` niveditha gowda, - chitraloka.com | Kannada Movie News, Reviews | Image

niveditha gowda,

 • ``ನಾವೆಲ್ಲ ಮನೇಲೆ ಇರೋಣ.. ಮಿಸ್ ಆದ್ರೆ ಡೈರೆಕ್ಟ್ ಸ್ಮಶಾಣ..''

  chandan niveditha has special song for corona virus

  ಎಣ್ಣೆ ಸಪ್ಲೈ ಮಾಡ್ಬಹುದೇನೋ ಕುಡುಕ್ರು ಸ್ವಲ್ಪ ತಡ್ಕಳಿ..

  ಪೊಲೀಸ್ ಲಾಠಿ ಏಟು ತಿಂದವ್ರು ಮುಲಾಮು ಹಚ್ಕೊಳಿ..

  ನಾವೆಲ್ಲ ಮನೇಲೆ ಇರೋಣ.. ಮಿಸ್ ಆದರೆ ಡೈರೆಕ್ಟು ಸ್ಮಶಾಣ..

  ಎರಡು ಸಲ ಮಾಡ್ಕೊಳಿ ಸ್ನಾನ.. ತುಂಬ ಡೇಂಜರ್ ಕಣ್ರೋ ಈ ಕೊರೋನ.. ಕೊರೋನಾ.. ಕೊರೋನಾ..

  ನಿಂಗೆ ಸದ್ಯದಲ್ಲೇ ಮಾಡ್ತಿವಿ ತಿಥಿನಾ..

  ಇದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ಕೊರೋನಾ ಗೀತೆ. ಕೊರೋನಾ ಜಾಗೃತಿಗಾಗಿ ಮೊನ್ನೆ ಮೊನ್ನೆಯಷ್ಟೇ ಎಸ್‍ಪಿಬಿ ಹಾಡು ಹಾಡಿದ್ದರು. ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ನವೀನ್ ಕೃಷ್ಣ ಏಕಪಾತ್ರಾಭಿನಯ ಮಾಡಿದ್ದರು. ಬೇರೆ ಬೇರೆ ಭಾಷೆಗಳಲ್ಲಿ ಹಾಡುಗಳ ಸುರಿಮಳೆಯೇ ಸುರಿಯತ್ತಿದೆ. ಕನ್ನಡದಲ್ಲಿ ರ್ಯಾಪ್ ಸಾಂಗ್ ಬಂದಿದೆ.

   

 • Chandan and Niveditha Gowda gets engaged

  chandan and niveditha gets engaged

  'Big Boss' stars Chandan Shetty and Niveditha Gowda on Monday got engaged in a private ceremony in Mysore.

  Rapper and music director Chandan Shetty and Niveditha Gowda participated as contestants in the fifth season of the 'Big Boss'. Chandan went on to become the winner of the fifth season and there were speculations that Chandan and Niveditha are in love. It was confirmed last month when Chandan officially proposed to Niveditha during the Yuva Dasara in Mysore. Chandan proposing in a government function had irked a lot of opposition from all over and Chandan finally apologised for proposing publicly.

  On Monday, Chandan and Niveditha finally got engaged in a private function in Mysore. Many from the film and television fraternity attended the engagement and wished the couple.

 • Complaint Filed Against Chandan Shetty For Proposing Niveditha Gowda On 'Yuva Dasara' Stage

  complaint filed against chandan shetty for proposing niveditha

  Popular Kannada rapper and composer Chandan Shetty lands in trouble for proposing to his girlfriend Nivedita Gowda on the stage at Yuva Dasara event in Mysuru, which is organised by State Government. 

  Alleging misuse of the public event organised by the government, a couple of complaints has been registered, one with the Mysuru police and another in Bengaluru. The complaints allege that the singer and composer Chandan Shetty misused the Mysuru Yuva Dasara stage on October 4 by proposing his girlfriend Nivedita Gowda and thereafter announcing his engagement with an exchange of rings, in front of the audience. The event was also attended by several dignitaries, invitees and government officials

  Another complaint filed before Bengaluru police, which seeks action against Chandan Shetty for hurting the feelings of Hindu religion, its culture and customs along with the tradition of Karnataka, at an event which has been held as a part of world famous Dasara festival, which has a rich history for over a hundred years.

  It further adds that the singer misused the state's machinery and the resources for personal gain and publicity apart from hurting the religious and cultural sentiments. The ' personal wedding proposal act' as stated in one of the complaints, further accuses Chandan Shetty of hurting the beliefs and insulting feelings of Navratri festival and the Goddess Chamundeshwari.

  Related Articles :-

  ದಸರಾ ವೇದಿಕೆಯಲ್ಲೇ ಐ ಲವ್ ಯೂ ನಿವೇದಿತಾ ಎಂದ ಚಂದನ್ ಶೆಟ್ಟಿ : ನಿಶ್ಚಿತಾರ್ಥ  

 • ಕೊರೋನಾ ಟೆಸ್ಟ್ : ನಿವೇದಿತಾ, ಚಂದನ್ ಶೆಟ್ಟಿ ರಿಯಾಕ್ಷನ್

  chandan shetty niveditha gowd'a reaction

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ವಿದೇಶಕ್ಕೆ ಹನಿಮೂನ್‍ಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರಿಗೆ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಸಂಘಟನೆಯೊಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ವಿಚಿತ್ರವೇನು ಗೊತ್ತೇ..? ಆ ಸಂಘಟನೆಯವರು ಮನವಿ ಮಾಡುವ ಹೊತ್ತಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಂಡಿಯಾಗೆ ವಾಪಸ್ ಬಂದು ವಾರವಾಗಿತ್ತು. ಅಷ್ಟೆ ಅಲ್ಲ, ನಿವೇದಿತಾ ಆಗಲೇ ಏರ್‍ಪೋರ್ಟ್‍ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹನಿಮೂನ್ ಸಂಭ್ರಮ ಮುಗಿದು, ನಿತ್ಯ ಜೀವನ ಶುರುವಾಗಿದೆ.

  ನಾವು ವಾರದ ಹಿಂದೆಯೇ ವಾಪಸ್ ಬಂದಿದ್ದೇವೆ. ನಾವು ಇಟಲಿಗೆ ಹೋಗಲೇ ಇಲ್ಲ. ನೆದರ್‍ಲ್ಯಾಂಡ್‍ಗೆ ಹೋಗಿದ್ದೆವು. ವಾಪಸ್ ಬಂದಿದ್ದೇವೆ. ಏರ್‍ಪೋರ್ಟ್‍ನಲ್ಲಿ ಪರೀಕ್ಷೆ ಸುದೀರ್ಘವಾಗಿ ನಡೆಯಿತು. ನೋ ಪ್ರಾಬ್ಲಂ ಎಂದಿದ್ದಾರೆ ಚಂದನ್ ಶೆಟ್ಟಿ.

  ನಿವೇದಿತಾ ಅವರ ತಾಯಿ ಹೇಮ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಮಗಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಿದ್ದೇವೆ. ಅವರು ವಾಪಸ್ ಬಂದಾಗಲೂ ಇಷ್ಟು ಆತಂಕವಾಗಿರಲಿಲ್ಲ. ಈಗ ಇವರೆಲ್ಲ ಕೇಳುತ್ತಿದ್ದರೆ ಭಯವಾಗುತ್ತಿದೆ ಎಂದಿದ್ದಾರೆ ಹೇಮ.

  ಸಿಂಪಲ್ಲಾಗ್ ಹೇಳ್ಬೇಕಂದ್ರೆ, ಚಂದನ್ ಶೆಟ್ಟಿ, ನಿವೇದಿತಾ ಇಬ್ಬರೂ ಚೆನ್ನಾಗಿದ್ದಾರೆ. ಅವರಿಬ್ಬರಿಗೂ ಕೊರೋನಾ ಟೆಸ್ಟ್ ಆಗಿದೆ. ಅವರಿಬ್ಬರಿಗೂ ಕೊರೋನಾ ಸೋಂಕು ಇಲ್ಲ.

  Also Read :-

  ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

 • ಚಂದನ್ ನಿವೇದಿತಾ ಒಂದು ಪ್ರಪೋಸಲ್ : 4 ಕೇಸು

  4 cases filed against chandan shetty and niveditha gowda

  ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ಬಿಗ್ ಬಾಸ್ ಗೊಂಬೆ ಖ್ಯಾತಿ ನಿವೇದಿತಾ ಗೌಡ ದಸರಾ ಪ್ರೇಮ ನಿವೇದನೆ ವಿವಾದವನ್ನಷ್ಟೇ ಅಲ್ಲ, ತಲ್ಲಣವನ್ನೂ ಸೃಷ್ಟಿಸಿದೆ. ಸಚಿವ ವಿ.ಸೋಮಣ್ಣನವರೇನೋ ಆರಂಭದಲ್ಲಿ ಕೇಸು, ಚಾಮುಂಡೇಶ್ವರಿ ಶಾಪ ಎಂದೆಲ್ಲ ಮಾತನಾಡಿದರೂ, ಕೊನೆ ಕೊನೆಗೆ ಹೋಗ್ಲಿ ಬಿಡಿ ಅತ್ಲಾಗೆ ಎಂದುಕೊಂಡು ಸುಮ್ಮನಾಗಿರುವಂತಿದೆ. ಸಂಸದ ಪ್ರತಾಪ್ ಸಿಂಹ ತಪ್ಪೇನಿದೆ.. ನಾನೇ ಇದ್ದಿದ್ದರೆ ಹೂಗುಚ್ಛ ಕೊಟ್ಟು ಅಭಿನಂದಿಸುತ್ತಿದ್ದೆ ಎಂದಿದ್ದಾರೆ. ಅತ್ತ, ಚಂದನ್ ಶೆಟ್ಟಿ ಕೂಡಾ ತಪ್ಪಾಗಿದ್ದರೆ ಕ್ಷಮಿಸಿ ಎನ್ನುತ್ತಿದ್ದಾರೆ. ಇಷ್ಟಿದ್ದರೂ ಕೇಸುಗಳೇನೂ ಬಿಟ್ಟಿಲ್ಲ.

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಒಟ್ಟು 4 ಕೇಸ್ ದಾಖಲಾಗಿವೆ.

  ದೂರು ನಂ.1 : ಸರ್ಕಾರಿ ವೇದಿಕೆ ದುರ್ಬಳಕೆ

  ದೂರು ನಂ.2 : ವೇದಿಕೆಗೆ ನಿವೇದಿತಾ ಅತಿಕ್ರಮ ಪ್ರವೇಶ

  ದೂರು ನಂ.3 : ಸಂಚು ರೂಪಿಸಿ ಪ್ರಚಾರ ಪಡೆದಿರುವುದು

  ದೂರು ನಂ. 4 : ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ

  ಇದಿಷ್ಟೂ ದಾಖಲಾಗಿರುವ ದೂರುಗಳಲ್ಲಿರೋ ಆರೋಪಗಳು. ಇಬ್ಬರ ವಿರುದ್ಧ ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹ್ಸಿನ್ ಖಾನ್, ಆರ್‍ಟಿಐ ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿ ಸದಸ್ಯರು ದೂರು ಕೊಟ್ಟಿದ್ದಾರೆ. ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಸ್‍ಪಿಯೇ ನೋಟಿಸ್ ಕೊಟ್ಟಿದ್ದಾರೆ. ಪ್ರಕರಣ ಮುಗಿಯುವಂತೆ ಕಾಣುತ್ತಿಲ್ಲ.

 • ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

  mysuru citizens urge chandan shetty and niveditha gowda for corona virus test

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ ಟ್ರಿಪ್‍ನಲ್ಲಿದ್ದಾರೆ. ಈ ಪ್ರಣಯದ ಪಕ್ಷಿಗಳು ತಮ್ಮ ಹನಿಮೂನ್‍ನ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸುದ್ದಿ ಅದಲ್ಲ, ಈಗ ಅವರನ್ನು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಹೋಗಿದೆ.

  ಮೈಸೂರಿನ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಘಟಕದ ಅಧ್ಯಕ್ಷ ರಫೀಕ್ ಅಲಿ & ಸದಸ್ಯರು ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿ ಯಾವುದೇ ಕೊರೋನಾ ಕೇಸ್ ಇಲ್ಲ. ಅಂಥಾದ್ದರಲ್ಲಿ ವಿದೇಶದಿಂದ ಬರುತ್ತಿರುವ ಅವರಿಬ್ಬರನ್ನೂ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.

 • ದಸರಾ ವೇದಿಕೆಯಲ್ಲೇ ಐ ಲವ್ ಯೂ ನಿವೇದಿತಾ ಎಂದ ಚಂದನ್ ಶೆಟ್ಟಿ : ನಿಶ್ಚಿತಾರ್ಥ  

  chandan shetty proposes niveditha gowda

  ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್‍ಬಾಸ್ ಮೂಲಕ ಪರಿಚಯವಾದ ನಿವೇದಿತಾ ಗೌಡ ಈಗ ಬರೀ ಗೆಳೆಯಗೆಳತಿಯಲ್ಲ. ಪ್ರೇಮಿಗಳಾಗಿದ್ದಾರೆ. ಚಂದನ್ ಶೆಟ್ಟಿ, ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ವೇದಿಕೆಯ ಮೇಲೇ ಉಂಗುರ ತೊಡಿಸಿದ್ದಾರೆ.

  ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ಚಂದನ್ ಶೆಟ್ಟಿ, ಹಾಡು ಮುಗಿದ ಮೇಲೆ ನಿವೇದಿತಾಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ.

  ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಲೇ ನಿವೇದಿತಾ ಗೌಡ, ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದಾರೆ. ಇದು ನಮಗೂ ಗೊತ್ತಿರಲಿಲ್ಲ ಅನ್ನೋದು ಇಬ್ಬರ ತಂದೆ ತಾಯಿ ಮಾತು.

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೇಮ ನಿವೇದನೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದ್ದು, ಪರ್ಸನಲ್ ವಿಚಾರವನ್ನು ದಸರಾ ವೇದಿಕೆಗೆ ತಂದಿದ್ದು ಸರಿಯಲ್ಲ, ನಾಡಹಬ್ಬ ಇಂತಹವುಗಳಿಗೆಲ್ಲ ವೇದಿಕೆಯಾಗಬಾರದು ಎಂದು ಚಂದನ್ ಶೆಟ್ಟಿ, ನಿವೇದಿತಾ ಗೌಡ, ದಸರಾ ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ.

 • ನಿವೇದಿತಾ ಗೌಡ 19, ಚಂದನ್ ಶೆಟ್ಟಿ 30 : ನಿಶ್ಚಿತಾರ್ಥ ಆಗೋಯ್ತು.. ಮದುವೆ ಫಿಕ್ಸ್ ಆಯ್ತು..!

  chandan shetty niveditha gowda gets engaged

  ಮೈಸೂರು ದಸರಾದ ವೇದಿಕೆಯಲ್ಲಿ ಪ್ರಪೋಸ್ ಮಾಡಿ ವಿವಾದ ಸೃಷ್ಟಿಸಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರೊಂದಿಗೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಇದು ಅಧಿಕೃತ. ಮೈಸೂರಿನ ಖಾಸಗಿ ಹೋಟೆಲ್ಲಿನಲ್ಲಿ ನಿಶ್ಚಿತಾರ್ಥ ನೆರವೇರಿದೆ. ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ.

  ನಿವೇದಿತಾಗೆ 19 ವರ್ಷ. ಚಂದನ್ ಶೆಟ್ಟಿಗೆ 30 ವರ್ಷ. ಇಬ್ಬರ ಜಾತಿಯೂ ಬೇರೆ ಬೇರೆ. ಆದರೆ ಪ್ರೀತಿ ಇದೆಲ್ಲವನ್ನೂ ಮೀರಿ, ಇಬ್ಬರೂ ಪರಸ್ಪರ ಒಪ್ಪಿ.. ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರ ಪ್ರೇಮ ಕಲ್ಯಾಣಕ್ಕೆ ಮನೆಯವರ ಆಶೀರ್ವಾದವೂ ದೊರೆತಿದೆ.

  ಬಿಗ್‍ಬಾಸ್ ಮನೆಯಿಂದ ಶುರುವಾದ ಪ್ರೀತಿ ಈಗ ನಿಶ್ಚಿತಾರ್ಥದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.

 • ನಿವೇದಿತಾ ಗೌಡ ಮೊದಲ ದಿನವೇ ಹೊರಬರುತ್ತಾರಾ..?

  big boss contestant niveditha gowda

  ನಿವೇದಿತಾ ಗೌಡ ಎಂಬ ಈ 18ರ ಬಾಲೆ, ಈಗ ಬಿಗ್​ಬಾಸ್ ಸ್ಪರ್ಧಿ. ಬಿಗ್​ಬಾಸ್ ಸ್ಪರ್ಧಿಗಳಲ್ಲೇ ಅತಿ ಚಿಕ್ಕ ವಯಸ್ಸಿನ ಹುಡುಗಿ, ಹುಟ್ಟಿದ್ದು, ಬೆಳೆದಿದ್ದು ಓದಿದ್ದು ಮೈಸೂರಿನಲ್ಲೇ ಆದರೂ ಸರಿಯಾಗಿ ಕನ್ನಡ ಮಾತನಾಡೋಕೆ ಬರಲ್ಲ. ಹೀಗಾಗಿ ಈಕೆಯ ಕನ್ನಡ ಕಂಗ್ಲಿಷ್ ಆಗಿಹೋಗಿದೆ. ಜಾಲತಾಣಗಳಲ್ಲಂತೂ ನಿವೇದಿತಾ ಗೌಡರನ್ನು ಸಂಜನಾ ಟ್ವಿನ್ ಅಂತಾನೇ ಕರೀತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ನಿವೇದಿತಾ ಗೌಡ.

  ಅರ್ಧಗಂಟೆಗೊಮ್ಮೆ ಬಟ್ಟೆ ಬದಲಾಯಿಸುವುದು ಈಕೆಯ ಹವ್ಯಾಸವಂತೆ. ಅಡುಗೆ ಬರಲ್ಲ. ಡಬ್​ಸ್ಮ್ಯಾಶ್ ಅಂದ್ರೆ ತುಂಬಾನೇ ಇಷ್ಟ. ಹೀಗಿರುವ ನಿವೇದಿತಾ, ಬಿಗ್​ಬಾಸ್ ಮನೆಯ ಬಾರ್ಬಿ ಡಾಲ್. ಅದೇ ರೀತಿಯ ಡ್ರೆಸ್​ನಲ್ಲಿ ಬಂದಿದ್ದ ನಿವೇದಿತಾರ ಕನ್ನಡ ವೀಕ್ಷಕರನ್ನು ಸುಸ್ತು ಹೊಡೆಸಿರುವುದು ಸುಳ್ಳಲ್ಲ.

  ಈ ನಿವೇದಿತಾ ಗೌಡ, ಮೊದಲ ದಿನವೇ ಎವಿಕ್ಷನ್​ಗೊಳಗಾಗುತ್ತಾರಾ..? ಅಂದರೆ, ಹೊರಹಾಕಲ್ಪಡುತ್ತಾರಾ..? ಅಂಥದ್ದೊಂದು ಕುತೂಹಲ ಹುಟ್ಟಿಸಿರುವುದು ಪರಮೇಶ್ವರ್ ಗುಂಡ್ಕಲ್ ಅವರ ಇನ್​ಸ್ಟಾಗ್ರಾಮ್ ಸ್ಟೇಟಸ್. ಬಹುಶಃ, ಹಾಗಾಗದೇ ಇರಬಹುದು. ಆದರೆ, ಅದು ಬಿಗ್​ಬಾಸ್ ಹೌಸ್. ಆದರೂ ಆಗಬಹುದು. ಒಟ್ಟಿನಲ್ಲಿ ಬಿಗ್​ಮನೆಯಲ್ಲಿ ಮೊದಲ ದಿನವೇ ಭರಪೂರ ಮನರಂಜನೆಯಂತೂ ಕಾದಿದೆ.

   

 • ನಿವೇದಿತಾಗೆ ಕೈ ಮುಗಿದ ಕಿಚ್ಚ..!

  sudeep praises niveditha

  ಬಿಗ್‍ಬಾಸ್ ಮನೆಯ ಬಾರ್ಬಿ ಡಾಲ್ ನಿವೇದಿತಾ ಗೌಡ, ತಮ್ಮ ಕಂಗ್ಲಿಷ್‍ನಿಂದಲೇ ಫೇಮಸ್ ಆದ ಹುಡುಗಿ. ವಿಚಿತ್ರ ಆ್ಯಕ್ಸೆಂಟ್‍ನ  ಭಾಷೆಯಿಂದಾಗಿ, ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೇ ಫೇಮಸ್ ಆದವರು. ವಯಸ್ಸಿನ್ನೂ ಚಿಕ್ಕದು. ಬಿಕಾಂ ಓದುತ್ತಿರುವ ಈ ಹುಡುಗಿಗೆ ಕನ್ನಡದ ಹಿರಿಯ ನಟ, ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ಕೈ ಮುಗಿದರು ಎಂದರೆ, ನಿವೇದಿತಾ ಅಂಥದ್ದೇನು ಮಾಡಿದರು ಎಂಬ ಕುತೂಹಲ ಸಹಜ.

