ಧನುಷ್, ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಸೂಪರ್ ಸ್ಟಾರ್ ರಜಿನಿಕಾಂತ್ ಅಳಿಯ. ಆದರೆ, ಮಾವನ ನೆರಳಿನಲ್ಲಿ ಬೆಳೆದು ಸ್ಟಾರ್ ಆದವರಲ್ಲ. ನಟರಾಗಿಯಷ್ಟೇ ಅಲ್ಲ, ತಮ್ಮ ಬ್ಯಾನರ್‍ಗಳಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ, ವಿಭಿನ್ನ ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ನಟ. ನಿರ್ಮಾಪಕ. ನಿರ್ದೇಶಕ. ಗಾಯಕ.. ತಮಿಳಿನಲ್ಲಿ ಇಂತಹ ಪ್ರಯತ್ನಗಳಿಂದ ಯಶಸ್ಸನ್ನೂ ಗಳಿಸಿರುವ ಧನುಷ್ ಈಗ ಕನ್ನಡ ಚಿತ್ರರಂಗದತ್ತಲೂ ದೃಷ್ಟಿ ಹಾಯಿಸಿದ್ದಾರೆ.
ಸವಾರಿ, ಪೃಥ್ವಿ ಖ್ಯಾತಿಯ ಜೇಕಬ್ ವರ್ಗಿಸ್ ಅವರ ಚಿತ್ರವನ್ನು ನಿರ್ಮಾಣ ಮಾಡಲು ಧನುಷ್ ಆಸಕ್ತಿ ತೋರಿಸಿದ್ದಾರೆ. ಚಿತ್ರದ ಕಥೆ ಇಷ್ಟವಾಗಿದ್ದು ಮಾತುಕತೆ ನಡೆಯುತ್ತಿದೆ. ಇನ್ನೂ ಫೈನಲ್ ಆಗಿಲ್ಲ. ಆ ಕಥೆಗೆ ನಾಯಕಿ ಶ್ರದ್ಧಾ ಶ್ರೀನಾಥ್. ನಾಯಕ ರಿಷಿ.
ಸದ್ಯಕ್ಕೆ ಚಂಬಲ್ ಚಿತ್ರದಲ್ಲಿ ಬ್ಯುಸಿಯಾಗಿರುವ ಜೇಕಬ್ ವರ್ಗಿಸ್, ಇನ್ನು ಕೆಲವೇ ದಿನಗಳಲ್ಲಿ ಫೈನಲ್ ರಿಸಲ್ಟ್ ತಿಳಿಸುವ ಸುಳಿವು ಕೊಟ್ಟಿದ್ದಾರೆ.