` dhananjay, - chitraloka.com | Kannada Movie News, Reviews | Image

dhananjay,

 • ಸಲಗನಿಗೆ ಮಲೇಷ್ಯಾ ಹಿಪ್ ಹಾಪ್ ಸಿಂಗರ್ ಜೋಷ್

  salaga gets malaysian hip hop singer

  ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಿನಿಮಾದ ಹಾಡು ಸೂರಿ ಅಣ್ಣಾ ಈಗಾಗಲೇ ಬೊಂಬಾಟ್ ಹಿಟ್ ಆಗಿ ಪಾರ್ಟಿ ಸಾಂಗ್ ಆಗಿದೆ. ಈಗ ಸಲಗದ ಟೈಟಲ್ ಟ್ರ್ಯಾಕ್‍ಗೆ ಮಲೇಷ್ಯಾದ ಹಿಪ್ ಹಾಪ್ ಸಿಂಗರ್ ಬಂದಿದ್ದಾರೆ.

  ಯೋಗಿ ಬಿ. ಎಂಬ ಈ ರ್ಯಾಪ್ ಸಿಂಗರ್, ಮೂಲತಃ ತಮಿಳಿನವರೇ. ಆದರೆ ಹಿಪ್ ಹಾಪ್ ಸಿಂಗರ್ ಆಗಿ ಹೆಸರು ಮಾಡಿರೋದು ಮಲೇಷ್ಯಾದಲ್ಲಿ. ಅಫ್‍ಕೋರ್ಸ್, ಇತ್ತೀಚೆಗೆ ರಜನಿಯ ದರ್ಬಾರ್, ಕಾಲ, ಧನುಷ್‍ರ ಪಟಾಸ್ ಸಿನಿಮಾಗಳಲ್ಲೂ ಹಾಡಿದ್ದಾರೆ.

  ಈ ಹಾಡಿಗಾಗಿ ಆ ಗಾಯಕ ನಮ್ಮೊಂದಿಗೆ 3 ದಿನ ಇದ್ದು ಪ್ರಾಕ್ಟೀಸ್ ಮಾಡಿ ಹಾಡಿದ್ದಾರೆ. ಅವರ ಜೊತೆ ಸಂಚಿತ್ ಹೆಗ್ಡೆ ಅವರ ವಾಯ್ಸ್ ಕೂಡಾ ಇರಲಿದೆ. ಇದು ಟಗರು ಬಂತು ಟಗರು ಶೈಲಿಯಲ್ಲೇ ಹಿಟ್ ಆಗಲಿದೆ ಅನ್ನೋ ಕಾನ್ಫಿಡೆನ್ಸು, ಸಂಗೀತ ನಿರ್ದೇಶಕ ಚರಣ್ ರಾಜ್ ಅವರದ್ದು.

  ಈ ಹಾಡಿಗೆ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಹ್ಯಾಂಡ್ಸಪ್ ಹಾಡು ಬರೆದಿದ್ದ ನಾಗಾರ್ಜುನ ಶರ್ಮಾ ಅವರೇ ಸಾಹಿತ್ಯ ಒದಗಿಸಿದ್ದಾರೆ. ಹಾಡಿಗಾಗಿ ಸ್ಮಶಾನದಲ್ಲಿಯೂ ಚಿತ್ರೀಕರಣವಾಗಿದೆ. ಇಷ್ಟೆಲ್ಲ ಸ್ಪೆಷಾಲಿಟಿ ಇರುವ ಹಾಡು ಹೇಗಿರಲಿದೆ.. ಕುತೂಹಲ ತಣಿಯಲು ತುಂಬಾ ದಿನ ಕಾಯಬೇಕಿಲ್ಲ.

 • ಸಲಗನಿಗೆ ಲಕ್ಕಿ ಸಿದ್ದು ಆಶೀರ್ವಾದ

  siddaramaiah wishes salaga team

  ದುನಿಯಾ ವಿಜಯ್ ಅಭಿನಯದ, ಅವರೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಲಗ ಚಿತ್ರ, ಆಷಾಡಕ್ಕೆ ಮೊದಲೇ ಸೆಟ್ಟೇರಿದೆ. ವಿಶೇಷವೆಂದರೆ ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಸಿಕ್ಕಿರುವುದು.

  ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಮೈಲಾರಿ ಹಾಗೂ ಟಗರು ಚಿತ್ರಗಳಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದವರು ಸಿದ್ದರಾಮಯ್ಯ. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಈಗ ಸಲಗ ಸಿನಿಮಾಗೆ ಸಿದ್ದು ಶುಭಕೋರಿದ್ದಾರೆ, ಶ್ರೀಕಾಂತ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದ್ದಾರೆ.

  ಸಲಗದ ಕಥೆ ನನಗೆ ಗೊತ್ತಿಲ್ಲ. ವಿಜಯ್ ಹೇಳಿಲ್ಲ. ಅದರೆ, ಗುಂಪು ಸಲಗಗಳಿಗಿಂತ ಒಂಟಿಸಲಗಗಳು ಹೆಚ್ಚು ಅಪಾಯಕಾರಿ ಎಂದ ಸಿದ್ದರಾಮಯ್ಯ, ತಾವು ದುನಿಯಾ ವಿಜಯ್ ಅಭಿನಯದ ಎರಡು ಚಿತ್ರಗಳನ್ನು ನೋಡಿದ್ದೇನೆ ಎಂದು ನೆನಪಿಸಿಕೊಂಡರು.

  ಮುಹೂರ್ತ ಸಮಾರಂಭಕ್ಕೆ ಕಿಚ್ಚ ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಸಂಸದ ಡಿ.ಕೆ.ಸುರೇಶ್ ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.

 • ಸೂರಿಯ ಪಾಪ್‍ಕಾರ್ನ್ ನಿವೇದಿತಾ

  niveditha in popcorn monkey tiger

  ಪಾಪ್‍ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಯಕಿಯಾಗಿ ನಿವೇದಿತಾ ಬಂದಿದ್ದಾರೆ. ಶುದ್ಧಿ ಚಿತ್ರದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳದ ನಿವೇದಿತಾ, ರಂಗಭೂಮಿ, ಪತ್ರಿಕೆಯಲ್ಲಿ ಅಂಕಣಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಸೂರಿಯ ಚಿತ್ರದಲ್ಲಿ ದೇವಿಕಾ ಆಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೂವರು ನಾಯಕಿಯರಂತೆ. ಆ ಮೂರು ನಾಯಕಿಯರಲ್ಲಿ ನಿವೇದಿತಾ ಅವರದ್ದು ಪ್ರಮುಖ ಪಾತ್ರ.

  ಅವ್ವ ಚಿತ್ರದಲ್ಲಿ ಸ್ಮಿತಾ ಆಗಿದ್ದಾಗಿನಿಂದಲೂ ನಾನು ನಿವೇದಿತಾ ಅವರನ್ನು ನೋಡಿದ್ದೇನೆ. ಆಕೆಗೆ ಕಂಗನಾ, ವಿದ್ಯಾಬಾಲನ್ ರೀತಿ, ಭಾವನೆಗಳನ್ನು ಸಲೀಸಾಗಿ ಹೊರಹೊಮ್ಮಿಸುವ ಶಕ್ತಿಯಿದೆ. ಹೀಗಾಗಿ ಪಾಪ್‍ಕಾರ್ನ್ ಚಿತ್ರದ ಪಾತ್ರಕ್ಕೆ ಆಕೆ ಸೂಕ್ತ ಆಯ್ಕೆ ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಸೂರಿ.

  ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡಲೇಬೇಕು ಎಂಬ ಆಸೆಯಿರುತ್ತೆ. ನಾನು ಹಾಗೆ ಆಸೆಪಟ್ಟ ನಿರ್ದೇಶಕರಲ್ಲಿ ಸೂರಿ ಸರ್ ಒಬ್ಬರು. ಈಗ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪಾತ್ರದ ಎಳೆಯನ್ನು ವಿವರಿಸಿದ್ದಾರೆ. ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ನಿವೇದಿತಾ.

  ಟಗರು ಚಿತ್ರದ ನಂತರ, ಈ ಚಿತ್ರದಲ್ಲೂ ಕೆ.ಪಿ.ಶ್ರೀಕಾಂತ್, ಸೂರಿ ಜೋಡಿ ಒಂದಾಗುತ್ತಿದೆ. ಸುರೇಂದ್ರನಾಥ್ ಅವರೇ ಸೂರಿಯ ಜೊತೆ ಕಥೆ ಬರೆಯೋಕೆ ಕುಳಿತಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರದ ಚಿತ್ರೀಕರಣ ಜೂನ್‍ನಿಂದ ಶುರುವಾಗಲಿದೆ.

  ಅಂದಹಾಗೆ.. ಪಾಪ್‍ಕಾರ್ನ್ ಮಂಕಿ ಟೈಗರ್ ಅನ್ನೋ ಟೈಟಲ್ ಕೊಟ್ಟಿದ್ದು ದುನಿಯಾ ಸೂರಿ ಪುತ್ರ ಪೃಥ್ವಿಯಂತೆ.

 • ಹುಲಿರಾಯ ಬೈರಾಗಿ ಶಿವಣ್ಣ

  ಹುಲಿರಾಯ ಬೈರಾಗಿ ಶಿವಣ್ಣ

  ವಿಜಯ್ ಮೆಲ್ಟನ್ ನಿರ್ದೇಶನದ ಬೈರಾಗಿ ಚಿತ್ರದ ಕೆಲಸಗಳು ಸೂಪರ್ ಫಾಸ್ಟ್ ಆಗಿ ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಶುರುವಾದಂತೆ ತೋರುತ್ತಿದ್ದ ಬೈರಾಗಿ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದೇ ಹೋಗಿದೆ. ಇದೇ ವೇಳೆ ಎಲ್ಲ ಕಡೆ ಥ್ರಿಲ್ ಹುಟ್ಟಿಸಿರುವುದು ಚಿತ್ರದ ಒಂದು ಪೋಸ್ಟರ್. ಅದರಲ್ಲಿ ಶಿವಣ್ಣ ಹುಲಿ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

  ಶಿವ ರಾಜ್‍ಕುಮಾರ್ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬಾರ್, ಶಶಿ ಕುಮಾರ್ ಕೂಡಾ ನಟಿಸುತ್ತಿದ್ದಾರೆ. ಹೀರೋಯಿನ್ ಅಂಜಲಿ. ಬೈರಾಗಿ ಶಿವಣ್ಣ ಅಭಿನಯದ 123ನೇ ಸಿನಿಮಾ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಚಿತ್ರ ವರ್ಷಾಂತ್ಯಕ್ಕೆ ಕಂಪ್ಲೀಟ್ ರೆಡಿಯಾಗುವ ಸಾಧ್ಯತೆ ಇದೆ.

 • ಹೆಂಗೈತೆ ಟಗರು..? ಶಿವಣ್ಣ ಕೂಡಾ ವೇಯ್ಟಿಂಗ್..!

  shivarajkumar eager to watch tagaru

  ಟಗರು ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಜೊತೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಮತ್ತೊಬ್ಬ ವ್ಯಕ್ತಿ ಶಿವರಾಜ್‍ಕುಮಾರ್. ಕಡ್ಡಿಪುಡಿ ನನ್ನ ಚಿತ್ರಜೀವನದಲ್ಲಿಯೇ ಒಂದು ಫೈನೆಸ್ಟ್ ಸಿನಿಮಾ ಎಂದಿರುವ ಶಿವ ರಾಜ್‍ಕುಮಾರ್, ಸೂರಿ ಜೊತೆ ಆಗಲೇ ಮತ್ತೊಮ್ಮೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದು ಮತ್ತೊಮ್ಮೆ ಟಗರು ಚಿತ್ರದಲ್ಲಿ ನನಸಾಗಿದೆ.

  ಇದು ಕ್ರೈಂ ಚೇಸಿಂಗ್ ಸ್ಟೋರಿ ಎನ್ನುವ ಶಿವಣ್ಣ, ಚಿತ್ರದ ಕಥೆ, ಮೇಕಿಂಗ್ ಪ್ರತಿಯೊಂದು ಕೂಡಾ ವಿಭಿನ್ನ ಫೀಲ್ ಕೊಡುತ್ತೆ. ಚಿತ್ರದ ಸೌಂಡಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚರಣ್‍ರಾಜ್‍ರನ್ನು ಹೊಗಳಿದ್ದಾರೆ. ಸೂರಿ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ವಿಭಿನ್ನವಾದ ಸಿನಿಮಾ ಹುಟ್ಟೋದು ವಿಭಿನ್ನ ಜನ ಒಟ್ಟಿಗೇ ಸೇರಿದಾಗ ಮಾತ್ರ. ಅದು ಟಗರುನಲ್ಲಿ ಸಾಧ್ಯವಾಗಿದೆ. ಚಿತ್ರ ನೋಡೋಕೆ ನಾನೂ ಕುತೂಹಲದಿಂದ ಕಾಯತ್ತಿದ್ದೇನೆ ಎಂದು ನಿರೀಕ್ಷೆ ಬಿಚ್ಚಿಟ್ಟಿದ್ದಾರೆ ಶಿವಣ್ಣ.

 • ಹೇ ಸಲಗ.. ಏನಿದು.. ಟಿನಿಂಗ ಮಿಣಿಂಗ ಟಿಶಾ ಟಿಶಾ

  ಹೇ ಸಲಗ.. ಏನಿದು.. ಟಿನಿಂಗ ಮಿಣಿಂಗ ಟಿಶಾ ಟಿಶಾ

  ದುನಿಯಾ ವಿಜಯ್ ನಿರ್ದೇಶಕರಾಗಿರುವ ಚಿತ್ರ ಸಲಗ. ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್. 2ನೇ ಲಾಕ್ ಡೌನ್ ಮುಗಿದ ಮೆಲೆ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ. ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಪ್ರಮೋಷನ್ ಜೋರು ಮಾಡಿದೆ ಚಿತ್ರತಂಡ.

  ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಟೀಂ  ಹೊಸ ಹಾಡೊಂದನ್ನು ಬಿಟ್ಟಿದೆ. ಹುಡುಗರು ಪರಸ್ಪರ ಮಾತನಾಡುವ ಡೈಲಾಗುಗಳೇ ಇಲ್ಲಿ ಸಾಹಿತ್ಯವಾಗಿರೋದು ವಿಶೇಷ. ಟಿನಿಂಗ ಮಿಣಿಂಗ ಟಿಶಾ ಟಿಶಾ

  .. ಅದರಲ್ಲೂ ಸಿದ್ದಿ ಜನಾಂಗದವರ ಜನಪದ ಮಾತುಗಳನ್ನೇ ಹಾಡಾಗಿಸಿದ್ದಾರೆ. ಗಿರಿಜಾ ಸಿದ್ದಿ, ಗೀತಾ ಸಿದ್ದಿ, ಚನ್ನಕೇಶವ ಬಳಗ ಹಾಡಿರುವ ಹಾಡು ಸರಳವಾಗಿ ಸುಲಭವಾಗಿ ಅರ್ಥವಾಗಲ್ಲ.

  ಚರಣ್ ರಾಜ್ ಮ್ಯೂಸಿಕ್ ನೀಡಿದ್ದು, ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery