` vasuki vaibhav - chitraloka.com | Kannada Movie News, Reviews | Image

vasuki vaibhav

  • Book on Rama Rama Re

    rama rama re image

    Last year's hit film 'Rama Rama Re' is all set to be released once again. This time not as a film, but as a book. Yes, the team of 'Rama Rama Re' is silently working on the making of 'Rama Rama Re' in book format and will be releasing the book in the month of November. Earlier, the team had planned to make a video of the making of the film. Now the same content will be in a book format.

    'Rama Rama Re' stars Nataraj, Radha Ramachandra, Dharmanna, Jayaram, Bimbasri and others in prominent roles. Vasuki Vaibhav is the music director of the film. The film is directed by Satyaprakash.

  • Vasuki Vaibhav Plays A Cameo In 'Man of the Match'

    Vasuki Vaibhav Plays A Cameo In 'Man of the Match'

    Vaibhav is not new to acting. The music composer and singer has acted in a couple of films as a child artist many years ago. Now Vasuki has played a cameo role in 'Rama Rama Re' and 'Ondalla Eradalla' fame director Satyaprakash's new film 'Man of the Match'. 

    'Man of the Match' was launched before the second lockdown in Bangalore. The shooting of the film has been concluded and recently Vasuki Vaibhav was seen playing a cameo role in the song. Vaibhav who has composed and sung the song will be seen enacting it. The song is written by Yogaraj Bhatt, while Satyaprakash has choreographed the song.

    Though the film is titled as 'Man of the Match', the film has nothing to do with cricket. The film revolves around an audition of a film and discusses the emotional journey of few people who have come for the audition. The film is produced by PRK Productions, Mayura Motion Pictures and Satya Pictures jointly. Dharmanna, Nataraj, Veena Sundar and others play prominent roles in the film.

  • ಕೊಲ್ತಿಯಾ.. ಕೊಲ್ತಿಯಾ ಅಂತಾ ಬಂದ ವಾಸುಕಿ ವೈಭವ್  

    dad image

    ಇದು ಹೊಸಬರ ಸಿನಿಮಾ. ಚಿತ್ರದ ಹೆಸರು ಡಿಎಡಿ. ಹಾಗಂತ ಡ್ಯಾಡ್ ಎಂದು ಓದಿಕೊಳ್ಳಬೇಡಿ. ಇದರ ಅರ್ಥ ದೇವರಾಜ್ ಅಲಿಯಾಸ್ ಡೇವಿಡ್. ವಿಶಾಲ್, ಚಿರಾಗ್, ಸಾಯಿ ಮಂಜುನಾಥ್, ಮಹಿಕಾ ಪಾತ್ರಧಾರಿಗಳು. ಹೊಸಬರು. ಆದರೆ.. ಹಾಡು ಮಾತ್ರ ಯೂಥ್ ಫುಲ್ಲಾಗಿದೆ.

    ಅರ್ಜುನ್ ಕೃಷ್ಣ ಬರೆದಿರೋ ಹಾಡಿಗೆ ವಾಸುಕಿ ವೈಭವ್ ಚೆಂದದ ಧ್ವನಿ ಕೊಟ್ಟಿದ್ದಾರೆ. ಅರ್ಜುನ್ ಸೇಠ್ ಮ್ಯೂಸಿಕ್ಕು. ಕೊಲ್ತಿಯಾ.. ಕೊಲ್ತಿಯಾ ಅನ್ನೋ ಹಾಡು.. ಕಾಲೇಜಿನಲ್ಲಿ ಕಂಡ ಹುಡುಗಿಯನ್ನು ಪ್ರೀತಿಸಿ.. ಪಟಾಯಿಸುವ ಪ್ರಯತ್ನದಲ್ಲಿದ್ದಾಗ.. ಅವಳು ಕೈಕೊಟ್ಟು ಹೋಗುವ ಒಂದಿಡೀ ಕಥೆಯನ್ನು ಒಂದು ಹಾಡಿನಲ್ಲಿ ತೋರಿಸಿದ್ದಾರೆ ನಿರ್ದೇಶಕ ಮತ್ತು ಈ ಹಾಡಿನ ಬರಹಗಾರ ಹಾಗೂ ನಿರ್ಮಾಪಕರೂ ಆಗಿರುವ ಅರ್ಜುನ್ ಕೃಷ್ಣ.

