` butteryfly, - chitraloka.com | Kannada Movie News, Reviews | Image

butteryfly,

  • 'Butterfly' In October

    butterfly in october

    The shooting for Parul Tadav starrer 'Butterfly', which is a remake of Hindi hit 'Queen' is finally completed and the film is all set to hit the screens in the month of October.

    'Butterfly' is being produced in four languages and Parul will be seen as the heroine in the Kannada version. Parul will be seen in the role of Kangana in this film, while Kajal Agarwal, Tamanna Bhatia and Manjima Mohan will be enacting the same in role in other languages..The Kannada and Tamil versions is directed by Ramesh Aravind.

    Apart from Parul Yadav, Sudha Belavadi, Bhargavi Narayan and others play prominent roles in the film. Satya Hegade is the cameraman. The film has been shot in Bangalore, Gokarna, Europe and other places.

  • 'Butterfly' Third Schedule From Jan 25th

    butterfly third schedule soon

    Parul Tadav starrer 'Butterfly', which is a remake of Hindi hit 'Queen' has completed two schedules of shooting in Gokarna and Europe and the third schedule will be started from the 25th of this month in Bangalore

    'Butterfly' is being produced in four languages and Parul will be seen as the heroine in the Kannada version. Parul will be seen in the role of Kangana in this film. The Kannada and Tamil versions will be directed by Ramesh Aravind.

    Apart from Parul Yadav, Sudha Belavadi, Bhargavi Narayan and others play prominent roles in the film. Satya Hegade is the cameraman.

  • Butterfly Censored With U/A Certificate

    butterfly censored with u/a certificate

    Parul Tadav starrer 'Butterfly', which is a remake of Hindi hit 'Queen' has been censored with U/A certificate.

    'Butterfly' is being produced in four languages and Parul will be seen as the heroine in the Kannada version. Parul will be seen in the role of Kangana in this film, while Kajal Agarwal, Tamanna Bhatia and Manjima Mohan will be enacting the same in role in other languages..The Kannada and Tamil versions is directed by Ramesh Aravind.

    Apart from Parul Yadav, Sudha Belavadi, Bhargavi Narayan and others play prominent roles in the film. Satya Hegade is the cameraman. The film has been shot in Bangalore, Gokarna, Europe and other places.

     

  • Ramesh Arvind To Direct Telugu Version Of Queen Also?

    will ramesh aravind direct telugu queen?

    Ramesh Arvind who is directing the Kannada and Tamil version of the film Queen has been entrusted with directing the Telugu version also sources say. The films are the official remakes of the Hindi film Queen directed by Vikas Bahl. In Kannada, Parul Yadav is doing the lead role while in Tamil Kajal Aggarwal is in the lead. In Tamil the film is titled Paris Paris while in Kannada it is called Butterfly. 

    The Telugu version of the film was to be directed by Neelakanta Reddy with Tamannaah in the lead role. However Neelakanta Reddy is said to have backed away from the project prompting the producer to request Ramesh Arvind to take over. Since Ramesh Arvind is already handling two versions of the film, they felt that he would do justice to it. More details are awaited as there is no official announcement.

  • ಇಮ್ರಾನ್ ಸರ್ದಾರಿಯಾ ಥ್ರಿಲ್ಲರ್‍ಗೆ ರಮೇಶ್ ಅರವಿಂದ್ ಹೀರೋ

    ramesh aravind in imran sardaiya's thriller

    ಬಟರ್‍ಫ್ಲೈ ಚಿತ್ರದಲ್ಲಿ ಕಂಪ್ಲೀಟ್ ಬ್ಯುಸಿಯಾಗಿರುವ ರಮೇಶ್ ಅರವಿಂದ್, ಇದರ ಮಧ್ಯೆಯೇ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಡೈರೆಕ್ಟರ್ ಆಗಿ ಅಲ್ಲ, ಹೀರೋ ಆಗಿ. ಬಟರ್ ಫ್ಲೈ ಚಿತ್ರವನ್ನು ಕನ್ನಡ, ತಮಿಳು, ತೆಲುಗಿನಲ್ಲಿ ನಿರ್ದೇಶನ ಮಾಡುತ್ತಿರುವ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರದಲ್ಲೂ ತೊಡಗಿಸಿಕೊಂಡಿರುವುದು ಗೊತ್ತಿರುವ ವಿಷಯವೇ. ಈ ಎರಡೂ ಸಿನಿಮಾಗಳ ನಂತರ ಹೊಸ ಚಿತ್ರ ಸೆಟ್ಟೇರಲಿದೆ.

    ರಮೇಶ್ ಅರವಿಂದ್ ಅಭಿನಯದ ಹೊಸ ಸಿನಿಮಾಗೆ ಇಮ್ರಾನ್ ಸರ್ದಾರಿಯಾ ನಿರ್ದೇಶಕ. ಈ ಮೊದಲು ಎರಡು ರೊಮ್ಯಾಂಟಿಕ್ ಸಿನಿಮಾ ಮಾಡಿರುವ ಇಮ್ರಾನ್, ಈ ಬಾರಿ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಚಿತ್ರದ ಚಿತ್ರಕಥೆ ಸಿದ್ಧವಾಗುತ್ತಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎಂಬ ಭರವಸೆ ಇಮ್ರಾನ್ ಸರ್ದಾರಿಯಾ ಅವರದ್ದು.

  • ಕೆಜಿಎಫ್ ಜೊತೆಗೇ ಬರ್ತಾರೆ ರಮೇಶ್, ಪಾರೂಲ್

    butterfly teaser on dec 21st

    ಡಿಸೆಂಬರ್ 21, ಕೆಜಿಎಫ್ ಡೇ ಎನ್ನುವಂತಾಗಿ ಹೋಗಿದೆ. ಅಷ್ಟರಮಟ್ಟಿಗೆ ಹವಾ ಎಬ್ಬಿಸಿದೆ ಕೆಜಿಎಫ್. ಅದೇ ದಿನ.. ರಮೇಶ್ ಅರವಿಂದ್, ಪಾರೂಲ್ ಯಾದವ್ ಕಾಂಬಿನೇಷನ್ನಿನ ಬಟರ್ ಫ್ಲೈ ಕೂಡಾ ಬರುತ್ತಿದೆ.

    ಬಟರ್ ಫ್ಲೈ, ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಪಾರೂಲ್ ಯಾದವ್, ಕಂಗನಾ ರಾವತ್ ಮಾಡಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶನ, ರಮೇಶ್ ಅರವಿಂದ್ ಅವರದ್ದು.

    ಕೆಜಿಎಫ್ ಡೇ ದಿನ, ಬಟರ್ ಫ್ಲೈ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಏಕಕಾಲದಲ್ಲಿ 4 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ನಾಲ್ಕೂ ಭಾಷೆಯಲ್ಲಿ ಒಂದೇ ದಿನ ಟೀಸರ್ ಹೊರಬರಲಿದೆ. ತಮಿಳಿನಲ್ಲಿ ಕಾಜಲ್ ಅಗರ್‍ವಾಲ್, ತೆಲುಗಿನಲ್ಲಿ ತಮನ್ನಾ ಭಾಟಿಯಾ, ಮಲಯಾಳಂನಲ್ಲಿ ಮಂಜಿಮಾ ಮೋಹನ್ ನಟಿಸಿದ್ದಾರೆ.

  • ಕ್ವೀನ್ ರೀಮೇಕ್ - ತೆಲುಗಿಗೂ ರಮೇಶ್ ಅರವಿಂದ್

    ramesh aravind to direct queen in telugu as well

    ಹಿಂದಿಯ ಕ್ವೀನ್ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರೀಮೇಕ್ ಆಗುತ್ತಿರುವುದು ಗೊತ್ತಿರುವ ವಿಚಾರವೇ. ಕನ್ನಡದಲ್ಲಿ ಪಾರುಲ್ ಯಾದವ್ ಕ್ವೀನ್ ಆಗಿದ್ದಾರೆ. ಬಟರ್ ಫ್ಲೈ ಹೆಸರಿನಲ್ಲಿ ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ. 

    ರಮೇಶ್ ಅರವಿಂದ್ ಕನ್ನಡಕ್ಕಷ್ಟೇ ಅಲ್ಲ, ತಮಿಳು ಚಿತ್ರಕ್ಕೂ ನಿರ್ದೇಶಕರಾಗಿದ್ದರು. ಈಗ ಅವರಿಗೆ ತೆಲುಗಿನ ನಿರ್ದೇಶನದ ಹೊಣೆಯೂ ಹೆಗಲೇರಿದೆ.

    ಕನ್ನಡದಲ್ಲಿ ಪಾರುಲ್ ಯಾದವ್ ಮಾಡುತ್ತಿರುವ ಪಾತ್ರವನ್ನು, ತೆಲುಗಿನಲ್ಲಿ ಮಾಡ್ತಾ ಇರೋದು ತಮನ್ನಾ ಭಾಟಿಯಾ. ಆದರೆ, ಈ ಮಿಲ್ಕಿ ಬ್ಯೂಟಿಗೂ ನಿರ್ದೇಶಕ ನೀಲಕಂಠ ಅವರಿಗೂ ಹೊಂದಾಣಿಕೆಯಾಗಿಲ್ಲ. ಕೆಲವು ಶಾಟ್ಸ್ ತೆಗೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತೆಲುಗು ವರ್ಷನ್‍ನ ಹೊಣೆಯೂ ರಮೇಶ್ ಅರವಿಂದ್ ಹೆಗಲಿಗೇ ಬಿದ್ದಿದೆ.

    ಪಾರುಲ್ ಯಾದವ್ ಅಭಿನಯದ ಬಟರ್ ಫ್ಲೈ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಕನ್ನಡದಲ್ಲಿ ನಿರ್ಮಾಪಕಿಯೂ ಆಗಿರುವ ಪಾರುಲ್ ಯಾದವ್, ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

  • ಗೋಕರ್ಣದ ಪಾರ್ವತಿಯಾದಳು ಪಾರುಲ್..

    butterfly image

    ಪಾರುಲ್ ಯಾದವ್, ಕನ್ನಡಿಗರಿಗೆ ಪ್ಯಾರ್‍ಗೇ ಹುಡುಗಿ ಎಂದೇ ಚಿರಪರಿಚಿತ. ಅವರೀಗ ಪಾರ್ವತಿಯಾಗಿದ್ದಾರೆ. ಗೋಕರ್ಣದ ಚೆಲುವೆಯಾಗಿದ್ದಾರೆ. ಬಟರ್‍ಫ್ಲೈ ಚಿತ್ರಕ್ಕಾಗಿ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ ಚಿತ್ರದ ರೀಮೇಕ್, ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲೂ ಚಿತ್ರೀಕರಣಗೊಂಡಿದೆ. ಪ್ರತಿ ಭಾಷೆಯಲ್ಲೂ ಪ್ರತ್ಯೇಕ ನಾಯಕಿಯರು. ಕನ್ನಡದಲ್ಲಿ ಪಾರುಲ್. ಅವರು ಚಿತ್ರದ ನಿರ್ಮಾಪಕಿಯೂ ಹೌದು.

    ಚಿಟ್ಟೆಗಳ ನಡುವೆ ಸಂಭ್ರಮಿಸುತ್ತಿರುವ ಪಾರುಲ್ ಯಾದವ್‍ರ ಫಸ್ಟ್‍ಲುಕ್ ನಮ್ಮ ನಿಮ್ಮ ನಡುವಿನ ಮುದ್ದು ಮುಖದ ಹುಡುಗಿಯಂತೆ ಕಾಣುತ್ತಿದೆ. ಈ ಪಾರ್ವತಿ ನಗಿಸುತ್ತಾಳೆ.. ಅಳಿಸುತ್ತಾಳೆ.. ಮಂದಹಾಸದಲ್ಲಿ ಮುಳುಗಿಸುತ್ತಾಳೆ.. ನನ್ನ ವೃತ್ತಿ ಬದುಕಿನಲ್ಲೇ ಇದು ನಾನು ಜೀವಿಸಿದ ಪಾತ್ರ ಎಂದು ಸಂಭ್ರಮಿಸುತ್ತಿದ್ದಾರೆ ಪಾರುಲ್. ಅಲ್ಲಲ್ಲ.. ಪಾರ್ವತಿ.

  • ಚಿಟ್ಟೆ ರಾಣಿ ಪಾರುಲ್ ಡುಂ ಡುಂ

    parul yadav's butterfly teaser out

    ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿದ್ದಾರೆ. ಪ್ಯಾರ್ ಗೆ  ಪಾರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಪಾರುಲ್, ಪಾರ್ವತಿ ಪಾರು, ಚಿಟ್ಟೆ ಪಾರು ಆಗಿದ್ದಾರೆ. ಬಟರ್‍ಫ್ಲೈ ಚಿತ್ರದ ಮೊದಲ ಟೀಸರ್ ಹೊರಬಿದ್ದಿದೆ. ಮುಗ್ಧ ಕಂಗಳ ಚೆಲುವೆಯಾಗಿ, ಕಂಗೊಳಿಸಿದ್ದಾರೆ ಪಾರುಲ್.

    ವಿಕಾಸ್ ಬಹಿಯ ಕ್ವೀನ್ ಚಿತ್ರದ ರೀಮೇಕ್ ಬಟರ್‍ಫ್ಲೈ. ಸಿಂಗಲ್ಲಾಗಿ ಹನಿಮೂನ್‍ಗೆ ಹೋಗುವ ಮುಗ್ಧ ಹುಡುಗಿ ಪಾರುಲ್ ಯಾದವ್, ನಂತರ ತನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುತ್ತಾಳೆ. ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ತರಲಾಗುತ್ತಿದೆ.

    ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ಪ್ಯಾರಿಸ್ ಪ್ಯಾರಿಸ್ ಚಿತ್ರದಲ್ಲಿ, ತೆಲುಗಿನಲ್ಲಿ ತಮನ್ನಾ ಭಾಟಿಯಾ, ದಟ್ ಈಸ್ ಮಹಾಲಕ್ಷ್ಮಿ ಹೆಸರಿನಲ್ಲಿ ಹಾಗೂ ಮಲಯಾಳಂನಲ್ಲಿ ಮಂಜಿಮಾ ಮೋಹನ್ ಜಾಮ್ ಜಾಮ್ ಹೆಸರಿನ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕೂ ಭಾಷೆಗಳಲ್ಲಿ ಮಣಿ ಕುಮಾರನ್ ಹಾಗೂ ಪಾರುಲ್ ಯಾದವ್ ನಿರ್ಮಾಪಕರು. ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ಚಿತ್ರ ಮುಂದಿನ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಚಿಟ್ಟೆಗಳ ಜೊತೆ ಪಾರುಲ್ ಬರ್ತ್‍ಡೇ

    parul yadav's birthday celebration

    ಚಿತ್ರನಟಿ ಪಾರುಲ್ ಯಾದವ್, ಚಿಟ್ಟೆಯಾಗಿದ್ದಾರೆ. ಏಕೆಂದರೆ, ಅವರೀಗ ಬಟರ್‍ಫ್ಲೈ ಚಿತ್ರದ ನಾಯಕಿ ಕಂ ನಿರ್ಮಾಪಕಿ. ಈ ಚಿತ್ರದೊಂದಿಗೆ ಪಾರುಲ್ ಅವರಿಗೆ ವಿಶೇಷ ಬಾಂಧವ್ಯವೂ ಬೆಳೆದುಬಿಟ್ಟಿದೆ. ಕಳೆದ ವರ್ಷ ಪಾರುಲ್ ಹುಟ್ಟುಹಬ್ಬದಂದೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಚಿಟ್ಟೆ ಪಾರುಲ್.

    ಚಿತ್ರರಂಗ ಸಾಮಾನ್ಯವಾಗಿ ಹೀರೋ ಓರಿಯಂಟೆಡ್. ಹೀಗಾಗಿ ಚಿತ್ರದ ಆಡಿಯೋ, ಮುಹೂರ್ತ.. ಇತ್ಯಾದಿಗಳನ್ನೆಲ್ಲ ನಾಯಕರ ಹುಟ್ಟುಹಬ್ಬದ ದಿನಕ್ಕೆ ಮಾಡ್ತಾರೆ. ಆದರೆ, ಈ ಸಿನಿಮಾದಲ್ಲಿ ನಾಯಕಿಗೆ ಆದ್ಯತೆ ನೀಡಿರುವುದು ವಿಶೇಷ. ಸಿನಿಮಾ ಶುರುವಾಗಿದ್ದೇ ನಾಯಕಿಯ ಹುಟ್ಟುಹಬ್ಬದ ದಿನ. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ಪಾರುಲ್.

    ಮನುಕುಮಾರನ್ ಪ್ರಧಾನ ನಿರ್ಮಾಪಕರಾಗಿರುವ ಚಿತ್ರ ಇದು. ಏಕಕಾಲದಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಇದು ಕ್ವೀನ್ ಚಿತ್ರದ ರೀಮೇಕ್. 

    ಕನ್ನಡದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ತಮನ್ನಾ, ತೆಲುಗಿನಲ್ಲಿ ಕಾಜಲ್ ಕ್ವೀನ್ ಆಗಿದ್ದಾರೆ.

  • ಚಿಟ್ಟೆಯಾದರು ಪಾರುಲ್ 

    parul yadav turns into a beautiful buteerfly

    ಬಟರ್ ಫ್ಲೈ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿರುವ ಬಟರ್‍ಫ್ಲೈ ಪಾರುಲ್ ಯಾದವ್ ಅಭಿನಯದ ಸಿನಿಮಾ. ನಿರ್ಮಾಪಕಿಯರಲ್ಲಿ ಅವರೂ ಒಬ್ಬರು. ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ ಸಿನಿಮಾದ ಪ್ರಚಾರಕ್ಕೆ ಡಿಫರೆಂಟ್ ತಂತ್ರ ಮಾಡುತ್ತಿದ್ದಾರೆ ಪಾರುಲ್.

    ಬಟರ್ ಫ್ಲೈ ಚಿತ್ರದ ಪ್ರಚಾರಕ್ಕಾಗಿ ಚಿಟ್ಟೆಯ ವೇಷ ತೊಟ್ಟಿದ್ದಾರೆ ಪಾರುಲ್. ಚಿತ್ರದ ಟೈಟಲ್‍ಗೆ ತಕ್ಕಂತೆ, ವಿಶೇಷ ವಿನ್ಯಾಸದ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಬಟರ್‍ಫ್ಲೈ, ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲೂ ಸಿದ್ಧವಾಗಿದ್ದು, ಒಂದೇ ವಾರ ಎಲ್ಲ ಕಡೆ ರಿಲೀಸ್ ಆಗುತ್ತಿದೆ.

  • ತಪ್ಪಾದ್ರೂ ಪರವಾಗಿಲ್ಲ.. ಕನ್ನಡದಲ್ಲೇ ಮಾತನಾಡುತ್ತೇನೆ - ಪಾರುಲ್ ಯಾದವ್

    parul yadav talks in kannada with fans

    ನಾನು ಕರ್ನಾಟಕದವಳಲ್ಲ. ಆದರೆ, ಜನ ಮೆಚ್ಚಿದ್ದು ಕರ್ನಾಟಕದಲ್ಲಿ. ಕನ್ನಡ ಚಿತ್ರರಂಗದಲ್ಲಿ. ನನಗೆ ಈಗಲೂ ಕನ್ನಡ ಅಷ್ಟಾಗಿ ಬರುವುದಿಲ್ಲ. ಎಷ್ಟೋ ಬಾರಿ ತಪ್ಪುಗಳಾಗುತ್ತವೆ. ಆದರೆ, ನಾನು ಕನ್ನಡ ಕಲಿಯುತ್ತಿದ್ದೇನೆ. ಅಭಿಮಾನಿಗಳ ಜೊತೆ ನಾನು ಯಾವಾಗಲೂ ಕನ್ನಡದಲ್ಲೇ ಮಾತನಾಡುತ್ತೇನೆ. ತಪ್ಪಾದಾಗ ಅಭಿಮಾನಿಗಳೇ ತಿದ್ದುತ್ತಾರೆ. ಬೇಸರ ಮಾಡಿಕೊಳ್ಳಲ್ಲ.

    ಇದು ಪಾರುಲ್ ಯಾದವ್ ಮಾತು. ಬಟರ್ ಫ್ಲೈ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವ ಪಾರುಲ್ ಯಾದವ್, ತಾನೇಕೆ ಕನ್ನಡ ಕಲಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ಪಾರುಲ್ ಕನ್ನಡ ಕಲಿಯೋದಕ್ಕೆ ಸ್ಫೂರ್ತಿ ಡಾ.ರಾಜ್ ಕುಮಾರ್.

  • ನವೆಂಬರ್‍ಗೆ ಬರುತ್ತಾ ಬಟರ್ ಫ್ಲೈ..?

    butterfly to release in november

    ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ, 4 ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಸಿನಿಮಾ. ಕನ್ನಡದಲ್ಲಿ ಕ್ವೀನ್ ಅರ್ಥಾತ್ ಬಟರ್‍ಫ್ಲೈ ಆಗಿರೋದು ಪಾರುಲ್ ಯಾದವ್. ನಿರ್ದೇಶಕ ರಮೇಶ್ ಅರವಿಂದ್, ಕನ್ನಡ ಹಾಗೂ ತಮಿಳು ವರ್ಷನ್‍ಗಳ ನಿರ್ದೇಶಕ. ಸಿನಿಮಾ ನವೆಂಬರ್‍ಗೆ ರಿಲೀಸ್ ಆಗಬಹುದು ಎಂಬ ಸುಳಿವು ಕೊಟ್ಟಿರುವುದು ಸ್ವತಃ ರಮೇಶ್ ಅರವಿಂದ್.

    ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೀತಾ ಇದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇದು. ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬರು ಹೀರೋಯಿನ್. ಹೀಗಾಗಿ ನವೆಂಬರ್‍ನಲ್ಲಿ ಏಕಕಾಲದಲ್ಲಿ ಸಿನಿಮಾ ತೆರೆಗೆ ತರೋಕೆ ಸಿದ್ಧತೆ ನಡೆದಿದೆ ಎಂದಿದ್ದಾರೆ ರಮೇಶ್ ಅರವಿಂದ್.

    ಸೋಮವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ಅರವಿಂದ್, ನಿರ್ದೇಶಕರಾಗಿ, ನಟರಾಗಿ, ಕಿರುತೆರೆಯಲ್ಲಿ ನಿರೂಪಕರಾಗಿ ಸಂಪೂರ್ಣ ಬ್ಯುಸಿಯಾಗಿಬಿಟ್ಟಿದ್ದಾರೆ. ಇದರ ನಡುವೆ ಬಟರ್‍ಫ್ಲೈ ಸಿನಿಮಾ ಕೆಲಸ ಚುರುಕಿನಿಂದ ನಡೆಯುತ್ತಿದೆ.

  • ಪಾರುಲ್ ಅದ್ದೂರಿ ಮದುವೆ

    parul's grand wedding n butterfly

    ಕೈತುಂಬಾ ಮೆಹಂದಿಯ ರಂಗು.. ಮೈತುಂಬಾ ಅಲಂಕಾರ.. ಒಡವೆ.. ನವವಧುವಿನಂತೆ ಕಂಗೊಳಿಸಿದ್ದಾರೆ ಪಾರುಲ್ ಯಾದವ್..ಅವರ ಮದುವೆಯಲ್ಲಿ. ಇಲ್ಲಿ ಮದುಮಗಳಾಗಿರೋದು ಪಾರುಲ್ ಯಾದವ್ ಅಲಿಯಾಸ್ ಪಾರ್ವತಿ.

    ಪಾರುಲ್ ಯಾವಾಗ ಪಾರ್ವತಿಯಾದರು ಎಂದು ತಲೆಗೆ ಹುಳು ಬಿಟ್ಟುಕೊಳ್ಳಬೇಡಿ. ಬಟರ್‍ಫ್ಲೈ ಚಿತ್ರದಲ್ಲಿ ಪಾರುಲ್  ಪಾತ್ರದ ಹೆಸರು ಪಾರ್ವತಿ. ನಮ್ಮ ಮನೆಲೊಂದು ಬಾಳ ದೊಡ್ಡ ಕಾರ್ಯಕ್ರಮ ಅನ್ನೋ ಹಾಡಿನ ಮೂಲವೇ ಮದುವೆ. ಬಟರ್‍ಫ್ಲೈ ಚಿತ್ರಕ್ಕಾಗಿ.

    ಯೋಗರಾಜ್ ಭಟ್ಟರ ಹಾಡಿಗೆ ಬಾಲಿವುಡ್ ಕೊರಿಯೋಗ್ರಾಫರ್ ಸೀಜರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲೊಂದು ಹಳೆಯ ಸಿನಿಮಾ ಹಾಡುಗಳ ರೀಮಿಕ್ಸ್ ಹಾಡು ಕೂಡಾ ಇದೆಯಂತೆ. ಚಿತ್ರದ ನಿರ್ದೇಶಕ ರಮೇಶ್ ಅರವಿಂದ್. ಚಿತ್ರದ ನಿರ್ಮಾಪಕಿಯರಲ್ಲಿ ಪಾರುಲ್ ಕೂಡಾ ಒಬ್ಬರು.

  • ಪಾರೂಲ್ ಕನ್ನಡ ಕಲಿತ ಹಿಂದಿನ ಕಾರಣ ಗೊತ್ತೇ..?

    parul yadav turns kannadathi

    ಪಾರೂಲ್ ಯಾದವ್ ಅಂದ್ರೆ ತಕ್ಷಣ ನೆನಪಾಗೋದು ಪ್ಯಾರ್‍ಗೆ ಆಗ್‍ಬುಟ್ಟೈತೆ ಹಾಡು. ಈ ಪ್ಯಾರ್‍ಗೇ ಹುಡುಗಿ ಕನ್ನಡದವರೇನಲ್ಲ. ಅಪ್ಪಟ ಗುಜರಾತಿ. ಆದರೆ, ವಾಸ ಇರುವುದು ಮುಂಬೈನಲ್ಲಿ. ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿದ್ದರೂ, ಕನ್ನಡದಲ್ಲಿಯೇ ಜನಪ್ರಿಯ ನಾಯಕಿ. ಈಗ ಬೆಂಗಳೂರಿಗೇ ಶಿಫ್ಟ್ ಆಗಿರುವ ಪಾರೂಲ್, ಕನ್ನಡತಿಯೂ ಆಗಿ ಬಿಟ್ಟಿದ್ದಾರೆ.

    ನಿಮಗೆಲ್ಲ ಗೊತ್ತಿರೋ ಹಾಗೆ, ಪಾರೂಲ್ ಈಗ ನಟಿಯಷ್ಟೇ ಅಲ್ಲ. ನಿರ್ಮಾಪಕಿಯೂ ಹೌದು. ಬಟರ್ ಫ್ಲೈ ಚಿತ್ರದ ನಿರ್ಮಾಪಕರಲ್ಲಿ ಪಾರೂಲ್ ಕೂಡಾ ಒಬ್ಬರು. ಅದು ಕ್ವೀನ್ ಚಿತ್ರದ ರೀಮೇಕ್. ನಿರ್ದೇಶಕ ರಮೇಶ್ ಅರವಿಂದ್. ಈಗ ಕನ್ನಡದ ವಿಷಯಕ್ಕೆ ಬರೋಣ.

    ಚಿತ್ರದ ಸ್ಕ್ರಿಪ್ಟ್ ವರ್ಕ್ ಎಲ್ಲ ಮುಗಿಯುವ ಹಂತದಲ್ಲಿದ್ದಾಗ, ರಮೇಶ್ ಅರವಿಂದ್ ಚಿತ್ರತಂಡಕ್ಕೊಂದು ವರ್ಕ್‍ಶಾಪ್ ಇಟ್ಟುಕೊಂಡಿದ್ದಾರೆ. ಆಗ ಪಾರೂಲ್‍ಗೆ ರಮೇಶ್, ನಿಮಗೆ ಕನ್ನಡ ಓದೋಕೆ ಬರುತ್ತಾ ಎಂದು ಕೇಳಿದರಂತೆ. ಪಾರೂಲ್ ಇಲ್ಲ ಎಂದು ಹೇಳಿದ್ದೇ ತಡ, ರಮೇಶ್ ಮುಖಭಾವವೇ ಬದಲಾಗಿ ಹೋಯ್ತಂತೆ. ರಮೇಶ್ ಕಣ್ಣಿನಲ್ಲಿ ಮೂಡಿದ ಆ ಬೇಸರವನ್ನು ತಕ್ಷಣ ಆರ್ಥ ಮಾಡಿಕೊಂಡ ಪಾರೂಲ್, ನಂತರ ರಮೇಶ್‍ಗೂ ಹೇಳದೆ ಮಾಡಿದ ಮೊದಲ ಕೆಲಸ ಕನ್ನಡ ಟೀಚರ್‍ನ್ನು ನೇಮಕ ಮಾಡಿಕೊಂಡಿದ್ದು.

    ಅದಾದ ನಂತರ ಶೂಟಿಂಗ್ ಶುರುವಾಗುವ ವೇಳೆಗೆ ನನಗೆ ಕನ್ನಡ ಪ್ರಾಂಪ್ಟ್ ಮಾಡೋಕೆ ಬರುತ್ತೆ ಎಂದಾಗ, ರಮೇಶ್ ಕಣ್ಣಿನಲ್ಲಿ ನಗು ಕಾಣಿಸಿತಂತೆ.

    ಬಟರ್ ಫ್ಲೈ ಚಿತ್ರದ ಕನ್ನಡದ ನೆನಪು ಹೇಳಿಕೊಂಡಿರುವ ಪಾರೂಲ್, ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ. ಚಿತ್ರ ಮೇ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

  • ಪಾರೂಲ್ ಪದೇ ಪದೇ ಅತ್ತಿದ್ರಂತೆ.. ಈ ಹಾಡು ಕೇಳಿ

    parul yadav in love wth this song

    ಪಾರೂಲ್ ಯಾದವ್ ಅಭಿನಯದ ಕ್ವೀನ್ ಚಿತ್ರದ ರೀಮೇಕ್ ಸಿನಿಮಾ ಬಟರ್ ಫ್ಲೈ ರಿಲೀಸಾಗೋಕೆ ರೆಡಿಯಾಗಿದೆ. ಬಿಡುಗಡೆಗೆ ಮುನ್ನ ಎಲ್ಲರನ್ನೂ ಆಕರ್ಷಿಸಿರುವ ಹಾಡು `ಮೆಲ್ಲ ಕೈ ಹಿಡಿದು ನೀ ತಲುಪಿಸು ಬಾ ಮನೆ ತನಕ.. ' ಎಂಬ ಗೀತೆ. ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಹೃದಯವನ್ನು ಕಲಕುವಂತಿದೆ.

    ಇಡೀ ಸಿನಿಮಾದಲ್ಲಿ ನನಗೆ ಅತ್ಯಂತ ಹೆಚ್ಚು ಇಷ್ಟವಾದ ಗೀತೆ ಇದು. ಈ ಹಾಡಿನ ಚಿತ್ರೀಕರಣದ ವೇಳೆ ಪದೇ ಪದೇ ಕಣ್ಣೀರಿಟ್ಟಿದ್ದೇನೆ. ಈ ಹಾಡನ್ನು ಯಾರೇ ಕೇಳಿದರೂ ಭಾವುಕರಾಗುವುದು ಖಂಡಿತಾ. ನಾನಂತೂ ಪಾತ್ರದೊಳಗೆ ಬೆರೆತು ಹೋಗಿದ್ದೆ' ಎನ್ನುತ್ತಾರೆ ಪಾರುಲ್.

    ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಚಿತ್ರಕ್ಕೆ ಪಾರುಲ್ ಯಾದವ್ ಸಹ ನಿರ್ಮಾಪಕಿಯೂ ಹೌದು. 

  • ಪಾರೂಲ್ ಪಾರ್ವತಿ ಮದುವೆಗೆ ರೆಡಿ. ನಾಳೇನೇ ಮದ್ವೆ..!

    parul parvathi's wedding song out

    ಪಾರುಲ್ ಯಾದವ್ ಮನೆಯಲ್ಲೀಗ ಮದುವೆ ಸಂಭ್ರಮ. ನಾಳೆಯೇ ಮದುವೆ. ಲಂಡನ್ ಹುಡುಗ. ಮದುವೆ ಆದ ಮೇಲೆ ಲಂಡನ್ ಲೈಫು. ಅರೆ.. ಇದೇನ್ ಶಾಕಿಂಗ್ ನ್ಯೂಸ್ ಅಂದ್ಕೋಬೇಡಿ. ಇದೆಲ್ಲ ರಿಯಲ್ ಲೈಫ್ ಸ್ಟೋರಿ ಅಲ್ಲ, ರೀಲ್ ಲೈಫಿನದ್ದು.

    ಬಟರ್ ಫ್ಲೈ ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಹಾಡಿನ ಸಾಹಿತ್ಯವೇ ಅದು. ನಾಳೆ ನಮ್ಮ ಮನೇಲೊಂದು ಬಾಳ ದೊಡ್ಡ ಕಾರ್ಯಕ್ರಮ.. ನಮ್ಮ ಹುಡ್ಗಿ ಮ್ಯಾರೇಜಿದೆ.. ಎಂದು ಶುರುವಾಗುವ ಹಾಡಿಗೆ ಸಾಹಿತ್ಯ ಬರೆದಿರೋದು ಭಟ್ಟರು. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆಯ ಹಾಡಿದು. ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದಾಗಿದ್ದು, ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.

  • ಪ್ಯಾರಿಸ್‍ನಲ್ಲಿ ಪಾರ್ವತಿ ಪಾರುಲ್ ಹನಿಮೂನ್

    parul completes shooting in paris

    ಪ್ಯಾರ್ ಗೇ ಪಾರುಲ್ ಪಾರ್ವತಿಯಾಗಿದ್ದಾರೆ. ಚಿಟ್ಟಯಾಗಿದ್ದಾರೆ. ಬಟರ್ ಫ್ಲೈನಂತೆ ಹಾರುತ್ತಿದ್ದಾರೆ. ಹಾರಿರುವುದು ಪ್ಯಾರಿಸ್‍ನಲ್ಲಿ. ಹಾರಿಸಿರುವುದು ರಮೇಶ್ ಅರವಿಂದ್. ಇದು ಬಟರ್ ಫೈ ಚಿತ್ರದ ಶೂಟಿಂಗ್ ಕಥೆ. 45 ದಿನಗಳ ಪ್ಯಾರಿಸ್ ಶೂಟಿಂಗ್ ಮುಗಿಸಿರುವ ಪಾರುಲ್, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. 

    ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ ಬಟರ್ ಫ್ಲೈ. ಕನ್ನಡದಲ್ಲಿ ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿ ನಟಿಸಿದ್ದಾರೆ. ಸತತ 45 ದಿನ ಪ್ಯಾರಿಸ್‍ನಲ್ಲಿದ್ದ ಪಾರುಲ್‍ಗೆ ಅದೊಂದು ಹಿತಾನುಭವ. ಇಂಡಿಯಾ ಬಿಟ್ಟು, ಬೇರೆಲ್ಲೂ ಇಷ್ಟು ಸುದೀರ್ಘ ಕಾಲ ಇರಲಿಲ್ಲವಂತೆ. ಈಗಲೂ ಪ್ಯಾರಿಸ್ ಗುಂಗು ಕಾಡುತ್ತಿದೆ ಎನ್ನುವ ಪಾರುಲ್, ಚಿತ್ರಕ್ಕಾಗಿ ಒಂದೂವರೆ ವರ್ಷ ಮೀಸಲಿಟ್ಟಿದ್ದಾರೆ. ಇದು ಜಾಸ್ತಿ ಅಯ್ತಲ್ವಾ ಎಂದರೆ, ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಮೂರೂವರೆ ವರ್ಷ ಮೀಸಲಿಟ್ಟಿದ್ದರು. ಅದರ ಮುಂದೆ ನನ್ನದೇನು ಮಹಾ ಅಂತಾರೆ. 

    ತಮನ್ನಾ, ಕಾಜಲ್ ಮತ್ತು ಮಂಜಿಮಾ ಮೋಹನ್, ತೆಲುಗು, ತಮಿಳು, ಮಲಯಾಳಂ ಹೀರೊಯಿನ್‍ಗಳು. ಎಲ್ಲರೂ ಒಂದೇ ಸೆಟ್‍ನಲ್ಲಿದ್ದದ್ದು ವಿಶೇಷ. ಅಂದಹಾಗೆ ಇದು ಹಿಂದಿನ ಕ್ವೀನ್ ಚಿತ್ರದ ರೀಮೇಕ್. ಹನಿಮೂನ್‍ಗೆ ಬರುವ ಹಳ್ಳಿ ಹುಡುಗಿಯ ಬೆರಗುಗಳನ್ನು ಕ್ವೀನ್ ಅದ್ಭುತವಾಗಿ ಕಟ್ಟಿಕೊಟ್ಟಿತ್ತು. ಆ ಚಿತ್ರವನ್ನು ಕನ್ನಡಕ್ಕೆ ತರಬೇಕು ಎನ್ನುವುದು ನನ್ನ ಹಂಬಲ ಎಂದು ಹೇಳಿಕೊಂಡಿದ್ದಾರೆ.

    ನಾನೀನ ಕನ್ನಡತಿ. ನನ್ನನ್ನು ಪ್ರೀತಿಸಿದವರು, ಬೆಳೆಸಿದವರು ಕನ್ನಡದವರು ಎಂದು ಅಭಿಮಾನದಿಂದ ಹೇಳಿಕೊಳ್ಳುವ ಪಾರುಲ್ ಯಾದವ್, ಕನ್ನಡದ ಟೀಚರ್ ಒಬ್ಬರಿಂದ ಹೇಳಿಸಿಕೊಂಡು ಕನ್ನಡವನ್ನು ಸ್ಪಷ್ಟವಾಗಿ ಕಲಿತಿದ್ದಾರೆ. ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಬಟರ್ ಫ್ಲೈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ವಾಯ್ಸ್

    butterfly parul gets bachchan's power

    ಪಾರೂಲ್ ಯಾದವ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಬಟರ್ ಫ್ಲೈ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾಗೆ ಈಗ ಬಾಲಿವುಡ್ ಸೂಪರ್ ಸ್ಟಾರ್ ಸಪೋರ್ಟು ಸಿಕ್ಕಿದೆ.

    ಬಟರ್ ಫ್ಲೈ ಚಿತ್ರದ ಕ್ಲಬ್ ಸಾಂಗ್‍ನ್ನು ಅಮಿತಾಬ್ ಹಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಣಯ್ಯ. ಅಮಿತಾಬ್ ಹಾಡಿರುವ ಈ ಹಾಡನ್ನು ಪ್ಯಾರಿಸ್‍ನಲ್ಲಿ ಚಿತ್ರೀಕರಿಸಲಾಗಿದೆ. 

    ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್, ಈ ಬಾರಿ ಮತ್ತೊಮ್ಮೆ ಗಾಯಕರಾಗಿ ಬಂದಿದ್ದಾರೆ.

  • ಬಟರ್ ಫ್ಲೈ ಚಿತ್ರದಿಂದ ಹೊರ ನಡೆದ ಆ್ಯಮಿ ಜಾಕ್ಸನ್

    amy jackson out from butterfly

    ಬಟರ್ ಫ್ಲೈ. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಕನ್ನಡದಲ್ಲಿ ಪಾರುಲ್ ಯಾದವ್ ನಾಯಕಿ. ತೆಲುಗಿನಲ್ಲಿ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ನಟಿಸುತ್ತಿದ್ದಾರೆ. ಇವರೆಲ್ಲರೂ ಆಯಾಯಾ ಭಾಷೆಗಳಲ್ಲಿ ನಿರ್ವಹಿಸುವುದು ಕಂಗನಾ ರಣಾವತ್ ಪಾತ್ರ.

    ಇನ್ನು ಲೀಸಾ ಹೇಡನ್ ನಿರ್ವಹಿಸಿದ್ದ ಪಾತ್ರವನ್ನು ಆ್ಯಮಿ ಜಾಕ್ಸನ್ ಮಾಡಬೇಕಿತ್ತು. ನಾಲ್ಕೂ ಭಾಷೆಗಳಲ್ಲಿ ಅವರೇ ನಟಿಸಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದಾರೆ ಆ್ಯಮಿ ಜಾಕ್ಸನ್. ಆ್ಯಮಿ ಜಾಕ್ಸನ್ ಪಾತ್ರಕ್ಕೆ ಈಗ ಇಬ್ಬರು ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ವೀಡನ್ ಚೆಲುವೆ ಎಲಿ ಅಬ್ರಹಾಂ ಹಾಗೂ ಶಿಬಾನಿ ದಾಂಡೇಕರ್. 

    ಪರೂಲ್ ಯಾದವ್ ಕನ್ನಡದಲ್ಲಿ ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. ಚಿತ್ರದ ಶೂಟಿಂಗ್ ಎರಡು ತಿಂಗಳು ಪ್ಯಾರಿಸ್‍ನಲ್ಲೇ ನಡೆಯಲಿದೆ. ನಾಲ್ಕು ಮಂದಿ ನಾಯಕಿಯರು ಒಟ್ಟಿಗೇ ಸೆಟ್‍ನಲ್ಲಿರುವುದು ವಿಶೇಷ ಅನುಭವ ಎಂದಿದ್ದಾರೆ ಪರೂಲ್ ಯಾದವ್.