` chase, - chitraloka.com | Kannada Movie News, Reviews | Image

chase,

 • Chase Movie Review, Chitraloka Rating 3.5/5

  Chase Movie Review, Chitraloka Rating 3.5/5

  Film: Chase

  Director: Vilok Shetty

  Cast: Avinash, Radhika Narayan, Rajesh Nataranga, Sheetal Shetty, Pramod Shetty, Veena Sundar 

  Stars: 3.5 

  A thriller to the core 

  A seemingly chance comprehension of an accident by a visually-challenged former turns out to the catalyst for a chain of thrilling events and a life-changing experience for everyone involved. Seems like a plot too good to be true. But first-time director Vilok Shetty has pulled off an impossibly good whodunit, a mystery that manages to keep the audience at the edge-of-their-seats for the most part. 

  What's also special about the movie is the characterization of the ensemble cast. Unexpectedly many actors have their real names for the roles, but the way in which the script provides them a solid platform to perform is commendable. 

  The visuals, attention to detail and technical sophistication makes Chase not only a smart film but appealing as well. Special mention should be made of the cinematography which is one of the highlights of the film. 

  It is also the solid performances of these dependable actors that keeps the film interesting. It would be a travesty to reveal any more of the plot without playing spoilsport. But rest assured that this is a good enough film for the Kannada audience to make their journey to the film theatres.  

  When the film begins with a blind former cop and two seemingly unrelated crime sequences, the mind obviously wanders to Blind Korean waters and its Indian inspirations. Shetty has made it his own story adding several personal touches and local nuances. What does not gel are the songs (though individually good) and comedy which seem forced.  

  Overall Chase is one of the films that will pay you back with entertainment and fulfilment for having visited the theatres. A thumbs up to the team.

  -S Shyam Prasad 

 • Radhika Chethan In A New Film Called Chase

  chase movie image

  Actress Radhika Chethan who is looking forward for the release of her latest film 'Hottegagi Genu Battegagi' has silently acted in a new film called 'Chase'. The shooting for the film is almost complete and the first poster of the film has been released now.

  'Chase' which has a caption called 'In the Dark' is being written and directed by debutante Hari Anand. Manohar Suvarna and Prashanth Shetty are the producers. Ananth Aras is the cameraman, while Karthik Acharya is the music director.

  Apart from Radhika Chethan, 'Chase' stars Avinash Narasimharaju, Sheetal Shetty, Rajesh Nataranga and others in prominent roles.

 • ಅಂಧೆಯ ಪಾತ್ರದಲ್ಲಿ ಗೆದ್ದ ನಿಧಿ : ರಾಧಿಕಾ ಚೇಸ್`ಗೆ ಪ್ರೇಕ್ಷಕರು ಫಿದಾ

  ಅಂಧೆಯ ಪಾತ್ರದಲ್ಲಿ ಗೆದ್ದ ನಿಧಿ : ರಾಧಿಕಾ ಚೇಸ್`ಗೆ ಪ್ರೇಕ್ಷಕರು ಫಿದಾ

  ಕಣ್ಣು ಕಾಣಲ್ಲ. ಆದರೆ ಎದುರಿಗೆ ಇರೋ ಪಾತ್ರಧಾರಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಫೈಟಿಂಗ್.. ನಾಯಿಯ ಜೊತೆ ಆಕ್ಟಿಂಗ್.. ಎಲ್ಲವೂ ಡಿಫರೆಂಟ್. ಫೈಟಿಂಗಿನಲ್ಲೂ ಅಷ್ಟೇ.. ಕಣ್ಣು ಕಾಣದ ಹುಡುಗಿಯ ಸಾಹಸ ಎಂದೇ ಪ್ರೇಕ್ಷಕರು ಫೀಲ್ ಆಗಬೇಕು. ಇದೆಲ್ಲವನ್ನೂ ತೆರೆಯ ಮೇಲೆ ಅದ್ಭುತವಾಗಿ ತೋರಿಸಿ ಗೆದ್ದಿದ್ದಾರೆ ನಿಧಿ.

  ನಿಧಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುವ ರಾಧಿಕಾ ನಾರಾಯಣ್ ತಮ್ಮ ಪಾತ್ರಕ್ಕೆ ಸಿಗುತ್ತಿರೋ ಪ್ರಶಂಸೆಗೆ ಫುಲ್ ಫಿದಾ. ಒಬ್ಬ ಕಲಾವಿದೆಗೆ ಇಂತಹ ಅವಕಾಶಗಳು ಪದೇ ಪದೇ ಸಿಕ್ಕಲ್ಲ. ಸಿಕ್ಕಾಗ ನ್ಯಾಯ ಸಲ್ಲಿಸಬೇಕು. ನ್ಯಾಯ ಸಲ್ಲಿಸಿರುವ ತೃಪ್ತಿ ಇದೆ ಎಂದಿದ್ದಾರೆ ರಾಧಿಕಾ. ಈ ಚಿತ್ರ ಮತ್ತು ಪಾತ್ರಕ್ಕಾಗಿ ನಿರ್ದೇಶಕ ವಿಲೋಕ್ ಶೆಟ್ಟಿ ಅವರು ಮಾಡಿಸಿದ ತಯಾರಿಯನ್ನೂ ರಾಧಿಕಾ ನೆನಪಿಸಿಕೊಂಡಿದ್ದಾರೆ.

  ವಿಲೋಕ್ ಅವರಿಗೆ ತಮ್ಮ ಚಿತ್ರದ ಪ್ರತಿ ಪಾತ್ರ, ದೃಶ್ಯ.. ಎಲ್ಲದರ ಬಗ್ಗೆಯೂ ಹೀಗೇ ಇರಬೇಕು ಅನ್ನೋ ಸ್ಪಷ್ಟತೆ ಇತ್ತು. ಅದಕ್ಕಾಗಿ ವರ್ಕ್‍ಶಾಪ್ ಮಾಡಿಸಿದ್ದರು. ಒಬ್ಬರು ಮೆಂಟರ್ ಇದ್ದರು. ಅಂಧರ ಶಾಲೆಗೆ ಹೋಗಿ ಅಭ್ಯಾಸ ಮಾಢಿದೆ. ಅಲ್ಲಿ ಅಂಧರು ತಮ್ಮ ಎದುರು ಯಾರಾದರೂ ನಿಂತರೆ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡೋ ಸೂಕ್ಷ್ಮವನ್ನು ಗಮನಿಸಿದೆ. ಇದೆಲ್ಲವೂ ಸಹಾಯವಾಯಿತು ಎಂದಿದ್ದಾರೆ ರಾಧಿಕಾ.

  ಒಂದು ಕೊಲೆ, ಒಂದು ಆಕ್ಸಿಡೆಂಟ್, ಪ್ರೇಕ್ಷಕನ ನಿರೀಕ್ಷೆಯನ್ನು ಪ್ರತಿ ಸಲವೂ ಉಲ್ಟಾಪಲ್ಟಾ ಮಾಡುವ ತಿರುವುಗಳು.. ಎಲ್ಲವೂ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿರೋದು ಈ ಚಿತ್ರದ ವಿಶೇಷ. ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಚೇಸ್ ಸಖತ್ ಹಿಟ್ ಆಗುವ ನಿರೀಕ್ಷೆಯನ್ನಂತೂ ಸೃಷ್ಟಿಸಿದೆ.

 • ಚೇಜ್ ಚಿತ್ರಕ್ಕೆ ಕಿಚ್ಚನ ಬಲ

  ಚೇಜ್ ಚಿತ್ರಕ್ಕೆ ಕಿಚ್ಚನ ಬಲ

  ಚೇಜ್. ಇನ್ ದ ಡಾರ್ಕ್

  ಯುಎಫ್‍ಓನವರು ರಿಲೀಸ್ ಮಾಡ್ತಿರೋ ಮೊದಲ ಕನ್ನಡ ಸಿನಿಮಾ. ಅವಿನಾಶ್ ನರಸಿಂಹರಾಜು ಸುದೀರ್ಘ ಗ್ಯಾಪ್ ನಂತರ ಬರುತ್ತಿರೋ ಸಿನಿಮಾ. ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ.. ಲೀಡ್ ರೋಲ್‍ನಲ್ಲಿರೋ ಸಿನಿಮಾ.

  ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ.ಚಿತ್ರಕ್ಕೀಗ ಕಿಚ್ಚನ ಬಲ ಸಿಕ್ಕಿದೆ. ಟ್ರೇಲರ್ ರಿಲೀಸ್ ಮಾಡುತ್ತಿರೋದು ಸುದೀಪ್.

  ಯುಎಫ್‍ಓನವರು ಚಿತ್ರವನ್ನ ನೋಡಿ ಮೆಚ್ಚಿದರು. ಯುನಿವರ್ಸಲ್ ಸಂಸ್ಥೆಯೊಂದು ನಮ್ಮ ಚಿತ್ರವನ್ನು ನೋಡಿ, ಮೆಚ್ಚಿ ವಿತರಣೆಗೆ ಮುಂದಾಗಿದ್ದು ಚಿತ್ರದ ಕ್ವಾಲಿಟಿಗೆ ಸಿಕ್ಕ ಗಿಫ್ಟ್. ಚಿತ್ರದ ಟ್ರೇಲರ್‍ನ್ನು ಸುದೀಪ್ ರಿಲೀಸ್ ಮಾಡುತ್ತಿರೋದು ಇನ್ನೊಂದು ಗಿಫ್ಟ್ ಎಂದು ಖುಷಿ ಹಂಚಿಕೊಳ್ತಿದೆ ಚಿತ್ರತಂಡ.

  ಹರಿ ಆನಂದ್ ನಿರ್ದೇಶನದ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಜುಲೈ 15ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

 • ಚೇಜ್; : ಪ್ರೇಕ್ಷಕರು ಥ್ರಿಲ್.. ಥಿಯೇಟರ್ಸ್ ಫುಲ್..

  ಚೇಜ್; : ಪ್ರೇಕ್ಷಕರು ಥ್ರಿಲ್.. ಥಿಯೇಟರ್ಸ್ ಫುಲ್..

  ಒಂದು ಸಿನಿಮಾ ಪ್ರೇಕ್ಷಕರನ್ನು ಸೆಳೆಯೋಕೆ ಏನು ಮಾಡಬೇಕು? ಏನೂ ಮಾಡಬೇಕಿಲ್ಲ. ಒಳ್ಳೆಯ ಕಂಟೆಂಟ್ ಕೊಟ್ಟರೆ ಸಾಕು. ಅದನ್ನು ಜನ ನೋಡಿದರೆ.. ಚಿತ್ರವನ್ನು ಮೆಚ್ಚಿದರೆ ಅವರೇ ಚಿತ್ರವನ್ನು ಪ್ರಮೋಟ್ ಮಾಡುತ್ತಾರೆ. ಹಾಗೆ ಮೊದಲಿಗೆ ಬರುವ ಪ್ರೇಕ್ಷಕರನ್ನು ಕರೆತರುವಷ್ಟು ಪ್ರಚಾರವನ್ನಂತೂ ಮಾಡಲೇಬೇಕು. ಇಷ್ಟೆಲ್ಲ ಆದ ಮೇಲೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ.. ಯಶಸ್ಸು ತಂತಾನೇ ಸಿಗುತ್ತಾ ಹೋಗುತ್ತೆ. ಚೇಸ್ ಚಿತ್ರಕ್ಕೂ ಅದೇ ಆಗಿದೆ.

  ಚಿತ್ರಮಂದಿರದೊಳಕ್ಕೆ ಬಂದ ಪ್ರೇಕ್ಷಕರಿಗೆ ಕಣ್ಣು ಕಾಣದ ಪೊಲೀಸ್ ಅಧಿಕಾರಿಯೊಬ್ಬಳು ಸೈಕೋಪಾತ್ ಒಬ್ಬನನ್ನು ಹಿಡಿಯುವ ಸಾಹಸ ಥ್ರಿಲ್ ಕೊಟ್ಟಿದೆ. ಕಥೆಯನ್ನು ವಿಭಿನ್ನವಾಗಿ ಹೇಳಿರುವ ರೀತಿಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕ್ಷಣ ಕ್ಷಣವೂ ಎದೆಯಲ್ಲೊಂದು ತಲ್ಲಣ ಸೃಷ್ಟಿಸುತ್ತಲೇ ನಾಯಕಿ ಗೆಲ್ಲುವ ಕಥೆ.. ಕಲಾವಿದರ ಅಭಿನಯ.. ಬಿಜಿಎಂ.. ಎಲ್ಲವೂ ಸಖತ್ತಾಗಿ ವರ್ಕೌಟ್ ಆಗಿದೆ. ಇದೆಲ್ಲದರ ಪರಿಣಾಮ 2ನೇ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ, ಶೋಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಚೇಸ್ ಸಿನಿಮಾದ ಸಕ್ಸಸ್ ಸೀಕ್ರೆಟ್ ಮತ್ತು ಸಕ್ಸಸ್ ಸ್ಟೋರಿ ಇದೆ.

  ನಿರ್ದೇಶಕ ವಿಲೋಕ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ತಾವು ಪ್ರತಿಭಾವಂತ ಎಂದು ತೋರಿಸಿದ್ದರೆ, ನಿರ್ಮಾಪಕ ಮನೋಹರ್ ಸುವರ್ಣ ಗೆಲುವಿನ ನಗೆ ಬೀರುತ್ತಿದ್ದಾರೆ. ಒಂದೊಂದು ದೃಶ್ಯವೂ ರೋಚಕವಾಗಿ ಮೂಡಿ ಬಂದಿರುವುದೇ ಪ್ರೇಕ್ಷಕರು ಇಷ್ಟೊಂದು ಥ್ರಿಲ್ ಆಗೋಕೆ ಕಾರಣ. ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ.. ಎಲ್ಲರೂ ತಮ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದರಲ್ಲೂ ರಾಧಿಕಾ ನಾರಾಯಣ್ ಕಣ್ಣು ಕಾಣದ ಪೊಲೀಸ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಇದೆಲ್ಲದರ ಎಫೆಕ್ಟ್ ಚಿತ್ರಮಂದಿರಗಳ ಸಂಖ್ಯೆ ಮತ್ತು ಶೋಗಳ ಸಂಖ್ಯೆ ಹೆಚ್ಚಾಗಿರೋದು.

  777 ಚಾರ್ಲಿ ಗೆಲುವಿನ ಜೋಷ್‍ನಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಇದು ಇನ್ನೊಂದು ಬೂಸ್ಟ್ ಕೊಟ್ಟಿದೆ.

 • ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್

  ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್

  ರಂಗಿತರಂಗ ರಾಧಿಕಾ ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದ ನಾಯಕಿ. ರಾಧಿಕಾ ನಾರಾಯಣ್ ನಟಿಸಿದ್ದಾರೆ ಎಂದರೆ ಆ ಚಿತ್ರದಲ್ಲಿ ಒಂದೊಳ್ಳೆ ಕಥೆಯಿದೆ ಎಂದು ಭರವಸೆಯಿಂದ ಹೇಳಬಹುದು. ರಾಧಿಕಾ ಅವರ ಟ್ರ್ಯಾಕ್ ರೆಕಾರ್ಡ್ ಹಾಗಿದೆ. ಹೀಗಾಗಿಯೇ ಚೇಸ್ ಚಿತ್ರದ ಮೇಲೆ ಭರವಸೆಯೂ ಇದೆ.

  ಚೇಸ್ ಚಿತ್ರದಲ್ಲಿ ನನ್ನದು ಪೊಲೀಸ್ ಪಾತ್ರ. ಹಾಗಂತ ಕಂಪ್ಲೀಟ್ ಕಾಪ್ ಅಲ್ಲ. ಟ್ರೈನಿಂಗ್‍ನಲ್ಲಿರೋ ಪೊಲೀಸ್ ನಾನು. ಆದರೆ ಕೆಲವು ಬೆಳವಣಿಗೆಗಳಿಂದಾಗಿ ಡ್ಯೂಟಿ ತಗೊಳ್ಳೋಕೆ ಆಗಲ್ಲ. ಒಂದು ವಿಚಿತ್ರ ಪರಿಸ್ಥಿತಿಯೊಳಗೆ ಸಿಕ್ಕಿಕೊಳ್ಳೋ ಪಾತ್ರ ನನ್ನದು ಎನ್ನುವ ರಾಧಿಕಾಗೆ ಚಿತ್ರದಲ್ಲಿ ಸ್ಟಂಟ್ ಸೀನ್‍ಗಳೂ ಇವೆಯಂತೆ. ನಾಯಿಯ ಜೊತೆಯೂ ನಟಿಸಿದ್ದಾರಂತೆ.

  ರಾಧಿಕಾ ಅವರ ಜೊತೆ ಅವಿನಾಶ್ ನರಸಿಂಹ ರಾಜು, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಸೇರಿದಂತೆ ಕಲಾವಿದರ ಸೈನ್ಯವೇ ಇದೆ. ವಿಲೋಕ್ ಶೆಟ್ಟಿ ನಿರ್ದೇಶನದ ಟ್ರೇಲರ್ ಕುತೂಹಲ ಹುಟ್ಟಿಸಿದೆ. 

 • ಚೇಸ್ ಕೊಟ್ಟ ಥ್ರಿಲ್ : ಪ್ರೇಕ್ಷಕರು ಫಿದಾ

  ಚೇಸ್ ಕೊಟ್ಟ ಥ್ರಿಲ್ : ಪ್ರೇಕ್ಷಕರು ಫಿದಾ

  ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ ಚೇಸ್. ಒಂದು ಸಿನಿಮಾ ಟ್ರೇಲರ್, ಸಿನಿಮಾ ನೋಡೋಕೆ ಬರೋ ಪ್ರೇಕ್ಷಕರಿಗೆ ಆಹ್ವಾನ ಪತ್ರಿಕೆ ಇದ್ದಂತೆ. ಅದು ಎಷ್ಟು ಚೆನ್ನಾಗಿರುತ್ತೋ.. ಅಷ್ಟರಮಟ್ಟಿಗೆ ಸಿನಿಮಾಗೆ ಒಳ್ಳೇ ಓಪನಿಂಗ್ ಸಿಗುತ್ತೆ. ಆ ದಿಕ್ಕಿನಲ್ಲಿ ಗೆದ್ದಿರೋದು ಚೇಸ್ ಟ್ರೇಲರ್.

  ಹುಡುಗಿಯರ ಸೀರಿಯಲ್ ಹತ್ಯೆ. ಬೆನ್ನು ಹತ್ತಲು ಹೊರಡುವವನಿಗೆ ಸಿಗೋದು ಕ್ಲೂಗಳಾ.. ಅಥವಾ ಕ್ಲೂ ಸಿಕ್ಕಿತು ಎಂದು ನಂಬಿಸಿ ಆತನನ್ನೇ ದಿಕ್ಕು ತಪ್ಪಿಸಿದರಾ..? ದಿಕ್ಕು ತಪ್ಪಿಸಿದ್ದು ಯಾರು? ಕೊಲೆಗಾರನೇನಾ? ಹೀಗೆ ಹತ್ತು ಹಲವಾರು ಪ್ರಶ್ನೆ ಉದ್ಭವಿಸುವಂತೆ ಮಾಡುವುದು ಚೇಸ್ ಟ್ರೇಲರ್.

  ವಿಲೋಕ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ರಾಧಿಕಾ ನಾರಾಯಣ್, ಅರವಿಂದ್ ನರಸಿಂಹ ರಾಜು, ಪ್ರಮೋದ್ ಶೆಟ್ಟಿ, ಶೀತಲ್ ಶೆಟ್ಟಿ.. ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಾಗೆ ನೋಡಿದರೆ ಟ್ರೇಲರ್ ನೋಡಿದವರಿಗೆ ಪ್ರಮುಖ ಪಾತ್ರಧಾರಿ ಯಾರು ಎಂದೇ ಅನುಮಾನ ಮೂಡುವಷ್ಟರಮಟ್ಟಿಗೆ ಚಿತ್ರಿಸಿದ್ದಾರೆ ವಿಲೋಕ್. ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಸಂಗೀತ ನೀಡಿದ್ದಾರೆ. ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಎಲ್ಲವೂ ಇರುವ ಸಿನಿಮಾ ಇದೇ 15ಕ್ಕೆ ರಿಲೀಸ್ ಆಗುತ್ತಿದೆ.

 • ರಂಗಿತರಂಗ ರಾಧಿಕಾ ಡಿಶುಂ ಡಿಶುಂ

  radhika chethan to perform stunts for chase

  ರಂಗಿತರಂಗದ ಮುಗುಳ್ನಗೆಯ ಸುಂದರಿ ರಾಧಿಕಾ ಚೇತನ್. ಯುಟರ್ನ್, ಕಾಫಿತೋಟ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ.. ಹೀಗೆ ಪ್ರಯೋಗಾತ್ಮಕ ಚಿತ್ರಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ರಾಧಿಕಾ ಚೇತನ್, ಈಗ ಚೇಸ್ ಚಿತ್ರಕ್ಕಾಗಿ ಸಾಹಸವನ್ನೂ ಮಾಡಿದ್ದಾರೆ. ಚಿತ್ರದಲ್ಲಿನ ಸಾಹಸ ದೃಶ್ಯಗಳಿಗಾಗಿ ರಾಧಿಕಾ, ಸಮರ ಕಲೆ ಕಲಿತಿದ್ದಾರಂತೆ. ಸಾಹಸ ನಿರ್ದೇಶಕರಾದ ಡೆಲ್ಸನ್ ಮತ್ತು ಚೇತನ್ ಡಿಸೋಜಾ ಅವರೇ ತರಬೇತಿಯನ್ನೂ ಕೊಟ್ಟಿದ್ದಾರಂತೆ.

  ಒಂದು ವಾರ ತರಬೇತಿ ಪಡೆದು ನಟಿಸಿದ್ದೇನೆ. ಆ್ಯಕ್ಷನ್ ದೃಶ್ಯಗಳು ಹೆಚ್ಚೇನೂ ಇಲ್ಲ. ಆದರೆ, ಅದಕ್ಕಾಗಿ ಶ್ರಮ ಪಟ್ಟಿದ್ದೇನೆ. ಏಕೆಂದರೆ ಆ್ಯಕ್ಷನ್ ಸೀನ್‍ಗಳು ಬೇರೆಯದ್ದೇ ಬಾಡಿ ಲಾಂಗ್ವೇಜ್ ಕೇಳುತ್ತವೆ. ಅಷ್ಟೇ ಅಲ್ಲ, ಈ ಚಿತ್ರದೊಂದಿಗೆ ನನಗೆ ನಾಯಿಗಳ ಬಗ್ಗೆ ಇದ್ದ ಭಯವೂ ದೂರವಾಗಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ ಚೇತನ್.