` mantram, - chitraloka.com | Kannada Movie News, Reviews | Image

mantram,

  • ರಿಯಲ್ ಭೂತಬಂಗಲೆಯಲ್ಲಿ ರೀಲ್ ಭೂತ..!

    mantram was shot in real ghost house

    ಮಂತ್ರಂ. ಕನ್ನಡದ ಹೊಸ ಹಾರರ್ ಸಿನಿಮಾ. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರ. ಈ ಹಾರರ್ ಸಿನಿಮದಲ್ಲೊಂದು ಹಾರರ್ ಕಥೆಯಿದೆ. ಏನು ಗೊತ್ತಾ..? ಈ ಚಿತ್ರದ ಶೂಟಿಂಗ್ ನಡೆದಿರುವುದು ರಾಯಚೂರಿನ ದೌಲತ್‍ಮಹಲ್‍ನಲ್ಲಿ.

    ಅದು ಇಂದು ನಿನ್ನೆಯದಲ್ಲ. ಸುಮಾರು 250 ವರ್ಷ ಹಳೆಯ ಬಂಗಲೆ. ಆ ಬಂಗೆಲೆಯೇ ದೆವ್ವದ ಮನೆಯಂತೆ. ಅದು ಖಾಜಾಗೌಡರ ಬಂಗಲೆ. ಆ ಬಂಗಲೆಯಲ್ಲಿ 50 ಕೋಣೆಗಳಿವೆ. 100 ಕಿಟಕಿಗಳೂ, 50 ಬಾಗಿಲುಗಳೂ ಇವೆ. ಕತ್ತಲಾದರೆ,ಒಬ್ಬರೇ ಓಡಾಡೋಕೆ ಭಯವಾಗುವಂತಿದೆ.

    ಚಿತ್ರೀಕರಣ ಮಾಡುವಾಗ ತೊಂದರೆಗಳಾಗಿರುವುದು ನಿಜ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಸಜ್ಜನ್. ನಿರ್ಮಾಪಕ ಅಮರ್ ಚೌಧರಿಯವರಿಗೆ ಇದು ಮೊದಲ ಸಿನಿಮಾ. ನನ್ನ ಮೊದಲ ಸಿನಿಮಾನೇ ಸಿಕ್ಕಾಪಟ್ಟೆ ಹಾರರ್ ಆಗಿರಬೇಕು ಎಂದು ಬಯಸಿದ್ದೆ, ಸಿನಿಮಾ ಹಾಗೆಯೇ ಬಂದಿದೆ ಎಂಬ ಖುಷಿಯಲ್ಲಿದ್ದಾರೆ ನಿರ್ಮಾಪಕ ಚೌಧರಿ.

  • Mantram On December 1

    pallavi raju in mantram

    The special horror film Mantram, which was to release this Friday will however be releasing on December 1. Mantram is one of the few films by newcomers which has enticed the audience before its release. The special news about this film since the beginning has been the shooting location.

    It was shot in Daulat Mahal in Raichur. This centuries old house is said to be 300 years old and no one lives in it for at least 100 years. The film team partly refurbished the house to shoot in it. During the shooting the film team experienced many paranormal activities there adding to the mystery about the house. The film was announced to be released in the last week of November but it has been postponed to December 1 now.

    The film stars Shamanth Shetty and Pallavi Raju. The film is directed by debutante SS Sajjan and produced by Amar Choudary. 

  • Mantram Review; Chitraloka Rating 3/5

    mantram movie review

    Though it is a horror film, Mantram has a very good message for the society which you do not expect in such films. Apart from scaring people with ghost scenes, the film also has an emotional drama that show the negative side of the society and also human life. Little carelessness can lead to great disasters, the film explains. But it does it with the help of horror. That is its speciality. It is not an easy thing to do. Director SS Sajjan has managed to do a great job in bringing together two kinds of narration into one. 

    The first half of the film is about the strange things happening in an old and large house. A newly married husband and wife are romancing but unknown to them there is a ghost lurking. The ghost also beings to get into the bodies of other family members. When they seek help they come to know that the ghost is neither good or bad. The priest says that he has never encountered anything like this ghost before in his life. A Muslilm Mouli and a Christian church father also try to help him. But the strange things begin to become stranger. The brother of the heroine and his friends come to the village to help the family. But they too fall into trouble.

    The second half of the film changes the narrative completely. It would be best enjoyed on screen. Suffice to say that it is one of the best stories to be seen in Kannada films. It calls for a strong stomach to see this story in the second half. But it is perfect match for the horror story that comes before it. In the end there is a heat wrenching incident and the message given to the audience is good. 

    There are a lot of newcomers in the film including the director and producer. Sajjan and Amar Choudary have decided to make a good film with a message and they should be appreciated for it. There are also a lot of new actors in the film. Gaurish Akki plays a small but significant role. Ravi Basrur gives good music. Mantram is an unusual kind of horror film. It deserves to be appreciated for the stand it takes against a dangerous social problem in India. There are no solutions in sight but the film raises excellent questions about it. 

  • ಬೆಚ್ಚಿ..ಬೆದರಬೇಕಾ.. ಮಂತ್ರಂ ನೋಡಿ..

    mantram is a horror journey

    ಮಂತ್ರಂ. ಕನ್ನಡದಲ್ಲಿ ಹಾರರ್ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ. ಟ್ರೇಲರ್ ಮೂಲಕವೇ ಸದ್ದು ಮಾಡಿದ ಚಿತ್ರ ಥಿಯೇಟರ್‍ಗೆ ಎಂಟ್ರಿ ಕೊಟ್ಟಿದೆ. ಹೊಸಬರೇ ಮಾಡಿರುವ ಚಿತ್ರ ಭಯ ಹುಟ್ಟಿಸಿರುವುದಂತೂ ಸತ್ಯ.

    ಟ್ರೇಲರ್ ನೋಡಿದವರಿಗೆ ನಾಯಕಿ ಸುಂದರಿಯಾಗಿದ್ದಾಳೆಂದು ಅನಿಸುವುದೇ ಇಲ್ಲ ಎನ್ನುವುದು ಚಿತ್ರ ನಿರ್ದೇಶಕರು ಹಾಗೂ ಪಲ್ಲವಿಗೆ ಸಿಕ್ಕಿರುವ ಕಾಂಪ್ಲಿಮೆಂಟು. ನಾಯಕಿಯ ಧ್ವನಿಯಂತೂ ಬೆಚ್ಚಿ ಬೀಳಿಸುವ ಹಾಗಿದೆ.

    5 ತ್ರಿಶೂಲಗಳ ಕಥೆ ಏನು..? ಅವಳೇಕೆ ಹಾಗಿರುತ್ತಾಳೆ..? ಅದು ದೆವ್ವಾನಾ..? ಅಥವಾ ಇದು ಸೈಕಾಲಜಿಕಲ್ ಥ್ರಿಲ್ಲರ್ ಮೂವಿನಾ..? ಸೇಡಿನ ಕಥೆನಾ..? ಮಾಟ, ಮಂತ್ರ ದೇವರ ಆಟಾನಾ..? ಇಷ್ಟೆಲ್ಲ ಪ್ರಶ್ನೆಗಳೂ ಏಕಕಾಲಕ್ಕೆ ಉದ್ಭವವಾಗಿವೆ. 

    ಬಹುಶಃ ಇಷ್ಟು ಪ್ರಶ್ನೆಗಳು ಮೂಡಿರುವುದರಲ್ಲೇ ಚಿತ್ರದ ನಿರ್ದೇಶಕರ ಸಕ್ಸಸ್ ಇದೆ. ಭಯಬೀಳೋಕೆ ಹೆದರದೇ ಇರುವವರು ಈ ವಾರ ಮಂತ್ರಂ ನೋಡಬಹುದು. ಎಸ್.ಎಸ್. ಸಜ್ಜನ್ ಎಂಬ ಹೊಸ ಹುಡುಗನ ಸಾಹಸಕ್ಕೆ, ಅಮರ್ ಎಂಬ ಹೊಸ ನಿರ್ಮಾಪಕರ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಬಹುದು.

    Related Articles :-

    ರಿಯಲ್ ಭೂತಬಂಗಲೆಯಲ್ಲಿ ರೀಲ್ ಭೂತ..!

    Mantram On December 1

  • ಮಂತ್ರಂ.. ರಿಯಲ್ ಹಾರರ್ ಸಿನಿಮಾ

    mantram

    ಮಂತ್ರಂ, ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ. ಚಿತ್ರದ ಟ್ರೇಲರ್ ನೋಡಿಯೇ ಬೆಚ್ಚಿ ಬಿದ್ದವರಿಗೆ ಇನ್ನೊಂದು ಸಂಗತಿ ಗೊತ್ತಿರಲಿ. ಇದು ರೀಲ್ ಸಿನಿಮಾ ಆದರೂ, ಕಥೆ ರಿಯಲ್. ಇದು ಕಾಲ್ಪನಿಕ ಕಥೆಯಲ್ಲ. ಸತ್ಯ ಘಟನೆ ಆಧರಿಸಿ ತೆಗೆದಿರುವ ಚಿತ್ರ.

    ಚಿತ್ರದ ಬಹುಪಾಲು ಶೂಟಿಂಗ್ ನಡೆದಿರೋದು ರಾಯಚೂರಿನ ದೌಲತ್ ಮಹಲ್‍ನಲ್ಲಿ. ಸುಮಾರು 300 ವರ್ಷಗಳ ಇತಿಹಾಸವಿರುವ ಬಂಗಲೆಯಲ್ಲಿನ ರಹಸ್ಯ ಭೇದಿಸುವ ಕಥೆಯೇ ಮಂತ್ರಂ.

    ಚಿತ್ರದಲ್ಲಿ 3 ತ್ರಿಶೂಲಗಳಿಗೆ. 3 ತ್ರಿಶೂಲಗಳಿಗೂ ಒಂದೊಂದು ಅರ್ಥವಿದೆ. ಅದನ್ನು ತಿಳಿದುಕೊಳ್ಳೋಕೆ ನೀವು ಸಿನಿಮಾ ನೋಡಲೇಬೇಕು. ಎಸ್.ಎಸ್. ಸಜ್ಜನ್ ನಿರ್ದೇಶನದ ಚಿತ್ರಕ್ಕೆ, ಅಮರ್ ಚೌಧರಿ ನಿರ್ಮಾಪಕರು. ಮೂಲತಃ ಚಿನ್ನದ ವ್ಯಾಪಾರಿಗಳಾದ ಅವರಿಗೆ ಇಷ್ಟವಾಗಿದ್ದು ಸಜ್ಜನ್ ಅವರ ಮೇಕಿಂಗ್ ಸ್ಟೈಲ್.

    ಚಿತ್ರದ ನಾಯಕ ಮಣಿಶೆಟ್ಟಿ. ಚಿತ್ರದ ನಾಯಕಿ ಪಲ್ಲವಿ ನಾಗರಾಜ್. ನೋಡಲು ಸುಂದರಿಯಾದರೂ, ಚಿತ್ರದ ಟ್ರೇಲರ್‍ನಲ್ಲಂತೂ ಭಯಾನಕವಾಗಿ ಕಾಣುತ್ತಾರೆ. ಧ್ವನಿಯನ್ನೂ ಮಾರ್ಪಾಡು ಮಾಡಿಕೊಂಡಿರುವ ಪಲ್ಲವಿಗೆ ಮಂತ್ರಂ ಚಿತ್ರದ ಮೇಲೆ ಭಾರಿ  ನಿರೀಕ್ಷೆಯಿದೆ.