` mandya ramesh, - chitraloka.com | Kannada Movie News, Reviews | Image

mandya ramesh,

 • ಅಣ್ಣಾವ್ರಿಗಾಗಿ ಸಿನಿಮಾಗೆ ಬಂದ ಮಂಡ್ಯ ರಮೇಶ್

  mandya ramesh speaking about his career and life

  ಚಿತ್ರರಂಗಕ್ಕೆ ಬಂದು ಮಿಂಚುತ್ತಿರುವವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಆಕಸ್ಮಿಕವಾಗಿ ಕಾಲಿಟ್ಟರೆ, ಇನ್ನೂ ಕೆಲವರು ಅದಕ್ಕಾಗಿ ಬೆವರು ಸುರಿಸಿ ಚಿತ್ರರಂಗಕ್ಕೆ ಬಂದವರು. ಮಂಡ್ಯ ರಮೇಶ್ ಅವರದ್ದು ಇನ್ನೊಂಥರಾ ಕಥೆ.

  ಚಿತ್ರರಂಗಕ್ಕೆ ಬರುವ ಮುನ್ನ ಮಂಡ್ಯ ರಮೇಶ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಟ. ಈಗಲೂ ಅವರು ರಂಗಭೂಮಿಯಲ್ಲೇ ಹೆಚ್ಚು ಸಕ್ರಿಯ. ಅಲ್ಲಿ ಇಲ್ಲಿ ನಾಟಕ ಮಾಡಿಕೊಂಡು ಓಡಾಡುತ್ತಿದ್ದ ಮಂಡ್ಯ ರಮೇಶ್ ಚಿತ್ರರಂಗಕ್ಕೆ ಬಂದಿದ್ದು `ಜನುಮದ ಜೋಡಿ' ಚಿತ್ರದ ಮೂಲಕ.

  ಸಿನಿಮಾ ಬಗ್ಗೆ ಅಷ್ಟೇನೂ ಪ್ರೀತಿಯಿಲ್ಲದ ಮಂಡ್ಯ ರಮೇಶ್, ಮೊದಲು ಆ ಚಿತ್ರವನ್ನು ನಿರಾಕರಿಸಿದ್ದರಂತೆ. ಆದರೆ, ಯಾವಾಗ ಆ ಸಿನಿಮಾವನ್ನು ರಾಜ್ ಬ್ಯಾನರ್ ನಿರ್ಮಿಸುತ್ತಿದೆ ಎಂದು ಗೊತ್ತಾಯಿತೋ, ತಕ್ಷಣ ಒಪ್ಪಿಕೊಂಡುಬಿಟ್ಟರಂತೆ. 

  ಕಾರಣವೇನು ಗೊತ್ತಾ..? ಅದು ರಾಜ್ ಬ್ಯಾನರ್ ಚಿತ್ರ. ಹೀಗಾಗಿ ರಾಜ್ ಕುಮಾರ್ ಅವರನ್ನು ಹತ್ತಿರದಿಂದ ನೋಡಬಹುದು. ಅದೊಂದೇ ಕಾರಣಕ್ಕೆ ಜನುಮದ ಜೋಡಿ ಒಪ್ಪಿಕೊಂಡೆ. ನಂತರ ಚಿತ್ರರಂಗ ನಡೆಸಿಕೊಂಡು ಹೋಯಿತು ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ ಮಂಡ್ಯ ರಮೇಶ್.

