` raj b shetty, - chitraloka.com | Kannada Movie News, Reviews | Image

raj b shetty,

 • ರಿಲೀಸಿಗೂ ಮೊದಲೇ ಗುಬ್ಬಿ ರೀಮೇಕ್

  gubbi mele bramhastra remkae rights sold

  ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ, ತನ್ನ ಟ್ರೇಲರ್, ಕಚಗುಳಿಯಿಡೋ ಸಂಭಾಷಣೆಗಳಿಂದಲೇ ಕುತೂಹಲ ಹುಟ್ಟಿಸಿರೋ ಸಿನಿಮಾ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟಿಸಿರುವ ಚಿತ್ರಕ್ಕೆ ಸುಜಯ್ ಶಾಸ್ತ್ರಿ ನಿರ್ದೇಶನವಿದೆ. ಸ್ವಾತಂತ್ರ್ಯೋತ್ಸವಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಬಿಡುಗಡೆಗೆ ಮೊದಲೇ ಖುಷಿ ಸುದ್ದಿ ಸಿಕ್ಕಿದೆ.

  ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ರೀಮೇಕ್ ಹಕ್ಕುಗಳು ಮಾರಾಟವಾಗಿವೆಯಂತೆ. ಎರಡು ಭಾಷೆಯ ರೀಮೇಕ್ ಹಕ್ಕು ಮಾರಾಟವಾಗಿದೆ. ತೆಲುಗಿನ ಪ್ರತಿಷ್ಠಿತ ಸಂಸ್ಥೆಯೊಂದು ರೀಮೇಕ್ ರೈಟ್ಸ್ ಖರೀದಿಸಿದೆ ಎಂದಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ.

  ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರಂತೂ ಫುಲ್ ಹ್ಯಾಪಿ. ಈ ಹಿಂದೆ ಅವರ ಅಯೋಗ್ಯ ಹಾಗೂ ಬೀರ್‍ಬಲ್ ಚಿತ್ರಗಳೂ ಇದೇ ರೀತಿ ದಾಖಲೆ ಬರೆದಿದ್ದವು. ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಅದರಲ್ಲೂ ಅವರ ಪಾಲಿಗೆ ಅದೃಷ್ಟದ ದಿನವೆಂದೇ ನಂಬಲಾಗಿರುವ ಆಗಸ್ಟ್ 15ಕ್ಕೆ ಸಿನಿಮಾ ಬರುತ್ತಿದೆ. ಆಗಸ್ಟ್ 15ರಂದೇ ಅಯೋಗ್ಯ ರಿಲೀಸ್ ಆಗಿತ್ತು. ಸೂಪರ್ ಹಿಟ್ ಆಗಿತ್ತು

 • ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

  ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

  2021ರ ಸೂಪರ್ ಹಿಟ್ ಚಿತ್ರ ಗರುಡ ಗಮನ ವೃಷಭ ವಾಹನ ಈಗ ಮನೆ ಮನೆಗೂ ಬರಲಿದೆ. ನ.19ರಂದು ರಿಲೀಸ್ ಆಗಿದ್ದ ಜಿಜಿವಿವಿ ಬಾಕ್ಸಾಫೀಸ್‍ನಲ್ಲಿ ಅದ್ಭುತ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರ ಮೆಚ್ಚುಗೆಯನ್ನೂ ಪಡೆದಿದ್ದ ಗರುಡ ಗಮನ ವೃಷಭ ವಾಹನ ಓಟಿಟಿಯಲ್ಲಿ ಬರಲಿದೆ. ಸಂಕ್ರಾಂತಿಗೆ.

  ರಾಜ್ ಬಿ.ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಜೀ5ನಲ್ಲಿ ರಿಲೀಸ್ ಆಗುತ್ತಿರುವ ಗರುಡ ಗಮನ ವೃಷಭ ವಾಹನ ಜನವರಿ 15ರಂದು ಓಟಿಟಿಯಲ್ಲಿ ಪ್ರಸಾರವಾಗಲಿದೆ.

