` olle hudga pratham, - chitraloka.com | Kannada Movie News, Reviews | Image

olle hudga pratham,

  • Darshan Releases The Songs Of 'MLA'

    darshan releases the songs mla

    The shooting for Pratham starrer 'MLA' is complete and the songs of the film composed by Vikram Subramanya was released by actor Darshan on Tuesday Afternoon.

    Apart from Darshan, Karnataka Film Chamber of Commerce president Sa Ra Govindu, N M Suresh, Pratham, Sonal Montario and others were present during the occasion.

    'MLA' is being written and directed by Maurya, while Venkatesh Redy is the music director. Krishna Sarathy is the cinematographer.

  • Devarantha Manushya Review; Chitraloka Rating 3/5

    devarantha manushya image

    Devaranta Manushya tries to mix the image of Bigg Boss star Pratham with a dramatic film story. It manages to blend entertainment and a serious issue also. As the name suggests you know what is going to happen but that it the surprise element also. How can a person who is shown to be so down the depths of immorality be a very good person? For that you have to watch the neatly made film. 

    Pratham is introduced as a person fond of drinking. Every time he manages to get drunk with the money of others. Two of his frines have to listen to his story. That is what the tagline means 'Sanjemele sikkabedi' (Don't meet me after nightfall). The story takes many twists and turns. In the beginning Pratham narrates a love story in flashback. Just when the audience begins to believe in the story there comes a strange twist. It is surprising. Then it becomes even more strange as a new episode begins. There is connection between the two. Why did Pratham become a bad boy all of a sudden? Is there something sinister in him? Why did he cheat a girl? 

    Just when the character is taking a different course there arrives another twist. The film then races towards a surprising climax. Pratham has done quite well in his role. Shruti and Vaishnavi Menon are the two heroines and both have done a good job. They are ably supported by Tabala Nani and Suchendra Prasad. Kirik Keerti arrives in a guest role and lights up things. The film is ably handled by director Kiran Shetty. Composer Praddyottan has given some meaningful tunes. 

    Devaranta Manushya has an unusual story and it was not an easy role for anyone. Pratham has tried his best to fit into it. The challenge is difficult but somehow he has managed to look convincing.

    Chitraloka Rating 3/5

  • Helicopter Ride With Nata Bhayankara - Editorial

    editor's column

    Air travel is not new to me and I have had the opportunity to travel to different countries. But in all these years I never had the chance to travel in a helicopter. This opportunity came this week from Bigg Boss winner Pratham.

    Pratham had planned to shoot a scene using a helicopter for his film Nata Bhayankara. He had discussed it with me sometime ago. During the discussion stage itself it was planned to do a Facebook Live from Chitraloka page when the shooting from helicopter took place. The original plan was to fly from Jakkur airport.

    Pratham managed to get the helicopter from Shyamanur Mallikarjun and had the schedule planned for the shooting.

    natabhayankara_helicop2.jpgPratham called me on 28th and informed that the shooting will be held on 29th. I was under the impression that it will be in Jakkur airport and told Pratham I would come to Jakkur in the morning. Pratham then said that the shooting will at Mysore and requested me to come for the shooting. I was shocked when he sent me the documents on my WhatsApp. It was the permission letters from different departments. I was surprised as to how he managed to get the permission from various departments during this time when there is election code of conduct.

    On the morning of 29th April,  Pratham had come to my place and we went to HAL airport in my car. We had not had our breakfast. On reaching the HAL airport at 9 AM we asked the officials there about the availability of food. They said we have to go back to the main road and find a hotel. We came back to an hotel nearby and ordered food. Hotel owner recognised Pratham and was not willing to take money from us. But we forced him to accept it and came back to the airport. The film's heroine Sahar Afsha joined us there. I took the car from the security and drove near the helicopter. But I was told that there is no parking space near by. I had to drive back to the parking lot. There was another car that would take us near the chopper. 

    We boarded the helicopter and I started shooting from my mobile. I noticed that Pratham was not smiling. Out pilot name was Mr Prakash. Actress Sahar Afsha was in a thrilling mood when the helicopter took off since it was her first trip on a chopper. I was interested in checking what all was there inside the chopper. I noticed a Note pad with details showing the places where we were flying! Within minutes it was showing Ramanagara, Chennapatna…. When the chopper was passing through the clouds Pratham was shaken and shivering.

    natabhayankara_helicop3.jpgMeanwhile I was looking at my mobile for the available network. Jio mobile signal was available at some places and once I started the Facebook live from our Chitraloka page. But within few minutes I lost the signal. When we reached Mysore I got good Jio signal and immediately went LIVE in the air itself.  When we landed at Lalith Mahal Helipad I was still in live my Mysuru friend and also a senior journalist KJ Kumar was calling me on my other mobile which I could not attend. After the Live feed I called Kumar and he congratulated me saying that I was the first Kannada film journalist who has travelled in a chopper and doing a Live session  in Facebook. I asked him to come to the film shooting location and he came to the spot within one hour. I asked the pilot at what altitude we were travelling. He told we were 5,000 feet from the sea level and around 2,000 ft from ground level. It took us 35 minutes to fly to Mysuru from Bengaluru.

    Shooting for the movie Nata Bhayankara started and I got busy shooting the videos and photos. Pratham had permission till 3 PM to shoot at the helipad. Time was nearing and Pratham was a little tense since he had lost something. Finally with a little delay the shooting finished and we boarded the chopper and were travelling back to Bengaluru and landed at HAL Airport. There was no time for us to have lunch and Pratham and all of us were hungry.

    This was one of the memorable experiences for all of us. Thanks to Pratham for providing this opportunity to me.

  • Pratham Is Now Nata Bayankara - Exclusive

    pratham's film re title nata bayankara

    Bigg Boss winner Pratham's new film has a change of title. The film was launched with the title Pratham Buildup. But now the makers have decided to give it another name. The new name is Nata Bayankara. This is the same title given to the late star of negative roles Vajramuni.

    Earlier the film had the tagline 'Ee nan magandu ide aytu guru'. But it is not certain if the tagline will be retained or changed or dropped altogether. Nata Bayankara is a comedy subject and has nothing to do with Vajramuni.

    The story of the film has not changed and has been retained. There is only a change of name as it was felt that it better suits the story.

  • ಅದು ಕಸ್ತೂರಿ ನಿವಾಸ.. ಪುನೀತ್ ಅಣ್ಣಾವ್ರಾದ್ರೆ.. ಪ್ರಥಮ್ ಜಯಂತಿ..!

    puneeth's kasturi nivasa

    ನಟ, ನಿರ್ದೇಶಕ ಪ್ರಥಮ್ ಸದಾ ಸುದ್ದಿಯಲ್ಲಿರೋ ಸುದ್ದಿ ಸ್ಟಾರ್. ಏನಾದ್ರೊಂದು ಮಾಡ್ತಾನೇ ಇರ್ತಾರೆ ಪ್ರಥಮ್. ಈಗಲೂ ಅಷ್ಟೆ.. ಈ ಬಾರಿ ಪ್ರಥಮ್ ತುಂಟಾಟಕ್ಕೆ ಬೇಸ್ತು ಬಿದ್ದಿರೋದು ಪುನೀತ್ ರಾಜ್‌ಕುಮಾರ್.

    ನಟಭಯಂಕರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ಅವರನ್ನು ಆಹ್ವಾನಿಸಲು ತೆರಳಿದ್ದ ಪ್ರಥಮ್ ಪುನೀತ್ ಎದುರು ತಮಗೆ ಇಷ್ಟವಾದ ಕಸ್ತೂರಿ ನಿವಾಸದ ಕಥೆ ಹೇಳಿದ್ದಾರೆ. ಅಷ್ಟಕ್ಕೇ ನಿಂತಿಲ್ಲ..

    ಪುನೀತ್ ಅಣ್ಣಾವ್ರಂತೆ ನಟಿಸಬೇಕು, ಪ್ರಥಮ್ ಜಯಂತಿಯAತೆ ನಟಿಸಬೇಕು ಎಂದು ಹೇಳಿ, ಜಯಂತಿಯಾಗಿ ನಟಿಸಿ ಅಣ್ಣಾವ್ರಿಂದ ಅರ್ಥಾತ್ ಪುನೀತ್ ಅವರಿಂದ ಭಾಷೆ ತಗೊಂಡಿದ್ದಾರೆ.

    ಈಗ ಪುನೀತ್ ಜಯಂತಿಗೆ ಅರ್ಥಾತ್ ಪ್ರಥಮ್ ಅವರಿಗೆ ಭಾಷೆ ಕೊಟ್ಟಿದ್ದಾರೆ. ಆಡಿಯೋ ಬಿಡುಗಡೆಗೆ ಬಂದೇ ಬರ್ತೀನಿ ಅಂತಾ. ಅಣ್ಣಾವ್ರು ಕೊಟ್ಟ ಮಾತು ತಪ್ಪೋದಿಲ್ಲ. 

  • ಆಶ್ರಮಕ್ಕೆ ಹಣ ಕೊಟ್ಟರಷ್ಟೇ ಬರ್ತಾರೆ ಪ್ರಥಮ್

    pay this ashram money to invite pratham for your function

    ಒಳ್ಳೆಯ ಹುಡುಗ ಪ್ರಥಮ್, ತಾವೇಕೆ ಒಳ್ಳೆಯ ಹುಡುಗ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿಬಿಟ್ಟಿದ್ದಾರೆ. ಇಷ್ಟಕ್ಕೂ ಆಗಿರೋದು ಇಷ್ಟು. ಇತ್ತೀಚೆಗೆ ಪ್ರಥಮ್ ಮಂಗಳೂರಿಗೆ ಹೋಗಿದ್ದರು. ಮಂಗಳೂರಿನಲ್ಲಿ ತಬಸ್ಸಮ್ ಮತ್ತು ರಶೀದ್ ವಿಟ್ಲ ಎಂಬುವವರು ನಡೆಸ್ತಿರೋ ಅನಾಥಾಶ್ರಮಕ್ಕೆ ಭೇಟಿ ಕೊಟ್ಟರು. ಅದು ಹೆಚ್‍ಐವಿ ಸೋಂಕಿರುವ ಮಕ್ಕಳ ಅನಾಥಾಶ್ರಮ. ಪ್ರಥಮ್‍ಗೆ ಅದು ಅಪೂರ್ವ ಎನಿಸಿಬಿಟ್ಟಿತು. ಸ್ವಲ್ಪ ಹಣವನ್ನು ಕೊಟ್ಟ ಪ್ರಥಮ್, ಅಲ್ಲಿಯೇ ಒಂದು ನಿರ್ಧಾರ ತೆಗೆದುಕೊಂಡುಬಿಟ್ಟರು. 

    ಇನ್ನು ಮುಂದೆ ಪ್ರಥಮ್ ಅವರನ್ನು ನಿಮ್ಮ ಊರಿನ ಅಥವಾ ಇನ್ಯಾವುದೆ ಕಾರ್ಯಕ್ರಮಕ್ಕೆ ಕರೆಯಬೇಕೆಂದರೂ ಹಣ ಕೊಡಬೇಕು. ಅದನ್ನು ನೀವು ಪ್ರಥಮ್ ಅವರಿಗೇನೂ ಕೊಡಬೇಕಿಲ್ಲ. ಮಂಗಳೂರಿನಲ್ಲಿರುವ ಈ ಆಶ್ರಮಕ್ಕೆ ಹಣ ಕೊಡಬೇಕು. ಆಶ್ರಮಕ್ಕೆ ಹಣ ಕೊಡುವುದಾದರೆ ಮಾತ್ರ ಪ್ರಥಮ್, ಕಾರ್ಯಕ್ರಮಕ್ಕೆ ಬರ್ತಾರೆ.

    ಅಂದಹಾಗೆ ಆಶ್ರಮದ ಅಕೌಂಟ್ ಇರೋದು ಸ್ನೇಹದೀಪ ಕಾರ್ಪೊರೇಷನ್ ಬ್ಯಾಂಕ್‍ನಲ್ಲಿ. ಪೋಂಜಾ ಆರ್ಕೇಡ್, ಹಂಪನಕಟ್ಟೆಯಲ್ಲಿ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಆಶ್ರಮದ ಅಕೌಂಟ್ ನಂಬರ್ ಹಾಗೂ ಐಎಫ್‍ಎಸ್‍ಸಿ ಕೋಡ್‍ನ್ನು ಹಾಕಿರುವ ಪ್ರಥಮ್, ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ.

    ಈಗ ಪ್ರಥಮ್ ಅವರನ್ನು ಕಾರ್ಯಕ್ರಮಕ್ಕೆ ಕರೆಯುವವರು ಈ ಆಶ್ರಮಕ್ಕೆ ಹಣ ಕೊಟ್ಟರೆ, ಎರಡು ಕೆಲಸಗಳಾಗುತ್ತವೆ. ಒಂದು, ಪ್ರಥಮ್‍ರನ್ನು ನಿಮ್ಮ ಕಾರ್ಯಕ್ರಮಕ್ಕೆ ಕರೆತಂದು ಸಂಭ್ರಮಿಸಿದ ಖುಷಿ. ಇನ್ನೊಂದು ಆಶ್ರಮಕ್ಕೆ ಹಣ ಕೊಟ್ಟು, ಆ ಅನಾಥ ಮುಖಗಳಲ್ಲಿ ನಗು ಮೂಡಿಸಿದ ತೃಪ್ತಿ. ಪ್ರಥಮ್‍ಗೆ ಹ್ಯಾಟ್ಸಾಫ್ ಹೇಳಲೇಬೇಕಲ್ಲವೇ.

  • ಒಳ್ಳೆ ಹುಡ್ಗ ಪ್ರಥಮ್ ಈಗ ಹಳ್ಳಿ ಹುಡ್ಗ

    olle hudga pratham is now halli hudga

    ಬಿಗ್ ಬಾಸ್ ಪ್ರಥಮ್, ಒಳ್ಳೆ ಹುಡ್ಗ ಪ್ರಥಮ್ ಈಗ ಹಳ್ಳಿ ಹುಡ್ಗನಾಗಿದ್ದಾರೆ. ಮೊದಲಿನಿಂದ ಕೃಷಿಕನಾಗುವ ಆಸೆಯಿಟ್ಟುಕೊಂಡಿದ್ದ ಪ್ರಥಮ್, ಹಲವು ಬಾರಿ ಅದನ್ನು ಹೇಳಿಕೊಂಡಿದ್ದರು. ಸಿನಿಮಾ ಶೋಕಿಗೆ ಬಿದ್ದಿದ್ದೀಯಾ.. ನೀನೆಲ್ಲಿ ರೈತನಾಗ್ತೀಯ ಬಿಡು ಗುರು ಎಂದು ಕಾಲೆಳೆದವರೂ ಇದ್ದರು. ಅವರಿಗೆಲ್ಲ ಉತ್ತರವೇನೋ ಎಂಬಂತೆ ಈಗ ಪಕ್ಕಾ ರೈತನಾಗಿದ್ದಾರೆ ಪ್ರಥಮ್.

    ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾ, ಹುರಳಿ, ಜೋಳ ಬೆಳೆದಿದ್ದಾರೆ. ಇತ್ತ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ನಟ, ನಿರ್ದೇಶಕ ಎರಡೂ ಆಗಿರುವ ಪ್ರಥಮ್, ಹೊಲದಲ್ಲಿ ಕೆಲಸ ಮಾಡುತ್ತಿರುವ ಒಂದಷ್ಟು ಫೋಟೋ ಹೊರಬಿಟ್ಟಿದ್ದಾರೆ.

    ಇಷ್ಟೆಲ್ಲ ಹೇಳಿದ್ಮೇಲೆ ಪ್ರಥಮ್ ಡೈಲಾಗ್ ಹೊಡೆಯದೇ ಬಿಡ್ತಾರಾ..? ದುಡಿಮೆಯ ನಂಬೀ ಬದುಕು ಅದರಲೆ ದೇವರ ಹುಡುಗು ಎಂಬ ಬಂಗಾರದ ಮನುಷ್ಯನ ಡೈಲಾಗ್ ಹೊಡೆದಿದ್ದಾರೆ. ಸದ್ಯಕ್ಕೆ ಪ್ರಥಮ್ ಕೈಲಿ ನಟಭಯಂಕರ ಚಿತ್ರವಿದೆ. ಅದೊಂದು ಸಿನಿಮಾ ಮುಗಿದ ಮೇಲೆ ನಾನು 100% ಕೃಷಿಕ ಎಂದಿದ್ದಾರೆ ಒಳ್ಳೆ ಹುಡ್ಗ.. ಸ್ಸಾರಿ ಸ್ಸಾರಿ ಹಳ್ಳಿ ಹುಡ್ಗ

  • ಒಳ್ಳೆ ಹುಡ್ಗ ಪ್ರಥಮ್‍ಗೆ ಅಡ್ವಾಣಿ ಆಶೀರ್ವಾದ

    lk advani blesses pratham

    ಒಳ್ಳೆ ಹುಡ್ಗ ಪ್ರಥಮ್ ಬಿಲ್ಡಪ್ ಅನ್ನೋ ಹೊಸ ಚಿತ್ರ ಮಾಡಿರುವುದು ಗೊತ್ತಿರುವ ವಿಚಾರವೇ. ಆ ಚಿತ್ರಕ್ಕೆ ಇಡೀ ದೇಶ ಮೆಚ್ಚುವ ವ್ಯಕ್ತಿಯಿಂದ ಕ್ಲಾಪ್ ಮಾಡಿಸುತ್ತೇನೆ ಎಂದು ಬಿಲ್ಡಪ್ ಕೊಟ್ಟಿದ್ದರು ಪ್ರಥಮ್. ಈಗ ದೇಶದ ಹಿರಿಯ ರಾಜಕಾರಣಿ, ಮುತ್ಸದ್ಧಿ ಎಲ್.ಕೆ. ಅಡ್ವಾಣಿಯವರನ್ನು ಭೇಟಿ ಮಾಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಅಡ್ವಾಣಿ ಅವರಿಗೆ ತಮ್ಮ ಸಿನಿಮಾದ ಕ್ಲಾಪ್ ಬೋರ್ಡ್ ಕೊಟ್ಟು ಆಶೀರ್ವಾದ ಪಡೆದಿದ್ದಾರೆ.

    ಅಡ್ವಾಣಿಯವರನ್ನು ಭೇಟಿ ಮಾಡಿದ ಫೋಟೋ, ನನ್ನ ಜೀವನದ ಬೆಸ್ಟ್ ಫೋಟೋ ಎಂದಿರುವ ಪ್ರಥಮ್‍ಗೆ, ಜೀವನದಲ್ಲಿ ಒಮ್ಮೆಯಾದರೂ ಅಡ್ವಾಣಿ ಅವರನ್ನು ನೋಡುವ ಆಸೆ ಇತ್ತಂತೆ. ನಾನು ಮೋದಿಯನ್ನು ನೋಡಿಲ್ಲ, ಮೋದಿಯನ್ನು ಸೃಷ್ಟಿಸಿದ ಬ್ರಹ್ಮನನ್ನು ನೋಡಿಬಂದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ ಪ್ರಥಮ್. 

  • ಡ್ರೋಣ್ ಪ್ರತಾಪ್ ಸಿನಿಮಾಗೆ ಪ್ರಥಮ್ ಹೀರೋ..

    ಡ್ರೋಣ್ ಪ್ರತಾಪ್ ಸಿನಿಮಾಗೆ ಪ್ರಥಮ್ ಹೀರೋ..

    ಡ್ರೋಣ್ ಪ್ರತಾಪ್. 2020ರಲ್ಲಿ ಸಡನ್ನಾಗಿ ಸುದ್ದಿಗೆ ಬಂದ ವಿಜ್ಞಾನಿ. ಹೌದು, ವಿಜ್ಞಾನಿ ಅನ್ನೋ ಪದಕ್ಕೆ ಹೊಸ ಅರ್ಥವನ್ನೇ ನೀಡಿದ ಸಂಶೋಧಕ. ಈಗ ಈತನ ಲೈಫ್ ಸ್ಟೋರಿ ಸಿನಿಮಾ ಆಗ್ತಾ ಇದೆ.

    ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕರೊಬ್ಬರು ಪ್ರತಾಪ್ ಬಗ್ಗೆ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಹೀರೋ ಆಗುತ್ತಿರೋದು ಒಳ್ಳೆ ಹುಡ್ಗ ಪ್ರಥಮ್.

    ಪ್ರತಾಪ್ ಪಾತ್ರಕ್ಕಾಗಿ 15 ಕೆಜಿಯಷ್ಟು ತೂಕ ಇಳಿಸಿಕೊಳ್ಳುತ್ತಿದ್ದೇನೆ. ಕಾನೂನಾತ್ಮಕವಾಗಿ ತೊಂದರೆಯಾಗದಂತೆ ಯಾರಿಗೂ ಹೇಳ್ಬೇಡಿ, ಉಂಡೂ ಹೋದ ಕೊಂಡೂ ಹೋದ, ಗೌರಿ ಗಣೇಶ ಮಾದರಿಯಲ್ಲಿ ಹಾಸ್ಯ ಚಿತ್ರ ಮಾಡಲಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ ಪ್ರಥಮ್

  • ತಿಮಿಂಗಿಲ ಪ್ರಥಮ್

    pratham as corrupt police officer

    ಒಳ್ಳೆಯ ಹುಡುಗ ಪ್ರಥಮ್, ನಟಭಯಂಕರ ಪ್ರಥಮ್ ಈಗ ತಿಮಿಂಗಿಲವಾಗುತ್ತಿದ್ದಾರೆ. ತಿಮಿಂಗಿಲ ಪ್ರಥಮ್ ಅವರ ಹೊಸ ಚಿತ್ರದ ಹೆಸರು. ಅದು ಪರಮ ಭ್ರಷ್ಟಪೊಲೀಸ್ ಅಧಿಕಾರಿಯ ಕಥೆಯಂತೆ.

    ಅಂತಹ ಭ್ರಷ್ಟಾತಿಭ್ರಷ್ಟ ತಿಮಿಂಗಿಲ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವುದು ಪ್ರಥಮ್. ಇಮೇಜಿನ ಹಂಗನ್ನೇ ಇಟ್ಟುಕೊಳ್ಳದ ಪ್ರಥಮ್, ಭ್ರಷ್ಟನಾಗಿ ನಟಿಸುತ್ತಿದ್ದಾರೆ. ಜೊತೆಯಾಗಿರುವುದು ಈ ಬಾರಿ ಸಾಧುಕೋಕಿಲ. ಒಂದೇ ದಿನ ಹುಟ್ಟಿ, ಒಂದೇ ಕಡೆ ಬೆಳೆಯುವ ಇಬ್ಬರೂ ಒಂದೇ ದಿನ ಪರೀಕ್ಷೆ ಬರೆಯುತ್ತಾರೆ. ಆದರೆ, ಪ್ರಥಮ್, ಸಾಧುಗಿಂತ ಒಂದೇ ಒಂದು ಅಂಕ ಜಾಸ್ತಿ ಪಡೆದು ಇನ್ಸ್ ಪೆಕ್ಟರ್ ಆದರೆ, ಸಾಧು ಪೊಲೀಸ್ ಆಗುತ್ತಾರೆ. ಇವರಿಬ್ಬರ ಮಧ್ಯೆ ನಡೆಯುವ ತಮಾಷೆ ಪ್ರಸಂಗಗಳೇ ಚಿತ್ರದ ಕಥೆ.

    ಅವಿನಾಶ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ.

  • ನಟ ಭಯಂಕರ : ಪ್ರಥಮ್ ಹೇಳಿದಂತೆಯೇ ಇದೆ..

    ನಟ ಭಯಂಕರ : ಪ್ರಥಮ್ ಹೇಳಿದಂತೆಯೇ ಇದೆ..

    ಹುಡುಗೀರು ಕೇಳ್ದಾಗೆಲ್ಲ ರಾಖಿ ಕಟ್ಟೋಕೆ ಕೈ ಕೊಡ್ತೀವಿ. ನಾವು ಕೇಳ್ದಾಗ ತಾಳಿ ಕಟ್ಟೋಕೆ ಯಾಕೆ ಕೊರಳು ಕೊಡಲ್ಲ..

    ಡೈಲಾಗು ಕೇಳಿ ನಗುವುದಕ್ಕೆ ಪುರುಸೊತ್ತು ಕೊಡಲ್ಲ. ಅವು ಕಣ್ಣುಗಳೋ.. ಕೆಂಡದುಂಡೆಗಳೋ.. ಎನ್ನುವಂತೆ ದೆವ್ವವಾಗಿ ಅವಳು ಕಾಣಿಸುತ್ತಾಳೆ. ಸಾಯಿ ಕುಮಾರ್ ಅಗ್ನಿ ಸ್ಟೈಲಿನಲ್ಲೇ ಡೈಲಾಗ್ ಹೊಡೆದರೆ, ಶೋಭರಾಜ್, ಶಂಕರ್ ಅಶ್ವತ್ಥ್, ಓಂಸಾಯಿಪ್ರಕಾಶ್, ಕುರಿ ಪ್ರತಾಪ್..ಎಲ್ಲರೂ ಭಯಂಕರವಾಗಿಯೇ ನಟಿಸುತ್ತಾರೆ. ಇವರ ಮಧ್ಯೆ ಸುಶ್ಮಿತಾ ಜೋಶಿ ಮತ್ತು ನಿಹಾರಿಕ ಶೆಣೈ ನಾಯಕಿಯರು ಮುದ್ದಾಗಿ ಹಾಗೂ ಭಯಂಕರವಾಗಿ ಕಾಣಿಸುತ್ತಾರೆ. ಚಿತ್ರಕ್ಕೆ ಪ್ರಥಮ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ. ಚಿತ್ರದ ಕಥೆಯೊಳಗೂ ಡೈರೆಕ್ಟರ್. ಹೆಸರು ನಟ ಭಯಂಕರ. ರಿಲೀಸ್ ಆಗುತ್ತಿರುವುದು ಫೆಬ್ರವರಿ 3ನೇ ತಾರೀಕಿಗೆ.

    ಸ್ವರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರೋ ಚಿತ್ರದಲ್ಲಿ ಉಪೇಂದ್ರ ಹಾಡಿದೆ. ಧ್ರುವ ಸರ್ಜಾ ವಾಯ್ಸ್ ಇದೆ. ಕಲ್ಲನ್ನೂ ಮಾತನಾಡಿಸುವ ಕಲೆ ಹೊಂದಿರೋ ಪ್ರಥಮ್, ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರಿಂದ ಚಿತ್ರಕ್ಕೆ ಶುಭಾಶಯ ಹೇಳಿಸಿರುವುದು ವಿಶೇಷ. ದಟ್ ಈಸ್ ಪ್ರಥಮ್ ಸ್ಪೆಷಲ್. ನಟಭಯಂಕರ ಎಂದರೆ ನೆನಪಾಗುವುದು ವಜ್ರಮುನಿ. ಆದರೆ ಇಲ್ಲಿ ಪ್ರಥಮ್ ಹೀರೋ ಮತ್ತು ಡೈರೆಕ್ಟರ್. ಇದು ಹಾರರ್ ಆಕ್ಷನ್ ಕಾಮಿಡಿ ಸಿನಿಮಾ.

  • ನಟ ಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಸಿದ್ದು

    ನಟ ಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಸಿದ್ದು

    ಪ್ರಥಮ್ ಅವರ ನಟ ಭಯಂಕರ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆ ಮಾಡಿರೋದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನ್ನೋದು ವಿಶೇಷ. ಒಂದು ಕಡೆ ರಾಜಕೀಯದ ಒತ್ತಡ.. ದೆಹಲಿಗೆ ಹೋಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ತುರ್ತು ಕೆಲಸಗಳ ಮಧ್ಯೆಯೂ ನಟ ಭಯಂಕರ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಸಿದ್ದರಾಮಯ್ಯ. ಅದಕ್ಕೆ ಕಾರಣ ಪ್ರಥಮ್ ಅನ್ನೋದನ್ನು ಬೇರೆ ಹೇಳಬೇಕಿಲ್ಲ.

    ಅಂದಹಾಗೆ ಇದು ಹಾರರ್ ಕಾಮಿಡಿ ಸಿನಿಮಾ. ನಟಭಯಂಕರ ಚಿತ್ರಕ್ಕೆ ಜಾತಸ್ಯಂ ಮರಣಂ ಧ್ರುವಂ ಅನ್ನೋ ಟ್ಯಾಗ್‍ಲೈನ್ ಇದೆ. ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರೋ ನಟಭಯಂಕರನಿಗೆ ಹೆಚ್.ಸಿ.ನೀಲೇಶ್ ಸಹನಿರ್ಮಾಪಕರು. ಚಿತ್ರದಲ್ಲಿ ಒಳ್ಳೆ ಹುಡ್ಗನ ಜೊತೆ ಸಾಯಿಕುಮಾರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸುಶ್ಮಿತಾ ಜೋಷಿ, ನಿಹಾರಿಕ, ಕುರಿ ಪ್ರತಾಪ್ ಸೇರಿದಂತೆ ಒಳ್ಳೆಯ ತಾರಾಗಣವೇ ಚಿತ್ರದಲ್ಲಿದೆ. 

  • ನಟ ಭಯಂಕರನಿಗೆ ರೋರಿಂಗ್ ಸ್ಟಾರ್ ಸಾಥ್

    ನಟ ಭಯಂಕರನಿಗೆ ರೋರಿಂಗ್ ಸ್ಟಾರ್ ಸಾಥ್

    ನಟ ಭಯಂಕರ. ಹಾಗೆಂದರೆ ಕನ್ನಡಿಗರಿಗೆ ನೆನಪಾಗೋದು ವಜ್ರಮುನಿ. ಆದರೆ ಆ ಹೆಸರನ್ನ ತಮ್ಮ ಚಿತ್ರಕ್ಕೆ ಟೈಟಲ್ ಆಗಿ ಇಟ್ಟುಕೊಂಡು ಬರುತ್ತಿದ್ದಾರೆ ಒಳ್ಳೆ ಹುಡ್ಗ ಪ್ರಥಮ್. ನಟ ಭಯಂಕರ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ.

    ಇವನ್ಯಾರಪ್ಪ ಇಷ್ಟೊಂದು ಮಾತಾಡ್ತಾನೆ ಎಂದುಕೊಂಡು ನೋಡ ನೋಡುತ್ತಲೇ ಪ್ರಥಮ್ ಅಭಿಮಾನಿಯಾಗಿಬಿಟ್ಟೆ. ಪ್ರಥಮ್ ಅವರ ಕಾನ್ಫಿಡೆನ್ಸ್ ನನಗೆ ತುಂಬಾನೇ ಇಷ್ಟ. ಒಂದು ಹಾಡನ್ನು ಉಪೇಂದ್ರ ಹಾಡಿದ್ದಾರೆ. ಎಲ್ಲ ಹಾಡುಗಳೂ ಚೆನ್ನಾಗಿವೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು ಶ್ರೀಮುರಳಿ.

    ಅಹಂಕಾರ ಇರೋ ವ್ಯಕ್ತಿ ಒಬ್ಬರಿಗೆ ಒಂದು ಮಾತು ಕೊಡ್ತಾನೆ. ಆಮೇಲೆ ಬದಲಾಗ್ತಾನೆ. ಅದು ಒಂದು ಕಥೆ. ಇನ್ನೊಂದು ಕಥೆಯಲ್ಲಿ ಒಬ್ಬ ಸ್ಟುಪಿಡ್ ಸೂಪರ್ ಸ್ಟಾರ್  ಹಾಗೂ ಕುರುಡಿ ದೆವ್ವದ ಲವ್ ಸ್ಟೋರಿ. ಇವೆರಡನ್ನೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ ಪ್ರಥಮ್. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರೂ ಅವರೇ. ಪ್ರಥಮ್ ಡೈರೆಕ್ಷನ್‍ನ ಮೊದಲ ಸಿನಿಮಾ ನಟ ಭಯಂಕರ.

  • ಪ್ರಥಮ್ ಕಾರ್ ನಲ್ಲಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..?

    pratham's car gets checked

    ಒಳ್ಳೆಯ ಹುಡುಗ ಪ್ರಥಮ್ ಅವರ ಕಾರ್‍ನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಅದೂ ದಾವಣಗೆರೆಯಲ್ಲಿ. ತಮ್ಮ ಕಾರ್‍ನಲ್ಲಿ ದಾವಣಗೆರೆಗೆ ಹೋಗುತ್ತಿದ್ದ ಪ್ರಥಮ್ ಅವರ ಕಾರ್‍ನ್ನು ತಡೆದ ಅಧಿಕಾರಿಗಳು ಪ್ರಥಮ್ ಅವರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ. ಕೋಡ್ ಆಫ್ ಕಂಡಕ್ಟ್ ಇರುವ ಕಾರಣ, ಕಾರ್‍ನ್ನು ಪರಿಶೀಲನೆ ಮಾಡಿದ್ದಾರೆ.

    ಅಧಿಕಾರಿಗಳಿಗೆ ಸಹಕಾರ ಕೊಟ್ಟಿರುವ ಪ್ರಥಮ್, ಮೋದಿಯೇ ಬಂದರೂ ನಿಮ್ಮ ಕರ್ತವ್ಯ ನೀವು ಮಾಡಲೇಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇನ್ನು ಪರಿಶೀಲನೆ ನಡೆಸಿದವರ ಗುಂಪಿನಲ್ಲಿ ಒಬ್ಬ ಅಧಿಕಾರಿ ಪ್ರಥಮ್ ಅವರ ಅಭಿಮಾನಿ. ಅವರ ಜೊತೆಗೊಂದು ಸೆಲ್ಫಿ ತೆಗೆದುಕೊಟ್ಟಿರುವ ಪ್ರಥಮ್ ಅಧಿಕಾರಿಗಳ ಪರಿಶೀಲನೆ, ತನಿಖೆಗೆ ಸಹಕರಿಸಿ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಅಲ್ಲಿಗೆ.. ಪ್ರಥಮ್ ಕಾರು ಪರಿಶೀಲನೆ ಮಾಡಿದವರಿಗೆ ಕೊನೆಗೂ ಸಿಕ್ಕಿದ್ದು ಸೆಲ್ಫಿ ಮಾತ್ರ..!

  • ಪ್ರಥಮ್ ಕೇಳಿದ್ರು.. ಪುನೀತ್ ಕೊಟ್ಟೇಬಿಟ್ರು..!

    pratham requests puneeth obliges

    ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್, ದೇವ್ರಂಥ ಮನುಷ್ಯ ಪ್ರಥಮ್, ಇತ್ತೀಚೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಒಂದು ವಿಶೇಷ ಉಡುಗೊರೆಯನ್ನ ಕೇಳಿ ಪಡೆದುಕೊಂಡಿದ್ದಾರೆ.

    ಪ್ರಥಮ್ ಪಡೆದುಕೊಂಡಿರುವ ಆ ಉಡುಗೊರೆ ಬೇರೇನೂ ಅಲ್ಲ, ಪುನೀತ್ ಧರಿಸಿಕೊಂಡಿದ್ದ ಸೂಟ್ ಬ್ಲೇಜರ್. ಫ್ಯಾಮಿಲಿ ಪವರ್ ಶೋಗೆ ಅತಿಥಿಯಾಗಿ ಬಂದಿದ್ದ ಪ್ರಥಮ್, ಪುನೀತ್ ಅವರ ಬ್ಲೇಜರ್ ಮೇಲೆ ಕಣ್ಣು ಹಾಕಿ, ಇಷ್ಟವಾಗಿ ಕೇಳಿ ಪಡೆದುಕೊಂಡೂಬಿಟ್ಟಿದ್ದಾರೆ. ಇಷ್ಟವಾಗಿದ್ದು ಏಕೆ..? ಫ್ಯಾಮಿಲಿ ಪವರ್ ಶೋ ನೋಡಬೇಕಷ್ಟೆ.

     

     

     

  • ಪ್ರೇಮಿಗಳ ದಿನ ಸ್ಪೆಷಲ್ - ಅಮ್ಮನಿಗೆ ಪ್ರಥಮ್ ಉಡುಗೊರೆ

    pratham's valentines day gift to his mom

    ಪ್ರೇಮಿಗಳ ದಿನದಂದು ಪ್ರೇಯಸಿಗೆ, ಪತ್ನಿಗೆ ಉಡುಗೊರೆ ಕೊಡುವುದು, ಐ ಲವ್ ಯೂ ಹೇಳೋದು ಮಾಮೂಲು. ವ್ಯಾಲೆಂಟೈನ್ ಡೇ ಎಂದರೆ ಇಷ್ಟೇ ಎಂದಾಗಿಬಿಟ್ಟಿದೆ. ಆದರೆ, ಒಳ್ಳೆ ಹುಡುಗ ಪ್ರಥಮ್, ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ತಾಯಿಗೊಂದು ಪುಟ್ಟ ಮೊಬೈಲ್ ಉಡುಗೊರೆ ನೀಡಿ, ಪ್ರೇಮಿಗಳ ದಿನವನ್ನ ಸೆಲಬ್ರೇಟ್ ಮಾಡಿದ್ದಾರೆ.

    ಸುಮ್ಮನೆ ಹುಡುಗಿಯರಿಗೆ ವ್ಯಾಲೆಂಟೈನ್ ಗಿಫ್ಟ್ ಎಂದು ಖರ್ಚು ಮಾಡುವ ಬದಲು, ತಾಯಿಗೊಂದು ಒಳ್ಳೆಯ ಸೀರೆ ಕೊಡಿಸಿ. ಪ್ರೇಮಿಗಳ ದಿನವನ್ನ ಈ ರೀತಿ ಸೆಲಬ್ರೇಟ್ ಮಾಡಿ ಅನ್ನೋದು ಅಭಿಮಾನಿಗಳಿಗೆ ಪ್ರಥಮ್ ನೀಡಿರುವ ಸಂದೇಶ. ಪ್ರೀತಿಯನ್ನು ಒಂದೇ ದಿನಕ್ಕೆ ಮೀಸಲು ಮಾಡಬೇಡಿ ಎಂದು ಕೂಡಾ ಪ್ರಥಮ್ ಹೇಳಿದ್ದಾರೆ.

  • ಬಿಗ್‍ಬಾಸ್ ವಿನ್ನರ್-ರನ್ನರ್‍ಗಳ ಸಮ್ಮಿಲನ

    big boss 4 winner and runner up

    ಈಗ ಬಿಡಿ, ಬಿಗ್‍ಬಾಸ್‍ನದ್ದೇ ಸುದ್ದಿ. ಬಿಗ್‍ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಮತ್ತು ರನ್ನರ್ ದಿವಾಕರ್ ಅವರ ಸ್ನೇಹದ ಕಥೆಯದ್ದೇ ಎಲ್ಲೆಲ್ಲೂ ಮಾತು. ಆದರೆ, ನಾವು ಇಲ್ಲಿ ಹೇಳ್ತಿರೋದು ಬಿಗ್‍ಬಾಸ್ ಸೀಸನ್ 5ನ ಕಥೆಯಲ್ಲ, ಸೀಸನ್ 4 ಸ್ಟೋರಿ. ಅದು ಕೂಡಾ ಫ್ರೆಂಡ್‍ಶಿಪ್ ಸ್ಟೋರಿ.

    ಬಿಗ್‍ಬಾಸ್ ಸೀಸನ್ 4ನ ವಿನ್ನರ್ ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಪ್ರಥಮ ಬಹುಮಾನ ಗೆದ್ದರೆ, ಕಿರಿಕ್ ಕೀರ್ತಿ ಸೆಕೆಂಡ್ ಬಿಗ್‍ಬಾಸ್ ಆಗಿದ್ದರು. ಬಿಗ್‍ಬಾಸ್‍ನಿಂದ ಹೊರಗೂ ಅವರ ಸ್ನೇಹ ಮುಂದುವರೆದಿತ್ತು. ಅದು ದೇವ್ರಂಥ ಮನುಷ್ಯ ಚಿತ್ರದಲ್ಲೂ ಮುಂದುವರೆದಿರುವುದು ವಿಶೇಷ. 

    ಇದೇ ಶುಕ್ರವಾರ ರಿಲೀಸ್ ಆಗುತ್ತಿರುವ ದೇವ್ರಂಥ ಮನುಷ್ಯ ಚಿತ್ರದಲ್ಲಿ ಕಿರಿಕ್ ಕೀರ್ತಿ ಕೂಡಾ ಇದ್ದಾರೆ. ಸ್ನೇಹಕ್ಕಾಗಿ.. ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಶುಭವಾಗಲಿ. ತಪ್ಪು ಮಾಡೋದು ಸಹಜ. ಆದರೆ, ಅದು ವಿಪರೀತವಾದರೆ ಏನಾಗುತ್ತೆ ಅನ್ನೋದು ಚಿತ್ರದ ಕಥೆಯ ಥೀಮ್.

  • ಬೆಂಗಳೂರಿಗೆ ಬಿಗ್ ಬಾಸ್ ಪ್ರಥಮ್ ಬೈ ಬೈ

    Pratham Leaves Bangalore

    ಅರಳು ಹುರಿದಂತೆ ಮಾತು.. ತುಂಟಾಟಗಳಿಂದ ಬಿಗ್ ಬಾಸ್ ಗೆದ್ದ ಪ್ರಥಮ್, ಚಿತ್ರರಂಗದಲ್ಲಿ ಹೀರೋ ಆಗಿಯೂ ಮಿಂಚಿದರು. ಸ್ವಲ್ಪ ಅತಿ ಆಡ್ತಾನೆ ಕಣ್ರಿ ಎನ್ನೋ ಅಭಿಪ್ರಾಯವೂ ಇವರ ಬಗ್ಗೆ ಇದೆ. ಅದೆಲ್ಲವನ್ನೂ ಮೀರಿ ಅವರೊಳಗೊಬ್ಬ ಒಳ್ಳೆಯ ಹುಡ್ಗ ಅನ್ನೋದು ಹಲವು ಸಾಮಾಜಿಕ ಸೇವೆಗಳಲ್ಲಿ ಸಾಬೀತೂ ಆಗಿದೆ. ಈಗ ಅದೇ ಪ್ರಥಮ್ ಬೆಂಗಳೂರು ಬಿಟ್ಟು ಹೊರಟಿದ್ದಾರೆ.

    ಕೋವಿಡ್ ಲಾಕ್ ಡೌನ್ ಶುರುವಾದಾಗಿನಿಂದ ಊರಿನಲ್ಲಿ ಕುರಿ ಸಾಕುತ್ತಿದ್ದ ಪ್ರಥಮ್, ಕೃಷಿಯತ್ತ ಹೊರಳಿದ್ದರು. ಈಗ ಅದೇ ಊರಿಗೆ ಸಂಪೂರ್ಣ ಕೃಷಿ ಮಾಡಲೆಂದೇ ಹೊರಟಿದ್ದಾರೆ. ಎಲ್ಲರೂ ಫುಲ್ ಟೈಂ ಬಿಸಿನೆಸ್, ಪಾರ್ಟ್‍ಟೈಂ ವ್ಯವಸಾಯ ಎನ್ನುತ್ತಿದ್ದರೆ, ಅದಕ್ಕೆ ಉಲ್ಟಾ ಉತ್ತರ ಕೊಡಲು ರೆಡಿಯಾಗಿದ್ದಾರೆ ಪ್ರಥಮ್.

    ಸದ್ಯಕ್ಕೆ ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೆಂಡಿಂಗ್‍ನಲ್ಲಿವೆ. ಇದರ ಜೊತೆ ಕರ್ನಾಟಕದ ಅಳಿಯ ಎನ್ನುವ ಹೊಸ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಬೆಂಗಳೂರಿಗೆ ಮತ್ತೆ ವಾಪಸ್ ಬರ್ತಾರಾ.. ಸದ್ಯಕ್ಕೆ ಪ್ರಥಮ್ ಅದಕ್ಕೆ ಉತ್ತರ ಕೊಟ್ಟಿಲ್ಲ.

  • ವಿದೇಶಕ್ಕೆ ಹಾರಿದ ಅಳಿಯ ಪ್ರಥಮ್

    ವಿದೇಶಕ್ಕೆ ಹಾರಿದ ಅಳಿಯ ಪ್ರಥಮ್

    ಒಳ್ಳೆ ಹುಡ್ಗ ಪ್ರಥಮ್ ಇದ್ದಕ್ಕಿದ್ದಂತೆ ವಿದೇಶಕ್ಕೆ ಹಾರಿದ್ದಾರೆ. ಅದೂ ಲೊಕೇಷನ್ ನೋಡೋಕೆ. ಅಫ್‍ಕೋರ್ಸ್.. ಪ್ರಥಮ್ ಅವರೊಂದಿಗೆ ಅಣಜಿ ನಾಗರಾಜ್ ಕೂಡಾ ವಿದೇಶ ಸೇರಿದ್ದಾರೆ. ಕಲೈ ಕೂಡಾ ಅವರ ಜೊತೆಯಲ್ಲೇ ಇದ್ದಾರೆ.

    ಒಂದು ಕಡೆ ನಟಭಯಂಕರ ಸಿನಿಮಾವನ್ನು ರಿಲೀಸ್ ಹೊತ್ತಿಗೆ ತಂದು ನಿಲ್ಲಿಸಿರೋ ಪ್ರಥಮ್, ಇನ್ನೊಂದು ಕಡೆ ಕರ್ನಾಟಕದ ಅಳಿಯ ಚಿತ್ರದ ಚಿತ್ರೀಕರಣ ಶುರು ಮಾಡಿದ್ದಾರೆ. ಕರ್ನಾಟಕದ ಅಳಿಯ ಚಿತ್ರ ಬಹುತೇಕ ನಡೆಯೋದು ವಿದೇಶದಲ್ಲಿ. ಒಂದಿಷ್ಟು ಪೋರ್ಷನ್ ಮಾತ್ರ ಕರ್ನಾಟಕದಲ್ಲಿ ನಡೆಯಲಿದೆ. ಒನ್ಸ್ ಎಗೇನ್ ಈ ಚಿತ್ರಕ್ಕೂ ಪ್ರಥಮ್ ಅವರೇ ಡೈರೆಕ್ಟರ್. ಸ್ಪರ್ಶ ರೇಖಾ, ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ನಟಿಸುತ್ತಿದ್ದು ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ.

    ನಟಭಯಂಕರ ಚಿತ್ರದ ಮೇಕಿಂಗ್ ನೋಡಿಯೇ ನಿರ್ಮಾಪಕರೊಬ್ಬರು ಬಂಡವಾಳ ಹೂಡಲು ಬಂದರು. ಅವರು ಯಾರು ಅನ್ನೋದನ್ನ ಶೀಘ್ರದಲ್ಲೇ ಹೇಳುತ್ತೇವೆ. ನಾಯಕಿಯನ್ನೂ ಕೂಡಾ ಫೈನಲ್ ಮಾಡುತ್ತೇವೆ. ಸದ್ಯಕ್ಕೆ ಬ್ಯಾಂಕಾಕ್, ಥೈಲ್ಯಾಂಡ್‍ನಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದಿದ್ದಾರೆ ಪ್ರಥಮ್.