` anupama, - chitraloka.com | Kannada Movie News, Reviews | Image

anupama,

 • Anupama Gowda Eliminated From Big Boss 5

  anupama eliminated this week

  This week it was Anupama Gowda who was eliminated from Kichcha Sudeep's show Big Boss season 5.

  Anupama gowda of Akka fame, was one of the toughest contender in the show by staying for 99 days in the house. She saw her ups and downs in the show and was always in the talk because of her outspoken behavior, she also performed extremely well in almost all the given tasks. Big Boss was surely an emotional roller coaster ride for her.

  Anupama Gowda has already bagged the role in (ex big boss contestant) Dayal Padmanabhan's next 'Karaala Ratri' which is based on a play of Mohan Habbu, co starring JK. Surely, Anupama has a long way to go and we wish her all the luck.

  we wish heartfelt Congratulations to Chandan Shetty, Divakar, Sameer Acharya, Niveditha, Jayram Karthik and Shruthi Prakash for entering the Semi Finale.

 • ಅನುಪಮಾ ಗೌಡಗೆ ಆಫರ್‍ಗಳ ಸುರಿಮಳೆ

  big boss contestant anupama gowda

  `ಅಕ್ಕ' ಧಾರಾವಾಹಿ ಖ್ಯಾತಿಯಿಂದ ಬಿಗ್‍ಬಾಸ್‍ಗೆ ಹೋದ ಅನುಪಮಾ ಗೌಡ, ಬಿಗ್‍ಬಾಸ್‍ನಿಂದ ಹಿರಿತೆರೆಯಲ್ಲಿ ರಾಜ್ಯಭಾರವನ್ನೇ ಮಾಡುವಷ್ಟು ಬ್ಯುಸಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದಿದ್ದ ನಿರ್ದೇಶಕ ದಯಾಳ್, ಮೊದಲೇ ಪ್ರಕಟಿಸಿದ್ದಂತೆ ತಮ್ಮ `ಆ ಕರಾಳ ರಾತ್ರಿ' ಸಿನಿಮಾಗೆ ಅನುಪಮಾ ಗೌಡರನ್ನು ನಾಯಕಿಯನ್ನಾಗಿಸಿದ್ದಾರೆ. ಜೆಕೆ ಅಲಿಯಾಸ್ ಜಯಕಾರ್ತಿಕ್ ಚಿತ್ರದ ಹೀರೋ. ಹೆಸರಿಗೆ ತಕ್ಕಂತೆ ಅದು ಹಾರರ್ ಸಿನಿಮಾ.

  ಇದರ ಜೊತೆಗೆ ಕನ್ನಡದ ಸ್ಟಾರ್ ನಟರೊಬ್ಬರ ಚಿತ್ರ ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರೊಬ್ಬರ ಚಿತ್ರಕ್ಕೆ ಆಫರ್ ಬಂದಿದೆಯಂತೆ. ಸ್ಟಾರ್ ನಟರ ಚಿತ್ರಗಳೇ ಆದ್ದರಿಂದ ತಾವು ಇನ್ನೂ ಒಂದಷ್ಟು ಕಾಲ ಸಿನಿಮಾದಲ್ಲಿ ಬ್ಯುಸಿ ಎಂದು ಹೇಳಿಕೊಂಡಿದ್ದಾರೆ ಅನುಪಮಾ ಗೌಡ. ಹಾಗೆಂದು ಕಿರುತೆರೆಯನ್ನೇನೂ ಬಿಡುವುದಿಲ್ಲ. ಒಳ್ಳೆಯ ಆಫರ್ ಬಂದರೆ, ಕಿರುತೆರೆಯಲ್ಲೂ ನಟಿಸುತ್ತೇನೆ ಎಂದಿದ್ದಾರೆ.

 • ಡಾರ್ಕ್ ನೈಟ್‍ನಲ್ಲಿ.. ಜೆಕೆ, ಅನುಪಾಮಾ..

  jk, anupama in dark night

  ದಯಾಳ್ ಪದ್ಮನಾಭ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಎರಡೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರಬಿದ್ದ ದಯಾಳ್, ಈಗ ಡಾರ್ಕ್ ನೈಟ್ ಚಿತ್ರ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ.

  ದಯಾಳ್ ಅವರು ಆಯ್ಕೆ ಮಾಡಿಕೊಂಡಿರೋದು ಮೋಹನ್ ಹಬ್ಬು ಅವರ ನಾಟಕ ಕರಾಳ ರಾತ್ರಿಯನ್ನ. ಆ ನಾಟಕಕ್ಕೆ ಒಪ್ಪಿಗೆ ಪಡೆದಿರುವ ದಯಾಳ್, ಚಿತ್ರದ ಚಿತ್ರಕಥೆ ರಚಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. 

  ಬಿಗ್‍ಬಾಸ್ ಮನೆಯಲ್ಲಿದ್ದಾಗ ಜೆಕೆ ಹಾಗೂ ಅನುಪಮಾಗೆ ಕಥೆಯನ್ನೂ ಹೇಳಿದ್ದರಂತೆ. ಅವರು ಬಿಗ್‍ಬಾಸ್‍ನಿಂದ ಬಂದಮೇಲೆ ಮತ್ತೊಮ್ಮೆ ಭೇಟಿ ಮಾಡಿ ಫೈನಲ್ ಮಾಡತ್ತೇನೆ. ನನ್ನ ಪ್ರಕಾರ ಅವರು ಒಪ್ಪಿಯೇ ಒಪ್ಪುತ್ತಾರೆ ಎಂದು ವಿಶ್ವಾಸದಿಂದ ಹೇಳಿದ್ದಾರೆ ದಯಾಳ್.

 • ಪುನೀತ್ ಜೊತೆ ನಟಿಸಿದ ಹುಡುಗಿಗೆ ಅದೊಂದೇ ಬೇಸರ..!

  anupama talks about her natasarvabhouma working experience

  ನಟಸಾರ್ವಭೌಮ ಚಿತ್ರ ಆನ್‍ಲೈನ್‍ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಚಿತ್ರದ ಟ್ರೇಲರ್ ಸೃಷ್ಟಿಸಿರುವ ಹವಾಗೆ ಬಾಲಿವುಡ್ ಕೂಡಾ ಶೇಕ್ ಶೇಕ್. ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವಾಗಲೇ ಚಿತ್ರದ ನಾಯಕಿ ಮಲೆಯಾಳಿ ಹುಡುಗಿ ಅನುಪಮಾ ಪರಮೇಶ್ವರನ್‍ಗೆ ಒಂದು ಬೇಸರ ಕಾಡುತ್ತಿದೆ. 

  `ನಾನು ನಟಿಸಿದ ಎಲ್ಲ ಭಾಷೆಯ ಚಿತ್ರಗಳಿಗೂ ನಾನೇ ಡಬ್ ಮಾಡಿದ್ದೇನೆ. ಭಾಷೆಯನ್ನು ಕಲಿತು ನನ್ನದೇ ಧ್ವನಿ ಕೊಟ್ಟಿದ್ದೇನೆ. ಆದರೆ, ನಟಸಾರ್ವಭೌಮ ಚಿತ್ರಕ್ಕೆ ಅದು ಸಾಧ್ಯವಾಗಲಿಲ್ಲ. ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ ಕಾರಣ, ನಟಸಾರ್ವಭೌಮ ಚಿತ್ರದ ನನ್ನ ಪಾತ್ರಕ್ಕೆ ಡಬ್ ಮಾಡೋಕೆ ಆಗಲಿಲ್ಲ'' ಎಂದು ಬೇಸರಿಸಿಕೊಂಡಿದ್ದಾರೆ ಅನುಪಮಾ.

  ಚಿತ್ರದಲ್ಲಿ ಅನುಪಮಾ ಅವರದ್ದು ಲಾಯರ್ ಪಾತ್ರ. ಚಿತ್ರದ ಇನ್ನೊಬ್ಬ ನಾಯಕಿ ರಚಿತಾ ರಾಮ್. ಡೀಟೈಲ್ಸ್ ಏನಮ್ಮಾ ಅಂದ್ರೆ, ನೋ ನೋ.. ಇಷ್ಟೆ.. ಇದಕ್ಕಿಂತ ಜಾಸ್ತಿ ನಾನು ಹೇಳೋ ಹಾಗಿಲ್ಲ. ಡೈರೆಕ್ಟರ್ ಕಂಡೀಷನ್ನು ಅಂತಾರೆ. 

  ನಿರ್ದೇಶಕ ಪವನ್ ಒಡೆಯರ್ ಕೂಡಾ ಚಿತ್ರದ ಕಥೆಯ ಗುಟ್ಟು ಹೇಳಲ್ಲ. ಅಷ್ಟೇ ಅಲ್ಲ, ಕಥೆಯ ಸೀಕ್ರೆಟ್ ಹೊರಹಾಕದಂತೆ ಇಡೀ ಚಿತ್ರ ತಂಡಕ್ಕೆ ದಿಗ್ಬಂಧನ ಹಾಕಿಬಿಟ್ಟಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ. 

 • ಮದಗಜನಿಗೆ ನಟಸಾರ್ವಭೌಮನ ಚೆಲುವೆ

  anupama pairs opposite sri murali

  ನಟಸಾರ್ವಭೌಮ ಚಿತ್ರದಲ್ಲಿ ಇಷ್ಟಗಲ ಕನ್ನಡಕ ಹಾಕಿಕೊಂಡು ಕಣ್ಣಲ್ಲೇ ನಗುವನ್ನು ತುಳುಕಿಸಿ ಮೋಡಿ ಮಾಡಿದ್ದ ಚೆಲುವೆ ಅನುಪಮಾ ಪರಮೇಶ್ವರನ್. ಪುನೀತ್ ಜೊತೆ ತಾಜಾ ಸಮಾಚಾರ ಹೇಳಿದ್ದ ಹುಡುಗಿ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಮದಗಜ ಚಿತ್ರದ ಮೂಲಕ.

  ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಹೀರೋಯಿನ್ ಆಗಿ ಅನುಪಮಾ ಪರಮೇಶ್ವರನ್ ಫೈನಲ್ ಆಗಿದ್ದಾರೆ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಮದಗಜ. ಮುಂದಿನ ತಿಂಗಳು ಸೆಟ್ಟೇರುತ್ತಿರುವ ಚಿತ್ರಕ್ಕೆ ಅನುಪಮಾ ಡೇಟ್ಸ್ ನೋಡಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಿದೆ ಚಿತ್ರತಂಡ.

Shivarjun Trailer Launch Gallery

Popcorn Monkey Tiger Movie Gallery