` niveditha shivarajkumar, - chitraloka.com | Kannada Movie News, Reviews | Image

niveditha shivarajkumar,

  • 'Honeymoon' Web-Series Produced By Shivanna, His Daughter Nivedita shot in Alleppey

    honeymoon web series produced by shivanna

    Century star Shivarajkumar who has turned producer through his home banner 'Sree Muttu Cine Services', which is being taken care by his daughter Nivedita Shivarajkumar, initially started with small screen venture titled 'Manasa Sarovara' and then took up web-series in association with RJ turned director Pradeep's Sakkath Studio.

    Their second Kannada web-series titled 'Honeymoon' became the first ever web-series to be shot in Kerala's Alleppey. It will also feature several Malayalam actors in the web-series long with Nagabhushan and Sanjana Anand in the lead.

    Cinematographer Srisha Koduvalli who worked for super hit films such as Bahaddur, Bharjari and Yajamana has worked for the his series, for which Vasuki Vaibhav who has scored music for it.

    The Honeymoon team expressed its gratitude to Alleppey DC Suhas, who hails from Mandya, for all the support during the shooting of the series. The team plans to release the series following pending shooting in Bengaluru and after the conclusion of 'Hate You Romeo' series.

     

  • ದೊಡ್ಮನೆಯ ದೊಡ್ಡ ಸುದ್ದಿ

    big news from dodmane

    ಶಿವರಾಜ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೊಡಕ್ಷನ್ ಹೌಸ್ ಆರಂಭಿಸುತ್ತಿರುವ ಸುದ್ದಿಯನ್ನು ಇದೇ ಚಿತ್ರಲೋಕದಲ್ಲಿ ಓದಿದ್ದೀರಷ್ಟೆ. ಇದು ಅದೇ ಸುದ್ದಿಯ ಅಪ್​ಡೇಟ್. ಈ ಪ್ರೊಡಕ್ಷನ್ ಹೌಸ್ ಮೂಲಕ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ.

    ಅಂಡಮಾನ್ ಸಿನಿಮಾದಲ್ಲಿ ಅಪ್ಪನ ಜೊತೆ ನಟಿಸಿದ್ದ ನಿವೇದಿತಾ, ಮಾನಸ ಸರೋವರ ಎಂಬ ಧಾರಾವಾಹಿಗೆ ನಿರ್ಮಾಪಕಿಯಾಗುತ್ತಿದ್ದಾರೆ.     ಶ್ರೀ ಮುತ್ತು ಸಿನಿ ಸರ್ವಿಸಸ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಧಾರಾವಾಹಿ ಫೀಲ್ಡಿಗಿಳಿಯುತ್ತಿದ್ದಾರೆ ನಿವೇದಿತಾ. ಪ್ರೊಡಕ್ಷನ್ ಹೌಸ್​ಗೆ ಕಂಠೀರವ ಸ್ಟುಡಿಯೋದಲ್ಲಿ ಶ್ರೀಕಾರ ಬೀಳುತ್ತಿದೆ.

    Related Articles :-

    ಶಿವಣ್ಣ ಕುಟುಂಬದ ಹೊಸ ಸಾಹಸ

     

  • ನೀನೇ ಸಾಕಿದಾ ಗಿಣಿ.. ಕ್ಲೈಮಾಕ್ಸ್ ನಂತರ ಏನಾಯ್ತು..?

    is manasa sarovara sequel to movie

    ಮಾನಸ ಸರೋವರ ಹೆಸರಲ್ಲಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ, ಸೀರಿಯಲ್ ನಿರ್ಮಾಣಕ್ಕೆ ಕೈ ಹಾಕಿರೋದನ್ನು ಓದಿದ್ದೀರಷ್ಟೆ. ಆ ಕ್ಲಾಸಿಕ್ ಸಿನಿಮಾಗೂ, ಈ ಸೀರಿಯಲ್‍ಗೂ, ಏನು ನಂಟು ಎಂದವರಿಗೆ ಈಗ ಉತ್ತರ ಸಿಕ್ಕಿದೆ. ಮಾನಸ ಸರೋವರ ಚಿತ್ರದ ಕ್ಲೈಮಾಕ್ಸ್‍ನ ಮುಂದುವರಿದ ಭಾಗವೇ ಈ ಸೀರಿಯಲ್ ಅಂತೆ.

    ಮಾನಸ ಸರೋವರ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶ್ರೀನಾಥ್ ಹುಚ್ಚರಾಗುತ್ತಾರೆ. ಅಲ್ಲಿಂದ ಈ ಕಥೆ ಶುರುವಾಗಲಿದೆ. ಸೀರಿಯಲ್ ನಿರ್ಮಾಣಕ್ಕೂ, ಸಿನಿಮಾಗೂ ವ್ಯತ್ಯಾಸವಿದೆ. ಸೀರಿಯಲ್‍ಗೆ ತಕ್ಕಂತೆ ಕಥೆ ಹೆಣೆಯಲಾಗಿದೆ ಎಂದಿದ್ದಾರೆ ನಿವೇದಿತಾ.

    ತಾನು ನಿರ್ಮಾಪಕಿಯಾಗಲು ಅಜ್ಜಿ ಪಾರ್ವತಮ್ಮನವರೇ ಸ್ಫೂರ್ತಿ ಎನ್ನುವ ನಿವೇದಿತಾಗೆ ನಟನೆಯ ಬಗ್ಗೆ ಆಸಕ್ತಿ ಇಲ್ಲ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳನ್ನೂ ನಿರ್ಮಿಸುವ ಕನಸಿದೆ ಎಂದಿದ್ದಾರೆ ನಿವೇದಿತಾ. ಶುಭವಾಗಲಿ.

    Related Articles :-

    ಶಿವಣ್ಣ ಕುಟುಂಬದ ಹೊಸ ಸಾಹಸ

  • ಮತ್ತೆ ಮಾನಸ ಸರೋವರದಲ್ಲಿ ಹಳೇ ಜೋಡಿ..

    hit pair of manasa sarovara

    ಮಾನಸ ಸರೋವರ.. ಅದು ಪುಟ್ಟಣ್ಣ ಕಣಗಾಲ್ ಅವರ ಕ್ಲಾಸಿಕ್ ಚಿತ್ರ. ಶ್ರೀನಾಥ್ ವೃತ್ತಿಜೀವನದ ಅತ್ಯುನ್ನತ ಚಿತ್ರವೂ ಹೌದು. ಆ ಚಿತ್ರದ ಟೈಟಲ್​ನ್ನೇ ಇಟ್ಟುಕೊಂಡು ಧಾರಾವಾಹಿ ನಿರ್ಮಾಣವಾಗುತ್ತಿದೆ. ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಶ್ರೀನಾಥ್ ಹಾಗೂ ಪದ್ಮಾವಾಸಂತಿ ಹಾಗೂ ರಾಮಕೃಷ್ಣ ನಟಿಸುತ್ತಿದ್ದಾರೆ. 

    ಈ ಧಾರಾವಾಹಿಯ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್. ಶಿವರಾಜ್ ಕುಮಾರ್ ಫ್ಯಾಮಿಲಿ ನಿರ್ಮಾಣದ ಮೊದಲ ಧಾರಾವಾಹಿಯೂ ಇದೆ. ರಾಮ್ ಜೈಶೀಲ್ ವೈದ್ಯ ಈ ಸೀರಿಯಲ್​ನ ನಿರ್ದೇಶಕ. 

    ಧಾರಾವಾಹಿಯ ಕಥೆಯೂ ಅದೇ ರೀತಿ ಇರುತ್ತಾ..? ಶ್ರೀನಾಥ್ ಮಾನಸಿಕ ವೈದ್ಯರಾಗಿ, ಪದ್ಮಾವಾಸಂತಿ ಹುಚ್ಚಿಯಾಗಿ, ರಾಮಕೃಷ್ಣ ಪ್ರೀತಿ ಕದಿಯುವ ತರುಣನಾಗಿರ್ತಾರಾ..? ಏನ್ ಕಥೆ..? ಧಾರಾವಾಹಿಗೇ ಕಾಯಬೇಕು.

    Related Articles :-

    ದೊಡ್ಮನೆಯ ದೊಡ್ಡ ಸುದ್ದಿ

    ಶಿವಣ್ಣ ಕುಟುಂಬದ ಹೊಸ ಸಾಹಸ