` avane srimanarayana, - chitraloka.com | Kannada Movie News, Reviews | Image

avane srimanarayana,

 • ಶ್ರೀಮನ್ನಾರಾಯಣನಾದ ರಕ್ಷಿತ್ ಶೆಟ್ಟಿ

  avane srimannarayana launched

  ಕಿರಿಕ್ ಪಾರ್ಟಿಯ ನಂತರ ಹೆಚ್ಚೂ ಕಡಿಮೆ ಒಂದು ವರ್ಷ ವಿಶ್ರಾಂತಿ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಕಡೆಗೂ ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶ್ರಾಂತಿ ಎಂದರೆ, ವಿಶ್ರಾಂತಿಯೇನೂ ಅಲ್ಲ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಬ್ಯುಸಿಯಾಗಿದ್ದರು. ಅಷ್ಟೆ. ಆದರೆ, ಹೊಸ ಚಿತ್ರ ಯಾವುದೂ ಸೆಟ್ಟೇರಿರಲಿಲ್ಲ. 

  ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಾಯಕಿ ಶಾನ್ವಿ ಶ್ರೀವಾಸ್ತವ, ನಿರ್ದೇಶಕ ಸಚಿನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುನಿ, ಮೇಘನಾ ಗಾಂವ್ಕರ್ ಸೇರಿದಂತೆ ತಂಡದ ಸ್ನೇಹಿತರೆಲ್ಲ ಹಾಜರಿದ್ದು ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

  ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್‍ಗೆ ಜೋಡಿಯಾಗಿ ಇದು ಮೊದಲ ಸಿನಿಮಾ. ಇನ್ನು ಸಂಕಲನಕಾರರಾಗಿದ್ದ ನಿರ್ದೇಶಕ ಸಚಿನ್‍ಗೂ ಇದು ಮೊದಲ ಸಿನಿಮಾ. 80ರ ದಶಕದ ಕಥೆ ಹೊಂದಿರುವ ಚಿತ್ರಕ್ಕೆ, ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಆ ಡಿಸೈನ್‍ನ ಒಂದು ಲುಕ್‍ನಲ್ಲಿ ಶಾನ್ವಿ ಕಂಗೊಳಿಸುತ್ತಿದ್ದರು.

 • ಶ್ರೀಮನ್ನಾರಾಯಣನಿಗಾಗಿ ರಜನಿಕಾಂತ್ ಪೆಟ್ಟಾ ಆಫರ್ ಬಿಟ್ಟಿದ್ದ ರಕ್ಷಿತ್ ಶೆಟ್ಟಿ

  rakshit shetty dropped petta movie offer for avane srimnarayana

  ಅವನೇ ಶ್ರೀಮನ್ನಾರಾಯಣ, ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷೆಯ ಸಿನಿಮಾ. ಇದೊಂದು ಚಿತ್ರಕ್ಕಾಗಿ ಅವರು 3 ವರ್ಷಗಳ ಶ್ರಮವಹಿಸಿದ್ದಾರೆ. ಮಿಕ್ಕೆಲ್ಲ ಚಿತ್ರಗಳನ್ನೂ ಸೈಡಿಗಿಟ್ಟು, ಹಗಲೂ ರಾತ್ರಿ ಈ ಚಿತ್ರಕ್ಕಾಗಿ ನುಡಿದಿದ್ದಾರೆ. ಇಂತಹ ವೇಳೆಯಲ್ಲೇ ಅವರಿಗೆ ರಜನಿಕಾಂತ್ ಚಿತ್ರದ ಆಫರ್ ಸಿಕ್ಕಿದ್ದ ವಿಷಯವೂ ಹೊರಬಿದ್ದಿದೆ.

  ರಜನಿಕಾಂತ್ ಚಿತ್ರವೆಂದರೆ, ಅಲ್ಲೊಂದು ಪುಟ್ಟ ಪಾತ್ರವಾದರೂ ಸೈ, ಮಾಡೋಣ ಎನ್ನುವ ಕಲಾವಿದರೇ ಹೆಚ್ಚು. ಆದರೆ, ಪೆಟ್ಟಾ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕರೂ, ಅವನೇ ಶ್ರೀಮನ್ನಾರಾಯಣನಿಂದಾಗಿ ಪೆಟ್ಟಾ ಕೈಬಿಟ್ಟಿದ್ದಾರೆ ರಕ್ಷಿತ್ ಶೆಟ್ಟಿ.

  ಪೆಟ್ಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ರಕ್ಷಿತ್ ಶೆಟ್ಟಿ ಗೆಳೆಯರೂ ಹೌದು. ಕೊನೆಗೆ ರಕ್ಷಿತ್ ಕೈಬಿಟ್ಟ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ಗೆದ್ದಿದ್ದರು.

  ಇದೆಲ್ಲವನ್ನೂ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಈ ತಿಂಗಳ ಕೊನೆಯಲ್ಲಿ ರಿಲೀಸ್ 5 ಭಾಷೆಗಳಲ್ಲಿ ಆಗುತ್ತಿದೆ. ಸಚಿನ್ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ.

 • ಸಿನಿಮಾ ಒಂದು.. ಟೈಟಲ್ ನಾಲ್ಕು..!

  avane srimanarayana will have four different titles

  ಅವನೇ ಶ್ರೀಮನ್ನಾರಾಯಣ.. ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಬರಲಿದೆ. ಕುತೂಹಲ ಇರುವುದು ಟೈಟಲ್ ಬಗ್ಗೆ. 

  ಕನ್ನಡದಲ್ಲಿ ಅವನೇ ಶ್ರೀಮನ್ನಾರಾಯಣ ಎನ್ನುವುದು ಕ್ಯಾಚಿ ಟೈಟಲ್. ಭಕ್ತ ಪ್ರಹ್ಲಾದ ಸಿನಿಮಾದ ಸೂಪರ್ ಹಿಟ್ ಡೈಲಾಗ್‍ನಲ್ಲಿ ಅದೂ ಒಂದು. ತೆಲುಗಿನಲ್ಲಿಯೂ ಗೊಂದಲವೇನಿಲ್ಲ. ಅವನೇ ಎನ್ನುವುದನ್ನು ತೆಲುಗಿನಲ್ಲಿ ಹೇಳಿದರೆ ಆಯಿತು. 

  ಆದರೆ, ಅದೇ ಸ್ಟೈಲ್ ಬೇರೆ ಭಾಷೆಗೆ ಅನ್ವಯಿಸೋದಿಲ್ಲ. ಹೀಗಾಗಿ ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಬೇರೆಯದ್ದೇ ಟೈಟಲ್ ಇಡೋಕೆ ಚಿತ್ರತಂಡ ಸಿದ್ಧವಾಗಿದೆ. ಒಂದೊಂದು ಭಾಷೆಗೂ ಮೂರ್ನಾಲ್ಕು ಟೈಟಲ್‍ಗಳನ್ನು ರೆಡಿ ಮಾಡಿಕೊಂಡಿರುವ ಚಿತ್ರತಂಡ ಫೈನಲ್ ಟೈಟಲ್ ಯಾವುದು ಅನ್ನೋದನ್ನೂ ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಶೆಟ್ಟಿ ಔಟ್

  rakshit shetty quits social media

  ರಕ್ಷಿತ್ ಶೆಟ್ಟಿ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದವರು. ಸಾಮಾಜಿಕ ಜಾಲತಾಣಗಳನ್ನು ಸಿನಿಮಾಗೆ ಬಳಸಿಕೊಳ್ಳೋದು ಹೇಗೆಂದು ತೋರಿಸಿಕೊಟ್ಟ ಮೊದಲಿಗರಲ್ಲಿ ರಕ್ಷಿತ್ ಕೂಡಾ ಒಬ್ಬರು. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಕ್ಷಿತ್, ಇದ್ದಕ್ಕಿದ್ದಂತೆ ಟ್ವಿಟರ್‍ನಲ್ಲಿ ಸೈಲೆಂಟ್. ಪ್ರತಿ ದಿನ ಟ್ವಿಟರ್‍ನಲ್ಲಿ ಸಂವಾದಕ್ಕೆ ಸಿಗುತ್ತಿದ್ದ ರಕ್ಷಿತ್ ಈಗ ದಿಢೀರನೆ ನಾಪತ್ತೆ. ಏಕಿರಬಹುದು ಎಂದು ಹುಡುಕಿದಾಗ ಕಂಡಿದ್ದು ಅವನೇ ಶ್ರೀಮನ್ನಾರಾಯಣ.

  ಸಿನಿಮಾದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಗೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದೇ ಸಮಸ್ಯೆಯಾಗಿತ್ತಂತೆ. ಹೀಗಾಗಿ ಶೂಟಿಂಗ್‍ಗೆ ತೊಂದರೆಯಾಗದೇ ಇರಲಿ ಎಂದು ಸೋಷಿಯಲ್ ಮೀಡಿಯಾದಿಂದಲೇ ದೂರ ಹೋಗಿದ್ದಾರೆ. 

  ಹೆಚ್ಚು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡಷ್ಟೂ, ಚಾರ್ಲಿ ಹಾಗೂ ಅವನೇ ಶ್ರೀಮನ್ನಾರಯಣ ಚಿತ್ರಗಳ ಶೂಟಿಂಗ್‍ಗೆ ಪ್ರಾಬ್ಲಂ ಆಗುತ್ತಿತ್ತು. ಹೀಗಾಗಿ ಅವರು ತಾತ್ಕಾಲಿಕವಾಗಿ ದೂರ ಹೋಗಿದ್ದಾರೆ. ಶೂಟಿಂಗ್ ಮುಗಿದ ಮೇಲೆ ಮತ್ತೆ ಬರ್ತಾರೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಹಬ್ಬಕ್ಕೆ ಶಾನ್ವಿ ಶ್ರೀವಾಸ್ತವ್ ಲಕ್ಷ್ಮೀ ಕಟಾಕ್ಷ

  varmahalakshmi habba gift from avane srimananrayana

  ಅವನೇ ಶ್ರೀಮನ್ನಾರಾಯಣ ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನೇ ಮನೆ ಮನೆಗೆ ಕಳಿಸಿಕೊಟ್ಟಿದೆ. ಅದು ಶಾನ್ವಿ ಶ್ರೀವಾಸ್ತವ್ ರೂಪದಲ್ಲಿ. ಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಶಾನ್ವಿ ಶ್ರೀವಾಸ್ತವ್ ಅವರನ್ನು ಲಕ್ಷ್ಮೀ ಸ್ವರೂಪಿಯಾಗಿ ಚಿತ್ರಿಸಿ ಪೋಸ್ಟರ್ ರಿಲೀಸ್ ಮಾಡಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಗೌಡ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಮಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 • ಹ್ಯಾಂಡ್ಸಪ್.. ಇದು ಚರಿತ್ರೆ ಸೃಷ್ಟಿಸೋ ಅವತಾರ..

  hands up song creates sensation

  ಕೇಳಿ ಕಾದಿರುವ ಬಾಂಧವರೇ.. ಭುವಿಯಲ್ಲಿ ಅವನ ಅರಿತವರೇ.. ಎಂದು ಶುರುವಾಗುತ್ತೆ ಹಾಡು.. ಕಿಕ್ಕನ್ನು ಸೈಲೆಂಟಾಗಿ ಹೆಚ್ಚಿಸ್ತಾ ಹೋಗ್ತಾರೆ ಅಜನೀಶ್ ಲೋಕನಾಥ್.  ಹ್ಯಾಂಡ್ಸಪ್.. ಅದು ಅನವರತ.. ಎಂಬ ಕೋರಸ್ ಶುರುವಾಗುವ ಹೊತ್ತಿಗೆ ವಿಜಯ್ ಪ್ರಕಾಶ್ ಧ್ವನಿ ಹೃದಯವನ್ನು ಆವರಿಸಿಕೊಂಡುಬಿಡುತ್ತೆ. ಇದು ಚರಿತ್ರೆ ಸೃಷ್ಟಿಸೋ ಅವತಾರ.. ಎಂದು ನಾಯಕ ಸ್ಟೆಪ್ ಹಾಕುವ ಹೊತ್ತಿಗೆ.. ಹಾಡಿನಲ್ಲಿ ತಲ್ಲೀನರಾಗಿರುತ್ತಾರೆ.. ನೋಡುಗರು.. ಕೇಳುಗರು..

  ಇದು ಹ್ಯಾಂಡ್ಸಪ್ ಹಾಡಿನ ಝಲಕ್ಕು. ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೊದಲ ವಿಡಿಯೊ ಸಾಂಗ್ ‘ಹ್ಯಾಂಡ್ಸ್‌ ಅಪ್‌’ ಹಾಡು ಕೊಡುವ ಥ್ರಿಲ್ ಇದು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ‘ಹ್ಯಾಂಡ್ಸ್‌ ಅಪ್‌’ ಹಾಡಿನಲ್ಲಿ ಪೊಲೀಸ್‌ ಪಾತ್ರದಾರಿ ನಾರಾಯಣ ಕ್ಲಬ್‌ನಲ್ಲಿ ರೌಡಿಗಳ ಜೊತೆ ಕುಣಿಯುತ್ತಾನೆ.

  ಸಚಿನ್‌ ರವಿ ನಿರ್ದೇಶನದ ಶ್ರಮ ಹಾಡಿನುದ್ದಕ್ಕೂ ಎದ್ದು ಕಾಣುತ್ತದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery