` choorikatte, - chitraloka.com | Kannada Movie News, Reviews | Image

choorikatte,

 • `ಚೂರಿಕಟ್ಟೆ' ಕಾಲ್ಪನಿಕ ಕಥೆಯಲ್ಲ.. ಸತ್ಯಕಥೆ..!

  choorikatte is about timber mafia

  ಚೂರಿಕಟ್ಟೆ. ಹೆಸರಷ್ಟೇ ಅಲ್ಲ, ಚಿತ್ರದ ಕಥೆಯೂ ವಿಶೇಷವಾಗಿಯೇ ಇದೆ. ರಾಘು ಶಿವಮೊಗ್ಗ ನಿರ್ದೇಶನದ ಈ ಸಿನಿಮಾದಲ್ಲಿರೋದು ಬ್ರಿಟಿಷರ ಕಾಲದ ಕಥೆ. ಚಿತ್ರದಲ್ಲಿರುವುದು ಟಿಂಬರ್ ಮಾಫಿಯಾದ ಸ್ಟೋರಿ. ಅದು ಹೊರಜಗತ್ತಿಗೆ ಗೊತ್ತಿಲ್ಲದ ಸತ್ಯಘಟನೆಯನ್ನಾಧರಿಸಿದ ಕಥೆಯಂತೆ. ಕಾನ್‍ಸ್ಟೇಬಲ್ ಒಬ್ಬ ಟಿಂಬರ್ ಮಾಫಿಯಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕಥೆ, ಈಗಿನ ಕಾಲಘಟ್ಟಕ್ಕೂ ಬರುತ್ತೆ. ಹೇಗೆ ಅನ್ನೋ ಕುತೂಹಲಕ್ಕೆ ಸಿನಿಮಾದಲ್ಲಿಯೇ ಉತ್ತರ ಸಿಗಬಲಿದೆ.

  ಸತ್ಯ ಘಟನೆಯನ್ನು ಆಧರಿಸಿ, ಅದಕ್ಕೆ ಒಂದಷ್ಟು ಸಿನಿಮೀಯ ಅಂಶಗಳನ್ನು ಸೇರಿಸಿ ಕಥೆ, ಚಿತ್ರಕಥೆ ರಚಿಸಲಾಗಿದೆ ಅನ್ನೋದು ರಘು ಶಿವರಾಮ್ ವಿವರಣೆ. ಈ ರಘು ಶಿವರಾಮ್ ಅವರಿಗೆ ಸಿನಿಮಾ ಹೊಸದಾದರೂ ನಿರ್ದೇಶನ ಹೊಸದಲ್ಲ. ಈ ಹಿಂದೆ ಚೌಕಾಬಾರ ಎಂಬ ಕಿರುಚಿತ್ರದ ಮೂಲಕ ಸುದ್ದಿ, ಸದ್ದು ಮಾಡಿದ್ದ ರಘು ಶಿವರಾಮ್, ಪ್ರಶಸ್ತಿಯನ್ನೂ ಪಡೆದಿದ್ದರು. ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿದ್ದರು. ಈಗ ಅವರ ಚೂರಿಕಟ್ಟೆ ರಿಲೀಸ್‍ಗೆ ರೆಡಿಯಾಗಿದೆ.

 • Churikatte Movie Review; Chitraloka Rating - 4/5

  choorikatte movie image

  Newcomer Raghu Shivamogga has come up with an amazing first film. This is a new kind of crime film in Kannada. It does not confirm to standards and sets its own bar and genre. There is an amazing yet simple story that is captured in a new style. The style combines characters and story in one graph. Different characters come together to form the story instead of the story diverging into different characters. 

  The film can be seen at different levels but basically is a crime story. A student who is completing his degree aspires to become a police constable. He is awaiting the letter for training. In the meantime he encounters a timber smuggling mafia in his hometown in the hills. He has the kanck of getting into trouble. It seems he will never become a cop because of the problems he gets into. The other characters include the police officer who is trying to curb the smuggling and the smugglers themselves. Then there is the girl who becomes the catalyst for the plot. The story takes a dramatic turn with the hero indulging in a daring act. This sets off a chain of events that he cannot control. He has changed the fate of everyone involved. 

  How this chain of events unfolds forms the rest of the story. It is not good to reveal what the basic plot is. It will undermine the curiosity when you watch it. But suffice to say that this film is not only interestingly made but it gives you enough food for thought. It is the kind of films that Kannada audience need to encourge to develop new kind of films. 

  The film has some very good acting by Praveen Tej, Achyuth Kumar, Manjunath Hegde and Pramod Shetty. But it is in the character of Seena that Balaji Manohar steals the show. The director's strength is in creating strong characters and all the actors have utilised the chance and made this a memorable film for themselves as well as for the audience. 

  It is an one-off kind of film with a unique subject and very good technical support. There is good camerawork, background score and a couple of interesting songs too. The film can be called an experiment but it is also successful. 

  Chitraloka Review - 4/5

 • Sandalwood Smuggling In Choorikatte

  choorikatte is abput rimer smuggling

  Choorikatte, a suspense thriller that is set for release tackles the issue of smuggling of Sandalwood and other forest trees and timber. The film is based on real incidents of smuggling reported in the Western Ghats of Karnataka.  Choorikatte is a real place in Shivamogga. The film is directed by Raghu Shivamogga who is turning independent director after having worked alongside B Suresh and other Kannada directors.

  Real incidents have been blended into a cinematic narration he says. The film has generated much curiosity since the release of its trailer and audio recently. Vasuki Vaibhav of Rama Rama Re has composed the music and it has already become a big hit. Most of the action in the film takes place in forest locations and therefore the visuals of the film has been gaining appreciation. 

  While Praveen Tej and Prerana play the lead roles seasoned actors like Dattanna, Sharath Lohitashva and Achyuth Kumar are also part of the cast.

   

 • ಚೂರಿಕಟ್ಟೆ ಊರಿನ ಕಥೆ ಗೊತ್ತಾ..?

  choorikatte village story

  ಚೂರಿಕಟ್ಟೆ ಸಿನಿಮಾ ಬಗ್ಗೆ ಇತ್ತೀಚೆಗೆ ಕೇಳಿಯೇ ಇರ್ತೀರಿ. ಗಣರಾಜ್ಯೋತ್ಸವದ ದಿನ ತೆರೆಗೆ ಬರುತ್ತಿರುವ ಈ ಚಿತ್ರ, ಟಿಂಬರ್ ಮಾಫಿಯಾ ಮತ್ತು ಪೊಲೀಸ್ ವ್ಯವಸ್ಥೆಯ ಕಥೆಯನ್ನೊಳಗೊಂಡಿದೆ. ಅಂದಹಾಗೆ ಚೂರಿಕಟ್ಟೆ ಅನ್ನೋದು ಕಾಲ್ಪನಿಕ ಊರಿನ ಹೆಸರಲ್ಲ. ಚೂರಿಕಟ್ಟೆ ಎಂಬ ಹೆಸರಿನ ಗ್ರಾಮ ಇಂದಿಗೂ ಇದೆ. ಆ ಊರಿಗೊಂದು ಇತಿಹಾಸವೂ ಇದೆ.

  ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಊರು , ಶಿವಮೊಗ್ಗ ಜಿಲ್ಲೆಯ ಗಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಊರಿನಿಂದಲೇ ಕಾರವಾರ ಜಿಲ್ಲೆಯ ಸರಹದ್ದು ಆರಂಭವಾಗುತ್ತೆ. ಈ ಊರಿನಲ್ಲಿ 25ಕ್ಕೂ ಹೆಚ್ಚು ಕುಟುಂಬಗಳಿವೆ. ಬ್ರಿಟಿಷರ ಕಾಲದಲ್ಲಿ ಈ ಊರಿನಲ್ಲಿ ಬ್ರಿಟಿಷ್ ಸೈನಿಕರು ಚೂರಿ ಹಿಡಿದು ಅಡಗಿ ಕುಳಿತು, ಕಳ್ಳರು, ಡಕಾಯಿತರನ್ನು ಹಿಡಿಯುತ್ತಿದ್ದರಂತೆ. ಹೀಗಾಗಿ ಈ ಊರಿಗೆ ಚೂರಿಕಟ್ಟೆ ಅನ್ನೋ ಹೆಸರು ಬಂದಿದೆ.

  ಹಾಗಂತ, ಈ ಊರಿಗೂ, ಸಿನಿಮಾದ ಕಥೆಗೂ ಸಂಬಂಧ ಇದೆ ಅಂದ್ಕೋಬೇಡಿ. ಆರಂಭದಲ್ಲಿ ಸಿನಿಮಾ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿದ್ದ ಚೂರಿಕಟ್ಟೆ ಗ್ರಾಮದ ಜನ, ಚಿತ್ರದ ಸಂದೇಶ ಮತ್ತು ಕಥೆ ಬಗ್ಗೆ ಕೇಳಿದ ಮೇಲೆ ಸುಮ್ಮನಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಊರಿನ ಹೆಸರಲ್ಲಿ ಸಿನಿಮಾವೊಂದು ಬರುತ್ತಿದೆ ಎನ್ನುವುದು ಅವರಿಗೂ ಖುಷಿ ಕೊಟ್ಟಿದೆ.

 • ಚೂರಿಕಟ್ಟೆ ನಾಯಕಿಯ ಚುರುಮುರಿ ಮಾತು

  choorikatte actress prerana talks her experience

  ಚೂರಿಕಟ್ಟೆ ಚಿತ್ರದ ನಾಯಕಿ ಪ್ರೇರಣಾ ಕಂಬನ್. ಕನ್ನಡದ ಹುಡುಗಿ. ಹರ ಹರ ಮಹಾದೇವ ಸೀರಿಯಲ್‍ನಲ್ಲಿ ಸತಿಯ ಸೋದರಿಯ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹುಡುಗಿ. ಚೂರಿಕಟ್ಟೆಯ ಅನುಭವವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

  ಚೂರಿಕಟ್ಟೆಯಲ್ಲಿ ನನ್ನ ಪಾತ್ರದ ಹೆಸರು ಕಲಾ. ಹಳ್ಳಿ ಹುಡುಗಿಯ ಪಾತ್ರ. ನಿಜಕ್ಕೂ ಹೇಳಬೇಕೆಂದರೆ, ನನಗೆ ಹಳ್ಳಿಯ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹುಟ್ಟಿದ್ದು ಬೆಳೆದಿದ್ದು ಎಲ್ಲ ಸಿಟಿಯಲ್ಲೇ. ಹೀಗಾಗಿ ಚೂರಿಕಟ್ಟೆಯಲ್ಲಿ ಮುಗ್ದ ಹುಡುಗಿಯ ಪಾತ್ರ ನನಗೆ ನಿಜಕ್ಕೂ ಹೊಸದಾಗಿತ್ತು. ಗ್ಲ್ಯಾಮರ್ ಸ್ಪರ್ಶವಿಲ್ಲದ ದೇಸೀ ಲುಕ್‍ನಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ವಾಸ್ತವದಲ್ಲಿ ಹೇಗಿದ್ದೇನೋ.. ಅದಕ್ಕೆ ತದ್ವಿರುದ್ಧವಾದ ಪಾತ್ರ ಅದು. ಹೀಗಾಗಿಯೇ ಆ ಪಾತ್ರ ನನಗೆ ಸವಾಲಿನದ್ದಾಗಿತ್ತು ಎಂದಿದ್ದಾರೆ ಪ್ರೇರಣಾ.

  ಚಿತ್ರದಲ್ಲಿ ನಾಯಕಿಯದ್ದು ಕೇವಲ ಮರಸುತ್ತುವ ಪಾತ್ರ ಅಲ್ಲ, ಇಡೀ ಚಿತ್ರಕ್ಕೆ ಅನಿರೀಕ್ಷಿತ ತಿರುವು ಕೊಡುವ ಮಹತ್ವದ ಪಾತ್ರ. ಅದ್ಭುತವಾಗಿ ನಟಿಸಿದ್ದಾರೆ ಎಂದು ಶಹಬ್ಬಾಸ್‍ಗಿರಿ ನೀಡಿದ್ದಾರೆ ನಿರ್ದೇಶಕ ರಘು ಶಿವಮೊಗ್ಗ.

  ಚೂರಿಕಟ್ಟೆಯನ್ನು ಈ ಶುಕ್ರವಾರದಿಂದ ಥಿಯೇಟರುಗಳಲ್ಲಿ ನೋಡಬಹುದು.

 • ನಿಗೂಢ ರಹಸ್ಯ, ವಿಚಿತ್ರ ತಿರುವುಗಳ ಚೂರಿಕಟ್ಟೆ

  choorikatte is about timber mafia

  ಚೂರಿಕಟ್ಟೆ... ಈ ವಾರ ತೆರೆಗೆ ಬರುತ್ತಿರುವ ಚಿತ್ರ ಹೊಸ ನಿರ್ದೇಶಕರ ಹೊಸ ಪ್ರಯತ್ನ. ನಿರ್ದೇಶಕ ರಘು ಶಿವಮೊಗ್ಗ ತಮ್ಮ ಮಲೆನಾಡಿನ ಅನುಭವವನ್ನು ಕಣ್ಣಾರೆ ಕಂಡ ಘಟನೆಗಳನ್ನೇ ಚಿತ್ರವನ್ನಾಗಿಸಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ಪ್ರೇರಣಾ ನಾಯಕ, ನಾಯಕಿ.

  ಅಂದಂಗೆ, ಚೂರಿಕಟ್ಟೆ ಕಾಲ್ಪನಿಕ ಸ್ಥಳವೇನೂ ಅಲ್ಲ. ಜೋಗ್‍ಫಾಲ್ಸ್ ಪಕ್ಕದಲ್ಲೇ ಇರೋ ಗ್ರಾಮದ ಹೆಸರು. ಅಲ್ಲಿನ ಕಾಡುಗಳಲ್ಲಿ ಶ್ರೀಗಂಧದ ಕಳ್ಳಸಾಗಣೆ ಲಾಗಾಯ್ತಿನಿಂದಲೂ ನಡೆಯುತ್ತಿತ್ತು. ಚಿತ್ರದಲ್ಲಿ ಆ ಮಾಫಿಯಾದ ಕಥೆಯನ್ನೇ ರೋಚಕವಾಗಿ ಹೇಳಲಾಗಿದೆ.

  ಕ್ಷಣ ಕ್ಷಣಕ್ಕೂ ರೋಮಾಂಚನಗೊಳಿಸುವ ಅಂಶಗಳು, ದೃಶ್ಯಗಳು ಚಿತ್ರದಲ್ಲಿವೆ. ನಿಗೂಢತೆಗಳಿವೆ. ಪ್ರೇಮಕತೆಯೂ ಇದೆ. ಚಿತ್ರಮಂದಿರಕ್ಕೆ ಹೊಕ್ಕರೆ, ಹೊರಬರುವವರೆಗೆ ನೀವು ಚೂರಿಕಟ್ಟೆಯ ಟಿಂಬರ್ ಮಾಫಿಯಾ, ನಿಗೂಢತೆಗಳ ಒಳಗೆ ಮುಳುಗಿ ಹೋಗುತ್ತೀರಿ ಎಂಬ ಭರವಸೆ ನಿರ್ದೇಶಕರದ್ದು.