ಅವನೇ ಶ್ರೀಮನ್ನಾರಾಯಣ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ಚಿತ್ರದ ಟ್ರೇಲರ್ನ್ನು ನೋಡಿ ನೋಡಿ ಆನಂದಿಸುತ್ತಿದ್ದಾರೆ. ವೀಕ್ಷಕರ ಸಂಖ್ಯೆ 9 ಮಿಲಿಯನ್ ದಾಟಿದೆ. ಲೈಕ್ಸ್ ಕೂಡಾ ಲಕ್ಷಗಳ ಲೆಕ್ಕದಲ್ಲಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ನಿರ್ದೇಶಕ ಸಚಿನ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲಿ ಗೆಲುವಿನ ಮುಗುಳ್ನಗೆ. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿರುವುದು ಚಿತ್ರರಂಗದವರು ಅದನ್ನು ಸ್ವಾಗತಿಸಿರುವ ರೀತಿ.
ದಕ್ಷಿಣ ಭಾರತದ ಸ್ಟಾರ್ ನಟರಾದ ಧನುಷ್, ನಾನಿ, ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಇದರ ಜೊತೆಯಲ್ಲೇ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧನುಷ್, ತಮಿಳು ನಟ :ರಕ್ಷಿತ್ ಶೆಟ್ಟಿ ತಂಡಕ್ಕೆ ಅಭಿನಂದನೆಗಳು. ಟ್ರೇಲರ್ನಲ್ಲಿ ಸಾಹಸ, ಫೈಟ್ಸ್ ಎಲ್ಲವೂ ಚೆನ್ನಾಗಿದೆ.
ನಾನಿ, ತೆಲುಗು ನಟ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ವಿಭಿನ್ನವಾಗಿದೆ. ದೃಶ್ಯಗಳು ಕೂಡ ಚೆನ್ನಾಗಿದೆ.
ಪುನೀತ್ ರಾಜ್‌ಕುಮಾರ್ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು.
ಕಿಚ್ಚ ಸುದೀಪ್ : ಚಿತ್ರ ತಂಡದ ಅದ್ಭುತ ಕೆಲಸ ಕಾಣುತ್ತಿದೆ. ಒಳ್ಳೆಯ ಟ್ರೇಲರ್
ರಿಷಬ್ ಶೆಟ್ಟಿ : ಗೆಳೆಯನ ಗೆಲುವಿನ ಸಂಭ್ರಮ ನೋಡಲು ಕಾಯುತ್ತಿದ್ದೇನೆ.
ಪ್ರಶಾಂತ್ ನೀಲ್ : ಟ್ರೇಲರ್ನಲ್ಲಿ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಹೊಸ ಇತಿಹಾಸ ಸೃಷ್ಟಿಸಲಿ
ವಿ.ಹರಿಕೃಷ್ಣ : ಅವನೇ ಶ್ರೀಮನ್ನಾರಾಯಣ ತುಂಬ ಹೊಸ ಅನುಭವ ನೀಡುತ್ತಿದೆ. ಪರ್ಫೆಕ್ಟ್ ಮತ್ತು ಎಕ್ಸಲೆಂಟ್
ಕೆಪಿ ಶ್ರೀಕಾಂತ್ : ಟ್ರೇಲರ್ ತುಂಬ ಕುತೂಹಲಕಾರಿಯಾಗಿದೆ. ಎಎಸ್ಎನ್ ತಂಡಕ್ಕೆ ಶುಭ ಹಾರೈಕೆಗಳು.
ಹೇಮಂತ್ ರಾವ್ : ರಿಲೀಸ್ವರೆಗೂ ಕಾಯಲು ಆಗುತ್ತಿಲ್ಲ. ಅಷ್ಟು ಕುತೂಹಲಕಾರಿಯಾಗಿದೆ
ತರುಣ್ ಸುಧೀರ್ : ಚಿತ್ರತಂಡಕ್ಕೆ ಸಿನಿಮಾ ಮೇಲಿರುವ ಪ್ಯಾಷನ್ ಎದ್ದು ಕಾಣುತ್ತಿದೆ. ಕನ್ನಡ ಚಿತ್ರರಂಗದ ಗೌರವವನ್ನು ಈ ಸಿನಿಮಾ ಎತ್ತಿ ಹಿಡಿಯಲಿದೆ
ವಿಜಯ್ ಕಿರಗಂದೂರು : ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಶುಭಾಶಯಗಳು
ನಿರೂಪ್ ಭಂಡಾರಿ : ಚಿತ್ರದ ಪ್ರತಿ ಫ್ರೇಮ್ನಲ್ಲಿಯೂ ಪ್ಯಾಷನ್ ಮತ್ತು ಶ್ರಮ ಕಣ್ಣಿಗೆ ಕಾಣುತ್ತಿದೆ
ಸಿಂಪಲ್ ಸುನಿ : ಇದರ ರೀಚ್ ನೋಡಿದರೆ, ಹಾಲಿವುಡ್ಗೂ ಡಬ್ ಮಾಡಬಹುದು.
ಡ್ಯಾನಿಷ್ ಸೇಟ್ : ಕರ್ನಾಟಕದಿಂದ ವಿಶ್ವ ಚಿತ್ರರಂಗಕ್ಕೆ ಇನ್ನೊಂದು ಕೊಡುಗೆ, ಅವನೇ ಶ್ರೀಮನ್ನಾರಾಯಣ
ಚೇತನ್ ಕುಮಾರ್ : ಕನ್ನಡ ಚಿತ್ರರಂಗ ಪ್ರಜ್ವಲಿಸಲಿದೆ