ಮೊನ್ನೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅಭಿಮಾನಕ್ಕಾಗಿ ಜಪಾನಿಯೊಬ್ಬರು ಕನ್ನಡ ಕಲಿತಿದ್ದನ್ನು ಓದಿದ್ದಿರಿ. ಈ ಬಾರಿ ಅಂಥದ್ದೇ ಸುದ್ದಿ ಅಮೆರಿಕಾದಿಂದ ಬಂದಿದೆ. ಅಮೆರಿಕದ ಯುವತಿಯೊಬ್ಬರು ಕನ್ನಡತಿಯಾಗಲು ಹೊರಟಿದ್ದಾರೆ. ಅವರು ಕನ್ನಡತಿಯಾಗಲು ಹೊರಟಿರುವುದು ರಾಕಿಂಗ್ ಸ್ಟಾರ್ ಯಶ್‍ಗಾಗಿ.
ಲಿ ಎಂ ಸೆಂಟ್ರಿಯೋ ಎಂಬ ಈ ಅಮೆರಿಕನ್ ಯುವತಿ, ಯಶ್ ಕುರಿತ ತಮ್ಮ ಅಭಿಮಾನವನ್ನು ಹೇಳಿಕೊಂಡಿದ್ದಾರೆ. ಈ ಯುವತಿಗೆ ಯಶ್ ಅವರ ಚಿತ್ರಗಳಷ್ಟೇ ಅಲ್ಲ, ಯಶ್ ಅವರ ಸಾಮಾಜಿಕ ಕಾರ್ಯಗಳೂ ಹಿಡಿಸಿವೆ. ಆಕಸ್ಮಿಕವಾಗಿ ಗೂಗ್ಲಿ ಚಿತ್ರದ ಹಿಂದಿ ವರ್ಷನ್ ನೋಡಿದ ಸೆಂಟ್ರಿಯೋ, ನಂತರ ಯಶ್ ಅವರ ಎಲ್ಲ ಚಿತ್ರಗಳ ಡಿವಿಡಿಗಳನ್ನೂ ಕಲೆಕ್ಟ್ ಮಾಡಿಕೊಂಡು ನೋಡಿದ್ದಾರೆ.
ಹಿಂದಿಯಲ್ಲಿ ನೋಡೋದೇಕೆ, ಕನ್ನಡದಲ್ಲೇ ಅರ್ಥ ಮಾಡಿಕೊಳ್ಳೋಣ ಎಂದು ಕೊಂಡು ಕನ್ನಡ ಕಲಿಯಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಆನ್‍ಲೈನ್‍ನಲ್ಲಿ ಯಶ್ ಅವರ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ಸೂಚಿಸಿ `ಐ ಸಪೋರ್ಟ್ ರಾಕಿ' ಎಂಬ ಅಭಿಯಾನವನ್ನೂ ಶುರು ಮಾಡಿದ್ದಾರೆ.