ರಣಧೀರನ ಬೆಡಗಿ ಖುಷ್ ಬೂ, ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿಯಲ್ಲೂ ನಟಿಸಿದ್ದ ಸ್ಟಾರ್ ನಟಿ. ಆದರೆ, ಅವರು ತಮ್ಮ ಕನಸಿನ ಒಂದು ಕ್ಷಣಕ್ಕೆ 33 ವರ್ಷ ಕಾದಿದ್ದರು ಎಂದರೆ ನಂಬತ್ತೀರಾ..? ನಂಬಲೇಬೇಕು. ಏಕೆಂದರೆ, ಅದನ್ನು ಈಗ ಅವರೇ ಹೇಳಿಕೊಂಡಿದ್ದಾರೆ.ಅವರ ಕನಸು ದೊಡ್ಡದೇನಾಗಿರಲಿಲ್ಲ. ಅವರ ಕನಸಿನ ಹೀರೋ ಒಬ್ಬರನ್ನು ಭೇಟಿ ಮಾಡಬೇಕಿತ್ತು ಅಷ್ಟೆ.
ಆ ಹೀರೋ ಒಂದು ಕಾಲದ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ, ಹಾಲಿ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ. ಅವರನ್ನು ಇತ್ತೀಚೆಗಷ್ಟೇ ಭೇಟಿ ಮಾಡಿರುವ ಖುಷ್ಬೂ, 'ನಾನು ಕಂಡ ಕನಸು ನನಸಾಗಿದೆ. ನನ್ನ ಹೀರೋ ರವಿಶಾಸ್ತ್ರಿಯನ್ನು ಭೇಟಿಯಾದೆ. ಇನ್ನು ನನ್ನ ನಿರೀಕ್ಷೆಗೆ ತೆರೆಬಿದ್ದಿದೆ. ಅವರನ್ನು ಭೇಟಿಯಾಗಲು ಬರೋಬ್ಬರಿ 33 ವರ್ಷ ಎದುರು ನೋಡಿದೆ' ಎಂದು ಹೇಳಿಕೊಂಡಿದ್ದಾರೆ.