` ambi ninage vaisaithu - chitraloka.com | Kannada Movie News, Reviews | Image

ambi ninage vaisaithu

  • ವಯಸ್ಸಾಗ್ತಾ ಆಗ್ತಾ ಚಿಕ್ಕೋರಾದ್ರು ಕಿಚ್ಚ ಸುದೀಪ್

    sudeep's young look

    ಸಿನಿಮಾಗಳಿಗೆ ಕಮಿಟ್ ಆದರೆ, ತಮ್ಮ ಲುಕ್ಕು, ಬಾಡಿ ಲಾಂಗ್ವೇಜ್ ಬದಲಿಸಿಕೊಳ್ಳೋ ವಿಚಾರದಲ್ಲಿ ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ. ಈ ಬಾರಿ ಸುದೀಪ್ ಬದಲಾಗಿರೋದು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೆ. ಆ ಚಿತ್ರದಲ್ಲಿ ಸುದೀಪ್ 80ರ ದಶಕದ ಯುವಕನಂತೆ ಕಾಣಬೇಕು. ಏಕೆಂದರೆ, ಅದು ಅಂಬರೀಶ್ ನಿರ್ವಹಿಸುತ್ತಿರುವ ಪಾತ್ರದ ಯಂಗ್ ವರ್ಷನ್.

    ಆ ಚಿತ್ರಕ್ಕಾಗಿ ಸುದೀಪ್ ಅದ್ಯಾವ ಮಟ್ಟಿಗೆ ಬೆವರು ಹರಿಸಿದ್ದಾರೆಂದರೆ, 10 ಕೆಜಿ ತೂಕ ಕಳೆದುಕೊಂಡಿದ್ದಾರೆ. 10 ಕೆಜಿ ದೇಹದ ತೂಕ ಇಳಿಸಿಕೊಳ್ಳೋದು ಸುಲಭದ ಮಾತಲ್ಲ. ವಿಶೇಷ ಡಯಟ್ ಮಾಡಿರುವ ಸುದೀಪ್, ಹಳ್ಳಿ ಯುವಕನ ಲುಕ್ ಪಡೆದುಕೊಳ್ಳೋಕೆ ಒಂದಿಷ್ಟು ಸರ್ಕಸ್‍ಗಳನ್ನೂ ಮಾಡಿದ್ದಾರೆ. ಟೋನ್ ಮಾಡಿಸಿಕೊಂಡಿದ್ದಾರೆ.

    ಈ ಎಲ್ಲ ಸಾಹಸಗಳ ಎಫೆಕ್ಟ್, ಈಗ ಸುದೀಪ್ ಇನ್ನಷ್ಟು ಮತ್ತಷ್ಟು ಯುವಕರಂತೆ ಕಾಣಿಸುತ್ತಿದ್ದಾರೆ. 30 ವರ್ಷ ಚಿಕ್ಕೋರಾಗಿದ್ದಾರೆ..  25 ರ ಹರೆಯದ ಹುಡುಗನಂತೆ ಕಾಣಿಸುತ್ತಿದ್ದಾರೆ ಅನ್ನೋದು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಮಾತು. 

    ಸುದೀಪ್‍ರ ಈ ಹೊಸ ಲುಕ್‍ನ್ನು ನೀವೂ ನೋಡಿ. ನಿಮಗೆ ಲವ್ವಾದ್ರೆ ನಾವು ಜವಾಬ್ದಾರರಲ್ಲ.

  • ವಯಸ್ಸಾದ ಪಾತ್ರದಲ್ಲಿ ಅಂಬಿ ಎಂಜಾಯಿಂಗ್

    ambi enjoying his shooting time

    ಅಂಬಿ ನಿಂಗೆ ವಯಸ್ಸಾಯ್ತೋ.. ರೆಬಲ್‍ಸ್ಟಾರ್ ಅಂಬರೀಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ. ಅಂಬರೀಷ್, ಸೆಟ್‍ನಲ್ಲಿ ಯಾವಾಗಲೂ ಖುಷಿಖುಷಿಯಾಗಿರುವ ನಟ. ಆದರೆ, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಸೆಟ್‍ನಲ್ಲಿ ಅಂಬಿ ಕ್ಷಣ ಕ್ಷಣವನ್ನೂ ಎಂಜಾಯ್ ಮಾಡುತ್ತಿದ್ದಾರೆ. 

    ಅಂಬರೀಷ್‍ಗೆ ಚಿತ್ರದ ಸ್ಕ್ರಿಪ್ಟ್ ಸಿಕ್ಕಾಪಟ್ಟೆ ಇಷ್ವವಾಗಿಬಿಟ್ಟಿದೆ. ಹೀಗಾಗಿ ನಿರ್ದೇಶಕ ಗುರುದತ್ತ ಗಾಣಿಗ ಜೊತೆ ಚಿತ್ರೀಕರಣದ ಪ್ರತಿ ಹಂತವನ್ನೂ ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ.

     

  • ವ್ಯಾಯಾಮ ಹೇಳಿಕೊಡುತ್ತಿದ್ದಾರೆ ಅಂಬರೀಷ್

    ambi is gym trainer

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಅಂಬರೀಷ್ & ಸುದೀಪ್ ಕಾಂಬಿನೇಷನ್ ಎಂಬುದೇ ಸೆನ್ಸೇಷನ್ ಸೃಷ್ಟಿಸಿದೆ. ಜೊತೆಗೆ, ಅಂಬರೀಷ್ ಅವರು ಅಭಿಮಾನಿಗಳಿಗಾಗಿಯೇ ಒಂದು ಪತ್ರ ಬರೆದು, ಕುತೂಹಲ ಮತ್ತು ನಿರೀಕ್ಷೆ ಎರಡನ್ನೂ ಹೆಚ್ಚಿಸಿಬಿಟ್ಟಿದ್ದಾರೆ.

    ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ಅಂಬರೀಷ್ ಅವರದ್ದು ಸ್ಟಂಟ್‍ಮ್ಯಾನ್ ಪಾತ್ರ. ನಿವೃತ್ತಿಯಾದರೂ ವೃತ್ತಿ ಬಿಡಲು ಇಷ್ಟವಿರಲ್ಲ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಭಿಮಾನದಿಂದ ಬದುಕುವ ಅಂಬಿ, ಜಿಮ್ ಟ್ರೈನರ್ ಆಗಿ ಕೆಲಸ ಮುಂದುವರೆಸುತ್ತಾರೆ. ಈ ಭಾಗದ ಚಿತ್ರೀಕರಣ ಈಗ ಜೆಪಿ ನಗರದ ಜಿಮ್‍ವೊಂದರಲ್ಲಿ ಶುರುವಾಗಿದೆ. 

    ಗುರುದತ್ ಗಾಣಿಗ ಎಂಬುವರು ನಿರ್ದೇಶಿಸುತ್ತಿರುವ ಚಿತ್ರ, ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ಬರುತ್ತಿದೆ. ನಿರ್ಮಾಪಕರು ಜಾಕ್ ಮಂಜು. ಅಂಬಿಗೆ ಸುಹಾಸಿನಿ ನಾಯಕಿ.

  • ಸುದೀಪ್‍ಗೆ ಸುಮಲತಾ ಥ್ಯಾಂಕ್ಯೂ ಎಂದಾಗ..

    sumalatha praises sudeep

    ಅಂಬಿ ಮಾಮಂಗೆ ಆರೋಗ್ಯ ಆಗಾಗ್ಗೆ ಕೈ ಕೊಡುತ್ತಲೇ ಇತ್ತು. ಸಹಕರಿಸ್ತಾ ಇರಲಿಲ್ಲ. ಆದರೆ, ಸಿನಿಮಾಗೆ ಎಲ್ಲಿಯೂ ತೊಂದರೆ ಮಾಡಲಿಲ್ಲ. ಬದಲಿಗೆ ಇಡೀ ಸಿನಿಮಾ ತಂಡಕ್ಕೆ ಅವರೇ ಹುರುಪು ತುಂಬಿದರು. ಶಕ್ತಿ ತುಂಬಿದರು. ನಿಮ್ಮೊಂದಿಗೆ ಸಿನಿಮಾ ಮಾಡುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಯೂ ಮಾಮಾ..

    ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ನಿರ್ಮಾಪಕರೂ ಆಗಿರುವ ಸುದೀಪ್ ಇಂಥಾದ್ದೊಂದು ಟ್ವೀಟ್ ಮಾಡಿದ್ರು. ಎಷ್ಟೆಂದರೂ 14 ವರ್ಷಗಳ ನಂತರ ಅಂಬರೀಷ್ ಸೋಲೋ ಹೀರೋ ಆಗಿ ನಟಿಸಿರುವ ಸಿನಿಮಾ ಇದು. ಗುರುದತ್ ಗಾಣಿಗ ಅನ್ನೋ ಹೊಸ ಹುಡುಗ ನಿರ್ದೇಶಿಸಿರುವ ಸಿನಿಮಾ.

    ಅಂಬಿಯ ಈ ಟ್ವೀಟ್ ನೋಡುತ್ತಿದ್ದಂತೆಯೇ ಸುಮಲತಾ ಅವರ ರಿಯಾಕ್ಷನ್ ಹೀಗಿತ್ತು. ಅಂಬಿಯನ್ನು ಅಂಥಾದ್ದೊಂದು ಪಾತ್ರ ಮಾಡಲು ಪ್ರೇರೇಪಿಸಿದ್ದಕ್ಕೆ ಥ್ಯಾಂಕ್ಯೂ. ಅಂಬಿಯ ಇದುವರೆಗಿನ ಎಲ್ಲ ಚಿತ್ರಗಳನ್ನು ನೋಡಿದ್ರೆ, ಇದು ಅವರ ದಿ ಬೆಸ್ಟ್ ಎನಿಸುತ್ತೆ. ಅಂಥಾದ್ದೊಂದು ಸಿನಿಮಾ ಮಾಡಿದ್ದಕ್ಕೆ ನೀನು ಗರ್ವ ಪಡಬೇಕು ಎಂದರು ಸುಮಲತಾ.

    ಸುದೀಪ್ ಸುಮಲತಾ ಅವರ ಪ್ರೀತಿಯ ಮಾತಿಗೆ ಹೇಳಿದ್ದು ಒಂದೇ ಮಾತು. `ಥ್ಯಾಂಕ್ಯೂ ಅಕ್ಕಾ, ಇದು ನನಗೆ ಸಿಕ್ಕ ಗೌರವ'. 

    ಸುದೀಪ್‍ಗೆ ಗೌರವ ತಂದುಕೊಟ್ಟ, ಸುಮಲತಾಗೆ ಇಷ್ಟವಾದ, ಚಿತ್ರರಂಗಕ್ಕೆ ಚಿತ್ರರಂಗವೇ ಕಾತುರದಿಂದ ಎದುರು ನೋಡುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ.. ಇದೇ ವಾರ ರಿಲೀಸ್. 

  • ಸುಹಾಸಿನಿಗೆ ವಯಸ್ಸಾಗಿದ್ರೂ.. ಅದೇ ಬಂಧನದ ನಂದಿನಿ

    suhasini remembers bandhan movie character

    ತಮಿಳು, ತೆಲುಗಿಗೆ ಹೋಲಿಸಿದರೆ, ಸುಹಾಸಿನಿ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಚಿತ್ರಗಳಲ್ಲಿ. ಆದರೆ, ನಟಿಸಿದ ಚಿತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ವಿಶೇಷ. ಬೆಂಕಿಯಲ್ಲಿ ಅರಳಿದ ಹೂವು, ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಸುಪ್ರಭಾತ, ಹಿಮಪಾತ, ಹೊಸ ನೀರು, ಹೆಂಡ್ತಿಗೇಳ್ತೀನಿ.. ಹೀಗೆ ಹಲವು ವಿಶೇಷಗಳಿವೆ. ಆದರೆ, ಈಗಲೂ ಸುಹಾಸಿನಿಗೆ ಕಾಡೋದು ಬಂಧನ ಚಿತ್ರದ ನಂದಿನಿ ಪಾತ್ರವಂತೆ.

    ಅಂದಹಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಪಾತ್ರದ ಹೆಸರು ನಂದಿನಿ. ಚಿತ್ರದಲ್ಲಿ ನಟಿಸೋವಾಗ ಬಂಧನದ ನಂದಿನಿ ನೆನಪಾಗುತ್ತಲೇ ಇದ್ದಳು ಅಂತಾರೆ ಸುಹಾಸಿನಿ. ಅಂಬರೀಷ್ ಆತ್ಮೀಯ ಸ್ನೇಹಿತ. ಪತಿ ಮಣಿರತ್ನಂ, ಚಿಕ್ಕಪ್ಪ ಕಮಲ್‍ಹಾಸನ್ ಅವರಿಗೂ ಆಪ್ತರು. ಆದರೆ, ಅವರ ಜೊತೆ ನಟಿಸಿದ್ದು ಎರಡೇ ಸಿನಿಮಾಗಳಲ್ಲಿ. ಶಾಟ್ ಶುರುವಾಗುವವರೆಗೆ ತಮಾಷೆ ಮಾಡುತ್ತಾ, ಕ್ಯಾಮೆರಾ ಆನ್ ಆದೊಡನೆ ಸೀರಿಯಸ್ ಆಗುವ ಅಂಬರೀಷ್ ಸದಾ ನಗುತ್ತಾ, ನಗಿಸುತ್ತಾ ಇರುವ ವ್ಯಕ್ತಿ ಅಂತಾರೆ ಸುಹಾಸಿನಿ.

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಅವರ ಮಗನಿಗಿಂತ ಕಿರಿಯ ವಯಸ್ಸಿನ ನಿರ್ದೇಶಕನ ಜೊತೆ ಕೆಲಸ ಮಾಡುತ್ತಿದ್ದಾರೆ. ಅದೇ ನನಗೆ ಸ್ಪೆಷಲ್. ಚಿತ್ರದ ಪಾತ್ರವೂ ಸ್ಪೆಷಲ್ಲಾಗಿಯೇ ಇದೆ ಅಂತಾರೆ ಸುಹಾಸಿನಿ.

    ಚಿತ್ರದಲ್ಲಿ ಯಂಗ್ ಸುಹಾಸಿನಿಯಾಗಿ ಶೃತಿ ಹರಿಹರನ್ ನಟಿಸುತ್ತಿದ್ದು, ಯಂಗ್ ಅಂಬರೀಷ್ ಆಗಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಗುರುದತ್ ಗಾಣಿಗ ಎಂಬ ಯುವಕನಿಗೆ ಇದು ಪ್ರಥಮ ಚಿತ್ರ. ಆತನ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿರುವುದು ಸುದೀಪ್. ಇದು ಜಾಕ್ ಮಂಜು ನಿರ್ಮಾಣದ ಸಿನಿಮಾ.

  • ಹೇ.. ಜಲೀಲ.. ಹಾಡಿನ ಹಿಂದಿನ ಕಥೆ..!

    hey jallela kanwarlaala

    ಹೇ.. ಜಲೀಲ.. ಕನ್ವರ್‍ಲಾಲ.. ಹಾಡು ಸೂಪರ್ ಹಿಟ್ಟಾಗಿದೆ. ಸಂಗೀತ ನೀಡಿದ ಅರ್ಜುನ್ ಜನ್ಯ, ಸಾಹಿತ್ಯ ಒದಗಿಸಿದ ಜೋಗಿ ಪ್ರೇಮ್ ಹಾಗೂ ಹಾಡಿದ ವಿಜಯ್ ಪ್ರಕಾಶ್.. ಮೂವರೂ ಹಾಡಿನ ಸಕ್ಸಸ್‍ನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಹಾಡಿನ ಯಶಸ್ಸಿನ ಜೊತೆಯಲ್ಲೇ ಹಾಡಿಗೂ ಒಂದು ಕಥೆಯಿದೆ.

    ಸಿನಿಮಾಗೆ ಈ ರೀತಿಯ ಹಾಡು ಬೇಕು ಎಂದಾಗ ಅದು ಮಂಡ್ಯ ಸ್ಟೈಲ್‍ನಲ್ಲೇ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಮೂಡಿಬಂತು. ಅದನ್ನು ಪ್ರೇಮ್ ಅವರಿಂದಲೇ ಬರೆಸಿದರೆ ಚೆಂದ ಎಂದು ಅಭಿಪ್ರಾಯಪಟ್ಟವರು ಸುದೀಪ್. ಪ್ರೇಮ್‍ಗೆ ಹಾಡು ಬರೆಯುವಂತೆ ಹೇಳಿದ್ದೂ ಅವರೇ. 

    ಜೋಗಿ ಪ್ರೇಮ್ ಅಂಬರೀಷ್‍ರ ದೊಡ್ಡ ಅಭಿಮಾನಿ. ಮಂಡ್ಯದವರೂ ಹೌದು. ಮಂಡ್ಯ ಶೈಲಿಯ ಕನ್ನಡದ ಮೇಲೆ ಅದ್ಬುತ ಹಿಡಿತವೂ ಇದೆ. ಜೊತೆಗೆ ಅಂಬರೀಷ್‍ರನ್ನು ಹತ್ತಿರದಿಂದ ಕಂಡವರು. ಇದೆಲ್ಲವನ್ನೂ ಪ್ರೇಮ್ ಹಾಡಿನಲ್ಲಿ ತುಂಬಿಕೊಟ್ಟಿದ್ದಾರೆ ಎಂದು ಖುಷಿಯಾಗುತ್ತಾರೆ ನಿರ್ಮಾಪಕ ಜಾಕ್ ಮಂಜು.

    ಈ ಹಾಡಿನ ಶೂಟಿಂಗ್‍ನ್ನು ಎರಡು ಬಾರಿ ಮುಂದೂಡಲಾಗಿತ್ತಂತೆ. ಎರಡೂ ಬಾರಿ ಅಂಬಿ ಆರೋಗ್ಯ ಕೈ ಕೊಟ್ಟಿತ್ತು. ಆದರೆ ಅಂಬರೀಷ್ ಸಿನಿಮಾವನ್ನು ಅದೆಷ್ಟು ಇಷ್ಟಪಟ್ಟಿದ್ದರು ಎಂದರೆ ಈ ಹಾಡಿಗೆ ತಮ್ಮ ಮಗ ಅಮರ್ ಜೊತೆ ರಿಹರ್ಸಲ್ ಮಾಡಿದ್ದರಂತೆ. 3ನೇ ಬಾರಿ ಶೂಟಿಂಗ್ ಪ್ಲಾನ್ ಆಗಿ ಶೂಟಿಂಗ್ ಶುರುವಾದಾಗ, ಅಂಬರೀಷ್ ಕಂಪ್ಲೀಟ್ ಆಗಿ ಸಿದ್ಧರಾಗಿಬಿಟ್ಟಿದ್ದರಂತೆ. 

    ಇಷ್ಟೆಲ್ಲ ಆಗಿ ಹಾಡು ಈಗ ಅಭಿಮಾನಿಗಳ ಎದೆಯಲ್ಲಿ ಪ್ರತಿಷ್ಠಾಪನೆಯಾಗಿಬಿಟ್ಟಿದೆ. ಅಂಬರೀಷ್ ಅವರ ಇಡೀ ವ್ಯಕ್ತಿತ್ವವೇ ಈ ಹಾಡಿನಲ್ಲಿದೆ.