` dhananjay, - chitraloka.com | Kannada Movie News, Reviews | Image

dhananjay,

 • ಮಂಗಳೂರು ಮೀನು ಮಾರುಕಟ್ಟೆಯಲ್ಲಿ ಸಲಗ

  salaga team shooting in mangalore

  ದುನಿಯಾ ವಿಜಯ್ ನಿರ್ದೇಶನದ ಚೊಚ್ಚ ಸಿನಿಮಾ ಸಲಗ ಚಿತ್ರತಂಡ ಕರಾವಳಿಯ ಮೀನು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಭೂಗತ ಲೋಕದಲ್ಲಿ ಮಂಗಳೂರಿಗೆ ಬೇರೆಯದೇ ಚರಿತ್ರೆ ಇದೆ. ಹೀಗಾಗಿ ವಿಜಿ, ತಮ್ಮ ನಿರ್ದೇಶನದ ಸಲಗ ಚಿತ್ರದಲ್ಲಿ ಮಂಗಳೂರಿನಲ್ಲಿ ಕೂಡಾ ಚಿತ್ರೀಕರಣ ಇಟ್ಟುಕೊಂಡಿದ್ದಾರೆ. ಮಂಗಳೂರಿನ ಮೀನು ಮಾರುಕಟ್ಟೆ ಸೇರಿದಂತೆ ಕರಾವಳಿಯಲ್ಲಿ ಶಾಟ್ಸ್ ತೆಗೆದಿದ್ದಾರೆ.

  ಸಲಗದಲ್ಲಿ ನೀವು ಬೇರೆಯದೇ ಆದ ಭೂಗತ ಜಗತ್ತಿನ ಕಥೆ ನೋಡಲಿದ್ದೀರಿ. ಮಂಗಳೂರಿನ ಲೋಕಲ್ ಕಲಾವಿದರನ್ನೇ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೇವೆ. ಸಾವಿರಾರು ಮಂದಿ ಇರೋ ಮೀನು ಮಾರುಕಟ್ಟೆಯಲ್ಲಿ ಚಿತ್ರೀಕರಣ ಸಲೀಸಾಗಿ ನಡೆಯಿತು. ಕಾರಣ, ಜನರ ಸಪೋರ್ಟು ಎನ್ನುತ್ತಾರೆ ವಿಜಿ.

  ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಿ ಹೀರೋ ಕಮ್ ಡೈರೆಕ್ಟರ್. ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ.

 • ಮಧ್ಯರಾತ್ರಿ ರಿಲೀಸ್ ಆಗಲಿದೆ ಸಲಗ ಟೀಸರ್

  salaga second teaser on jan 19th mid night

  ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಸಲಗ. ಟಗರು ನಂತರ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ ಚಿತ್ರ ಸಲಗ. ಟಗರು ಚಿತ್ರದ ತಂತ್ರಜ್ಞರೇ ಬಹುತೇಕ ಕೂಡಿಕೊಂಡು ರೂಪಿಸಿರುವ ಚಿತ್ರ ಸಲಗ. ದುನಿಯಾ ವಿಜಯ್, ಧನಂಜಯ್ ಒಟ್ಟಿಗೇ ನಟಿಸಿರುವ ಚಿತ್ರ ಸಲಗ. ಈಗ ಆ ಚಿತ್ರದ ಟೀಸರ್ ರಿಲೀಸ್ ಸಮಯ. ಅದು ನಡೆಯುವುದು ಜನವರಿ 19ರ ಮಧ್ಯರಾತ್ರಿ.

  ಹೌದು, ಜನವರಿ 20 ದುನಿಯಾ ವಿಜಯ್ ಬರ್ತ್ ಡೇ. ಹೀಗಾಗಿ ಜನವರಿ 19ರ ಮಧ್ಯರಾತ್ರಿ ತಮ್ಮ ಮನೆಯೆದುರೇ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ದುನಿಯಾ ವಿಜಿ. ಆ ಸಂಭ್ರಮಕ್ಕೆ ವಿಜಿಗೆ ಜೊತೆಯಾಗಲಿರುವುದು ರಿಯಲ್ ಸ್ಟಾರ್ ಉಪೇಂದ್ರ.

  ಮಧ್ಯರಾತ್ರಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವುದಾಗಿ ಉಪೇಂದ್ರ ಒಪ್ಪಿಕೊಂಡಿದ್ದೇ ನಮ್ಮ ಸಂಭ್ರಮ ಹೆಚ್ಚಿಸಿದೆ ಎನ್ನುತ್ತಾರೆ ವಿಜಿ. 

 • ಮಲಯಾಳಂ ಚಿತ್ರರಂಗಕ್ಕೆ ಡಾಲಿ ಪ್ರವೇಶ

  ಮಲಯಾಳಂ ಚಿತ್ರರಂಗಕ್ಕೆ ಡಾಲಿ ಪ್ರವೇಶ

  ಡಾಲಿ ಧನಂಜಯ್ ಈಗಾಗಲೇ ಕನ್ನಡದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದೊಡ್ಡದೊಂದು ಹಿಟ್ ಅವರಿಗಾಗಿ ಕಾಯುತ್ತಿದೆ. ಇದರ ನಡುವೆ ಪ್ರಯೋಗಾತ್ಮಕ ಚಿತ್ರಗಳ ಸೆಂಟರ್ ಆಗಿರುವ ಮಲಯಾಳಂ ಚಿತ್ರರಂಗಕ್ಕೆ ಧನಂಜಯ್ ಎಂಟ್ರಿ ಕೊಟ್ಟಿದ್ದಾರೆ.

  21 ಅವರ್ಸ್ ಅನ್ನೋ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಧನಂಜಯ್. ಮಲ್ಲು ಚಿತ್ರಗಳು ತೆಲುಗು, ಕನ್ನಡದ ಮಾದರಿಯ ಚಿತ್ರಗಳಿಗಿಂತ ಭಿನ್ನವಾಗಿರುತ್ತವೆ. ರಂಗಭೂಮಿಯಿಂದ ಪಳಗಿ ಬಂದಿರುವ ಧನಂಜಯ್ ಅಲ್ಲಿಯೂ ದೊಡ್ಡ ಗುರುತು ಮೂಡಿಸುವ ಎಲ್ಲ ಸಾಧ್ಯತೆಗಳೂ ಇವೆ.

  ಧನಂಜಯ್ ಅವರಿಗೆ ಆಗಸ್ಟ್ 23ರಂದು ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆಂದೇ 21 ಅವರ್ಸ್ ಟೀಂ, ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ಬರಲಿದೆ. ಜೈಶಂಕರ್ ಪಂಡಿತ್ ಎನ್ನುವವರು ಈ ಚಿತ್ರದ ಡೈರೆಕ್ಟರ್. ಸುದೇವ್ ನಾಯರ್, ರಾಹುಲ್ ಮಹದೇವ್, ದುರ್ಗಾ ಕೃಷ್ಣ.. ಮೊದಲಾದವರು ಧನಂಜಯ್ ಜೊತೆ ನಟಿಸುತ್ತಿದ್ದಾರೆ. 

 • ಮಳೆ.. ಚಳಿಯಲ್ಲಿ.. ಸಲಗ ವಿಜಯ್, ಸಂಜನಾ ರೊಮ್ಯಾನ್ಸ್

  romantic song shot in rain for salaga

  ಸುರಿಯುತ್ತಲೇ ಇರುವ ಮಳೆ.. ಮೈ ಮರಗಟ್ಟಿಸುವ ಚಳಿ.. ಇವೆಲ್ಲದರ ಮಧ್ಯೆಯೇ ದುನಿಯಾ ವಿಜಯ್ ಮತ್ತು ಸಂಜನಾ ಆನಂದ್ ಪ್ರೀತಿ, ಪ್ರಣಯದಲ್ಲಿ ತೊಡಗಿದ್ದಾರೆ. ಸಕಲೇಶಪುರ, ಮುಳ್ಳಯ್ಯನಗಿರಿಯಲ್ಲಿ ವಿಜಿ ಮತ್ತು ಸಂಜನಾ ಮಳೆಯೇ.. ಮಳೆಯೇ.. ಅಂಬೆಗಾಲಿಡುತ್ತಾ ಸುರಿಯೇ ಎಂದು ಹಾಡಿ ಕುಣಿಯುತ್ತಿದ್ದಾರೆ.

  ಕೋವಿಡ್ ರಿಲ್ಯಾಕ್ಸ್ ಕೊಟ್ಟ ಬೆನ್ನಲ್ಲೇ ಸಲಗ ಚಿತ್ರೀಕರಣ ಶುರುವಾಗಿದ್ದು, ವಿಜಯ್ ಮತ್ತು ಸಂಜನಾ ಆನಂದ್ ಅವರ ಪ್ರಣಯಗೀತೆ ಇದು. ಕೆಪಿ ಶ್ರೀಕಾಂತ್ ನಿರ್ಮಾಣದ ಸಿನಿಮಾ ಸಲಗ. ಚಿತ್ರದಲ್ಲಿ ಡಾಲಿ ಧನಂಜಯ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

 • ಮಾಲೂರಿನಲ್ಲಿ ಸಲಗ ಕಪ್

  ಮಾಲೂರಿನಲ್ಲಿ ಸಲಗ ಕಪ್

  ಸಲಗ ಚಿತ್ರತಂಡ ಸಿನಿಮಾ ರಿಲೀಸ್ ಆಗೋಕೂ ಮುನ್ನ ಕ್ರಿಕೆಟ್ ಟೂರ್ನಿ ನಡೆಸೋದಾಗಿ ಹೇಳಿತ್ತು. ಅದು ಕೋಲಾರದ ಮಾಲೂರಿನಿಂದ ಶುರುವಾಗಿಬಿಟ್ಟಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳಿಂದ ಗಮನ ಸೆಳೆಯುತ್ತಿದೆ.

  ದುನಿಯಾ ವಿಜಿ ಈ ಚಿತ್ರಕ್ಕೆ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಅಭಿಮಾನಿಗಳ ಜೊತೆ ಸಲಗ ಟೀಂ ಕೂಡಾ ಒಂದು ಟೀಂ ಇರುತ್ತೆ. ಅವರೆಲ್ಲರ ಜೊತೆ ಕ್ರಿಕೆಟ್ ಆಡುತ್ತೆ. ಗೆದ್ದವರಿಗೆ ಬಹುಮಾನವೂ ಇರುತ್ತೆ. ಮಾಲೂರಿನಲ್ಲಂತೂ ಅಭಿಮಾನಿಗಳು ಚಿತ್ರತಂಡವನ್ನು ಮುತ್ತಿಕೊಂಡರು. ಡಾ.ರಾಜ್, ವಿಷ್ಣು ಪ್ರತಿಮೆಗಳಿಗೆ ಹಾರ ಹಾಕಿ ಕ್ರಿಕೆಟ್ ಯಾತ್ರೆ ಶುರು ಮಾಡಿದ್ದಾರೆ ದುನಿಯಾ ವಿಜಿ ಮತ್ತು ಶ್ರೀಕಾಂತ್.

  ವಿಜಿ ಜೊತೆ ಡಾಲಿ ಧನಂಜಯ್, ಸಂಜನಾ ಆನಂದ್ ಕೂಡಾ ನಟಿಸಿರುವ ಚಿತ್ರವನ್ನು ನಿರ್ಮಿಸಿರೋದು ಕೆ.ಪಿ.ಶ್ರೀಕಾಂತ್.  ಗೀತಾ ಶಿವರಾಜ್ ಕುಮಾರ್ ಅವರು ಅರ್ಪಿಸಿರುವ ಚಿತ್ರವಿದು.

 • ಮಿಠಾಯಿ ಸೂರಿಗೆ ಮಿಠಾಯಿ ಕೊಡೋರೇ ಇಲ್ವಂತೆ.. ಪಾಪ..!

  mitayi suri has no lady love in yajamana movie

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.

  `ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.

  ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.

  ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.

 • ಯುವರತ್ನ ಅಪ್ಪು ಎದುರೂ ಡಾಲಿನೇ ವಿಲನ್..!

  dhananjay to play baddie in puneeth's yuvaratna

  ಟಗರು ಚಿತ್ರದ ಡಾಲಿ ಪಾತ್ರದ ನಂತರ ಹೀರೋ, ವಿಲನ್ ಎಂದು ತಲೆಕೆಡಿಸಿಕೊಳ್ಳದ ಧನಂಜಯ್, ಇಷ್ಟವಾದ ಪಾತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಈಗ ಪುನೀತ್ ಅವರ ಯುವರತ್ನ ಚಿತ್ರಕ್ಕೆ ವಿಲನ್ ಆಗಿ ಕಮಿಟ್ ಆಗಿದ್ದಾರೆ. ಅಲ್ಲಿಗೆ ಇದು ಅವರಿಗೆ ವಿಲನ್ ಆಗಿ 3ನೇ ಸಿನಿಮಾ. ಏಕಂದ್ರೆ, ಈಗಾಗಲೇ ಟಗರುನಲ್ಲಿ ವಿಲನ್ ಆಗಿದ್ರು. ಧ್ರುವ ಸರ್ಜಾರ ಪೊಗರುನಲ್ಲೂ ಅವರೇ ವಿಲನ್ನು. ಜಗಪತಿ ಬಾಬು ಜೊತೆ. ಈಗ ಯುವರತ್ನ ಚಿತ್ರಕ್ಕೂ ವಿಲನ್. ದುನಿಯಾ ವಿಜಿಯವರ ಸಲಗ ಚಿತ್ರದಲ್ಲೂ ಅವರೇ ವಿಲನ್ ಅಂತೆ.

  ಅಂದಹಾಗೆ.. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರು ವಿಲನ್ ಅಲ್ಲ. ತೋತಾಪುರಿಯಲ್ಲೂ ಅವರದ್ದು ಸಣ್ಣ ಪಾತ್ರ.

  ಇದೆಲ್ಲದರ ಜೊತೆಗೆ ಹೀರೋ ಆಗಿ ಪಾಪ್‍ಕಾರ್ನ್ ಮಂಕಿ ಟೈಗರ್, ಡಾಲಿ ಚಿತ್ರಗಳಿವೆ. 

  `ನಾನು ಬಂದಿದ್ದು ರಂಗಭೂಮಿಯಿಂದ. ಕೊಟ್ಟ ಪಾತ್ರಕ್ಕೆ ಜೀವ ತುಂಬಬೇಕು. ಇಂಥದ್ದೇ ಪಾತ್ರ ಎಂದು ಕೂರಬಾರದು. ಈ ಕಾರಣಕ್ಕೆ ಸಿಗುತ್ತಿರುವ, ಇಷ್ಟವಾಗುತ್ತಿರುವ ಪಾತ್ರಗಳನ್ನು ಹೀರೋ, ವಿಲನ್, ಪೋಷಕ ಪಾತ್ರ ಎಂದು ನೋಡದೆ ಒಪ್ಪಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಧನಂಜಯ್.

 • ರತ್ನನ್ ಪ್ರಪಂಚ'ದಲ್ಲಿ ಸ್ಟಾರ್ ಡೈರೆಕ್ಟರುಗಳ ಸಂಗಮ

  ratnana prapancha starts

  ರತ್ನನ್ ಪ್ರಪಂಚ, ಡಾಲಿ ಧನಂಜಯ್ ಹೀರೋ ಆಗಿ ನಟಿಸುತ್ತಿರುವ ಸಿನಿಮಾ. ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ ನಿರ್ಮಾಪಕರಾಗಿರೋ ಸಿನಿಮಾ ಸೆಟ್ಟೇರಿದ್ದು, ಮುಹೂರ್ತದಲ್ಲಿ ಸ್ಟಾರ್ ಡೈರೆಕ್ಟರುಗಳ ಸಮೂಹವೇ ಭಾಗಿಯಾಗಿದ್ದು ವಿಶೇಷವಾಗಿತ್ತು.

  ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್, ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

  ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರಕ್ಕೆ ರೆಬಾ ಮೋನಿಕಾ ನಾಯಕಿ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.

 • ರತ್ನನ್ ಪ್ರಪಂಚಕ್ಕೆ ಡಾಲಿ

  dolly enters rathnana prapancha

  ರತ್ನನ್ ಪರ್‍ಪಂಚ ಅಂದ್ರೆ ಕಣ್ಣ ಮುಂದೆ ಬರೋದು ಜಿ.ಪಿ.ರಾಜರತ್ನಂ. ರತ್ನನ ಸೃಷ್ಟಿಕರ್ತನೇ ಅವರು. ಈಗ ಅವರ ರತ್ನನ್ ಪ್ರಪಂಚಕ್ಕೆ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಕೈಯ್ಯಲ್ಲಿ ಮಲ್ಲಿಗೆ ಹೂವು, ಪೆಪ್ಪರ್‍ಮೆಂಟ್ ಡಬ್ಬಿ ಹಿಡಿದಿರೋ ಡಾಲಿ ಧನಂಜಯ್ ಅವರ ಪೋಸ್ಟರ್‍ನ್ನು ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ರಿಲೀಸ್ ಮಾಡಿದೆ ಚಿತ್ರತಂಡ.

  ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ಯೋಗಿ ಬಿ.ರಾಜ್ ಈ ಚಿತ್ರಕ್ಕೆ ನಿರ್ಮಾಪಕರು. ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಪರಿಚಿತರಾಗಿದ್ದ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶಕ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್ ಹಂತದಲ್ಲಿಯೇ ಇದೆ ರತ್ನನ್ ಪ್ರಪಂಚ. ಹೀಗಾಗಿ ಸದ್ಯಕ್ಕೆ ಧನಂಜಯ್ ಜೊತೆಗೆ ಇನ್ನೂ ಯಾರ್ಯಾರು ಎನ್ನುವುದು ಗೊತ್ತಾಗಬೇಕಿದೆ.

 • ರತ್ನನ್ ಪ್ರಪಂಚದಲ್ಲಿ ಏನೋ ಇದೆ..

  ರತ್ನನ್ ಪ್ರಪಂಚದಲ್ಲಿ ಏನೋ ಇದೆ..

  ಚಿತ್ರದ ಹೆಸರೇ ರತ್ನನ್ ಪ್ರಪಂಚ. ರಾಜರತ್ನಂ ಪದ್ಯ ನೆನಪಾದರೆ ಬೋನಸ್ಸು. ರೋಹಿತ್ ಪದಕಿ ಚೆಂದದೊಂದು ಪ್ರಪಂಚ ಕಟ್ಟಿಕೊಟ್ಟಿರುವ ಸುಳಿವನ್ನಂತೂ ಕೊಟ್ಟಿದ್ದಾರೆ. ಇತ್ತೀಚೆಗೆ ವಿಲನ್ ಶೇಡ್ ಪಾತ್ರಗಳಲ್ಲೇ ಭಯ ಹುಟ್ಟಿಸಿದ್ದ ಡಾಲಿ ಧನಂಜಯ್, ಇಲ್ಲಿ ಬೇರೆಯದ್ದೇ ಅವತಾರ ಎತ್ತಿದ್ದಾರೆ. ನಟನೆಗೆ ವಾಪಸ್ ಬಂದಿರೋ ಉಮಾಶ್ರೀ ಖದರ್ ಸ್ವಲ್ಪವೂ ಮುಕ್ಕಾಗಿಲ್ಲ. ರೆಬಾ ಜಾನ್, ಅನು ಪ್ರಭಾಕರ್, ಶೃತಿ, ಪ್ರಮೋದ್, ಅಚ್ಯುತ್ ಕುಮಾರ್.. ಎಲ್ಲರೂ ಟ್ರೇಲರ್ನಲ್ಲಿ ಬರೋ ಸೆಕೆಂಡುಗಳಲ್ಲೇ ಬೆರಗು ಹುಟ್ಟಿಸಿ ಬಿಡುತ್ತಾರೆ.

  ಇದು ಬರಿ ರತ್ನಾಕರನ ಜರ್ನಿ ಅಲ್ಲ. ನನಗೂ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಅದ್ಭುತ ಅನುಭವಗಳನ್ನ ಕೊಟ್ಟು ಹೊಸ  ಪಾಠಗಳನ್ನ ಕಲಿಸಿರೋ ಜರ್ನಿ. ಈ ಚಿತ್ರ ಬರೀ ಭಾಷೆ ಅಷ್ಟೇ ಅಲ್ಲ, ಭಾವವೂ ಕನ್ನಡದದ್ದೇ. ಸದ್ಯಕ್ಕೆ ಟ್ರೇಲರ್ ಎಂಜಾಯ್ ಮಾಡಿ ಅಂತಾರೆ ದಯವಿಟ್ಟು ಗಮನಿಸಿ ಖ್ಯಾತಿಯ ರೋಹಿತ್ ಪದಕಿ.

  ಧನಂಜಯ್ ಅವರಂತೂ ಇದು ನನಗೆ ಹೊಸದೇ ಅನುಭವ ನೀಡಿದ ಚಿತ್ರ ಎನ್ನುವ ಮೂಲಕ, ಎಲ್ಲರೂ ಈ ಅನುಭವವನ್ನು ಆಸ್ವಾದಿಸಿ ಎನ್ನುತ್ತಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು  ಯೋಗಿ ಬಿ.ರಾಜ್ ನಿರ್ಮಾಣದ ಚಿತ್ರವಿದು. ಟ್ರೇಲರ್ನಲ್ಲಿ ಬರುವ ಒಂದಿಷ್ಟು ಬೈಗುಳಗಳು ಕಚಗುಳಿಯಿಡುತ್ತಿವೆ.

 • ರಾಮಾ ರಾಮಾ ರೇ ಸತ್ಯ ಜೊತೆ ಧನಂಜಯ್ ಸಿನಿಮಾ

  dhanajay's next with sirector satyaprakash

  ಡಾಲಿ ಧನಂಜಯ್, ಈಗ ಮಂಕಿ ಸೀನನಾಗಿ ಗೆದ್ದಿದ್ದಾರೆ. ಈ ಗೆಲುವಿನ ನಡುವೆಯೇ ಅವರೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಜಯನಗರ 4 ಬ್ಲಾಕ್. ಇದು ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ಜೊತೆಗಿನ ಸಿನಿಮಾ.

  ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಮತ್ತು ಧನಂಜಯ್ ಇಬ್ಬರೂ ಬಂಡವಾಳ ಹೂಡುತ್ತಿರುವುದು ವಿಶೇಷ. ಆದರೆ ಡೈರೆಕ್ಟರ್ ಸತ್ಯಪ್ರಕಾಶ್ ಅಲ್ಲ. ಹೌದು ಡಾಲಿ ಪಿಕ್ಚರ್ಸ್ ಮತ್ತು ಸತ್ಯ ಪಿಕ್ಚರ್ಸ್ ಮೂಲಕ ನಿರ್ಮಾಣವಾಗುವ ಈ ಚಿತ್ರಕ್ಕೆ ಇಬ್ಬರಿಗೂ ಗೊತ್ತಿರುವ ಒಬ್ಬರು ನಿರ್ದೇಶಕರಾಗಲಿದ್ದಾರೆ.

  ಸತ್ಯ ಪ್ರಕಾಶ್ ಮತ್ತು ಧನಂಜಯ್, ಚಿತ್ರರಂಗಕ್ಕೆ ಬಂದಾಗಿನಿಂದಲೂ ಗೆಳೆಯರೇ. ಮೊದಲೊಂದು ಕಿರುಚಿತ್ರ ಮಾಡಿದ್ದರು. ನಮ್ಮಿಬ್ಬರ  ಜೊತೆ ಕೆಲಸ ಮಾಡಿದ ಟೀಂನವರೇ ಈ ಹೊಸ ಸಿನಿಮಾ ಡೈರೆಕ್ಟರ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಸತ್ಯ ಪ್ರಕಾಶ್.

   

 • ವರಮಹಾಲಕ್ಷ್ಮಿಗೆ ಸಲಗ

  ವರಮಹಾಲಕ್ಷ್ಮಿಗೆ ಸಲಗ

  2ನೇ ಲಾಕ್ ಡೌನ್ ಮುಗಿದ ನಂತರ ಮೊದಲು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಭಜರಂಗಿ 2. ಆದರೆ, ಅದಕ್ಕೂ ಮೊದಲೇ ತೆರೆಗೆ ಬರೋಕೆ ರೆಡಿಯಾಗಿದೆ ಸಲಗ. ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಆ ದಿನವೇ ಸಲಗ ರಿಲೀಸ್ ಆಗಲಿದೆ.

  ಸಲಗ, ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಸಿನಿಮಾ. ಅವರೇ ಹೀರೋ. ಹೀರೋಯಿನ್ ಆಗಿ ಸಂಜನಾ ಆನಂದ್ ಇದ್ದರೆ, ಮತ್ತೊಂದು ಪ್ರಧಾನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಚರಣ್ ರಾಜ್ ಕೂಡಾ ನಟಿಸಿದ್ದಾರೆ. ಹಬ್ಬಕ್ಕೆ ಒಂದೆರಡು ದಿನ ಮೊದಲೇ ಚಿತ್ರ ರಿಲೀಸ್ ಆದರೂ ಆಶ್ಚರ್ಯವಿಲ್ಲ. ಚಿತ್ರತಂಡ ರಿಲೀಸ್ ಡೇಟ್‍ನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

 • ವಿಲನ್‍ಗಳಿಗೆ ಸೂರಿ ಕೊಡ್ತಾರೆ ಡಿಫರೆಂಟ್ ಸರ್‍ನೇಮ್..!

  suri's different names to his villain

  ದುನಿಯಾ ಸೂರಿ ತಮ್ಮ ಚಿತ್ರಗಳಲ್ಲಿ ವಿಲನ್‍ಗಳಿಗೆ ಸರ್‍ನೇಮ್ ಕೊಡೋದ್ರಲ್ಲಿ ಫೇಮಸ್. ದುನಿಯಾದಲ್ಲಿ ಯೋಗಿಗೆ ಲೂಸ್ ಮಾದ ಅನ್ನೋ ಹೆಸರು ಕೊಟ್ಟಿದ್ದು, ಇಂದಿಗೂ ಅವರಿಗೆ ಅಂಟಿಕೊಂಡೇ ಇದೆ. ಮೊಟ್ಟೆ, ಜಂಗ್ಲಿ, ಕಡ್ಡಿಪುಡಿ, ಮಾಮು.. ಹೀಗೆ ದುನಿಯಾ ಸೂರಿಯ ಚಿತ್ರಗಳಲ್ಲಿ ವಿಲನ್ ಪಾತ್ರಗಳಿಗೆ, ರೌಡಿ ಪಾತ್ರಗಳಿಗೆ ಥರಹೇವಾರಿ ಹೆಸರು ಕೊಡ್ತಾರೆ ಸೂರಿ. ಟಗರು ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ.

  ಚಿಟ್ಟೆ ಅನ್ನೋ ರೌಡಿಯ ಪಾತ್ರದಲ್ಲ ವಸಿಷ್ಟ ಸಿಂಹ ನಟಿಸಿದ್ದಾರೆ. ಅದೊಂಥರಾ ಡಿಫರೆಂಟ್ ರೌಡಿಯ ಪಾತ್ರ. ಹಾಡು ಬರೆಯುವ ಭಾವನಾ ಜೀವಿ ರೌಡಿಯ ಪಾತ್ರ ಚಿಟ್ಟೆಯದ್ದು.

  ಇನ್ನು ಡಾಲಿಯಾಗಿರೋದು ಧನಂಜಯ್. ಸುಮಾರು ಚಿತ್ರಗಳಲ್ಲಿ ಹೀರೋ ಆಗಿದ್ದ ಧನಂಜಯ್, ಈ ಚಿತ್ರದಲ್ಲಿ ಇಡೀ ಚಿತ್ರದ ಅತ್ಯಂತ ಕೆಟ್ಟ ಖಳನಾಯಕನ ಪಾತ್ರ ಮಾಡಿದ್ದಾರೆ. ಧನಂಜಯ್‍ಗೆ ರಾಟೆ ಮೂಲಕ ಹೀರೋ ಮಾಡಿದ್ದ ಸೂರಿ, ಟಗರು ಮೂಲಕ ವಿಲನ್ ಮಾಡಿರೋದು ವಿಶೇಷ.

  ಕಾಕ್ರೋಚ್ ಅನ್ನುವ ಪಾತ್ರ ಡಾಲಿಯ ತಮ್ಮ. ಈ ಪಾತ್ರದಲ್ಲಿ ಹೊಸ ಹುಡುಗ ಸುಧೀರ್ ನಟಿಸಿದ್ದಾರೆ. ಬೇಬಿ ಕೃಷ್ಣ ಆಗಿ ದೇವನಾಥ, ಅಂಕಲ್ ಆಗಿ ಸಚ್ಚು ನಟಿಸಿದ್ದಾರೆ. 

  ಅಂದಹಾಗೆ ಇವರೆಲ್ಲರೂ ಸಿನಿಮಾದಲ್ಲಿ ಟಗರು ಶಿವ ರಾಜ್‍ಕುಮಾರ್‍ಗೆ ಎದುರಾಗ್ತಾರೆ. ಕ್ರೈಂ ಚೇಸಿಂಗ್ ಶುರುವಾಗುತ್ತೆ. ನಾಳೆಯಿಂದ.

 • ಶಿವಣ್ಣ ಟಗರು ಸ್ಟೆಪ್ ಹಿಂದಿನ ಕಥೆ

  tagaru movie image

  ಶಿವರಾಜ್ ಕುಮಾರ್ ಸಿನಿಮಾದಲ್ಲಿ ಡ್ಯಾನ್ಸ್ ಅದ್ಭುತವಾಗಿರುತ್ತೆ. 54 ದಾಟಿದ್ದರೂ ಶಿವಣ್ಣ ಡ್ಯಾನ್ಸ್‍ನ ಖದರು ಕಡಿಮೆಯಾಗಿಲ್ಲ. ಅದು ಟಗರು ಚಿತ್ರದಲ್ಲಿಯೂ ಕಂಟಿನ್ಯೂ ಆಗಿದೆ.

  ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ವಿಶೇಷ ಸ್ಟೆಪ್ ಹಾಕಿದ್ದಾರಂತೆ. ಟಗರು.. ಟಗರು ಹಾಡಿಗೆ ಕೊರಿಯಾಗ್ರಫಿ ಮಾಡಿರೋದು ಸ್ವತಃ ಸೂರಿ. ಏನಾದರೂ ಹೊಸದಾಗಿ ಟ್ರೈ ಮಾಡೋಣ. ರೊಟೀನ್ ಬೇಡ ಎನ್ನುವ ಶಿವರಾಜ್ ಕುಮಾರ್ ಉತ್ಸಾಹ ಹಾಗೂ ಏನೇ ಹೇಳಿದರೂ  ಮಾಡೋಣ ಬಿಡಿ ಎನ್ನುವ ಅವರ ಬದ್ಧತೆಯೇ ಈ ಹಾಡು ಮತ್ತು ನೃತ್ಯ ನಿರ್ದೇಶನಕ್ಕೆ ಪ್ರೇರಣೆ ಎನ್ನುತ್ತಾರೆ ಸೂರಿ.

  ಇದೇ ಹಾಡಿಗೆ ಟಗರು ಚಿತ್ರದ ಆಡಿಯೋ ರಿಲೀಸ್‍ನಲ್ಲಿ ಹೆಜ್ಜೆ ಹಾಕಲು ಶಿವರಾಜ್‍ಕುಮಾರ್ ರೆಡಿಯಾಗುತ್ತಿದೆ. ರಾಜು ಎನ್ನುವವರ ಸಹಾಯದಿಂದ ಕೊರಿಯೋಗ್ರಫಿ ಮಾಡಿದ್ದೇನೆ ಎನ್ನುವ ಸೂರಿ, ಡಿ.23ಕ್ಕೆ ಹೊಸಪೇಟೆಯಲ್ಲಿ ಆಡಿಯೋ ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಯಾವುದೇ ರಿಹರ್ಸಲ್ ಇಲ್ಲದೆ ಮಾಡಿರುವ ಈ ಹಾಡು ಟ್ರೆಂಡ್ ಆಗಿಯೇ ಆಗುತ್ತೆ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ ಸೂರಿ.

 • ಶಿವರಾತ್ರಿ ಸಲಗ ಕಪ್

  salaga celebrates shivarathri with cricket

  ಮಹಾಶಿವರಾತ್ರಿ ದಿನದಂದು ನಡೆದ ಕ್ರಿಕೆಟ್ ಟೂರ್ನಿ ಇದು. ಸ್ಸಾರಿ..ಸ್ಸಾರಿ.. ಶಿವರಾತ್ರಿಯ ರಾತ್ರಿಯಂದು ನಡೆದ ಕ್ರಿಕೆಟ್. ಶುಕ್ರವಾರ ರಾತ್ರಿ 7ಕ್ಕೆ ಶುರುವಾದ ಆಟ ಮುಗಿದಾಗ ಬೆಳಗ್ಗೆ 5 ಗಂಟೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ಮ್ಯಾಚಿನಲ್ಲಿ ಸಲಗ ತಂಡ ಯುನೈಟೆಡ್ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಆಟವಾಡಿತು.

  ಸಲಗ ಟೀಂನಲ್ಲಿ ದುನಿಯಾ ವಿಜಿ, ಡಾಲಿ ಧನಂಜಯ್, ಮಾಸ್ತಿ, ಅಭಿ ಮೊದಲಾದವರಿದ್ದರು. ಯುಸಿಸಿ ತಂಡ ಪಂದ್ಯ ಗೆದ್ದಿತು. ವಿಜೇತರಿಗೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್ 1 ಲಕ್ಷ ರೂ. ಬಹುಮಾನ ಕೊಟ್ಟರು.

  ಚಿಕ್ಕವರಿದ್ದಾಗ ಶಿವರಾತ್ರಿಯಲ್ಲಿ ಹೀಗೇ ಕ್ರಿಕೆಟ್ ಆಡುತ್ತಿದ್ದೆವು ಎಂದು ಧನಂಜಯ್ ನೆನಪಿಸಿಕೊಂಡರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಲಗ ಕ್ರಿಕೆಟ್ ಕಪ್ ಆಯೋಜಿಸುವ ಕನಸು ಬಿಚ್ಚಿಟ್ಟರು ನಟ ನಿರ್ದೇಶಕ ದುನಿಯಾ ವಿಜಯ್.

 • ಸಲಗ ಕ್ರಿಕೆಟ್ ಟೂರ್ನಿ

  ಸಲಗ ಕ್ರಿಕೆಟ್ ಟೂರ್ನಿ

  ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಡೈರೆಕ್ಷನ್ ಮಾಡಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಫೈನಲ್ ಹಂತದಲ್ಲಿದೆ. ಬಿಡುಗಡೆಗೆ ಮುನ್ನ ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ನಡೆಸಲು ಚಿಂತಿಸಿರೋ ದುನಿಯಾ ವಿಜಿ, ಸಲಗ ಕ್ರಿಕೆಟ್ ಟೂರ್ನಿ ನಡೆಸೋ ಪ್ಲಾನ್ ಮಾಡಿದ್ದಾರೆ.

  ಚಿತ್ರದ ಕಲಾವಿದರೆಲ್ಲ ಒಂದು ಟೀಂ, ತಂತ್ರಜ್ಞರೆಲ್ಲ ಒಂದು ಟೀಂ. ಜೊತೆಗೆ ಅಭಿಮಾನಿ ಸಂಘಟನೆಗಳ ಸದಸ್ಯರು. ಇವರೆಲ್ಲರನ್ನೂ ಸೇರಿಸಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮಾಡೋ ಪ್ರಯತ್ನದಲ್ಲಿದ್ದೇನೆ. ನನ್ನ ಅಭಿಮಾನಿ ಸಂಘಗಳ ಸದಸ್ಯರ ಜೊತೆ ಈ ಕುರಿತು ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ ದುನಿಯಾ ವಿಜಿ.

  ಹೊಸಪೇಟೆ, ಮೈಸೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಸೋದು ಸಲಗ ಟೀಂ ಪ್ಲಾನ್. ಅಂದಹಾಗೆ ಕೆ.ಪಿ.ಶ್ರೀಕಾಂತ್ ಕೂಡಾ ಒಳ್ಳೆಯ ಕ್ರಿಕೆಟ್ ಆಟಗಾರ. ಸಲಗ ಸಿನಿಮಾ ಏಪ್ರಿಲ್ನಲ್ಲಿ ಬರೋಕೆ ರೆಡಿಯಾಗಿದೆ.

 • ಸಲಗ ಟೈಟಲ್ ಟ್ರ್ಯಾಕ್ ಸ್ಮಶಾನದಲ್ಲಿ..

  salaga title track shooting in burial ground

  ದುನಿಯಾ ವಿಜನ್ ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಚಿತ್ರೀಕರಣ ಫೈನಲ್ ಹಂತದಲ್ಲಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಸ್ಮಶಾನದ ಸೆಟ್ಟಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಜಿಂಕೆ ಪಾರ್ಕ್ ಬಳಿಯ ಸ್ಮಶಾನದಲ್ಲೂ ಚಿತ್ರೀಕರಣ ಮಾಡಲಾಗಿದ್ದು, ಮಿಕ್ಕಂತೆ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಹಾಕಿರುವ ಸ್ಮಶಾನದ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅದೊಂದು ಮುಗಿದರೆ ಚಿತ್ರೀಕರಣ ಮುಗಿದಂತೆ ಎಂದಿದ್ದಾರೆ ದುನಿಯಾ ವಿಜಯ್.

  ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಶಿವಕುಮಾರ್  ಹಾಕಿ ಕೊಟ್ಟಿರುವ ಸೆಟ್ ಬಗ್ಗೆ ಸಖತ್ ಖುಷಿಯಾಗಿದ್ದಾರೆ. ಹಾಡಿನ ಕಾನ್ಸೆಪ್ಟ್‍ಗೆ ಈ ಸೆಟ್ ಅದ್ಧೂರಿಯಾಗಿ ಸೆಟ್ ಆಗುತ್ತಿದೆ ಎಂದಿರುವ ಅವರು ಶಿವಕುಮಾರ್ ಕೆಲಸವನ್ನು ಹಾಡಿ ಹೊಗಳಿದ್ದಾರೆ.

  ದುನಿಯಾ ವಿಜಯ್ ಹೀರೋ ಆಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜನಾ ಆನಂದ್ ನಾಯಕಿ.

 • ಸಲಗ ನಡೆದದ್ದೇ ದಾರಿ

  salaga teaser laucnhed

  ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗದ ಟೀಸರ್ ರಿಲೀಸ್ ಆಗಿದೆ. ದುನಿಯಾ ವಿಜಿ ಹುಟ್ಟುಹಬ್ಬಕ್ಕೆ ಚಿತ್ರತಂಡ ನೀಡಿರುವ ಕಾಣಿಕೆ ಇದು. ಟೀಸರ್‍ನಲ್ಲಿ ಅಬ್ಬಿರಿಸಿರುವುದು ರೌಡಿಸಂ. ರೌಡಿಸಂ ಚಿತ್ರಕ್ಕೆ ಓಂಕಾರ ಬರೆದ ಉಪೇಂದ್ರ ಅವರೇ ಟೀಸರ್ ರಿಲೀಸ್ ಮಾಡಿದ್ದು ಸ್ಪೆಷಲ್ಲು.

  ಡಾಲಿ ಧನಂಜಯ್ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿದ್ದರೆ, ರೌಡಿ ಸಲಗನಾಗಿ ವಿಜಿ, ತಣ್ಣಗೆ ಅಬ್ಬರಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿರೋ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ದೇಶಕ. ಬಹುತೇಕ ಟಗರು ಚಿತ್ರತಂಡ ಸಲಗ ಚಿತ್ರಕ್ಕೆ ಕೆಲಸ ಮಾಡಿದೆ. ಅಂದಹಾಗೆ ಸಲಗ ಚಿತ್ರಕ್ಕೆ ಟ್ಯಾಗ್‍ಲೈನ್ ನಡೆದದ್ದೇ ದಾರಿ.

 • ಸಲಗ ರೀ-ರೆಕಾರ್ಡಿಂಗ್ ಮತ್ತೆ ಶುರು

  salaga starts re recording once again

  ದುನಿಯಾ ವಿಜಯ್, ಕೆ.ಪಿ.ಶ್ರೀಕಾಂತ್ ಕಾಂಬಿನೇಷನ್‍ನ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ, ಚಿತ್ರೀಕರಣವನ್ನೆಲ್ಲ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿತ್ತು. ಅದಕ್ಕೆ ಬ್ರೇಕ್ ಹಾಕಿದ್ದ ಕೊರೊನಾ ಲಾಕ್ ಡೌನ್, ಸಡಿಲಿಕೆಯಾಗಿದ್ದೇ ತಡ, ಕೆಲಸ ಶುರು ಮಾಡಿದ್ದಾರೆ ವಿಜಿ.

  ಭೂಗತ ಲೋಕದ ಕಥಾ ಹಂದರವಿರುವ ಚಿತ್ರದಲ್ಲಿ ಕೆಲವೊಂದು ಕಡೆ ಲೋಪದೋಷಗಳಿವೆ ಎನ್ನಿಸಿ ನಿರ್ದೇಶಕ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್‍ರಾಜ್ ಮತ್ತೊಮ್ಮೆ ರೀ-ರೆಕಾರ್ಡಿಂಗ್ ಮಾಡುತ್ತಿದ್ದಾರೆ.

  ದುನಿಯಾ ವಿಜಯ್ ಎದುರು ಡಾಲಿ ಧನಂಜಯ್ ಪ್ರತಿ ನಾಯಕರಾಗಿದ್ದರೆ, ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

 • ಸಲಗ'ನನ್ನು `ಪ್ರಾರಂಭ'ದಲ್ಲೇ ಕಟ್ಟಿ ಹಾಕಿದ ಚೈನೀಸ್ ವೈರಸ್

  corona virus halts salaga release

  ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರಕ್ಕೆ ಕೊರೋನಾ ಬ್ರೇಕ್ ಹಾಕಿದೆ. ಚೈನೀಸ್ ವೈರಸ್ ಅಟ್ಟಹಾಸಕ್ಕೆ ಎಲ್ಲವೂ ರೆಡಿಯಿದ್ದು ಮುಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ನಾವು ರಿಲೀಸ್ ಡೇಟ್ ಹೇಳಿರಲಿಲ್ಲ. ಆದರೆ, ರಿಲೀಸ್ ಮಾಡೋಕೆ ರೆಡಿ ಇದ್ದೆವು. ಮಾರ್ಚ್ ಕೊನೆ ವಾರ ಅಥವಾ ಏಪ್ರಿಲ್ ಮೊದಲ ವಾರ ಬರೋಣ ಎನ್ನುವ ಪ್ಲಾನ್‍ನಲ್ಲಿದ್ದೆವು. ಈಗ ಎಲ್ಲವೂ ಚೇಂಜ್ ಆಗಿದೆ. ಸದ್ಯಕ್ಕಂತೂ ರಿಲೀಸ್ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

  ಮನುರಂಜನ್ ರವಿಚಂದ್ರನ್ ಆಭಿನಯದ ಪ್ರಾರಂಭ ಚಿತ್ರದ ರಿಲೀಸ್‍ಗೂ ಬ್ರೇಕ್ ಬಿದ್ದಿದೆ. ಮಾರ್ಚ್ 27ಕ್ಕೆ ಪ್ರಾರಂಭ ರಿಲೀಸ್ ಆಗಬೇಕಿತ್ತು. ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ರಿಲೀಸ್ ಡೇಟ್ ಕೂಡಾ ಹೆಚ್ಚೂ ಕಮ್ಮಿ ಆಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery