` prajakeeya, - chitraloka.com | Kannada Movie News, Reviews | Image

prajakeeya,

 • ಉಪೇಂದ್ರರ ಪ್ರಜಾಕೀಯಕ್ಕೆ ಆಯೋಗದ ಮಾನ್ಯತೆ

  upendra gets prajakeeya

  ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ಕೊನೆಗೂ ಕೇಂದ್ರ ಚುನಾವಣಾ ಆಯೋಗದ ಮಾನ್ಯತೆ ಸಿಕ್ಕಿದೆ. `ಉತ್ತಮ ಪ್ರಜಾಕೀಯ ಪಕ್ಷ' ಹೆಸರಿನ ರಾಜಕೀಯ ಪಕ್ಷಕ್ಕೆ ಆಯೋಗ ಮಾನ್ಯತೆ ನೀಡಿದೆ. ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಉಪೇಂದ್ರ ಅವರಿಗೆ ಈ ಪಕ್ಷದ ಮಾನ್ಯತೆ ಸಿಕ್ಕಿದೆ.

  ಇದಕ್ಕೂ ಮುನ್ನ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿದ್ದ ಉಪೇಂದ್ರ, ಆ ಪಕ್ಷದ ಹೆಸರನ್ನು ಮತ್ತೊಬ್ಬರಿಂದ ಎರವಲು ಪಡೆದುಕೊಂಡಿದ್ದರು. ಎಲ್ಲವೂ ಉಪ್ಪಿ ಲೆಕ್ಕಾಚಾರದಂತೆಯೇ ಆಗಿದ್ದರೆ, ಈ ಬಾರಿಯ ಎಲೆಕ್ಷನ್‍ನಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಸ್ಪರ್ಧೆಯಲ್ಲಿರುತ್ತಿತ್ತು. ಆದರೆ, ಟಿಕೆಟ್ ಹಂಚಿಕೆ ವೇಳೆಯಲ್ಲಿ ಉದ್ಭವವಾದ ಗೊಂದಲದಿಂದಾಗಿ, ಕೆಪಿಜೆಪಿಗೂ ತಮಗೂ ಸಂಬಂಧವಿಲ್ಲ ಎಂದು ಘೋಷಿಸಿದ ಉಪೇಂದ್ರ, ಈಗ ಸ್ವತಂತ್ರವಾಗಿ ಪ್ರಜಾಕೀಯ ಎಂಬ ಪಕ್ಷವನ್ನೇ ಸ್ಥಾಪಿಸಿದ್ದಾರೆ. ಈಗಿಂದಗಲೇ ರಾಜಕೀಯ ಕಿತ್ತೊಗೆದು ಪ್ರಜಾಕೀಯ ಸ್ಥಾಪಿಸಲು ಮುಂದಾಗೋಣ ಎಂದು ಉಪೇಂದ್ರ ಸಂತಸ ಹಂಚಿಕೊಂಡಿದ್ದಾರೆ.

 • ಉಪ್ಪಿ ಪ್ರಜಾಕೀಯಕ್ಕೆ ಮಹಾರಾಜರ ಬಹುಪರಾಕ್

  yaduveer welcomes upendra's prajakeeya

  ಉಪೇಂದ್ರ ಅವರ ಪ್ರಜಾಕೀಯ, ಕೆಪಿಜೆಪಿ ಪಕ್ಷ ಸ್ಥಾಪನೆ ತನ್ನ ವಿಭಿನ್ನತೆಯಿಂದಾಗಿಯೇ ಗಮನ ಸೆಳೆಯುತ್ತಿರುವ ಪಕ್ಷ. ಉಪೇಂದ್ರ ಅವರನ್ನು ಟೀಕಿಸುವವರು ಒನ್ಸ್ ಎಗೇಯ್ನ್ ಇಲ್ಲಿಯೂ ಇದ್ದಾರೆ. ಹೊಗಳುವವರು ಕೂಡಾ ಜೊತೆಯಲ್ಲಿದ್ದಾರೆ. ಈಗ ಉಪ್ಪಿ ಅವರನ್ನು ಹೊಗಳಿರುವುದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

  ಇಂಥಾದ್ದೊಂದು ಪಕ್ಷ ರಾಜಕೀಯಕ್ಕೆ ಹಾಗೂ ರಾಜ್ಯಕ್ಕೆ ಬೇಕಿತ್ತು. ಹೊಸ ಆಲೋಚನೆ, ಹೊಸ ಪಕ್ಷ ಹೊಸ ಸಾಧನೆ ಮೂಡಿಬರಲಿ ಎಂದು ಹಾರೈಸಿದ್ದಾರೆ ಯದುವೀರ್. ಹಾಗಂತ ಯದುವೀರ್ ರಾಜಕೀಯಕ್ಕೆ ಬರಬಹುದು, ಉಪ್ಪಿ ಜೊತೆ ಕೈಜೋಡಿಸಬಹುದು ಎಂದೆಲ್ಲ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಡಿ. ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ ಎಂದಿದ್ದಾರೆ  ಯದುವೀರ್.

   

 • ಉಪ್ಪಿ ಪ್ರಜಾಕೀಯಕ್ಕೆ ಮೊದಲ ಸಕ್ಸಸ್

  upendra image

  ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಮೂಲಕ ಹಣ ಇಲ್ಲದೆ ರಾಜಕೀಯ ಮಾಡುತ್ತೇನೆ ಎಂದಾಗ, ಇದು ಸಾಧ್ಯಾನಾ..? ಉಪೇಂದ್ರ ಅವರೆಲ್ಲೋ ಭ್ರಮೆಯಲ್ಲಿದ್ದಾರೆ ಎಂದವರಿಗೆ ಮೊದಲ ಯಶಸ್ಸಿನ ಮೂಲಕ ಉತ್ತರ ಕೊಟ್ಟಿದ್ದಾರೆ ಉಪೇಂದ್ರ. 

  ಇತ್ತೀಚೆಗಷ್ಟೇ ಉಪೇಂದ್ರ, ಬೆಂಗಳೂರು ಡ್ರೈನೇಜ್ ಸಮಸ್ಯೆಯ ಕುರಿತು ಸೌರವ್ ಎಂಬುವರ ಜೊತೆ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ್ದರು. ಬೆಂಗಳೂರಿನ ಡ್ರೈನೇಜ್ ಸಮಸ್ಯೆಗೆ ಒಂದು ಪರಿಹಅರ ಸೂಚಿಸಿದ್ದರು. ಇಡೀ ಬೆಂಗಳೂರನ್ನು ಸ್ವಚ್ಚ ಬೆಂಗಳೂರು ಮಾಡುವ ಕನಸು ಕಂಡಿದ್ದರು. 

  ಉಪೇಂದ್ರ ಅವರ ಐಡಿಯಾ ಸಿಂಪಲ್ಲಾಗಿತ್ತು. ಪ್ರತಿ ವರ್ಷ ಚರಂಡಿ ದುರಸ್ತಿ ಮಾಡುವ ಟೆಂಡರ್ ಕರೆಯುವುದನ್ನು ಬಿಟ್ಟು, ರಸ್ತೆಯ ಎರಡೂ ಬದಿಗಳಲ್ಲಿ ಪೈಪ್​ಲೈನ್ ಅಳವಡಿಸಿ, ರಸ್ತೆ ಮೇಲೆ ಬಿದ್ದ ನೀರನ್ನು ಒಂದು ಕಡೆ ಶೇಖರಿಸುವ ಪ್ಲಾನ್ ಅದು. ಅದಕ್ಕೀಗ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಿದ್ದಾರಂತೆ. ಪೈಲಟ್ ಯೋಜನೆಯೊಂದನ್ನು ಮಾಡುವ ಭರವಸೆ ಕೊಟ್ಟಿದ್ದಾರಂತೆ. ಪೈಲಟ್ ಯೋಜನೆ ಯಶಸ್ವಿಯಾದರೆ, ಅದನ್ನು ಸಂಪೂರ್ಣ ಬೆಂಗಳೂರಿಗೆ ಅಳವಡಿಸುವ ಆಶ್ವಾಸನೆ ಸಿಕ್ಕಿದೆಯಂತೆ. ಹೊಸ ಕನಸಿನ ಬೆನ್ನತ್ತಿ ಹೊರಟಿರುವ ಉಪ್ಪಿಗೆ ಶುಭವಾಗಲಿ.

  Related Articles :-

  ಬೆಂಗಳೂರು ಪ್ರವಾಹ ನಿರ್ಮೂಲನೆಗೆ ಉಪ್ಪಿ ಐಡಿಯಾ

 • ಪ್ರಜಾಕೀಯಕ್ಕೆ ಶುಭ ಹಾರೈಸಿದ್ದ ಕಿಚ್ಚ

  sudeep upendra at mukunda murari pressmeet

  ಕಿಚ್ಚ ಸುದೀಪ್ ತಾವು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಲೇಬೇಕೆಂದೇನೂ ಇಲ್ಲ. ನನ್ನ ಕೈಲಾದ ನೆರವು, ಸಹಾಯವನ್ನು ರಾಜಕೀಯದಲ್ಲಿ ಇಲ್ಲದೆಯೂ ಮಾಡಬಹುದು. ರಾಜಕೀಯ ನನ್ನ ಕ್ಷೇತ್ರವಲ್ಲ ಅನ್ನೋ ಮಾತನ್ನು ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಂತೂ ಸುದೀಪ್ ರಾಜಕೀಯ ಪ್ರವೇಶ ದೊಡ್ಡ ಸುದ್ದಿಯಾದಾಗ ಸ್ಪಷ್ಟವಾಗಿಯೇ ನಿರಾಕರಿಸಿದ್ದರು.

  ಹೀಗಿರುವ ಸುದೀಪ್, ತಮ್ಮ ಮಿತ್ರರ ರಾಜಕೀಯಕ್ಕೆ ಏನಂತಾರೆ..? ಈ ಪ್ರಶ್ನೆ ಕಾಡುತ್ತಲೇ ಇತ್ತು. ಆದರೆ, ಉತ್ತರ ಸಿಕ್ಕಿರಲಿಲ್ಲ. ಅದರಲ್ಲೂ ಉಪೇಂದ್ರ ಪ್ರಜಾಕೀಯ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಎದುರಾಗಿದ್ದ ಸುದೀಪ್, ಪ್ರಜಾಕೀಯದ ಬಗ್ಗೆಯೂ ಮಾತನಾಡಿದ್ದಾರೆ.

  ಉಪೇಂದ್ರ ಅವರ ಆಲೋಚನೆಗಳು ಬೆರಗು ಮೂಡಿಸುತ್ತಿವೆ. ಅವರ ಪ್ರಜಾಕೀಯದ ಕಲ್ಪನೆ ಇಷ್ಟವಾಯ್ತು. ಅವರಿಗೆ ಯಶಸ್ಸು ಸಿಗಲಿ ಎಂದಿದ್ದಾರೆ. ಅಷ್ಟೇ ಅಲ್ಲ, ನನಗೆ ರಾಜಕೀಯ ಆಗಿಬರಲ್ಲ. ಇರುವಷ್ಟು ದಿನ ಸಾಮಾನ್ಯ ಮನುಷ್ಯನಾಗಿಯೇ ಇರಲು ಬಯಸುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

   

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery