` kavacha - chitraloka.com | Kannada Movie News, Reviews | Image

kavacha

  • `ಕವಚ'ಧಾರಿಯಾಗಲಿದ್ದಾರೆ ಶಿವರಾಜ್ ಕುಮಾರ್

    Kavacha Image

    ಕವಚ, ಇದು ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರ. ಅಂದಹಾಗೆ 15 ವರ್ಷಗಳ ಬಳಿಕ ಶಿವರಾಜ್ ಕುಮಾರ್ ನಟಿಸುತ್ತಿರುವ ರೀಮೇಕ್ ಚಿತ್ರವೂ ಹೌದು. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

    ಇದು ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಕಥೆಯೇ ಚಿತ್ರದ ಹೀರೋ. ಜಿವಿಆರ್ ವಾಸು ಚಿತ್ರದ ನಿರ್ದೆಶಕ. ಎಚ್.ಎಂ.ಎ. ಬ್ಯಾನರ್‍ನಲ್ಲಿ ಎಂವಿ.ವಿ. ಸತ್ಯನಾರಾಯಣ ಹಾಗೂ ಎ.ಸಂಪತ್ ಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಚಿತ್ರದಲ್ಲಿ ಇಶಾ ಕೊಪ್ಪಿಕರ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಶಾ ಕೊಪ್ಪಿಕರ್‍ಗೂ ಇದು ಕನ್ನಡದಲ್ಲಿ ಸುದೀರ್ಘ ವಿರಾಮದ ನಂತರ ಕಾಣಿಸಿಕೊಳ್ಳುತ್ತಿರುವ ಚಿತ್ರ. 

    ರವಿ ಕಾಳೆ, ತಬಲಾ ನಾಣಿ, ವಸಿಷ್ಟ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮೊದಲಾದವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿರುವ ಚಿತ್ರಕ್ಕೆ ನಾಳೆ ಚಾಲನೆ ಸಿಗಲಿದೆ.

  • 'Dasharatha' To Release Along With 'Kavacha'

    dasharatha to release along with kavacha

    Ravichandran starrer 'Dasharatha' which was launched two years back is all set to release on the 05th of April along with Shivarajakumar starr 'Kavacha'.

    'Dasharatha' is directed by writer turned director M S Ramesh. The film was launched along with 'Bakasura' and 'Rajendra Ponnappa' on the auspicious days of Mahashivaratri festival in 2017. However, the film got delayed due to various reasons and now the film is all set to release on the 05th of April.

    'Dasharatha' stars Ravichandran, Sonia Agarwal, Priyamani and others in prominent roles. Gurukiran is the music director, while G S V Seetharam is the cinematographer.

  • 'Kavacha' Shooting Completed

    kavacha shooting completed

    The shooting for Shivarajakumar's new film 'Kavacha' which is a remake of Malayalam hit 'Oppam' has been completed and the film is currently in the post-production stage.

    It was nearly 15 years since the actor acted in a remake film. His last remake film was 'Kodandarama' directed by V Ravichandran and now Shivarajakumar has acted in 'Kavacha' which is a remake of 'Oppam'.  Shivarajakumar plays a blind in this film.
     
    'Kavacha' is being produced by M V V Satyanarayana and A Sampath Kumar. G V R Vasu is the director. Apart from Shivarajakumar, the film star Isha Koppikar, Ravi Kaale, Tabala Naani, Vasishta Simha, Sudha Belavadi and others in prominent roles. Arjun Janya is the music director.
  • Ananth Nag's Commentary For 'Kavacha'

    ananth nag's commenatry for kavacha

    Actor Ananth Nag who is busy with his acting commitments has given voice over for Shivarajakumar's new film 'Kavacha' which is all set to hit the screens on the 05th of April. Ananth Nag will be taking the film forward by telling the story.

    This is not the first time, that Ananth Nag has given voice over for any film. The actor had given voice over to to 'KGF' trailer, which had become a huge hit. Now Ananth Nag has done his bit for Shivarajakumar's film.

    Apart from Shivarajakumar, the film star Isha Koppikar, Ravi Kaale, Tabala Naani, Vasishta Simha, Sudha Belavadi and others in prominent roles. The film is being produced by M V V Satyanarayana and A Sampath Kumar. G V R Vasu is the director.  Arjun Janya is the music director.

  • Kavacha review: Chitraloka Rating 3.5 / 5

    kavacha review

    Impressed by the content of Malayalam hit movie ‘Oppam’, century star Shivarajkumar made an exception to act in a remake venture after 14 long years. And, the decision to do so has worked very well as 'Kavacha’ results as a perfect entertainer which is emotionally wrapped with a brilliant climax.

    While the director has retained a majority of the sequences from the original, it is the additional commercial touch to the script which appeals to the Kannada audience. Also high on emotions, the revenge plot is the essence of the tale. Shivarajkumar as a visually challenged person is up against a person who is on a killing spree. In here, he does odd-jobs in an apartment for living.

    The tale gets twisted when the protagonist is entrusted with the responsibility of taking care of the daughter of a retired judge, who is later killed. Along with being a guardian, the visually challenged character has a secret to protect from the anti-social element.

    Isha Koppikar and Kruthika Jayakumar are impressive with their limited roles and Vashishta is at his usual best with an on-screen cut-throat personality. The real action lies in the second half which leads to a nail-biting end.

    A must watch for Shivanna fans, Kavacha has everything the audience would seek in a well balanced commercial entertainer. 

  • Kavacha Set To Thrill From Jan 18

    kavacha set to thrill from jan 18th

    Century star Dr. Shivarajkumar starrer 'Kavacha’, wherein he plays the role of a visually challenged person, is set to hit the screens worldwide on January 18. The trailer of the film which has already evoked enough expectations from the audience features Shivanna in the movie, which is based on the hit Malayalam film Oppam.

    The movie marks the directorial debut of GVR Vasu, who has reworked on the script to suit the Kannada audience. The thriller revolves around the blind man who will go to any extent to protect the life of a small girl from killers, with whom he shares a great bond. 

    Apart from half-track hero, Kruthika Jayakumar, Baby Meenakshi, Vasishta Simha, Bollywood actor Isha Koppikar feature in Kavacha. Isha Koppikar will be seen as a police officer investigating the unusual murders. Book your tickets for the suspense thriller of this season which showcases Shivanna in a challenging role.

  • Kavacha' Finally On April 5th

    kavacha finally on april 5th

    Shivarajakumar's new film 'Kavacha' is finally going to release on the 5th of April. Earlier, the film's release was postponed three times due to various reasons and now the team has finally fixed the release date and the film will be releasing across Karnataka on the 05th of April. 

    'Kavacha' is being produced by M V V Satyanarayana and A Sampath Kumar. G V R Vasu is the director.  Arjun Janya is the music director.

    'Kavacha' is a remake of Malayalam hit 'Oppam'. Shivarajakumar plays a blind in this film.  Apart from Shivarajakumar, the film star Isha Koppikar, Ravi Kaale, Tabala Naani, Vasishta Simha, Sudha Belavadi and others in prominent roles.

  • Kavacha' To Be Released During Ugadi Festival Season

    kavacha to release during ugadi

    The release date of Shivarajakumar's new film 'Kavacha' was postponed three times earlier and now the team is planning to release the film during the Ugadi festival season across Karnataka.

    'Kavacha' is a remake of Malayalam hit 'Oppam'. Mohan Lal had acted in the original, which is now being done by Shivarajakumar in Kannada.  Shivarajakumar plays a blind in this film.

    'Kavacha' is being produced by M V V Satyanarayana and A Sampath Kumar. G V R Vasu is the director. Apart from Shivarajakumar, the film star Isha Koppikar, Ravi Kaale, Tabala Naani, Vasishta Simha, Sudha Belavadi and others in prominent roles. Arjun Janya is the music director.

     

  • Shivarajakumar's New Film Kavacha Launched

    shivarajkumar's kavacha launched

    Shivarajakumar's new film 'Kavacha' which is a remake of Malayalam hit 'Oppam' was launched at Uttaradi Mutt in Bangalore. Shivarajakumar plays a blind in this film and the actor faced the first shot of the film.

    It was nearly 15 years since the actor acted in a remake film. His last remake film was 'Kodandarama' directed by V Ravichandran. The film was released in 2002 and after a gap of 15 years, the actor is in a remake.

    'Kavacha' is being produced by M V V Satyanarayana and A Sampath Kumar. G V R Vasu is the director. Apart from Shivarajakumar, the film star Isha Koppikar, Ravi Kaale, Tabala Naani, Vasishta Simha, Sudha Belavadi and others in prominent roles. Arjun Janya is the music director.

  • ಅಂಧರತ್ತ ಕಣ್ತೆರೆದು ನೋಡುತ್ತಿದ್ದಾರೆ ಕವಚ ಫ್ಯಾನ್ಸ್

    shivanna fans does amazing social service

    ಕವಚ. ಮುಂದಿನ ವಾರ ತೆರೆಗೆ ಬರುತ್ತಿರುವ ಶಿವರಾಜ್ ಕುಮಾರ್ ಸಿನಿಮಾ. ಸಿನಿಮಾದಲ್ಲಿ ಶಿವಣ್ಣ ಅಂದನಾಗಿ ನಟಿಸುತ್ತಿದ್ದಾರೆ. 16 ವರ್ಷಗಳ ನಂತರ ರೀಮೇಕ್ ಸಿನಿಮಾ ಮಾಡುತ್ತಿದ್ದು, ಮಲಯಾಳಂನಲ್ಲಿ ಮುಮ್ಮಟ್ಟಿ ನಟಿಸಿದ್ದ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅದಕ್ಕಿಂತಲೂ ಜನ ಮೆಚ್ಚುವ ಕೆಲಸಕ್ಕೆ ಕೈ ಹಾಕಿರುವುದು ಶಿವಣ್ಣನ ಫ್ಯಾನ್ಸ್.

    ಜನವರಿ 18ಕ್ಕೆ ಕವಚ ರಿಲೀಸ್ ಆಗುತ್ತಿದೆಯಲ್ಲ. ಆ ದಿನ ತ್ರಿವೇಣಿ ಚಿತ್ರಮಂದಿರದಲ್ಲಿ ಬೆಂಗಳೂರಿನ ಶಿವಸೈನ್ಯ ಅಭಿಮಾನಿಗಳ ಸಂಘ ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ ಹಮ್ಮಿಕೊಂಡಿದೆ. ವರ್ಧಮಾನ್ ಕಣ್ಣಿನ ಆಸ್ಪತ್ರೆ ವೈದ್ಯರೂ, ಅಭಿಮಾನಿಗಳ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. 

    ಅಷ್ಟೇ ಅಲ್ಲ.. ಆ ದಿನ ನೀವು ನೇತ್ರದಾನವನ್ನೂ ಮಾಡಬಹುದು. ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ ನಟಿಸಿದ್ದಾರೆ.

  • ಅಭಿಮಾನಿಗಳ ಜೊತೆ ಶಿವಣ್ಣ ಕವಚ ದರ್ಶನ

    shivanna watches kavacha movie with fans

    ಶಿವರಾಜ್‍ಕುಮಾರ್ ಅಭಿನಯದ ಕವಚ, ಪ್ರೇಕ್ಷಕರಿಗೆ ಇಷ್ಟವಾಗಿದೆ. ಶಿವಣ್ಣ ಬೇರೆಯದೇ ಮ್ಯಾನರಿಸಂ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಟ್ಟು ಗೆದ್ದಿದ್ದಾರೆ. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ಇಷ್ಟವಾಗುವಂತಿರುವ ಚಿತ್ರಕ್ಕೆ ಅಭಿಮಾನಿಗಳಿಂದಲೂ ಬಹುಪರಾಕ್ ಸಿಕ್ಕಿರುವುದು ವಿಶೇಷ. ಇಂತಹುದೊಂದು ಚಾಲೆಂಜ್‍ನ್ನು ಸ್ವೀಕರಿಸುವ ಧೈರ್ಯ ಶಿವಣ್ಣಂಗೆ ಮಾತ್ರ ಇದೆ ಅನ್ನೋದು ಅಭಿಮಾನಿಗಳ ಹೆಮ್ಮೆ. ಈಗ ಆ ಅಭಿಮಾನಿಗಳಿಗಾಗಿ, ಅಭಿಮಾನಿಗಳ ಜೊತೆಯಲ್ಲೇ ಸಿನಿಮಾ ನೋಡೋಕೆ ರೆಡಿಯಾಗಿದ್ದಾರೆ ಶಿವರಾಜ್‍ಕುಮಾರ್.

    ಶಿವರಾಜ್‍ಕುಮಾರ್, ಬೇಬಿ ಮೀನಾಕ್ಷಿ, ವಸಿಷ್ಟ ಸಿಂಹ, ಇಶಾ ಕೊಪ್ಪಿಕರ್, ಕೃತ್ತಿಕಾ ಜಯರಾಂ, ರಮೇಶ್ ಭಟ್ ಮೊದಲಾದವರು ನಟಿಸಿರುವ ಸಿನಿಮಾಗೆ, ಜಿವಿಆರ್ ವಾಸು ನಿರ್ದೇಶಕ. ಮಾಸ್ ಸ್ಟಾರ್‍ವೊಬ್ಬ ಅಂಧನಂತೆ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಿ ಗೆದ್ದಿರುವುದೇ ಶಿವಣ್ಣನ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಶಿವರಾಜ್‍ಕುಮಾರ್ ಜೊತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರೂ ಕೂಡಾ ಇರಲಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

  • ಎಲ್ಲರೂ ರಾಜ್, ರಜನಿಕಾಂತ್ ಆಗೋಕಾಗಲ್ಲ - ಶಿವಣ್ಣ

    everyone cant be rajkumar and rajanikanth

    ಎಲ್ಲರೂ ಡಾ.ರಾಜ್‍ಕುಮಾರ್, ರಜನಿಕಾಂತ್ ಆಗೋಕೆ ಸಾಧ್ಯವಿಲ್ಲ.. ಈ ಮಾತನ್ನು ಹೇಳಿದವರು ಬೇರೆ ಯಾರೋ ಅಲ್ಲ, ಶಿವರಾಜ್‍ಕುಮಾರ್. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದ ಶಿವಣ್ಣ, ಇದೇ ಮೊದಲ ಬಾರಿಗೆ ಕವಚ ಚಿತ್ರದಲ್ಲಿ ಅಂಧನಾಗಿ ನಟಿಸಿದ್ದಾರೆ. ಹಾಗೆ ನಟಿಸುವಾಗ ನಾನು ಮೀನಾಕ್ಷಿ ಎಂಬ ಪುಟ್ಟ ಬಾಲಕಿಯ ಅಭಿನಯ ನೋಡಿ ಕಲಿತಿದ್ದೇನೆ ಎಂದರು ಶಿವಣ್ಣ. ಹಾಗೆ ಹೇಳುತ್ತಲೇ ಅವರು ಈ ಮಾತು ಹೇಳಿದ್ದಾರೆ. ಎಲ್ಲರೂ ಡಾ.ರಾಜ್‍ಕುಮಾರ್, ರಜನಿಕಾಂತ್ ಆಗೋಕೆ ಸಾಧ್ಯವಿಲ್ಲ..

    ಚಿತ್ರದಲ್ಲಿ ಅಂಧನಾಗಿ ನಟಿಸುವುದು ಒಂದು ಸವಾಲಾಗಿತ್ತು. ಮೋಹನ್‍ಲಾಲ್ ಅಭಿನಯದ ಕಾಲುಭಾಗದಷ್ಟು ಬಂದಿದ್ದರೂ ನಾನು ಗೆದ್ದಂತೆ ಎಂದಿರೋ ಶಿವಣ್ಣ, ಮುಂದೆಯೂ ರೀಮೇಕ್ ಸಿನಿಮಾ ಮಾಡುತ್ತೇನೆ. ಕಥೆ ಇಷ್ಟವಾಗಬೇಕು. ಹಾಗಂತ ಅದನ್ನೇ ಉದ್ಯೋಗ ಮಾಡಿಕೊಳ್ಳಲ್ಲ ಎಂದಿದ್ದಾರೆ.

    ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ ಇಶಾ ಕೊಪ್ಪಿಕರ್, ಕೃತಿಕಾ, ವಸಿಷ್ಠ ಸಿಂಹ ಮೊದಲಾದವರು ನಟಿಸಿದ್ದಾರೆ.

     

  • ಏ.5ಕ್ಕೆ ಹ್ಯಾಟ್ರಿಕ್ ಹೀರೋ V/s ಕ್ರೇಜಿ ಸ್ಟಾರ್

    kavacha dasharatha will release on same day

    ಬಹುದಿನಗಳ ನಿರೀಕ್ಷೆಯ ನಂತರ ಕನ್ನಡದ ಇಬ್ಬರು ಸ್ಟಾರ್‍ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವಣ್ಣ ಅಂಧನಾಗಿ ನಟಿಸಿರುವ ಕವಚ ಮತ್ತು ರವಿಚಂದ್ರನ್ ಲಾಯರ್ ಆಗಿ ನಟಿಸಿರುವ ದಶರಥ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿವೆ. ಅಲ್ಲಿಗೆ, ಕನ್ನಡದಲ್ಲಿ ಬಹುದಿನಗಳ ಬಳಿಕ ಇಬ್ಬರು ಸ್ಟಾರ್‍ಗಳ ಚಿತ್ರಗಳು ಮುಖಾಮುಖಿಯಾಗಲಿವೆ.

    17 ವರ್ಷಗಳ ಹಿಂದೆ ಅಂದರೆ 2002ರಲ್ಲಿ ಶಿವರಾಜ್‍ಕುಮಾರ್ ಮತ್ತು ರವಿಚಂದ್ರನ್ ಜೋಡಿಯ ಕೋದಂಡರಾಮ ತೆರೆ ಕಂಡಿತ್ತು. ಈಗ ಒಂದೇ ದಿನ ಇಬ್ಬರ ಚಿತ್ರಗಳು ತೆರೆ ಕಾಣುತ್ತಿವೆ. ಕವಚ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದ್ದರೆ, ದಶರಥನಿಗೆ ಎಂ.ಎಸ್.ರಮೇಶ್ ನಿರ್ದೇಶನವಿದೆ. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರಗಳು, ಒಂದೇ ದಿನ ಬಿಡುಗಡೆಯಾಗುತ್ತಿರುವುದೇ ವಿಶೇಷ.

  • ಕಣ್ಣು ಕಾಣದ ಶಿವಣ್ಣ ಇಷ್ಟವಾಗಿಬಿಟ್ರು..

    shivanna's kavacha teaser launched

    ಕವಚ. ಇದು ಶಿವರಾಜ್‍ಕುಮಾರ್ ಅಂಧ ಶಿಕ್ಷಕನಾಗಿ ನಟಿಸಿರುವ ಚಿತ್ರ. ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಶೇಷ ಅಂದರೆ, ಟೀಸರ್‍ನ್ನು ರಿಲೀಸ್ ಮಾಡಿರುವುದು ಅಂಧ ಚೇತನ ಮಕ್ಕಳು.

    ಬೆಂಗಳೂರಿನ ಜೆಪಿ ನಗರದಲ್ಲಿರೋ ರಮಣ ಮಹರ್ಷಿ ಅಂಧ ಮಕ್ಕಳ ಆಶ್ರಮದಲ್ಲಿ ಕವಚ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಿವಿಆರ್ ಚಿತ್ರದ ನಿರ್ದೇಶಕ.

    ಇಶಾ ಕೊಪ್ಪಿಕರ್, ಕೃತಿಕ ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

  • ಕವಚ ಚಾಲೆಂಜ್ - ಶಿವಣ್ಣನಿಗೆ ಮಫ್ತಿ ನೆನಪಾಗಿದ್ದೇಕೆ..?

    shivanna happy about his kavacha movi character

    ಮಫ್ತಿ, ಶಿವಣ್ಣನನ್ನು ಬೇರೆಯದೇ ಇಮೇಜ್‍ನಲ್ಲಿ ತೋರಿಸಿದ ಸಿನಿಮಾ. ಇಡೀ ಸಿನಿಮಾದಲ್ಲಿ ಶಿವಣ್ಣ ಕಣ್ಣುಗಳ ಮೂಲಕವೇ ನಟಿಸಿ ಸೈ ಎನಿಸಿಕೊಂಡಿದ್ದರು. ಅದಕ್ಕೆ ತದ್ವಿರುದ್ಧವಾದ ಪಾತ್ರ ಕವಚ. ಇಲ್ಲಿ ಹೀರೋಗೆ ಕಣ್ಣಿದ್ದರೂ ಕಾಣಲ್ಲ. ಅದೇ ದೊಡ್ಡ ಚಾಲೆಂಜ್. ಆ ಚಾಲೆಂಜ್‍ನ್ನು ಗೆದ್ದಿದ್ದಾರೆ ಶಿವಣ್ಣ.

    ಅದೊಂದು ವಿಶೇಷ ಚಾಲೆಂಜ್. ಕಪ್ಪು ಕನ್ನಡಕ ಹಾಕಿಕೊಂಡು ನಟಿಸಬಹುದಿತ್ತು. ಅದು ಸುಲಭದ ದಾರಿ. ಆದರೆ, ಹಾಗೆ ಮಾಡದೆ ನಟಿಸಿದ್ದೇನೆ. ಕೆಲವು ಅಂಧರನ್ನು ಗಮನಿಸಿ, ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದೇನೆ. ಇದುವರೆಗಿನ ಪಾತ್ರಗಳಲ್ಲಿ ಕವಚ ಚಿತ್ರದ ಪಾತ್ರ ನನ್ನನ್ನು ಕಾಡಿದೆ. ಅಷ್ಟೇ ಅಲ್ಲ, ರಿಯಲ್ ಲೈಫಿನಲ್ಲಿ ಕೂಡಾ ಆ ಪಾತ್ರದೊಳಗೆ ಜೀವಿಸುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ ಶಿವರಾಜ್‍ಕುಮಾರ್.

    ಜಿವಿಆರ್ ವಾಸು ನಿರ್ದೇಶನದ ಕವಚ ನಾಳೆ ರಿಲೀಸ್ ಆಗುತ್ತಿದೆ. ಇದು 14 ವರ್ಷಗಳ ನಂತರ ಶಿವರಾಜ್‍ಕುಮಾರ್ ನಟಿಸಿರುವ ರೀಮೇಕ್ ಸಿನಿಮಾ. ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಮಲಯಾಳಂನಲ್ಲಿ ಮೋಹನ್‍ಲಾಲ್ ಮಾಡಿದ್ದ ಪಾತ್ರದಲ್ಲಿ ಶಿವರಾಜ್‍ಕುಮಾರ್ ನಟಿಸಿದ್ದಾರೆ.

  • ಕವಚ ಚಿತ್ರಕ್ಕೆ ಅನಂತ್ ನಾಗ್ ಧ್ವನಿ

    kavacha gets ananth nag's voice

    ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಅನಂತ್ ನಾಗ್ ಧ್ವನಿ ನೀಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅನಂತ್ ಅವರ ಧ್ವನಿಯನ್ನು ವಿಶಿಷ್ಟವಾಗಿ ಬಳಸಿಕೊಳ್ಳಲಾಗಿತ್ತು. ಈಗ ಕವಚ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಅನಂತ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ವಾಯ್ಸ್ ನೀಡುವ ವೇಳೆ ಚಿತ್ರದ ಕೆಲವು ದೃಶ್ಯ, ಶಿವಣ್ಣನ ಅಭಿನಯ ನೋಡಿ ತುಂಬಾ ಮೆಚ್ಚಿಕೊಂಡರಂತೆ ಅನಂತ್. 

    ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ, ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸುತ್ತಿದ್ದಾರೆ. ಬೇಬಿ ಮೀನಾಕ್ಷಿ, ಇಶಾ ಕೊಪ್ಪಿಕರ್, ಕೃತ್ತಿಕಾ, ರಾಜೇಶ್ ನಟರಂಗ ನಟಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಮೆಚ್ಚುಗೆ ಗಳಿಸಿವೆ. ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಚಿತ್ರಕ್ಕೆ ಕಥಾ ಹಂದರ ಹೇಳುವವರಾಗಿ ಮೆರುಗು ಹೆಚ್ಚಿಸಿದ್ದಾರೆ ಅನಂತ್ ನಾಗ್.

  • ಕವಚ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    kavacha gets u/a certificate

    ಡಿಸೆಂಬರ್ 6ಕ್ಕೆ ರಿಲೀಸ್ ಆಗುತ್ತಿರುವ ಕವಚ ಚಿತ್ರ ಸೆನ್ಸಾರ್‍ನಲ್ಲಿ ಪಾಸ್ ಆಗಿದೆ. ಶಿವರಾಜ್‍ಕುಮಾರ್, ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ಸಿನಿಮಾ ಕವಚ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಶಿವರಾಜ್‍ಕುಮಾರ್, ಬೇಬಿ ಮೀನಾಕ್ಷಿ, ಇಶಾ ಕೊಪ್ಪಿಕರ್, ರವಿಕಾಳೆ, ರಾಜೇಶ್ ನಟರಂಗ, ವಸಿಷ್ಟ ಸಿಂಹ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ವಿ.ವಿ. ಸತ್ಯನಾರಾಯಣ್ ಚಿತ್ರದ ನಿರ್ಮಾಪಕ. ರಾಮ್‍ಗೋಪಾಲ್ ಜೊತೆ ಕೆಲಸ ಮಾಡಿ ಅನುಭವವಿದ್ದ ಜಿವಿಆರ್ ವಾಸು, ಚಿತ್ರದ ನಿರ್ದೇಶಕ. ಇಂತಹ ಕಥೆ, ಕನ್ನಡ ಚಿತ್ರರಂಗಕ್ಕೆ ಹೊಸದು. ಖಂಡಿತಾ ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ ಎಂದಿದ್ದಾರೆ ವಾಸು.

  • ಕವಚ ರಿಲೀಸ್ ಏ.5ಕ್ಕೆ ಫಿಕ್ಸ್

    kavacha to release on april 5th

    2018ರ ಡಿಸೆಂಬರ್‍ನಲ್ಲಿಯೇ ರಿಲೀಸ್ ಆಗಬೇಕಿದ್ದ ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಏಪ್ರಿಲ್ 5ಕ್ಕೆ ಕವಚ ರಿಲೀಸ್ ಆಗುತ್ತಿದೆ.

    ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬವಾದ ಕಾರಣ, ರಿಲೀಸ್ ವಿಳಂಬವಾಯ್ತು ಎಂದು ಸ್ಪಷ್ಟನೆ ಕೊಟ್ಟಿದೆ ಚಿತ್ರತಂಡ. ಹಲವು ವರ್ಷಗಳ ನಂತರ ಶಿವಣ್ಣ ನಟಿಸಿರುವ ರೀಮೇಕ್ ಸಿನಿಮಾ ಇದು. ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದಾರೆ ಶಿವಣ್ಣ. ರಾಮ್‍ಗೋಪಾಲ್ ವರ್ಮಾ ಬಳಿ ಸಹನಿರ್ದೇಶಕರಾಗಿದ್ದ ಜಿವಿಆರ್ ವಾಸು, ಈ ಚಿತ್ರದ ನಿರ್ದೇಶಕ.

    ಇಶಾ ಕೊಪ್ಪಿಕರ್, ಕೃತಿಕಾ, ರವಿಕಾಳೆ, ರಾಜೇಶ್ ನಟರಂಗ ಮೊದಲಾದರು ನಟಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್. ಬೇಬಿ ಮೀನಾಕ್ಷಿ ಪ್ರಮುಖ ಪಾತ್ರಧಾರಿ.

  • ಕವಚ ರಿಲೀಸ್ ಮತ್ತೆ ಮುಂದಕ್ಕೆ

    kavacha release date postponed again

    ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡ ಪ್ಲಾನ್ ಪ್ರಕಾರವೇ ಆಗಿದ್ದರೆ, ಡಿಸೆಂಬರ್ ಆರಂಭದಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ತಾಂತ್ರಿಕ ತೊಂದರೆಗಳಿಂದ ಜನವರಿಗೆ ಮುಂದೂಡಲ್ಪಟ್ಟಿದ್ದ ಕವಚ, ಈಗ ಮತ್ತೆ ಫೆಬ್ರವರಿಗೆ ಮುಂದೆ ಹೋಗಿದೆ.

    ತಾಂತ್ರಿಕ ತೊಂದರೆ ಏನಿರಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಚಿತ್ರದಲ್ಲಿ ಬಳಸಿರುವ ಪದವೊಂದಕ್ಕೆ ಸೆನ್ಸಾರ್‍ನವರು ಆಕ್ಷೇಪ ವ್ಯಕ್ತಪಡಿಸಿದ್ದು, ಅದಕ್ಕೆ ಪರ್ಯಾಯ ಪದ ಜೋಡಿಸಿ, ಡಬ್ಬಿಂಗ್‍ನಲ್ಲೂ ತೊಂದರೆಯಾಗದಂತೆ ನೋಡುವ ಸಾಹಸದಲ್ಲಿದೆಯಂತೆ ಚಿತ್ರತಂಡ.  ಹಲವು ವರ್ಷಗಳ ನಂತರ ಶಿವರಾಜ್‍ಕುಮಾರ್ ರೀಮೇಕ್ ಸಿನಿಮಾದ ಕಥೆಯನ್ನು ಮೆಚ್ಚಿಕೊಂಡು, ಒಪ್ಪಿಕೊಂಡು ನಟಿಸಿದ್ದಾರೆ ಎನ್ನವ ಕಾರಣಕ್ಕೇ ಚಿತ್ರದ ಮೇಲೆ ಕುತೂಹಲ ನೂರು ಪಟ್ಟು ಹೆಚ್ಚಾಗಿದೆ.

    ವರ್ಮಾ ಬಳಿ ಸಹಾಯಕ ನಿರ್ದೇಶಕರಾಗಿದ್ದ ವಾಸು, ಈ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ. ಜನವರಿ 18ಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದ ಅಭಿಮಾನಿಗಳು ಕೂಡಾ ಸಂಭ್ರಮವನ್ನು ಮತ್ತೆ ಮುಂದಕ್ಕೆ ಹಾಕಿದ್ದಾರೆ.

  • ಕವಚ.. ರೀಮೇಕ್ ಆದ್ರೂ ರೀಮೇಕ್ ಅಲ್ಲ..!

    kavacha's main story changed by 50 percent by the director

    14 ವರ್ಷಗಳ ನಂತರ ಶಿವರಾಜ್‍ಕುಮಾರ್ ನಟಿಸಿರುವ ರೀಮೇಕ್ ಸಿನಿಮಾ ಕವಚ. ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ಶಿವಣ್ಣ, ತಮಗೆ ತಾವೇ ಹಾಕಿಕೊಂಡಿದ್ದ ರೀಮೇಕ್ ಮಾಡಲ್ಲ ಅನ್ನೋ ನಿರ್ಬಂಧವನ್ನ 14 ವರ್ಷಗಳ ಮುರಿದಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ.

    ಇದು ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಅಂಧನೊಬ್ಬ ಪುಟ್ಟ ಬಾಲಕಿಯನ್ನು ರಕ್ಷಿಸಿಕೊಳ್ಳಲು ಹೋರಾಡುವ ಕಥೆ. ಅದರ ಜೊತೆ ಚಿತ್ರವನ್ನು ಒಪ್ಪಿಕೊಳ್ಳೋಕೆ ಇನ್ನೂ ಒಂದು ಕಾರಣ, ಕನ್ನಡಕ್ಕಾಗಿ ಮಾಡಿಕೊಂಡಿರುವ ಬದಲಾವಣೆಗಳು.

    `ವೊರಿಜಿನಲ್ ಚಿತ್ರದ ಥೀಮ್‍ನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಶೇ.50ರಷ್ಟು ಕಥೆ, ಚಿತ್ರಕಥೆಯನ್ನು ಬದಲಾಯಿಸಿದ್ದೇವೆ. ಹಿಗಾಗಿಯೇ ಏಳೆಂಟು ತಿಂಗಳು ಚಿತ್ರದ ಚಿತ್ರಕಥೆಗಾಗಿ ಕೆಲಸ ಮಾಡಿದ್ದೇವೆ. ಹೀಗಾಗಿಯೇ ಶಿವಣ್ಣ ಅವರಿಗೆ ಒಂದೇ ಸಿಟ್ಟಿಂಗ್‍ನಲ್ಲಿ ಕಥೆ ಹೇಳಿ ಒಪ್ಪಿಸಲು ಸಾಧ್ಯವಾಯಿತು'' ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಜಿವಿಆರ್ ವಾಸು.

    ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಸಹ ನಿರ್ದೇಶಕರಾಗಿದ್ದ ವಾಸು, ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೂ ಅಸಿಸ್ಟೆಂಟ್ ಆಗಿದ್ದರು. ಆಗ ಪರಿಚಯವಾಗಿದ್ದರಂತೆ ಶಿವಣ್ಣ. ಶಿವಣ್ಣ ರೀಮೇಕ್ ಮಾಡಲ್ಲ ಎಂದು ಗೊತ್ತಿದ್ದರೂ, ಕಥೆ ಸಿದ್ಧ ಪಡಿಸಿಕೊಂಡು ಹೇಳಿದಾಗ ಶಿವಣ್ಣ ಒಪ್ಪಿಕೊಂಡರು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಡೈರೆಕ್ಟರ್ ವಾಸು. ಕವಚ ರಿಲೀಸ್‍ಗೆ ರೆಡಿಯಾಗಿದೆ.