` dhananjay, - chitraloka.com | Kannada Movie News, Reviews | Image

dhananjay,

 • ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

  ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

  ಹೌದು, ಇದು ಡಾಲಿ ಧನಂಜಯ್ ಅವರಿಗೆ ಈ ವರ್ಷದ 3ನೇ ಸಿನಿಮಾ. ಇದೇ ಏಪ್ರಿಲ್ 15ಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಡಾಲಿ, ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ರಿಲೀಸ್ ಆದರೆ, ಡಾಲಿಗೆ ಈ ವರ್ಷದ 3ನೇ ಸಿನಿಮಾ ಆಗಲಿದೆ.. ಸಲಗ.

  ಈ ವರ್ಷ ಅವರು ನಟಿಸಿದ್ದ ಪೊಗರು ಚಿತ್ರ ಮೊದಲು ತೆರೆ ಕಂಡಿತ್ತು. ಆದರೆ, ಚಿತ್ರದಲ್ಲಿ ಡಾಲಿ ಪಾತ್ರಕ್ಕೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿತ್ತೋ.. ಏನೋ.. ಅಭಿಮಾನಿಗಳಿಗೂ ಇಷ್ಟವಾಗಲಿಲ್ಲ.

  ಇನ್ನು ವರ್ಷದ 2ನೇ ಸಿನಿಮಾ ಯುವರತ್ನ. ಪುನೀತ್ ಹೀರೋ ಆಗಿರೋ ಸಿನಿಮಾ ಪ್ರಚಾರ ಬಿರುಸಾಗಿದೆ. ಪುನೀತ್, ತಾವೇ ಹೀರೋ ಆಗಿದ್ದರೂ ಪ್ರಚಾರದ ಪ್ರತಿ ಹಂತದಲ್ಲೂ ಡಾಲಿ ಧನಂಜಯ್ ಅವರನ್ನು ಜೊತೆಗಿಟ್ಟುಕೊಂಡೇ ಹೋಗುತ್ತಿದ್ದಾರೆ. ಅದು ಏಪ್ರಿಲ್ 1ಕ್ಕೆ ರಿಲೀಸ್ ಆದರೆ, ಏಪ್ರಿಲ್ 15ಕ್ಕೆ 3ನೇ ಸಿನಿಮಾ ಸಲಗ.

 • ಡಾಲಿ ಧನಂಜಯ್.. ಇನ್ಮುಂದೆ ಭೈರವ

  dolly dhananjay is now bhairava

  ಟಗರು ಚಿತ್ರದ ಡಾಲಿ ಪಾತ್ರದ ಮೂಲಕ, ಅದ್ಭುತ ಸಕ್ಸಸ್ ಪಡೆದುಕೊಂಡ ಧನಂಜಯ್, ವರ್ಮಾ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿತ್ತು. ಈಗದು ಪಕ್ಕಾ ಆಗಿದೆ. ರಾಮ್‍ಗೋಪಾಲ್ ವರ್ಮಾ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವ ಭೈರವಗೀತ ಸಿನಿಮಾಗೆ ಡಾಲಿ ಧನಂಜಯ್ ನಾಯಕ. 

  ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರಕ್ಕೆ, ವರ್ಮಾ ಅವರ ಅಸಿಸ್ಟೆಂಟ್ ಆಗಿದ್ದ ಸಿದ್ದು ಅಲಿಯಾಸ್ ಸಿದ್ಧಾರ್ಥ್ ನಿರ್ದೇಶನವಿದೆ. ಹೀಗಾಗಿ ತೆಲುಗಿನಲ್ಲೂ ಧನಂಜಯ್‍ಗೂ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆಗಳಿವೆ. ಕನ್ನಡ ಭೈರವಗೀತ ಚಿತ್ರಕ್ಕೆ ಮಾಸ್ತಿ ಸಂಭಾಷಣೆಯಿದ್ದರೆ, ತೆಲುಗು ಭೈರವಗೀತಕ್ಕೆ ವಂಶಿ ಸಂಭಾಷಣೆಯಿದೆ. ಕೆಲವೇ ದಿನಗಳಲ್ಲಿ ಚಿತ್ರದ ಫಸ್ಟ್‍ಲುಕ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

 • ಡಾಲಿ ಧನಂಜಯ್‌ಗೆ ರಚಿತಾ ರಾಮ್ ಜೋಡಿ

  rachita ram to pair opposite dolly dhananjay

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಇದು ಮುಗಿಯುತ್ತಿದ್ದಂತೆಯೇ ಮತ್ತೆ ಬೆನ್ನು ಬೆನ್ನಿಗೆ ರಚಿತಾ ಚಿತ್ರಗಳ ಭರಾಟೆ ಶುರುವಾಗುತ್ತೆ. ಈಗಾಗಲೇ ಏಕ್ ಲವ್ ಯಾ, ೧೦೦, ಏಪ್ರಿಲ್, ಪಂಥ, ಸೀರೆ, ವೀರಂ ಚಿತ್ರಗಳಲ್ಲಿ ತೊಡಗಿಸಿಕೊಂಡಿರೋ ರಚಿತಾ ರಾಮ್, ತೆಲುಗಿನತ್ತಲೂ ಕಾಲಿಟ್ಟಿದ್ದಾರೆ. ಇದರ ಜೊತೆಯಲ್ಲೇ ಒಪ್ಪಿಕೊಂಡಿರೋ ಚಿತ್ರ ಡಾಲಿ.

  ಇದು ಡಾಲಿ ಧನಂಜಯ್ ಅಭಿನಯದ ಸಿನಿಮಾ. ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರ ಡಾಲಿ. ಡಿಸೆಂಬರ್‌ನಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಧನಂಜಯ್ ಮತ್ತು ರಚಿತಾ ರಾಮ್ ಜೋಡಿ ಹೇಗಿರಲಿದೆ..? ಜಸ್ಟ್ ವೇಯ್ಟ್.

 • ಡಾಲಿ ಧನಂಜಯ್ಗೆ ಸಿಕ್ಕಿತ್ತಾ ಅಣ್ಣಾವ್ರ ಆಶೀರ್ವಾದ..?

  dhananjay's emotional talk

  ಡಾಲಿ ಖ್ಯಾತಿಯ ಧನಂಜಯ್ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅವರು ಹೀರೋ ಆಗಿ ನಟಿಸಿದ ಚಿತ್ರಗಳು ಸೋತಿದ್ದೇ ಹೆಚ್ಚು. ಒಂದು ಕಾಲದಲ್ಲಿ ದುರದೃಷ್ಟವಂತ ಎನಿಸಿಕೊಂಡಿದ್ದ ಧನಂಜಯ್ ಅವರಿಗೆ ಈಗ ಸುವರ್ಣ ಕಾಲ. ಟಗರು ಚಿತ್ರದ ಡಾಲಿ ಎಂಬ ಆ ಒಂದು ಪಾತ್ರ ಅವರಿಗೆ ಖ್ಯಾತಿ, ಹಣ ಎಲ್ಲವನ್ನೂ ಕೊಟ್ಟಿದೆ. ಇದೇ ವೇಳೆ ಅವರು ತಮ್ಮ 10 ವರ್ಷದ ವೃತ್ತಿ ಜೀವನದ ಏಳು ಬೀಳುಗಳನ್ನು ಹಂಚಿಕೊಂಡಿದ್ದಾರೆ.

  ಟಗರು ಚಿತ್ರದಲ್ಲಿ ನೆಗೆಟಿವ್ ರೋಲ್ ಎಂದಾಗ, ಅದು ಸೂರಿಯ ಚಿತ್ರ ಹಾಗೂ ಶಿವಣ್ಣನ ಎದುರು ನಟಿಸುವ ಅವಕಾಶ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ನಂತರ ಅದು ನನಗೆ ಬೇರೆಯೇ ಹೆಸರು ಕೊಟ್ಟಿತು. ಶಿವಣ್ಣ ಅಂತೂ ನನ್ನನ್ನು ಒಡಹುಟ್ಟಿದ ತಮ್ಮನಂತೆ ನೋಡಿಕೊಂಡರು. ವೇದಿಕೆಯಲ್ಲಿ ನನ್ನನ್ನು ತಮ್ಮ 3ನೇ ತಮ್ಮ ಎಂದರು. ಅದು ನನ್ನ ಅದೃಷ್ಟ ಬದಲಿಸಿತು ಎಂದಿರುವ ಧನಂಜಯ್ಗೆ ಆ ಚಿತ್ರ ರಿಲೀಸ್ ಆಗಿ, ಸಕ್ಸಸ್ ಆದ ಎಷ್ಟೋ ದಿನಗಳ ಮನೆಯಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನೋಡುತ್ತಿದ್ದರಂತೆ. ಪುನೀತ್ ರಾಜ್ಕುಮಾರ್ ನಿರೂಪಣೆ ನೋಡುತ್ತಿದ್ದ ಅವರ ಅಜ್ಜಿ, ಪುನೀತ್ ಅವರನ್ನು ನೋಡಿ.. ಓ ಇವನು ಹಿಂಗೆ ವೇಷ ಹಾಕ್ಕೊಂಡ್ ಬುಟ್ಟವ್ನೆ ಅಂದರಂತೆ. ಅವರು ಯಾರು ಗೊತ್ತಾ..? ಎಂದು ಕೇಳಿದಾಗ.. ಅವರ ಅಜ್ಜಿ.. ಇವ್ನು ಗೊತ್ತಿಲ್ವಾ..? ನಮ್ ರಾಜ್ಕುಮಾರುನ್ ಮಗ ಅಂದರಂತೆ.

  ಅಷ್ಟೇ ಅಲ್ಲ, ಟಗರು ರಿಲೀಸ್ ಆಗುವುದಕ್ಕೂ ಮುನ್ನ ತಾವು ರಾಜ್ ಸಮಾಧಿ ಬಳಿ ಹೋಗಿದ್ದೆ. ಆ ದಿನ ಪೊಲೀಸರು ಯಾರನ್ನೂ ಒಳಗೆ ಬಿಡ್ತಾ ಇರಲಿಲ್ಲ. ನಾನು ಊರಿಂದ ಬಂದಿದ್ದೇನೆ, ಇವತ್ತೇ ಹೋಗಬೇಕು ಎಂದು ಕೇಳಿದ್ದಕ್ಕೆ ಪೊಲೀಸರು ಒಳಗೆ ಬಿಟ್ಟರು. ನಾನು ರಾಜ್ಕುಮಾರುನ್ ತಾವ ನನ್ ಮೊಮ್ಮಗನನ್ನ ನಿನ್ ಮಗಾ ಅಂತಾ ತಿಳ್ಕೊಂಡ್ ಆಶೀರ್ವಾದ ಮಾಡು, ಅವನಿಗೆ ಒಳ್ಳೇದಾಗ್ಲಿ ಅಂತಾ ಕೇಳ್ಕೊಂಡಿದ್ದೆ ಎಂದರಂತೆ.

  ಅಜ್ಜಿಯ ಆ ಮಾತು, ಇತ್ತ ಶಿವಣ್ಣ, ಧನಂಜಯ್ ನನ್ನ ತಮ್ಮನಿದ್ದ ಹಾಗೆ ಎನ್ನುವ ಮಾತು ಎಲ್ಲವೂ ಒಂದರ ಹಿಂದೊಂದು ನೆನಪಾಗಿ ಕಣ್ಣೀರಿಟ್ಟಿದ್ದೆ ಎಂದಿದ್ದಾರೆ ಧನಂಜಯ್. ಸದ್ಯಕ್ಕೆ ಧನಂಜಯ್ ಕೈತುಂಬಾ ಚಿತ್ರಗಳಿವೆ. ಯುವರತ್ನ, ಪಾಪ್ ಕಾರ್ನ್ ಮಂಕಿ ಟೈಗರ್, ಸಲಗ, ಬಡವ ಱಸ್ಕಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಧನಂಜಯ್.

 • ಡಾಲಿ ಮುಂದಿನ ಚಿತ್ರ ವರ್ಮಾ ಜೊತೆನಾ..? ಸೂರಿ ಜೊತೆನಾ..?

  dhananjay to act in rgv's movie?

  ಟಗರು ಚಿತ್ರದ ಡಾಲಿ ಪಾತ್ರ ಧನಂಜಯ್‍ಗೆ ಬೇರೆಯದ್ದೇ ಇಮೇಜ್ ಕೊಟ್ಟುಬಿಟ್ಟಿದೆ. ಎಷ್ಟರಮಟ್ಟಿಗೆ ಅಂದ್ರೆ, ಧನಂಜಯ್ ನಟನೆಗೆ ಖುದ್ದು ರಾಮ್ ಗೋಪಾಲ್ ವರ್ಮಾ ಮರುಳಾಗಿ ಹೋಗಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಧನಂಜಯ್‍ಗೆ ಪ್ರಮುಖ ಪಾತ್ರವೊಂದನ್ನು ಫಿಕ್ಸ್ ಮಾಡಿರುವ ವರ್ಮಾ, ಈಗಾಗಲೇ ಧನಂಜಯ್ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ.

  ಹೈದರಾಬಾದ್‍ನಲ್ಲಿ ವರ್ಮಾ ಮತ್ತು ಧನಂಜಯ್ ನಡುವೆ ಒಂದು ಸುತ್ತಿನ ಮಾತುಕತೆ ಮುಗಿದಿದೆ. ಸಬ್ಜೆಕ್ಟ್ ಕುರಿತು ಡಿಸ್ಕಷನ್ ಕೂಡಾ ಆಗಿದೆಯಂತೆ. ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಇಷ್ಟು ಮಾತ್ರ.

  ಇತ್ತ ಸೂರಿ ಕೂಡಾ ಧನಂಜಯ್ ಅವರನ್ನೇ ಕಲ್ಪನೆಯಲ್ಲಿಟ್ಟುಕೊಂಡು ಹೊಸ ಕಥೆ ಬರೆಯುತ್ತಿದ್ದಾರೆ. ಧನಂಜಯ್ ಜೊತೆ ಒಟ್ಟು ಎರಡು ಸಿನಿಮಾ ಮಾಡುವ ಸೂಚನೆ ಕೊಟ್ಟಿದ್ಧಾರೆ ಸೂರಿ.

  ಹಾಗಾದರೆ ಧನಂಜಯ್ ಮುಂದಿನ ಸಿನಿಮಾ ಯಾರ ಜೊತೆ..? ಸೂರಿ ಜೊತೆನಾ..? ವರ್ಮಾ ಜೊತೆನಾ..

 • ಡಾಲಿಗೆ ಬುಲ್‍ಬುಲ್ ಜೋಡಿ

  rachita to star opposite dhananjay

  ಟಗರು ನಂತರ ಡಾಲಿ ಎಂದೇ ಫೇಮಸ್ ಆಗಿರೋ ಧನಂಜಯ್. ಕನ್ನಡಿಗರ ಪಾಲಿಗೆ ಬುಲ್‍ಬುಲ್, ಡಿಂಪಲ್ ಕ್ವೀನ್ ಆಗಿರೋ ರಚಿತಾ ರಾಮ್. ಇವರಿಬ್ಬರನ್ನೂ ಒಟ್ಟಿಗೇ ನೋಡಿ ಸಂಭ್ರಮಿಸುವ ಸಮಯ ಹತ್ತಿರವಾಗಿದೆ. ಅದು ಡಾಲಿ ಚಿತ್ರದಲ್ಲಿ.

  ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಡಾಲಿ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ರಚಿತಾ ರಾಮ್ ಈ ಚಿತ್ರಕ್ಕೆ ಹೀರೋಯಿನ್ ಆಗುವ ಸಾಧ್ಯತೆ ಇದೆ. ಈಗಾಗಲೇ ಮಾತುಕತೆ ಮುಗಿದಿದ್ದು ಫೈನಲ್ ಹಂತದಲ್ಲಿದೆಯಂತೆ. 

  ಇತ್ತ ರಚಿತಾ ಆಯುಷ್ಮಾನ್ ಭವ, 100, ಏಕ್‍ಲವ್ ಯಾ ಚಿತ್ರಗಳಲ್ಲಿ ಬ್ಯುಸಿಯಿದ್ದರೆ, ಧನಂಜಯ್ ಪಾಪ್‍ಕಾರ್ನ್ ಮಂಕಿ ಟೈಗರ್, ಯುವರತ್ನ, ಪೊಗರು, ಸಲಗ ಚಿತ್ರಗಳಲ್ಲಿ ಬ್ಯುಸಿ. 

  ಪ್ರಭು ಶ್ರೀನಿವಾಸ್ ನಿರ್ದೇಶನದ ಡಾಲಿಯಲ್ಲಿ ಧನಂಜಯ್‍ಗೆ ಎರಡು ಶೇಡ್‍ನ ಪಾತ್ರವಿದೆಯಂತೆ.

 • ದರ್ಶನ್ ಎದುರು ಮಿಠಾಯಿ ಸೂರಿ

  dolly dhananjay as mitayi soori in yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಸ್ಟಾರ್‍ಗಳಿದ್ದಾರೆ. ದೇವರಾಜ್, ರವಿಶಂಕರ್, ಅನೂಪ್ ಸಿಂಗ್, ರಶ್ಮಿಕಾ ಮಂದಣ್ಣ.. ಹೀಗೆ ಹಲವು ಸ್ಟಾರ್‍ಗಳು ನಟಿಸಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಒನ್ಸ್ ಎಗೇಯ್ನ್ ವಿಲನ್.

  ಚಿತ್ರದಲ್ಲಿ ಡಾಲಿ ಧನಂಜ್ ಅವರ ಪಾತ್ರದ ಹೆಸರು ಮಿಠಾಯಿ ಸೂರಿ. ಧನಂಜಯ್ ಅವರ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲವೂ ಡಿಫರೆಂಟ್ ಆಗಿಯೇ ಇದೆ. ದರ್ಶನ್ ಎದುರು ವಿಲನ್ ಆಗುವವರೂ ಅಷ್ಟೇ ಖಡಕ್ ಆಗಿರಬೇಕು. ಒಟ್ಟಿನಲ್ಲಿ ಕೇಡಿಗೆ ಕೇಡಿಯಾಗಿ ಯಜಮಾನನನಿಗೆ ಠಕ್ಕರ್ ಕೊಟ್ಟಿದ್ದಾರೆ ಧನಂಜಯ್. ಹೇಗೆ ಠಕ್ಕರ್ ಕೊಟ್ಟಿದ್ದಾರೆ ಅನ್ನೋದು ಮಾರ್ಚ್ 1ಕ್ಕೆ ಗೊತ್ತಾಗಲಿದೆ.

 • ದರ್ಶನ್‍ಗೆ ಧನಂಜಯ್ ಚಾಲೆಂಜ್

  dhananjay challenges darshan

  ಧನಂಜಯ್, ಅಭಿಮಾನಿಗಳ ಪಾಲಿನ ಧನೂ ಬಾಸ್. ಹಲವು ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿರುವ ಧನಂಜಯ್, ದರ್ಶನ್ ಚಿತ್ರದಲ್ಲಿ ಮತ್ತೊಮ್ಮೆ ವಿಲನ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮೊದಲು ಯಾವಾಗ ನಟಿಸಿದ್ದರು ಅಂತೀರಾ. ಅದು ಟಗರು ಚಿತ್ರದಲ್ಲಿ. ಶಿವರಾಜ್ ಕುಮಾರ್ ಎದುರು ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಆ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ಅವರ 51ನೇ ಚಿತ್ರದಲ್ಲಿ ವಿಲನ್ ಆಗಲು ರೆಡಿಯಾಗಿದ್ದಾರೆ.

  ಹೀರೋ ಆಗಿ ನಟಿಸಿದ್ದೇನೆ. ಜನ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಹೀರೋ ಆಗಿ ಮಾಡುತ್ತಲೇ, ವಿಲನ್ ರೋಲ್ ಮಾಡೋಕೂ ನಾನು ರೆಡಿ ಎಂದಿದ್ದಾರೆ ಧನಂಜಯ್. 

  ಶಿವರಾಜ್ ಕುಮಾರ್ ಎದುರು ನಟಿಸಲು ಸಿಕ್ಕ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ತಾರಾ..? ಟಗರು ಚಿತ್ರದಲ್ಲಿನ ಡಾಲಿ ಪಾತ್ರ ನನಗೆ ಬೇರೆಯದ್ದೇ ಇಮೇಜ್ ಕೊಡಲಿದೆ. ಇನ್ನು ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿದ್ದೇ ತಡ, ಅವರ ತಂದೆ ಫೋನ್ ಮಾಡಿ ಅಭಿನಂದಿಸಿದರಂತೆ. 

  ಖಳನಾಯಕನ ಪಾತ್ರ ಮಾಡೋಕೆ ಸ್ಫೂರ್ತಿ ಇನ್ನೇನೂ ಅಲ್ಲ, ಜಲೀಲನ ಪಾತ್ರ. ಅಂಬರೀಷ್ ಹೀರೋ ಆಗಿ ಎಷ್ಟೇ ಚಿತ್ರಗಳಲ್ಲಿ ನಟಿಸಿದ್ದರೂ, ಜನ ಅವರನ್ನು ಜಲೀಲ ಎಂದೇ ಗುರುತಿಸುತ್ತಾರೆ. ಅದು ಪಾತ್ರಕ್ಕಿರುವ ಶಕ್ತಿ ಅಂಥಾರೆ ಧನಂಜಯ್. ಇನ್ನೂ ಚಿತ್ರದ ಟೈಟಲ್ ಕೂಡಾ ಬಿಡುಗಡೆ ಮಾಡದ ಚಿತ್ರತಂಡ, ದರ್ಶನ್ ಅವರ ಹುಟ್ಟುಹಬ್ಬದ ದಿನ ಎಲ್ಲವನ್ನೂ ಬಹಿರಂಗಪಡಿಸುವ ಸೂಚನೆ ಕೊಟ್ಟಿದೆ. ವೇಯ್ಟಿಂಗ್.

 • ದೇವಿ.. ಸುಮಿತ್ರಾ..ಗಿರಿಜೆಯರ ನಡುವೆ ಸೀನನ ಲೈಫ್ ಲವ್ ಸ್ಟೋರಿ

  whi are the ladies of popcorn monkey tiger

  ದೇವಿಯಾಗಿ ನಟಿಸಿರುವುದು ನಿವೇದಿತಾ. ಬೋಲ್ಡ್ & ಎಮೋಷನಲ್ ಹುಡುಗಿ. ಗಿರಿಜೆಯಾಗಿ ಕಾಣಿಸಿಕೊಂಡಿರೋದು ಸಪ್ತಮಿ ಗೌಡ. ಫಿಲ್ಟರೇ ಇಲ್ಲದ ಬಿಂದಾಸ್ ಮಾತಿನ ಹುಡುಗಿ.

  ಮತ್ತೊಬ್ಬಳು ಸುಮಿತ್ರಾ. ಈ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಅಮೃತಾ ಅಯ್ಯಂಗಾರ್. ಪಕ್ಕಾ ಮಿಡಲ್ ಕ್ಲಾಸ್ ಹುಡುಗಿ. ಎಮೋಷನಲ್. ಕಷ್ಟ ಪಟ್ಟು ಮೇಲೆ ಬರಬೇಕು ಎನ್ನುವ ಸ್ವಭಾವದ ಕನಸುಗಣ್ಣಿನ ಚೆಲುವೆ.

  ಈ ಮೂವರೂ ಸೀನನ ಅರ್ಥಾತ್ ಧನಂಜಯ್ ಲೈಫಲ್ಲಿ ಬರ್ತಾರೆ. ಆ ಕಥೆಯನ್ನು ಭೂಗತ ಜಗತ್ತಿನ ಕಥೆಯೊಂದಿಗೆ ಹೇಳಿದ್ದಾರೆ ನಿರ್ದೇಶಕ ಸೂರಿ.

  ಟಗರು ಎಂಬ ಸೂಪರ್ ಡ್ಯೂಪರ್ ಹಿಟ್ ಚಿತ್ರ ಕೊಟ್ಟ ನಂತರ ಸೂರಿ ಮಾಡಿರುವ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್. ಮತ್ತೊಮ್ಮೆ ಭೂಗತ ಜಗತ್ತಿನ ವಿಚಿತ್ರ ಪ್ರೇಮ ಕಥೆ. 

   

 • ನವರಸ ನಾಯಕನ ಜೊತೆ ಡಾಲಿ

  dhananjay shares screen with jaggesh in thotapuri

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರದಲ್ಲಿ ಹೀರೋ ಆಗಿರುವುದು ನವರಸ ನಾಯಕ ಜಗ್ಗೇಶ್. ಸಿದ್ಲಿಂಗು, ನೀರ್‍ದೋಸೆ ನಿರ್ದೇಶಿಸಿದ್ದ ವಿಜಯ್ ಪ್ರಸಾದ್, ಮತ್ತೊಮ್ಮೆ ಜಗ್ಗೇಶ್ ಅವರ ನಾಯಕತ್ವದಲ್ಲೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅವರ ಫೇವರಿಟ್ ಸುಮನ್ ರಂಗನಾಥ್ ಚಿತ್ರಕ್ಕೆ ನಾಯಕಿ. ಇದೆಲ್ಲದರ ಜೊತೆಗೆ ಡಾಲಿ ಧನಂಜಯ್ ಕೂಡಾ ಇದ್ದಾರೆ.

  ತೋತಾಪುರಿ ಕಥೆ ಕೇಳಿದೆ. ಇಷ್ಟವಾಯಿತು. ವಿಜಯ್ ಪ್ರಸಾದ್ ಅವರ ಸಿದ್ಲಿಂಗು, ನೀರ್‍ದೋಸೆ ಸಿನಿಮಾ ನೋಡಿದ್ದೆ. ಇಷ್ಟವಾಗಿದ್ದವು. ಜೊತೆಗೆ ಜಗ್ಗೇಶ್ ಅವರೊಂದಿಗೆ ನಟಿಸುವ ಅವಕಾಶ. ಹೀಗಾಗಿ ಚಿತ್ರವನ್ನು ಮರುಮಾತಿಲ್ಲದೆ ಒಪ್ಪಿಕೊಂಡೆ ಅಂತಾರೆ ಧನಂಜಯ್.

  ಶೂಟಿಂಗ್ ಬಿರುಸಾಗಿ ನಡೆಯುತ್ತಿದ್ದು, ಧನಂಜಯ್ ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

 • ನಿವೇದಿತಾ ಕಂಡಂತೆ.. ಮಂಕಿ ಟೈಗರ್ ಸೂರಿ

  popcorn monkey tiger

  ಅವರು ಮಾಡಿದ ಮೊದಲ ಸಿನಿಮಾ ದುನಿಯಾ. ಅದು ಅವರ ಹೆಸರಿಗೇ ಅಂಟಿಕೊಂಡಿತು. ದುನಿಯಾ ಸೂರಿ ಆಗಿಬಿಟ್ಟರು ಸೂರಿ. ಅದಾದ ಮೇಲೆ ಹಲವು ಹಿಟ್ ಕೊಟ್ಟರೂ, ಅವರಿಗೆ ಹೊಸದೊಂದು ಚಾರ್ಮ್ ಕೊಟ್ಟಿದ್ದು ಟಗರು. ಅದಾದ ಮೇಲೆ ಟಗರು ಸೂರಿ ಆಗಿಬಿಟ್ಟರು. ಈಗ ಮಂಕಿ ಟೈಗರ್ ಜೊತೆ ಬಂದಿದ್ದಾರೆ. ಸೂರಿ ಕನ್ನಡದ ಬೇರೆ ನಿರ್ದೇಶಕರ ಹಾಗಲ್ಲ. ಅವರ ಕೆಲಸವೇ ಡಿಫರೆಂಟ್. ಅದನ್ನು ನಿವೇದಿತಾ ಅವರ ಬಾಯಲ್ಲಿ ಕೇಳಬೇಕು.

  ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದಲ್ಲಿ ನಟಿಸಿರುವುದಕ್ಕೆ ಹೆಮ್ಮೆಯಿದೆ. ಮೊದಲು ಸೂರಿ ಅವರ ನಿರ್ದೇಶನದ ಶೈಲಿ ಅರ್ಥವಾಗಲು ಅವರಿಗೆ ಸಾಕಷ್ಟು ಸಮಯ ಹಿಡಿಯಿತು. ಅರ್ಥವಾದ ಮೇಲೆ ಗೌರವ ಹೆಚ್ಚಿತು ಎನ್ನುತ್ತಾರೆ ನಿವೇದಿತಾ. ಅವರು ಇಲ್ಲಿ ದೇವಿಕಾ ಎಂಬ ಹೆಸರಿನ ಪಾತ್ರ ಮಾಡಿದ್ದಾರೆ.

  ಮಂಕಿ ಸೀನನ ಬದುಕಿನ ಕಥೆ ಇದು. ಕೆಲವು ಘಟನೆಗಳಿಂದ ದೇವಿಕಾಳ ಬದುಕಿನಲ್ಲಿ ಹೇಗೆಲ್ಲಾ ಪರಿವರ್ತನೆಯಾಗುತ್ತದೆ; ಯಾವ ಹಾದಿಯಲ್ಲಿ ಹೋಗುತ್ತಾಳೆ ಎನ್ನುವುದೇ ಕಥೆ ಎನ್ನುವ ನಿವೇದಿತಾ ಮತ್ತೆ ಮಾತು ಶುರುವಿಟ್ಟುಕೊಳ್ಳೋದು ಸೂರಿ ಬಗ್ಗೆ.

  ಅವರ ಕೆಲಸದ ಶೈಲಿಯೇ ಭಿನ್ನ. ಈ ಕಥೆಯ ಬಗ್ಗೆ ಒಂದು ಸಾವಿರ ಪುಟಗಳನ್ನು ಬರೆದಿರಬಹುದು. ನಾನು ಅವರ ಕಚೇರಿಗೆ ಹೋದಾಗಲೆಲ್ಲಾ ಟೇಬಲ್‌ ಮೇಲೆ ಏನಾದರೂ ಬರೆಯುತ್ತಲೇ ಇರ್ತಾ ಇದ್ರು. ಯಾವುದಕ್ಕೂ ಅಂಟಿಕೊಳ್ಳುತ್ತಿರಲಿಲ್ಲ; ಎಲ್ಲವೂ ಸಿದ್ಧವಾಗಿ ಸೆಟ್ಟಿಗೆ ಬಂದರೂ, ಹೊಸದೇನಾದರೂ ಹೊಳೆದರೆ.. ಇಷ್ಟವಾದರೆ.. ಅದನ್ನು ಇಂಪ್ಲಿಮೆಂಟ್ ಮಾಡೋದು ಸೂರಿ ಸ್ಟೈಲ್. ಅವರೊಬ್ಬ ಚಿತ್ರ ಕಲಾವಿದ. ಅವರ ಮನಸ್ಸಿನಲ್ಲಿ ಒಂದು ಚಿತ್ರವಿರುತ್ತದೆ. ಅದನ್ನು ಕ್ಯಾನ್ವಾಸ್‌ ಮೇಲೆ ತರಲು ಯತ್ನಿಸುತ್ತಾರೆ. ಬರೆಯುತ್ತಾ ಹೋದಂತೆ ಹೊಸ ಬಣ್ಣ, ಛಾಯೆಗಳು ಮೂಡುತ್ತವೆ. ಹೊಸ ಆಲೋಚನೆ ಮೂಡಿದರೆ ಅದಕ್ಕೆ ಪುಷ್ಟಿ ನೀಡುತ್ತಾರೆ. ಹಾಗೆ ರೂಪುಗೊಂಡಿರುವುದೇ ಪಾಪ್‌ಕಾರ್ನ್‌ ಮಂಕಿಟೈಗರ್ ಎನ್ನವುದು ನಿವೇದಿತಾ ಕಂಡ ಸಿನಿಮಾ ಕಥೆ.

  ಎಂದಿನಂತೆ ಈ ಬಾರಿಯೂ ಸೂರಿ ಚೌಕಟ್ಟು ಬ್ರೇಕ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ತಂಡದ ಎಲ್ಲರನ್ನೂ ಒಟ್ಟುಗೂಡಿಸಿ ಸಿನಿಮಾ ಮಾಡಿದ್ದಾರೆ ಎನ್ನುವ ನಿವೇದಿತಾ, ಧನಂಜಯ್ ಬಗ್ಗೆ ಹೇಳೋದೇ ಬೇರೆ. ನನಗೆ ಒಂದು ದುಃಖದ ಸೀನ್ ಇದ್ದರೆ, ಇಡೀ ದಿನ ದುಃಖದ ಮೂಡಲ್ಲಿಯೇ ಇರ್ತೇನೆ. ಆದರೆ ಧನಂಜಯ್ ಹಾಗಲ್ಲ, ಸೀನ್ಗೆ ತಕ್ಕಂತೆ ಮೂಡ್ ಬದಲಿಸಿಕೊಳ್ತಾರೆ ಎನ್ನುವ ನಿವೇದಿತಾಗೆ ಸಿನಿಮಾ ಮೇಲೆ ತುಂಬಾ ನಿರೀಕ್ಷೆಯಿದೆ.

 • ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ತಲ್ಲಣ

  popcorn monkey tiger teaser launched

  ನಿರ್ದೇಶಕ ಸೂರಿ ಚಿತ್ರಗಳೆಂದರೇ ಹಾಗೆ.. ಏನೇ ಮನರಂಜನೆ ಎಂದುಕೊಂಡರೂ.. ಅಲ್ಲೊಂದು ತಲ್ಲಣ, ತಳಮಳ ಸೃಷ್ಟಿಸೋದ್ರಲ್ಲಿ ಅವರದ್ದು ಎತ್ತಿದ ಕೈ. ಪಾಪ್‌ ಕಾರ್ನ್‌ ಮಂಕಿ ಟೈಗರ್ ಸಿನಿಮಾ ಟೀಸರ್‌ ಕೂಡಾ ಅಂಥದ್ದೇ ತಳಮಳ ಸೃಷ್ಟಿಸಿದೆ.