 • ಸಗಣಿ ಸ್ಟಾರ್ ಕಥೆ ಹೇಳಿದ ಸ್ಟೈಲಿಗೆ ಮೊಟ್ಟೆ ಸ್ಟಾರ್ ಓಕೆ ಅಂದ್ರಂತೆ..!

  gubbi mele bramhastra

  ಇದೊಂಥರಾ ಸ್ಯಾಂಡಲ್‍ವುಡ್ ವಿಚಿತ್ರ. ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಸ್ಟಾರ್ ಆದ ರಾಜ್ ಬಿ.ಶೆಟ್ಟಿ, ಈಗ ಮೊಟ್ಟೆ ಸ್ಟಾರ್ ಆದರೆ, ಬೆಲ್‍ಬಾಟಂನ ಸಗಣಿ ಪಿಂಟೋ ಪಾತ್ರದ ಮೂಲಕ ಚಿರಪರಿಚಿತರಾಗ ಸುಜಯ್ ಶಾಸ್ತ್ರಿ, ಸಗಣಿ ಸ್ಟಾರ್. ಅಫ್‍ಕೋರ್ಸ್.. ಅದು ಅವರ ಅಭಿನಯ ಪ್ರತಿಭೆಗೆ ಸಿಕ್ಕಿದ ಮನ್ನಣೆಯೂ ಹೌದು.

  ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ, ನಿರ್ದೇಶಕರಾಗಿರುವ ಮೊದಲ ಸಿನಿಮಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್‍ಗೆ ರೆಡಿಯಾಗಿ ನಿಂತಿದೆ. ಈ ಕಥೆಯನ್ನು ರಾಜ್ ಬಿ.ಶೆಟ್ಟಿ ಒಪ್ಪಿಕೊಳ್ಳೋಕೆ ಕಾರಣ, ಸುಜಯ್ ಕಥೆ ಹೇಳಿದ ಸ್ಟೈಲ್ ಅಂತೆ.

  ಒಂದು ಮೊಟ್ಟೆಯ ಕಥೆಯಲ್ಲಿ ಇದ್ದದ್ದು ರಿಯಲೆಸ್ಟಿಕ್ ಕಾಮಿಡಿ. ಇಲ್ಲಿ ಸ್ಪೂಫ್ ಕಾಮಿಡಿ ಇದೆ. ಚಿತ್ರದಲ್ಲಿ ಪಾತ್ರಗಳನ್ನೇ ಲೇವಡಿ ಮಾಡುವ ಸ್ಟೈಲ್ ಹೊಸದು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.

  ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಹೊರಗೆ ಹೋಗುವಾಗ ಖಂಡಿತಾ ನಗು ನಗುತ್ತಾ ಹೋಗುತ್ತಾನೆ ಎನ್ನುವ ಭರವಸೆ ಶೆಟ್ಟರದ್ದು. ಚಂದ್ರಶೇಖರ್ ನಿರ್ಮಾಣದ ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ.

 • ಸಾಫ್ಟ್‍ವೇರ್ ಕ್ರಿಶ್.. ಪರ್ಪಲ್ ಪ್ರಿಯಾ ಲವ್ ಸ್ಟೋರಿ

  lovestory between software krish and purple pria

  ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನು ಗೊತ್ತಾ.. ವೆಂಕಟ್ ಕೃಷ್ಣ ಗುಬ್ಬಿ. ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಗುಬ್ಬಿಗೆ ಪರ್ಪಲ್ ಪ್ರಿಯಾ ಅಲಿಯಾಸ್ ಕವಿತಾ ಗೌಡ ಪ್ರೇಯಸಿ.

  ರಾಜ್ ಶೆಟ್ಟರು ಒನ್ಸ್ ಎಗೇಯ್ನ್ ಪಾಪದ ಹುಡುಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸ್ಲ್ಯಾಪ್ ಸ್ಟಿಕ್ ಕಾಮಿಡಿ ಇದೆ. ಅಂದ್ರೆ ತೆರೆಯ ಮೇಲೆ ಪಾತ್ರಗಳು ಸೀರಿಯಸ್ ಆಗಿದ್ರೂ, ಪ್ರೇಕ್ಷಕ ಮಾತ್ರ ನಗ್ತಾನೇ ಇರ್ತಾನೆ. ಸನ್ನಿವೇಶಗಳೇ Áಗಿರುತ್ತವೆ.

  ಸುಜಯ್ ಶಾಸ್ತ್ರಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸತತ 3 ಚಿತ್ರಗಳಲ್ಲಿ ಸಕ್ಸಸ್ ಕಂಡಿರುವ ಹ್ಯಾಟ್ರಿಕ್ ಪ್ರೊಡ್ಯೂಸರ್ ಟಿ.ಆರ್.ಚಂದ್ರಶೇಖರ್ ಮತ್ತೊಂದು ಗೆಲುವು ಎದುರು ನೋಡುತ್ತಿದ್ದಾರೆ.

 • ಸಿದ್ಧ ಸೂತ್ರಗಳನ್ನು ಮುರಿದವನೇ ಮಹಾಶೂರ : ಗಗವೃವಾ ಸೂಪರ್ ಸಕ್ಸಸ್

  ಸಿದ್ಧ ಸೂತ್ರಗಳನ್ನು ಮುರಿದವನೇ ಮಹಾಶೂರ : ಗಗವೃವಾ ಸೂಪರ್ ಸಕ್ಸಸ್

  ಗರುಡ ಗಮನ ವೃಷಭ ವಾಹನ. ಈ ಸಿನಿಮಾ ನೋಡಿದವರಿಗೆ ಮೊದಲ ಶಾಕ್.. ಪ್ರೇಕ್ಷಕರು ಊಹಿಸಿಯೂ ಇರದ ಭೂಗತ ಜಗತ್ತು. ಹಾಗೆ ಶಾಕ್ ಕೊಡುವ ರಾಜ್ ಬಿ.ಶೆಟ್ಟಿ ಮತ್ತೊಮ್ಮೆ ಗಾಂಧಿನಗರದ ಸಿದ್ಧ ಸೂತ್ರಗಳನ್ನೆಲ್ಲ ಮುರಿದು ಮೂಟೆ ಕಟ್ಟಿದ್ದಾರೆ. ಅದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಸಿನಿಮಾ ಗೆದ್ದುಬಿಟ್ಟಿದೆ.

  ಮೊದಲ ದಿನ 150 ಥಿಯೇಟರಿನಲ್ಲಿ ರಿಲೀಸ್ ಆದ ಸಿನಿಮಾ 2ನೇ ದಿನಕ್ಕೇ ಥಿಯೇಟರ್ ಹೆಚ್ಚಿಸಿಕೊಂಡಿತ್ತು. ಮಳೆ ನಡುವೆಯೂ ಪ್ರೀಮಿಯರ್ ಶೋಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಕೇರಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲೂ ರಿಲೀಸ್ ಆಗಿದ್ದ ಚಿತ್ರಕ್ಕೆ ಅಲ್ಲಿಯೂ ಹೌಸ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಈಗ ವಿದೇಶಗಳಿಂದ ಬೇಡಿಕೆ ಬರೋಕೆ ಶುರುವಾಗಿದೆ. ಆ ಖುಷಿಯಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು.

  ನಾವಿಬ್ಬರೂ ಗುಡ್ ಫ್ರೆಂಡ್ಸ್. ದೊಡ್ಡವನು ಚಿಕ್ಕವನು ಅನ್ನೋ ಭೇದಭಾವ ಇಲ್ಲ. ಅಹಂ ಇಲ್ಲ. ಒಂದು ಸಿನಿಮಾವನ್ನು ಪ್ರಾಮಾಣಿಕವಾಗಿ ಮಾಡಬೇಕು. ಚೆನ್ನಾಗಿ ಮಾಡಬೇಕು. ಚೆನ್ನಾಗಿ ರೀಚ್ ಮಾಡಿಸಬೇಕು. ಹೀಗಾಗಿಯೇ ಗೆದ್ದಿದ್ದೇವೆ ಎಂದರು ರಿಷಬ್ ಶೆಟ್ಟಿ.

  ರೌದ್ರಾವತಾರದ ಶಿವನಾಗಿ ರಾಜ್ ಬಿ.ಶೆಟ್ಟಿ, ಚಾಣಾಕ್ಷನಾಗಿ ಗೆಲ್ಲುವ ಹರಿಯಾಗಿ ರಿಷಬ್ ಶೆಟ್ಟಿ.. ಅವರಿಬ್ಬರ ನಡುವಿನ ಸ್ನೇಹ.. ಸ್ನೇಹದಲ್ಲೂ ಲೆಕ್ಕ ಹಾಕುವ ಹರಿ, ಸ್ನೇಹವನ್ನು ಬಿಟ್ಟು ಬೇರೇನನ್ನೂ ಯೋಚಿಸದ ಶಿವ.. ಎಲ್ಲವೂ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ. ಈ ಹಿಂದೆ ಮೊಟ್ಟೆ ಸ್ಟೋರಿಯಲ್ಲೂ ರೂಲ್ಸ್ ಬ್ರೇಕ್ ಮಾಡಿ ಗೆದ್ದಿದ್ದ ರಾಜ್ ಬಿ.ಶೆಟ್ಟಿ, ಈ ಬಾರಿ ಮತ್ತೊಮ್ಮೆ ಸಿದ್ಧಸೂತ್ರಗಳನ್ನು ಮುರಿಯುವವನೇ ಮಹಾಶೂರ ಎಂದು ಸಾಬೀತು ಮಾಡಿದ್ದಾರೆ.

 • ಸೀಕ್ರೆಟ್ ಇಂಟೆಲಿಜೆನ್ಸ್ ಆಫೀಸರ್ ಮೊಟ್ಟೆ ಶೆಟ್ಟಿ

  motte shetty to act as intelligence officer

  ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಈಗ ಸೀಕ್ರೆಟ್ ಇಂಟೆಲಿಜೆನ್ಸ್ ಆಫೀಸರ್. ಅಫ್‍ಕೋರ್ಸ್, ರೀಲ್‍ನಲ್ಲೇ. ಮಹಿರಾ ಅನ್ನೋ ಚಿತ್ರದಲ್ಲಿ ಶೆಟ್ಟಿ, ಗುಪ್ತಚರ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಮಹಿರಾ, ಮಹೇಶ್ ಗೌಡ ನಿರ್ದೇಶನದ ಮೊದಲ ಸಿನಿಮಾ. 

  ಸುನಿಲ್ ಕುಮಾರ್ ದೇಸಾಯಿ ಬಳಿ ಹಲವು ವರ್ಷ ಸಹಾಯಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಮಹಿರಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಮಹಿರಾ ಎಂದರೆ, ಅರ್ಥ, ಹೆಣ್ಣಿನ ಛಲ ಬಿಡದ ವ್ಯಕ್ತಿತ್ವ. ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವೇನೂ ಅಲ್ಲ. ತಾಯಿ, ಮಗಳ ಬಾಂಧವ್ಯದ ಕಥೆಗೆ ಆ್ಯಕ್ಷನ್-ಥ್ರಿಲ್ಲರ್ ಬೆರೆಸಲಾಗಿದೆ.

  ಹೊನ್ನಾವರ, ಪುತ್ತೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಶೇ.95ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಶೀಘ್ರದಲ್ಲೇ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

 • ಸ್ನೇಹಿತರಿಂದ.. ಸ್ನೇಹಿತರಿಗಾಗಿ.. ಸ್ನೇಹಿತರ ಕಥೆ : ಗರುಡ ಗಮನ ವೃಷಭ ವಾಹನ

  ಸ್ನೇಹಿತರಿಂದ.. ಸ್ನೇಹಿತರಿಗಾಗಿ.. ಸ್ನೇಹಿತರ ಕಥೆ : ಗರುಡ ಗಮನ ವೃಷಭ ವಾಹನ

  ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬರು ರಿಷಬ್ ಶೆಟ್ಟಿ. ಮತ್ತೊಬ್ಬರು ರಾಜ್ ಬಿ.ಶೆಟ್ಟಿ. ಇವರಿಬ್ಬರಲ್ಲಿ ತೆರೆಯ ಹಿಂದೆಯೂ ಹೀರೋ ಆಗಿ ಡೈರೆಕ್ಟ್ ಮಾಡಿರೋದು ರಾಜ್ ಬಿ.ಶೆಟ್ಟಿ. ಈ ಇಬ್ಬರ ಜೊತೆ ಇನ್ನೂ ಒಬ್ಬರು ಸ್ಟಾರ್ ಇದ್ದಾರೆ. ಅದು ರಕ್ಷಿತ್ ಶೆಟ್ಟಿ. ಚಿತ್ರದ ವಿತರಣೆ ಅವರದ್ದೇ. ವಿಶೇಷವೆಂದರೆ ಈ ಮೂವರೂ ಹೀರೋಗಳೇ. ಮೂವರೂ ನಿರ್ಮಾಪಕರೇ. ಮೂವರೂ ನಿರ್ದೇಶಕರೇ. ಮೂವರೂ ಪರಸ್ಪರ ಗೆಳೆಯರೇ.

  ಹೀಗಾಗಿ ಇದನ್ನು ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರೇ ಮಾಡಿರುವ ಸ್ನೇಹಿತರ ಕಥೆ ಎನ್ನಬಹುದು. ಏಕೆಂದರೆ ಚಿತ್ರದಲ್ಲಿ ಬರೋ ಹರಿ ಮತ್ತು ಹರ ಇಬ್ಬರೂ ಗೆಳೆಯರು. ಆ ಗೆಳೆಯರ ನಡುವಿನ ಕಥೆಯೇ ಗರುಡ ಗಮನ ವೃಷಭ ವಾಹನ. ಇದೇ ವಾರ ರಿಲೀಸ್ ಆಗುತ್ತಿದೆ.

  ಚಿತ್ರದಲ್ಲಿ ಮಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭ ವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ಕೋಪಿಷ್ಠ ಸ್ವಭಾವ. ಇಂಥ  ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವುದೇ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಪರಂವಃ ಸ್ಟುಡಿಯೋ ಮೂಲಕ ಚಿತ್ರ ರಿಲೀಸ್ ಆಗುತ್ತಿದೆ.

 • ಹರಿಗೆ ರಿಷಬ್ ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ : ರಾಜ್ ಬಿ ಶೆಟ್ಟಿ

  ಹರಿಗೆ ರಿಷಬ್ ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ : ರಾಜ್ ಬಿ ಶೆಟ್ಟಿ

  ಗರುಡ ಗಮನ ವೃಷಭ ವಾಹನ. ಸದ್ಯಕ್ಕೆ ಜಿಜಿವಿವಿ ಎಂದೇ ಜನಪ್ರಿಯವಾಗುತ್ತಿರೋ ಸಿನಿಮಾ. ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆದರೆ, ಕುತೂಹಲವನ್ನಂತೂ ಸೃಷ್ಟಿಸಿದೆ. ಚಿತ್ರದ ಹೀರೋ ಕಂ ಡೈರೆಕ್ಟರ್ ರಾಜ್ ಬಿ ಶೆಟ್ಟಿ. ಮೊಟ್ಟೆಯ ಕಥೆಗಿಂತ ವಿಭಿನ್ನವಾಗಿ.. ಮೊಟ್ಟೆ ಪಾತ್ರಕ್ಕೆ ತದ್ವಿರುದ್ಧವಾಗಿ ಕಾಣಿಸಿದ್ದಾರೆ. ಅವರದ್ದು ಶಿವನ ಪಾತ್ರ. ಜಗಳಗಂಟನ ಪಾತ್ರವಂತೆ.

  ಅವರಿಗೆ ಎದುರಾಗಿರೋದು ರಿಷಬ್ ಶೆಟ್ಟಿ. ಗಡ್ಡದ ಮುಖದಲ್ಲಿ ಮುಗ್ಧನಂತೆ ಕಾಣಿಸುತ್ತಿದ್ದ ರಿಷಬ್ ಶೆಟ್ಟಿಯವರಿಗೆ ಇಲ್ಲಿ ಗಡ್ಡ, ಮೀಸೆ ಎರಡನ್ನೂ ತೆಗೆಸಿದ್ದಾರೆ ರಾಜ್ ಶೆಟ್ಟಿ.

  ಹರಿಯ ಪಾತ್ರಕ್ಕೆ ರಿಷಬ್ ಶೆಟ್ಟಿ ಬಿಟ್ಟು ಬೇರೆ ಆಯ್ಕೆಯೇ ನನ್ನ ಮುಂದೆ ಇರಲಿಲ್ಲ. ಕಣ್ಣ ಮುಂದೆ ಇನ್ನೊಬ್ಬರ ಮುಖವೂ ಬರಲಿಲ್ಲ. ಮಂಗಳೂರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕಿತ್ತು. ಅದೇ ಆದ್ಯತೆಯಾಗಿತ್ತು. ಅಲ್ಲದೆ ಗಡ್ಡ ಮೀಸೆ ತೆಗೆದಾಗ ರಿಷಬ್ ಶೆಟ್ಟಿ ಮುಗ್ದನಂತೆ ಕಾಣಿಸುತ್ತಾರೆ. ಗಡ್ಡ ಮೀಸೆ ಬಿಟ್ಟರೆ ಅದರ ಖದರು ಬೇರೆ. ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.