` Yash's KGF - chitraloka.com | Kannada Movie News, Reviews | Image

Yash's KGF

  • 'Adheera' From KGF Chapter2 Will Be Unveiled On July 29th

    adheera from kgf 2 will be unveiled on july 29th

    The makers of Much awaited Yash's KGF Chapter 2, made an important announcement. The makers of the film have released the poster to unveil the character called Adheera.

    Bollywood Actor, Sanjay Dutt is said to be playing important role in Yash's Movie thus raising speculations if Sanjay Dutt is Adheera In KGF Chapter2.

    Well, all we got to do is, wait and watch till July 29th who really the Mighty 'Adheera is !

  • 2021ಕ್ಕೆ ಇಲ್ವೇ ಇಲ್ಲ.. 2022ಕ್ಕೆ ಮಿಸ್ಸೇ ಇಲ್ಲ.. ಕೆಜಿಎಫ್ ಚಾಪ್ಟರ್ 2

    2021ಕ್ಕೆ ಇಲ್ವೇ ಇಲ್ಲ.. 2022ಕ್ಕೆ ಮಿಸ್ಸೇ ಇಲ್ಲ.. ಕೆಜಿಎಫ್ ಚಾಪ್ಟರ್ 2

    ಕೊರೊನಾ ಬರದೇ ಹೋಗಿದ್ದರೆ.. ಲಾಕ್ ಡೌನ್, ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ.. ಇವೆಲ್ಲ ಇಲ್ಲದೇ ಇದ್ದಿದ್ದರೆ.. ಇಷ್ಟು ಹೊತ್ತಿಗೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಡೆಬೇಕಿತ್ತು ಕೆಜಿಎಫ್ ಚಾಪ್ಟರ್ 2. 2021ರ ಜುಲೈ 16ರಂದು ರಿಲೀಸ್ ಆಗಬೇಕಿದ್ದ ಚಿತ್ರವಿದು. ಕೊರೊನಾ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಅದೂ 2022ಕ್ಕೆ.

    2022, ಏಪ್ರಿಲ್ 14. ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್. ಯಶ್, ಸಂಜಯ್ ದತ್, ಪ್ರಕಾಶ್ ರೈ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ.. ನಟಿಸಿರುವ ಚಿತ್ರಕ್ಕೆ ಕನಸು ಮತ್ತು ಕಸುವು ತಂಬಿರುವುದು ನಿರ್ದೇಶಕ ಪ್ರಶಾಂತ್ ನೀಲ್. ಹೊಂಬಾಳೆ ಫಿಲಮ್ಸ್‍ನ ಭಾರೀ ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2. 2022ರವರೆಗೆ ಕಾಯದೆ ವಿಧಿಯಿಲ್ಲ.

  • KGF - Chapter 2 To resume shooting from August 16

    kgf2 image

    The post-production of 'KGF - Chapter 2' is in full progress. Meanwhile, the team has decided to start the last schedule of the film from the 16th of August in Bangalore.

    Earlier, the team had planned to shoot the last schedule in Bellary. Now due to a high risk because of Corona Pandemic, the team has decided to shoot the remaining portions of the film, in specially erected sets inKanteerava Studio and Minerva Mills in Bangalore.

    you_tube_chitraloka1.gif

    The team will be shooting for 15 days at a stretch followed by a small break. After that the team is planning to shoot the remaining portions in another 10 days. Totally, the film is likely to be completed by September end.

    'KGF 2' stars Yash, Srinidhi Shetty, Sanjay Dutt, Raveena Tandon and others in prominent roles. The film is produced by Vijayakumar Kiragandur under Hombale Films and Prashanth Neel has written and directed the film.

  • KGF - CHAPTER 2ಗೆ ಅಭಿಮಾನಿಗಳು ಕ್ಲೈಮಾಕ್ಸ್ ಕೊಟ್ಟಾಯ್ತು..!

    fans write kgf chapter 2 climax during lockdown

    KGF - CHAPTER 2, 2020ರ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಪ್ರಶಾಂತ್ ನೀಲ್ ಸಿನಿಮಾ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ, ಅಷ್ಟೇ ಅಲ್ಲ, ಕ್ಲೈಮಾಕ್ಸ್ನ್ನೂ ಅವರೇ ಬರೆದುಬಿಟ್ಟಿದ್ದಾರೆ. ಅದಕ್ಕೆಲ್ಲ ಕಾರಣವಾಗಿರೋದು ಚಾಪ್ಟರ್ 1ನಲ್ಲಿ ಬರೋ ಒಂದು ಡೈಲಾಗ್.

    ಚಾಪ್ಟರ್ 1ನಲ್ಲಿ ಯಶ್ ಅಲಿಯಾಸ್ ರಾಕಿ ಭಾಯ್ಗೆ ಆತನ ತಾಯಿ ಒಂದು ಮಾತು ಹೇಳ್ತಾಳೆ. ..ನನಗೊಂದು ಮಾತು ಕೊಡು. ಹೇಗೆ ಬದುಕುತ್ತೀಯೋ ಗೊತ್ತಿಲ್ಲ. ಆದರೆ ಸಾಯುವಾಗ ಅತಿ ಪ್ರಬಲನಾಗಿ, ದೊಡ್ಡ ಶ್ರೀಮಂತನಾಗಿ ಸಾಯಬೇಕು ಅನ್ನೋದು ಡೈಲಾಗ್. ಆ ಮಾತಿಗೆ ತಕ್ಕಂತೆಯೇ ಕ್ಲೈಮಾಕ್ಸ್ ಇರುತ್ತೆ ಅನ್ನೋದು ಅಭಿಮಾನಿಗಳ ಚಿತ್ರಕಥೆ.

    ಅಭಿಮಾನಿಗಳ ನಿರೀಕ್ಷೆಯನ್ನು ಗೌರಿಶಂಕರದಷ್ಟು ಎತ್ತರಕ್ಕೆ ಏರಿಸಿರೋ ಪ್ರಶಾಂತ್ ನೀಲ್, ಅಭಿಮಾನಿಗಳ ಆ ಎಲ್ಲ ನಿರೀಕ್ಷೆಯನ್ನೂ ಮೀರಿಸುವ ಕ್ಲೈಮಾಕ್ಸ್ ಕೊಟ್ಟಿರ್ತಾರೆ ಅನ್ನೋದ್ರಲ್ಲಿ ನೋ ಡೌಟ್. ಅಭಿಮಾನಿಗಳ ಪ್ರಕಾರ KGF - CHAPTER 2ನಲ್ಲಿ ದುರಂತ ಅಂತ್ಯ ಇರುತ್ತೆ. ಪ್ರಶಾಂತ್ ನೀಲ್ ಅದೇನ್ ಪ್ಲಾನ್ ಮಾಡಿದ್ದಾರೋ..

    ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂಸ್, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್.. ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾದ ನಿಜವಾದ ಕ್ಲೈಮಾಕ್ಸ್ ಗೊತ್ತಾಗೋದೇನಿದ್ದರೂ, ಅಕ್ಟೋಬರ್ನಲ್ಲೇ..

  • Raajakumara Team New Film Together 

    raajakumar team image

    Puneeth Rajkumar, director Santhosh Anandram and production company Hombale Films who created history with Raajakumara in 2017 are coming together for a new film in 2018. The successful combination have concluded talks about the new film which is set to start in the new year. Other details are not fixed but the combination alone is enough to create great hopes about the new film. More details about the film are expected to be announced in the coming days.

    This will be Hombale Films' third film with Puneeth and second one for Santhosh Anandram. Hombale are currently producing Yash's KGF. Commencement date for the new film is not yet finalised.

  • ಅತೀ ಹೆಚ್ಚು ಗಳಿಸಿದ ಇಂಡಿಯನ್ ಚಿತ್ರ : ಕೆಜಿಎಫ್`ಗೆ ಈಗ ಎಷ್ಟನೇ ಸ್ಥಾನ ಗೊತ್ತಾ..?

    ಅತೀ ಹೆಚ್ಚು ಗಳಿಸಿದ ಇಂಡಿಯನ್ ಚಿತ್ರ : ಕೆಜಿಎಫ್`ಗೆ ಈಗ ಎಷ್ಟನೇ ಸ್ಥಾನ ಗೊತ್ತಾ..?

    ಕೆಜಿಎಫ್ ಚಾಪ್ಟರ್ 2 ದೇಶದಾದ್ಯಂತ ಭರ್ಜರಿ ಸದ್ದು ಮಾಡ್ತಿದೆ. ರಿಲೀಸ್ ಆದ ಪ್ರತಿ ಭಾಷೆ, ಪ್ರತೀ ರಾಜ್ಯ, ಪ್ರತೀ ದೇಶದಲ್ಲೂ ಸಂಚಲನ ಮೂಡಿಸಿದೆ. ನಾಲ್ಕೇ ದಿನಕ್ಕೆ 500 ಕೋಟಿ ಗಳಿಕೆ ದಾಟಿರುವ ಕೆಜಿಎಫ್ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೊಂದು ದಾಖಲೆ. ಅಂದಹಾಗೆ ಇವತ್ತಿಗಿನ್ನೂ 6ನೇ ದಿನ. 5ನೇ ದಿನದ ಲೆಕ್ಕಾಚಾರ ಬರುವುದಕ್ಕೂ ಮೊದಲಿನ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಇದು ಭಾರತೀಯ ಚಿತ್ರಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ. ಅವುಗಳಲ್ಲಿ ಕೆಜಿಎಫ್‍ಗೆ ಈಗ ಎಷ್ಟನೆ ಸ್ಥಾನ ಗೊತ್ತಿದೆಯಾ? 14ನೇ ಸ್ಥಾನ. ಅಂದಹಾಗೆ ಇದಿನ್ನೂ 6ನೇ ದಿನ. ಕೆಜಿಎಫ್ ರನ್ನಿಂಗ್ ಮುಗಿಯೂ ಹೊತ್ತಿಗೆ ಎಷ್ಟನೇ ಸ್ಥಾನ ಳಿಸಬಹುದು?

    1. ದಂಗಲ್ : 2024 ಕೋಟಿ

    2. ಬಾಹುಬಲಿ 2 : 1810 ಕೋಟಿ

    3. ಆರ್.ಆರ್.ಆರ್. : 1071 ಕೋಟಿ (ಇನ್ನೂ ಯಶಸ್ವಿ ಪ್ರದರ್ಶನ)

    4. ಭಜರಂಗಿ ಭಾಯಿಜಾನ್ : 969 ಕೋಟಿ

    5. ಸೀಕ್ರೆಟ್ ಸೂಪರ್ ಸ್ಟಾರ್ : 966 ಕೋಟಿ

    6. ಪಿಕೆ : 854 ಕೋಟಿ

    7. 2.0 : 655 ಕೋಟಿ

    8. ಬಾಹುಬಲಿ 1 : 650 ಕೋಟಿ

    9. ಸುಲ್ತಾನ್ : 623 ಕೋಟಿ

    10. ಸಂಜು : 586 ಕೋಟಿ

    11. ಪದ್ಮಾವತ್ : 585 ಕೋಟಿ

    12. ಟೈಗರ್ ಝಿಂದಾ ಹೈ : 560 ಕೋಟಿ

    13. ಧೂಮ್ 3 : 556 ಕೋಟಿ

    14. ಕೆಜಿಎಫ್ ಚಾಪ್ಟರ್ 2 : 552 ಕೋಟಿ (ಇನ್ನೂ ಅದ್ಭುತ ಪ್ರದರ್ಶನ)

    15. ವಾರ್ : 475 ಕೋಟಿ

    16. 3 ಈಡಿಯಟ್ಸ್ : 460 ಕೋಟಿ

    ಇನ್ನು ನೀವು ನೀವೇ ಲೆಕ್ಕ ಹಾಕಿ. ಕೆಜಿಎಫ್ ಚಾಪ್ಟರ್ 2 ಥಿಯೇಟರ್ಸ್ ಶೋ ಮುಗಿಯುವ ಹೊತ್ತಿಗೆ ಈ ಲಿಸ್ಟಿನಲ್ಲಿ ಯಾವ ಸ್ಥಾನದಲ್ಲಿರಲಿದೆ? ಯಾರು ಯಾರನ್ನೆಲ್ಲ ಹಿಂದಿಕ್ಕಲಿದೆ ಅನ್ನೋದನ್ನ ಊಹಿಸಿ.

  • ಅಂದು ಕಣ್ಣೀರು ಹಾಕಿದ್ದರಂತೆ ಯಶ್.. ತಮಿಳು ನಟ ಜೈಆಕಾಶ್

    yash, jambadha hudugi priyahassan, jai akash image

    ನಿಮಗೆಲ್ಲರಿಗೂ ಈಗ ಕೆಜಿಎಫ್ ಸಿನಿಮಾದ ಯಶ್ ಗೊತ್ತು. ಆದರೆ ಅವರ ಮೊದಲ ಸ್ಥಿತಿ ಬೇರೆಯದ್ದೇ ಆಗಿತ್ತು' ಎಂದಿರುವ ಜೈ ಆಕಾಶ್ ಅವರು, ಯಶ್ ಮೊದಲಿಗೆ ಇಂಟ್ರಡ್ಯೂಸ್ ಆಗಿದ್ದು, ನಾನು ಹೀರೋ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್ ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ಆತನ ಮುಖ ನನ್ನ ಮುಖವನ್ನು ಹೋಲುತ್ತಿತ್ತು. ಅದಕ್ಕಾಗಿ ತಮ್ಮನ ಪಾತ್ರ ನೀಡಿದ್ದೆ.. ಅಂದು ಯಶ್, ಸದ್ಯಕ್ಕೆ ನನಗೆ ಸೀರಿಯಲ್ ಎಲ್ಲಾ ಬೇಡ. ಸಿನಿಮಾಗಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದಿದ್ದ. ಆಗ ನಾನೇ ಅವನನ್ನು ಕರೆದು  ಸಮಾಧಾನ ಪಡಿಸಿದ್ದೆ, ಊಟವನ್ನೂ ಮಾಡಿಸಿದ್ದೆ. ಜೊತೆಗೆ ನನ್ನ ಸಿನಿಮಾ ಜಂಬದ ಹುಡುಗಿದಲ್ಲಿ  ನಟಿಸುವ ಅವಕಾಶವನ್ನೂ ಕೊಟ್ಟೆ.. 'ಜಂಬದ ಹುಡುಗಿ ಸಿನಿಮಾ ಆರಂಭವಾದ ಬಳಿಕ ಅವನನ್ನು ನಾನೇ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದೆ. ಆವತ್ತು ಆ ಸಿನಿಮಾ ಹಿಟ್ ಆಗಿತ್ತು.  ಅದಾದ ಬಳಿಕ ನಾನು ತೆಲುಗು, ತಮಿಳು ಕಡೆ ಗಮನ ಹರಿಸಿದೆ. ಯಶ್ ಕನ್ನಡದಲ್ಲಿ ನಾಯಕನಾಗಿ ಗುರುತಿಸಿಕೊಂಡ. ಇದೀಗ ಯಶ್ ಸ್ಟಾರ್ ಆಗಿ ಬೆಳೆದಿದ್ದಾನೆ..

    ಹೀಗೆ ಹೇಳುತ್ತಾ ಹೋಗುತ್ತಾರೆ ತಮಿಳು ನಟ ಜೈಪ್ರಕಾಶ್. ಜೈಪ್ರಕಾಶ್ ಜಂಭದ ಹುಡುಗಿ ಚಿತ್ರದ ಹೀರೋ. ಆ ಚಿತ್ರದಲ್ಲಿ ರಾಕೇಶ್ ಪಾತ್ರದಲ್ಲಿ ನಟಿಸಿದ್ದರು. ಯಶ್, ಲಕ್ಷ್ಮೀಕಾಂತ್ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಹಾಗೆ ನೋಡಿದರೆ ಆ ಚಿತ್ರದ ನಾಯಕಿ, ನಿರ್ದೇಶಕಿ ಪ್ರಿಯಾ ಹಾಸನ್. ಇನ್ನು ಜೈಪ್ರಕಾಶ್ ತಮಿಳಿನಲ್ಲಿ ನಟನಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು.

    ಲೈಫೇ ಹಾಗೆ.. ಇವತ್ತು ಯಶ್‍ಎಲ್ಲಿಯೋ ಇದ್ದಾರೆ. ಜೈಪ್ರಕಾಶ್ ಎಲ್ಲಿದ್ದಾರೆ ಅನ್ನೋದು ಗೊತ್ತಿದೆ.

  • ಕೆಜಿಎಫ್ : ರಿಲೀಸ್`ಗೂ ಮುನ್ನ ಸೃಷ್ಟಿಯಾದ ದಾಖಲೆಗಳಿವು..

    ಕೆಜಿಎಫ್ : ರಿಲೀಸ್`ಗೂ ಮುನ್ನ ಸೃಷ್ಟಿಯಾದ ದಾಖಲೆಗಳಿವು..

    ಬರ್ತಿರೋದೇ ದಾಖಲೆ ಬರೆಯೋಕೆ.. ಎಂದು ಹೇಳಿಕೊಂಡೇ ಬರ್ತಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಿಲೀಸ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ದಾಖಲೆಗಳು, ಅಭಿಮಾನದ ಹರ್ಷೋದ್ಘಾರಗಳು ಸೃಷ್ಟಿಯಾಗುತ್ತಲೇ ಇವೆ. ರಾಕಿಭಾಯ್ ಹವಾ ಹಾಗಿದೆ. ಪ್ರಶಾಂತ್ ನೀಲ್ ಮೇಲೆ ಪ್ರೇಕ್ಷಕ ಇಟ್ಟಿರೋ ನಂಬಿಕೆ, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೃಷ್ಟಿಸಿರೋ ಸಂಚಲನ ಅಂತಾದ್ದು. ವಿಜಯ್ ಕಿರಗಂದೂರು ಪ್ರಚಾರದ ಯಾವ ಅವಕಾಶವನ್ನೂ ಬಿಟ್ಟಿಲ್ಲ. ದಾಖಲೆಗಳು ಸೃಷ್ಟಿಯಾಗಲೇಬೇಕಲ್ಲವೇ.. ಸಾವಿರ ಕೋಟಿ ಕಲೆಕ್ಷನ್ ಮಿಸ್ಸೇ ಇಲ್ಲ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು.

    ಕೆಜಿಎಫ್ ಚಾಪ್ಟರ್ 2 ಹವಾ ಎಫೆಕ್ಟ್ ಹೇಗಿದೆಯೆಂದರೆ ತಮಿಳಿನ ಬೀಸ್ಟ್ ಚಿತ್ರದ ಕರ್ನಾಟಕ ರೈಟ್ಸ್ ಕೇವಲ 7 ಕೋಟಿಗೆ ಸೇಲ್ ಆಗಿದೆ ಎನ್ನೋ ಮಾಹಿತಿ ಬಂದಿದೆ. ಅದು ವಿಜಯ್ ಚಿತ್ರಗಳ ರೆಗ್ಯುಲರ್ ಮಾರ್ಕೆಟ್ಟಿಗಿಂತ 10 ಕೋಟಿಯಷ್ಟು ಕಡಿಮೆ.

    ಹಿಂದಿಯಲ್ಲಿ ರಿಲೀಸ್ ಆಗಬೇಕಿದ್ದ ಜೆರ್ಸಿ ಒಂದು ವಾರ ಮುಂದಕ್ಕೆ ಹೋಗಿದೆ. ಕೆಜಿಎಫ್ ಹವಾದಲ್ಲಿ ಹಿಂದಿ ರಾಜ್ಯಗಳಲ್ಲೇ ಜೆರ್ಸಿಗೆ ಸರಿಯಾಗಿ ಥಿಯೇಟರುಗಳು ಸಿಕ್ಕಿಲ್ಲ. ಸಿಕ್ಕ ಥಿಯೇಟರುಗಳ ಸಂಖ್ಯೆ ದೊಡ್ಡದೇ ಇದ್ದರೂ ಕೆಜಿಎಫ್ ತೂಫಾನ್‍ಗೆ ಬೆಚ್ಚಿ ಬಿದ್ದು ಹಿಂದೆ ಸರಿದಿದೆ ಜೆರ್ಸಿ.

    ಪ್ರಪಂಚದ ಪ್ರಸಿದ್ಧ ಯೂಟ್ಯೂಬರ್ಸ್ ಜೊತೆ ಯಶ್ ಮಾತುಕತೆ ನಡೆಸಿರುವುದು ಇನ್ನೊಂದು ವಿಶೇಷ. ಇಂಥಾದ್ದೊಂದು ಪ್ರಯತ್ನ ಮಾಡಿರುವ ಕನ್ನಡದ ಮೊದಲ ನಟ ಯಶ್.

    ರಾಜ್ಯದ 550 ಚಿತ್ರಮಂದಿರಗಳಲ್ಲಿ ಯಶ್ ಕಟೌಟ್ ಹಾಕಲಾಗುತ್ತಿದೆ.

    ತ್ರಿವೇಣಿ ಥಿಯೇಟರ್ ಬಳಿ 72 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ.

    ಮಾಲೂರಿನಲ್ಲಿ 23,400 ಪುಸ್ತಕಗಳಿಂದ 135 ಅಡಿ ಅಗಲ 190 ಅಡಿ ಉದ್ದದ ಪೋಸ್ಟರ್ ಮಾಡಲಾಗಿದೆ. ಪುಸ್ತಕಗಳಿಂದ ಚಿತ್ರನಟನೊಬ್ಬನ ಪೋಸ್ಟರ್ ಇದೇ ಮೊದಲು.

    ಮಹಾರಾಷ್ಟ್ರದ ಪುಣೆಯಲ್ಲಿ ಕೆಜಿಎಫ್ ಹೆಸರಿನ ರೆಸ್ಟೋರೆಂಟ್ ಒಂದು ಓಪನ್ ಆಗಿದೆ.

    ಅಮೆರಿಕದಲ್ಲಿ ಬಿಲ್ ಬೋರ್ಡ್‍ಗಳ ಮೂಲಕ ಕೆಜಿಎಫ್ ಪ್ರಚಾರ ನಡೆಯುತ್ತಿದೆ. ಎಲ್‍ಇಡಿ ಮೊಬೈಲ್ ಟ್ರಕ್‍ಗಳ ಮೂಲಕ ಜನರನ್ನು ಸೆಳೆಯುತ್ತಿದೆ ಕೆಜಿಎಫ್ ಟೀಂ & ಫ್ಯಾನ್ಸ್ ಟೀಂ.

    ವಿಭಿನ್ನತೆಯೇ ಮೈವೆತ್ತಂತೆ ನಡೆಯುತ್ತಿರುವ ಪ್ರಚಾರದಲ್ಲಿ ಕೆಜಿಎಫ್ ಟೀಂಗಿಂತ ಒಂದು ಹೆಜ್ಜೆ ಮುಂದಿರೋದು ಯಶ್ ಫ್ಯಾನ್ಸ್.

  • ಕೆಜಿಎಫ್ 50

    kgf completes 50 days

    ಜಗತ್ತಿನೆಲ್ಲೆಡೆ ಅಬ್ಬರಿಸಿ ಬೊಬ್ಬರಿದ ಕೆಜಿಎಫ್, 50 ದಿನ ಪೂರೈಸಿದೆ. ಅರ್ಧ ಶತಕ ಬಾರಿಸಿದ ನಂತರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ, ಸ್ಯಾಂಡಲ್‍ವುಡ್‍ನ ಹೊಸ ರೆಕಾರ್ಡ್. ಹೀಗಾಗಿಯೇ ಚಿತ್ರತಂಡ ಈ 50 ಸಕ್ಸಸ್‍ನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿದೆ.

    `ಕೆಜಿಎಫ್ ನನಗೆ ಬರೀ ಚಿತ್ರವಾಗಿರಲಿಲ್ಲ. ಇಂಥಾದ್ದೊಂದು ಅದ್ಧೂರಿ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಸಮರ್ಪಿಸಬೇಕೆಂಬುದು ನನ್ನ ಕನಸಾಗಿತ್ತು' ಎಂದು ಭಾವುಕವಾಗಿಯೇ ಸಂಭ್ರಮ ಹಂಚಿಕೊಂಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

  • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

    kgf effect, srinidhi shetty in demand

    ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

    ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

    ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

    ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

  • ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2, 50 ದಿನ ಪೂರೈಸಿದೆ. ಇಂಡಿಯಾದಲ್ಲಿ 390ಕ್ಕೂ ಹೆಚ್ಚು ಕೇಂದ್ರಗಳಲ್ಲಿ, ವಿದೇಶಗಳಲ್ಲಿ 10 ಕೇಂದ್ರಗಳಲ್ಲಿ 50 ದಿನ ಪೂರೈಸಿರುವುದು ಒಂದು ದಾಖಲೆಯೇ. ವಿಶ್ವದಾಖಲೆಯೇ.

    ಈ ಹಾದಿಯಲ್ಲಿ ಕೆಜಿಎಫ್ ಎದುರು ನಿಂತ ಚಿತ್ರಗಳು ಸಣ್ಣ ಚಿತ್ರಗಳೇನೂ ಅಲ್ಲ. ಪ್ರಾದೇಶಿಕ ಚಿತ್ರಗಳ ಜೊತೆಗೆ ಬಾಲಿವುಡ್ ಚಿತ್ರಗಳೂ ಬಂದವು. ಹಾಲಿವುಡ್ ಚಿತ್ರಗಳೂ ಬಂದವು. ಕೆಲವು ಗೆದ್ದವು. ಇನ್ನೂ ಕೆಲವು ಬಿದ್ದವು. ಅವೆಲ್ಲವನ್ನೂ ಎದುರಿಸಿಯೇ ಗೆದ್ದ ಚಿತ್ರ ಕೆಜಿಎಫ್ ಚಾಪ್ಟರ್ 2.

    ಅಂದಹಾಗೆ ಇವತ್ತಿನಿಂದ ಕೆಜಿಎಫ್ ಚಾಪ್ಟರ್ 2, ಒಟಿಟಿಯಲ್ಲಿ ನೇರವಾಗಿಯೇ ಸಿಗಲಿದೆ. ಅಂದರೆ ಇದುವರೆಗೆ ಇದ್ದ ದುಡ್ಡು ಕೊಟ್ಟು ವೀಕ್ಷಿಸುವ ಅಗತ್ಯವಿಲ್ಲ. ಅಮೇಜಾನ್ ಪ್ರೈಂ ಇದ್ದವರು ಉಚಿತವಾಗಿಯೇ ನೋಡಬಹುದು. ಇದುವರೆಗೆ ಸಬ್‍ಸ್ಕ್ರಿಪ್ಷನ್ ಇದ್ದರೂ, 199 ರೂ. ಕೊಟ್ಟು ನೋಡಬೇಕಿತ್ತು.

    ಅಂದಹಾಗೆ ಇದುವರೆಗೆ ಈ ಚಿತ್ರ ಥಿಯೇಟರುಗಳಲ್ಲಿ 1240 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದೂ ದಾಖಲೆಯೇ..

  • ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಲೇಟು. ಏನ್ ಕಾರಣ ಗೊತ್ತಾ..?

    dela in kgf chapter 2 shooting

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಚಾಪ್ಟರ್ 2 ಭಯಂಕರ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಾಪ್ಟರ್ 2 ಬಗ್ಗೆ ನಿರೀಕ್ಷೆಗಳೂ ಮೌಂಟ್ ಎವರೆಸ್ಟ್ ಎತ್ತರದಲ್ಲಿವೆ. ಇನ್ನು ಚಿತ್ರದ ಕೆಲವು ಪಾತ್ರಗಳಿಗಾಗಿ ಭರ್ಜರಿಯಾಗಿಯೇ ಅಡಿಷನ್ ನಡೆಸಿದೆ ಕೆಜಿಎಫ್ ಟೀಂ. ಆದರೆ, ಶೂಟಿಂಗ್ ಮಾತ್ರ ಇನ್ನೂ ಶುರುವಾಗಿಲ್ಲ. 

    ಕೆಜಿಎಫ್ ಶೂಟಿಂಗ್ ವಿಳಂಬಕ್ಕೆ ಏನು ಕಾರಣ ಎಂದು ಹುಡುಕುತ್ತಾ ಹೋದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೆಟ್ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವೇ ಶೂಟಿಂಗ್ ವಿಳಂಬಕ್ಕೂ ಕಾರಣ ಎನ್ನಲಾಗುತ್ತಿದೆ. 

    ನಿರ್ದೇಶಕ ಪ್ರಶಾಂತ್ ನೀಲ್, ವಿಭಿನ್ನ ಕಲ್ಪನೆಯ ಸೆಟ್ ಹಾಕಿಸುತ್ತಿದ್ದು, ಅದು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಕೇಳುತ್ತಿದೆಯಂತೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ, ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್ ಎಂದಿದ್ದಾರೆ. ಯಶ್ ಕೂಡಾ ಚೆನ್ನಾಗಿ ಬರುವವರೆಗೆ ಕಾಯೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ವಿಳಂಬವಾಗುತ್ತಿದೆ.

  • ಕೆಜಿಎಫ್ ಚಿತ್ರದಿಂದ ಅನಂತ್ ನಾಗ್ ಹೊರಕ್ಕೆ..?

    ananth nag exists from yash starrer kgf

    ಕೆಜಿಎಫ್ ಕಥೆಯ ಸೂತ್ರಧಾರ ಆನಂದ್ ಇಂಗಳಗಿ. ಪತ್ರಕರ್ತ. ಇನ್ನೊಬ್ಬ ಟಿವಿ ಚಾನೆಲ್ ಪತ್ರಕರ್ತೆ ದೀಪಾ ಹೆಗ್ಡೆ ಅಲಿಯಾಸ್ ಮಾಳವಿಕಾ ಅವಿನಾಶ್ ಎದುರು ರಾಕಿಭಾಯ್ ಕಥೆ ಹೇಳ್ತಾರೆ. ಅನಂತ್ ನಾಗ್ ವಾಯ್ಸ್ ಕೆಜಿಎಫ್ ಚಾಪ್ಟರ್ 1ನ ಹೈಲೈಟ್ಸ್‍ಗಳಲ್ಲಿ ಒಂದು. ಇಂತಹ ಅನಂತ್ ನಾಗ್ ಚಾಪ್ಟರ್ 2ನಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿಯಿದೆ. ಇದು ನಿಜಾನಾ..? ಹೊಂಬಾಳೆ ಫಿಲಂಸ್, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸೇರಿದಂತೆ ಯಾರೊಬ್ಬರೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಅತ್ತ ಅನಂತ್ ನಾಗ್ ಅವರ ಕಡೆಯಿಂದಲೂ ಸ್ಪಷ್ಟನೆ ಬಂದಿಲ್ಲ.

    ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಸೆನ್ಸೇಷನ್ ಸೃಷ್ಟಿಸಿರುವುದು ಸತ್ಯ. ಸುದ್ದಿ ಸತ್ಯವೇ ಆಗಿದ್ದರೆ, ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2ಗೆ ಇದು ಶಾಕಿಂಗ್.

  • ಕೆಜಿಎಫ್ ಡೈಲಾಗ್‍ದೇ ಹವಾ..

    kgf dialogue is hit

    ರಾಕಿಂಗ್ ಸ್ಟಾರ್ ಯಶ್ ಅಂದ್ರೆ, ಡೈಲಾಗ್‍ಗಳಿಗೆ ಬರವೇ ಇರೋದಿಲ್ಲ. ಇನ್ನು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಈ ಇಬ್ಬರ ಕಾಂಬಿನೇಷನ್ನಿನ ಕೆಜಿಎಫ್, ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ, ಯಶ್‍ರ ಆ ಡೈಲಾಗ್ ಹವಾ ಸೃಷ್ಟಿಸಿದೆ

    ರಕ್ತದ ವಾಸನೆ ಕಂಡ್ರೆ ಬೇಜಾನ್ ಮೀನುಗಳು ಒಟ್ಟಿಗೇ ಬಂದ್ ಬಿಡ್ತವೆ. ಆದರೆ, ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನು ಬೇಟೆಯಾಡೋ ತಿಮಿಂಗಿಲದ್ದು ಅಂತಾ.. ಇದು ಯಶ್ ಡೈಲಾಗ್.

    ಇದಕ್ಕೆ ಮುಂಚೆ ಇದೇ ಚಿತ್ರದ ಇನ್ನೊಂದು ಡೈಲಾಗ್‍ನ್ನು ಸ್ವತಃ ಯಶ್ ಬಹಿರಂಗಪಡಿಸಿದ್ರು. ಇನ್ಮೇಲಿಂದ ಅವರಪ್ಪ ನನ್ ಮಾವ, ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗ್ ನೋಡ್ಕಳ್ರೋ, ಚೆನ್ನಾಗ್ ನೋಡ್ಕಳಿ ಅನ್ನೋ ಡೈಲಾಗ್ ಬಹಿರಂಗವಾಗಿತ್ತು.

    ಈಗ 2ನೇ ಡೈಲಾಗ್ ಹೊರಬಿದ್ದಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರು. 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಚಿತ್ರದಲ್ಲಿರೋದು 80ರ ದಶಕದ ಕಥೆ. ಅಷ್ಟನ್ನು ಬಿಟ್ಟರೆ, ಬೇರ್ಯಾವುದೇ ಸೀಕ್ರೆಟ್ ಬಹಿರಂಗವಾಗಿಲ್ಲ.

  • ಕೆಜಿಎಫ್ ನಾಯಕಿ ಹೇಳಿದ ಸೀಕ್ರೆಟ್

    kgf heroine srinidhi

    ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ. 

    ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.

    ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.

    ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.

     

  • ಕೆಜಿಎಫ್ ಬೈಕ್ ಹಿಂದಿನ ರೋಚಕ ಕಥೆ

    story behind kgf's bike

    ಕೆಜಿಎಫ್, ಚಿತ್ರೀಕರಣ ಹಂತದಲ್ಲಿರುವಾಗಲೇ ಚಿತ್ರದ ಕುರಿತ ಒಂದೊಂದೇ ರೋಚಕ ಸಂಗತಿಗಳು ಕುತೂಹಲ ಹುಟ್ಟಿಸುತ್ತಿವೆ. ಅಂಥದ್ದೇ ಕುತೂಹಲ ಹುಟ್ಟಿಸಿದ್ದುದು ಚಿತ್ರದ ಪೋಸ್ಟರ್‍ನಲ್ಲಿ ಬಳಕೆಯಾಗಿದ್ದ ಬೈಕ್. ಏಕೆಂದರೆ, ವಾಸ್ತವದಲ್ಲಿ ಅಂಥಾದ್ದೊಂದು  ಮಾಡೆಲ್‍ನ ಬೈಕ್ ಇಲ್ಲ.

    ಹಾಗಾದರೆ, ಈ ಬೈಕ್ ಸಿದ್ಧ ಮಾಡಿದ್ದು ಯಾರು..? ಅದರ ಹಿಂದಿರೋದು ಸಿನಿಮಾದ ಕೊರಿಯೋಗ್ರಾಫರ್ ಭುವನ್ ಗೌಡ & ಅವರ ಟೀಂ. ಪ್ರಶಾಂತ್ ನೀಲ್ ಅವರಿಗೆ ಸಿನಿಮಾದಲ್ಲಿ ಹೀರೋಗೆ ಒಂದು ಡಿಫರೆಂಟಾದ ಬೈಕು ಬೇಕು ಎನಿಸಿತ್ತು. ಅದನ್ನು ಭುವನ್ ಗೌಡ ಅವರಿಗೆ ಹೇಳಿದರು. ಅಂಥಾದ್ದೊಂದು ಬೈಕ್ ಹುಡುಕಿಕೊಂಡು ಹೊರಟ ತಂಡ ರಾಯಲ್ ಎನ್‍ಫೀಲ್ಡ್‍ನ  ಟ್ರ್ಯಾಂಪ್ 500 ಸಿಸಿ ಬೈಕ್ ಖರೀದಿಸಿತು. ಅದನ್ನು ವಿದ್ಯಾಪೀಠ ಸರ್ಕಲ್ ಬಳಿ ಇರೋ ಬೇಗ್ ಅವರ ಗ್ಯಾರೇಜ್‍ಗೆ ಕೊಟ್ಟಿತು.

    ಅವರು ಕೇವಲ ಎಂಜಿನ್‍ನ್ನಷ್ಟೇ ಉಳಿಸಿಕೊಂಡು, ಮಿಕ್ಕಿದ್ದನ್ನೆಲ್ಲ ವಿಶೇಷವಾಗಿ ರೂಪಿಸಿಬಿಟ್ಟರು. ಜೊತೆಗೆ ನಿಂತವರು ಭುವನ್ ಗೌಡ, ಅವರ ಟೀಂನ ಆಕಾಶ್.

    ಈಗ ಕೆಜಿಎಫ್‍ನ ಈ ಬೈಕ್ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಬೈಕ್‍ಗಳ ಕ್ರೇಜ್ ಹೊಂದಿರುವವರಂತೂ ಈಗಾಗಲೇ ಅದೇ ರೀತಿಯ ಬೈಕ್ ಡಿಸೈನ್ ಮಾಡಿಸುತ್ತಿದ್ದಾರೆ. ಶೂಟಿಂಗ್ ಮುಗಿಯುವ ಮೊದಲೇ ಕೆಜಿಎಫ್ ಕ್ರೇಜ್ ಶುರುವಾಗಿದೆ.

  • ಕೆಜಿಎಫ್ ಮೆಚ್ಚಿಕೊಂಡ್ರು ಸುಮಲತಾ ಅಕ್ಕ

    sumalath proud and appreciated kgf

    ಕೆಜಿಎಫ್, ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಅನ್ನೋದು ಅಂಬರೀಷ್ ಕನಸಾಗಿತ್ತು. ಚಿತ್ರದ ಮೊದಲ ಟೀಸರ್ ಬಿಡುಗಡೆ ವೇಳೆ ಅಂಬಿ ಇದನ್ನು ಹೇಳಿದ್ದರು. ಚಿತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆನ್ನು ತಟ್ಟಿದ್ದ ಅಂಬರೀಷ್, ಚಿತ್ರ ಬಿಡುಗಡೆ ವೇಳೆ ಇರಲಿಲ್ಲ. ಇದೊಂದು ನೋವು ನನಗಿದೆ ಎಂದು ಹೇಳಿಕೊಂಡಿದ್ದ ಯಶ್‍ಗೆ ಈಗ ಸುಮಲತಾ ಅಂಬರೀಷ್ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ಶುದ್ಧ ಚಿನ್ನ ಎಂದಿದ್ದಾರೆ ಸುಮಲತಾ.

    ಸುಮಲತಾ ಅವರು ಚಿತ್ರ ನೋಡಿರುವುದೇ ನನ್ನ ಭಾಗ್ಯ ಎಂದಿರುವ ಯಶ್, ಅಕ್ಕನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಅಣ್ಣ ಇದ್ದಿದ್ದರೆ ಖಂಡಿತಾ ಚಿತ್ರ ನೋಡಿರುತ್ತಿದ್ದರು. ಈಗಲೂ ಅವರು ಮೇಲಿಂದಲೇ ಹರಸುತ್ತಿದ್ದಾರೆ ಎಂದಿದ್ದಾರೆ ಯಶ್.

  • ಕೆಜಿಎಫ್ ರಿಲೀಸ್ ಹೊತ್ತಲ್ಲಿ ಯಶ್‍ರನ್ನು ಕಾಡುತ್ತಿದೆ ಆ ನೋವು..

    yash remembers ambareesh before kgf release

    ಕೆಜಿಎಫ್ ಚಿತ್ರದ ಬಿಡುಗಡೆ, ದೇಶಾದ್ಯಂತ ಹಬ್ಬವಾಗಿರುವ ಹೊತ್ತಿನಲ್ಲೇ ಯಶ್ ಅವರನ್ನು ಇದೊಂದು ಕೊರಗು ಕಾಡುತ್ತಲೇ ಇದೆ. ಅಂಬರೀಷ್ ಸರ್ ಕೆಜಿಎಫ್ ನೋಡಬೇಕಿತ್ತು ಎನ್ನುವುದೇ ಆ ಕೊರಗು.

    ಕೆಜಿಎಫ್ ಚಿತ್ರದ ಒಂದು ಟ್ರೇಲರ್‍ನ್ನು ಸ್ವತಃ ಅಂಬರೀಷ್ ರಿಲೀಸ್ ಮಾಡಿದ್ದರು. ಕನ್ನಡ ಚಿತ್ರರಂಗ ಮುಗಿಲೆತ್ತರಕ್ಕೆ ಬೆಳೆಯಬೇಕು. ಕೆಜಿಎಫ್‍ನಿಂದ ಅದು ನನಸಾಗಲಿ ಎಂದು ಹಾರೈಸಿದ್ದರು. ಈಗ, ರಿಲೀಸ್ ವೇಳೆ ಅವರೇ ಇಲ್ಲ.

    ನನ್ನ ಬೆನ್ನ ಹಿಂದೆ ಅವರಿದ್ದರು. ನನ್ನ ಕೆಲಸಗಳನ್ನು ನೋಡಿ ಬೆನ್ನು ತಟ್ಟಿದ್ದರು. ಸಿನಿಮಾದ ಶೋ ರೀಲ್ ತೋರಿಸಿದಾಗ ಖುಷಿ ಪಟ್ಟಿದ್ರು. ಅವರು ಇದ್ದಿದ್ದರೆ ನಮಗೊಂದು ಶಕ್ತಿ ಇರುತ್ತಿತ್ತು. ಅವರು ಈ ಸಿನಿಮಾ ನೋಡಬೇಕಿತ್ತು ಎಂದು ಹೇಳಿಕೊಂಡಿದ್ದಾರೆ ಯಶ್.

  • ಕೆಜಿಎಫ್ ರಿಲೀಸ್‍ಗೂ ಮುನ್ನ ರಾಕಿಂಗ್ ಸ್ಟಾರ್ ತೀರ್ಥಯಾತ್ರೆ..

    kgf team visits temple before movie release

    ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಸುಬ್ರಹ್ಮಣ್ಯ.. ಹೀಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿದ್ದಾರೆ.

    ಕೊಲ್ಲೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು, ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಣಿಕೆ ಅರ್ಪಿಸಿದರು.

    ನಂತರ ಧರ್ಮಸ್ಥಳಕ್ಕೆ ತೆರಳಿ, ಮಂಜುನಾಥನ ದರ್ಶನ ಪಡೆದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು. ಅದಾದ ಬಳಿಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

  • ಕೆಜಿಎಫ್ ಶತದಿನೋತ್ಸವ.. ಯಶ್ 19ನೇ ಚಿತ್ರೋತ್ಸವ ಯಾವಾಗ..?

    kgf 2 image

    ಏಪ್ರಿಲ್ 14ಕ್ಕೆ ಶುರುವಾದ ದಿಗ್ವಿಜಯ ಯಾತ್ರೆ ಅದು. ಕೆಜಿಎಫ್ ಚಾಪ್ಟರ್ 2 ಆರ್ಭಟಕ್ಕೆ ದಾಖಲೆಗಳೆಲ್ಲ ಚಿಂದಿ ಚಿಂದಿಯಾಗಿ ಹೋದವು. ಬಾಕ್ಸಾಫೀಸ್‍ನ್ನೇ ನಡುಗಿಸಿದ ಚಿತ್ರ ಕೆಜಿಎಫ್ ಚಾಪ್ಟರ್, ಇಂಡಿಯಾದಲ್ಲಿ ಅತೀ ಹೆಚ್ಚು ಜನ ಥಿಯೇಟರಿನಲ್ಲಿ ನೋಡಿದ ಸಿನಿಮಾ ಎಂಬ ದಾಖಲೆಯನ್ನೂ ಬರೆಯಿತು. ಜುಲೈ 22ಕ್ಕೆ ಕೆಜಿಎಫ್ ಚಾಪ್ಟರ್ 2ಗೆ 100 ದಿನವೂ ತುಂಬಿತು. ಶತದಿನೋತ್ಸವ. ಆದರೆ.. ಅಭಿಮಾನಿಗಳ ಆ ಕಾಯುವಿಕೆಗೆ ಮಾತ್ರ ಉತ್ತರ ಸಿಕ್ಕಿಲ್ಲ.

    ಪ್ರಶಾಂತ್ ನೀಲ್ ಆಗಲೇ ಸಲಾರ್`ನಲ್ಲಿ ಬ್ಯುಸಿಯಿದ್ದಾರೆ. ಅದು ಮುಗಿದ ನಂತರ ಎನ್‍ಟಿಆರ್ ಸಿನಿಮಾ ಶುರುವಾಗಲಿದೆ. ಇದರ ಮಧ್ಯೆ ಬಘೀರನಿಗೆ ಕಥೆ ಕೊಟ್ಟಿದ್ದಾರೆ.

    ಇದು ಆರಂಭವಷ್ಟೇ ಎಂದಿದ್ದ ಹೊಂಬಾಳೆ ಬೆನ್ನು ಬೆನ್ನಿಗೆ ಚಿತ್ರಗಳನ್ನು ಘೋಷಿಸಿದೆ. ಎಲ್ಲ ಚಿತ್ರಗಳೂ ಒಂದಲ್ಲ ಒಂದು ಹಂತದಲ್ಲಿವೆ.

    ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಒಂದಲ್ಲ ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ.. ಯಶ್ ಮಾತ್ರ ಉತ್ತರ ಕೊಟ್ಟಿಲ್ಲ.

    ಯೂರೋಪ್‍ನಲ್ಲಿ ಪತ್ನಿ ಮಕ್ಕಳ ಸಮೇತ ಸುತ್ತುತ್ತಿರೋ ಯಶ್ ತಮ್ಮ 19ನೇ ಚಿತ್ರದ ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಡೈರೆಕ್ಟ್ ಮಾಡ್ತಾರಂತೆ.. ಇವರು ಪ್ರೊಡ್ಯೂಸ್ ಮಾಡ್ತಾರಂತೆ.. ಅನ್ನೋ ಅಂತೆ ಕಂತೆಗಳಿವೆ ಬರವೇ ಇಲ್ಲ. ಒಂದು ಸುದ್ದಿಯೂ ಅಧಿಕೃತವಾಗಿಲ್ಲ.

    ಯಶ್ 19ನೇ ಚಿತ್ರೋತ್ಸವ ಯಾವಾಗ..? ಯಾವಾಗ..? ಯಾವಾಗ..?