ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರ ಬಾಕ್ಸಾಫೀಸ್‍ನಲ್ಲಿ ಝೂಮ್‍ನಲ್ಲಿ ಹೋಗ್ತಾ ಇದೆ. ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರೋದು ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಸೆಲಬ್ರಿಟಿಗಳೂ ಸಿನಿಮಾ ನೋಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಓರಿಯನ್ ಮಾಲ್‍ನಲ್ಲಿ ಸಿನಿಮಾ ನೋಡಿ ಅಂಬಿಯ ಅಭಿನಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಕೂಡಾ, ಕ್ರಿಕೆಟ್ ಮಧ್ಯೆಯೇ ಬಿಡುವು ಮಾಡಿಕೊಂಡು ಬಂದು ಸಿನಿಮಾ ನೋಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾ ನೋಡಿ, ಸೀದಾ ಅಂಬರೀಷ್ ಮನೆಗೇ ಹೋಗಿ ಸಿನಿಮಾ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. ಮಂಡ್ಯದ ಹೈದ ಚಿಕ್ಕಣ್ಣ ಕೂಡಾ ಅಂಬರೀಷ್ ಅಣ್ಣನ ಮನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿರ್ದೇಶಕ ಪವನ್ ಒಡೆಯರ್, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಯಶ್, ರಾಧಿಕಾ ಪಂಡಿತ್, ಭಾವನಾ ರಾವ್, ಭಾರತಿ ವಿಷ್ಣುವರ್ಧನ್, ಶರತ್ ಕುಮಾರ್, ವಿಜಯಲಕ್ಷ್ಮೀ ಸಿಂಗ್, ಹರ್ಷಿಕಾ ಪೂಣಚ್ಚ, ಕವಿರಾಜ್, ಟಿ.ಎಸ್.ನಾಗಾಭರಣ, ಬಿ.ಸರೋಜಾ ದೇವಿ, ರವಿಶಂಕರ್ ಗೌಡ..
ಪಟ್ಟಿ ತುಂಬಾ ದೊಡ್ಡದಿದೆ. ಅಂಬಿಯನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದವರೂ ಕಾಯುತ್ತಿದ್ದರು ಅನ್ನೋಕೆ ಇದೇ ಸಾಕ್ಷಿ.