 • ಚಾನ್ಸ್‍ಗಾಗಿ ಮಂಚ, ಚಿತ್ರರಂಗದಲ್ಲಿರೋದು ನಿಜ - ಮಂಡ್ಯ ರಮೇಶ್

  mandya ramesh talks about casting couch

  ಚಿತ್ರರಂಗದಲ್ಲಿ ನಟಿಯರು ಅವಕಾಶಗಳಿಗಾಗಿ ಮಂಚ ಹತ್ತಬೇಕಾದ ಪರಿಸ್ಥಿತಿ ಇದೆ ಅನ್ನೊದನ್ನ ಹಲವು ನಟಿಯರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಷ್ಟೆ ಅಲ್ಲ, ಎಲ್ಲ ಚಿತ್ರರಂಗದಲ್ಲೂ ಈಗ ಒಬ್ಬೊಬ್ಬರೇ ನಟಿಯರು ಈ ಕುರಿತು ತಮ್ಮ ಧ್ವನಿ ಹೊರಹಾಕುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಟರೊಬ್ಬರು ಇದನ್ನು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಂಡಿರೋದು ಬೇರ್ಯಾರೋ ಅಲ್ಲ, ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ನಟ ಮಂಡ್ಯ ರಮೇಶ್.

  ಬಾಗಲಕೋಟೆಯಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿರುವ ರಮೇಶ್, ಇದು ನಮ್ಮಲ್ಲಷ್ಟೇ ಅಲ್ಲ, ಎಲ್ಲ ಚಿತ್ರರಂಗಗಳಲ್ಲೂ ಇದೆ. ಇಲ್ಲವೇ ಇಲ್ಲ ಎಂದು ಹೇಳುವ ಧೈರ್ಯ ನನಗೆ ಇಲ್ಲ. ಇದನ್ನು ಮೀರಿಯೂ ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿವೆ ಎಂದಿದ್ದಾರೆ ರಮೇಶ್.

   

 • ಮಂಡ್ಯ ರಮೇಶ್ ಅಪಘಾತದಲ್ಲಿ ಬಚಾವ್

  mandya ramesh met with an accident

  ಮೊನ್ನೆ ಮೊನ್ನೆ ತಾನೇ ನಟ ನಿನಾಸಂ ಸತೀಶ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಈಗ ಅಂಥದ್ದೇ ಅಪಘಾತವೊಂದರಲ್ಲಿ ಮಂಡ್ಯ ರಮೇಶ್ ಬಚಾವ್ ಆಗಿದ್ದಾರೆ. ಅಪಘಾತವಾದಾಗ ಕಾರ್‍ನ್ನು ಡ್ರೈವ್ ಮಾಡುತ್ತಿದ್ದವರು ಸ್ವತಃ ಮಂಡ್ಯ ರಮೇಶ್. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

  ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಸಮೀಪ ಕೆ.ಶೆಟ್ಟಿಹಳ್ಳಿ ಅನ್ನೋ ಗ್ರಾಮ ಬರುತ್ತೆ. ಅಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ ಎದುರಿನಿಂದ ಲಾರಿಯೊಂದು ಬಂದುಬಿಟ್ಟಿದೆ. ಅದನ್ನು ತಪ್ಪಿಸಿಕೊಳ್ಳಲು ಹೋಗಿ, ಮಂಡ್ಯ ರಮೇಶ್ ಕಾರ್‍ನ್ನು ಡಿವೈಡರ್ ಮೇಲೆ ಹತ್ತಿಸಿಬಿಟ್ಟಿದ್ದಾರೆ. 

  ಕಾರು ಜಖಂಗೊಂಡಿದೆಯಾದರೂ, ಮಂಡ್ಯ ರಮೇಶ್ ಅವರು ಸುರಕ್ಷಿತವಾಗಿದ್ದಾರೆ.

 • ಮಂಡ್ಯ ರಮೇಶ್ ಪುತ್ರಿ ಈಗ ಹೀರೋಯಿನ್..!

  ಮಂಡ್ಯ ರಮೇಶ್ ಪುತ್ರಿ ಈಗ ಹೀರೋಯಿನ್..!

  ನಟ ಮಂಡ್ಯ ರಮೇಶ್ ಅವರ ಪುತ್ರ ದಿಶಾ ಚಿತ್ರರಂಗಕ್ಕೆ ಹೊಸಬರೇನಲ್ಲ. ಈಗಾಗಲೆ ಬಿ.ಸುರೇಶ ನಿರ್ದೇಶನದ ದೇವರ ನಾಡಲ್ಲಿ.. ಚಿತ್ರದಲ್ಲಿ ನಟಿಸಿರುವ ಹುಡುಗಿ. ಆದರೆ ಈಗ ಅವರು ನಾಯಕಿಯಾಗುತ್ತಿದ್ದಾರೆ. ಚಿತ್ರರಂಗಕ್ಕಿಂತ ತಂದೆಯಂತೆ ರಂಗಭೂಮಿಯಲ್ಲೇ ಹೆಚ್ಚು ಸಕ್ರಿಯರಾಗಿದ್ದ ದಿಶಾ, ಈಗ ಎಸ್‍ಎಲ್‍ವಿ ಸಿರಿ ಲಂಬೋದರ ವಿವಾಹ ಅನ್ನೋ ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ.

  ಸಂಭ್ರಮ ಸೌರಭ ಖ್ಯಾತಿಯ ಸಂಜೀವ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ಡೈರೆಕ್ಟರ್ ಆಗಿ ಎಂಟ್ರಿ ಕೊಡುತ್ತಿರುವ ಚಿತ್ರ ಎಸ್‍ಎಲ್‍ವಿ. ಅಂಜನ್ ಎ ಭಾರದ್ವಾಜ್ ಚಿತ್ರದ ಹೀರೋ. ವಸ್ರ್ಯಾಟೋ ವೆಂಚರ್ಸ್, ಪವಮಾನ ಕ್ರಿಯೇಷನ್ಸ್ ಹಾಗೂ ಧೂಪದ ದೃಶ್ಯ ಕಂಪೆನಿಗಳು ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿವೆ.

 • ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

  jaggesh supports actors

  ಮೈಸೂರು ಮಸಾಜ್ ಪಾರ್ಲರ್ ಯುವತಿಯ ಆರೋಪದಲ್ಲಿ ನಟ ಜಗ್ಗೇಶ್, ಸಹನಟರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಸುಳ್ಳು ಅಪಾದನೆ.ಕಾನೂನು ದುರ್ಬಳಕೆ ಕೆಲವರಿಂದ ಹೆಚ್ಚಾಗುತ್ತಿದೆ. ನಾನು ಯಾರ ಪರವೂ ಇಲ್ಲ. ಇಂಥ ಸಮಯದಲ್ಲಿ ಕಾನೂನು.ಪೋಲಿಸ್ ಇಲಾಖೆಯ ಪ್ರಾಮಾಣಿಕ ಯತ್ನದಿಂದ ಸತ್ಯಹೊರ ಬರಬೇಕು. ಪ್ರಕರಣ ಸುಳ್ಳಾದರೆ ಸಮಯಸಾಧಕರ ಮೇಲೆ ಕಠಿಣಕ್ರಮ ತೆಗೆದುಕೊಳ್ಳಬೇಕು ಯಾವುದೇ ತಾರತಮ್ಯ ಬೇಡ. ಇದು ಮರ್ಯಾದೆ ಪ್ರಶ್ನೆ ಎಂದಿದ್ದಾರೆ ಜಗ್ಗೇಶ್.

  ಮಂಡ್ಯ ರಮೇಶ್ ಮೇಲಿನ ಆಪಾದನೆ ನೋಡಿ ಧಿಗ್ಭ್ರಾಂತಿಯಾಯಿತು. ನಾನು ಕಂಡಂತೆ ರಮೇಶ್ ಸಭ್ಯಸ್ಥ. ಪಾಪ ತುಂಬಾ ಸಂಕಟವಾಯಿತು. ಪೊಲೀಸರು ಸಮರ್ಪಕವಾಗಿ ವಿಚಾರಣೆ ಮಾಡಿ ರಮೇಶ್ ಅವರ ಗೌರವ ಉಳಿಸಬೇಕು ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಜಗ್ಗೇಶ್.

  ಒಂದು ಕೆಟ್ಟ ಮಾತನ್ನೂ ಆಡದ ಮಂಡ್ಯ ರಮೇಶ್, ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ನಡೆದುಕೊಳ್ಳುವ ವ್ಯಕ್ತಿ. ಅವರ ಮೇಲೆ ಇಂಥಾ ಆರೋಪ ಬರಬಾರದಿತ್ತು ಎನ್ನು

 • ಮಸಾಜ್ ಮಸಾಲಾ ಆರೋಪ - ಸಾಧು ಹೇಳಿದ್ದೇನು..?

  sadhu reacts on massage parlour news

  ಮೈಸೂರಿನಲ್ಲಿ ಮಸಾಜ್ ಪಾರ್ಲರ್ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸ್ತಾ ಇರೋ ನಟ ಸಾಧುಕೋಕಿಲ. ಪ್ರಕರಣದಲ್ಲಿ ಅವರೊಬ್ಬರೇ ಅಲ್ಲ, ನಟ ಮಂಡ್ಯ ರಮೇಶ್ ಹೆಸರೂ ಕೂಡಾ ಕೇಳಿ ಬಂದಿದೆ. ಇಬ್ಬರ ಹೆಸರನ್ನೂ ಸ್ವತಃ ಬಚಾವ್ ಆದ ಯುವತಿ ಪೊಲೀಸರು ಹಾಗೂ ಜಡ್ಜ್ ಎದುರು ಹೇಳಿರುವುದು ವಿಷಯದ ಗಂಭೀರತೆ ಹೆಚ್ಚಿಸಿದದೆ. ಈಗಾಗಲೇ ಆರೋಪವನ್ನು ನಿರಾಕರಿಸಿದ್ದ ಮಂಡ್ಯ ರಮೇಶ್, ಮಸಾಜ್ ಪಾರ್ಲರ್​ಗೆ ಒಮ್ಮೆ ಹೋಗಿರುವುದು ನಿಜ. ಆದರೆ, ನಾನು ಹೆಣ್ಣು ಮಗಳೊಬ್ಬಳಿಗೆ ಕಿರುಕುಳ ನೀಡುವ ವ್ಯಕ್ತಿ ಅಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ಆ ಯುವತಿ ಯಾರೆಂಬುದೇ ಗೊತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.

  ಪ್ರಕರಣ ಕುರಿತು ಸ್ಪಷ್ಟನೆ ನೀಡಿರುವ ನಟ ಸಾಧುಕೋಕಿಲಾ ಕೂಡಾ, ನಾನು ಮಸಾಜ್ ಪಾರ್ಲರ್ಗೆ ಹೋಗಿಯೇ ಇಲ್ಲ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ. ಕಟಿಂಗ್, ಶೇವಿಂಗ್​ಗೆ ಸಲೂನ್ ಗೆ ಹೋಗುತ್ತೇನೆ. ಇಲ್ಲ ಅಂದರೆ, ಅವರನ್ನೇ ಮನೆಗೆ ಕರೆಸಿಕೊಳ್ತೇನೆ. ಅದರ ಹೊರತಾಗಿ ನಾನ್ಯಾವತ್ತೂ ಮಸಾಜ್ ಪಾರ್ಲರ್​ಗೆ ಹೋಗಿಲ್ಲ ಎಂದಿದ್ದಾರೆ ಸಾಧು.

  ಆಕೆ ನನ್ನ ಮೇಲೆ ಯಾಕೆ ಆರೋಪ ಮಾಡಿದಳು ಅಂತ ಗೊತ್ತಿಲ್ಲ. ಆರೋಪ ಕೇಳಿದ ನಂತರ ಮಂಡ್ಯ ರಮೇಶ್ ಜೊತೆ ಕೂಡಾ ಮಾತನಾಡಿದೆ. ಅವರೂ ಶಾಕ್​ನಲ್ಲಿದ್ದರು. ಕಲಾವಿದರ ಸಂಘದ ಹಿರಿಯರ ಜೊತೆ ಮಾತನಾಡಿ ಮುಂದಿನ ಕಾನೂನು ಹೋರಾಟದ ನಿರ್ಧಾರ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ ಸಾಧು. ಉದ್ದೇಶ ಪೂರಕವಾಗಿಯೇ ನನ್ನ ಹೆಸರು ತೆಗೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

  Related Articles :-

  ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

  ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

 • ಮಸಾಜ್ ಮಸಾಲಾಗೆ ಟ್ವಿಸ್ಟ್ - ಸಾಧು, ಮಂಡ್ಯ ರಮೇಶ್ ಅಲ್ಲಿಗೆ ಹೋಗೇ ಇಲ್ಲ..!

  massage masala twist

  ಮೈಸೂರ ಮಸಾಜ್ ಪಾರ್ಲರ್ ವಿವಾದಕ್ಕೆ ವಿಭಿನ್ನ ತಿರುವು ಸಿಕ್ಕಿದೆ. ಮಸಾಜ್ ಪಾರ್ಲರ್‍ಗೆ ಸಾಧು ಕೋಕಿಲಾ ಹಾಗೂ ಮಂಡ್ಯ ರಮೇಶ್ ಬರುತ್ತಿದ್ದರು. ನನಗೆ ಲೈಂಗಿಕವಾಗಿ ಹಿಂಸಿಸುತ್ತಿದ್ದರು ಎಂದು ಯುವತಿಯೊಬ್ಬರು ಆರೋಪ ಮಾಡಿದ್ದು ಚಿತ್ರರಂಗದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಜಗ್ಗೇಶ್, ಭಾವನಾ ಸೇರಿದಂತೆ ಹಲವು ಚಿತ್ರನಟರು ನಟರ ಬೆಂಬಲಕ್ಕೆ ನಿಂತಿದ್ದರು.

  ಈಗ ಅದೇ ಮಸಾಜ್ ಪಾರ್ಲರ್ ಮಾಲೀಕ ರಾಜೇಶ್‍ರ ಪತ್ನಿ ಸವಿತಾ, ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಮ್ಮ ಸಲೂನ್ ಉದ್ಘಾಟಿಸಿದ್ದವರು ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್. ಆದರೆ, ಉದ್ಘಾಟನೆ ಮಾಡಿ ಹೋದವರು, ಮತ್ತೆ ಇಲ್ಲಿಗೆ ಬಂದೇ ಇಲ್ಲ. ಬೇಕಾದರೆ ಸಿಸಿಟಿವಿಗಳನ್ನು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ ಸವಿತಾ.

  ಇನ್ನು ಈ ಸಲೂನ್ ಆರಂಭಿಸಿರುವುದೇ 3 ತಿಂಗಳ ಹಿಂದೆ. ವ್ಯವಹಾರ ಕೂಡಾ ಇನ್ನೂ ಕಷ್ಟದಲ್ಲಿದೆ. ನಾವೇ 2 ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಹೀಗಿರುವಾಗ ಇಂತಹ ಆರೋಪ ಸರಿಯಲ್ಲ ಎಂದಿದ್ದಾರೆ ಸವಿತಾ. ಸಂತ್ರಸ್ತೆ ಎಂದು ಹೇಳಿಕೊಳ್ಳುತ್ತಿರುವ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಕೊಡುವುದಿಲ್ಲ ಎಂದಾಗ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ ಸವಿತಾ.

  ಇನ್ನು ಆ ಸಲೂನ್‍ನಲ್ಲಿ ಕಟಿಂಗ್, ಶೇವಿಂಗ್, ಫೇಸ್‍ವಾಶ್ ಬಿಟ್ಟು ಬೇರೇನೂ ಮಾಡಲ್ಲ. ಹೀಗಿರುವಾಗ ಮಸಾಜ್ ಎಲ್ಲಿಂದ ಮಾಡಿಸೋಣ ಅನ್ನೋದು ಸವಿತಾ ಅವರ ಪ್ರಶ್ನೆ. ಆ ಸಲೂನ್‍ನಲ್ಲಿ ಮಸಾಜ್ ಮಾಡುವಷ್ಟು ಜಾಗವೂ ಇಲ್ಲವಂತೆ. ಹಾಗಾದರೆ, ಸಂತ್ರಸ್ತೆ ಎನ್ನುತ್ತಿರುವ ಯುವತಿ ಆರೋಪಗಳೆಲ್ಲ ಸುಳ್ಳಾ..?

  Related Articles :-

  ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

  ಮಸಾಜ್ ಮಸಾಲಾ ಆರೋಪ - ಸಾಧು ಹೇಳಿದ್ದೇನು..?

  ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

 • ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

  sadhu kokila, mandya ramesh in sex scandal

  ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮಸಾಜ್ ಪಾರ್ಲರೊಂದರಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿಯೊಬ್ಬರನ್ನು ರಕ್ಷಿಸಿತ್ತು. ಆಕೆ ಪೊಲೀಸರ ಎದುರು ಸ್ಫೋಟಕ ಮಾಹಿತಿ ಹೊರಹಾಕಿದ್ದಳು. ಅದು ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಚಿತ್ರರಂಗದ ಇಬ್ಬರು ಖ್ಯಾತ ನಟರು ಕೂಡಾ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದರ. ಆ ನಟರು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

  ಆ ಹುಡುಗಿ ಬಾಯ್ಬಿಟ್ಟಿರುವುದು ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಹೆಸರು. ಮೈಸೂರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿರುವ ಯುವತಿ, ಮಸಾಜ್ ಪಾರ್ಲರ್​ಗೆ ಈ ಇಬ್ಬರೂ ಚಿತ್ರನಟರು ಆಗಾಗ್ಗೆ ಬರುತ್ತಿದ್ದರು. ಮಸಾಜ್ ನೆಪದಲ್ಲಿ  ಎರಡು ಬಾರಿ ಭೇಟಿ ನೀಡಿದ್ದ ಇಬ್ಬರೂ ಚಿತ್ರನಟರು ತಮ್ಮ ಗುಪ್ತಾಂಗಗಳನ್ನು ಮುಟ್ಟುವಂತೆ ಒತ್ತಾಯಿಸುತ್ತಿದ್ದರು. ಹಾಗೆ ಮಾಡಿದರೆ ಅವರು ನನ್ನ‌ ಗುಪ್ತಾಂಗ‌ ಮುಟ್ಟುತ್ತಿದ್ದರು ಎಂದೆಲ್ಲ ದೂರು ಕೊಟ್ಟಿದ್ದಾರೆ.

  ಸದ್ಯಕ್ಕೆ ಈ ಕುರಿತು ಸ್ಪಷ್ಟನೆ ನೀಡಿರುವ ಮಂಡ್ಯ ರಮೇಶ್, ತಾನು ಅಂತಹ ವ್ಯಕ್ತಿ ಅಲ್ಲ. ಆ ಮಸಾಜ್ ಪಾರ್ಲರ್​ ಉದ್ಘಾಟನೆಗೆ ಹೋಗಿದ್ದುದು ನಿಜ. ಒಮ್ಮೆ ಮಸಾಜ್ ಮಾಡಿಸಿಕೊಂಡಿರುವುದು ಕೂಡಾ ನಿಜ. ಆದರೆ, ತಾವು ಆ ರೀತಿ ವರ್ತಿಸಿಲ್ಲ. ನನಗೆ ಆ ಯುವತಿ ಯಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ. ಆ ಯುವತಿಯನ್ನು ರಕ್ಷಿಸಿದ ಒಡನಾಡಿ ಸಂಸ್ಥೆಗೆ ಧನ್ಯವಾದವನ್ನೂ ತಿಳಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery