` Nikhil Kumaraswamy - chitraloka.com | Kannada Movie News, Reviews | Image

Nikhil Kumaraswamy

 • ತೆಲುಗು ಡೈರೆಕ್ಟರ್ ಜೊತೆ ಹೊಸ ಚಿತ್ರಕ್ಕೆ ನಿಖಿಲ್ ಗ್ರೀನ್ ಸಿಗ್ನಲ್

  nikhil kumaraswamy to once again pair up with telugu director

  ನಿಖಿಲ್ ಕುಮಾರಸ್ವಾಮಿ ಪೈಲ್ವಾನ್ ಕೃಷ್ಣ ಜೊತೆ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಕಥೆ, ಚಿತ್ರಕಥೆ ಸಿದ್ಧವಾಗುತ್ತಿರುವಾಗಲೇ ನಿಖಿಲ್ ಕುಮಾರಸ್ವಾಮಿ ಇನ್ನೊಂದು ಚಿತ್ರಕ್ಕೆ ಓಕೆ ಎಂದಿದ್ದಾರೆ. ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರಕ್ಕೆ ಓಕೆ ಎಂದಿದ್ದಾರೆ ನಿಖಿಲ್.

  2014ರಲ್ಲಿ ಒಕ ಲೈಲಾ ಕೋಸಂ ಚಿತ್ರ ನಿರ್ದೇಶಿಸಿದ್ದ ವಿಜಯ್, 5 ವರ್ಷಗಳಿಂದ ಯಾವುದೇ ಡೈರೆಕ್ಷನ್ ಮಾಡಿಲ್ಲ. ಈ ಚಿತ್ರಕ್ಕೆ ಲಹರಿ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗಿದೆ. ಕಲಾವಿದರಿಗಾಗಿ ಅಡಿಷನ್ ಕೂಡಾ ಶುರುವಾಗಿದೆ.

 • ನನ್ನ ಪರ ಪ್ರಚಾರಕ್ಕೆ ಚಿತ್ರರಂಗದಿಂದ ಯಾರೂ ಬರಲ್ಲ - ನಿಖಿಲ್ ಕುಮಾರಸ್ವಾಮಿ

  nikhil kumaraswamya says noone will campaign for him

  ಮಂಡ್ಯ ಕ್ಷೇತ್ರದಲ್ಲಿ ಸ್ಯಾಂಡಲ್‍ವುಡ್ ಇಬ್ಭಾಗವಾಗಲಿದೆ ಎಂಬ ಆತಂಕದಲ್ಲಿದ್ದರು ಅಭಿಮಾನಿಗಳು. ಏಕೆಂದರೆ, ಒಂದು ಕಡೆ ಸುಮಲತಾ ಅಂಬರೀಷ್ ಸ್ಪರ್ಧೆ. ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ. ಕುಮಾರಸ್ವಾಮಿ, ಚಿತ್ರರಂಗದ ಗಣ್ಯ ನಿರ್ಮಾಪಕರಲ್ಲಿ ಒಬ್ಬರು. ಹೀಗಿರುವಾಗ, ಅವರ ಪರ ಒಂದಷ್ಟು ಜನ, ಇವರ ಪರ ಇನ್ನೊಂದಷ್ಟು ಜನ ಪ್ರಚಾರಕ್ಕೆ ಹೋದರೆ, ಸ್ಯಾಂಡಲ್‍ವುಡ್ ಇಬ್ಭಾಗವಾದಂತೆ ಎಂಬ ಆತಂಕ ಎಲ್ಲರಿಗೂ ಇತ್ತು.

  ಅದರಲ್ಲೂ ದರ್ಶನ್ ಬಹಿರಂಗವಾಗಿ ಪ್ರಚಾರಕ್ಕೆ ರೆಡಿ ಎಂದಿದ್ದರೆ, ಯಶ್, ಸುಮಲತಾ ಅವರ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗ ನಿಖಿಲ್ ಪರ ಯಾರು ಹೋಗ್ತಾರೆ..? ಈ ಪ್ರಶ್ನೆಗೆ ನಿಖಿಲ್ ಅವರೇ ಉತ್ತರ ಕೊಟ್ಟಿದ್ದಾರೆ.

  ನನ್ನ ಪರ ಚಿತ್ರರಂಗದಿಂದ ಯಾರೂ ಪ್ರಚಾರಕ್ಕೆ ಬರಲ್ಲ. ನಾನು ಯಾರನ್ನೂ ಅಪ್ರೋಚ್ ಮಾಡಿಲ್ಲ. ನನ್ನನ್ನೂ ಯಾರೂ ಕೂಡಾ ಕೇಳಿಲ್ಲ. ನನಗೆ ಜೆಡಿಎಸ್ ಕಾರ್ಯಕರ್ತರೇ ಸಾಕು ಎಂದಿದ್ದಾರೆ ನಿಖಿಲ್.

 • ನಿಖಿಲ್ ಕುಮಾರಸ್ವಾಮಿ ಚಾಮುಂಡಿ ಹಬ್ಬ ಸ್ಪೆಷಲ್ 

  seetharama kalyana teaser launched

  ನಿಖಿಲ್ ಕುಮಾರಸ್ವಾಮಿ ಅಭಿಯನದ `ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್‍ನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಅಮ್ಮನವರ ಕರಗದ ವಿಶೇವಾಗಿ ಹೊರಬಂದಿದೆ ಚಿತ್ರದ ಟೀಸರ್. ಎತ್ತುಗಳ ಜೊತೆ ಓಟ, ಕಾರುಗಳ ಸ್ಫೋಟ, ತ್ರಿಶೂಲ ಹಿಡಿದು ನಿಲ್ಲುವ ನಾಯಕ.. ಹೀಗೆ ಹೀರೋ ನಿಖಿಲ್‍ರನ್ನು ದುಷ್ಟರನ್ನು ಸದೆಬಡಿಯುವವರನ್ನಾಗಿ ತೋರಿಸಲಾಗಿದೆ. 

  ಟೀಸರ್‍ನಲ್ಲಿ ಬರೀ ಫೈಟಿಂಗ್ ತೋರಿಸಿದ್ದಾರೆ ಅಂತಾ ಇದು ಫೈಟಿಂಗ್ ಸಿನಿಮಾ ಅಂದ್ಕೋಬೇಡಿ. ಇದೊಂದು ಕೌಟುಂಬಿಕ ಚಿತ್ರ. ತಂದೆ-ಮಗ, ತಂದೆ-ಮಗಳ ಬಾಂಧವ್ಯದ ಕುರಿತು ಇರುವ ಚಿತ್ರ. ಚಿತ್ರವನ್ನು ನೋಡಿ ಹಾರೈಸಿ ಎಂದು ಕೇಳಿಕೊಂಡರು ಕುಮಾರಸ್ವಾಮಿ.

  ಈಗಾಗಲೇ 92 ದಿನದ ಶೂಟಿಂಗ್ ಮುಗಿದಿದೆ. ಇನ್ನೂ 30 ದಿನಗಳ ಶೂಟಿಂಗ್ ಬಾಕಿ ಇದೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು ನಿಖಿಲ್ ಕುಮಾರಸ್ವಾಮಿ.

  ನಿರ್ದೇಶಕ ಹರ್ಷ, ರಚಿತಾ ರಾಮ್, ಚಿಕ್ಕಣ್ಣ ಸೇರಿದಂತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ವೇದಿಕೆಯಲ್ಲಿ ಕಂಗೊಳಿಸಿದರು.

 • ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾ ಯಾವುದು..?

  who will produce nikhil's next ?

  ಜಾಗ್ವಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ, ಸೀತಾರಾಮ ಕಲ್ಯಾಣದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಗೂ ಮೊದಲೇ ಭರ್ಜರಿ ಹವಾ ಸೃಷ್ಟಿಸಿರುವ ಸೀತಾರಾಮ ಕಲ್ಯಾಣದ ಮೇಲೆ ನಿಖಿಲ್‍ಗೆ ಭಾರಿ ನಿರೀಕ್ಷೆ ಇದೆ. ನಿರ್ದೇಶಕ ಹರ್ಷ ಚಿತ್ರವನ್ನು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದೇ ನಿಖಿಲ್ ಆತ್ಮವಿಶ್ವಾಸಕ್ಕೆ ಕಾರಣ. ಇದೇ ವಾರ ತೆರೆಗೆ ಬರುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ನಂತರ ಮುಂದಿನ ಸಿನಿಮಾಗೂ ಓಕೆ ಎಂದಿದ್ದಾರೆ ನಿಖಿಲ್.

  2.0 ಚಿತ್ರದ ನಿರ್ಮಾಪಕರ ಜೊತೆ ಒಂದು ಸಿನಿಮಾ ಮತ್ತು ಜಯಣ್ಣ ಕಂಬೈನ್ಸ್‍ಗೆ ಒಂದು ಸಿನಿಮಾ ಮಾಡೋಕೆ ಯೆಸ್ ಎಂದಿದ್ದಾರಂತೆ ನಿಖಿಲ್. ಕಥೆ, ನಿರ್ದೇಶಕರು ಇನ್ನೂ ಫೈನಲ್ ಆಗಿಲ್ಲ. 

 • ನಿಖಿಲ್ ಕುಮಾರಸ್ವಾಮಿಯ ಹೊಸ ತಂಗಿ ಅನುಷಾ

  anusha rai to play sister to nikhil gowda

  ಇತ್ತೀಚೆಗಷ್ಟೇ ಹೊಸ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಸಪ್ತಪದಿ ತುಳಿಯಲು ಮುನ್ನುಡಿ ಬರೆದಿರುವ ನಿಖಿಲ್ ಕುಮಾರಸ್ವಾಮಿಗೆ ಈಗ ಹೊಸದಾಗಿ ಒಬ್ಬ ತಂಗಿ ಸಿಕ್ಕಿದ್ದಾರೆ. ಆಕೆಯ ಹೆಸರು ಅನುಷಾ ರೈ.

  ಅಣ್ಣ ಏನು ಮಾಡಿದರೂ ನಾನು ಬೆಂಬಲ ನೀಡುತ್ತೇನೆ. ನಾವು ಒಡಹುಟ್ಟಿದವರಾದರೂ ಸ್ನೇಹಿತರಂತೆ ಇರುತ್ತೇವೆ. ಒಬ್ಬರ ಖುಷಿಗಾಗಿ ಮತ್ತೊಬ್ಬರು ಯಾವುದೇ ತ್ಯಾಗ ಮಾಡಲು ಸಿದ್ಧರಾಗುತ್ತೇವೆ ಎಂದಿದ್ದಾರೆ ಅನುಷಾ ರೈ.

  ಅಂದಹಾಗೆ ಇದು ರಿಯಲ್ ಕಥೆಯದ್ದಲ್ಲ, ರೀಲ್ ಕಥೆಯದ್ದು. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಹೊಸ ಚಿತ್ರದಲ್ಲಿ ನಿಖಿಲ್ ಎದುರು ಅನುಷಾ ರೈ, ತಂಗಿಯಾಗಿ ನಟಿಸುತ್ತಿದ್ದಾರೆ. ಕಾಶ್ಮೀರಾ ಪರದೇಶಿ, ಸ್ಪಂದಾನಾ ನಿಖಿಲ್ ಎದುರು ನಾಯಕಿಯರು. ಅನುಷಾ  ರೈ ತಂಗಿ.

 • ನಿಖಿಲ್ ಮದುವೆ ಫಿಕ್ಸ್ : ಯಾರೀಕೆ ರೇವತಿ..?

  nikhil kumaraswamy's wedding fixed with revathi

  ರಚಿತಾ ರಾಮ್ ಜೊತೆ ಮದುವೆಯಂತೆ. ಆಂಧ್ರಪ್ರದೇಶದ ಕೋಟ್ಯಧಿಯೊಬ್ಬರ ಮಗಳ ಜೊತೆ ಎಂಗೇಜ್‍ಮೆಂಟ್ ಅಂತೆ. ಡಿಕೆ ಶಿವಕುಮಾರ್ ಕುಮಾರಸ್ವಾಮಿಯ ಬೀಗರಾಗ್ತಾರಂತೆ. ಇಂತಹ ಅಂತೆಕಂತೆಗಳಿಗೆಲ್ಲ ತೆರೆ ಬೀಳುವ ಸುದ್ದಿ ಹತ್ತಿರ ಬಂದಿದೆ. ನಿಖಿಲ್ ಮದುವೆಯಾಗುತ್ತಿರುವ ಹುಡುಗಿ ರೇವತಿ.

  ಈ ರೇವತಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಮೊಮ್ಮಗಳಾಗಬೇಕು. ರೇವತಿ ಎಂಸಿಎ ಪದವೀಧರೆಯಾಗಿದ್ದು, ಮಲ್ಲತ್‍ಹಳ್ಳಿಯಲ್ಲಿ ವಧುವಿನ ಮನೆ ಇದೆ.

  ವಧುವಿನ ಮನೆಗೆ ದೊಡ್ಡಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್, ದೇವೇಗೌಡರ ಮನೆಯ ಹೆಣ್ಣು ಮಕ್ಕಳು ಹೋಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ. ಮೇ 17, 18ಕ್ಕೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳಿವೆ.

 • ನಿಖಿಲ್ ಸಿನಿಮಾಗೆ ಮೈನೆ ಪ್ಯಾರ್ ಕಿಯಾ ಬ್ಯೂಟಿ

  bhagyashree joins seetharama kalyana team

  ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾ ರಾಮ ಕಲ್ಯಾಣ ಚಿತ್ರಕ್ಕೆ ಹೊಸ ಹೊಸ ಸ್ಟಾರ್‍ಗಳು ಜೊತೆಯಾಗುತ್ತಿದ್ದಾರೆ. ಸಿನಿಮಾಗೆ ಈಗ ಭಾಗ್ಯಶ್ರೀ ಎಂಟ್ರಿ ಕೊಟ್ಟಿದ್ದಾರೆ. ಮೈನೆ ಪ್ಯಾರ್ ಕಿಯಾ ಖ್ಯಾತಿಯ ಭಾಗ್ಯಶ್ರೀ, ಹಲವು ವರ್ಷಗಳ ಹಿಂದೆ ಅಮ್ಮಾವ್ರ ಗಂಡ ಚಿತ್ರದಲ್ಲಿ ನಟಿಸಿದ್ದರು. ಶಿವರಾಜ್‍ಕುಮಾರ್ ಜೊತೆಯಾಗಿ ನಟಿಸಿದ್ದ ಭಾಗ್ಯಶ್ರೀ, ಅದಾದ ಬಳಿಕ ಈಗ ಸೀತಾ ರಾಮ ಕಲ್ಯಾಣಕ್ಕೆ ಬರುತ್ತಿದ್ದಾರೆ.

  ಭಾಗ್ಯಶ್ರೀ ಒಬ್ಬರೇ ಅಲ್ಲ, ಅನಿಲ್ ಕಪೂರ್ ಅವರ ಸಹೋದರ ಸಂಜಯ್ ಕಪೂರ್ ಕೂಡಾ ಸೀತಾರಾಮ ಕಲ್ಯಾಣಕ್ಕೆ ಜೊತೆಯಾಗುತ್ತಿದ್ದಾರೆ. ರಚಿತಾ ರಾಮ್, ಈ ಚಿತ್ರದಲ್ಲಿ ನಿಖಿಲ್‍ಗೆ ನಾಯಕಿ. ಶರತ್ ಕುಮಾರ್, ರವಿಶಂಕರ್, ಮಧು, ಜ್ಯೋತಿ ರೈ.. ಹೀಗೆ ಚಿತ್ರತಂಡ ಭರ್ಜರಿಯಾಗಿದೆ. ಇವರೆಲ್ಲರನ್ನೂ ನಿರ್ದೇಶಿಸುತ್ತಿರುವುದು ಸತತ ಹಿಟ್ ಚಿತ್ರಗಳನ್ನೇ ನೀಡಿರುವ ಹರ್ಷ. ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಾಣದ ಸೀತಾರಾಮ ಕಲ್ಯಾಣ, ನವೆಂಬರ್‍ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

 • ನಿಮ್ಮ ರಾಜ, ರಾಣಿಯ ಜೊತೆ ಹಾಡು ಹಾಡಿ.. 6364741243ಗೆ ಕಳಿಸಿ.. ಬಹುಮಾನ ಗೆಲ್ಲಿ..!

  sing a song and win active

  ಸೀತಾರಾಮ ಕಲ್ಯಾಣ ಚಿತ್ರದ ಸೂಪರ್ ಹಿಟ್ ಹಾಡುಗಳಲ್ಲೊಂದು ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ತಂಡ, ಈಗ ಚಿತ್ರರಸಿಕರಿಗೊಂದು ಬ್ಯೂಟಿಫುಲ್ ಸ್ಪರ್ಧೆಯನ್ನಿಟ್ಟಿದೆ. ನೀವು ಮಾಡಬೇಕಾದ್ದು ಇಷ್ಟೆ..

  ನಿಮ್ಮ ಸಂಗಾತಿಯ ಜೊತೆ.. ನೀವು ರಾಜನಾಗಿದ್ದರೆ ರಾಣಿಯ ಜೊತೆ.. ರಾಣಿಯಾಗಿದ್ದರೆ ರಾಜನ ಜೊತೆ.. ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡಿಗೆ ನಿಮ್ಮದೇ ಸ್ಟೈಲ್‍ನಲ್ಲಿ ನೃತ್ಯ ಮಾಡಿ. ವಿಡಿಯೋ ಮಾಡಿ. 6364741243ಗೆ ಕಳಿಸಿ.. 

  ಕಳಿಸಿದ್ರೆ ಮುಂದ.. ಮುಂದೇನು ಅಂತೀರೇನು.. ನೀವು ಸೀತಾರಾಮ ಕಲ್ಯಾಣ ಚಿತ್ರತಂಡದ ಜೊತೆ ಔತಣಕೂಟದಲ್ಲಿ ಭಾಗವಹಿಸಬಹುದು. ಒಬ್ಬ ಅದೃಷ್ಟಶಾಲಿಗೆ ಹೋಂಡಾ ಆ್ಯಕ್ಟಿವಾ ಉಡುಗೊರೆಯಾಗಿ ಸಿಗಲಿದೆ. ಇನ್ನೇಕೆ ತಡ.. ಟಿಕ್ ಟಾಕ್ ಆ್ಯಪ್ ಆನ್ ಮಾಡಿ.

 • ಮೊಮ್ಮಗನ ಸಿನಿಮಾ ನೋಡಿ ಕಣ್ಣೀರಿಟ್ಟ ದೇವೇಗೌಡ

  devegowda in tears after watching seetharama kalyana

  ಸೀತಾರಾಮ ಕಲ್ಯಾಣ ಚಿತ್ರ ತೆರೆಗೆ ಬರುತ್ತಿರುವ ಈ ಹೊತ್ತಿನಲ್ಲಿ ಮೊಮ್ಮಗ ನಿಖಿಲ್ ಸಿನಿಮಾವನ್ನು ತಾತ ಮತ್ತು ಅಜ್ಜಿಗೆ ತೋರಿಸಿದ್ದಾರೆ. ಅವರು ಸಿನಿಮಾ ನೋಡಿ ಮೆಚ್ಚುಗೆ ಹೇಳುವವರೆಗೆ ನನಗೆ ಸಮಾಧಾನ ಇರಲಿಲ್ಲ. ಹೀಗಾಗಿ ಅವರಿಗೆ ಸಿನಿಮಾ ತೋರಿಸಿದೆ. ಸಿನಿಮಾದ ಕೆಲವು ದೃಶ್ಯಗಳನ್ನು ನೋಡುತ್ತಾ ತಾತ ಕಣ್ಣೀರಿಟ್ಟರು ಎಂದು ಹೇಳಿದ್ದಾರೆ ನಿಖಿಲ್.

  ನಮ್ಮ ಕುಟುಂಬದಲ್ಲಿ ನಟನೆಯ ಕ್ಷೇತ್ರಕ್ಕೆ ಬಂದವನು ನಾನೊಬ್ಬನೇ. ಮನೆಯಲ್ಲಿ ಅಪ್ಪ ಮುಖ್ಯಮಂತ್ರಿ. ತಾತ ಪ್ರಧಾನಮಂತ್ರಿಯಾಗಿದ್ದವರು. ಯಾರೊಬ್ಬರೂ ನಟರಲ್ಲ. ಚಿತ್ರದಲ್ಲಿ ಒಂದೊಳ್ಳೆ ಮನರಂಜನಾತ್ಮಕ ಕಥೆಯ ಜೊತೆ ಒಂದೊಳ್ಳೆ ಸಂದೇಶವೂ ಇದೆ ಎಂದಿದ್ದಾರೆ ನಿಖಿಲ್.

 • ರಚಿತಾಗೆ ಮತ್ತೆ ಅಮ್ಮನಾದರು ಮಧುಬಾಲಾ..!

  roja actress madhoo

  ಭಾರತೀಯ ಚಿತ್ರರಂಗದವರಿಗೆ ಮಧುಬಾಲಾ ಎಂದರೆ ರೋಜಾ ನೆನಪಾಗುತ್ತೆ. ಆದರೆ, ಕನ್ನಡ ಚಿತ್ರರಸಿಕರಿಗೆ ಅಣ್ಣಯ್ಯ ಚಿತ್ರದ ಬೊಂಬೆ.. ಬೊಂಬೆ ಹಾಡು ನೆನಪಾಗುತ್ತೆ. ಇತ್ತೀಚೆಗೆ ಮಧುಬಾಲಾರನ್ನು ಕಿಚ್ಚ ಸುದೀಪ್ ಕನ್ನಡಕ್ಕೆ ಕರೆತಂದಿದ್ದರು. ರನ್ನ ಚಿತ್ರದಲ್ಲಿ ರಚಿತಾರಾಮ್-ಹರಿಪ್ರಿಯಾಗೆ ತಾಯಿಯಾಗಿ ನಟಿಸಿದ್ದರು ಮಧುಬಾಲಾ. 

  ಈಗ ಮತ್ತೊಮ್ಮೆ ಬಂದಿದ್ದಾರೆ ಮಧುಬಾಲಾ. ಈ ಬಾರಿಯೂ ಅವರಿಗೆ ಮಗಳಾಗಿರೋದು ರಚಿತಾರಾಮ್. ಸೀತಾರಾಮ ಕಲ್ಯಾಣ ಚಿತ್ರದಲ್ಲಿ. ನಿಖಿಲ್ ಕುಮಾರ್ ಅಭಿನಯದ ಈ ಸಿನಿಮಾದಲ್ಲಿ ಮಧುಬಾಲಾ ಅವರದ್ದು ಪ್ರಮುಖ ಪಾತ್ರವಂತೆ. ಹಲವು ದಿನಗಳ ಟೈಂ ತೆಗೆದುಕೊಂಡು ಕಥೆಗೆ ಒಪ್ಪಿದರು. ನಮಗೆ ಆ ಕಥೆ ಹಾಗೂ ಪಾತ್ರಕ್ಕೆ ಅವರೇ ಬೇಕಿತ್ತು ಎಂದಿದ್ದಾರೆ ನಿರ್ದೇಶಕ ಹರ್ಷ. ಮಧುಬಾಲಾಗೆ ಜೋಡಿಯಾಗಿರುವುದು ರವಿಶಂಕರ್.

  Related Articles :-

  Madhoo Joins 'Seetharama Kalayana'

 • ರಾಜ್ ಸಿನಿಮಾ ಸ್ಫೂರ್ತಿ.. ಅಪ್ಪನ ಸಿನಿಮಾಗಳೇ ಪ್ರೇರಣೆ - ನಿಖಿಲ್ ಕುಮಾರಸ್ವಾಮಿ

  nikhil kumaraswamy talks about seetharama kalyana

  ಡಾ.ರಾಜ್‍ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವನು ನಾನು.. ಹೀಗಾಗಿಯೇ ನನ್ನ ಚಿತ್ರಗಳಲ್ಲಿ ಅಶ್ಲೀಲತೆ ಇರುವುದಿಲ್ಲ. ಸಮಾಜಕ್ಕೆ ಒಂದು ಸಂದೇಶವಿರುವಂತ ಕೌಟುಂಬಿಕ ಮನರಂಜನಾತ್ಮಕ ಸಿನಿಮಾಗಳನ್ನು ಮಾಡುತ್ತೇನೆ.. ಸಿಎಂ ಕುಮಾರಸ್ವಾಮಿ, ತಮ್ಮ ನಿರ್ಮಾಣದ ಸಿನಿಮಾಗಳ ಬಗ್ಗೆ ಆಗಾಗ್ಗೆ ಈ ಮಾತು ಹೇಳುತ್ತಲೇ ಇರುತ್ತಾರೆ. ಅದೇ ಮಾತನ್ನು ಈಗ ನಿಖಿಲ್ ಕೂಡಾ ಹೇಳಿದ್ದಾರೆ.

  `ನಾನು ರಾಜಕಾರಣವನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬೆಳೆದವನು. ಅದು ನನಗೆ ಹೊಸದಲ್ಲ. ನಾನು ನನ್ನ ತಂದೆಯಂತೆಯೇ ರಾಜಕಾರಣ ಹಾಗೂ ಸಿನಿಮಾ.. ಎರಡೂ ಕ್ಷೇತ್ರಗಳಲ್ಲಿರುತ್ತೇನೆ. ನನಗೂ ಡಾ.ರಾಜ್ ಸಿನಿಮಾಗಳೆಂದರೆ ಇಷ್ಟ. ಅವರ ಹಾಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ' ಎಂದು ಹೇಳಿಕೊಂಡಿದ್ದಾರೆ ನಿಖಿಲ್.

  ಸೀತಾರಾಮ ಕಲ್ಯಾಣ ಚಿತ್ರವೂ ಕೂಡಾ ಅದೇ ಮಾದರಿಯದ್ದು. ಕೌಟುಂಬಿಕ ಹಿನ್ನೆಲೆಯ ಮನರಂಜನಾತ್ಮಕ ಸಿನಿಮಾ. ಚಿತ್ರದಲ್ಲೊಂದು ಸುಂದರ ಸಂದೇಶವೂ ಇದೆ. ನಿರ್ದೇಶಕ ಹರ್ಷ ಚಿತ್ರವನ್ನು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ನಾನು ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ ನಿಖಿಲ್.

 • ರೈಡರ್ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್

  ರೈಡರ್ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್

  ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆಂದೇ ಸ್ಪೆಷಲ್ ಆಗಿ ರಿಲೀಸ್ ಆಗಿದ್ದು ರೈಡರ್ ಚಿತ್ರದ ಟೀಸರ್.  ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರೆಡಿಯಾಗುತ್ತಿರುವ  ಚಿತ್ರಕ್ಕೆ ಲಹರಿ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ತೆಲುಗು ಡೈರೆಕ್ಟರ್ ವಿಜಯ್ ಕುಮಾರ್ ಡೈರೆಕ್ಷನ್.

  ಈ ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸಿದ್ದು, ಟೀಸರ್‍ನಲ್ಲಿ ಕಂಪ್ಲೀಟ್ ಆ್ಯಕ್ಷನ್ ಇದೆ. ಸಾಹಸ ಪ್ರಿಯರಿಗೆ ಮೈನವಿರೇಳಿಸುವಂತ ಸಾಹಸಗಳಿವೆ. ನಿಖಿಲ್ ಸ್ಟೈಲ್ ಮತ್ತು ಆ್ಯಕ್ಷನ್ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. 

 • ಲವ್ ಕಲ್ಯಾಣದಲ್ಲಿ ವೈರಲ್ ಆಗಿದ್ದು ಅಣ್ಣ-ತಂಗಿ ಡೈಲಾಗು..!

  seetharama kalyana auto dialogue goes viral

  ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಮುದ್ದು ಮುದ್ದು ಜೋಡಿಯಿದೆ. ನಿಖಿಲ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಿರುವ ಸಿನಿಮಾ, ಲವ್ ಸ್ಟೋರಿ. ಆ ಚಿತ್ರದಲ್ಲೇ ಅವರೇ ಪ್ರೇಮಿಗಳು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 

  ಆದರೂ ಚಿತ್ರದ ಟ್ರೇಲರ್‍ನಲ್ಲಿ ಬರೋ ಒಂದು ಡೈಲಾಗು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಟೋದಲ್ಲಿ ಕುಳಿತು, ಆಟೋಡ್ರೈವರ್‍ಗೆ ರಚಿತಾ ರಾಮ್ ಹೇಳೋ ಡೈಲಾಗ್ ಅದು. ``ಲವರ್ಸಾ.. ಯಾಕೆ.. ನಿಮ್ ಕಣ್ಣಿಗೆ ನಾವಿಬ್ರೂ ಅಣ್ಣ ತಂಗಿ ಥರಾ ಕಾಣಿಸ್ತಿಲ್ವಾ..' ಅಂತಾ ಹೇಳೋ ಡೈಲಾಗ್ ಅದು.

  ಎ.ಹರ್ಷ, ತಮ್ಮ ಚಿತ್ರದಲ್ಲಿ ಇಂಥಾದ್ದೊಂದು ಸಣ್ಣ ನಗೆ ಉಕ್ಕಿಸೋದ್ರಲ್ಲಿ ಫೇಮಸ್. 

 • ಸಂಸಾರಸ್ಥರಾದ ಮೇಲೆ ನಿಖಿಲ್ ಕುಮಾರಸ್ವಾಮಿ ಬದಲಾದ್ರಾ..?

  Nikhil Kumaraswamy Talks About His Wife Revathi

  ಮದುವೆಯಾದ ಮೇಲೆ ಎಲ್ಲರೂ ಬದಲಾಗುವವರೇ. ಮದುವೆಗೆ ಮುಂಚೆ ಹುಲಿಯಂತಿದ್ದವರು, ಸವಾರಿ ಮಾಡೋಕೆ ಚಾಮುಂಡಿ ಬಂದ ಮೇಲೆಯೂ ಹುಲಿಯಂತೇ ಇರುತ್ತಾರೆ. ಆದರೆ ಹುಲಿಯಾಗಿರಲ್ಲ. ಏಕೆಂದರೆ ಹುಲಿ ಮೇಲೆ ಚಾಮುಂಡಿ ಇರುತ್ತಾಳೆ. ಇದು ತಮಾಷೆಯ ವಿಷಯವಾಯ್ತು. ಈಗ ನಿಖಿಲ್ ಕುಮಾರಸ್ವಾಮಿ ಸಂಸಾರದ ವಿಷಯದ ಕಥೆ. ಮದುವೆಯಾಗಿ ಹೊಸ ಮನೆಗೆ ಶಂಕುಸ್ಥಾಪನೆಯನ್ನೂ ಮಾಡಿರುವ ನಿಖಿಲ್, ಮದುವೆಯಾದ ಮೇಲೆ ಬದಲಾಗಿದ್ದಾರಾ..?

  ಹೌದು, ಸಿಕ್ಕಾಪಟ್ಟೆ ಬದಲಾಗಿದ್ದೇನೆ. ಮದುವೆಗೆ ಮೊದಲು ನಾನು ನನ್ನ ರೂಂನ್ನು ವರ್ಷಕ್ಕೊಮ್ಮೆ ಕ್ಲೀನ್ ಮಾಡುತ್ತಿದ್ದೆ. ಈಗ ಹಾಗಲ್ಲ. ದಿನವೂ ಕ್ಲೀನ್ ಆಗುತ್ತೆ ಎಂದಿದ್ದಾರೆ ನಿಖಿಲ್.

  ಅಂದಹಾಗೆ ನಿಖಿಲ್ ಪತ್ನಿ ರೇವತಿ, ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರಂತೆ. ಅಕಾರಣವಾಗಿಯೂ ಅವರ ಕಣ್ಣಲ್ಲಿ ನೀರು ಬರುತ್ತೆ ಎಂದಿರೋ ನಿಖಿಲ್, ಇದುವರೆಗೆ ಪತ್ನಿಯ ಕೈ ರುಚಿ ಟೇಸ್ಟ್ ಮಾಡುವ ಭಾಗ್ಯ ಪಡೆದಿಲ್ಲ. ಬಿರಿಯಾನಿ ಚೆನ್ನಾಗಿ ಮಾಡ್ತಾರೆ ಅನ್ನೋದು ಕೇಳಿದ್ದೇನೆ. ತಿಂದಿಲ್ಲ ಎಂದಿದ್ದಾರೆ ನಿಖಿಲ್. ತಮ್ಮ ಪತ್ನಿ ನನ್ನ ಫ್ಯಾನ್ ಅಲ್ಲ ಎಂದಿರೋ ನಿಖಿಲ್, ಒಳ್ಳೊಳ್ಳೆಯ ಸಿನಿಮಾಗಳಲ್ಲಿ ನಟಿಸಿ ನನ್ನ ಪತ್ನಿಯನ್ನು ನನ್ನ ಅಭಿಮಾನಿ ಮಾಡಿಕೊಳ್ಳೋ ಛಲದಲ್ಲಿದ್ದಾರೆ.

