` mohan lal, - chitraloka.com | Kannada Movie News, Reviews | Image

mohan lal,

 • Five Languages; Five Super Stars; Five Posters

  five languages five super stars five posters

  The boxing poster of Sudeep starrer 'Phailwan' was released on Tuesday and within minutes of the release, the poster became talk of the town. The poster was not only released in Kannada, but five different languages and by different stars.

  The Telugu version of 'Phailwan' was released by Mega Star Chiranjeevi, Malayalm by Mohan Lal, Hindi by Sunil Shetty, Kannada by Sudeep and Tamil by Vijay Sethupathi. All the posters were released simultaneously and all the posters became instant hit.

  'Phailwan' is gearing up for an August 09th release and the team is busy with the post-production of the film. The film is produced by Swapna Krishna and written and directed by S Krishna. Karunakar is the cameraman, while Arjun Janya is the music director.

 • Malayalam Mythri in Mach 02nd Week

  mythri image

  Puneeth and Mohan Lal starrer 'Mythri' which has been highly appreciated by not only the audience but also critics is all set to be releasing in Malayalam shortly. The Malayalam version of the film which is currently in the DTS stage is expected to be released in the second week of March.

  'Mythri' is not being dubbed in Malayalam and instead the film is being remade to suit the Malayalam nativity. Sources say, nearly 50% of the film has been already re shot to suit the tastes and nativity of the Malayalam audience. Well known Malayalam artiste like Kalabhavan Mani and others have also acted in the film.

  Asked whether he will dub his voice for the Malayalam film like what Mohan Lal did for Kannada version, Puneeth says a firm no. 'I can manage to talk in Tamil and Telugu. But Malayalam is quite difficult for me. I don't even dream of dubbing my voice in Malayalam, because I can't do justice to it' says Puneeth.

 • ಧ್ರುವ-ಪ್ರೇಮ್ ಸಿನಿಮಾಗೆ ಮೋಹನ್ ಲಾಲ್ ಬರ್ತಾರಾ?

  ಧ್ರುವ-ಪ್ರೇಮ್ ಸಿನಿಮಾಗೆ ಮೋಹನ್ ಲಾಲ್ ಬರ್ತಾರಾ?

  ಜೋಗಿ ಪ್ರೇಮ್ ಏನ್ ಮಾಡಿದ್ರೂ ಸೆನ್ಸೇಷನ್ ಮಾಡ್ತಾರೆ. ಶಿವಣ್ಣ-ಸುದೀಪ್ರನ್ನೇ ಒಂದು ಸಿನಿಮಾದಲ್ಲಿ ತಂದ ಏಕೈಕ ನಿರ್ದೇಶಕ ಪ್ರೇಮ್. ಈಗ ಏಕ್ ಲವ್ ಯಾ ನಂತರ ಧ್ರುವ ಸರ್ಜಾ ಅವರಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಸ್ಕ್ರಿಪ್ಟ್ ಪೂಜೆಯೂ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಹಲವು ಸ್ಟಾರ್ ನಟರಿರುವ ಸಾಧ್ಯತೆ ಇದೆ. ಆ ಲಿಸ್ಟಿನಲ್ಲೀಗ ಮೋಹನ್ ಲಾಲ್ ಕೂಡಾ ಸೇರಿದ್ದಾರೆ.

  ಅಕ್ಟೋಬರ್ 20ರಂದು ಚಿತ್ರದ ಟೈಟಲ್ ಟೀಸರ್ ಲಾಂಚ್ ಆಗುತ್ತಿದೆ. ಈ ಟೀಸರ್ ಲಾಂಚ್ಗೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿಯೋ.. ಕಲಾವಿದರೊ.. ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅಕ್ಟೋಬರ್ 20ರಂದು ಪ್ರೇಮ್ ಸರ್ ಪ್ರೈಸ್ ಕೊಡುವುದಂತೂ ಪಕ್ಕಾ.

  ಮೋಹನ್ ಲಾಲ್ ಈ ಹಿಂದೆ ಪುನೀತ್ ರಾಜಕುಮಾರ್ ಜೊತೆ ನಟಿಸಿದ್ದರು. ಈ ಚಿತ್ರಕ್ಕೆ ಬಂದರೆ ಕನ್ನಡಿಗರಿಗೆ ಹಬ್ಬದೂಟವಾಗಲಿದೆ. ಆದರೆ.. 20ನೇ ತಾರೀಕಿನವರೆಗೆ ಕಾಯಬೇಕು.

 • ಮೋಹನ್ ಲಾಲ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ

  ಮೋಹನ್ ಲಾಲ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ

  ಮೋಹನ್ ಲಾಲ್ ಮಲಯಾಳಂನವರಾದರೂ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಕಲಾವಿದ. ವಿಭಿನ್ನ ಪ್ರಯೋಗಗಳೇ ಇರಲಿ, ಕಮಷಿರ್ಯಲ್ ಚಿತ್ರಗಳೇ ಇರಲಿ.. ಮೋಹನ್ ಲಾಲ್ ನಟಿಸಿದ್ದಾರೆ ಎಂದರೆ ಅದಕ್ಕೆ ಒಂದು ಸ್ಪೆಷಲ್ ಟಚ್ ಕೊಟ್ಟಿರ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಹನ್ ಲಾಲ್ ಒಂದು ಕಥೆಯನ್ನು ಓಕೆ ಮಾಡಿದ್ದಾರೆ ಎಂದರೇನೇ ಅದರಲ್ಲೊಂದು ವಿಶೇಷವಿರುತ್ತೆ. ಅಂತಾದ್ದರಲ್ಲಿ ಮೋಹನ್ ಲಾಲ್ ಕನ್ನಡದ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಚಿತ್ರದಲ್ಲಿ ನಟಿಸೋಕೆ ಯೆಸ್ ಎಂದಿದ್ದಾರೆ.

  ನಂದಕಿಶೋರ್ ನಿರ್ದೇಶಿಸುತ್ತಿರೋ ಮೋಹನ್ ಲಾಲ್ ನಟಿಸುತ್ತಿರೋ ಚಿತ್ರದ ಹೆಸರು ವೃಷಭ. ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇದು. ಅಭಿಷೇಕ್ ವ್ಯಾಸ್, ಪ್ರವೀಣ್ ಸಿಂಗ್ ಹಾಗೂ ಶ್ಯಾಂ ಸುಂದರ್ ಅವರ ಎವಿಎಸ್ ಸ್ಟುಡಿಯೋಸ್ ನಿರ್ಮಾಣದ ಮೊದಲ ಚಿತ್ರವಿದು.

  ಮೋಹನ್ ಲಾಲ್ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಅವರಿಗೆ ಚಿತ್ರದಲ್ಲಿ ವಿಶೇಷ ಶೇಡ್‍ಗಳಿರೋ ಪಾತ್ರವಿದೆ. ಇದು ಪಕ್ಕಾ ಔಟ್ & ಔಟ್ ಕಮರ್ಷಿಯಲ್ ಮೂವಿ. ಚಿತ್ರದ ಶೂಟಿಂಗ್ ಶುರುವಾಗುವುದು 2023ರಲ್ಲಿ ಎಂದಿದ್ದಾರೆ ನಂದಕಿಶೋರ್.

  ಮೋಹನ್ ಲಾಲ್ ಅವರ ಜೊತೆ ತೆಲುಗಿನ ಇನ್ನೊಬ್ಬ ಸೂಪರ್ ಸ್ಟಾರ್ ಕೂಡಾ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಸದ್ಯಕ್ಕೆ ನಂದಕಿಶೋರ್ ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಟನೆಯ ರಾಣಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುದೀಪ್, ನಿಖಿಲ್ ಚಿತ್ರಗಳೂ ಕ್ಯೂನಲ್ಲಿವೆ. ಇವೆಲ್ಲವನ್ನೂ ಮುಗಿಸಿ ವೃಷಭ ಸ್ಟಾರ್ಟ್ ಮಾಡುತ್ತೇನೆ ಎಂದರೆ ಸಾಧ್ಯವಿಲ್ಲ. ಕೆಲವು ಪ್ರಾಜೆಕ್ಟ್ ಮುಂದೂಡಲೇಬೇಕು ನಂದಕಿಶೋರ್. ಏಕೆಂದರೆ ಯೆಸ್ ಎಂದಿರೋದು ಮೋಹನ್ ಲಾಲ್.

 • ಮೋಹನ್ ಲಾಲ್`ಗೆ ರಾಗಿಣಿ ದ್ವಿವೇದಿ ಹೀರೋಯಿನ್

  ಮೋಹನ್ ಲಾಲ್`ಗೆ ರಾಗಿಣಿ ದ್ವಿವೇದಿ ಹೀರೋಯಿನ್

  ಮೋಹನ್ ಲಾಲ್ ಅಭಿನಯದ ವೃಷಭ ಚಿತ್ರ ಟೇಕಾಫ್ ಆಗಿದೆ. ಈ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಸುದೀಪ್, ಉಪೇಂದ್ರ ನಂತರ ದೊಡ್ಡ ಸ್ಟಾರ್ ನಟನ ಚಿತ್ರಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ನಂದ ಕಿಶೋರ್. ಈ ಪ್ಯಾನ್ ಇಂಡಿಯಾ ಸಿನಿಮಾಗೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಕೈ ಜೋಡಿಸಿದ್ದಾರೆ. ಸಿನಿಮಾ ಕಥೆ ಇಷ್ಟಪಟ್ಟಿರೋ ನಿರ್ಮಾಪಕಿ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ದೊಡ್ಡ ಸ್ಟಾರ್ಕಾಸ್ಟ್ ಇರುವ ಈ ಸಿನಿಮಾದ ಬಜೆಟ್ 200 ಕೋಟಿ ರೂಪಾಯಿಯನ್ನು ಮೀರಲಿದೆ ಎಂದು ಹೇಳಲಾಗುತ್ತಿದೆ.

   ಈ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾಗಿರುವುದು ರಾಗಿಣಿ ದ್ವಿವೇದಿ. ರಾಗಿಣಿಗೆ ಮಲಯಾಳಂ ಹೊಸದಲ್ಲ. ಆದರೆ 2ನೇ ಇನ್ನಿಂಗ್ಸ್‍ನಲ್ಲಿ ಸಿಕ್ಕಿರುವ ಅತಿ ದೊಡ್ಡ ಸಿನಿಮಾ ವೃಷಭ ಎನ್ನುವುದರಲ್ಲಿ ಅನುಮಾನವಿಲ್ಲ. ಮೋಹನ್ ಲಾಲ್ ಜೊತೆ ಈ ಹಿಂದೆ ಕಂದಹಾರ್ ಚಿತ್ರದಲ್ಲೂ ನಟಿಸಿದ್ದ ರಾಗಿಣಿಗೆ, ಇದು ಮೋಹನ್ ಲಾಲ್ ಜೊತೆ 2ನೇ ಸಿನಿಮಾ.

  ವೃಷಭ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ರಾಗಿಣಿ ಅಷ್ಟೇ ಅಲ್ಲ, ರೋಶನ್ ಮೇಕಾ, ಶನಾಯ ಕಪೂರ್, ಝರಾ ಖಾನ್, ಶ್ರೀಕಾಂತ್.. ಹೀಗೆ ದೊಡ್ಡ ತಾರಾಬಳಗ ಇರುವ ಚಿತ್ರ, ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ. ಬಾಲಿವುಡ್`ನ ದೊಡ್ಡ ನಿರ್ಮಾಪಿಕ ಏಕ್ತಾ ಕಪೂರ್ ಜೊತೆಯಲ್ಲಿರುವುದರಿಂದ ಚಿತ್ರ ಇನ್ನೂ ಭರ್ಜರಿಯಾಗಿರುವ ನಿರೀಕ್ಷೆ ಇದೆ.