  ಬಿಗ್‍ಬಾಸ್‍ನಲ್ಲಿ ಈ ವಾರ ಅವರ ಕುಟುಂಬದವರೊಂದಿಗೆ ಅರ್ಧ ಗಂಟೆ ಕಳೆಯುವ ಅವಕಾಶ ನೀಡಲಾಗಿತ್ತು. ಆದರೆ, ಅರ್ಧ ಗಂಟೆ ಸಂಪೂರ್ಣ ಇರಬೇಕು ಎಂದರೆ, ಅವರ ಸಹಸ್ಪರ್ಧಿ ಅದಕ್ಕೆ ಸಹಕರಿಸಬೇಕು. ಅರ್ಧ ಗಂಟೆ ಒಂಟಿ ಕಾಲಿನ ಟೇಬಲ್ ಮೇಲಿಟ್ಟ ಮಡಕೆ ಬಿದ್ದು ಒಡೆದು ಹೋಗದಂತೆ ತಡೆಯಬೇಕು. ಒಂಟಿ ಕಾಲಿನಲ್ಲಿ ಸರ್ಕಸ್ ಮಾಡುತ್ತಲೇ ಅದನ್ನು ನಿಭಾಯಿಸಬೇಕು. ಅರ್ಧ ಗಂಟೆ ಹಾಗೆ ನಿಲ್ಲುವುದು ಸುಲಭದ ಮಾತಲ್ಲ.

  ಆದರೆ, ಬಿಗ್‍ಬಾಸ್ ಸ್ಪರ್ಧಿ ದಿವಾಕರ್ ಅವರು ತಮ್ಮ ಪತ್ನಿ ಮಮತಾ ಅವರ ಜೊತೆ ಅರ್ಧಗಂಟೆ ಕಳೆಯುವ ಅವಕಾಶ ಸಿಕ್ಕಿತು. ಆ ಅವಕಾಶ ಸಿಗುವಂತೆ ಮಾಡಿದ್ದು ನಿವೇದಿತಾ ಗೌಡ. ಬೇರೆ ಯಾವ ಸ್ಪರ್ಧಿಗಳೂ ಮಾಡದಂತಹಾ ಈ ಸಾಹಸವನ್ನು ಕಷ್ಟಪಟ್ಟು ಮಾಡಿ, ಪತಿ-ಪತ್ನಿಯ ಮಾತುಕತೆಗೆ ಅವಕಾಶ ಕೊಟ್ಟ ನಿವೇದಿತಾ ಗೌಡ, ಅರ್ಧಗಂಟೆ ಕಳೆಯುವಷ್ಟರಲ್ಲಿ ಸುಸ್ತಾಗಿ ಹೋಗಿದ್ದರು.

  ಕಿಚ್ಚ ಸುದೀಪ್ ನಿವೇದಿತಾಗೆ ಕೈ ಮುಗಿದದ್ದು ಇದೇ ಕಾರಣಕ್ಕೆ. ನಿಮ್ಮ ಪರಿಶ್ರಮ, ತ್ಯಾಗಕ್ಕೆ ನನ್ನ ಧನ್ಯವಾದ ಎಂದು ಕೈಮುಗಿದರು ಸುದೀಪ್.

 • ಮದುವೆಗೆ ಮುನ್ನ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ನಿವೇದಿತಾ ಗೌಡ

  Chandan Shetty - Niveditha Gowda Image

  ಗಾಯಕ ಚಂದನ್ ಶೆಟ್ಟಿಯ ಮುದ್ದಿನ ಗೊಂಬೆ ನಿವೇದಿತಾ ಗೌಡ. ದಸರಾ ವೇದಿಕೆಯಲ್ಲಿಯೇ ಪ್ರಪೋಸ್ ಮಾಡಿ ಸಂಚಲನ ಸೃಷ್ಟಿಸಿದ್ದರು ಚಂದನ್ ಶೆಟ್ಟಿ. ಅದು ವಿವಾದವೂ ಆಗಿತ್ತು. ಈಗ ಮದುವೆ ಫಿಕ್ಸ್ ಆಗಿದೆ. ಫೆಬ್ರವರಿ 25, 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ. ಇದರ ನಡುವೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ನಿವೇದಿತಾ ಗೌಡ.

  ನಿವೇದಿತಾ ಗೌಡಗೆ ಏರ್‍ಪೋರ್ಟ್‍ನಲ್ಲಿ ಬಿಐಎಎಲ್‍ನಲ್ಲಿ ಕೆಲಸ ಸಿಕ್ಕಿದೆ. ಆಪರೇಷನ್ ಅಸಿಸ್ಟೆಂಟ್ ಆಗಿ. ಡಿಗ್ರಿ ಮುಗಿಸಿದ ಕೂಡಲೇ ಕೆಲಸ ಸಿಕ್ಕಿದ್ದು ಖುಷಿ ಕೊಡ್ತು. ಏರ್‍ಫೋರ್ಸ್‍ನಲ್ಲಿ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕನಸು ಈಡೇರಿದೆ ಎಂದಿದ್ದಾರೆ ನಿವೇದಿತಾ ಗೌಡ.

 • ಸ್ಟಾರ್ ಆಗ್ಬುಟ್ರು ನಿವೇಡಿಟಾ ಗೌಡ

  big boss 5 contestant Gowda

  ನೀವು ಓದ್ತಾ ಇರೋದು ಸರಿಯಾಗೇ ಇದೆ. ಅದು ನಿವೇದಿತಾ ಗೌಡ ಅಲ್ಲ. ನಿವೇಡಿಟಾ ಗೌಡ. ಅದು ಫೇಮಸ್ ಆಗಿದ್ದು ಆಕೆಯ ಕಂಗ್ಲಿಷ್‍ನಿಂದ. ಬಿಗ್‍ಬಾಸ್ ಮನೆ ಸೇರಿದವರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಹುಡುಗಿ ಈ ನಿವೇದಿತಾ ಗೌಡ. ಮೈಸೂರಿನ ಹುಡುಗಿ. ಬಿಸಿಎ ಓದುತ್ತಿರುವ ಈ ಬಾರ್ಬಿ ಡಾಲ್, ಎಕ್ಸಾಂನ್ನೂ ಬಿಟ್ಟು ಬಿಗ್‍ಬಾಸ್‍ಗೆ ಸೇರಿದ್ದಾರೆ. 

  ತಮ್ಮ ಚಿತ್ರ ವಿಚಿತ್ರ ಕನ್ನಡದಿಂದಾಗಿ ಟ್ರೋಲ್ ಆದ ನಿವೇದಿತಾ, ಆ ಟ್ರೋಲ್‍ಗಳಿಂದಾನೆ ಸ್ಟಾರ್ ಕೂಡಾ ಆಗಿಬಿಟ್ಟಿದ್ದಾರೆ. ನಂಬ್ತೀರೋ ಇಲ್ವೋ... ಈಕೆಯ ಹೆಸರಲ್ಲಿ ಐದಾರು ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಆಕೆ ಇಂಗ್ಲಿಷ್ ಆಕ್ಸೆಂಟ್‍ನಲ್ಲಿ ಕನ್ನಡ ಮಾತನಾಡುವುದನ್ನು ನೋಡುವುದೇ ಒಂದು ಚೆಂದ. ಕೆಲವರು ಅದನ್ನು ಎಂಜಾಯ್ ಮಾಡಿದರೆ, ಇನ್ನೂ ಕೆಲವರು ಲೇವಡಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದ, ಗೌಡರ ಹುಡುಗಿಗೆ ಸರಿಯಾಗಿ  ಕನ್ನಡ ಬರಲ್ಲ ಅಂದ್ರೆ ಹೆಂಗೆ ಅನ್ನೋದು ಟ್ರೋಲ್ ಮಾಡೋವ್ರ ವಾದ. 

  ಆದರೆ ಅವರ ತಾಯಿ ಹೇಮಾ ಹೇಳೋದೇ ಬೇರೆ. ಅವಳು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಹಾಗೆಯೇ ಮಾತನಾಡ್ತಾ ಇದ್ಲು. ನಮಗೂ ಖುಷಿ ಕೊಡ್ತಿತ್ತು. ಅದಾದ ಮೇಲೆ ಅದನ್ನು ನಾವು ತಿದ್ದೋಕೆ ಹೋಗಲಿಲ್ಲ. ಅವಳೂ ಹಾಗೆಯೇ ಇದ್ದುಬಿಟ್ಟಳು. ಅಷ್ಟೆ. ನಂಗೆ ನಿಮ್ಮ ಥರ ಮಾತನಾಡೋಕೆ ಆಗಲ್ಲ ಮಮ್ಮಿ ಅಂಥಾಳೆ. ಏನ್ ಮಾಡೋದು. ಅದಕ್ಕೆಲ್ಲ ಅವಳನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಆಕೆಯ ತಾಯಿ.