ಪರೂಲ್ ಯಾದವ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಬಟರ್ ಫ್ಲೈ ಚಿತ್ರದ ಚಿತ್ರೀಕರಣ ಯೂರೋಪ್‍ನಲ್ಲಿ ಮುಕ್ತಾಯಗೊಂಡಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ, ಮೈಸೂರು, ಬೆಂಗಳೂರು, ಪ್ಯಾರಿಸ್‍ಗಳನ್ನು ಸುತ್ತಿದೆ. ಪ್ಯಾರಿಸ್‍ನಲ್ಲಿಯೇ ಚಿತ್ರದ ಚಿತ್ರೀಕರಣ ಮುಗಿದಿರುವುದು ವಿಶೇಷ. ಸಿನಿಮಾ ಅಕ್ಟೋಬರ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈನಲ್ಲಿ ಪರೂಲ್ ಯಾದವ್, ಹೀರೋಯಿನ್ ಅಷ್ಟೇ ಅಲ್ಲ, ಸಹ ನಿರ್ಮಾಪಕಿಯೂ ಹೌದು. ತೆಲುಗಿನಲ್ಲಿ ದಟ್ ಈಸ್ ಮಹಾಲಕ್ಷ್ಮಿ ಹೆಸರಿನಲ್ಲಿ ತಮನ್ನಾ ಭಾಟಿಯಾ, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಹೆಸರಿನಲ್ಲಿ ಕಾಜಲ್ ಅಗರ್‍ವಾಲ್, ಮಲಯಾಳಂನಲ್ಲಿ ಜಾಮ್ ಜಾಮ್ ಹೆಸರಿನಲ್ಲಿ ಮಂಜಿಮಾ ಮೋಹನ್ ನಟಿಸುತ್ತಿದ್ದಾರೆ. 4 ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರಗಳಲ್ಲಿ ಕನ್ನಡ ಹಾಗೂ ತಮಿಳು ಚಿತ್ರಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.
ಚಿತ್ರದ ಹಾಡುಗಳನ್ನು ಎಲ್ಲ ನಟಿಯರೂ ಸಿಂಗಲ್ ಟೇಕ್‍ನಲ್ಲೇ ಮುಗಿಸಿಕೊಟ್ಟರು. ಇದು ಈ ಚಿತ್ರದ ಸ್ಪೆಷಲ್. ನಾಲ್ವರು ಸ್ಟಾರ್‍ಗಳು, ಒಂದೇ ಸೆಟ್.. ಅಬ್ಬಾ.. ಆ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಖುಷಿಯಾಗಿದ್ದಾರೆ ರಮೇಶ್ ಅರವಿಂದ್.
ಚಿತ್ರೀಕರಣ ಇಷ್ಟು ಸರಳವಾಗಿ, ಸೊಗಸಾಗಿ ಮುಗಿಯುತ್ತದೆ ಎಂದು ನಾವಂದುಕೊಂಡಿರಲಿಲ್ಲ. ಯಾವುದೇ ಸಮಸ್ಯೆ, ಗೊಂದಲವಿಲ್ಲದೆ ಚಿತ್ರೀಕರಣ ಮುಗಿದಿದೆ, ಅಕ್ಟೋಬರ್‍ನಲ್ಲಿ ತೆರೆಗೆ ತರುವ ಯೋಜನೆ ಇದೆ ಎಂದು ಹೇಳಿದ್ದಾರೆ ನಿರ್ಮಾಪಕ ಮನು ಕುಮಾರನ್.
ಚಿತ್ರಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ನೀಡಿರುವುದು ಇನ್ನೊಂದು ವಿಶೇಷ.