  ವಿಚಿತ್ರ ಟೈಟಲ್‌ ಮೂಲಕ ಕುತೂಹಲ ಹುಟ್ಟಿಸಿದ್ದ ಸೂರಿ, ರಕ್ತದ ಕಥೆಯನ್ನೂ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ. ಅದು ಸೂರಿ ಸ್ಟೈಲ್. ಚಿತ್ರದ ಟೀಸರ್, ಮಾಫಿಯಾ ಮತ್ತು ಮನುಷ್ಯತ್ವದ ಸಂಬಂಧಗಳ ಕುರಿತು ಇರುವಂತಿದೆ. ನಟರಾಕ್ಷಸ ಧನಂಜಯ್ ಮತ್ತೊಮ್ಮೆ ಬೆಚ್ಚಿಬೀಳಿಸುತ್ತಾರೆ.  ನಲ್ಲಿಯಲ್ಲಿ ತೊಟ್ಟಿಕ್ಕುವ ನೀರು, ನೆತ್ತರು, ಚಿಟ್ಟೆ, ಮಗು, ಸಮುದ್ರದ ದೃಶ್ಯಗಳ ಜೊತೆಯಲ್ಲೇ ಒಂದು ಭೀಕರತೆಯನ್ನೂ ತೆರೆದಿಡುತ್ತಾರೆ ಸೂರಿ. ಡಾಲಿಗೆ ಜೋಡಿಯಾಗಿ ನಿವೇದಿತಾ ಇದ್ದರೆ, ಚರಣ್ ರಾಜ್ ಸಂಗೀತ ಎದೆ ಬಡಿತ ಹೆಚ್ಚಿಸುತ್ತದೆ.

 • ಬಡವ ರ್ಯಾಸ್ಕಲ್ ಡಾಲಿ ಧನಂಜಯ್

  dhananjay's next is badava rascal

  ಬಡವ ರ್ಯಾಸ್ಕಲ್ ಅನ್ನೋದು ಅಣ್ಣಾವ್ರ ಸ್ಪೆಷಲ್ ಬೈಗುಳ. ಬಹುಶಃ ರಾಜ್ ಚಿತ್ರಗಳಲ್ಲಿ ಅತಿ ಹೆಚ್ಚು ಬೈಗುಳ ಇದೇ ಇರಬೇಕು. ಈಗ ಅದು ಹೊಸ ಚಿತ್ರದ ಟೈಟಲ್ ಆಗಿದೆ. ಬಡವ ರ್ಯಾಸ್ಕಲ್ ಆಗಿರೋದು ಡಾಲಿ ಧನಂಜಯ್.

  ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶಂಕರ್, ಈ ಚಿತ್ರದ ಮೂಲಕ ನಿರ್ದೇಶರಾಗುತ್ತಿದ್ದಾರೆ. ಧನಂಜಯ್‍ಗೆ ಅಮೃತಾ ಅಯ್ಯಂಗಾರ್ ಅನ್ನೋ ಹುಡುಗಿ ನಾಯಕಿ. ಅಂದಹಾಗೆ ಇದು ಕಾಮಿಡಿ ಜಾನರ್ ಇರುವ ಚಿತ್ರವಂತೆ. ಇದೇ ಆಗಸ್ಟ್ 23ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

 • ಬಡವ ರ್ಯಾಸ್ಕಲ್ ಸೆ.24ಕ್ಕೆ ಬರ್ತಾನೆ

  ಬಡವ ರ್ಯಾಸ್ಕಲ್ ಸೆ.24ಕ್ಕೆ ಬರ್ತಾನೆ

  ಭಜರಂಗಿ 2 ಮತ್ತು ಸಲಗ ನಂತರ ಇನ್ನೊಂದು ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಬಡವ ರ್ಯಾಸ್ಕಲ್ ಸಿನಿಮಾ ಸೆ.24ಕ್ಕೆ ರಿಲೀಸ್ ಆಗಲಿದೆ. ಶೂಟಿಂಗ್, ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದ ಬಡವ ರ್ಯಾಸ್ಕಲ್ ಸಿನಿಮಾ, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಬಿಡುಗಡೆಗೆ ಸಿದ್ಧತೆ ನಡೆಸಿದೆ.

  ಧನಂಜಯ್ ಹೀರೋ ಆಗಿದ್ದು, ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಡಾಲಿಗೆ ಜೊತೆಯಾಗಿದ್ದಾರೆ. ಇದೊಂದು ಮಿಡ್ಲ್ ಕ್ಲಾಸ್ ಗ್ಯಾಂಗ್ ಸ್ಟರ್ ಹುಡುಗರ ಕಥೆ ಎಂದಿರುವ ಧನಂಜಯ್, ರಾ ಕಥೆ ಹೊಂದಿದೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಂಕರ್ ಗುರು.

  ಅಂದಹಾಗೆ ಇದು ಡಾಲಿ ಧನಂಜಯ್ ಅವರ ಮೊದಲ ನಿರ್ಮಾಣ ಸಾಹಸ. ಚಿತ್ರವನ್ನು ಡಾಲಿ ಪಿಕ್ಚರ್ಸ್‍ನಲ್ಲಿ ನಿರ್ಮಾಣ ಮಾಡಿದ್ದು, ಸಾವಿತ್ರಮ್ಮ ಅಡವಿಸ್ವಾಮಿ ನಿರ್ಮಾಪಕರು. ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.

 • ಮಂಕಿ ಟೈಗರ್ ಒಳಗೆ ಕಾಗೆ ಬಂಗಾರದ ಸುಳಿವು

  soori talks about khaage bangara in popcorn monkey tiger

  ಕೆಂಡ ಸಂಪಿಗೆ ಚಿತ್ರ ಬಂದಿತ್ತಲ್ಲ, ಆ ಹೊತ್ತಿಗೇ ಸೂರಿ ಕಾಗೆ ಬಂಗಾರದ ಕಥೆ ಹೇಳಿದ್ದರು. ಅಷ್ಟೇ ಅಲ್ಲ, ಕೆಂಡ ಸಂಪಿಗೆಯೇ 2ನೇ ಭಾಗ. ಕಾಗೆ ಬಂಗಾರ ಮೊದಲನೆಯದ್ದು ಎಂದಿದ್ದರು. ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಬೆಚ್ಚಿ ಬೀಳಿಸಿರುವ ಸೂರಿ, ಮತ್ತೊಮ್ಮೆ ಕಾಗೆ ಬಂಗಾರ ನೆನಪಿಸಿದ್ದಾರೆ.

  ಕೆಂಡ ಸಂಪಿಗೆ ಸಿರೀಸ್‍ನಲ್ಲಿ 3 ಭಾಗ ಮಾಡುವುದಾಗಿ ಹೇಳಿದ್ದ ಸೂರಿ, ಪಾರ್ಟ್ 2 ಗಿಣಿಮರಿ ಕೇಸ್ ಮುಗಿಸಿದ್ದಾರೆ. ಪ್ರೇಕ್ಷಕರನ್ನೂ ಗೆದ್ದಿದ್ದಾರೆ. ಮೊದಲನೆ ಪಾರ್ಟ್ ಕಾಗೆ ಬಂಗಾರ ಮತ್ತು 3ನೇ ಪಾರ್ಟ್ ಬ್ಲಾಕ್ ಮ್ಯಾಜಿಕ್ ಬರಬೇಕಿದೆ.

  ಕೆಂಡ ಸಂಪಿಗೆ ಮಗಿದ ಜಾಗದಿಂದಲೇ ಮಂಕಿ ಟೈಗರ್ ಶುರುವಾಗುತ್ತದೆ. ಆದರೆ ಕಾಗೆ ಬಂಗಾರ ಮುಂದುವರೆಯಲ್ಲ. ಮಂಕಿ ಟೈಗರ್ ಕಥೆ ಬಿಚ್ಚಿಕೊಳ್ಳುತ್ತದೆ. ಒಟ್ಟಿನಲ್ಲಿ ಸೂರಿ ಕಾಗೆ ಬಂಗಾರ ಮರೆತಿಲ್ಲ. ಈಗ ಮಂಕಿ ಟೈಗರ್ ಚಿತ್ರದಲ್ಲೂ ಗೆದ್ದಿರುವ ಸೂರಿ, ಮುಂದಿನ ಚಾಲೆಂಜ್ ಎಂದು ಕಾಗೆ ಬಂಗಾರ ಕೈಗೆತ್ತಿಕೊಳ್ತಾರಾ..?

 • ಮಂಕಿ ಟೈಗರ್ ಚಿತ್ರಕ್ಕೆ ಪುಷ್ಕರ್ ಪವರ್

  popcorn monkey tiger gets pushkar's power

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗೋಕೆ ರೆಡಿ. ಟಗರು ನಂತರ ಸೂರಿ ನಿರ್ದೇಶಿಸಿರುವ ಚಿತ್ರವಾದ್ದರಿಂದ ಕುತೂಹಲ ಬೆಟ್ಟದಷ್ಟಿದೆ. ಜೊತೆಗೆ ಡಾಲಿ ಧನಂಜಯ್ ಅವರ ಭಯಂಕರ ಲುಕ್ಕೂ ಕಿಕ್ಕು ಕೊಟ್ಟಿದೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಂದು ಭರ್ಜರಿ ಪವರ್ ಸಿಕ್ಕಿದೆ.

  ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸ್ಟಾರ್ ಪಟ್ಟಕ್ಕೇರಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ. ಶಿವರಾತ್ರಿಗೆ ಮಂಕಿ ಟೈಗರ್ ದರ್ಶನವಾಗಲಿದೆ. ಥಿಯೇಟರುಗಳಲ್ಲಿ, ಟಿವಿಗಳಲ್ಲಿ ಹಾಗೂ ಡಿಜಿಟಲ್ ಮಾರ್ಕೆಟ್ಟಿನಲ್ಲೂ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇದೆ.

  ಬಿಡುಗಡೆಗೆ ಮುನ್ನವೇ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆಯಂತೆ. ಡಾಲಿ ಧನಂಜಯ್ ಜೊತೆಗೆ ನಿವೇದಿತಾ, ಅಮೃತಾ ನಟಿಸಿದ್ದಾರೆ. ಅಂದಹಾಗೆ ಟಗರು ಫೆ.23ರಂದು ರಿಲೀಸ್ ಆಗಿತ್ತು. ಮಂಕಿ ಟೈಗರ್ ಫೆಬ್ರವರಿ 23ಕ್ಕೆ ರಿಲೀಸ್ ಆಗುತ್ತಿದೆ.

   

 • ಮಂಕಿ ಟೈಗರ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್

  popcorn monkey tiger first day box office report

  ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. 300+ ಥಿಯೇಟರುಗಳಲ್ಲಿ ತೆರೆ ಕಂಡ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಧನಂಜಯ್ ಚಿತ್ರಗಳಲ್ಲೇ ಇದು ಭಾರಿ ಮೊತ್ತದ ಫಸ್ಟ್ ಡೇ ಕಲೆಕ್ಷನ್. ದುನಿಯಾ ಸೂರಿ ಈಗಾಗಲೇ ಇದಕ್ಕಿಂತಲೂ ಭರ್ಜರಿ ಓಪನಿಂಗ್ ಪಡೆದಿದ್ದಾರೆ.

  ಮಂಕಿ ಟೈಗರ್ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 2 ಕೋಟಿ 53 ಲಕ್ಷ ರೂ. ಇದನ್ನು ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿದೆ. ಇದು ಶುಕ್ರವಾರದ ಕಲೆಕ್ಷನ್ ಮಾತ್ರ. ಶನಿವಾರದ ಕಲೆಕ್ಷನ್ ಕೂಡಾ ಭರ್ಜರಿಯಾಗಿಯೇ ಇದೆ. 

 • ಮಂಕಿ ಟೈಗರ್ ವೀಕೆಂಡ್ ಕಲೆಕ್ಷನ್, ಬಾಳೆಹಣ್ಣಿನ ರಿಪೋರ್ಟ್

  monkey seena gets banana gify from fans

  ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಗೆದ್ದುಬಿಟ್ಟಿದೆ. ಇದು ಸೂರಿಗಿಂತಲೂ ಹೆಚ್ಚಾಗಿ ಡಾಲಿ ಧನಂಜಯ್ ಕಾಯುತ್ತಿದ್ದ ಗೆಲುವು. ಹೀರೋ ಆಗಿ ನಟಿಸಿದ್ದ ಚಿತ್ರದ ಗೆಲುವು ಧನಂಜಯ್‍ಗೆ ತುಂಬಾ ತಡವಾಗಿ ಸಿಕ್ಕಿದೆ. ಮೊದಲ ದಿನ ಎರಡೂವರೆ ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ವೀಕೆಂಡ್‍ನಲ್ಲಿ 5 ಕೋಟಿ ಕಲೆಕ್ಷನ್ ದಾಟಿದೆ. ಇದು ಧನಂಜಯ್ ಅವರಿಗೆ ಸಿಕ್ಕ ಬಾಕ್ಸಾಫೀಸ್ ಗೆಲುವು.

  ಇನ್ನು ಚಿತ್ರತಂಡ ಹೋದೆಡೆಯಲ್ಲೆಲ್ಲ ಅಭಿಮಾನಿಗಳ ಜೈಕಾರದ ಸ್ವಾಗತ ಸಿಕ್ಕಿದೆ. ಮಂಡ್ಯದಲ್ಲಂತೂ ಅಭಿಮಾನಿಗಳು ಬಾಳೆಹಣ್ಣಿನ ಗೊನೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಬಾಳೆಹಣ್ಣಿನ ಗೊನೆ ಯಾಕೆ..? ಅದನ್ನು ನೀವು ಚಿತ್ರದಲ್ಲೇ ನೋಡಬೇಕು. ಮಂಕಿ ಟೈಗರ್ ಚಿತ್ರದಲ್ಲಿ ಬಾಳೆಹಣ್ಣಿನ ಸೀನ್ ಫೇಮಸ್ ಆಗಿದೆ.

  ಇನ್ನು ಚಿತ್ರದಲ್ಲಿ ಫೇಮಸ್ ಆಗಿರುವುದು ಪಾತ್ರಗಳ ಹೆಸರು. ಮಂಕಿ ಸೀನ, ಮೂಗ, ಗಲೀಜು, ಬೀರ್ ರಾಣಿ, ರೇಜರ್ ಗೋಪಿ, ಪಾಪ್‍ಕಾರ್ನ್ ದೇವಿ, ಬಬ್ಲೂ, ಹಾವ್‍ರಾಣಿ, ಕಲಾಯ್, ಕೋತಿಮರಿ, ಶುಗರ್, ಸುಕ್ಕಾ, ಭದ್ರಾವತಿ ಕುಷ್ಕಾ, ಕಪ್ಪೆ....

 • ಮಂಕಿ ಸೀನ, ಸೂರಿಗೆ ಟೆಲಿಗ್ರಾಂ ಶಾಕ್

  telegram shocks dhananjay and soori

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕು ಎಲ್ಲೆಡೆ ಸದ್ದು ಮಾಡುತ್ತಿದೆ. ನಟರಾಕ್ಷಸ ಎಂಬ ಬಿರುದಿಗೆ ತಕ್ಕಂತೆ ಅಬ್ಬರಿಸಿದ್ದಾರೆ ಧನಂಜಯ್. ಆ ನಟರಾಕ್ಷಸನಿಗೇ ರಾಕ್ಷಸನಂತೆ ಕಾಡ್ತಿರೋದು ಟೆಲಿಗ್ರಾಂ. ಹೌದು, ಚಿತ್ರದ ಪೈರಸಿ ಪ್ರತಿಗಳು ಟೆಲಿಗ್ರಾಂನಲ್ಲಿ ರಿಲೀಸ್ ಆಗಿವೆ.

  ಟೆಲಿಗ್ರಾಂ ಅನ್ನೋದು ಕೇವಲ ಕನ್ನಡ ಸಿನಿಮಾಗಳನ್ನಷ್ಟೇ ಅಲ್ಲ, ಎಲ್ಲ ಭಾಷೆಯ ಚಿತ್ರಗಳಿಗೂ ಮಾರಕವಾಗಿ ಕಾಡುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಟೆಲಿಗ್ರಾಂನಲ್ಲಿ ವಿಡಿಯೋ ಪ್ರತ್ಯಕ್ಷವಾಗುತ್ತದೆ. ತಮಿಳು ರಾಕರ್ಸ್‍ಗಿಂತ ದೊಡ್ಡ ನೆಟ್‍ವರ್ಕ್ ಇದು.

  ಇದು ಬೇರೆ ಸೈಟ್‍ಗಳಿಗೆ ಹೋಲಿಸಿದರೆ ತುಂಬಾ ಅಪ್‍ಡೇಟೆಡ್ & ಸೆಕ್ಯೂರ್. ಆದರೆ ಅದನ್ನೇ ಪೈರಸಿ ಕ್ರಿಮಿನಲ್ಸ್ ಬಳಸಿಕೊಳ್ತಿರೋದು ಶಾಕ್ ಕೊಟ್ಟಿದೆ.

  ಈ ಪೈರಸಿಗೆ ಧನಂಜಯ್ ವ್ಯಂಗ್ಯ, ಆಕ್ರೋಶ, ಅಸಹಾಯಕತೆಯಿಂದಲೇ ಕೌಂಟರ್ ಕೊಟ್ಟಿದ್ದಾರೆ. ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ರೂ.. ಎಂಥ ಪಾತ್ರಗಳನ್ನು ಜೀವಿಸಿದರು.. ಅದ್ಭುತ.. ಅಮೋಘ.. ಜೈ ಕರ್ನಾಟಕ ಮಾತೆ.. ನಿಮ್ಮಂತಹವರು ಬೇಕು. ಇಲ್ಲ ಅಂದ್ರೆ ಲೈಫ್ ಬೇಗ ಬೋರ್ ಆಗ್ಬಿಡುತ್ತೆ. ಇದರ ಮಧ್ಯೆ ಹೌಸ್‍ಫುಲ್ ಪ್ರದರ್ಶನ ಕೊಡ್ತಾ ಇರೋದು ನಿಜ. ಸಿನಿಮಾ ಪ್ರೇಮಿಗಳಿಗೆ ಕೃತಜ್ಞತೆ. ಯಾರೂ.. ಯಾರ ಓಟಾನೂ ನಿಲ್ಸೋಕಾಗಲ್ಲ ಎಂದಿದ್ದಾರೆ ಧನಂಜಯ್.

 • ಮಂಕಿ.. ಗಾಗಿ ತಲೆ ಬೋಳಿಸಿಕೊಂಡ ಡಾಲಿ

  dhananjay goes bald for suri's next

  ಡಾಲಿ ಧನಂಜಯ್ ಪಾಪ್‍ಕಾರ್ನ್ ಟೈಗರ್ ಮಂಕಿ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡು ನಿಂತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಗಡ್ಡ, ಮೀಸೆಯಿಲ್ಲದ ಬೋಳು ತಲೆ, ಬೋಳು ತಲೆಯ ಮೇಲೆ ರಕ್ತದಲ್ಲೇ ಇಂಗ್ಲಿಷ್‍ನಲ್ಲಿ  ಬರೆದಿರುವ ಮಂಕಿ, ಕಣ್ಣಿನಲ್ಲೇ ಕೆಂಡ ಕಾರುತ್ತಿರುವ ಧನಂಜಯ್ ರಗಡ್ ಆಗಿ ಕಾಣಿಸುತ್ತಿದ್ದಾರೆ. ಅಫ್‍ಕೋರ್ಸ್.. ಎಷ್ಟೆಂದರೂ ಅದು ಸೂರಿ ಸಿನಿಮಾ.

  ಕೆ.ಎಂ. ಸುಧೀರ್ ನಿರ್ಮಾಣದ ಚಿತ್ರದಲ್ಲಿ ನಿವೇದಿತಾ ನಾಯಕಿ. ಆದರೆ, ಅಚ್ಚರಿ ಅದಲ್ಲ, ಧನಂಜಯ್ ಕೈತುಂಬಾ ಚಿತ್ರಗಳು ತುಂಬಿಕೊಂಡಿವೆ. ಯುವರತ್ನ, ಪೊಗರು, ಡಾಲಿ, ಸಲಗ ಚಿತ್ರಗಳ ಚಿತ್ರೀಕರಣ ಇನ್ನೂ ಆಗಿಲ್ಲ. ಅವೆಲ್ಲವನ್ನೂ ಬದಿಗಿಟ್ಟು ಗೆಟಪ್ ಬದಲಿಸಿಕೊಂಡಿದ್ದಾರೆ ಡಾಲಿ ಧನಂಜಯ್.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery