` srinidhi shetty, - chitraloka.com | Kannada Movie News, Reviews | Image

srinidhi shetty,

 • ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

  ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿರೋದು ಏಪ್ರಿಲ್ 14ಕ್ಕೆ. ಚಿತ್ರದ ಪ್ರಮೋಷನ್ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ಕಲಾವಿದರ ತಂಡವಿರೋ ಚಿತ್ರಕ್ಕೆ ಕ್ಯಾಪ್ಟನ್ ಪ್ರಶಾಂತ್ ನೀಲ್. ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2 ಇದುವರೆಗೆ ಪೋಸ್ಟರ್ ಮತ್ತು ಟೀಸರ್ ಬಿಟ್ಟಿರೋದ್ರ ಹೊರತಾಗಿ ಬೇರೇನನ್ನೂ ಪ್ರೇಕ್ಷಕರಿಗೆ ತೋರಿಸಿಲ್ಲ. ಅವೆಲ್ಲದಕ್ಕೂ ಈಗ ಮುಹೂರ್ತ ಕೂಡಿ ಬಂದಿದೆ.

  ಮಾರ್ಚ್ 21. ಆ ದಿನ ಬೆಳಗ್ಗೆ 11.07ರ ಶುಭ ಮುಹೂರ್ತದಲ್ಲಿ ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಲಿದೆ.

  ಏಪ್ರಿಲ್ 13ರಂದು ಉತ್ತರ ಅಮೆರಿಕದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.

 • ಮೈಸೂರು ಅರಮನೆಯಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್

  kgf chapter 2 shooting in mysore

  ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಳ್ಳಾರಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ, ನಾಯಕಿ ಶ್ರೀನಿಧಿಯ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿಗಳಿವೆ.

  ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಕೂಡಾ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ನಡೆದಿತ್ತು. ಅರಮನೆಯಲ್ಲಿ ಚಿತ್ರದ ಅತ್ಯಂತ ಪ್ರಮುಖ ಭಾಗಗಳ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್, 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

 • ಮೊದಲ ದಿನವೇ 100 ಕೋಟಿ ಕಲೆಕ್ಷನ್ ನಿರೀಕ್ಷೆ..!

  ಮೊದಲ ದಿನವೇ 100 ಕೋಟಿ ಕಲೆಕ್ಷನ್ ನಿರೀಕ್ಷೆ..!

  ಕೆಜಿಎಫ್ ಚಾಪ್ಟರ್ 2 ದಾಖಲೆ ಬರೆಯಲೆಂದೇ ನಿರ್ಮಾಣವಾದ ಇಂಡಿಯನ್ ಸಿನಿಮಾ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ ಮೊದಲಾದವರು ನಟಿಸಿರೋ ಚಿತ್ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಆ ದಿನ ಕೆಜಿಎಫ್ ಹಬ್ಬವೇ ನಡೆಯುತ್ತಿದೆ. ರಿಲೀಸ್ ಆಗುತ್ತಿರೋದು 10 ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ.

  ಅಮೆರಿಕ, ಬ್ರಿಟನ್, ದುಬೈ, ಯುಎಇ, ಸೌದಿ ಅರೇಬಿಯಾ, ರಷ್ಯಾ, ಗ್ರೀಸ್, ಫ್ರಾನ್ಸ್, ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಜಗತ್ತಿನ ಸುಮಾರು 50 ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿರೋ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನವೇ 100 ಕೋಟಿ ಕಲೆಕ್ಷನ್ ದಾಟಬಹುದು ಎಂಬುದು ಎಲ್ಲರ ನಿರೀಕ್ಷೆ.

  ಪ್ರಶಾಂತ್ ನೀಲ್ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡಿದ್ದು, ಇದರಿಂದ ಖುಷಿಯಾಗಲಿರೋದು ಹೊಂಬಾಳೆ ಫಿಲಮ್ಸ್‍ನ ಬ್ರಹ್ಮ ವಿಜಯ್ ಕಿರಗಂದೂರು. ಕನ್ನಡ ಚಿತ್ರವೊಂದು ಈ ಪರಿ ಸದ್ದು ಮಾಡುತ್ತಿರೋದು ಎಲ್ಲರಿಗೂ ಖುಷಿ ಕೊಟ್ಟಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್ ಕೆಜಿಎಫ್ ಮೊದಲ ವಾರದಲ್ಲಿಯೇ 100 ಕೋಟಿ ದಾಟಬಹುದು ಎಂಬ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಕೆಜಿಎಫ್ ಬಂದಿರೋದೇ ದಾಖಲೆ ಬರೆಯೋಕೆ ಎಂಬ ವಾತಾವರಣ ಎಲ್ಲೆಡೆ ಇದೆ. ಅಂದಹಾಗೆ ಬುಕ್ಕಿಂಗ್ ಇವತ್ತಿಂದ ಆರಂಭ.

 • ಯಶ್ ಮುಂದಿನ ಸಿನಿಮಾ ಕೆಜಿಎಫ್ 3ನಾ? ನರ್ತನ್ ಸಿನಿಮಾನಾ..?

  ಯಶ್ ಮುಂದಿನ ಸಿನಿಮಾ ಕೆಜಿಎಫ್ 3ನಾ? ನರ್ತನ್ ಸಿನಿಮಾನಾ..?

  ಕೆಜಿಎಫ್ ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಬಂದ ಒಂದೇ ಒಂದು ದೃಶ್ಯ, ಕೆಜಿಎಫ್ ಚಾಪ್ಟರ್ 3 ಬರಲಿದೆಯೇ ಎಂಬ ಕುತೂಹಲ ಹುಟ್ಟಿಸಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡದವರೂ ಕೂಡಾ ಹೌದೂ ಎಂದೂ ಹೇಳದೆ.. ಇಲ್ಲ ಎಂದೂ ಹೇಳದೆ ಕುತೂಹಲ ಹೆಚ್ಚಿಸಿದ್ದರು. ಅದಾದ ಮೇಲೆ ಹಿಂದಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಯಶ್ ಒಂದಿಷ್ಟು ಕಥೆಯ ಎಳೆ ಸಿದ್ಧವಾಗಿದೆ ಎಂದಿದ್ದರು. ಆದರೆ ಅಫಿಷಿಯಲ್ ಆಗಿಲ್ಲ ಎಂದಿದ್ದರು. ಈಗ ಎಲ್ಲದಕ್ಕೂ ಫುಲ್‍ಸ್ಟಾಪ್ ಬಿದ್ದಿದೆ. ಕೆಜಿಎಫ್ 3 ಬರೋದು ಪಕ್ಕಾ ಆಗಿದೆ. ಅಧಿಕೃತವಾಗಿ.

  ಕೆಜಿಎಫ್ 3 ಟೇಕಾಫ್ ಆಗಲಿದೆ. ಈಗಾಗಲೇ ಶೇ.30ರಿಂದ ಶೇ.35ರಷ್ಟು ಶೂಟಿಂಗ್ ಕೂಡಾ ಆಗಿದೆ. ಸದ್ಯಕ್ಕೆ ಪ್ರಶಾಂತ್ ನೀಲ್ ಸಲಾರ್ ಶೂಟಿಂಗ್‍ನಲ್ಲಿದ್ದಾರೆ. ಬಹುಶಃ ಸಲಾರ್ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಕಂಪ್ಲೀಟ್ ಆಗಬಹುದು. ಹೀಗಾಗಿ ನಾವು ಸಲಾರ್ ಮುಗಿದ ಮೇಲೆ ಕೆಜಿಎಫ್ 3 ಶೂಟಿಂಗ್‍ಗೆ ಪ್ಲಾನ್ ಮಾಡಿದ್ದೇವೆ. ಅದು ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

  ಇಂಗ್ಲಿಷ್ ಪತ್ರಿಕೆಯೊಂದು ವಿಜಯ್ ಕಿರಗಂದೂರು ಅವರ ಹೇಳಿಕೆ ಕೋಟ್ ಮಾಡಿಯೇ ಈ ವರದಿ ಮಾಡಿದ್ದರೆ, ಹೊಂಬಾಳೆ ಬ್ಯಾನರ್‍ನವರೇ ಆದ ನಿರ್ಮಾಪಕ ಕಾರ್ತಿಕ್ ಗೌಡ ಬೇರೆಯದೇ ಮಾತು ಹೇಳಿದ್ದಾರೆ.

  ಸುದ್ದಿಯಾಗಿರುವಂತೆ ಕೆಜಿಎಫ್ 3 ಲಾಂಚ್ ಆಗುತ್ತಿಲ್ಲ. ನಮ್ಮ ಎದುರು ದೊಡ್ಡ ದೊಡ್ಡ ಪ್ರಾಜೆಕ್ಟ್‍ಗಳಿವೆ. ಸದ್ಯಕ್ಕಂತೂ ಲಾಂಚ್ ಆಗುತ್ತಿಲ್ಲ. ಹಾಗೆ ಲಾಂಚ್ ಮಾಡುವಾಗ ಖಂಡಿತಾ ಹೇಳುತ್ತೇವೆ ಎಂದಿದ್ದಾರೆ ಕಾರ್ತಿಕ್ ಗೌಡ. ಆ ಮೂಲಕ ಕೆಜಿಎಫ್ 3 ಸದ್ಯಕ್ಕೆ ಇಲ್ಲ ಎಂದಿದ್ದಾರೆಯೇ ಹೊರತು, ಬರುವುದೇ ಇಲ್ಲ ಎಂದೇನೂ ಹೇಳಿಲ್ಲ.

  ಪ್ರಶಾಂತ್ ನೀಲ್ ಕೈಲಿ ಸಲಾರ್ ಇದೆ. ಅದಾದ ನಂತರ ಜೂ.ಎನ್‍ಟಿಆರ್ ಜೊತೆಗಿನ ಚಿತ್ರಕ್ಕೆ ಅಡ್ವಾನ್ಸ್ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ಹೊಂಬಾಳೆಯವರ ಜೊತೆಯಲ್ಲೇ ಶ್ರೀಮುರಳಿ ಹೀರೋ ಆಗಿರೋ ಬಘೀರ ಚಿತ್ರ ಶೆಡ್ಯೂಲ್ ಆಗಿದೆ. ಹೀಗಿರುವಾಗ.. ವಾಟ್ ನೆಕ್ಸ್ಟ್ ಅನ್ನೋ ಪ್ರಶ್ನೆ ಸಹಜ.

   ಮೂಲಗಳ ಪ್ರಕಾರ ಯಶ್ ಕೆವಿಎನ್ ಸಂಸ್ಥೆಗೆ ಕಾಲ್‍ಷೀಟ್ ಕೊಟ್ಟಿದ್ದಾರೆ. ಅದು ನರ್ತನ್ ಸಿನಿಮಾ ಎನ್ನುವ ಸುದ್ದಿಯೂ ಇದೆ. ಯಶ್ ಆಗಲೀ, ನರ್ತನ್ ಆಗಲೀ.. ಅದನ್ನು ಅಫಿಷಿಯಲ್ ಆಗಿ ಘೋಷಿಸಿಲ್ಲ.

  ಹಾಗಾದರೆ ಯಶ್ ಮತ್ತೊಮ್ಮೆ ಕೆಜಿಎಫ್ ಪ್ರಾಜೆಕ್ಟ್‍ನಲ್ಲೇ ಉಳಿಯುತ್ತಾರಾ..? ಅಥವಾ ಹೊಸ ಸಿನಿಮಾ ಕೈಗೆತ್ತಿಕೊಳ್ತಾರಾ..? ಗೊತ್ತಿಲ್ಲ. ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವುದು ಈಗಲೂ ಸಸ್ಪೆನ್ಸ್ ಆಗಿಯೇ ಇದೆ.

  ಇತ್ತ ಬಾಕ್ಸಾಫೀಸ್‍ನಲ್ಲಿ ಕೆಜಿಎಫ್ ದಾಖಲೆಗಳ ಬೇಟೆ ಮುಂದುವರೆಯುತ್ತಲೇ ಇದೆ. ಕಾಂಪಿಟೇಷನ್ ಕೊಡುವ ಒಂದೇ ಒಂದು ಸಿನಿಮಾ ಬರುತ್ತಿಲ್ಲ. ಬಂದ ಸ್ಟಾರ್ ಚಿತ್ರಗಳು 5 ವಾರದ ನಂತರವೂ ಕೆಜಿಎಫ್ ಎದುರು ಸೋಲುತ್ತಿವೆ. 4ನೇ ವಾರದ ಕಲೆಕ್ಷನ್ ಕೂಡಾ ನೂರು ಕೋಟಿ ದಾಟಿದೆ. 5ನೇ ವಾರ 100 ಕೋಟಿ ಅಲ್ಲದೇ ಹೋದರೂ.. ಹತ್ತಿರ ಹತ್ತಿರ ಅಷ್ಟೇ ಕಲೆಕ್ಷನ್ ಆಗುವ ನಿರೀಕ್ಷೆ ಮತ್ತು ಸಾಧ್ಯತೆ ಎರಡೂ ಇದೆ.

 • ಶೆಟ್ರು ಶೆಟ್ರ ನಡುವೆ ಏನ್ ನಡೀತಿದೆ..?

  ಶೆಟ್ರು ಶೆಟ್ರ ನಡುವೆ ಏನ್ ನಡೀತಿದೆ..?

  ಅವರೂ ಶೆಟ್ಟಿ. ಇವರೂ ಶೆಟ್ಟಿ. ಅವರು ಶ್ರೀನಿಧಿ ಶೆಟ್ಟಿ. ಇವರು ರಕ್ಷಿತ್ ಶೆಟ್ಟಿ. ಇವರಿಬ್ಬರೂ ಟ್ವಿಟರಿನಲ್ಲಿ ನಡೆಸಿದ್ದ ಮಾತುಕತೆಯೇ ಈಗ ಟ್ರೆಂಡಿಂಗ್ ಆಗ್ಬಿಟ್ಟಿದೆ. ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ಹಾಗೆ ಸುಮ್ಮನೆ ಪೋಸ್ಟ್ಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಇಬ್ಬರೂ ಶೆಟ್ರ ಮಾತುಕತೆ ಅಂತಿರಾ? ಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

  ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್ನ ಸುಂದರ ಪೋಟೋ ಹಂಚಿಕೊಂಡಿದ್ದರು. ಫೋಟೋಗೆ ಹಾಗೆ ಸುಮ್ಮನೆ ಎಂದು ಕ್ಯಾಪ್ಷನ್ ಮಾಡಿದ್ದರು. ಶ್ರೀನಿಧಿ ಶೆಟ್ಟಿ ಫೋಟೋಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿದ್ದಾರೆ. 'ಹೌದಾ ಶೆಟ್ರೆ ಗೊತ್ತಾಯಿತು' ಎಂದು ತುಳುವಿನಲ್ಲಿ ಹೇಳಿದ್ದಾರೆ. ರಕ್ಷಿತ್ ಕಾಮೆಂಟ್ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. 'ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು' ಹೇಳಿದ್ದಾರೆ.

  ಇಬ್ಬರ ಮಾತುಕತೆ ನೋಡಿ ಅಭಿಮಾನಿಗಳು ಕೊಡುತ್ತಿರೋ ಪ್ರತಿಕ್ರಿಯೆಯೇ ಡಿಫರೆಂಟು. ಏನ್ ನಡೀತಿದೆ ಶೆಟ್ರೆ ಅಂತಾ ಒಬ್ಬರಂದರೆ, ಬೇರೆ ಏನೋ ವಾಸನೆ ಬರ್ತಿದೆ ಶೆಟ್ರೇ ಅಂತಿದ್ದಾರೆ ಇನ್ನೊಂದಷ್ಟು ಮಂದಿ. ತಲೆಗೆ ಹುಳ ಬಿಟ್ರಿ ಶೆಟ್ರೇ ಅಂತಾ ಕೆಲವರಂದ್ರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಜೋಡಿ ಚೆನ್ನಾಗಿದೆ ಎಂದು ಲವ್ ಸಿಂಬಲ್ ಹಾಕಿದ್ದಾರೆ.

  ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ, ಚೆನ್ನಾಗಿರುತ್ತೆ ಎಂದು ಅನೇಕರು ಹೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಕ್ಷಿತ್ ಜೊತೆ ಶ್ರೀನಿಧಿ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮುಂದಿನ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ರೂ ಅಚ್ಚರಿ ಇಲ್ಲ. ಅಂದಹಾಗೆ ಹೊಂಬಾಳೆಯವರ ಜೊತೆ ರಕ್ಷಿತ್ ಶೆಟ್ಟಿಯವರ ರಿಚರ್ಡ್ ಆಂಟನಿ ಸಿನಿಮಾ ಚಿತ್ರೀಕರಣ ಶುರುವಾಗಬೇಕಿದೆ. ಶ್ರೀನಿಧಿ ಶೆಟ್ಟಿ ಕೂಡಾ ಹೊಂಬಾಳೆ ಹುಡುಗಿ ಅನ್ನೋದನ್ನ ಬೇರೆ ಹೇಳಬೇಕಿಲ್ಲ.. ಅಲ್ಲವೇ..

 • ಶ್ರೀನಿಧಿ ಶೆಟ್ಟಿ ಕೆಜಿಎಫ್ ಸೀಕ್ವೆಲ್‍ಗೆ ರೆಡಿ

  will recover in 2 weeks says srinidhi shetty

  ಮೊನ್ನೆ ಮೊನ್ನೆ ಒಂದು ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿಗೆ ಗಾಯವಾಗಿದೆ. ಮೂಳೆ ಫ್ರಾಕ್ಚರ್ ಆಗಿದೆ. ಹೀಗಾಗಿ ಚಿತ್ರತಂಡದಿಂದ ಶ್ರೀನಿಧಿ ಹೊರಬಿದ್ದಿದ್ದಾರೆ ಅನ್ನೋ ಸುದ್ದಿಯದು. ಮೊದಲ ಚಿತ್ರದಲ್ಲಿಯೇ ದೇಶಾದ್ಯಂತ ಸದ್ದು ಮಾಡಿದ ಚಿತ್ರದ ನಾಯಕಿ ಹೀಗೆ ಸೈಡಿಗೆ ಹೋಗಿಬಿಟ್ಟರಾ ಎಂಬ ಪ್ರಶ್ನೆಗಳಿಗೆಲ್ಲ ಈಗ ಅವರೇ ಉತ್ತರ ಕೊಟ್ಟಿದ್ದಾರೆ.

  ಬ್ಯಾಡ್ಮಿಂಟನ್ ಆಡುವಾಗ ಬಲಗೈ ರಿಸ್ಟ್‍ನಲ್ಲಿ ಲಿಗಮೆಂಟ್ ಇಂಜುರಿ ಆಗಿದೆ. ಸದ್ಯಕ್ಕೆ ರೆಸ್ಟ್‍ನಲ್ಲಿದ್ದೇನೆ. ನೋ ಪ್ರಾಬ್ಲಂ. ಎರಡು ವಾರದಲ್ಲಿ ಕಂಪ್ಲೀಟ್ ಸರಿ ಹೋಗುತ್ತೇನೆ ಎಂದಿದ್ದಾರೆ ಶ್ರೀನಿಧಿ.

  ಕೆಜಿಎಫ್ ಚಾಪ್ಟರ್ 2 ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಶ್ರೀನಿಧಿ ಡೇಟ್ಸ್ ಇನ್ನೂ ಫಿಕ್ಸ್ ಆಗಿಲ್ಲ. ಸೀಕ್ವೆಲ್‍ನಲ್ಲಿ ಶ್ರೀನಿಧಿ ರೋಲ್ ಹೆಚ್ಚಾಗಿದ್ದು, ಲವ್, ರೊಮ್ಯಾನ್ಸ್ ಎಲ್ಲವೂ ಇದೆಯಂತೆ. ಕೆಜಿಎಫ್ ಚಾಪ್ಟರ್-2 ಮುಗಿಯುವವರೆಗೆ ಬೇರೆ ಸಿನಿಮಾ ಇಲ್ಲ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ. 

 • ಸಲಾಂ ರಾಖಿ ಭಾಯ್‍ನಿಂದ 2ನೇ ಟ್ರೇಲರ್ 

  kgf second trailer today

  ಸಲಾಂ ರಾಖಿ ಭಾಯ್ ಹಾಡು ರಿಲೀಸ್ ಮಾಡಿ ಹವಾ ಎಬ್ಬಿಸಿರುವ ಕೆಜಿಎಫ್ ಟೀಂ, ಹಾಡಿನ ಗುಂಗು ಗುಂಯ್ ಅಂತಿರೋವಾಗ್ಲೇ ಇನ್ನೊಂದು ಅಬ್ಬರದ ಸುಳಿವು ಕೊಟ್ಟಿದೆ. ಬೆನ್ನಲ್ಲೇ ಕೆಜಿಎಫ್‍ನ 2ನೇ ಟ್ರೇಲರ್ ರಿಲೀಸ್ ಮಾಡೋದಾಗಿ ಹೇಳಿದೆ.

  ರವಿ ಬಸ್ರೂರು ನಿರ್ದೇಶನದ ಸಲಾಂ ರಾಖಿ ಭಾಯ್ ಹಾಡು ರಾಕಿಂಗ್ ಸ್ಟಾರ್ ಯಶ್

   ಅಭಿಮಾನಿಗಳಿಗಂತೂ ಥ್ರಿಲ್ ಕೊಟ್ಟಿದೆ. ಕೆಲವು ಕನ್ನಡ ಪರ ಸಂಘಟನೆಯವರು ಹಾಡಿನಲ್ಲಿ ಹಿಂದಿಯೇ ತುಂಬಿದೆ ಎಂಬ ಅಪಸ್ವರವನ್ನೂ ಎತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅಬ್ಬರವಿದೆ. ಈ ಹಾಡಿನ ಅಬ್ಬರ ಜೋರಾಗಿರುವಾಗಲೇ 2ನೇ ಟ್ರೇಲರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.

  ನಿರ್ದೇಶಕ ಪ್ರಶಾಂತ್ ನೀಲ್ ಅಪ್ಪಟ ಕಸುಬುದಾರಿಕೆ ಹಾಗೂ ಹೊಂಬಾಳೆ ಬ್ಯಾನರ್‍ನ ಕಮಿಟ್‍ಮೆಂಟ್, ಚಿತ್ರದ ಪ್ರಚಾರದಲ್ಲಿ ಎದ್ದು ಕಾಣುತ್ತಿರುವುದು ವಿಶೇಷ.

 • ಸ್ಯಾಟಲೈಟ್, ಡಿಜಿಟಲ್ ರೈಟ್ಸ್‍ನಲ್ಲೂ ಕೆಜಿಎಫ್‍ಗೆ ಬಂಪರ್

  kgf records in satellte and digital marketing

  ಕೆಜಿಎಫ್ ದೇಶ, ವಿದೇಶಗಳಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದ್ದರೆ, ಇತ್ತ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್‍ನಲ್ಲೂ ದಾಖಲೆ ಬರೆದಿದೆ. ಮೂಲಗಳ ಪ್ರಕಾರ, ಅಮೇಜಾನ್ ಪ್ರೈಮ್ ಕೆಜಿಎಫ್ ಇಂಟರ್‍ನೆಟ್ ಅಂದರೆ ಡಿಜಿಟಲ್ ಹಕ್ಕನ್ನು 18 ಕೋಟಿ ರೂ. ಕೊಟ್ಟು ಖರೀದಿಸಿದೆ. ನೆಟ್‍ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ನಡುವಣ ಪೈಪೋಟಿಯಲ್ಲಿ ಗೆದ್ದಿರುವುದು ಅಮೇಜಾನ್ ಪ್ರೈಮ್.

  ಇನ್ನು ಚಿತ್ರದ ಕನ್ನಡ ಸ್ಯಾಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ ಭಾರಿ ಮೊತ್ತಕ್ಕೆ ಖರೀದಿಸಿದ್ದರೆ, ಹಿಂದಿ ಹಕ್ಕನ್ನು ಸೋನಿ ಖರೀದಿಸಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ರೈಟ್ಸ್‍ಗಳು ಬೇರೆ ಬೇರೆ ಚಾನೆಲ್ ಪಾಲಾಗಿವೆ. 

  ಒಂದು ಲೆಕ್ಕಾಚಾರದ ಪ್ರಕಾರ, ಕೆಜಿಎಫ್‍ಗೆ ಹಾಕಿದ್ದ ಬಂಡವಾಳ, ಕೇವಲ ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳ ಮಾರಾಟದಿಂದಲೇ ವಾಪಸ್ ಬಂದುಬಿಟ್ಟಿದೆ. ಥಿಯೇಟರ್‍ನಲ್ಲಿ ಬರುತ್ತಿರುವುದೆಲ್ಲವೂ ನಿರ್ಮಾಪಕರಿಗೆ ಬೋನಸ್.

 • ಹಿಂದಿ ಕೆಜಿಎಫ್ - ಯಥಾವತ್ ಡಬ್ಬಿಂಗ್ ಅಲ್ವಂತೆ..!

  kgf hindi version dialogues is different

  ಕೆಜಿಎಫ್ ಇಡೀ ಇಂಡಿಯಾದಲ್ಲಿ ದೊಡ್ಡದೊಂದು ಹವಾ ಸೃಷ್ಟಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್ ಕಾಂಬಿನೇಷನ್‍ನ ಕೆಜಿಎಫ್ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರ ಹಿಂದಿಯಲ್ಲಿ ಸ್ವಲ್ಪ ಡಿಫರೆಂಟ್ ಆಗಿಯೇ ಮೂಡಿ ಬರಲಿದೆ.

  ಹಿಂದಿ ಕೆಜಿಎಫ್‍ಗೆ ಕನ್ನಡದ ಡೈಲಾಗ್‍ಗಳನ್ನು ಯಥಾವತ್ ಡಬ್ ಮಾಡಿಲ್ಲ. ಬದಲಿಗೆ, ಹಿಂದಿಗೆ ಒಗ್ಗುವಂತೆ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಡೈಲಾಗ್‍ಗಳನ್ನು ಹಿಂದಿಗೆ ತಕ್ಕಂತೆ ಹೊಸದಾಗಿ ಮಾಡಿದ್ದೇವೆ. ಹಿಂದಿಯ ಕೆಜಿಎಫ್, ಕನ್ನಡದ ಡಬ್ಬಿಂಗ್ ಸಿನಿಮಾದಂತೆ ಕಾಣೋದಿಲ್ಲ ಎಂದು ಹೇಳಿಕೊಂಡಿದೆ ಸಿನಿಮಾ ಟೀಂ.

  ಡಿಸೆಂಬರ್ 21ಕ್ಕೆ ತೆರೆಗೆ ಬರುತ್ತಿರುವ ಕೆಜಿಎಫ್‍ನ ಹಿಂದಿ ಆವೃತ್ತಿಯನ್ನು ಫರ್ಹಾನ್ ಅಖ್ತರ್ ಬಿಡುಗಡೆ ಮಾಡುತ್ತಿದ್ದಾರೆ.

 • ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

  ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

  ಕೆಜಿಎಫ್ ಚಾಪ್ಟರ್ 2 ದಾಖಲೆಗಳನ್ನು ಬರೆಯುತ್ತಿದೆ. ಈ ವಾರಾಂತ್ಯಕ್ಕೆ ಎಲ್ಲ ಭಾಷೆಗಳ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ಮುಟ್ಟುವ ಅಥವಾ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇದರ ನಡುವೆ ಹಿಂದಿಯಲ್ಲಿಯೇ ವಿಶೇಷ ದಾಖಲೆ ಬರೆದಿದೆ ಕೆಜಿಎಫ್. ಭಾನುವಾರ 300 ಕೋಟಿಯ ಗಡಿ ದಾಟಿದೆ. ಈ ದಾಖಲೆ ಬರೆದ ಒಟ್ಟಾರೆ 10ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

  ಈ ಮೊದಲು ಪಿಕೆ, ಭಜರಂಗಿ ಭಾಯಿಜಾನ್, ಸುಲ್ತಾನ್, ದಂಗಲ್, ಟೈಗರ್ ಜಿಂದಾ ಹೈ, ಪದ್ಮಾವತ್, ಸಂಜು, ವಾರ್ ಹಾಗೂ ಬಾಹುಬಲಿ 2 ಚಿತ್ರಗಳು ಈ ದಾಖಲೆ ಬರೆದಿದ್ದವು. ಇವುಗಳಲ್ಲಿ ಇಂಡಿಯನ್ ಮಾರ್ಕೆಟ್‍ನಲ್ಲಿ ಹಿಂದಿಯಲ್ಲಿಯೇ 500 ಕೋಟಿ ಗಳಿಸಿದ್ದ ಸಿನಿಮಾ ಬಾಹುಬಲಿ 2 ಮಾತ್ರ. ಈಗ 300 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿರುವ ವೇಗ ನೋಡಿದರೆ ಅದು 500 ಕೋಟಿ ಕಲೆಕ್ಷನ್ ದಾಟಿದರೂ ಆಶ್ಚರ್ಯವಿಲ್ಲ.

  ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ಕೇವಲ 11 ದಿನದಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2ಗೀಗ ಒಟ್ಟಾರೆ ಜೀವಮಾನದ ಕಲೆಕ್ಷನ್ ಟಾಪ್ 10 ಸಿನಿಮಾಗಳ ಲಿಸ್ಟಿನಲ್ಲಿ 7ನೇ ಸ್ಥಾನವಿದೆ. ನಂ. 1 ಸ್ಥಾನಕ್ಕೇರುವುದು ಕಷ್ಟವಾಗಲಾರದು.

  ಕೇರಳದಲ್ಲಿ.. 11 ದಿನದಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಆ್ಯಕ್ಷನ್ ಮಾಸ್ ಸಿನಿಮಾಗಳು ಕ್ಲಿಕ್ ಆಗುವುದು ಅಪರೂಪದಲ್ಲಿ ಅಪರೂಪ. ಹೀಗಾಗಿ.. ಅದೂ ಒಂದು ದಾಖಲೆಯೇ.