನು ಹೊಗಳಿದ ಶಿವಣ್ಣ ಪ್ರಶಾಂತ್‍ರನ್ನು ಸರಸ್ವತಿ ಪುತ್ರ ಎಂದು ಹೊಗಳಿದರು. ಕೆಜಿಎಫ್ 3 ಬರುತ್ತೋ.. ಇಲ್ವೋ ಗೊತ್ತಿಲ್ಲ. ಪ್ರಶಾಂತ್‍ಗೇ ಕಾಲ್ ಮಾಡಿ ಕೇಳ್ತೇನೆ ಎಂದರು ಶಿವಣ್ಣ.

    ನನಗೆ ಚಿತ್ರದಲ್ಲಿ ಎಲ್ಲಕ್ಕಿಂತ ತಾಯಿ ಸೆಂಟಿಮೆಂಟ್ ಸೀನ್ ಇಷ್ಟವಾಯ್ತು ಎನ್ನೋದನ್ನೂ  ಮರೆಯಲಿಲ್ಲ ಶಿವಣ್ಣ. ಯಶ್ ಮೇಲೆ ನನಗೊಂಥರಾ ವಿಶೇಷ ಪ್ರೀತಿ. ಯಶ್ ಅವರ ಆರಂಭದ ದಿನಗಳಿಂದಲೂ ನೋಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರೇ ಎತ್ತರಕ್ಕೆ ಬೆಳೆದರೂ ಖುಷಿ. ಯಶ್ ಬೆಳೆದರೆ ಇನ್ನೂ ಒಂಥರಾ ಖುಷಿ ಎಂದರು ಶಿವಣ್ಣ.

  • ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

    ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

    ಒಂದು ಸಿನಿಮಾ ನೋಡುಗರ ಮೇಲೆ ಯಾವ್ಯಾವ ರೀತಿಯಲ್ಲೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಬೆರಗಾಗಿದ್ದೇವೆ. ನಕ್ಕಿದ್ದೇವೆ. ಒಂದೊಂದು ಸಿನಿಮಾ ಬೀರುವ ಒಂದೊಂದು ತರಾ. ಅದು ಸಿನಿಮಾಗಳಿಗಿಂತ ಹೆಚ್ಚಾಗಿ ನೋಡುವವರ ಮನಸ್ಥಿತಿ. ಈಗ ಕೆಜಿಎಫ್ ಸಿನಿಮಾ ಕೂಡಾ ಅಂಥದ್ದೇ ಕಾರಣದಿಂದ ಸುದ್ದಿಯಾಗಿದೆ.

    ಇಲ್ಲೊಬ್ಬ 15 ವಯಸ್ಸಿನ ಬಾಲಕ ಕೆಜಿಎಫ್‍ನ್ನು ಹಲವು ಬಾರಿ ನೋಡಿದ್ದಾನೆ. ನೋಡಿದ ಎಲ್ಲರಂತೆಯೇ ಇಷ್ಟಪಟ್ಟಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ರಾಕಿಭಾಯ್ ಪಾತ್ರ ಸಿಗರೇಟು ಸೇದುವುದು ಇಷ್ಟವಾಗಿ ಹೋಗಿದೆ. ಮತ್ತೆ ಮತ್ತೆ ನೋಡಿದ್ದಾನೆ. ಅಂಗಡಿಗೆ ಹೋಗಿ ಪ್ಯಾಕುಗಟ್ಟಲೆ ಸಿಗರೇಟು ತಂದಿದ್ದಾನೆ. ಪದೇ ಪದೇ ಸೇದಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ಕೆಲವೇ ದಿನಗಳಲ್ಲಿ ಅವನ ಹೊಟ್ಟೆ ತುಂಬಾ ಅಲರ್ಜೆಟಿಕ್ ಆಗಿ ಆಸ್ಪತ್ರೆ ಸೇರಿದ್ದಾನೆ. ಆ ಹುಡುಗ ಹೈದರಾಬಾದಿನವನು. 15 ವರ್ಷದ ಹುಡುಗನಾದ ಕಾರಣ ಹೆಸರು ಮತ್ತಿತರ ವಿವರ ಹೇಳುವಂತಿಲ್ಲ. ಹೇಳಬಾರದು.

    ಇದರ ಬಗ್ಗೆ ಮಕ್ಕಳು ಹೆಚ್ಚು ನಿಗಾವಹಿಸಬೇಕು ಎನ್ನುವುದು ವೈದ್ಯರ ವಾದ. ಇನ್ನು ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಬೇಕಾ ಎನ್ನುವವರಿಗೂ ಕೊರತೆ ಇಲ್ಲ. ಆದರೆ ಅದೇ ಕೆಜಿಎಫ್‍ನಲ್ಲಿ ರಾಕಿಭಾಯ್ ತಾಯಿಯನ್ನು ಪ್ರೀತಿಸುವ, ಆರಾಧಿಸುವ ದೃಶ್ಯಗಳೂ ಇದ್ದವು. ಯಶ್ ಅವರಷ್ಟೇ ಸ್ಟ್ರಾಂಗ್ ಆದ ರಮಿಕಾ ಸೇನ್ ಪಾತ್ರವೂ ಇತ್ತು. ಅದೆಲ್ಲವನ್ನೂ ಬಿಟ್ಟು ಅವನಿಗೆ ರಾಕಿಭಾಯ್ ಸಿಗರೇಟು ಸೇದುವ ದೃಶ್ಯ ಇಷ್ಟವಾಗಿ, ಅದಕ್ಕೆ ಗಂಟುಬಿದ್ದರೆ ಯಾರು ಏನು ಮಾಡೋಕೆ ಆಗುತ್ತೆ. ಅಂದಹಾಗೆ ರಿಯಲ್ ರಾಕಿಭಾಯ್ ಅರ್ಥಾತ್ ಯಶ್, ತಮ್ಮ ರಿಯಲ್ ಲೈಫಿನಲ್ಲಿ ಸಿಗರೇಟು ಸೇದುವ ಚಟ ಅಂಟಿಸಿಕೊಂಡಿಲ್ಲ.

  • ಕೆಜಿಎಫ್ ಪೈರಸಿ ಗೊತ್ತಾದ್ರೆ.. ಈ ನಂ.ಗೆ 8978650014 ಕರೆ ಮಾಡಿ

    kgf team war against piracy

    ಸಿನಿಮಾ ಮಾಡೋದಷ್ಟೆ ಅಲ್ಲ, ಸಿನಿಮಾ ರಿಲೀಸ್ ಮಾಡೋದು ಅತೀ ದೊಡ್ಡ ಚಾಲೆಂಜ್. ಈಗ ಆ ಚಾಲೆಂಜ್‍ಗಳ ಲಿಸ್ಟ್‍ಗೆ ಇನ್ನೊಂದು ಸೇರ್ಪಡೆ, ಚಿತ್ರವನ್ನು ಪೈರಸಿ ಆಗದಂತೆ ತಡೆಯೋದು. ಇತ್ತೀಚೆಗಷ್ಟೇ ರಿಲೀಸ್ ಆದ ರಜನಿ-ಅಕ್ಷಯ್ ಅಭಿನಯದ 2.0 ಸಿನಿಮಾಗೆ ಚಾಲೆಂಜ್ ಹಾಕಿ ಪೈರಸಿ ಮಾಡಿದ್ದರು ಹ್ಯಾಕರ್ಸ್. ಈಗ ಕೆಜಿಎಫ್ ತಂಡಕ್ಕೂ ಆ ಭಯ ಕಾಡುತ್ತಿದೆ. ಹಾಗೆಂದು ಸುಮ್ಮನೆ ಕೂರೋಕಂತೂ ಸಾಧ್ಯವಿಲ್ಲ. ಹೋರಾಡಲೇ ಬೇಕು.

    ಕೆಜಿಎಫ್ ಪೈರಸಿ ಆಗದಂತೆ ತಡೆಯಲು ಹಲವಾರು ಕ್ರಮ ಕೈಗೊಂಡಿರುವ ಕೆಜಿಎಫ್ ತಂಡ, ಅದಕ್ಕಾಗಿಯೇ ಒಂದು ಹೆಲ್ಪ್‍ಲೈನ್ ಆರಂಭಿಸಿದೆ. ಒಂದು ಟೀಂ ಸೆಟ್ ಮಾಡಿದೆ. ನಿಮಗೆ ಎಲ್ಲಾದರೂ ಕೆಜಿಎಫ್‍ನ ಪೈರಸಿ ವಿವರ, ಮಾಹಿತಿ ಸಿಕ್ಕರೆ ತಕ್ಷಣ ಈ ನಂ.ಗೆ 8978650014 ಕರೆ ಮಾಡಿ.

    ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್..  ಎಲ್ಲರೂ ತಮ್ಮ ಅಭಿಮಾನಿಗಳಿಗೆ ಮಾಡಿರುವ ಮನವಿ ಇದೇ. 4 ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾವನ್ನು ಥಿಯೇಟರಿನಲ್ಲಿಯೇ ನೋಡಿ.

  • ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

    ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

    ಕೆಜಿಎಫ್ ಚಾಪ್ಟರ್ 2ನಲ್ಲಿ ಬರೋ ಪಾತ್ರಗಳ ಜೊತೆ ನೀವು ಮಾತನಾಡಬಹುದು. ಗೇಮ್ ಆಡಬಹುದು. ಓಡಾಡಬಹುದು... ಇದು ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಡಿಜಿಟಲ್ ಕ್ರಾಂತಿಯ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಇದಕ್ಕಾಗಿಯೇ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಹೊಸ ವರ್ಚುವಲ್ ಜಗತ್ತನ್ನೇ ಸೃಷ್ಟಿಸಿದೆ. ಅದೇ ಕೆಜಿಎಫ್ ವರ್ಸ್.

    ಮೆಟಾವರ್ಸ್ ಅನ್ನೋದು ವರ್ಚುವಲ್ ಜಗತ್ತಿನ ಒಂದು ವರ್ಷನ್. ಅದರಲ್ಲಿಯೇ ಕೆಜಿಎಫ್ ಟೀಂ ಕೆಜಿಎಫ್ ವರ್ಸ್ ಸೃಷ್ಟಿಸಿದೆ. ಏಪ್ರಿಲ್ 7ನೇ ತಾರೀಕು ಅದಕ್ಕೆ ಸಂಬಂಧಪಟ್ಟಂತೆ ವೆಬ್‍ಸೈಟ್ ಅನಾವರಣವಾಗಲಿದೆ. ನೀವು ಆ ವೆಬ್‍ಸೈಟ್‍ಗೆ ಭೇಟಿ ಕೊಟ್ಟು, ಟೋಕನ್ ಪಡೆದರೆ ಆಯಿತು. ಚಿತ್ರದಲ್ಲಿ ಬರೋ ರಾಕೀಭಾಯ್, ರೀನಾ, ಅಧೀರ, ರುಮಿಕಾ ಸೇನ್.. ಹೀಗೆ ಪ್ರತಿಯೊಂದು ಪಾತ್ರಗಳೂ ನಿಮ್ಮನ್ನು ಎದುರುಗೊಳ್ಳಲಿವೆ.

    ಚಿತ್ರದಲ್ಲಿರೋ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಅವರ ವರ್ಚುವಲ್ ಪಾತ್ರಗಳು ನಿಮ್ಮೊಂದಿಗೆ ಆಟವಾಡುತ್ತವೆ. ಮಾತನಾಡುತ್ತವೆ. ಓಡಾಡುತ್ತವೆ.. ಇದೆಲ್ಲವೂ ಪ್ರಶಾಂತ್ ನೀಲ್ ಅವರ ಕಲ್ಪನೆ. ಇನ್ನೂ ಅನುಮಾನವಿದ್ದರೆ.. ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿದ್ದರೆ.. ತಲೆಕೆಡಿಸಿಕೊಳ್ಳಬೇಡಿ. ಏಪ್ರಿಲ್ 7ರವರೆಗೆ ಕಾಯಿರಿ.

  • ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರೋ ಸಿನಿಮಾಗೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಬಲವೂ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಮ್ಯಾಜಿಕ್ ನೋಡೋಕೆ ಇಡೀ ಸಿನಿಮಾ ಜಗತ್ತು ಕುತೂಹಲದಿಂದ ಕಾಯುತ್ತಿರುವಾಗ.. ಇನ್ನೊಂದೆಡೆ ಸಿನಿಮಾ ಒಂದರ ಹಿಂದೊಂದು ದಾಖಲೆಗಳನ್ನು ಬರೆಯುತ್ತಾ ಹೋಗುತ್ತಿದೆ.

    ಅಭಿಮಾನಿಗಳು ಸಿದ್ಧಪಡಿಸಿದ ಪೋಸ್ಟರ್‍ಗಳನ್ನು ಬಳಸಿಕೊಳ್ಳುತ್ತಿದೆ ಕೆಜಿಎಫ್ ಟೀಂ. ಇದೊಂದು ರೀತಿ ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳ ಪ್ರಚಾರ ಎನ್ನಬಹುದು.

    ರಿಲೀಸ್ ಆಗುವುದಕ್ಕೂ ಮೊದಲೇ ಹಿಟ್ ಎಂದು ಸಲೀಸಾಗಿ ಘೋಷಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಚಿತ್ರ ಗ್ರೀಸ್‍ನಲ್ಲೂ ರಿಲೀಸ್ ಆಗುತ್ತಿದೆ.ಗ್ರೀಸ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಮತ್ತು ದ.ಭಾರತದ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ಏಪ್ರಿಲ್ 13ರಂದು ಅಮೆರಿಕದಲ್ಲಿ ಸಿನಿಮಾ ಪ್ರೀಮಿಯರ್ ಶೋ ಇದೆ. ಕೆಜಿಎಫ್ ಟೀಂ ಅಲ್ಲಿಯೇ ಇರಲಿದೆ. ವಿದೇಶಿ ಮಾರುಕಟ್ಟೆಯನ್ನು ಈ ರೀತಿ ಆಕ್ರಮಿಸಿಕೊಳ್ಳುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ರಷ್ಯಾದಲ್ಲಿಯೂ ರಿಲೀಸ್ ಆಗುತ್ತಿರೋ ಕೆಜಿಎಫ್ ಚಾಪ್ಟರ್ 2, ಅಲ್ಲಿಯೂ ದಾಖಲೆ ಬರೆಯುತ್ತಿದೆ. ಎಲ್ಲ ಭಾಷೆಗಳ ವರ್ಷನ್ ಕೂಡಾ ಅಲ್ಲಿ ರಿಲೀಸ್ ಆಗಲಿದೆ.

    ಅಮೆರಿಕ, ಬ್ರಿಟನ್, ಸೇರಿದಂತೆ ವಿದೇಶಗಳಲ್ಲಿ ಆಗಲೇ ಟಿಕೆಟ್ ಬುಕಿಂಗ್‍ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ ಕೆಜಿಎಫ್.

    ರಾಕಿಂಗ್ ಫ್ಯಾನ್ಸ್ ಕ್ಲಬ್ ಕ್ರೇಜ್ ಹೇಗಿದೆಯೆಂದರೆ ಭೂಮಿಯಂದ 14 ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ 155 ಮಿಲಿಯನ್ ಕ್ರಾಸ್ ಮಾಡಿ ಮುನ್ನುಗ್ಗುತ್ತಿದ್ದರೆ, ಟೀಸರ್ ವೀಕ್ಷಣೆ 250 ಮಿಲಿಯನ್ ಕ್ರಾಸ್ ಮಾಡಿದೆ. ಎರಡೂ ದಾಖಲೆಯೇ..

    ಇದರಿಂದ ಖುಷಿಯಾಗಿರೋದು ನಿರ್ಮಾಪಕ ವಿಜಯ್ ಕಿರಗಂದೂರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿರೋ ಚಿತ್ರದಲ್ಲಿ ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ, ಬಿ.ಸುರೇಶ್.. ಮೊದಲಾದವರು ಇನ್ನಷ್ಟು ಸೆನ್ಸೇಷನ್ ಸೃಷ್ಟಿಸಿದ್ದಾರೆ.

  • ಕೆಜಿಎಫ್ ರಿಲೀಸ್ ಯಾವಾಗ..? - ಸೆ.19ಕ್ಕೆ ಹೇಳ್ತಾರೆ

    kgf release date to be announced on sep 19th

    ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹೇಳಲಿಕ್ಕೆಂದೇ ಒಂದು ಡೇಟ್ ಫಿಕ್ಸ್ ಮಾಡುವ ಟ್ರೆಂಡ್ ಶುರುವಾಗಿದೆಯಾ..? ದಿ ವಿಲನ್ ತಂಡ, ಗಣೇಶನ ಹಬ್ಬದ ದಿನ ರಿಲೀಸ್ ಡೇಟ್ ಹೇಳುತ್ತೇವೆ ಎಂದಿದ್ದರೆ, ಕೆಜಿಎಫ್ ಚಿತ್ರತಂಡವೂ ರಿಲೀಸ್ ಡೇಟ್ ಹೇಳಲಿಕ್ಕೆಂದೆ ಒಂದು ಡೇಟ್ ಫಿಕ್ಸ್ ಮಾಡಿದೆ.

    ಸೆಪ್ಟೆಂಬರ್ 19ರಂದು ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಆ ದಿನವೇ ಚಿತ್ರದ ಬಿಡುಗಡೆ ದಿನಾಂಕ ಹೇಳಲಿದೆ ಕೆಜಿಎಫ್ ಟೀಂ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಹೊಂಬಾಳೆ ಬ್ಯಾನರ್‍ನ ಬಹು ನಿರೀಕ್ಷಿತ ಚಿತ್ರ. ಕನ್ನಡದ ಬಿಗ್ ಬಜೆಟ್ ಚಿತ್ರವಾಗಿರೋ ಕೆಜಿಎಫ್, ಹೆಚ್ಚೂ ಕಡಿಮೆ 2 ವರ್ಷಗಳಿಂದ ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    Related Articles :-

    'KGF' Release Date To Be Announced On Sep 19th

  • ಕೆಜಿಎಫ್ ರಿಲೀಸ್‍ಗೂ ಮುನ್ನ ರಾಕಿಂಗ್ ಸ್ಟಾರ್ ತೀರ್ಥಯಾತ್ರೆ..

    kgf team visits temple before movie release

    ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಸುಬ್ರಹ್ಮಣ್ಯ.. ಹೀಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿದ್ದಾರೆ.

    ಕೊಲ್ಲೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು, ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಣಿಕೆ ಅರ್ಪಿಸಿದರು.

    ನಂತರ ಧರ್ಮಸ್ಥಳಕ್ಕೆ ತೆರಳಿ, ಮಂಜುನಾಥನ ದರ್ಶನ ಪಡೆದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು. ಅದಾದ ಬಳಿಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

  • ಕೆಜಿಎಫ್ ರಿಲೀಸ್‍ಗೂ ಮೊದಲೇ ಲೀಕ್ ಆಯ್ತಾ..?

    is kgf leaked ?

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ, ರಿಲೀಸ್‍ಗೂ ಮೊದಲೇ ಲೀಕ್ ಆಗಿಬಿಡ್ತಾ..? ಚಿತ್ರರಂಗವನ್ನು ಬೇತಾಳದಂತೆ ಕಾಡುತ್ತಿರುವ ಪೈರಸಿ ಭೂತ, ಕೆಜಿಎಫ್‍ನ್ನು ಆಕ್ರಮಿಸಿತಾ..? ಒಂದು ದೊಡ್ಡ ಆತಂಕ ಕಾಡೋಕೆ ಶುರುವಾಗಿದೆ. ಅದಕ್ಕೆ ಕಾರಣ ಆನ್‍ಲೈನ್‍ನಲ್ಲಿ ಕಾಣಿಸಿಕೊಂಡ ಎರಡು ಫೋಟೋಗಳು.

    ಆ ಫೋಟೋಗಳ ಮೇಲೆ ಇದುವರೆಗೆ ಟ್ರೇಲರ್‍ನಲ್ಲಿ ಕಾಣಿಸದೇ ಇರುವ ದೃಶ್ಯವಿದೆ. ಜೊತೆಗೆ ಸೆನ್ಸಾರ್ ಕಾಪಿ ಎನ್ನುವುದೂ ಕಾಣುತ್ತಿದೆ. ಹಾಗಾದರೆ, ಕೆಜಿಎಫ್ ಲೀಕ್ ಆಗಿದೆಯಾ..? 

    ಕೋಟಿ ಕೋಟಿ ಬಂಡವಾಳ ಸುರಿದು, ಕನ್ನಡ ಚಿತ್ರರಂಗ ಯಾವುದಕ್ಕೂ.. ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಲು ಹೊರಟ ವಿಜಯ್ ಕಿರಗಂದೂರುಗೆ ಇದು ದೊಡ್ಡ ಶಾಕ್.

    ಇತ್ತೀಚೆಗೆ ಬಿಡುಗಡೆಯಾಗುವ ಪ್ರತಿ ದೊಡ್ಡ ಚಿತ್ರವನ್ನೂ ಆನ್‍ಲೈನ್‍ನಲ್ಲಿ ಲೀಕ್ ಮಾಡುವ ಹ್ಯಾಕರ್‍ಗಳ ದೊಡ್ಡ ತಂಡವೇ ಜಗತ್ತಿನ ವಿವಿಧೆಡೆ ಕೆಲಸ ಮಾಡುತ್ತಿದೆ. ಕೆಜಿಎಫ್, ಇಂತಹ ಪೈರಸಿಕಳ್ಳರ ವಿರುದ್ಧವೂ ಎಚ್ಚೆತ್ತುಕೊಳ್ಳಲೇಬೇಕು. ರಿಲೀಸ್‍ಗೆ ತಲೆಕೆಡಿಸಿಕೊಳ್ಳುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು, ಈ ವಿಚಾರದ ಬಗ್ಗೆ ಎಚ್ಚರವಹಿಸಬೇಕು. 

  • ಕೆಜಿಎಫ್ ರೀನಾ ತಮಿಳಿನತ್ತ ಪಯಣ

    kgf heroine enters tamil films

    ಕೆಜಿಎಫ್ ಚಿತ್ರದಲ್ಲಿ ರೀನಾ ದೇಸಾಯಿ ಪಾತ್ರದಲ್ಲಿ ಮಿಂಚಿದ್ದ ಶ್ರೀನಿಧಿ ಶೆಟ್ಟಿ, 2ನೇ ಚಿತ್ರಕ್ಕೆ ಓಕೆ ಎಂದಿದ್ದಾರೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2ನಲ್ಲಿ ಬ್ಯುಸಿಯಿರುವ ಶ್ರೀನಿಧಿ, ತಮಿಳಿನಲ್ಲಿ ಚಿಯಾನ್ ವಿಕ್ರಂ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ವಿಕ್ರಂ ಹೀರೋ ಆಗಿರೋ ಈ ಚಿತ್ರದ ಮೂಲಕ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ತಮಿಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇದು ವಿಕ್ರಂ ಅಭಿನಯದ 58ನೇ ಸಿನಿಮಾ. ಡಿಮೊಂಟೆ ಕಾಲೊನಿ, ಇಮೈಕಾ ನೋಡಿಗಳ್ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಈ ಚಿತ್ರಕ್ಕೆ ಡೈರೆಕ್ಟರ್. ಭಾರತೀಯ ಚಿತ್ರರಂಗ ಮ್ಯೂಸಿಕಲ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಚಿತ್ರಕ್ಕಿದೆ.

    ವಿಕ್ರಂ ಈ ಚಿತ್ರದಲ್ಲಿ 23 ಲುಕ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ಹೀಗೆ ಸ್ಪೆಷಲ್ಲುಗಳ ಸುರಿಮಳೆಯೇ ಇರುವ ಚಿತ್ರದಲ್ಲಿ ಕೆಜಿಎಫ್ ಸ್ಪೆಷಲ್ ಬ್ಯೂಟಿ ನಟಿಸುತ್ತಿದ್ದಾರೆ. 

  • ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

    ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

    ಕೆಜಿಎಫ್ ಚಾಪ್ಟರ್ 2. ರಿಲೀಸ್ ಆಗೋಕೆ ರೆಡಿಯಾಗಿದೆ. ದೇಶಾದ್ಯಂತ ಈಗ ಕೆಜಿಎಫ್ ತೂಫಾನ್. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್  ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್.. ಎಲ್ಲರೂ ಈಗ ಟಾಕ್ ಆಫ್ ದಿ ಕಂಟ್ರಿ. ಈ ಕನ್ನಡದ ಸಿನಿಮಾ ಕ್ರೇಜ್ ಹೇಗಿದೆ ಅನ್ನೋದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಈ ಕ್ರೇಜ್ ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ಹೆಚ್ಚಾಗಿದೆಯಾ ಅನ್ನೋದು ಪ್ರಶ್ನೆ. ಹೌದು ಅನ್ನೋದೇ ಉತ್ತರ.

    ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆದ ನಂತರ ಅದು ಯಾವ ಭಾಷೆಗಳಲ್ಲಿ ಎಷ್ಟರಮಟ್ಟಿಗೆ ವೀಕ್ಷಣೆ ಪಡೆದಿದೆ ಅನ್ನೋದರ ಮೇಲೆ ಇದರ ಲೆಕ್ಕಾಚಾರವಿದೆ.

    ಹಿಂದಿಯಲ್ಲಿ 55 ಮಿಲಿಯನ್, ತಮಿಳಿನಲ್ಲಿ 12 ಮಿಲಿಯನ್, ಮಲಯಾಳಂನಲ್ಲಿ ಸುಮಾರು 9 ಮಿಲಿಯನ್ ಹಾಗೂ ತೆಲುಗಿನಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ ಕೆಜಿಎಫ್ ಟ್ರೇಲರ್. ಆದರೆ, ಕನ್ನಡದಲ್ಲಿ ಕೆಜಿಎಫ್ ಟ್ರೇಲರ್ ನೋಡಿದವರ ಸಂಖ್ಯೆ 19 ಮಿಲಿಯನ್. ಹೌದು.. ಇದು ಹೊಂಬಾಳೆಯವರ ಅಧಿಕೃತ ಪೇಜ್‍ನ ವೀಕ್ಷಣೆಯ ಲೆಕ್ಕ ಮಾತ್ರ. ಉಳಿದ ಲೆಕ್ಕದ ಮಾತು ಬಿಡಿ.. ಆದರೆ ಯಶ್‍ಗೆ ಕನ್ನಡಕ್ಕಿಂತ ಹಿಂದಿ, ತೆಲುಗಿನಲ್ಲೇ ಹೆಚ್ಚು ಕ್ರೇಜ್ ಇದೆ ಅನ್ನೋ ಮಾತಿಗೆ ಈಗ ಬಲವೂ ಸಿಕ್ಕಿದೆ.

    ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ನೋಡಿದವರ ಸಂಖ್ಯೆ ಕೇವಲ 2 ದಿನದಲ್ಲಿ 110 ಮಿಲಿಯನ್ ದಾಟಿದೆ. ಅರ್ಥಾತ್ ಟ್ರೇಲರ್ ನೋಡಿದವರ ಸಂಖ್ಯೆ 11 ಕೋಟಿಗೂ ಹೆಚ್ಚು. ಇದು ಕೇವಲ ಅಧಿಕೃತ ಹೊಂಬಾಳೆ ಪೇಜ್ ಲೆಕ್ಕ ಮಾತ್ರ..