` suhasini, - chitraloka.com | Kannada Movie News, Reviews | Image

suhasini,

  • 14 ವರ್ಷಗಳ ನಂತರ ಅಂಬರೀಷ್-ಸುಹಾಸಿನಿ ಬಂಧನ

    ambarish suhasini team up again

    ಅಂಬರೀಷ್ ಮತ್ತು ಸುಹಾಸಿನಿ, ಆತ್ಮೀಯ ಸ್ನೇಹಿತರು. ಆದರೆ, ಜೊತೆಗೆ ನಟಿಸಿರುವುದು ಒಂದೇ ಚಿತ್ರದಲ್ಲಿ. ಅದು ಅಣ್ಣಾವ್ರು. ಈಗ ಮತ್ತೊಮ್ಮೆ ಜೋಡಿಯಾಗುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ತಯಾರಾಗುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತು ಕಣೋ ಚಿತ್ರದಲ್ಲಿ ಅಂಬರೀಷ್ ಮತ್ತು ಸುಹಾಸಿನಿ, ಸೀನಿಯರ್ ಜೋಡಿಯ ಪಾತ್ರ ಮಾಡುತ್ತಿದ್ದಾರೆ.

    ಅದೇ ಚಿತ್ರದಲ್ಲಿ ಅಂಬರೀಷ್ ಯುವಕನಾಗಿದ್ದಾಗಿನ ಪಾತ್ರ ನಿರ್ವಹಿಸುತ್ತಿರುವುದು ಸುದೀಪ್. ಅವರಿಗಿನ್ನೂ ನಾಯಕಿ ಸಿಕ್ಕಿಲ್ಲ. ತಮಿಳಿನ ಪವರ್‍ಪಾಂಡಿ ಚಿತ್ರದ ರೀಮೇಕ್ ಆಗಿರುವ ಈ ಚಿತ್ರ, ಸೆಟ್ ಏರುವ ಮುನ್ನವೇ ಕುತೂಹಲ ಮೂಡಿಸಿದೆ. ಮೂಲ ಚಿತ್ರದಲ್ಲಿ ರಾಜ್‍ಕಿರಣ್ ಮತ್ತು ರೇವತಿ ನಟಿಸಿದ್ದ ಪಾತ್ರದಲ್ಲಿ, ಅಂಬಿ, ಸುಹಾಸಿನಿ ನಟಿಸಲಿದ್ದಾರೆ.

  • Ananth Nag And Suhasini Act Together In 'Yaana'

    suhasini, anantha nag to act in yaana

    The shooting for Vijayalakshmi Singh's new directorial film 'Yaana' is almost completely and now the latest news is Ananth Nag and Suhasini are all set to act together in the film.

    Ananth Nag and Suhasini have acted in many films includingg 'Hosa Neeru', 'Stumble' annd others. After a long gap Ananth Nag and Suhasini are acting together in 'Yaana'.

    Vijayalakshmi Singh and Jaijagadish's daughters Vaibhavi, Vainidhi and Vaisiri are the heroines of this film. The film marks the debut of new three heroes Sumukha, Abhishek and Chakravarthy. Suhas Gangadhar is the screenplay writer, while Simple Suni has written the dialogues for the film. 

    The film is being produced by Harish Sherigar and Sharmila Sherigar. Karam Chawla is in charge of the camera, while Joshua Sridhar is the music director.

  • Shiva Thandava Dance for Naani

    naani image

    Director Gollahalli Raghavendra who has almost finished 80 percent shooting of his new film 'Naani' is all set to shoot a Shiva Thandava song for the film soon. The specialty of the song is the song will be shot with 300 Aghoris and a 40 feet idol of Lord Shiva is specially erected for this song. Apart from that, a well known actor will be making a special appearance in the song. But Raghavendra doesn't want to disclose the actor who is making a special appearance until the shooting of the song.

    naani_team.jpg

    Apart from that Raghavendra and the team is quite happy about the way the film has shaped up. Manish, Priyanka Rao, Baby Suhasini, Suhasini, Jaijagadish and others play prominent roles in the film being produced by Ramesh Kumar. The film has cinematography by Gundlupete Suresh.

  • Suhasini Is Liked By Kannada People - Exclusive Video

    suhasini manirathnam image

    Actress Suhasini Manirathnam has acted in many Kannada movies. She has won the heart of Kannada people. Why she is liked? Suhasini Explains... Watch video 

    Also See

    Suhasini Talks on Vishnuvardhan Bandana - Exclusive Video

    Vishnuvardhan Was Always Naughty Says Suhasini - Exclusive Video

    Suhasini Says Vishnuvardhan Died As a King - Exclusive Video

    Suhasini Following Dr Vishnuvardhan Advise - Exclusive Video

    Rajinikanth + Kamal hassan Combined Is Vishnuvardhan says Suhasini

  • Suhasini Says Bangalore Is the Best

    suhasini image

    Just two days before ace director Maniratnam had thanked Bangalore for their great support during last year floods, his wife and well known actress Suhasini has said Bangalore is the best place to learn languages.

    Maniratnam was talking during the seminar at the 08th Bangalore International Film Festival. 'I think Bangalore is the best place to learn languages. I am very much jealous of you people because you get to hear many languages. How lucky can you get' said Suhasini.

    When asked about why she has not acted in any of Maniratnam's films, 'Mani has been politely rejecting answering this question. Maybe I am not a good actress in his view. But we are a good couple. I write dialogues for his films and we work together for the film' said Suhasini.

  • Suhasini Says Vishnuvardhan Died As a King - Exclusive Video

    suhasini, vishnuvardhan image

    South Actress Suhasini Manirathnam has shared her view on Dr Vishnuvardhan with Chitraloka editor KM Veeresh. She said Vishnuvardhan died as a King. Watch video

    Also View

    Suhasini Following Dr Vishnuvardhan Advise - Exclusive Video

    Rajinikanth + Kamal hassan Combined Is Vishnuvardhan says Suhasini

  • ಅಂಬಿ.. ಚಿತ್ರದಲ್ಲಿ ಶೃತಿಗಿರೋ ಬೇಸರ ಅದೊಂದೇ..

    sruthi hariharan still waiting to share screen with suhasini

    ಅಂಬಿ ನಿಂಗ್ ವಯಸ್ಸಾಯ್ತೋ.. ಇದು ರೆಬಲ್‍ಸ್ಟಾರ್ ಅಂಬರೀಷ್ ಸುಹಾಸಿನಿ ಜೋಡಿಯಾಗಿ ನಟಿಸಿರುವ ಸಿನಿಮಾ. ಯಂಗ್ ಅಂಬಿಯಾಗಿ ಸುದೀಪ್ ನಟಿಸಿದ್ದರೆ, ಯಂಗ್ ಸುಹಾಸಿನಿಯಾಗಿ ನಟಿಸಿರುವುದು ಶೃತಿ ಹರಿಹರನ್. 

    ಸುಹಾಸಿನಿಯವರ ಯಂಗ್ ಪಾತ್ರಕ್ಕೆ ನಿರ್ದೇಶಕ, ನಿರ್ಮಾಪಕರ ಮನಸ್ಸಿನಲ್ಲಿ ಮೂಡಿದ ಮೊದಲ ಹೆಸರೇ ಶೃತಿ ಹರಿಹರನ್. ಆ ವಿಷಯಕ್ಕೆ ಶೃತಿಗೆ ಸಂತೋಷವಿದೆ. ಹೆಮ್ಮೆಯೂ ಇದೆ. ಸುದೀಪ್ ಜೊತೆ ನಟಿಸಿರುವ ಶೃತಿ, ಅದನ್ನು ಖುಷಿಯಿಂದಲೇ ಹೇಳಿಕೊಳ್ತಾರೆ. ಇದೆಲ್ಲದರ ಜೊತೆಗೆ ಅವರನ್ನು ಅದೊಂದು ಬೇಸರ ಕಾಡುತ್ತಲೇ ಇದೆ.

    ನಾನು ಸುಹಾಸಿನಿ ಮೇಡಂ ಜೊತೆ 4 ಚಿತ್ರಗಳಲ್ಲಿ ಜೊತೆಯಾಗಿದ್ದೇನೆ. ಅಂಬಿ.. 4ನೇ ಸಿನಿಮಾ. ಆದರೆ, ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶವೇ ನನಗೆ ಸಿಕ್ಕಿಲ್ಲ ಎಂಬ ಬೇಸರ ಕಾಡುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ ಶೃತಿ ಹರಿಹರನ್. ಮುಂದಿನ ದಿನಗಳಲ್ಲಿ ಆ ಕನಸು ಕೂಡಾ ಈಡೇರಲಿದೆ ಎಂಬ ಆಸೆ ಅವರಲ್ಲಿದೆ.

    ಸುದೀಪ್, ಜಾಕ್‍ಮಂಜು ನಿರ್ಮಾಣದ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದ್ದು, ಇದೇ ವಾರ ತೆರೆಗೆ ಬರುತ್ತಿದೆ. 

  • ಅಂಬಿಗೆ ಸುಹಾಸಿನಿಯೇ ಜೋಡಿಯಾಗಿ ಬಂದರು..!

    suhasini to pair with ambi

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ರೆಬಲ್‍ಸ್ಟಾರ್ ಅಂಬರೀಷ್‍ಗೆ ಜೋಡಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಂಬರೀಷ್‍ಗೆ ಜೋಡಿ ಸುಮಲತಾ ಅಲ್ಲ, ರಮ್ಯಕೃಷ್ಣಾ ಅಲ್ಲ, ಖುಷ್‍ಬೂ ಕೂಡಾ ಅಲ್ಲ. ಮೊದಲೇ ನಿಗದಿಯಾಗಿದ್ದಂತೆ ಸುಹಾಸಿನಿ.

    ಈಗಾಗಲೇ ಸುಹಾಸಿನಿ ಶೂಟಿಂಗ್‍ಗೆ ಆಗಮಿಸಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಬೆನ್ನೆಲುಬಾಗಿರುವುದು ಕಿಚ್ಚ ಸುದೀಪ್. ಗುರುದತ್ ಗಾಣಿಗ ಎಂಬ ಯುವ ಪ್ರತಿಭೆಗೆ ಚಿತ್ರ ನಿರ್ದೇಶನದ ಜವಾಬ್ದಾರಿ ನೀಡಲಾಗಿದೆ.

  • ಕಮಲ್ ಹಾಸನ್ ಕಾಲಿಗೆ ನಮಸ್ಕರಿಸಿದರೇಕೆ ಸುಹಾಸಿನಿ

    why did suhasini knee down to kamal hassan

    ಸುಹಾಸಿನಿ, ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದೆಯರಲ್ಲಿ ಒಬ್ಬರು. ಕಮಲ್ ಹಾಸನ್, ಭಾರತೀಯ ಚಿತ್ರರಂಗಕ್ಕೆ ಮೆಥಡ್ ಆ್ಯಕ್ಟಿಂಗ್ ಪರಿಚಯಿಸಿದ ಧೀಮಂತ. ಇಂತಹ ಕಮಲ್ ಹಾಸನ್ ಕಾಲಿಗೆ ಬಹಿರಂಗ ವೇದಿಕೆಯಲ್ಲಿ ನಟಿ ಸುಹಾಸಿನಿ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ ಎಂದರೆ.. ಏನಿರಬಹುದು ವಿಶೇಷ.

    ಇಲ್ಲಿ ಒಂದು ವಿಷಯ ಹೇಳಲೇಬೇಕು. ಸುಹಾಸಿನಿ, ಕಮಲ್ ಹಾಸನ್ ಅವರಿಗೆ ಮಗಳಾಗಬೇಕು. ಸುಹಾಸಿನಿ, ಚಾರು ಹಾಸನ್ (ತಬರನ ಕಥೆಯ ತಬರ) ಮಗಳು. ಚಾರು ಹಾಸನ್, ಕಮಲ್ ಹಾಸನ್ ಅಣ್ಣ. ಅಣ್ಣನ ಮಗಳು, ಮಗಳೇ ತಾನೆ.. ಆದರೆ, ಸುಹಾಸಿನಿ ಇದಿಷ್ಟಕ್ಕೇ ಅಲ್ಲ..

    ಸುಹಾಸಿನಿ ಚಿತ್ರರಂಗಕ್ಕೆ ಬರುತ್ತೇನೆ ಎಂದಾಗ ತಾಂತ್ರಿಕವಾಗಿಯೂ ಕಲಿತಿರಬೇಕು ಎಂದು ಫಿಲಂ ಇನ್ಸ್ಟಿಟ್ಯೂಟ್‌ಗೆ ಸೇರಿಸಿದ್ದವರು, ಹಣ ಕಟ್ಟಿದ್ದವರು ಸ್ವತಃ ಕಮಲ್ ಹಾಸನ್ ಅವರೇ ಅಂತೆ. ಅಷ್ಟೇ ಅಲ್ಲ, ಮಣಿರತ್ನಂ ಅವರು ಪರಿಚಿತವಾಗಿದ್ದೂ ಕಮಲ್ ಮೂಲಕವೇ. ಇದು ಇಷ್ಟಕ್ಕೇ ನಿಲ್ಲಲ್ಲ, ಮಣಿರತ್ನಂ ಅವರಿಗೂ ನಿರ್ದೇಶಕರಾಗಿ ಜೀವನ ಕೊಟ್ಟಿದ್ದು ನೀವೇ.. ಹೀಗಾಗಿ ನೀವಿಲ್ಲದೆ ನಮ್ಮ ಜೀವನದಲ್ಲಿ ಏನೂ ಇಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಹೇಳಿಕೊಂಡಿದ್ದಾರೆ ಸುಹಾಸಿನಿ. 

  • ಕೇರಳದಲ್ಲಿ ಅಂಬಿ, ಸುಹಾಸಿನಿ ಡ್ಯುಯೆಟ್

    ambi ninge vaisaito shooting in kerala

    ಅಂಬಿ ನಿಂಗೆ ವಯಸ್ಸಾಯ್ತೋ.. ಅದು ಚಿತ್ರದ ಟೈಟಲ್ ಅಷ್ಟೆ. ಅಂಬರೀಷ್‍ಗೆ ವಯಸ್ಸಾಗೋಕೆ ಸಾಧ್ಯಾನಾ..? ಈಗ ಅಂಬರೀಷ್, ಸುಹಾಸಿನಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ. ಕೇರಳದ ಕರಾವಳಿಯಲ್ಲಿ ಅಂಬರೀಷ್, ಸುಹಾಸಿನಿ ಯುಗಳ ಗೀತೆಯ ಚಿತ್ರೀಕರಣ ನಡೆಯುತ್ತಿದೆ. ಅದೊಂದು ಹಾಡಿನ ಶೂಟಿಂಗ್ ಮುಗಿದರೆ, ಚಿತ್ರೀಕರಣ ಮುಗಿದಂತೆಯೇ ಲೆಕ್ಕ. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

    ಜಾಕ್ ಮಂಜು ನಿರ್ಮಾಣದ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನವಿದೆ. ಗುರುದತ್, ಕಿಚ್ಚ ಸುದೀಪ್ ಶೋಧಿಸಿದ ಪ್ರತಿಭೆ. ಸಿನಿಮಾದಲ್ಲಿ ಸುದೀಪ್ ಹಾಗೂ ಶೃತಿ ಹರಿಹರನ್, ಯಂಗ್ ಅಂಬರೀಷ್ ಮತ್ತು ಯಂಗ್ ಸುಹಾಸಿನಿ ಪಾತ್ರ ಮಾಡುತ್ತಿದ್ದಾರೆ. ಇಷ್ಟಕ್ಕೂ ಚಿತ್ರದ ಸ್ಪೆಷಲ್ ಏನು..?

    ಅಂಬರೀಷ್ ಅವರ ಸ್ಟೈಲಲ್ಲೇ ಹೇಳೋದಾದ್ರೆ, `ಚಿತ್ರದ ಕಥೆ, ತಂಡ ಎಲ್ಲವೂ ಚೆನ್ನಾಗಿದೆ. ಅಂಬರೀಷ್ ಅದ್ಭುತವಾಗಿ ನಟಿಸಿದ್ದಾನೆ'. 

  • ನಟಿ ಸುಹಾಸಿನಿ ಮಗನಿಗೆ ಇಟಲಿ ಅಭಿಮಾನಿಗಳ ನೆರವು

    suhasini son

    ನಟಿ ಸುಹಾಸಿನಿ ಕನ್ನಡದಲ್ಲಿ ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲೇ ಸುಹಾಸಿನಿ ಮಣಿರತ್ಹಂ ಪ್ರಖ್ಯಾತಿ. ಆದರೆ, ಇವರ ಮಗನನ್ನು ಇಟಲಿಯಲ್ಲಿ ಯಾರೋ ಕಳ್ಳರು ದೋಚಿ ಇದ್ದಬದ್ದ ಹಣವನ್ನೆಲ್ಲ ಕಿತ್ತುಕೊಂಡು ಹೋಗಿದ್ದಾರೆ. 

    ಇಟಲಿಯ ಬೆಲ್ಲುನೋ ನಗರದಲ್ಲಿ ಸುಹಾಸಿನಿ ಮಣಿರತ್ನಂ ಅವರ ಮಗ ನಂದನ್​ ಮೇಲೆ ಯಾರೋ ದುಷ್ಕರ್ಮಿಗಳು ದಾಳಿ ಪರ್ಸ್ ಕದ್ದುಕೊಂಡು ಹೋಗಿದ್ದಾರೆ. ಏನು ಮಾಡುವುದೋ ತೋಚದೆ ಕಂಗಾಲಾಗಿದ್ದಾಗ, ಸುಹಾಸಿನಿ ನೆರವಿಗೆ ಬಂದಿರುವುದು ಅವರ ಅಭಿಮಾನಿಗಳು.

    ಸುಹಾಸಿನಿ ತಮ್ಮ ಟ್ವಿಟರ್ ಖಾತೆಯಲ್ಲಿ ಇಟಲಿಯ ವೆನಿಸ್ ವಿಮಾನ ನಿಲ್ದಾಣದಲ್ಲಿ ಸಮೀಪ ಯಾರಾದರೂ ಗೊತ್ತಿರುವವರಿದ್ದರೆ ತಮ್ಮ ಪುತ್ರನಿಗೆ ಸಹಾಯ ಮಾಡಿ ಎಂದು ಕೋರಿದ್ದರು. ನನ್ನ ಮಗನ ಪರ್ಸ್‌ ಕದ್ದಿದ್ದಾರೆ. ಅವನು ಏರ್‌ಪೋರ್ಟ್‌ ತಲುಪಬೇಕಾಗಿದೆ. ಯಾರಾದರೂ ಅವನಿಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ಅವರ ನಂಬರ್ ಕೂಡಾ ಕೊಟ್ಟಿದ್ದರು. 

    ಭಾನುವಾರವಾದ್ದರಿಂದ ರಾಯಭಾರ ಕಚೇರಿಯ ನೆರವೂ ಸಿಗದೆ ಪರದಾಡುತ್ತಿದ್ದ ನಂದನ್​ಗೆ ಅಭಿಮಾನಿಗಳು ನೆರವು ನೀಡಿದ್ದಾರೆ. ಕೆಲವು ಗಂಟೆಗಳ ನಂತರ ಮತ್ತೊಮ್ಮೆ ಟ್ವೀಟ್ ಮಾಡಿರುವ ಸುಹಾಸಿನಿ, ತಮ್ಮ ಮಗನಿಗೆ ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.

     

  • ಸುಹಾಸಿನಿ ಮೆಚ್ಚಿದ ರಚಿತಾ ರಾಮ್

    suhasini praises rachita's ayushmanbhava performance

    ಆಯುಷ್ಮಾನ್ ಭವ ಚಿತ್ರದಲ್ಲಿ ರಚಿತಾ ರಾಮ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೊದಲಿಗೆ ಶಿವರಾಜ್ ಕುಮಾರ್ ಮೆಚ್ಚುಗೆ ಸ್ವೀಕರಿಸಿದ್ದ ರಚಿತಾಗೆ ಪ್ರಿಯಾಂಕಾ ಉಪೇಂದ್ರ ಕೂಡಾ ಬೆನ್ನುತಟ್ಟಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ತಾರೆ ಸುಹಾಸಿನಿ ಸರದಿ.

    ರಚಿತಾ ರಾಮ್ ಅಭಿನಯ ನೋಡಿ ಮೆಚ್ಚಿರುವ ಸುಹಾಸಿನಿ, ನೀನು ತಮಿಳಿನಲ್ಲೂ ಆಕ್ಟ್ ಮಾಡಬೇಕು ಎಂದು ಆಹ್ವಾನಿಸಿದ್ದಾರೆ. ಈಗಲೇ ನಿನಗೆ ಎಷ್ಟೆಷ್ಟು ಒಳ್ಳೊಳ್ಳೆ ಪಾತ್ರ ಸಿಗುತ್ತಿವೆ ಎಂದು ಖುಷಿಗೊಂಡಿದ್ದರAತೆ ಸುಹಾಸಿನಿ. ರಚಿತಾ ರಾಮ್‌ಗೆ ಈಗ ಸ್ವರ್ಗಕ್ಕೆ ಮೂರೇ ಗೇಣು.

  • ಸುಹಾಸಿನಿ ಹೇಳಿದ ನಾಗರಹಾವು ಕಥೆ..!

    suhasini shares nagarahaavu experience

    ಸುಹಾಸಿನಿ ಮತ್ತು ವಿಷ್ಣುವರ್ಧನ್. ಕನ್ನಡದ ಅದ್ಭುತ, ಯಶಸ್ವೀ ಜೋಡಿಗಳಲ್ಲಿ ಒಂದು. ಸುಹಾಸಿನಿಗೆ ತುಂಬಾ ಇಷ್ಟವಾಗುತ್ತಿದ್ದ ನಟ ವಿಷ್ಣು. ಚಿತ್ರರಂಗದ ಹೊರಗೂ ವಿಷ್ಣುಗೆ ಒಳ್ಳೆಯ ಗೆಳತಿಯಾಗಿದ್ದ ಸುಹಾಸಿನಿ, ವಿಷ್ಣುವರ್ಧನ್ ಅವರನ್ನು ಮೊದಲು ನೋಡಿದ್ದೇ ನಾಗರಹಾವು ಚಿತ್ರದಲ್ಲಿ. ಅಂದಹಾಗೆ ನಾಗರಹಾವು ಸುಹಾಸಿನಿ ನೋಡಿದ ಮೊದಲ ಕನ್ನಡ ಸಿನಿಮಾ.

    ``ನಾಗರಹಾವು ಚಿತ್ರ ನೋಡಿದಾಗ ನನಗೆ 13 ವರ್ಷ. ಅಂತಾರಾಜ್ಯ ಅಥ್ಲೆಟಿಕ್ಸ್ ಟೂರ್ನಿಯಲ್ಲಿ ಭಾಗವಹಿಸಿದ್ದೆ. ಕರ್ನಾಟಕಕ್ಕೆ ಬಂದಿದ್ದೆ. ಕರ್ನಾಟಕದ ಎದುರು ಪಂದ್ಯ ಸೋತೆವು. ಅದೇ ದಿನ ಸಂಜೆ ಸಿನಿಮಾ ನೋಡೋಕೆ ಹೋದ್ವು. ಹಾಗೆ ನೋಡಿದ ಸಿನಿಮಾ ನಾಗರಹಾವು. ಅಲ್ಲಿಯವರೆಗೆ ನನಗೆ ಕಮಲ್‍ಹಾಸನ್ ಒಬ್ಬರೇ ಶ್ರೇಷ್ಟ ನಟ ಎಂಬ ಭಾವನೆಯಿತ್ತು. ಅವರು ನನ್ನ ಚಿಕ್ಕಪ್ಪ ಅಲ್ವಾ..? ಆದರೆ, ವಿಷ್ಣುವರ್ಧನ್ ಅವರನ್ನು ನೋಡಿದ ಮೇಲೆ ಅದು ಬದಲಾಯ್ತು.

    ಆಗ ವಿಷ್ಣುವರ್ಧನ್ ಸೇರಿದಂತೆ ಚಿತ್ರದಲ್ಲಿದ್ದ ಎಲ್ಲರೂ ಹೊಸಬರು. ಪುಟ್ಟಣ್ಣ ಕಣಗಾಲ್ ಅವರಿಗೇನೋ ಆಗಲೇ ದೊಡ್ಡ ಮಟ್ಟದ ಹೆಸರಿತ್ತು. ನಾನು ನೋಡಿದ ಮೊದಲ ಆ್ಯಂಗ್ರಿ ಯಂಗ್‍ಮ್ಯಾನ್ ಅಮಿತಾಬ್ ಬಚ್ಚನ್ ಅಲ್ಲ, ವಿಷ್ಣುವರ್ಧನ್.''

    ಇದು ಸುಹಾಸಿನಿ ಹೇಳಿಕೊಂಡಿರುವ ನಾಗರಹಾವು ಕಥೆ. ನಾಗರಹಾವು ಚಿತ್ರದ ಮೂಲಕವೇ ಬೆಳಕಿಗೆ ಬಂದ ಅಂಬರೀಷ್ ಅವರ ಜೊತೆಯಲ್ಲಿ ಸುಹಾಸಿನಿ ಈಗ ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರದಲ್ಲಿ ನಟಿಸಿದ್ದಾರೆ.

  • ಸುಹಾಸಿನಿಗೆ ವಯಸ್ಸಾಗಿದ್ರೂ.. ಅದೇ ಬಂಧನದ ನಂದಿನಿ

    suhasini remembers bandhan movie character

    ತಮಿಳು, ತೆಲುಗಿಗೆ ಹೋಲಿಸಿದರೆ, ಸುಹಾಸಿನಿ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಚಿತ್ರಗಳಲ್ಲಿ. ಆದರೆ, ನಟಿಸಿದ ಚಿತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ವಿಶೇಷ. ಬೆಂಕಿಯಲ್ಲಿ ಅರಳಿದ ಹೂವು, ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಸುಪ್ರಭಾತ, ಹಿಮಪಾತ, ಹೊಸ ನೀರು, ಹೆಂಡ್ತಿಗೇಳ್ತೀನಿ.. ಹೀಗೆ ಹಲವು ವಿಶೇಷಗಳಿವೆ. ಆದರೆ, ಈಗಲೂ ಸುಹಾಸಿನಿಗೆ ಕಾಡೋದು ಬಂಧನ ಚಿತ್ರದ ನಂದಿನಿ ಪಾತ್ರವಂತೆ.

    ಅಂದಹಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಪಾತ್ರದ ಹೆಸರು ನಂದಿನಿ. ಚಿತ್ರದಲ್ಲಿ ನಟಿಸೋವಾಗ ಬಂಧನದ ನಂದಿನಿ ನೆನಪಾಗುತ್ತಲೇ ಇದ್ದಳು ಅಂತಾರೆ ಸುಹಾಸಿನಿ. ಅಂಬರೀಷ್ ಆತ್ಮೀಯ ಸ್ನೇಹಿತ. ಪತಿ ಮಣಿರತ್ನಂ, ಚಿಕ್ಕಪ್ಪ ಕಮಲ್‍ಹಾಸನ್ ಅವರಿಗೂ ಆಪ್ತರು. ಆದರೆ, ಅವರ ಜೊತೆ ನಟಿಸಿದ್ದು ಎರಡೇ ಸಿನಿಮಾಗಳಲ್ಲಿ. ಶಾಟ್ ಶುರುವಾಗುವವರೆಗೆ ತಮಾಷೆ ಮಾಡುತ್ತಾ, ಕ್ಯಾಮೆರಾ ಆನ್ ಆದೊಡನೆ ಸೀರಿಯಸ್ ಆಗುವ ಅಂಬರೀಷ್ ಸದಾ ನಗುತ್ತಾ, ನಗಿಸುತ್ತಾ ಇರುವ ವ್ಯಕ್ತಿ ಅಂತಾರೆ ಸುಹಾಸಿನಿ.

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಅವರ ಮಗನಿಗಿಂತ ಕಿರಿಯ ವಯಸ್ಸಿನ ನಿರ್ದೇಶಕನ ಜೊತೆ ಕೆಲಸ ಮಾಡುತ್ತಿದ್ದಾರೆ. ಅದೇ ನನಗೆ ಸ್ಪೆಷಲ್. ಚಿತ್ರದ ಪಾತ್ರವೂ ಸ್ಪೆಷಲ್ಲಾಗಿಯೇ ಇದೆ ಅಂತಾರೆ ಸುಹಾಸಿನಿ.

    ಚಿತ್ರದಲ್ಲಿ ಯಂಗ್ ಸುಹಾಸಿನಿಯಾಗಿ ಶೃತಿ ಹರಿಹರನ್ ನಟಿಸುತ್ತಿದ್ದು, ಯಂಗ್ ಅಂಬರೀಷ್ ಆಗಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಗುರುದತ್ ಗಾಣಿಗ ಎಂಬ ಯುವಕನಿಗೆ ಇದು ಪ್ರಥಮ ಚಿತ್ರ. ಆತನ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿರುವುದು ಸುದೀಪ್. ಇದು ಜಾಕ್ ಮಂಜು ನಿರ್ಮಾಣದ ಸಿನಿಮಾ.