` dhananjay, - chitraloka.com | Kannada Movie News, Reviews | Image

dhananjay,

 • Tagaru Teaser Released

  tagaru trailer launch

  Ace cricketer G R Vishwanath on Tuesday night released the teaser of Shivarajakumar starrer 'Tagaru' amidst much fan fare in Town Hall in Bangalore.

  The teaser release function of the film was organised by Shivu Adda and Raj Dynasty along with the help of Shivarajakumar Fans Association. The event was attended by Shivarajakumar, Puneeth Rajakumar, Raghavendra Rajakumar, Allu Shirish, Rakshith Shetty and others.

  'Tagaru' stars Shivarajakumar, Dhananjay, Vasishta Simha, Manvitha Harish, Bhavana Menon, Devaraj and others in prominent roles. 'Tagaru - Maiyyalla Pogaru' is being written and directed by Suri, while K P Srikanth is producing the film. Mahendra Simha is the cinematographer, while Charan Raj of 'Godhi Banna Sadharana Maikattu' is the music director.

  Related Articles :-

  Tagaru Teaser To Be Released By G R Vishwanath

  ಜಿ.ಆರ್.ವಿಶ್ವನಾಥ್‍ರಿಂದ ಟಗರು ಟ್ರೇಲರ್ ಬಿಡುಗಡೆ 

  GR Vishwanath To Launch Tagaru Teaser

  ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಟಗರು ಟೀಸರ್

  Tagaru Rocks Hospet

 • Tagaru Teaser To Be Released By G R Vishwanath

  tagaru teaser launch n 7th november

  Ace cricketer G R Vishwanath is all set to release the teaser of Shivarajakumar starrer 'Tagaru' on the 7th of November in Town Hall in Bangalore.

  The teaser release function of the film is organised by Shivu Adda and Raj Dynasty along with the help of Shivarajakumar Fans Association. The event is attended by Minister D K Shivakumar, Shivarajakumar, Puneeth Rajakumar and others.

  'Tagaru' stars Shivarajakumar, Dhananjay, Vasishta Simha, Manvitha Harish, Bhavana Menon, Devaraj and others in prominent roles. 'Tagaru - Maiyyalla Pogaru' is being written and directed by Suri, while K P Srikanth is producing the film. Mahendra Simha is the cinematographer, while Charan Raj of 'Godhi Banna Sadharana Maikattu' is the music director.

   

 • Will Arjun Create Hatrick From Raate?

  raate image

  'Raate' being directed by A P Arjun is all set to release today and everybody is curious whether Arjun would be successful enough to create hatrick this time. Arjun's previous two films were good gits at box-office and it has to be seen whether Arjun manages to continue the magic once more or not.

  Meanwhile, 'Raate' is all set to release in more than 150 theaters across Karnataka. The film is being produced by music composer V Harikrishna under the banner of D Pictures. He himself has composed the songs for the film, while Satya Hegade is the cinematographer.

  Dhananjay and Shruthi Hariharan plays the hero-heroine in this musical love story.

 • ಅಣ್ಣಮ್ಮನ ಆಶೀರ್ವಾದ ಪಡೆದ ಸಲಗ

  ಅಣ್ಣಮ್ಮನ ಆಶೀರ್ವಾದ ಪಡೆದ ಸಲಗ

  ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಸಲಗ ಚಿತ್ರತಂಡ ಪ್ರಚಾರವನ್ನು ಜೋರಾಗಿಸಿದೆ. ಒಂದೆಡೆ ಸುದ್ದಿಗೋಷ್ಠಿ ನಡೆಸಿ ಚಿತ್ರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ದುನಿಯಾ ವಿಜಯ್, ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ.

  ಸಲಗ ವಿಜಯ್ ಮತ್ತು ಪತ್ನಿ ಕೀರ್ತಿ ಗೌಡ ಅಣ್ಣಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದ್ದಾರೆ. ಹಾಲಿನ ಅಭಿಷೇಕ ಮಾಡಿದ್ದಾರೆ.

  ದುನಿಯಾ ವಿಜಯ್ ಅವರಿಗೆ ಇದು ಅವರ ಮೊದಲು ಹೀರೋ ಆಗಿ ನಟಿಸಿದ್ದ ಚಿತ್ರ ದುನಿಯಾದಷ್ಟೇ ಇಂಪಾರ್ಟೆಂಟ್. ಏಕೆಂದರೆ ಇದು ಅವರ ನಿರ್ದೇಶನದ ಮೊದಲ ಸಿನಿಮಾ. ವಿಜಯ್ ಎದುರು ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಇದೇ ದಸರಾ ಹಬ್ಬದ ದಿನ ರಿಲೀಸ್ ಆಗುತ್ತಿದೆ.

  ನಾಳೆ ಅಂದರೆ ಅಕ್ಟೋಬರ್ 10ರಂದು ಪ್ರೀ-ಈವೆಂಟ್ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ಉಪೇಂದ್ರ ಭಾಗವಹಿಸಲಿದ್ದಾರೆ.

 • ಅಣ್ಣಾಮಲೈ ಗೆಟಪ್‍ನಲ್ಲಿ ಡಾಲಿ ಧನಂಜಯ್..!

  dhananay is inspired by ex cop annamalai

  ಡಾಲಿ ಧನಂಜಯ್, ಈಗ ಎಸಿಪಿ ಸಮರ್ಥ್. ಅವರಿಗೆ ಪೊಲೀಸ್ ವೇಷ ಹಾಕಿಸಿರುವುದು ದುನಿಯಾ ವಿಜಯ್. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಧನಂಜಯ್. ಅಂದಹಾಗೆ ಧನಂಜಯ್ ಪಾತ್ರಕ್ಕೆ ಅಣ್ಣಾಮಲೈ ಅವರ ರಿಯಲ್ ಗೆಟಪ್ ನೋಡಿ ರೆಡಿಯಾಗಿದ್ದಾರಂತೆ.

  ಅಣ್ಣಾಮಲೈ ಅವರನ್ನು ನೋಡಿದಾಗಲೆಲ್ಲ ಪೊಲೀಸ್ ಎಂದರೆ ಹೀಗಿರಬೇಕು ಎನಿಸುತ್ತಿತ್ತು. ಅದೇ ದೃಷ್ಟಿಯಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಬಾಡಿ ಫಿಟ್ ಮಾಡಿಕೊಂಡು ರೆಡಿಯಾಗಿದ್ದೇನೆ ಎನ್ನುವ ಧನಂಜಯ್‍ಗೆ ಸಮರ್ಥ್ ಪಾತ್ರಕ್ಕೆ ಡಾಲಿಗಿಂತಲೂ ಹೆಚ್ಚು ಫ್ಯಾನ್ಸ್ ಹುಟ್ಟಿಕೊಳ್ತಾರೆ ಅನ್ನೋ ಭರವಸೆ ಇದೆ.

  ಸಲಗ ಚಿತ್ರಕ್ಕೆ ದುನಿಯಾ ವಿಜಿ ಹೀರೋ ಅಷ್ಟೇ ಅಲ್ಲ, ಡೈರೆಕ್ಟರೂ ಹೌದು. ವಿಜಿ, ನನ್ನ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಕೊಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ ಧನಂಜಯ್.

 • ಆ ಪಾತ್ರಕ್ಕೆ ಡಾಲಿಯೇ ಇರಲಿ ಎಂದರು ಶಿವಣ್ಣ..!

  shivanna and dhananjay team up for next

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಮ್ಮೆ ಡಾಲಿ ಧನಂಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಟಗರು ಚಿತ್ರದಲ್ಲಿ ಡಾಲಿ ಅಬ್ಬರವನ್ನು ಎಲ್ಲರೂ ನೋಡಿದವರೇ. ಒಂದು ಹಂತದಲ್ಲಿ ಹೀರೋನನ್ನೂ ಮೀರಿ ಕ್ಲಿಕ್ ಆದ ಪಾತ್ರವದು. ಆದರೆ, ಶಿವಣ್ಣ ಈಸ್ ಡಿಫರೆಂಟ್. ತಮ್ಮ ಮುಂದಿನ ಚಿತ್ರದ ಒಂದು ಪ್ರಧಾನ ಪಾತ್ರಕ್ಕೆ ಡಾಲಿ ಧನಂಜಯ್ ಇರಲಿ ಎಂದು ಶಿಫಾರಸು ಮಾಡಿದ್ದಾರೆ.

  ತಮಿಳು ನಿರ್ದೇಶಕ ವಿಜಯ್ ಮಿಲ್ಟನ್, ಕನ್ನಡದಲ್ಲಿ ಶಿವಣ್ಣರನ್ನು ಹಾಕಿಕೊಂಡು ಮಾಡ್ತಿರೋ ಸಿನಿಮಾದಲ್ಲಿ ಧನಂಜಯ್ ಮತ್ತೊಮ್ಮೆ ಶಿವಣ್ಣಗೆ ಜೊತೆಯಾಗುತ್ತಿದ್ದಾರೆ. ಮೊದಲಿಗೆ ವಿಜಯ್ ಮಿಲ್ಟನ್ ಅವರಿಗೆ ಈ ಐಡಿಯಾ ಕೊಟ್ಟಿದ್ದು ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅಂತೆ. ಅದಾದ ನಂತರ ಶಿವಣ್ಣರನ್ನು ಕೇಳಿದಾಗಲೂ ಹೊರಬಿದ್ದಿದ್ದು ಇದೇ ಹೆಸರು. ಶಿವಣ್ಣ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.

 • ಎಲ್ಲಿ ನೋಡಲಲ್ಲಲ್ಲಿ.. ಬಡವ ರ್ಯಾಸ್ಕಲ್..

  ಎಲ್ಲಿ ನೋಡಲಲ್ಲಲ್ಲಿ.. ಬಡವ ರ್ಯಾಸ್ಕಲ್..

  ಪಾರ್ಲೆಜಿ ಬಿಸ್ಕೆಟ್ ಪ್ಯಾಕು.. ದಿನಸಿ ಅಂಗಡಿ.. ತರಕಾರಿ ಅಂಗಡಿ.. ಮಟನ್ ಅಂಗಡಿ.. ಗ್ಯಾರೇಜು.. ಆಟೋ.. ಎಳನೀರು ಗಾಡಿ.. ಸ್ಕೂಲ್ ಮಕ್ಕಳ ಬ್ಯಾಗು, ಸ್ಲೇಟು.. ಎಲ್ಲ.. ಎಲ್ಲ ಬಡವ ರ್ಯಾಸ್ಕಲ್ ಮಯ.

  ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾ ಬಡವ ರ್ಯಾಸ್ಕಲ್. ರಿಲೀಸ್ ಆಗೋಕೆ ರೆಡಿಯಾಗಿರೋ ಚಿತ್ರಕ್ಕೆ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಾಪಕಿ. ಶಂಕರ್ ಗುರು ನಿರ್ದೇಶನದ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿ. ರಂಗಾಯಣ ರಘು, ಸ್ಪರ್ಶ ರೇಖಾ, ತಾರಾ ಮೊದಲಾದವರು ನಟಿಸಿರೋ ಬಡವ ರ್ಯಾಸ್ಕಲ್ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ರತ್ನನ್ ಪ್ರಪಂಚ ಚಿತ್ರದ ಮೂಲಕ ಒಟಿಟಿಯಲ್ಲಿ ಹೆಸರು ಮಾಡಿದ್ದ ಧನಂಜಯ್, ಈ ಬಾರಿ ಥಿಯೇಟರಿಗೇ ಬರುತ್ತಿದ್ದಾರೆ.

 • ಕನ್ನಡದ ಅರ್ಜುನ್ ರೆಡ್ಡಿ ಡಾಲಿ ಧನಂಜಯ್..?

  will dhananjay act in kannada remake of arjun reddy

  ಅರ್ಜುನ್ ರೆಡ್ಡಿ, ಕಳೆದ ವರ್ಷ ತೆಲುಗಿನಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡ ಸಿನಿಮಾ. ಹಸಿಹಸಿ ಪ್ರೇಮಕಥೆಯಿದ್ದ ಚಿತ್ರವದು. ಮಡಿವಂತರು ಮುಖ ಮುಚ್ಚಿಕೊಳ್ಳುವಂತ ದೃಶ್ಯಗಳಿದ್ದ ಚಿತ್ರದಲ್ಲಿ, ಅಷ್ಟೇ ಅದ್ಭುತವಾದ ಸಂದೇಶವೂ ಇತ್ತು. ಹೀಗಾಗಿಯೇ ಈ ಚಿತ್ರದ ರೀಮೇಕ್ ರೈಟ್ಸ್ ಈಗ ರಾಕ್‍ಲೈನ್ ವೆಂಕಟೇಶ್ ಬಳಿ ಇದೆ. ಅರ್ಜುನ್ ರೆಡ್ಡಿ ಚಿತ್ರದಿಂದ ವಿಜಯ್ ದೇವರಕೊಂಡ ಎಂಬ ಹೀರೋ, ಟಾಲಿವುಡ್‍ನಲ್ಲಿ ಸ್ಟಾರ್ ಆಗಿದ್ದು ವಿಶೇಷ.

  ಆದರೆ, ಕನ್ನಡದಲ್ಲಿ ಅರ್ಜುನ್ ರೆಡ್ಡಿ ಯಾರಾಗ್ತಾರೆ ಅನ್ನೋ ಕುತೂಹಲ ಇನ್ನೂ ಅಂತಿಮಗೊಂಡಿಲ್ಲ. ಯಶ್ ನಟಿಸುತ್ತಾರೆ ಎಂಬ ಸುದ್ದಿಯಿತ್ತಾದರೂ, ಯಶ್ ಒಪ್ಪಲಿಲ್ಲ ಎಂಬ ಸುದ್ದಿಯೂ ಹಿಂದೆಯೇ ಬಂದಿತ್ತು. ನಂತರ ಕೇಳಿ ಬಂದ ಹೆಸರು ಡಲಿ ಧನಂಜಯ್ ಅವರದ್ದು. ಟಗರು ಚಿತ್ರದ ಡಾಲಿ ಪಾತ್ರ ನೋಡಿದವರು ಅರ್ಜುನ್ ರೆಡ್ಡಿಯನ್ನು ಕಲ್ಪಿಸಿಕೊಂಡಿದ್ದರೆ ಅಚ್ಚರಿಯಿಲ್ಲ.

  ಆದರೆ, ರಾಕ್‍ಲೈನ್ ಹೇಳೋದೇ ಬೇರೆ. ಆ ಚಿತ್ರದ ನಿರ್ದೇಶನಕ್ಕೆ ಒಬ್ಬ ಸಮರ್ಥ ನಿರ್ದೇಶಕನ ಹುಡುಕಾಟದಲ್ಲಿದ್ದೇವೆ. ಇನ್ನೂ ನಿರ್ದೇಶಕರು ಫೈನಲ್ ಆಗಿಲ್ಲ. ಅದಾದ ಮೇಲೆ ಹೀರೋ ಆಯ್ಕೆ. ಸದ್ಯಕ್ಕೆ ಯಾವುದೇ ಹೆಸರು ಅಂತಿಮಗೊಂಡಿಲ್ಲ ಎಂದಿದ್ದಾರೆ ರಾಕ್‍ಲೈನ್.

 • ಜಮಾಲಿಗುಡ್ಡದಲ್ಲಿ ಡಾಲಿ ಆದಿತಿ ರೊಮ್ಯಾನ್ಸ್

  ಜಮಾಲಿಗುಡ್ಡದಲ್ಲಿ ಡಾಲಿ ಆದಿತಿ ರೊಮ್ಯಾನ್ಸ್

  ರೌಡಿ, ರಫ್ & ಟಫ್ ಪಾತ್ರಗಳಲ್ಲೇ ಇತ್ತೀಚೆಗೆ ಹೆಚ್ಚಾಗಿ ನಟಿಸಿದ್ದ ಡಾಲಿ ಧನಂಜಯ್ ರೊಮ್ಯಾಂಟಿಕ್ ಟ್ರ್ಯಾಕ್ಗೆ ವಾಪಸ್ ಆಗಿದ್ದಾರೆ. ಅವರಿಗೆ ಜೊತೆಯಾಗಿರೋದು ಆದಿತಿ ಪ್ರಭುದೇವ. ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಅವರಿಬ್ಬರ ರೊಮ್ಯಾನ್ಸ್ಗೆ ಌಕ್ಷನ್ ಕಟ್ ಹೇಳ್ತಿರೋದು ಕುಶಾಲ್ ಗೌಡ.

  ಕನ್ನಡಕ್ಕಾಗಿ ಒಂದನ್ನು ಒತ್ತಿ ಅನ್ನೋ ವಿಭಿನ್ನ ಶೀರ್ಷಿಕೆಯ ಸಿನಿಮಾದಿಂದ ಗಮನ ಸೆಳೆದಿದ್ದ ಕುಶಾಲ್ ಗೌಡ, ಈ ಬಾರಿಯೂ ಡಿಫರೆಂಟ್ ಟೈಟಲ್ನ್ನೇ ಇಟ್ಟಿದ್ದಾರೆ.  ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಮಾಸ್ ಎಂಟರ್ಟೈನರ್ ರೊಮ್ಯಾಂಟಿಕ್ ಸ್ಟೋರಿ ಇದೆಯಂತೆ.

  ಜಮಾಲಿಗುಡ್ಡ ಅನ್ನೋದು ನಾವೇ ಸೃಷ್ಟಿಸಿರೋ ಒಂದು ಕಾಲ್ಪನಿಕ ಜಾಗ. ಅಲ್ಲಿ ನಡೆಯೋ ಲವ್ ಸ್ಟೋರಿಯನ್ನು ನಾವು ವಿಭಿನ್ನವಾಗಿ ಹೇಳ್ತೇವೆ ಅನ್ನೋದು ಕುಶಾಲ್ ಗೌಡ ಮಾತು. ಚಿತ್ರಕ್ಕೆ ಈಗಾಗಲೇ ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ತ್ರಿವೇಣಿ, ಪ್ರಕಾಶ್ ಶೆಣೈ, ನಂದಗೋಪಾಲ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಹರಿ ಚಿತ್ರದ ನಿರ್ಮಾಪಕರು.

 • ಟಗರು ಚಿತ್ತತಂಡಕ್ಕೆ ಕಂಪ್ಲೀಟ್ ಇನ್ಷೂರೆನ್ಸ್

  tagaru team insured

  ಮಾಸ್ತಿಗುಡಿ ದುರಂತದ ಪರಿಣಾಮವೋ ಏನೋ..ಚಿತ್ರರಂಗ ನಿಧಾನವಾಗಿ ಸುರಕ್ಷತೆಯತ್ತ ಗಮನ ಹರಿಸುತ್ತಿದೆ. ಇತ್ತೀಚೆಗೆ ಕೆಜಿಎಫ್ ಚಿತ್ರತಂಡ ಚಿತ್ರ ತಂಡದ ಎಲ್ಲರಿಗೂ ಇನ್ಷೂರೆನ್ಸ್ ಮಾಡಿಸಿತ್ತು. ಈಗ ಟಗರು ಚಿತ್ರತಂಡವೂ ಅದೇ ರೀತಿ ಇಡೀ ಚಿತ್ರತಂಡಕ್ಕೆ ಇನ್ಷೂರೆನ್ಸ್ ಮಾಡಿಸಿದೆ.

  ಸಿನಿಮಾ ಚಿತ್ರೀಕರಣ ಮಾಡುವಾಗ ಅನೇಕ ಬಾರಿ ಅವಘಡಗಳು ಸಂಭವಿಸುತ್ತವೆ. ಕೆಲವು ದೃಶ್ಯಗಳಲ್ಲಂತೂ ಕಲಾವಿದರು, ತಂತ್ರಜ್ಞರು ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ದುರಂತಗಳಾಗುವುದು ಬೇಡ ಎನ್ನುವುದು ಎಲ್ಲರ ಹಾರೈಕೆ ಮತ್ತು ಪ್ರಾರ್ಥನೆ. ಆದರೆ, ಅದು ಫಲಿಸಬೇಕಲ್ಲ. ಅಕಸ್ಮಾತ್ ಹಾಗೇನಾದರೂ ಅನಾಹುತ ಸಂಭವಿಸಿದಾಗ ಇನ್ಷೂರೆನ್ಸ್ ಇದ್ದರೆ, ಅದು ಚಿತ್ರತಂಡದ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಕಾರ್ಮಿಕರಿಗೂ ಒಂದು ಧೈರ್ಯವಿರುತ್ತದೆ.

  ಶಿವರಾಜ್ ಕುಮಾರ್ ನಾಯಕರಾಗಿರುವ ಟಗರು ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಶ್ರೀಕಾಂತ್ ನಿರ್ಮಾಪಕ. ಹುಬ್ಬಳ್ಳಿ, ಉಡುಪಿ-ಮಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ, ನಂತರ ಗೋವಾಕ್ಕೆ ತೆರಳಲಿದೆ ಚಿತ್ರತಂಡ. ಕಡ್ಡಿಪುಡಿ ನಂತರ ಮತ್ತೆ ಒಂದಾಗಿರುವ ಸೂರಿ-ಶಿವರಾಜ್​ ಕುಮಾರ್ ಜೋಡಿಯ ಟಗರು ಚಿತ್ರದ ಮೇಲೆ ಈಗಾಗಲೇ ಭರ್ಜರಿ ನಿರೀಕ್ಷೆಯಿದೆ. ನಾಯಕಿಯರಾಗಿ ಜಾಕಿ ಭಾವನಾ ಹಾಗೂ ಕೆಂಡಸಂಪಿಗೆ ಮಾನ್ವಿತಾ ನಟಿಸುತ್ತಿದ್ದಾರೆ. ನಾಯಕರಾಗಿದ್ದ ಧನಂಜಯ್, ಈ ಚಿತ್ರದಲ್ಲಿ ಖಳನಾಯಕ.

  Related Articles :-

  Tagaru Team Insured

 • ಟಗರು ದರ್ಶನಕ್ಕೆ ದುಬೈ ಫ್ಯಾನ್ಸ್

  dubai fans craze for tagaru

  ಶಿವರಾಜ್ ಕುಮಾರ್, ಸೂರಿ, ಶ್ರೀಕಾಂತ್ ಕಾಂಬಿನೇಷನ್‍ನ ಸಿನಿಮಾ ಟಗರು. ರಿಲೀಸ್‍ಗೆ ರೆಡಿಯಾಗಿರುವ ಟಗರು, ಚಿತ್ರರಂಗದಲ್ಲಿ ನಿರೀಕ್ಷೆಯ ಹವಾ ಸೃಷ್ಟಿಸಿದೆ. ಚಿತ್ರವನ್ನು ನೋಡೋಕೆ ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿರುವ ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.

  ದುಬೈನಲ್ಲಿರುವ ಶಿವಣ್ಣ ಫ್ಯಾನ್ಸ್ ಕ್ಲಬ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗ್ರೂಪ್ ಸದಸ್ಯರು, ತಮ್ಮ ಕಾರುಗಳ ಮೇಲೆ ಟಗರು ಚಿತ್ರದ ಪೋಸ್ಟರ್ ಹಾಕಿಕೊಂಡು ರ್ಯಾಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನೋಡೋಕೆ ಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ. 

  ಅಭಿಮಾನಿಗಳು ಸೇರಾದರೆ, ನಿರ್ಮಾಪಕ ಶ್ರೀಕಾಂತ್ ಸವ್ವಾಸೇರು. ಸ್ವತಃ ಶಿವರಾಜ್ ಕುಮಾರ್ ಅಭಿಮಾನಿಯಾಗಿರುವ  ಶ್ರೀಕಾಂತ್, ಈ ಅಭಿಮಾನಿಗಳನ್ನು ಕರೆತರಲು ವಿಮಾನ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆಯನ್ನೇ ಮಾಡಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ವ್ಯವಸ್ಥೆಯೂ ಆಗಿದೆ.

 • ಟಗರು ನಿರ್ಮಾಪಕ ಸೂರಿ ಚಿತ್ರ ಕೈ ಬಿಟ್ಟಿದ್ದೇಕೆ..?

  kp srikanth walks put of suri's movie

  ಟಗರು ಚಿತ್ರ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ. ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕ. ಅದಾದ ಮೇಲೆ ನಿರ್ದೇಶಕ ಸೂರಿ ಜೊತೆ ಪಾಪ್‍ಕಾರ್ನ್ ಮಂಕಿಟೈಗರ್ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದ ಶ್ರೀಕಾಂತ್ ಈಗ ಆ ಚಿತ್ರದಿಂದ ಹೊರಬಂದಿದ್ದಾರಂತೆ. ಸುಧೀರ್ ಈಗ ಸೂರಿಯ ಹೊಸ ಚಿತ್ರದ ನಿರ್ಮಾಪಕರಾಗಿದ್ದಾರಂತೆ.

  ಧನಂಜಯ್, ನಿವೇಧಿತಾ, ಅಮೃತಾ, ಸಪ್ತಮಿ ನಟಿಸುತ್ತಿರುವ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಆದರೆ, ಶ್ರೀಕಾಂತ್ ಚಿತ್ರದ ನಿರ್ಮಾಣದಿಂದ ಹಿಂದೆ ಸರಿದಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಶ್ರೀಕಾಂತ್ ಇದೇ ಕಾರಣ ಎಂದು ಹೇಳಿಕೊಂಡಿಲ್ಲ. 

  ಮುಂದಿನ ದಿನಗಳಲ್ಲಿ ಸೂರಿ ಜೊತೆ ಬೇರೆ ಸಿನಿಮಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಶ್ರೀಕಾಂತ್.

 • ಟಗರು ನೋಡಿ ವಿಮರ್ಶೆಯನ್ನೇ ಬರೆದರು ಕಿಚ್ಚ

  sudeep, shivarajkumar imagr

  ಶಿವರಾಜ್‍ಕುಮಾರ್, ಸೂರಿ ಕಾಂಬಿನೇಷನ್‍ನ ಟಗರು ವಿಭಿನ್ನತೆಯಿಂದಾಗಿಯೇ ಗುಟುರು ಹಾಕುತ್ತಿದೆ. ಬಾಕ್ಸಾಫೀಸ್‍ನಲ್ಲಿ ಜೋರು ಸದ್ದು ಮಾಡುತ್ತಿದೆ. ಸ್ವತಃ ಶಿವರಾಜ್‍ಕುಮಾರ್ ಸೇರಿದಂತೆ ಎಲ್ಲರನ್ನೂ ಅಭಿಮಾನಿಗಳು ಅವರವರ ಪಾತ್ರಗಳ ಮೂಲಕವೇ ಗುರುತಿಸುತ್ತಿರುವುದು ವಿಶೇಷ. ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಕೂಡಾ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಿತ್ರವನ್ನು ನೋಡಿ, ಚಿತ್ರದ ಬಗ್ಗೆ ಸ್ವತಃ ವಿಮರ್ಶೆ ಬರೆದಿದ್ದಾರೆ ಸುದೀಪ್.

  ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ. ತೆರೆಯ ಮೇಲೆ ಬರುವ ಪ್ರತಿ ಪಾತ್ರವೂ ಜನರನ್ನು ಕನ್‍ಫ್ಯೂಸ್ ಮಾಡುತ್ತೆ. ವಿಭಿನ್ನವಾಗಿ ಕಥೆ ಹೇಳುವ ಪ್ರಯತ್ನ ಚೆನ್ನಾಗಿದೆ ಹಾಗೂ ಅದರಲ್ಲಿ ಸೂರಿ ಗೆದ್ದಿದ್ದಾರೆ.

  ಇನ್ನು ಶಿವರಾಜ್‍ಕುಮಾರ್ ಎನರ್ಜಿ, ಅಭಿನಯ ವಂಡರ್‍ಫುಲ್. ತೆರೆಯ ಮೇಲೆ ಅದ್ಭುತವಾಗಿ ಕಾಣಿಸುತ್ತಾರೆ. ಧನಂಜಯ್ ಪಾತ್ರ ಮತ್ತು ಅಭಿನಯ ಎರಡೂ ಚೆನ್ನಾಗಿವೆ. ವಸಿಷ್ಠ ಸಿಂಹ ಅವರ ಧ್ವನಿ ಎಲ್ಲರ ಗಮನ ಸೆಳೆಯುತ್ತದೆ. ಚಿತ್ರದ ಸಂಗೀತ ಎಲ್ಲರ ಗಮನ ಸೆಳೆಯುತ್ತದೆ. ಸಂಗೀತ ನೀಡಿದ ಚರಣ್‍ರಾಜ್‍ಗೆ ನನ್ನ ಅಭಿನಂದನೆ.

  ಇದು ಕಿಚ್ಚನ ವಿಮರ್ಶೆ. ಕನ್ನಡದ ಮಟ್ಟಿಗೆ ಈ ರೀತಿಯ ನಡೆ ನಿಜಕ್ಕೂ ಹೊಸತು. ಒಬ್ಬ ಸ್ಟಾರ್‍ನ ಚಿತ್ರವನ್ನು ಇನ್ನೊಬ್ಬ ಸ್ಟಾರ್ ನೋಡುವುದು ಹಾಗೂ ಅದಕ್ಕೆ ವಿಮರ್ಶೆ ಮಾಡುವುದು ಕನ್ನಡಕ್ಕೆ ನಿಜವಾಗಿಯೂ ಹೊಸತು. ಕಿಚ್ಚ ಸುದೀಪ್ ಈ ಮೂಲಕ ಮತ್ತೊಂದು ಸತ್ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

 • ಟಗರು ಮತ್ತೆ ಮುಂದಕ್ಕೆ

  tagaru cutouts in malls

  ಶಿವರಾಜ್ ಕುಮಾರ್-ಸೂರಿ-ಶ್ರೀಕಾಂತ್ ಕಾಂಬಿನೇಷನ್‍ನ ಟಗರು ಸಿನಿಮಾ ಮತ್ತೆ ಮುಂದಕ್ಕೆ ಹೋಗಿದೆ. ಡಿಸೆಂಬರ್‍ನಲ್ಲಿಯೇ ರಿಲೀಸ್ ಎನ್ನಲಾಗುತ್ತಿದ್ದ ಸಿನಿಮಾ, ಜವರಿಗೆ ಫಿಕ್ಸ್ ಆಗಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಧಾನವಾಗಿ ಸಾಗುತ್ತಿರುವ ಕಾರಣ, ಚಿತ್ರವನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ. ಈಗಿನ ಸುದ್ದಿಗಳ ಪ್ರಕಾರ ಟಗರು ರಿಲೀಸ್ ಆಗೋದು ಫೆಬ್ರವರಿ 9ಕ್ಕೆ.

  ಈಗಾಗಲೇ ಟಗರು ಚಿತ್ರದ ಪ್ರಚಾರ ಶುರುವಾಗಿದ್ದು, ಮಾಲ್‍ಗಳು, ಥಿಯೇಟರುಗಳಲ್ಲಿ 8 ಅಡಿಯ ಶಿವಣ್ಣ ಸ್ಟ್ಯಾಂಡಿಗಳನ್ನು ನಿಲ್ಲಿಸಲಾಗಿದೆ. ಆ ಸ್ಟ್ಯಾಂಡಿಗಳ ಎದುರು ಫೋಟೋ ತೆಗೆಸಿಕೊಂಡು ಅಭಿಮಾನಿಗಳು ಸೆಲ್ಫಿ ಕಳಿಸಿದರೆ, ಅದು ಟಗರು ಪೇಜ್‍ನಲ್ಲಿ ಬರಲಿದೆ. 

  ಅಭಿಮಾನಿಗಳನ್ನು ಕಾಯಿಸಿ, ಸತಾಯಿಸಿ ಬರುತ್ತಿರುವ ಟಗರು ಸಿನಿಮಾ, ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.

 • ಟಗರು.. 25 ವಾರ ಪ್ರದರ್ಶನದ ದಾಖಲೆ

  tagaru completes 25 weeks success

  ಸಿನಿಮಾವೊಂದು 50 ದಿನ ಓಡುವುದೇ ಅಪರೂಪವಾಗಿರುವಾಗ.. ಶತದಿನೋತ್ಸವ ಆಚರಿಸಿಬಿಟ್ಟರೆ ಹಬ್ಬವೇ ಸರಿ. ಈ ಹಬ್ಬದ ಸಂಭ್ರಮವನ್ನೂ ಹೆಚ್ಚಿಸುವಂತೆ ಟಗರು ಚಿತ್ರ 25 ವಾರಗಳ ಪ್ರದರ್ಶನ ಕಂಡಿದೆ. ಟಗರು ಸಿಂಗಲ್ ಸ್ಕ್ರೀನ್‍ಗಳಲ್ಲಿ 25 ವಾರಗಳ ಪ್ರದರ್ಶನ ಕಂಡಿರುವುದು ವಿಶೇಷ.

  ಚಿತ್ರದ ಈ ಯಶಸ್ಸಿನ ಕ್ರೆಡಿಟ್ ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ಸೂರಿಗೆ ಸಲ್ಲಬೇಕು. ಇಡೀ ಚಿತ್ರತಂಡದ ಒಟ್ಟಾರೆ ಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಅದು. ಸಿನಿಮಾದಿಂದ ಸಿನಿಮಾಗೆ ಜನ ನನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಅಂತಾರೆ ಶಿವರಾಜ್‍ಕುಮಾರ್.

  ಕನ್ನಡದ ಪ್ರತಿಯೊಂದು ಚಿತ್ರಕ್ಕೂ 25 ವಾರ ಓಡುವ ಶಕ್ತಿಯಿದೆ. ಒಳ್ಳೆಯ ಸಿನಿಮಾ ಕೊಡಬೇಕಷ್ಟೆ. ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಸೋಲಿಸಿಲ್ಲ ಎನ್ನುತ್ತಾರೆ ಶಿವಣ್ಣ.

 • ಟ್ರೇಲರ್‍ಗೂ ಮೊದಲೇ ಲಿಪ್‍ಲಾಕ್

  bhairava geetha poster goes viral

  ಭೈರವ ಗೀತ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ವರ್ಮಾ ಶಿಷ್ಯ ಸಿದ್ದಾರ್ಥ ನಿರ್ದೇಶನದ ಸಿನಿಮಾ. ಡಾಲಿ ಧನಂಜಯ್ ಅಭಿನಯದ ಚಿತ್ರದ ಟ್ರೇಲರ್ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್‍ಗೂ ಮುನ್ನವೇ ವರ್ಮಾ, ಚಿತ್ರದ ಕೆಲವೊಂದು ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‍ಗಳು ಸದ್ದು ಮಾಡೋಕೆ ಶುರುವಾಗಿವೆ.

  ವರ್ಗ ವೈಷಮ್ಯ ಮತ್ತು ಲವ್ ಸ್ಟೋರಿ ಇರುವ ಸಿನಿಮಾ ಇದು. ವರ್ಮಾ ಸ್ಟೈಲ್‍ನಲ್ಲೇ ಇರೋ ಪೋಸ್ಟರ್‍ಗಳಲ್ಲಿ ಧನಂಜಯ ಮತ್ತು ಇರಾ ನಡುವಿನ ಲಿಪ್‍ಲಾಕ್ ಸೀನ್ ಹವಾ ಎಬ್ಬಿಸಿದೆ. ಇರಾಗೆ ಇದು ಮೊದಲ ಸಿನಿಮಾ. ಧನಂಜಯ್‍ಗೆ ಸ್ಕ್ರೀನ್ ಮೇಲೆ ಮೊದಲ ಚುಂಬನ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್‍ಗೆ ಬರವೇ ಇಲ್ಲ ಎಂದಿದ್ದಾರೆ ವರ್ಮಾ. 

 • ಟ್ವಿಟರ್ ಏನ್ ಸಮಾಚಾರ ಅಂತು.. ಡಾಲಿ ಹೇಳಿದ್ದು..

  twitter asks en samachara

  ಟ್ವಿಟ್ಟರ್ನಲ್ಲಿ ಆಗಾಗ್ಗೆ ಇಂಥಾದ್ದೊಂದು ತರಲೆ ನಡೀತಾ ಇರುತ್ತೆ. ಟ್ವಿಟ್ಟರ್ ಇಂಡಿಯಾ ಇದ್ಯಲ್ಲ.. ಅದು ನಮ್ಮ ಅಕೌಂಟ್ನಲ್ಲಿ ಏನ್ ಸಮಾಚಾರ ಅನ್ನುತ್ತೆ..? ಹೌದು, ಇದು ಟ್ವಿಟ್ಟರ್ ಇಂಡಿಯಾದ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾಡಿದ ಟ್ವೀಟ್. ಇದಕ್ಕೆ ಹಲವರು ಹಲವು ಸ್ಟೈಲಲ್ಲಿ ರಿಯಾಕ್ಷನ್ ಕೊಟ್ರೆ, ಡಾಲಿ ಧನಂಜಯ್ ಕೊಟ್ಟ ಉತ್ತರವೇ ಬೇರೆ.

  ಇದೇ ಶಿವರಾತ್ರಿಗೆ ರಿಲೀಸ್ ಆಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ನೋಡಿ ಅನ್ನೋ ಮೂಲಕ, ಟ್ವಿಟರ್ಗೇ ಟ್ರೆಂಡ್ ಕೊಟ್ಟಿದ್ದಾರೆ ಡಾಲಿ. ದುನಿಯಾ ಸೂರಿ ನಿರ್ದೇಶನದ ಮಂಕಿ ಟೈಗರ್ ಇದೇ ವಾರ ರಿಲೀಸ್ ಆಗುತ್ತಿದ್ದು, ಸೂರಿ ಒನ್ಸ್ ಎಗೇಯ್ನ್ ಭೂಗತ ಜಗತ್ತಿನ ಕಥೆ ಹೆಣೆದಿದ್ದಾರೆ. ನಿವೇದಿತಾ, ಅಮೃತಾ ಅಯ್ಯಂಗಾರ್ ಮತ್ತು ಸಪ್ತಮಿ ಗೌಡ ನಟಿಸಿರುವ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ವಾಸನೆ ಇದೆ. ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರ ಸೂರಿ ಮತ್ತು ಡಾಲಿ ಒಟ್ಟಿಗೇ ಇರುವ ಕಾರಣಕ್ಕೇ ಸೆನ್ಸೇಷನ್ ಸೃಷ್ಟಿಸಿದೆ.

 • ಡಾಟರ್ ಆಫ್ ಪಾರ್ವತಮ್ಮನಿಗೆ ಡಾಲಿ ಹಾಡು

  dolly dhananjay turns lyricist with daughter of parvathamma

  ಹರಿಪ್ರಿಯಾ ಡಾಟರ್ ಆಗಿ, ಸುಮಲತಾ ಪಾರ್ವತಮ್ಮನಾಗಿ ನಟಿಸಿರುವ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಹೀರೋಯಿನ್ ಓರಿಯಂಟೆಡ್ ಚಿತ್ರದಲ್ಲಿ ಡಾಲಿ ಎಂಟ್ರಿಯಾಗಿರೋದೇ ಗಮ್ಮತ್ತಿನ ವಿಷಯ. ಹಾಗಂತ, ಡಾಲಿ ಧನಂಜಯ್ ಇಲ್ಲಿ ಹೀರೋ ಆಗಿ ಆಗಲೀ, ವಿಲನ್ ಆಗಿಯಾಗಲೀ ನಟಿಸಿಲ್ಲ. ಬದಲಿಗೆ ಹಾಡು ಬರೆದಿದ್ದಾರೆ. ರಂಗಭೂಮಿಯಿಂದ ಬಂದಿರೋ ಧನಂಜಯ್‍ಗೆ ಸಾಹಿತ್ಯವೂ ಗೊತ್ತು. ಹೀಗಾಗಿಯೇ ಒಂದೊಳ್ಳೆ ಹಾಡಿನ ಕಿಕ್ಕು, ಡಾಟರ್ ಆಫ್ ಪಾರ್ವತಮ್ಮನಿಗೆ ಸಿಕ್ಕಿದೆ.

  ಜೀವಕ್ಕಿಲ್ಲಿ ಜೀವ ಬೇಟೆ..ಪಾಪಿ ಯಾರೋ ಇಲ್ಲಿ..ಕೊಂದು ತಿನ್ನೋ ರೂಲೇ ಉಂಟು..ಪಾಪ ಯಾವುದಿಲ್ಲಿ.

  ಎಂಬ ಈ ಗೀತೆ ಮೈಮನಗಳಲ್ಲಿ ವಿಚಿತ್ರ ತಳಮಳ ಸೃಷ್ಟಿಸುವ ಶಕ್ತಿ ಹೊಂದಿದೆ. ಕಾರ್ತಿಕ್ ಚೆನ್ನೋಜಿ ರಾವ್, ನಾರಾಯಣ್ ಶರ್ಮ, ಮಿಥುನ್ ಮುಕುಂದನ್ ಹಾಡಿರೋ ಹಾಡಿಗೆ ಮ್ಯೂಸಿಕ್ಕು ಮುಕುಂದನ್ ಅವರದ್ದೇ. ಹಾಡನ್ನು ರಿಲೀಸ್ ಮಾಡಿರುವುದು ರೋರಿಂಗ್ ಸ್ಟಾರ್ ಶ್ರೀಮುರಳಿ.

 • ಡಾನ್ ಜಯರಾಜ್ ಬಯೋಪಿಕ್`ನಲ್ಲಿ ವಸಿಷ್ಠ ಸಿಂಹ

  ಡಾನ್ ಜಯರಾಜ್ ಬಯೋಪಿಕ್`ನಲ್ಲಿ ವಸಿಷ್ಠ ಸಿಂಹ

  ಡಾಲಿ & ಚಿಟ್ಟೆ. ಟಗರು ಜೋಡಿ ರಿಪೀಟ್ ಆಗ್ತಿದೆ. ಮತ್ತೊಮ್ಮೆ. ಡಾಲಿ ಧನಂಜಯ್ ಅವರೇ ನಿರ್ಮಾಪಕರೂ ಆಗಿರುವ ಹೆಡ್-ಬುಷ್ ಚಿತ್ರ ತಂಡಕ್ಕೀಗ ಚಿಟ್ಟೆ ವಸಿಷ್ಠ ಸಿಂಹ ಜೊತೆಯಾಗಿದ್ದಾರೆ. ಇದರೊಂದಿಗೆ ಚಿತ್ರ ತಂಡದ ವೇಯ್ಟೇಜ್ ಇನ್ನಷ್ಟು ಹೆಚ್ಚಿದೆ. ಈಗಾಗಲೇ ಲೂಸ್ ಮಾದ ಯೋಗಿ, ಆರ್‍ಎಕ್ಸ್ 100 ಖ್ಯಾತಿಯ ಪಾಯಲ್ ರಜಪೂತ್ ಚಿತ್ರ ತಂಡ ಸೇರಿಕೊಂಡಿದ್ದಾರೆ.

  ಚಿಟ್ಟೆ ಮತ್ತು ಡಾಲಿಯನ್ನು ಮತ್ತೊಮ್ಮೆ ಜೊತೆಯಾಗಿ ತೆರೆಯ ಮೇಲೆ ನೋಡಬೇಕು ಅನ್ನೋದು ಹಲವರ ಬಯಕೆಯಾಗಿತ್ತು. ಅದು ಈ ಚಿತ್ರದಲ್ಲಿ ಮತ್ತೊಮ್ಮೆ ಈಡೇರುತ್ತಿದೆ ಎಂದಿದ್ದಾರೆ ವಸಿಷ್ಠ. ಈಗಾಗಲೇ ಅವರ ಪಾತ್ರದ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಕೂಡಾ ಆಗಿದೆ. ಅಂದಹಾಗೆ ಶೂನ್ಯ ನಿರ್ದೇಶನದ ಈ ಚಿತ್ರಕ್ಕೆ ಕಥೆ ಬರೆದಿರುವುದು ಒನ್ಸ್ ಎಗೇಯ್ನ್ ಅಗ್ನಿ ಶ್ರೀಧರ್. ಕಥೆ ಡಾನ್ ಎಂಪಿ ಜಯರಾಜ್‍ನ ಜೀವನ ಚರಿತ್ರೆ.

 • ಡಾಲಿ ಧನಂಜಯ್ ತೆರೆ ಮೇಲೆ ಡಾನ್.. ತೆರೆ ಹಿಂದೆ ನಿರ್ಮಾಪಕ

  ಡಾಲಿ ಧನಂಜಯ್ ತೆರೆ ಮೇಲೆ ಡಾನ್.. ತೆರೆ ಹಿಂದೆ ನಿರ್ಮಾಪಕ

  ಡಾಲಿ ಧನಂಜಯ್ ಹೊಸ ಅವತಾರ ಎತ್ತುತ್ತಿದ್ದಾರೆ. ಈ ಬಾರಿ ನಿರ್ಮಾಪಕನಾಗಿ. ಹೆಡ್-ಬುಷ್ ಅನ್ನೋ ಸಿನಿಮಾ ಲಾಕ್ ಡೌನ್ ಶುರುವಾಗೋಕೂ ಮೊದಲು ಘೋಷಣೆಯಾಗಿತ್ತು. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಬರೆದಿರುವ ಚಿತ್ರವದು. ಆ ಚಿತ್ರದಲ್ಲಿ ಡಾಲಿ ಧನಂಜಯ್ ಅವರಿಗೆ ಡಾನ್ ಜಯರಾಜ್ ಪಾತ್ರವಿತ್ತು.

  ಆದರೀಗ ಚಿತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ನಿರ್ಮಾಪಕ ಅಶು ಬೆದ್ರ ಸ್ಥಾನಕ್ಕೆ ಸ್ವತಃ ಧನಂಜಯ್ ಬಂದಿದ್ದಾರೆ. ಅರ್ಥಾತ್ ನಿರ್ಮಾಪಕರಾಗಿದ್ದಾರೆ. ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಪಿಕ್ಚರ್ಸ್ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರ ಹೆಡ್-ಬುಷ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery