` srinidhi shetty, - chitraloka.com | Kannada Movie News, Reviews | Image

srinidhi shetty,

  • ಏಪ್ರಿಲ್ 2020ಕ್ಕೆ ಕೆಜಿಎಫ್-ಚಾಪ್ಟರ್ 2 ರಿಲೀಸ್..?

    will kgf chapter 2 release in august 2020

    2018ರಲ್ಲಿ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2 ಚಿತ್ರೀಕರಣ ಹಂತದಲ್ಲಿದೆ. ಯಶ್ ಜೊತೆಗೀಗ ಸಂಜಯ್ ದತ್ ಜೊತೆಗೂಡಿದ್ದಾರೆ. ಈಗ ಶುರುವಾಗಿರೋದು ಚಿತ್ರದ ರಿಲೀಸ್ ಡೇಟ್ ಕುರಿತ ಸುದ್ದಿ. 2020ರ ಏಪ್ರಿಲ್‍ನಲ್ಲಿ ಕೆಜಿಎಫ್-2 ರಿಲೀಸ್ ಆಗಲಿದೆಯಂತೆ.

    ಮೊದಲಿನ ಪ್ಲಾನ್ ಪ್ರಕಾರ 2020ರ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಆದರೆ, ಈಗ ಏಪ್ರಿಲ್‍ಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗವನ್ನು ಮುಗಿಸಲು ಚಿತ್ರತಂಡ 2 ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಚಾಪ್ಟರ್ 2 ಬೇಗ ರೆಡಿಯಾಗುತ್ತಿರುವುದಕ್ಕೆ ಕಾರಣ, ಚಾಪ್ಟರ್ 2ನ ಬಹುತೇಕ ಶೂಟಿಂಗ್ ಮೊದಲೇ ಮುಗಿದಿತ್ತು ಎನ್ನಲಾಗುತ್ತಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಟೀಂನಲ್ಲಿ ಈಗಾಗಲೇ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಠ ಸಿಂಹ ಮೊದಲಾದವರೆಲ್ಲ ಇದ್ದಾರೆ. ಈಗ ಹೊಸದಾಗಿ ಸಂಜಯ್ ದತ್ ಜೊತೆಯಾಗಿದ್ದಾರೆ. ರವೀನಾ ಟಂಡನ್ ಚಿತ್ರತಂಡವನ್ನು ಸೇರಿಕೊಳ್ಳಬೇಕಿದೆ. 

    ಏಪ್ರಿಲ್ ಅಂದ್ರೆ ಉಳಿದಿರೋದು ಇನ್ನು ಏಳೇ ತಿಂಗಳು. ಏಪ್ರಿಲ್ ರಿಲೀಸ್ ಅನ್ನೋ ನಿರೀಕ್ಷೆ ಏನಾಗುತ್ತೋ ಏನೋ..

  • ಕಾರ್ಮಿಕರ ಜೊತೆ ರಾಕಿಭಾಯ್ ಸಾಮ್ರಾಜ್ಯ

    kfg chapter 2 first look creates huge craze

    ನರಾಚಿ ಗಣಿ.. ಅಲ್ಲಿರುವ 20 ಸಾವಿರ ಕಾರ್ಮಿಕರಿಗೆ ಶಕ್ತಿ ತುಂಬುವ ರಾಕಿಭಾಯ್, ಗರುಡನನ್ನು ಕೊಂದು ಹಾಕಿದ್ದಾನೆ. ದುಷ್ಟ ಸಂಹಾರವಾಗಿದೆ. ಮುಂದೆ.. ಅವನು ಅಲ್ಲಿ ಹೊಸದೊಂದು ಸಾಮ್ರಾಜ್ಯ ಕಟ್ಟಬೇಕು. ಕಟ್ಟುತ್ತಾನಾ..? ರಾಕಿಭಾಯ್ ಹೊಸ ಸಾಮ್ರಾಜ್ಯ ಕಟ್ಟುವುದು ಹಾಗೂ ಆ ಹಾದಿಯಲ್ಲಿರೋ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವುದು ಕೆಜಿಎಫ್ ಚಾಪ್ಟರ್ 2ನ ಕಥೆಯಾ..?

    ಕೆಜಿಎಫ್ ರಿಲೀಸ್ ಆದ ಒಂದು ವರ್ಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಪೋಸ್ಟರ್ ರಿಲೀಸ್ ಮಾಡಿರುವ ಪ್ರಶಾಂತ್ ನೀಲ್, ಪೋಸ್ಟರ್‌ನಲ್ಲಿ ಕೊಟ್ಟಿರುವುದು ಅದೇ ಸುಳಿವು. ಸಾಮ್ರಾಜ್ಯ ಪುನರ್ ನಿರ್ಮಾಣದಲ್ಲಿ..

    ಫಸ್ಟ್ ಲುಕ್‌ನಲ್ಲಿ ಕೂಡಾ ಸಂಜಯ್ ದತ್, ರವೀನಾ ಟಂಡನ್ ಪಾತ್ರದ ಸಣ್ಣ ಸುಳಿವನ್ನೂ ಕೊಟ್ಟಿಲ್ಲ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್‌ಗೆ ಶ್ರೀನಿಧಿ ಶೆಟ್ಟಿ ಒಲಿಯುತ್ತಾಳಾ..? ಅಧೀರನ ಕಥೆ ಏನು..? ಹೀಗೆ ಹತ್ತು ಹಲವು ಪ್ರಶ್ನೆಗಳು ಚಿತ್ರದೊಂದಿಗೆ ಮೂಡಿವೆ. ಜಸ್ಟ್ ವೇಯ್ಟ್. 2020ರ ಮಧ್ಯಭಾಗದಲ್ಲಿ ಸಿನಿಮಾ ಬರಬಹುದು.

  • ಕೆಜಿಎಫ್ : 168.06 ನಿಮಿಷ : ಚಾರ್ಟಡ್ ವಿಮಾನ : ಚಾಪ್ಟರ್ 1 ರೀ ರಿಲೀಸ್ : ಶುರು ಅಭಿಯಾನ

    ಕೆಜಿಎಫ್ : 168.06 ನಿಮಿಷ : ಚಾರ್ಟಡ್ ವಿಮಾನ : ಚಾಪ್ಟರ್ 1 ರೀ ರಿಲೀಸ್ : ಶುರು ಅಭಿಯಾನ

    ಕೆಜಿಎಫ್ ಚಾಪ್ಟರ್ 2 ಪ್ರತಿದಿನವೂ ಸೆನ್ಸೇಷನ್ ಸೃಷ್ಟಿಸುತ್ತಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪ್ರಚಾರವೂ ಜೋರಾಗುತ್ತಿದೆ. ಏಕೆಂದರೆ ರಾಕಿಂಗ್ ಸ್ಟಾರ್ ಯಶ್-ಪ್ರಶಾಂತ್ ನೀಲ್-ಹೊಂಬಾಳೆ-ವಿಜಯ್ ಕಿರಗಂದೂರು ಸೃಷ್ಟಿಸಿರೋ ನಿರೀಕ್ಷೆಯ ಸುನಾಮಿ. ಹೌದು.. ನಿರೀಕ್ಷೆಯೂ ಸುನಾಮಿಯಂತೆಯೇ ಇದೆ. ಸಂಜಯ್ ದತ್, ರವೀನಾ ಟಂಡನ್ ಮತ್ತು ಪ್ರಕಾಶ್ ರೈ ಸೇರ್ಪಡೆಯಿಂದ ನಿರೀಕ್ಷೆ ಇನ್ನಷ್ಟು ಜೋರಾಗಿದೆ.

    ಒಂದು ಕಡೆ ಏಪ್ರಿಲ್ 14ಕ್ಕೆ ರಿಲೀಸ್ ಡೇಟ್ ಘೋಷಿಸಿರುವ ಕೆಜಿಎಫ್ ಚಾಪ್ಟರ್ 2, ಇನ್ನೊಂದೆಡೆ ಸೆನ್ಸಾರ್ ಪ್ರಕ್ರಿಯೆಯನ್ನೂ ಮುಗಿಸಿದೆ. ಚಿತ್ರದ ಲೆಂಗ್ತ್ ಇರೋದು 168.06 ನಿಮಿಷ. ಅಂದರೆ 2 ಗಂಟೆ 48 ನಿಮಿಷ. ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ.

    ಮತ್ತೊಂದೆಡೆ ರಾಕಿಂಗ್ ಟೀಂ ಪ್ರಚಾರದ ಅಭಿಯಾನ ಆರಂಭಿಸಿದೆ. ಚಾರ್ಟಡ್ ಫ್ಲೈಟ್‍ನಲ್ಲಿ ಯಶ್ ನೇತೃತ್ವದಲ್ಲಿ ಇಡೀ ತಂಡ ಹೊರಟಿದೆ. ಮೊದಲಿಗೆ ದೆಹಲಿಯಿಂದಲೇ ಪ್ರಚಾರ ಶುರುವಾಗಲಿದೆ.

    ಇದರ ಜೊತೆಯಲ್ಲಿಯೇ ಏಪ್ರಿಲ್ 8ರಿಂದ ಕೆಜಿಎಫ್ ಚಾಪ್ಟರ್ 1 ರೀ ರಿಲೀಸ್ ಆಗಲಿದೆ. ಏಪ್ರಿಲ್ 13ರವರೆಗೂ ಥಿಯೇಟರುಗಳಲ್ಲಿ ಚಾಪ್ಟರ್ 1 ಇರಲಿದೆ. ಚಾಪ್ಟರ್ 2 ಮತ್ತು 1 ಮಧ್ಯೆ 3 ವರ್ಷಗಳಿಗಿಂತ ಹೆಚ್ಚಿನ ಗ್ಯಾಪ್ ಬಂದ ಕಾರಣ ಈ ಹೆಜ್ಜೆಯಿಟ್ಟಿದ್ದಾರೆ ವಿಜಯ್ ಕಿರಗಂದೂರು. ಚಾಪ್ಟರ್ 2 ನೋಡುವವರಿಗೆ ಚಾಪ್ಟರ್ 1ನ ಕಥೆ ಗೊತ್ತಿರಬೇಕು. ಇಲ್ಲದಿದ್ದರೆ ಕಷ್ಟ ಎಂಬ ಕಾರಣಕ್ಕೆ ಈ ನಡೆ. ಅಂದಹಾಗೆ ಇದೂ ಕೂಡಾ ದಾಖಲೆಯೇ. 2ನೇ ಭಾಗ ನೋಡೋಕೆ ಮೊದಲು ಮೊದಲ ಭಾಗ ರಿಲೀಸ್ ಮಾಡಿದ ದಾಖಲೆಯೂ ಈಗ ಕೆಜಿಎಫ್‍ನದ್ದೇ.

  • ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

    ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

    ಡೌಟೇ ಇಲ್ಲ. ಇದು ಕನ್ನಡಿಗರ.. ಕನ್ನಡ ಸಿನಿಮಾ ಪ್ರೇಮಿಗಳ ಗೋಲ್ಡನ್ ಫೆಸ್ಟಿವಲ್. ರಿಲೀಸ್ ಆದ ಪ್ರತಿ ಚಿತ್ರಮಂದಿರದಲ್ಲೂ.. ಪ್ರತೀ ಸ್ಕ್ರೀನ್‍ನಲ್ಲೂ ಹಬ್ಬವೋ ಹಬ್ಬ. ಅದು ರಾಕಿಭಾಯ್ ಸೃಷ್ಟಿಸಿರೋ ಕ್ರೇಜ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್. ಸಂಜಯ್ ದತ್, ರವೀನಾ ಟಂಡನ್ ಬಗ್ಗೆ ಹುಟ್ಟಿದ ಕುತೂಹಲ. ಶ್ರೀನಿಧಿ ಶೆಟ್ಟಿ, ಅರ್ಚನಾ ಮೇಲೆ ಕಾಣಿಸಿದ ಪ್ರೀತಿ. ಒಂದಲ್ಲ..ಎರಡಲ್ಲ.. ಎಲ್ಲವೂ ಕೂಡಿ ಬಂದು ಸೃಷ್ಟಿಯಾದ ತೂಫಾನ್ ಇದು.

    ಮೊದಲ ದಿನವೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 40 ಕೋಟಿ ದಾಟಲಿದೆ. ಎಲ್ಲ ಭಾಷೆಗಳ ಶೋಗಳದ್ದೂ ಸೇರಿಸಿ. ಇದೂ ಒಂದು ದಾಖಲೆ.

    ಅಡ್ವಾನ್ಸ್ ಬುಕ್ಕಿಂಗ್‍ನಲ್ಲಿ ದೇಶದಾದ್ಯಂತ 40 ಕೋಟಿಗಿಂತ ಹೆಚ್ಚು ಬುಕ್ಕಿಂಗ್  ಆಗಿದೆ. ಇದು ಬಾಹುಬಲಿಗಿಂತಾ ಹೆಚ್ಚು.

    ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ ಕೆಜಿಎಫ್ ಶೋಗಳು ಶುರುವಾದವು. ವಿದೇಶದಲ್ಲೂ ಕೆಲವೆಡೆ ಮಿಡ್ ನೈಟ್ ಶೋ ನಡೆದಿದ್ದು ವಿಶೇಷವಾಗಿತ್ತು.

    ಬೆಂಗಳೂರಿನ ವೆಂಕಟೇಶ್ವರ ಟಾಕೀಸ್‍ನಲ್ಲಿ ಯಶ್ ಅವರ ಮಹಿಳಾ ಅಭಿಮಾನಿಗಳಿಗಾಗಿಯೇ ವಿಶೇಷ ಶೋ ಇದೆ. ಯಶ್ ಅವರ ಮಹಿಳಾ ಫ್ಯಾನ್ಸ್ ಎಲ್ಲ ಒಟ್ಟಾಗಿ ಥಿಯೇಟರಿನ ಎಲ್ಲ ಟಿಕೆಟ್ ಖರೀದಿಸಿ ಒಟ್ಟಾಗಿ ಸಿನಿಮಾ ನೋಡುತ್ತಿದ್ದಾರೆ.

    ಗುಜರಾತ್‍ನ ಸೂರತ್‍ನಲ್ಲಿ ಇದೇ ಮೊದಲ ಬಾರಿಗೆ 6 ಗಂಟೆ ಶೋ ಪ್ರದರ್ಶನವಾಗಿದೆ. ಗುಜರಾತ್ ಇತಿಹಾಸದಲ್ಲಿಯೇ 6 ಗಂಟೆಯ ಶೋಗಳು ಅದರಲ್ಲೂ ಸೂರತ್‍ನಲ್ಲಿ ನಡೆದಿರಲಿಲ್ಲ.

    ರಿಲೀಸ್ ಆಗುವುದಕ್ಕೂ ಮುನ್ನ ರಿಲೀಸ್ ಆದ ರಣಧೀರ ಸುಲ್ತಾನಾ ಸಾಂಗ್ ಪ್ರೇಕ್ಷಕರಿಗೆ ಮತ್ತಷ್ಟು ಥ್ರಿಲ್ ಕೊಟ್ಟಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 40 ಮಿಲಿಯನ್‍ಗೂ ಹೆಚ್ಚು ವೀಕ್ಷಕರು ಹಾಡನ್ನು ನೋಡಿದರು.

    ಸ್ಸೋ.. ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ..

  • ಕೆಜಿಎಫ್ : ರಿಲೀಸ್ ಆಗುವುದಕ್ಕೂ ಮುನ್ನ..

    ಕೆಜಿಎಫ್ : ರಿಲೀಸ್ ಆಗುವುದಕ್ಕೂ ಮುನ್ನ..

    ಜಾಸ್ತಿ ಸಮಯ ಇಲ್ಲ. ಸುಮಾರು 2 ವರ್ಷ ಕಾಯಿಸಿ ಕಾಯಿಸಿ ಕೊನೆಗೂ ದರ್ಶನ ಕೊಡೋಕೆ ಬರುತ್ತಿದೆ ರಾಕಿಭಾಯ್ ಸಿನಿಮಾ ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ಸೃಷ್ಟಿಯ ಸಿನಿಮಾ ಇದು. ಯಾವ್ದೋ ಒಂದೋ.. ಎರಡೋ ರೆಕಾರ್ಡ್ ಮಾಡಿ ಹಿ ಆಗಿದ್ದಲ್ಲ. ಮಾಡಿದ್ದೆಲ್ಲ ದಾಖಲೆಯೇ ಅನ್ನೋ ಹಾಗೆ ಮುನ್ನುಗ್ಗುತ್ತಿರೋ ಸಿನಿಮಾ ಕೆಜಿಎಫ್. ರಿಲೀಸ್ ಆಗುವ ಕ್ಷಣ ಹತ್ತಿರವಾದಂತೆ.. ಏನೇನೆಲ್ಲ ಆಗ್ತಿದೆ.. ನೋಡಿ.

    ಮೊದಲ 4 ದಿನದ ಶೋಗಳು ಹೌಸ್‍ಫುಲ್ ಆಗಿವೆ. ಹೀಗಾಗಿ ಬೆಂಗಳೂರಿನಲ್ಲೇ ಹೊಸದಾಗಿ 25 ಥಿಯೇಟರುಗಳಲ್ಲಿ ಸಿನಿಮಾ ಶೋ ಮಾಡಲಾಗುತ್ತಿದೆ.

    ಕೆನಡಾದಲ್ಲಿ ಯಶ್ ಫ್ಯಾನ್ಸ್ ಕಾರ್ ರ್ಯಾಲಿ ಮತ್ತು ಮಾನವ ಸರಪಳಿ ಮಾಡುವ ಮೂಲಕ ಚಿತ್ರವನ್ನು ವೆಲ್‍ಕಂ ಮಾಡಿದ್ದಾರೆ. ಅವರ ಬೆನ್ನ ಹಿಂದೆ ನಿಂತಿರೋದು ಮೈಸೂರು ಸ್ಟುಡಿಯೋ ಹೌಸ್.

    ಆಂಧ್ರ, ತೆಲಂಗಾಣದಲ್ಲಿ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲ ಥಿಯೇಟರು, ಮಲ್ಟಿಪ್ಲೆಕ್ಸುಗಳೂ ಹೌಸ್‍ಫುಲ್. ಸೋಲ್ಡ್ ಔಟ್.

    ಕೆಜಿಎಫ್ ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಹೊಂಬಾಳೆ ಬ್ಯಾನರ್‍ನ ಕಾಂತಾರಾ ಮತ್ತು ರಾಘವೇಂದ್ರ ಸ್ಟೋರ್ ಚಿತ್ರಗಳ ಟೀಸರುಗಳೂ ಬರುತ್ತಿವೆ. ಕಾಂತಾರಾ ರಿಷಬ್ ಶೆಟ್ಟಿ ಸಿನಿಮಾ ಆದರೆ, ರಾಘವೇಂದ್ರ ಸ್ಟೋರ್ಸ್ ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಸಿನಿಮಾ.

    ಇವತ್ತು ಅಂದ್ರೆ ಏಪ್ರಿಲ್ 13ರ ಬೆಳಗ್ಗೆ 11ಕ್ಕೆ ಸುಲ್ತಾನಾ ಸಾಂಗ್ ರಿಲೀಸ್ ಆಗುತ್ತಿದೆ.

    ಜಗತ್ತಿನ 75 ದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಉಕ್ರೇನ್‍ನಲ್ಲಿ ಮಾತ್ರ ಇಲ್ಲ. ವಿದೇಶದಲ್ಲಿಯೇ 3000+ ಸ್ಕ್ರೀನ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದು ಸ್ಪೆಷಲ್.

    ತಮಿಳುನಾಡಿನಲ್ಲಿ ಕೂಡಾ ಕೆಜಿಎಫ್ ಕ್ರೇಜ್ ಅದ್ಭುತವಾಗಿದೆ. ವಿಜಯ್ ಅಭಿನಯದ ಬೀಸ್ಟ್ ಒಳ್ಳೆಯ ಫೈಟ್ ಕೊಡುತ್ತಿದೆ.

    ಮುಂಬೈನಲ್ಲಿ ಯಶ್ ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿದೆ.

    ಹಿಂದಿಯಲ್ಲಿ ಕೆಜಿಎಫ್ ಮೊದಲ ದಿನದ ಕಲೆಕ್ಷನ್, ಕೆಜಿಎಫ್ ಚಾಪ್ಟರ್ 1ನ ಒಟ್ಟಾರೆ ಕಲೆಕ್ಷನ್‍ಗಿಂತ ಹೆಚ್ಚಿರಲಿದೆ ಅನ್ನೋದು ನಿರೀಕ್ಷೆ.

    ಕೇರಳದಲ್ಲಿ ವೀಕೆಂಡ್‍ನಲ್ಲಿ ಹೆಚ್ಚುವರಿ ಶೋಗಳ ವ್ಯವಸ್ಥೆ ಮಾಡಲಾಗಿದೆ. ಕೇರಳದಲ್ಲಿ ಈ ರೀತಿ ಮಿಡ್ ನೈಟ್ ಶೋ ವ್ಯವಸ್ಥೆ ಮೋಹನ್ ಲಾಲ್ ಮತ್ತು ಮಮ್ಮೂಟಿ ಚಿತ್ರಗಳಿಗೆ ಮಾತ್ರ ಇರುತ್ತಿತ್ತು.

  • ಕೆಜಿಎಫ್ 100 ಕೋಟಿ ಕ್ಲಬ್ ಸೇರುತ್ತಾ..?

    will kgf become the first kananda film to reach 100 crore

    ಕೆಜಿಎಫ್, ಕನ್ನಡ ಚಿತ್ರರಂಗದ ಮೊದಲ 100 ಕೋಟಿ ಕ್ಲಬ್ ಸೇರಿದ ಚಿತ್ರವಾಗುತ್ತಾ..? ಸದ್ಯದ ಮಟ್ಟಿಗಂತೂ ಕೆಜಿಎಫ್ ಆ ದಾಖಲೆಯನ್ನೂ ಬರೆಯುವ ಮುನ್ಸೂಚನೆ ಕೊಟ್ಟಿದೆ. ಚಿತ್ರದ ಕಲೆಕ್ಷನ್ ಹಾಗಿದೆ.

    ಕೆಜಿಎಫ್ ದೇಶಾದ್ಯಂತ 3 ದಿನದಲ್ಲೇ 60 ಕೋಟಿ ಕಲೆಕ್ಷನ್ ದಾಟಿದೆಯಂತೆ. ಮೊದಲ ದಿನ 24-25 ಕೋಟಿ ಕಲೆಕ್ಷನ್ ಮಾಡಿದ್ದರೆ, ನಂತರ ಎರಡು ದಿನ 20+ ಕೋಟಿ ಕಲೆಕ್ಷನ್ ಆಗಿದೆ.

    ಹಿಂದಿ ಕೆಜಿಎಫ್ ಗಳಿಕೆ ಮೊದಲ ದಿನ ಮುಂಬೈನಲ್ಲಿ 2 ಕೋಟಿ ದಾಟಿದ್ದರೆ, 2ನೇ ದಿನ 3 ಕೋಟಿ ಹಾಗೂ 3ನೇ ದಿನ 5 ಕೋಟಿ ದಾಟಿದೆ. ಅಂದರೆ, ದಿನೇ ದಿನೇ ಹಿಂದಿಯ ಗಳಿಕೆ ಏರುತ್ತಿದೆ. 

    ತಮಿಳಿನಲ್ಲಿ ಕಲೆಕ್ಷನ್ ಚೆನ್ನಾಗಿದ್ದು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲಾಗಿದೆ.

    ಕೆಜಿಎಫ್ ಒಟ್ಟು 2450 ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗುತ್ತಿದ್ದು, ಜನರ ಮೆಚ್ಚುಗೆಯಲ್ಲಿ ಆಗಲೇ 100 ಕೋಟಿ ಕ್ಲಬ್ ಸೇರಿ ಆಗಿದೆ.

  • ಕೆಜಿಎಫ್ 15 ಕೋಟಿ ರೆಕಾರ್ಡ್

    KGF Chapter 2 Teaser Creates New Record

    ಕೆಜಿಎಫ್ ಚಾಪ್ಟರ್ 2 ಟೀಸರ್ ಹೊರಬಿದ್ದಿದ್ದೇ ತಡ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿದೆ. ಈಗ ಇನ್ನೊಂದು ದಾಖಲೆ.

    ಕೆಜಿಎಫ್ ಚಾಪ್ಟರ್ 2 ಟೀಸರ್ ಯೂಟ್ಯೂಬ್ ವೀಕ್ಷಣೆಯ ನಂಬರ್ 150 ಮಿಲಿಯನ್ ಕ್ರಾಸ್ ಆಗಿದೆ. ಅಂದರೆ ಇದುವರೆಗೂ 15 ಕೋಟಿ ಗೂ ಹೆಚ್ಚು ಜನ ಟೀಸರ್ ನೋಡಿದ್ದಾರೆ. ಹಾಲಿವುಡ್ ದಾಖಲೆಗಳನ್ನೂ ಚಿಂದಿ ಮಾಡಿ ಮುನ್ನುಗ್ಗುತ್ತಿದೆ ಕೆಜಿಎಫ್ ಚಾಪ್ಟರ್ 2 ಟೀಸರ್.

    ಪ್ರಶಾಂತ್ ನೀಲ್ ಡೈರೆಕ್ಷನ್, ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿರುವ ಚಿತ್ರವಿದು. ಹೊಂಬಾಳೆ ಫಿಲಂಸ್, ಈ ಚಿತ್ರದ ಮೂಲಕ ಸ್ವತಃ ಇನ್ನೊಂದು ಲೆವೆಲ್ಲಿಗೆ ಏರಿದೆಯಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನೂ ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

  • ಕೆಜಿಎಫ್ ೧ನಲ್ಲಿ ಅಧೀರನ ಮುಖ ತೋರಿಸದೇ ಇದ್ದದ್ದಕ್ಕೆ ಅವರೇ ಕಾರಣ..!

    the reason why adheera's face was not showed

    ಕೆಜಿಎಫ್ ಚಾಪ್ಟರ್ ೧ನಲ್ಲಿ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಅಧೀರ. ಆದರೆ, ಸೂರ್ಯವರ್ಧನ್ ನಂತರ ನರಾಚಿ ಗಣಿಯ ಒಡೆಯನಾಗುವುದು ಆತನ ಮಗ ಗರುಡ. ಗರುಡನನ್ನು ಹೊಡೆಯುವುದು ಸುಪಾರಿ ಕಿಲ್ಲರ್ ರಾಕಿ. ಇದು ಕೆಜಿಎಫ್ ೧ ಶಾರ್ಟ್ & ಸ್ವೀಟ್ ಸ್ಟೋರಿ. ಅಧೀರನ ಪ್ರವೇಶ ಆಗುವುದು ಚಾಪ್ಟರ್ ೨ನಲ್ಲಿ.

    ಆದರೆ, ಇಡೀ ಚಿತ್ರದಲ್ಲಿ ಎಲ್ಲಿಯೂ ಅಧೀರನ ದರ್ಶನ ಮಾಡಿಸಿರಲಿಲ್ಲ ನಿರ್ದೇಶಕ ಪ್ರಶಾಂತ್ ನೀಲ್. ಸ್ಯಾಂಪಲ್ಲಿಗೂ ಮುಖ ತೋರಿಸಿರಲಿಲ್ಲ. ಅದಕ್ಕೆ ಕಾರಣ, ಸಂಜಯ್ ದತ್. ಆ ಪಾತ್ರದ ಕಲ್ಪನೆ ಮೂಡಿದಾಗಲೇ ಸಂಜಯ್ ದತ್ ಅವರಿಂದಲೇ ಈ ಪಾತ್ರ ಮಾಡಿಸಬೇಕು ಎನಿಸಿತ್ತು. ಹೀಗಾಗಿ ಅಧೀರನ ಪಾತ್ರವನ್ನು ತೋರಿಸಿರಲಿಲ್ಲ. ಕೆಜಿಎಫ್ ಚಾಪ್ಟರ್ ೧ ನೋಡಿದರೆ, ಅವರು ಖಂಡಿತಾ ಈ ಪಾತ್ರ ಒಪ್ಪಿಕೊಳ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಸಂಜಯ್ ದತ್ ಅಧೀರನ ಪಾತ್ರ ಮಾಡಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಪ್ರಶಾಂತ್ ನೀಲ್.

  • ಕೆಜಿಎಫ್ 2 ಆದ ಮೇಲಷ್ಟೇ ಹೊಸ ಸಿನಿಮಾ - ಶ್ರೀನಿಧಿ ಶೆಟ್ಟಿ

    kgf changes my life totally

    ಕೆಜಿಎಫ್ ಚಾಪ್ಟರ್ 1ನಲ್ಲಿ ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದರು. ಸೊಕ್ಕಿನ ಹುಡುಗಿಯಾಗಿ, ನಂತರ ರಾಕಿಭಾಯ್ ಪ್ರೇಮಿಯಾಗಿ ಬದಲಾಗುವ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಾಪ್ಟರ್ 2ನಲ್ಲೂ ಇದ್ದಾರೆ. ಆದರೆ, ಯಾವುದೇ ಹೊಸ ಚಿತ್ರ ಒಪ್ಪಿಕೊಂಡಿಲ್ಲ.

    ನಾನು ಸಾಕಷ್ಟು ಹೊಸ ಕಥೆ ಕೇಳಿದ್ದೇನೆ. ಆದರೆ ಕೆಜಿಎಫ್ ರಿಲೀಸ್ ಆಗುವುದಕ್ಕೂ ಮೊದಲೇ ಈ ಚಿತ್ರ ಮುಗಿಯುವವರೆಗೆ ಹೊಸ ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅದು ರಿಲೀಸ್ ಆದ ಮೇಲೆ ನಿರ್ಧಾರ ಇನ್ನಷ್ಟು ಗಟ್ಟಿಯಾಯ್ತು. ಈಗಲೂ ಅಷ್ಟೆ, ನನ್ನ ಆದ್ಯತೆ ಕೆಜಿಎಫ್ 2. ಅದಾದ ಮೇಲೆ ಮುಂದಿನ ಸಿನಿಮಾ ಎನ್ನುತ್ತಾರೆ ಶ್ರೀನಿಧಿ.

    ಸದ್ಯಕ್ಕೆ ಶ್ರೀನಿಧಿ, ಕೆಜಿಎಫ್ 2 ಶೂಟಿಂಗಿನಲ್ಲಿ ಬ್ಯುಸಿ. ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗಿನಲ್ಲೂ ಡಿಮ್ಯಾಂಡ್ ಇದೆ ಎನ್ನುವ ಶ್ರೀನಿಧಿ, ಸದ್ಯಕ್ಕೆ ರಾಕಿಭಾಯ್ ಆಶಿಖಿ.

  • ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

    ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

    ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು 2018ರ ಕೊನೆಯಲ್ಲಿ. ನಂತರ 2019ರ ವರ್ಷವಿಡೀ ಸದ್ದು ಮಾಡಿದ ಸಿನಿಮಾ ದುಡಿದದ್ದು 300 ಕೋಟಿಗೂ ಹೆಚ್ಚು. ಕನ್ನಡವೊಂದರಲ್ಲೇ 100 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಸಿನಿಮಾ ಅದು. ಈಗ ಕೆಜಿಎಫ್ ಚಾಪ್ಟರ್ 2 ಬರ್ತಾ ಇದೆ. ಟೀಸರ್ ಹೊರಬಿದ್ದಿದೆ.

    ತಾರಾಗಣ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಎಂಟ್ರಿಯಾಗಿದೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಜೆಟ್ ಮತ್ತು ವೇಯ್ಟೇಜ್ ಎರಡೂ ಜಾಸ್ತಿಯಾಗಿದೆ. ಒಂದು ಮೂಲದ ಪ್ರಕಾರ ಕೆಜಿಎಫ್ ಚಾಪ್ಟರ್ 2ಗಾಗಿ ಚಿತ್ರತಂಡ ಖರ್ಚು ಮಾಡಿರೋದು 100 ಕೋಟಿಗೂ ಹೆಚ್ಚು. ವಿಚಿತ್ರ ಮತ್ತು ವಿಶೇಷವೆಂದರೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣದ ವೇಳೆಯಲ್ಲೇ 2ನೇ ಭಾಗದ ಬಹುತೇಕ ಭಾಗಗಳ ಚಿತ್ರೀಕರಣವಾಗಿತ್ತು. ಹೀಗಿದ್ದರೂ 2ನೇ ಭಾಗದ ಬಾಕಿ ಚಿತ್ರೀಕರಣದ ಬಜೆಟ್ 100 ಕೋಟಿ ದಾಟಿದೆಯಂತೆ.

    ಚಿತ್ರದ ಅತಿ ದೊಡ್ಡ ಖರ್ಚು ಚಿತ್ರದ ಕ್ಲೈಮಾಕ್ಸ್. ಸಂಜಯ್ ದತ್ ಮತ್ತು ಯಶ್ ಮಧ್ಯೆ ನಡೆಯೋ ಅದೊಂದು ಕ್ಲೈಮಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು ಮಾಡಿದ್ದಾರಂತೆ ವಿಜಯ್ ಕಿರಗಂದೂರು. ಪ್ರಶಾಂತ್ ನೀಲ್ ಕಲ್ಪನೆಯಂತೆ ಆ ದೃಶ್ಯ ಅದ್ಭುತವಾಗಿ ಮೂಡಿಬಂದಿದೆಯಂತೆ.

    ಕನ್ನಡದಲ್ಲಿ 12 ಕೋಟಿಯಲ್ಲಿ ಅದ್ಧೂರಿ ಚಿತ್ರವನ್ನೇ ರೆಡಿ ಮಾಡುತ್ತಾರೆ. ಅಂಥಾದ್ದರಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರವೊಂದರ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕೇ 12 ಕೋಟಿ ಸುರಿದಿದ್ದಾರೆ ಎಂದರೆ.. ಆ ಸೀನ್ ಹೇಗಿರಬೇಕು..

  • ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

    ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

    ಕೆಜಿಎಫ್ 2 ಟ್ರೇಲರ್ ರಿಲೀಸ್ ಆಯ್ತು. ಅದು ಹಬ್ಬವೇ ಸರಿ. ಕನ್ನಡದ ಒಂದು ಸಿನಿಮಾ ಈ ಮಟ್ಟಿಗೆ ಸಂಚಲನ ಸೃಷ್ಟಿಸಬೇಕು ಅನ್ನೋ ಕನಸು ನನಸಾದ ಕ್ಷಣವದು. ಆ ಒಟ್ಟಾರೆ ಸಂಚಲನವನ್ನು ಕಣ್ಣಲ್ಲಿ ನೋಡೋಕೂ ಹಬ್ಬ. ಕಿವಿಯಲ್ಲಿ ಕೇಳೋಕೆ ಆನಂದ. ಆ ಸಂಭ್ರಮದ ಹೈಲೈಟ್ಸ್ ಇಲ್ಲಿವೆ.

    ಸ್ಟಾರ್ ಆ್ಯಂಕರಿಂಗ್ :

    ಕೆಜಿಎಫ್ ಚಾಪ್ಟರ್ 2 ಕನ್ನಡದ ಸಿನಿಮಾ. ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್. ಅನುಶ್ರೀ ಕನ್ನಡ ನಿರೂಪಕಿಯಾಗಿದ್ದರು.

    ಭಾಷೆಗೊಬ್ಬ ರಾಯಭಾರಿ :

    ಕನ್ನಡಕ್ಕೆ ಶಿವಣ್ಣ, ತೆಲುಗಿಗೆ ರಾಮ್ ಚರಣ್ ತೇಜ, ತಮಿಳಿಗೆ ಸೂರ್ಯ, ಮಲಯಾಳಂಗೆ ಪೃಥ್ವಿರಾಜ್ ಹಾಗೂ ಹಿಂದಿ ಟ್ರೇಲರ್ ಬಿಡುಗಡೆಗೆ ಇದ್ದವರು ಫರ್ಹಾನ್ ಅಖ್ತರ್.

    ಮೀಡಿಯಾದವರ ಕಣ್ಣೆಲ್ಲ..

    ದೇಶದ ಬಹುತೇಕ ಪ್ರಮುಖ ಪತ್ರಿಕೆ, ಟಿವಿ ಚಾನೆಲ್ಲುಗಳು ಅಲ್ಲಿದ್ದವು. ಅವುಗಳ ಸಂಖ್ಯೆಯೇ 200ಕ್ಕೂ ಹೆಚ್ಚು.

    ಪುನೀತ್ ನೆನಪು..

    ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಯೊಬ್ಬರೂ ನೆನಪಿಸಿಕೊಂಡಿದ್ದು ಪುನೀತ್ ರಾಜಕುಮಾರ್ ಅವರನ್ನು. ನಾನು ಪುನೀತ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದವರು ಯಶ್. ಸಂಜಯ್ ದತ್ ಟ್ರೇಲರ್ ಬಿಡುಗಡೆಗೂ ಮುನ್ನ ಅಶ್ವಿನಿ ಪುನೀತ್ ಮನೆಗೆ ಹೋಗಿ ಬಂದರು. ಈ ಚಿತ್ರ ಅಪ್ಪುಗೆ ಅರ್ಪಣೆ ಎಂದರು ಪ್ರಶಾಂತ್ ನೀಲ್. ಶಿವಣ್ಣ ಭಾವುಕರಾದರು. ಯಶ್ ನನ್ನ ತಮ್ಮನಿದ್ದಂತೆ ಎಂದರು. ನೀವು ಹಾಗೆಲ್ಲ ಮಾಡಬೇಡಿ ಶಿವಣ್ಣ. ನೀವು ಅತ್ತರೆ ನೋಡೋಕಾಗಲ್ಲ ಎಂದರು ಯಶ್.

    ಕನ್ನಡ ಸಿನಿಮಾ ಎಲ್ಲರ ಹೆಮ್ಮೆ.. :

    ಕನ್ನಡದ ಚಿತ್ರವೊಂದನ್ನು ವಿತರಣೆಗೆ ಪಡೆದಿದ್ದೇ ಭಾಗ್ಯ ಎಂಬಂತೆ ಮಾತನಾಡಿದ್ದು ವಿತರಕರು. ವೇದಿಕೆಯಲ್ಲಿದ್ದ ತಮಿಳು ವಿತರಕ ಎಸ್.ಆರ್. ಪ್ರಭು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್, ಹಿಂದಿಯ ಫರಾನ್ ಅಖ್ತರ್.. ಎಲ್ಲರೂ ಈ ಚಿತ್ರದ ಡಿಸ್ಟ್ರಿಬ್ಯೂಷನ್ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡರು.

    ವೇದಿಕೆಯಲ್ಲಿದ್ದವರೆಲ್ಲ ಸ್ಟಾರ್ಸ್..:

    ಟ್ರೇಲರ್ ರಿಲೀಸ್ ಮಾಡುವಾಗ ಇಡೀ ವೇದಿಕೆಯಲ್ಲಿದ್ದವರು ಸ್ಟಾರ್ಸ್. ಆ ಪಟ್ಟಿಯೇ ಇಷ್ಟುದ್ದ. ಅಷ್ಟೊಂದು ಸ್ಟಾರ್‍ಗಳು ಒಂದೆಡೆ ಸೇರಿ ಮಾತನಾಡಿದ್ದು ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಬಗ್ಗೆ. ಸಿನಿಮಾ ಸೃಷ್ಟಿಸುವ ಹೊಸ ಹೊಸ ದಾಖಲೆಗಳ ಬಗ್ಗೆ..

    ಆರ್.ಆರ್.ಆರ್. ಮೀರಿಸಿದ ಶರವೇಗದ ಹಿಟ್ಸ್:

    ಆರ್.ಆರ್.ಆರ್.. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್ ಹಿಟ್. ಆದರೆ ಆ ಚಿತ್ರವನ್ನೂ ಮೀರಿಸಿದ್ದು ಕೆಜಿಎಫ್. ಆರ್.ಆರ್.ಆರ್. ಟ್ರೇಲರ್ ಬಂದಾಗ ಒಂದು ಮಿಲಿಯನ್ ವೀಕ್ಷಣೆ ಪಡೆಯೋಕೆ 45 ನಿಮಿಷ ಪಡೆದುಕೊಂಡಿತ್ತು. ಅದನ್ನೂ ಮೀರಿಸಿದ ಕೆಜಿಎಫ್ ಟ್ರೇಲರ್ ಕೇವಲ 30 ನಿಮಿಷದಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆಯಿತು.

    ರವೀನಾ ಟಂಡನ್ ಮಕ್ಕಳಿಗೂ ಯಶ್ ಇಷ್ಟ..

    ಇದನ್ನು ವೇದಿಕೆಯಲ್ಲೇ ಹೆಮ್ಮೆಯಿಂದ ಹೇಳಿಕೊಂಡವರು ರವೀನಾ ಟಂಡನ್. ಕನ್ನಡದ ಒಬ್ಬ ನಟರ ಬಗ್ಗೆ ಹಿಂದಿ ಚಿತ್ರರಂಗದವರು ಓಪನ್ ವೇದಿಕೆಯಲ್ಲಿ ಮೆಚ್ಚಿ ಮಾತನಾಡಿದ್ದರೆ ಡಾ.ರಾಜ್ ನಂತರ ಯಶ್ ಬಗ್ಗೆಯೇ ಇರಬೇಕು.

    ದೇವರಿಗೆ ಪೂಜೆ.. ಈಡುಗಾಯಿ..

    ರಾಜ್ಯದ ಹಲವೆಡೆ ಯಶ್ ಫ್ಯಾನ್ಸ್ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದರು. ದೀಢ ನಮಸ್ಕಾರ ಹಾಕಿದರು. ಸಿಹಿ ಹಂಚಿದರು. ಒಂದು ಸಿನಿಮಾ ಟ್ರೇಲರ್ ಈ ಮಟ್ಟಿಗೆ ಸಂಚಲನ ಸೃಷ್ಟಿಸಿದ್ದು ಇದೇ ಮೊದಲು.

    ನಿರ್ಮಾಪಕ, ನಿರ್ದೇಶಕರೇ ಹೀರೋ :

    ಒಂದು ಚಿತ್ರದ ಬಗ್ಗೆ 8 ವರ್ಷ ಕನಸು ಕಂಡ ಪ್ರಶಾಂತ್ ನೀಲ್, ಆ ಅದ್ಧೂರಿತನ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು ಅವರು ರಿಯಲ್ ಹೀರೋಗಳು. ಈ ಮಾತನ್ನು ಯಶ್ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಹೇಳಿದರು. ಒಂದು ಚಿತ್ರಕ್ಕೆ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಷ್ಟು ಮುಖ್ಯ ಅನ್ನೋದನ್ನು ಅದು ಪದೇ ಪದೇ ಸಾರಿ ಸಾರಿ ಹೇಳುತ್ತಿತ್ತು.

  • ಕೆಜಿಎಫ್ 2 ಫಸ್ಟ್ ಲುಕ್ ಡಿಸೆಂಬರ್ 21ಕ್ಕೆ : ಆ ದಿನಾಂಕದಲ್ಲೇ ಇದೆ ಒಂದು ವಿಶೇಷ

    kgf chapter 2 first look on dec 21st

    ಕೆಜಿಎಫ್ ಚಾಪ್ಟರ್ 2 ಮತ್ತೊಂದು ಸೆನ್ಸೇಷನ್ ಸುದ್ದಿ ನೀಡಿದೆ. ಜನವರಿ 8ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿರುವ ಬೆನ್ನಲ್ಲೇ, ಈಗ ಫಸ್ಟ್ಲುಕ್ ನ್ಯೂಸ್ ಹೊರಬಿಟ್ಟಿದೆ ತಂಡ. ಡಿಸೆಂಬರ್ 21ರ ಶನಿವಾರ ಸಂಜೆ 5 ಗಂಟೆ 45 ನಿಮಿಷಕ್ಕೆ ಸರಿಯಾಗಿ ಚಿತ್ರದ ಫಸ್ಟ್ಲುಕ್ ಹೊರಬೀಳಲಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಈ ಬಾರಿ ಸಂಜಯ್ ದತ್, ರವಿನಾ ಟಂಡನ್ ಕೂಡಾ ಇದ್ದಾರೆ. ಜೊತೆಗೆ ಅನಂತ್ ನಾಗ್, ಮಾಳವಿಕಾ, ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ ಇದ್ದಾರೆ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2 2018ರಲ್ಲಿ ದಾಖಲೆ ಬರೆದಿದ್ದ ಕನ್ನಡ ಸಿನಿಮಾ.

    ಎಲ್ಲ ಓಕೆ, ಈ ದಿನಾಂಕದಲ್ಲೇನಿದೆ ಅಂತಾ ವಿಶೇಷ ಅಂತೀರಾ.. 2018ರ ಡಿಸೆಂಬರ್ 21ರಂದೇ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ದಾಖಲೆ ಸೃಷ್ಟಿಸಿತ್ತು. ಅದರ ನೆನಪಿಗಾಗಿ.. ಆ ದಿನವೇ ಫಸ್ಟ್ಲುಕ್ ಹೊರಬಿಡುತ್ತಿದೆ ಕೆಜಿಎಫ್ ಟೀಂ.

  • ಕೆಜಿಎಫ್ 2 ಫೈನಲ್ ಶೂಟಿಂಗ್

    KGF Chapter 2 Final Shooting Starts

    ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ಲ. ಈಗ ತಾನೇ ಅಂತಿಮ ಹಂತದ ಚಿತ್ರೀಕರಣ ಶುರುವಾಗಿದ್ದು, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ 2ನೇ ವಾರದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಉತ್ಸಾಹದಲ್ಲಿದೆ ಚಿತ್ರತಂಡ. ಚಿತ್ರೀಕರಣಕ್ಕಾಗಿ ರಾಕಿಭಾಯ್ ಯಶ್ ಹೈದರಾಬಾದ್ ತಲುಪಿದ್ದಾರೆ.

    ಆಗಸ್ಟ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ಶುರು ಮಾಡಿತ್ತು. ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಬಂದಿದ್ದರು. ಇದರ ನಡುವೆ ಸಂಜಯ್ ದತ್, ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಕಾರಣ, ಶೂಟಿಂಗ್ ಮತ್ತೆ ವಿಳಂಬವಾಗಿತ್ತು. ಈಗ ಎಲ್ಲದಕ್ಕೂ ಸಮಯ ಕೂಡಿ ಬಂದಂತಿದ್ದು, ಪ್ರಶಾಂತ್ ನೀಲ್ ಅಂತಿಮ ಹಂತದ ಶೂಟಿಂಗ್‍ಗೆ ಸಜ್ಜಾಗುತ್ತಿದ್ದಾರೆ.

  • ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

    ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

    ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರೋ ಕೆಜಿಎಫ್ ಚಾಪ್ಟರ್ 2 ಯಶಸ್ವೀ 25 ದಿನ ಪೂರೈಸಿದೆ. ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದ ರಾಕಿಭಾಯ್ ಈಗಲೂ ಥಿಯೇಟರುಗಳಲ್ಲಿ ಸಿನಿಮಾ ಪ್ರೇಕ್ಷಕರ ಹಾಟ್ ಫೇವರಿಟ್. ಹಾರ್ಟ್ ಫೇವರಿಟ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್ ಅಂಥಾದ್ದು. ಈ ಹಾದಿಯಲ್ಲಿ ಕೆಜಿಎಫ್ ದಾಖಲೆಗಳ ಮೇಲೆ ದಾಖಲೆಯನ್ನು ಬರೆಯುತ್ತಲೇ ಹೋಗಿದೆ. ಬರೆಯುತ್ತಿದೆ.  

    1. ಕೇವಲ ಕನ್ನಡದಲ್ಲಿ ಕೆಜಿಎಫ್ ಬಿಸಿನೆಸ್ 200 ಕೋಟಿ ಸಮೀಪಕ್ಕೆ ಬಂದಿದೆ. ಇದೇ ವೇಗ ಕಾಯ್ದುಕೊಂಡರೆ ಕನ್ನಡದಲ್ಲಿ 200 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಎಂಬ ದಾಖಲೆ ಬರೆಯಲಿದೆ.

    2. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು. ಈ ನಾಲ್ಕೂ ಭಾಷೆಗಳಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಕೆಜಿಎಫ್.

    3. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ಡಬ್ಬಿಂಗ್ ಸಿನಿಮಾಗಳಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2. ಮೊದಲ ಸ್ಥಾನದಲ್ಲಿ ಈಗಲೂ ಬಾಹುಬಲಿ 2 ಇದೆ.

    4. ತಂಜಾವೂರಿನ ಥಿಯೇಟರ್ ಮಾಲೀಕರೊಬ್ಬರು ಕೆಜಿಎಫ್ ಚಾಪ್ಟರ್ 2ಗೆ ಟ್ವೀಟ್ ಮಾಡಿದ್ದು, ನಮ್ಮ ಥಿಯೇಟರಿನಲ್ಲಿ 20 ವರ್ಷಗಳ ನಂತರ, 25ನೇ ದಿನವೂ ಹೌಸ್‍ಫುಲ್ ಪ್ರದರ್ಶನ ಕಂಡ ಸಿನಿಮಾ ಕೆಜಿಎಫ್ ಎಂದಿದ್ದಾರೆ. 25 ದಿನಗಳ ನಂತರ ಅವರ ಥಿಯೇಟರಿನಲ್ಲಿ ಈ ಹಿಂದೆ ಕೇವಲ ಚಂದ್ರಮುಖಿ ಸಿನಿಮಾ ಹೌಸ್‍ಫುಲ್ ಶೋ ಆಗಿತ್ತಂತೆ.

    5. ತಮಿಳುನಾಡಿನಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.

    6. 1100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ದೇಶದ 2ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

    7. ಇದೆಲ್ಲದರ ಜೊತೆಗೆ ಇನ್ನೂ ಒಂದು ವಿಶೇಷ ದಾಖಲೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2. 2ನೇ ಸ್ಥಾನದಲ್ಲಿ ಕೆಜಿಎಫ್ 2. ಹಾಗೂ 3ನೇ ಸ್ಥಾನದಲ್ಲಿರೋದು ಆರ್.ಆರ್.ಆರ್. ಮೂರೂ ಡಬ್ಬಿಂಗ್ ಸಿನಿಮಾಗಳೇ ಅನ್ನೋದು ವಿಶೇಷ.

    8. ಕೆಜಿಎಫ್ 2 ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಅಮೇಜಾನ್ ಪ್ರೈಮ್ ಖರೀದಿಸಿದೆ. ಅದೂ ದಾಖಲೆಯ 320 ಕೋಟಿಗೆ ಅನ್ನೋ ಸುದ್ದಿ ಇದೆ. ಅದೂ ದಾಖಲೆಯೇ..

  • ಕೆಜಿಎಫ್ 2ಗೆ ಯಶ್ ಎಂಟ್ರಿ ಯಾವಾಗ..?

    yash to start shooting for kgf2 from next week

    ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.

    ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.

    ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ. 

  • ಕೆಜಿಎಫ್ ಆಡಿಯೋ ಹಕ್ಕು 3.60 ಕೋಟಿ 

    kgf audio rights sold for 3.6 crores

    ಕೆಜಿಎಫ್ ಚಿತ್ರದ ಹವಾದಲ್ಲಿ ದಾಖಲೆಗಳು ಚಿಂದಿ ಚಿಂದಿಯಾಗುತ್ತಿವೆ. ಕನ್ನಡ ಚಿತ್ರರಂಗದಲ್ಲೇ ಭಾರಿ ಬಜೆಟ್‍ನ, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್, ಆಡಿಯೋ ರೈಟ್ಸ್‍ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಒನ್ಸ್ ಎಗೇಯ್ನ್, ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸಿರುವುದು ಲಹರಿ ವೇಲು.

    ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆಡಿಯೋ ರೈಟ್ಸ್‍ನ್ನು ಮಾತ್ರ 3.60 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿಯ ರೈಟ್ಸ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸೋಕೆ ಕಾರಣ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ಮೆಚ್ಚುಗೆ. ಎಲ್ಲ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದೇ ಈ ದಾಖಲೆ ಮೊತ್ತದ ಖರೀದಿಗೆ ಕಾರಣ ಎಂದಿದ್ದಾರೆ ಲಹರಿ ವೇಲು.

    1992ರಲ್ಲೇ ದಳಪತಿ ಚಿತ್ರದ ಆಡಿಯೋ ರೈಟ್ಸ್‍ನ್ನು 75 ಲಕ್ಷಕ್ಕೆ ಖರೀದಿಸಿದ್ದ ಲಹರಿ ವೇಲು, ಬಾಹುಬಲಿಯನ್ನು 2 ಕೋಟಿ ರೂಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದರು. ಈಗ ಮತ್ತೊಮ್ಮೆ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ.

  • ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

    ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

    ಕೆಜಿಎಫ್ ಚಾಪ್ಟರ್ 1ನಲ್ಲಿ ಒಂದು ಡೈಲಾಗ್ ಇದೆ. ಯಾರ್ ಯಾರನ್ನೋ ಹೊಡೆದು ಡಾನ್ ಆದವನಲ್ಲ.. ನಾನು. ನಾನು ಹೊಡೆದವರೆಲ್ಲ ಡಾನ್‍ಗಳೇ.. ಕೆಜಿಎಫ್ 2 ರಿಲೀಸ್ ಆದ ನಂತರ ಆ ಡೈಲಾಗ್ ಮತ್ತೆ ಮತ್ತೆ ನೆನಪಾಗುವಂತೆ ಮಾಡಿದೆ ನಂತರ ರಿಲೀಸ್ ಆದ ಚಿತ್ರಗಳ ಹೀನಾಯ ಸೋಲುಗಳು. ಹಾಗೆ ನೋಡಿದರೆ.. ಹಿನ್ನಡೆ ಅನುಭವಿಸಿಯೂ ಲಾಭ ಮಾಡಿದ್ದು ತಮಿಳಿನ ಬೀಸ್ಟ್ ಮಾತ್ರ.

    ಕೆಜಿಎಫ್ 2 ರಿಲೀಸ್ ಆದ 2 ವಾರದ ನಂತರ ರಿಲೀಸ್ ಆಗಿದ್ದು ಹಿಂದಿಯಲ್ಲಿ ಅಜಯ್ ದೇವಗನ್ ಅವರ ರನ್ ವೇ 34. ಆ ಚಿತ್ರ ಮೇ 1ರಂದು ಗಳಿಸಿರೋ ಬಾಕ್ಸಾಫೀಸ್ ಕಲೆಕ್ಷನ್ 7.25 ಕೋಟಿ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್ ಕೂಡಾ ಇದ್ದರು.

    ಅದರ ಜೊತೆಯಲ್ಲೇ ರಿಲೀಸ್ ಆದ ಚಿತ್ರ ಹೀರೋಪಂತಿ 2. ಹೀರೋ ಟೈಗರ್ ಶ್ರಾಫ್. ಆ ಚಿತ್ರದ ಮೇ 1ನೇ ತಾರೀಕಿನ ರಿಪೋರ್ಟ್ 4.25 ಕೋಟಿ.

    ಇದೇ ವೇಳೆ ಇದೇ ಮೇ 1ರಂದು ಕೆಜಿಎಫ್ 2ನ ಕಲೆಕ್ಷನ್ ರಿಪೋರ್ಟ್ ಹಿಂದಿಯಲ್ಲಿ 11.25 ಕೋಟಿ. ಅಂದ ಹಾಗೆ ಕೆಜಿಎಫ್ 2 ರಿಲೀಸ್ ಆಗಿ ಎರಡು ವಾರವಾಗಿದೆ ಅನ್ನೋದು ನೆನಪಿರಲಿ.

    ಇದಕ್ಕೂ ಮೊದಲು ಕೆಜಿಎಫ್ 2 ಎದುರು ಬರಬೇಕಿದ್ದ ಜೆರ್ಸಿ, ಒಂದು ವಾರ ಲೇಟ್ ಆಗಿ ಬಂದರೂ ಬಾಕ್ಸಾಫೀಸಿನಲ್ಲಿ ಡುಮ್ಕಿ ಹೊಡೀತು.

    ತೆಲುಗಿನಲ್ಲಿ ಕೆಜಿಎಫ್‍ಗೆ ರಿಲೀಸ್ ಆದ 2 ವಾರದ ನಂತರವೂ ಫೈಟ್ ಕೊಟ್ಟಿದ್ದು ರಾಜಮೌಳಿಯ ಆರ್.ಆರ್.ಆರ್. ತೆಲುಗಿನ ಎರಡೂ ರಾಜ್ಯಗಳಲ್ಲಿ ಈಗಲೂ ಸದ್ಯಕ್ಕೆ ಆರ್.ಆರ್.ಆರ್. ನಂ.1 ಸ್ಥಾನದಲ್ಲೇ ಇದೆ. ಇನ್ನು ಈ ಗ್ಯಾಪಲ್ಲಿ ಬಂದ ತೆಲುಗಿನ ಕೆಲವು ಚಿತ್ರಗಳು ಸೋತವು. 2 ವಾರದ ನಂತರ ಬಂದ ಮೆಗಾಸ್ಟಾರ್ ಆಚಾರ್ಯ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಪೈಪೋಟಿ ಕೊಡುತ್ತಿದೆ.

    ತಮಿಳಿನಲ್ಲಿ ಬೀಸ್ಟ್ ಆರಂಭದ ಫೈಟ್‍ನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ. ನಿರ್ದೇಶಕರ ಕನ್‍ಫ್ಯೂಸ್‍ನಿಂದಾಗಿ ಬೀಸ್ಟ್ ಆವರೇಜ್ ಆದರೆ, ಅಲ್ಲಿ ಕೆಜಿಎಫ್ ದಾಖಲೆಯನ್ನೇ ಬರೆಯಿತು.

  • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

    kgf effect, srinidhi shetty in demand

    ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

    ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

    ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

    ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

  • ಕೆಜಿಎಫ್ ಕುಟುಂಬ ಸಂಭ್ರಮ..

    ಕೆಜಿಎಫ್ ಕುಟುಂಬ ಸಂಭ್ರಮ..

    ಒಂದು ಸಿನಿಮಾ ಶುರುವಾಗಿ ಮುಗಿಯುವ ಹೊತ್ತಿಗೆ ಅಲ್ಲಿ ಒಂದಿಷ್ಟು ಸ್ನೇಹ ಸಂಬಂಧಗಳು ಚಿಗುರೊಡೆಯುತ್ತವೆ. ಅಂಥಾದ್ದರಲ್ಲಿ ಕೆಜಿಎಫ್ ಟೀಂ ಒಟ್ಟಿಗೇ 5 ವರ್ಷ ಕೆಲಸ ಮಾಡಿದೆ. ಹೀಗಾಗಿ ಅದು ಈಗ ಒಂದು ಕುಟುಂಬವೇ ಆಗಿ ಹೋಗಿದೆ. ಜುಲೈ 16ಕ್ಕೆ ರಿಲೀಸ್ ಆಗ್ತಿರೋ ಕೆಜಿಎಫ್ ಟೀಂ. ಈಗ ಇಡೀ ತಂಡವನ್ನು ಒಟ್ಟಿಗೇ ಸೇರಿಸಿಕೊಂಡು ಸಂಭ್ರಮ ಆಚರಿಸಿದೆ.

    ಈ ಪಯಣ ಎಂದಿಗೂ ಮುಕ್ತಾಯವಾಗಬಾರದು ಎಂದು ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಕೆಜಿಎಫ್ ಕುಟುಂಬ ಒಟ್ಟಿಗೆ ಸೇರಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ. ಆ ಫೋಟೋಗಳನ್ನ ಪ್ರಶಾಂತ್ ನೀಲ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಕೆಜಿಎಫ್ ಗಲಿ ಗಲಿ.. ಚಿಲಿಪಿಲಿಯೋ ಚಿಲಿಪಿಲಿ

    kgf's gali gali song

    ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಐಟಂ ಸಾಂಗ್ ಗಲಿ ಗಲಿ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದು ಮೌನಿ ರಾಯ್. ಹಾಡು ಆನ್‍ಲೈನ್‍ನಲ್ಲಿ ಧೂಳೆಬ್ಬಿಸಿದೆ.

    ಕನ್ನಡದಲ್ಲಿ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್ ಬಳಸಿಕೊಂಡಿದ್ದಾರಲ್ಲ.. ಹಾಗೆಯೇ.. ಗಲಿ ಗಲಿ ಹಾಡನ್ನು ಹಿಂದಿ ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. 

    ಹಿಂದಿ ಚಿತ್ರರಸಿಕರಿಗೆ ಗಲಿ ಗಲಿ ಸಾಂಗ್‍ನ ವಿಡಿಯೋ ತೋರಿಸಿ ಕಣ್ಣು, ಕಿವಿ ಎರಡನ್ನೂ ತಣಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಣ ಸಂಸ್ಥೆ ಹೊಂಬಾಳೆ.. ಕನ್ನಡ ಚಿತ್ರರಸಿಕರಿಗೆ 

    ತಮನ್ನಾ ಹಾಡು ತೋರಿಸೋದು ಯಾವಾಗ..?