`ಬಟರ್ ಫ್ಲೈ' ಚಿತ್ರದಲ್ಲಿ ಎಲ್ಲಿ ಅವರಾಮ್ ಎಂಬ ಸ್ವೀಡನ್ ನಟಿ ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಪರೂಲ್ ಯಾದವ್. ಒರಿಜಿನಲ್ ಕ್ವೀನ್ ಚಿತ್ರದಲ್ಲಿ ಲಿಸಾ ಹೇಡನ್ ನಿರ್ವಹಿಸಿದ್ದ ಪಾತ್ರ ಎಲ್ಲಿ ಅವರದ್ದು. ಭಾರತೀಯ ನಟಿಯರಾದರೆ, ಅಷ್ಟೋ ಇಷ್ಟೋ ಕನ್ನಡ ಕಿವಿಗಾದರೂ ಬಿದ್ದಿರುತ್ತೆ. ಆದರೆ, ಈಕೆ ಸಂಪೂರ್ಣ ವಿದೇಶಿ. ಆದರೆ, ಈಕೆಗೆ ಕನ್ನಡ ತುಂಬಾನೇ ಇಷ್ಟವಾಗಿದೆ.
ನಾನು ಯುರೋಪಿಯನ್ ಆದರೂ, ಚಿತ್ರತಂಡ ನನಗೆ ಚೆನ್ನಾಗಿ ಕನ್ನಡ ಕಲಿಸುತ್ತಿದೆ. ನನಗೆ ಬೆಂಗಳೂರಿನಲ್ಲಿರುವ ಫೀಲ್ ಆಗುತ್ತಿದೆ ಎಂದಿದ್ದಾರೆ ಎಲ್ಲಿ. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೇಳಿತಿಳಿದುಕೊಂಡಿದ್ದಾರೆ. ಪುನೀತ್ ಡ್ಯಾನ್ಸ್ ಇಷ್ಟವಾಗಿದೆ. ಬಾಹುಬಲಿ ಅವರ ಫೇವರಿಟ್ ಚಿತ್ರವಂತೆ. ರಜಿನಿಕಾಂತ್ ಅವರ ಕಾಲಾ ಚಿತ್ರವನ್ನು ಕಾಯುತ್ತಿದ್ದೇನೆ ಎನ್ನುವ ಎಲ್ಲಿಗೆ, ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸುವ ಆಸಕ್ತಿಯಿದೆ.