ಸೆಪ್ಟೆಂಬರ್ 30. ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹಬ್ಬವಾಗುವ ಸೂಚನೆಯನ್ನಂತೂ ನೀಡಿದೆ. ಸೆ.30ಕ್ಕೆ ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ತೆರೆ ಕಾಣುತ್ತಿವೆ.
ರಿಷಬ್ ಶೆಟ್ಟರ ಕಾಂತಾರಾ. ಇದೇ ಮೊದಲ ಬಾರಿಗೆ ತಾವು ನಾಯಕರಾಗಿರೋ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿರೋ ಸಿನಿಮಾ. ರಿಷಬ್ ಶೆಟ್ಟಿ, ಕಿಶೋರ್ ಕುಮಾರ್ ಜುಗಲ್‍ಬಂದಿ ವಾರೆವ್ಹಾ ಎನಿಸುವಂತಿದೆ. ಹೊಂಬಾಳೆ ಬ್ಯಾನರ್‍ನ ಸಿನಿಮಾ ಇದು.
ಅದೇ ದಿನ ಜಗ್ಗೇಶ್ ಅಭಿನಯದ ತೋತಾಪುರಿ -ಭಾಗ 1 ರಿಲೀಸ್ ಆಗುತ್ತಿದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯಲಿ ಜಗ್ಗೇಶ್ ಎದುರು ಆದಿತಿ ಪ್ರಭುದೇವ, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಮೊದಲಾದವರು ನಟಿಸಿದ್ದಾರೆ.
ಅದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿರುವುದು ಪೊನ್ನಿಯನ್ ಸೆಲ್ವನ್. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯಾ ರೈ ಸೇಡಿನ ರಾಣಿಯಾಗಿದ್ದಾರೆ. ಚೋಳರಾ ಕಾಲದ ಐತಿಹಾಸಿಕ ಕಥೆಯಲ್ಲಿ ತ್ರಿಷಾ, ವಿಕ್ರಂ, ಕಾರ್ತಿ, ಜಯಂ ರವಿ, ಪ್ರಭು, ಶರತ್ ಕುಮಾರ್, ಪ್ರಕಾಶ್ ರೈ.. ಸೇರಿದಂತೆ ಘಟಾನುಘಟಿಗಳೇ ನಟಿಸಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ಕಿದೆ.
ಅತ್ತ.. ಹಿಂದಿಯಲ್ಲಿ ವಿಕ್ರಂ ವೇದ. ತಮಿಳಿನ ವಿಕ್ರಂವೇದದ ಯಥಾವತ್ ರೀಮೇಕ್ ಆದರೂ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಹೀರೋ. ಹೀಗಾಗಿ ನಿರೀಕ್ಷೆಯೂ ಜಾಸ್ತಿಯೇ ಇದೆ.
ಒಟ್ಟಿನಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲವಂತೂ ಇದೆ. ಎಲ್ಲರೂ ಗೆಲ್ಲಲಿ ಎಂದು ಹಾರೈಸೋಣ.