ಸ್ಯಾಂಡಲ್‍ವುಡ್‍ನ ನಟಿಯರೆಲ್ಲ ಈಗ ತಾವು ಧರಿಸುತ್ತಿದ್ದ ಬಟ್ಟೆಗಳನ್ನು ಮಾರಾಟ ಮಾಡೋಕೆ ಮುಂದಾಗಿದ್ದಾರೆ. ಅವರಿಗೇನಪ್ಪಾ ಬಂತು ಹಳೇ ಬಟ್ಟೆ ಮಾರುವ ಕಷ್ಟ ಎಂದುಕೊಳ್ಳಬೇಡಿ. ಅವರು ಅದನ್ನು ಮಾಡ್ತಾ ಇರೋದು ಸಮಾಜ ಸೇವೆಗಾಗಿ. ಅವರ ಬಟ್ಟೆಗಳನ್ನು ಮಾರಿ ಬಂದ ಹಣವನ್ನು ಎನ್‍ಜಿಓಗಳಿಗೆ ನೀಡಿ ಸಮಾಜಸೇವೆಯಲ್ಲಿ ಕೈಜೋಡಿಸುವುದು ಅವರ ಪ್ಲಾನ್.
ಇಂಥಾದ್ದೊಂದು ಐಡಿಯಾ ಮೊದಲು ಹೊಳೆದಿದ್ದು ಶೃತಿ ಹರಹರನ್ ತಲೆಗೆ. ಹೀಗಾಗಿ ಹೆಚ್ಚು ಬಾರಿ ಧರಿಸದೇ ಇರುವ, ಫ್ಯಾನ್ಸಿ ಡ್ರೆಸ್‍ಗಳನ್ನು ಮಾರಾಟ ಮಾಡೋಕೆ ನಿರ್ಧರಿಸಿದ್ರು. ಅಷ್ಟೇ ಅಲ್ಲ, ಈ ಐಡಿಯಾವನ್ನು ಸಹನಟಿಯರ ಜೊತೆ ಹಂಚಿಕೊಂಡ್ರು. ಆಗ ಆ ಐಡಿಯಾಗೆ `ದಿ ವ್ಯಾನಿಟಿ ಟ್ರಂಕ್ ಸೇಲ್' ಅನ್ನೋ ರೂಪ ಸಿಕ್ತು.
ಈಗ ಈ ಹಳೆ ಬಟ್ಟೆ ಮಾರುವ ಕೆಲಸಕ್ಕೆ ಶೃತಿ ಹರಿಹರನ್ ಒಬ್ಬರೇ ಅಲ್ಲ, ಮೇಘನಾ ರಾಜ್, ಶ್ರದ್ಧಾ ಶ್ರೀನಾಥ್, ಮೇಘನಾ ಗಾಂವ್ಕರ್, ಸಂಯುಕ್ತಾ ಹೆಗ್ಡೆ, ಶಾನ್ವಿ ಶ್ರೀವಾತ್ಸವ್, ಸಂಯುಕ್ತಾ ಹೊರನಾಡು, ಸೋನು ಗೌಡ, ಮಾನ್ವಿತಾ ಹರೀಶ್, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಸಂಗೀತಾ ಭಟ್, ಪ್ರಜ್ಞಾ.. ಪಟ್ಟಿ ಇನ್ನೂ ಇದೆ. ಇವರೆಲ್ಲ ಕೈ ಜೋಡಿಸಿದ್ದಾರೆ.
ನವೆಂಬರ್ 12ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಹಳೆಬಟ್ಟೆ ಬ್ಯುಸಿನೆಸ್ ನಡೆಯಲಿದೆ. ಸಮಾಜಸೇವೆಯೂ.. ರೆಸಿಡೆನ್ಸಿ ರಸ್ತೆಯಲ್ಲಿರುವ ಬಿ ಹೈವ್ ವರ್ಕ್‍ಶಾಪ್‍ಗೆ ಹೋಗಿ. ನಿಮ್ಮ ನೆಚ್ಚಿನ ನಟಿಯರೂ ಸಿಗಬಹುದು.