ಅಪ್ಪನಿಗೆ ಒಂದು, ಅಮ್ಮನಿಗೆ ಒಂದು, ತಮಗೆ ಹಾಗೂ ರಾಧಿಕಾಗೆ ಒಂದು.. ಹೀಗೆ ಒಂದೇ ದಿನ 3 ಬೆಂಜ್ ಕಾರು ಖರೀದಿಸಿದ್ದಾರೆ ಯಶ್. ಒಂದು ಬೆಂಜ್ ಜಿಎಲ್ಎಸ್, ಬೆಂಜ್ ಇ ಕ್ಲಾಸ್ ಹಾಗೂ ಮತ್ತೊಂದು ಬೆಂಜ್ ಜಿಎಸ್ಸಿ ಎಎಂಜಿ ಕಪಲ್ ಕಾರು ಖರೀದಿಸಿದ್ದಾರೆ.
ಇದು ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಯಶ್ ರಾಧಿಕಾಗೆ ಹಾಗೂ ತಮ್ಮ ಅಪ್ಪ, ಅಮ್ಮನಿಗೆ ಕೊಡುತ್ತಿರುವ ಉಡುಗೊರೆ ಎಂದುಕೊಳ್ಳಿ. ಇದೇ ಡಿಸೆಂಬರ್ 9ಕ್ಕೆ ಯಶ್, ರಾಧಿಕಾ ಮದುವೆಯಾಗಿ ಒಂದು ವರ್ಷವಾಗುತ್ತಿದೆ.
ಯಶ್-ರಾಧಿಕಾ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.