  • ನರಕಕ್ ಇಳ್ಸಿ.. ನಾಲಗೆ ಸೀಳ್ಸಿ.. ಪವರ್ ಸ್ಟಾರ್ ಹಾಡು ಕೇಳಿದ್ರಾ..?

    puneeth rajkumar image

    ನರಕಕ್ ಇಳ್ಸಿ.. ನಾಲ್ಗೆ ಸೀಳ್ಸಿ.. ಬಾಯ್ ಒಲಿಸಾಕಿದ್ರೂನೆ.. ಮೂಗ್ನಲ್ ಕನ್ನಡ್ ಪದವಾಡ್ತೀನಿ.. ನನ್ನ ಮನಸ್ಸನ್ ನೀನ್ ಕಾಣೆ.. ಹೆಂಡ್‍ಗುಡುಕ ರತ್ನನ ಪದವಿದು. ಜಿ.ಪಿ.ರಾಜರತ್ನಂ ಅವರು ಸೃಷ್ಟಿಸಿದ ಹೆಂಡ್‍ಗುಡುಕ ರತ್ನನನ್ನು ಅವನ ಕನ್ನಡಕ್ಕಾಗಿಯೇ ಸ್ಮರಿಸುತ್ತಾರೆ ಕನ್ನಡಿಗರು. ಆ ಹಾಡು ನೆನಪಿಸುವ ಹಾಡೊಂದನ್ನು ಪವರ್ ಸ್ಟಾರ್ ಪುನೀತ್ ಹಾಡಿದ್ದಾರೆ. ಫ್ರೆಂಚ್ ಬಿರಿಯಾನಿ ಚಿತ್ರಕ್ಕಾಗಿ.

    ವಾಸುಕಿ ವೈಭವ್ ಸಂಗೀತ ನೀಡಿರುವ ಹಾಡಿಗೆ ಅದೇ ಜೋಷ್‍ನಲ್ಲಿ ಶಕ್ತಿ ತುಂಬಿದ್ದಾರೆ ಪುನೀತ್. ಇದು ಪುನೀತ್ ಅವರದ್ದೇ ನಿರ್ಮಾಣದ ಚಿತ್ರ. ರತ್ನನ ಹಾಡುಗಳನ್ನು ಯಥಾವತ್ ಬಳಸಿಕೊಂಡಿಲ್ಲ. ವಾಸುಕಿ ವೈಭವ್ ಮತ್ತು ಅಭಿಷೇಕ್ ಸಾಹಿತ್ಯವೂ ಇದೆ. ಏನ್ ಮಾಡೋದು ಸ್ವಾಮಿ ಹಾಡಿನಲ್ಲಿ ಚೂರೇ ಚೂರು ರತ್ನನ ಪದ ಬಳಸಿಕೊಂಡಿದ್ದಾರೆ.

    ಪನ್ನಗಾಭರಣ ನಿರ್ದೇಶನದ ಫ್ರೆಂಚ್ ಬಿರಿಯಾನಿ, ಒಟಿಟಿಯಲ್ಲಿಯೇ ನೇರವಾಗಿ ರಿಲೀಸ್ ಆಗುತ್ತಿರುವ 2ನೇ ಕನ್ನಡ ಚಿತ್ರ. ಡ್ಯಾನಿಷ್ ಸೇಟ್ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ಕಾಮಿಡಿ ಥ್ರಿಲ್ಲರ್ ಕಥೆಯಿದೆ.

     

  • ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ - ಕಿಚ್ಚನಂತೆಯೇ ಹಾಡಿದ ಆದಿತಿ

    vasuki vaibhavi leads the song

    ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ.. ಒಂದ್ ಮಾತೂ ಬತ್ತದೆ.. ಒಂದ್ ಮಾತೂ ಹೋಯ್ತದೆ.. ಜೀವನದಲ್ಲಿ ಏನೇ ಬಂದರೂ ಸಮಾಧಾನದಿಂದ ಇರಬೇಕು. ಮನುಷ್ಯನ ಮನಸ್ಸು ಕೆಟ್ಟದ್ದಲ್ಲವೇ ಅಲ್ಲ ಎಂಬ ಅರ್ಥದ ಈ ಸಾಲುಗಳ ಸೃಷ್ಟಿಕರ್ತ ವಾಸುಕಿ ವೈಭವ್. ಈ ಹಾಡು ಹುಟ್ಟಿದ್ದು ಬಿಗ್ ಬಾಸ್ ಮನೆಯಲ್ಲಿ.

    ವಾಸುಕಿ ಸೃಷ್ಟಿಸಿದ ಹಾಡಿಗೆ ಹೊಸದೊಂದು ಎತ್ತರ ಸಿಕ್ಕಿದ್ದು ಆ ಹಾಡನ್ನು ಸುದೀಪ್ ಹಾಡಿದಾಗ. ವಾಸುಕಿ ವೈಭವ್ ಹುಟ್ಟುಹಬ್ಬಕ್ಕೆ ಸುದೀಪ್ ಕೊಟ್ಟ ಉಡುಗೊರೆ ಅದಾಗಿತ್ತು. ಅದಾದ ಮೇಲೆ ಆ ಹಾಡು ವೈರಲ್ಲಾಗಿ ಹೋಯ್ತು.

    ಈಗ ಆ ಹಾಡಿನ ಸ್ಫೂರ್ತಿಯಲ್ಲೇ ಆದಿತಿ ಪ್ರಭುದೇವ ಕೂಡಾ ಆ ಹಾಡು ಹಾಡಿದ್ದಾರೆ. ಹಾಡಿನ ಸಾಹಿತ್ಯ ಇಷ್ಟವಾಯ್ತು. ಮೊದಲ ಬಾರಿಗೆ ಹಾಡಿದ್ದೇನೆ. ಹಾಡು ಹಾಡೋಕೆ ಸುದೀಪ್ ಸರ್ ಸ್ಫೂರ್ತಿ. ಕೆಟ್ಟದಾಗಿದ್ದರೆ ಕ್ಷಮಿಸಿಬಿಡಿ ಎಂದಿದ್ದಾರೆ ಆದಿತಿ.

  • ರಾಣಾ ದಗ್ಗುಬಾಟಿ ನಿರ್ಮಾಣದ ಚಿತ್ರಕ್ಕೆ ವಾಸುಕಿ ವೈಭವ್

    ರಾಣಾ ದಗ್ಗುಬಾಟಿ ನಿರ್ಮಾಣದ ಚಿತ್ರಕ್ಕೆ ವಾಸುಕಿ ವೈಭವ್

    ವಾಸುಕಿ ವೈಭವ್. ಮನಸ್ಸು ಮುಟ್ಟುವ ಹಾಡುಗಳಿಗೆ ಹೆಸರುವಾಸಿ. ರಾಮಾ ರಾಮಾ ರೇ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಒಂದಲ್ಲ ಎರಡಲ್ಲ,  ಫ್ರೆಂಚ್ ಬಿರಿಯಾನಿ.. ಈಗ ಬಡವ ರಾಸ್ಕಲ್.. ಮನ್ಸಿಂದ ಯಾರೂನೂ ಕೆಟ್ಟೋರಲ್ಲ ಹಾಡಿನ ಸೃಷ್ಟಿಕರ್ತರೂ ಇವರೇ. ಇಂತಹ ವಾಸುಕಿ ವೈಭವ್ ರಾಣಾ ದಗ್ಗುಬಾಟಿ ನಿರ್ಮಾಣದ 35 ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

    35 ಚಿತ್ರದಲ್ಲಿ ಕಥೆಯೇ ಹೀರೋ. ನಿವೇತಾ ಥಾಮಸ್ ನಾಯಕಿ. ನಾಲ್ಕು ಹಾಡುಗಳಿವೆ. ನನ್ನ ಕೆಲಸ ಶುರುವಾಗಿದೆ. ಎಲ್ಲವೂ ಕಂಟೆಂಟ್ ಓರಿಯಂಟೆಡ್ ಹಾಡುಗಳೇ. ನನ್ನ ಮ್ಯೂಸಿಕ್ ಜರ್ನಿಗೆ ಇದು ಹೊಸ ಚೈತನ್ಯ ನೀಡಲಿದೆ ಅನ್ನೋದು ವಾಸುಕಿ ವೈಭವ್ ವಿಶ್ವಾಸ.

  • ವಾಸುಕಿ ವೈಭವ್ ಮಾಸ್ ಆದಾಗ.. ಬಡವ ರಾಸ್ಕಲ್

    ವಾಸುಕಿ ವೈಭವ್ ಮಾಸ್ ಆದಾಗ.. ಬಡವ ರಾಸ್ಕಲ್

    ರಾಮಾ ರಾಮಾ ರೇ.. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮುಂದಿನ ನಿಲ್ದಾಣ, ಫ್ರೆಂಚ್ ಬಿರಿಯಾನಿ, ಒಂದಲ್ಲ.. ಎರಡಲ್ಲ..

    ಎಲ್ಲವೂ ಪ್ರಯೋಗಾತ್ಮಕವಾಗಿ ಗೆದ್ದ ಚಿತ್ರಗಳೇ.. ಜೊತೆಗೆ ಬಿಗ್ ಬಾಸ್ ಶೋನಲ್ಲಿ ಅವರೇ ಹಾಡಿದ್ದ ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ.. ಹಾಡು.. ಹೀಗೆ ಕ್ಲಾಸ್ ಚಿತ್ರಗಳಿಗೇ ಬ್ರಾಂಡ್ ಆಗಿದ್ದ ವಾಸುಕಿ ವೈಭವ್ ಅನ್ನೋ ಕ್ಲಾಸ್ ಮ್ಯೂಸಿಕ್ ಡೈರೆಕ್ಟರ್ ಈಗ ಮಾಸ್ ಆಗಿದ್ದಾರೆ. ಮಾಸ್ ಮಾಡಿರೋದು ಡಾಲಿ ಧನಂಜಯ್.

    ನಂಗೆ ಬಡವ ರಾಸ್ಕಲ್ ಮೊದಲ ಔಟ್ & ಔಟ್ ಕಮರ್ಷಿಯಲ್ ಸಿನಿಮಾ. ಈ ಹಿಂದೆ ನಾನು ಸಂಗೀತ ನೀಡಿದ್ದ ಚಿತ್ರಗಳಲ್ಲಿ ಫೈಟ್ ಸನ್ನಿವೇಶಗಳು ಇದ್ದವು. ಆದರೆ.. ಈ ಚಿತ್ರದಲ್ಲಿ ನಾನು ಮಾಸ್ ಆಡಿಯನ್ಸ್‍ಗಾಗಿಯೇ ಮ್ಯೂಸಿಕ್ ಕಂಪೋಸ್ ಮಾಡಿದ್ದೇನೆ. ಈಗ ರಿಲೀಸ್ ಆಗಿರೋ ಟ್ರೇಲರ್ ಮತ್ತು ಹಾಡುಗಳು ಪ್ರೇಕ್ಷಕರಿಗೆ ಮಾಸ್ ಆಗಿ ಕ್ಲಾಸ್ ತೋರಿಸಿವೆ ಅಂತಾ ಖುಷಿಯಾಗಿರೋದು ವಾಸುಕಿ ವೈಭವ್.

    ಶಂಕರ್ ಗುರು ನಿರ್ದೇಶನದ ಫಸ್ಟ್ ಸಿನಿಮಾ ಬಡವ ರಾಸ್ಕಲ್. ಈ ವಾರ ರಿಲೀಸ್ ಆಗುತ್ತಿದೆ.

  • ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

    ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

    ಹರಿಕಥೆ ಅಲ್ಲ ಗಿರಿಕಥೆ. ಪ್ರೇಕ್ಷಕರು ಇದನ್ನಾಗಲೇ ಶಾರ್ಟ್ & ಸ್ವೀಟ್ ಆಗಿ ಹೆಚ್.ಕೆ.ಜಿ.ಕೆ. ಎನ್ನುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿರೋ ಚಿತ್ರದಲ್ಲಿ ಕಾಮಿಡಿ ಬ್ಯಾಕ್‍ಗ್ರೌಂಡ್ ಸ್ಟೋರಿ. ಇದೇ ವಾರ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ನಿರ್ದೇಶಕರಷ್ಟೇ ಅಲ್ಲ, ನಾಯಕಿಯರೂ ಇಬ್ಬಿಬ್ಬರು. ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್. ಈ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್.

    ಬಿಗ್‍ಬಾಸ್‍ನಲ್ಲಿ ಮನ್ಸಿಂದ ಯಾರೂನೂ ದೊಡ್ಡೋರಲ್ಲ ಅನ್ನೋ ಸೀರಿಯಸ್ ಹಾಡಿನ ಮೂಲಕ ಕನ್ನಡಿಗರ ಮನೆ ಮನ ತಲುಪಿದ ವಾಸುಕಿ ವೈಭವ್, ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರದಲ್ಲಿ ಮಾಸ್ ಹಾಡುಗಳನ್ನೂ ಕೊಟ್ಟು ಗೆದ್ದಿದ್ದಾರೆ. ಈಗ ಕಾಮಿಡಿ ಟ್ರ್ಯಾಕ್ ಸಿನಿಮಾ.

    ಆ್ಯಕ್ಷನ್ ಮತ್ತು ಎಮೋಷನ್ ಸಿನಿಮಾಗಳಿಗೆ ಸಂಗೀತ ನೀಡುವುದಕ್ಕಿಂತ ದೊಡ್ಡ ಚಾಲೆಂಜ್ ಕಾಮಿಡಿ ಸಿನಿಮಾಗಳಿಗೆ ಮ್ಯೂಸಿಕ್ ನೀಡೋದು. ಜೊತೆಗೆ ಚಿತ್ರದಲ್ಲಿ ಆಗಲೇ ಶೂಟಿಂಗ್ ಆಗಿತ್ತು. ಆ ದೃಶ್ಯಗಳಿಗೆ ತಕ್ಕಂತೆ ಮ್ಯೂಸಿಕ್ ಕೊಡುವುದು ಇನ್ನೂ ದೊಡ್ಡ ಚಾಲೆಂಜ್ ಎನ್ನುವ ವಾಸುಕಿ ವೈಭವ್ ಚಿತ್ರದ ನಿರ್ದೇಶಕರಿಗೆ ಸಂಗೀತದ ಕ್ರೆಡಿಟ್ ಕೊಟ್ಟಿದ್ದಾರೆ. ಅವರಿಗೆ ಏನು ಬೇಕು ಅನ್ನೊದು ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಕೆಲಸ ಸುಲಭವಾಗುತ್ತಾ ಹೋಯಿತು ಎನ್ನುವ ವಾಸುಕಿ ವೈಭವ್ ಅವರಿಗೆ ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿರೋದು ಖುಷಿ ಕೊಟ್ಟಿದೆ.

    ಜೂ.ಮೊನಾಲಿಸಾ ಮತ್ತು ಬಾವರ್ಚಿ ಹಾಡುಗಳು ಹಿಟ್ ಆಗಿವೆ.

    ಚಿತ್ರದ ಹಾಡುಗಳಿಗೆ ಸಾಹಿತ್ಯ ಕೊಟ್ಟಿರೋದು ಯೋಗರಾಜ್ ಭಟ್, ಸತ್ಯ ಪ್ರಕಾಶ್, ತ್ರಿಲೋಕ್ ವಿಕ್ರಂ ಮತ್ತು ಕಲ್ಯಾಣ್.