` aishwarya rai, - chitraloka.com | Kannada Movie News, Reviews | Image

aishwarya rai,

 • ಕನ್ನಡಕ್ಕೆ ಬರುತ್ತಿದ್ದಾರೆ ಐಶ್ವರ್ಯಾ ರೈ.. ಸೇಡಿನ ರಾಣಿಯಾಗಿ..

  ಕನ್ನಡಕ್ಕೆ ಬರುತ್ತಿದ್ದಾರೆ ಐಶ್ವರ್ಯಾ ರೈ.. ಸೇಡಿನ ರಾಣಿಯಾಗಿ..

  ಐಶ್ವರ್ಯಾ ರೈ ಕನ್ನಡತಿಯಾದರೂ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ಆದರೀಗ ಪ್ಯಾನ್ ಇಂಡಿಯಾ ಸಿನಿಮಾ ಸಂಚಲನ ಶುರುವಾದ ಮೇಲೆ ಕನ್ನಡಕ್ಕೆ ಬರುತ್ತಿದ್ದಾರೆ ಐಶ್ವರ್ಯಾ ರೈ. ಅದೂ ಕೂಡಾ ಸೇಡಿನ ರಾಣಿಯಾಗಿ.

  ಐಶ್ವರ್ಯಾ ರೈ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ನಟಿಸಿದ್ದಾರೆ. ಅದು ಸೇಡು ತೀರಿಸಿಕೊಳ್ಳೋ ರಾಣಿಯ ಪಾತ್ರ. ಈ ಚಿತ್ರದ ಮೂಲಕ ಸುದೀರ್ಘ ಗ್ಯಾಪ್ ನಂತರ ಮಣಿರತ್ನಂ ಕೂಡಾ ಕನ್ನಡಕ್ಕೆ ಬರುತ್ತಿದ್ದಾರೆ. 1983ರಲ್ಲಿ ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ಮಣಿರತ್ನಂ, ನಂತರ ಕನ್ನಡಕ್ಕೆ ಬರಲೇ ಇಲ್ಲ. ಈಗ ಪ್ಯಾನ್ ಇಂಡಿಯಾ ಹೆಸರಲ್ಲಿ ಕನ್ನಡಕ್ಕೆ ಬರುತ್ತಿದ್ದಾರೆ ಮಣಿರತ್ನಂ. ಹೆಚ್ಚೂ ಕಡಿಮೆ 40 ವರ್ಷದ ಗ್ಯಾಪ್.

  ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಂ, ಸೂರ್ಯ, ಜಯಂ ರವಿ, ತ್ರಿಷಾ, ಶರತ್ ಕುಮಾರ್, ಪ್ರಕಾಶ್ ರೈ ಕೂಡಾ ನಟಿಸಿದ್ದಾರೆ. ಐಶ್ವರ್ಯಾ ರೈ ಮಂದಾಕಿನಿ ಹಾಗೂ ನಂದಿನಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ತಾಯಿ-ಮಗಳ ಪಾತ್ರ. ಡಬಲ್ ರೋಲ್ ಎನ್ನಲಾಗಿದೆ. ಪಳವೂರಿನ ರಾಣಿ ನಂದಿನಿಯ ಕಥೆ ಇದು.

 • ನಾನು ಐಶ್ವರ್ಯ ರೈ ಮಗ ಎಂದ ಹುಡುಗನ ರಿಯಲ್ ಸ್ಟೋರಿ

  story behind aishwarya rai son

  ಐಶ್ವರ್ಯ ರೈ, ಕನ್ನಡತಿಯಾದರೂ ಮಿಂಚುತ್ತಿರುವುದು ಬಾಲಿವುಡ್‍ನಲ್ಲಿ. ಮಾಜಿ ವಿಶ್ವಸುಂದರಿ. ಬಾಲಿವುಡ್ ಸೂಪರ್ ಸ್ಟಾರಿಣಿ. ಬಚ್ಚನ್ ಕುಟುಂಬದ ಸೊಸೆ.. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್‍ಗೆ ಇರುವುದು ಒಬ್ಬಳೇ ಮಗಳು. ಆರಾಧ್ಯ.

  ಇತ್ತೀಚೆಗೆ ಮಂಗಳೂರಿನಲ್ಲೊಬ್ಬ ಯುವಕ, ನಾನು ಕೂಡಾ ಐಶ್ವರ್ಯಾ ರೈ ಅವರ ಮಗ ಎಂದು ಹೇಳಿಕೊಂಡಿದ್ದ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಆ ಯುವಕನ ಹೆಸರು, ಸಂಗೀತ್ ಕುಮಾರ್ ರೈ. ಅವನಿಗೆ 29 ವರ್ಷ. ಅವನ ಲೆಕ್ಕವನ್ನೇ ನೋಡಿದರೆ, ಐಶ್ವರ್ಯಾ ರೈ 15 ವರ್ಷಕ್ಕೇ ತಾಯಿಯಾಗಿರಬೇಕು.

  ಆತ ಹೇಳುತ್ತಿರುವುದು ಕಟ್ಟುಕಥೆ ಎಂದು ಮೇಲ್ನೋಟಕ್ಕೇ ಗೊತ್ತಾದರೂ, ಏಕೆ ಹೀಗೆ ಎಂದು ಬೆನ್ನು ಹತ್ತಿದಾಗ ನಿಜ ಸಂಗತಿ ಗೊತ್ತಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಕೊಡಿಸುತ್ತಿದ್ದೇವೆ. ದಯವಿಟ್ಟು ಆತನಿಗೆ ಪ್ರಚಾರ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಆತನ ತಂದೆ.