  ಸದ್ಯಕ್ಕೆ ನಿಖಿಲ್ ಲಹರಿ ಕಂಬೈನ್ಸ್‍ನ ರೈಡರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 • ಸಿನಿಮಾ, ಪಾಲಿಟಿಕ್ಸ್, ಮದುವೆ.. - ನಿಖಿಲ್ ಕುಮಾರಸ್ವಾಮಿ ಸ್ಪೀಕಿಂಗ್

  nikhil kumaraswamya talks about politics, marriage and movies

  ಮಂಡ್ಯ ಲೋಕಸಭೆ ಚುನಾವಣೆ ನಂತರ ರಾಜಕೀಯ ಹೊರತುಪಡಿಸಿ ಬೇರಾವುದೇ ವಿಚಾರದ ಬಗ್ಗೆ ತುಟಿಬಿಚ್ಚದೆ ಮೌನವಾಗಿದ್ದ ನಿಖಿಲ್ ಕುಮಾರಸ್ವಾಮಿ, ಈಗ ಹೆಚ್ಚೂ ಕಡಿಮೆ ರಾಜಕೀಯದಲ್ಲೇ ಬ್ಯುಸಿಯಾಗಿದ್ದಾರೆ. ಹಾಗಾದರೆ ನಿಖಿಲ್, ಇನ್ಮುಂದೆ ಸಿನಿಮಾ ಮಾಡಲ್ವಾ..? ಕಂಪ್ಲೀಟ್ ರಾಜಕಾರಣಿಯಾಗ್ತಾರಾ..? ಮದುವೆ ಯಾವಾಗ..? ಈ ಎಲ್ಲ ಪ್ರಶ್ನೆಗಳಿಗೆ ನಿಖಿಲ್ ಉತ್ತರ ಕೊಟ್ಟಿದ್ದಾರೆ.

  ನೆಕ್ಸ್ಟ್ ಸಿನಿಮಾ ಯಾವುದು..?

  ಮುಂದಿನ ಸಿನಿಮಾ ಲೈಕಾ ಸಂಸ್ಥೆಯಿಂದ ಆಗಲಿದೆ. ಶೀಘ್ರದಲ್ಲೇ ವಿವರಗಳನ್ನು ಬಹಿರಂಗ ಪಡಿಸುತ್ತೇವೆ. ಸಿನಿಮಾ ಬಿಡೋದಿಲ್ಲ. ಅದು ಪ್ಯಾಷನ್. ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಇರುವ ಸಿನಿಮಾಗಳನ್ನು ಮಾಡುತ್ತೇನೆ.

  ರಾಜಕೀಯ, ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡ್ತೀರಾ..?

  ರಾಜಕೀಯದಲ್ಲಿ ನಮ್ಮನ್ನೇ ನಂಬಿರುವ ಕಾರ್ಯಕರ್ತರು, ಅಭಿಮಾನಿಗಳಿದ್ದಾರೆ. ಹೀಗಾಗಿ ರಾಜಕೀಯ ಬಿಡಲ್ಲ. ಎರಡನ್ನೂ ಸಮರ್ಥವಾಗಿ ಸರಿದೂಗಿಸಿಕೊಂಡು ಹೋಗುತ್ತೇನೆ. ಸಿನಿಮಾಗಳನ್ನೂ ಮಾಡುತ್ತೇನೆ.

  ಮದುವೆ ಯಾವಾಗ..? ಮಂಡ್ಯದ ಹುಡುಗೀನಾ..?

  ಅಪ್ಪ-ಅಮ್ಮ ನೋಡಿದ ಹುಡುಗಿಯನ್ನೇ ಮದುವೆಯಾಗುತ್ತೇನೆ. ಆದಷ್ಟು ಬೇಗ ಆಗುತ್ತೇನೆ. ಆಂಧ್ರದ ರಾಜಕಾರಣಿಯೊಬ್ಬಗ ಮಗಳ ಜೊತೆ ಮದುವೆ ಫಿಕ್ಸ್ ಎನ್ನುವುದು ಸುಳ್ಳು. ಅಪ್ಪಟ ಕನ್ನಡದ ಹುಡುಗಿಯನ್ನೇ ಮದುವೆಯಾಗುತ್ತೇನೆ.

 • ಸೀತಾರಾಮ ಕಲ್ಯಾಣ ಅದ್ಧೂರಿ ಶತದಿನೋತ್ಸವ..!

  seetharama kalyana team celebrates 100 days shooting

  ಸೀತಾರಾಮ ಕಲ್ಯಾಣ ರಿಲೀಸ್ ಆಗಿದ್ದು ಯಾವಾಗ ಎಂದು ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಇದು ಚಿತ್ರದ 100 ದಿನದ ಶೂಟಿಂಗ್ ಮುಗಿದಿದ್ದರ ಸಂಭ್ರಮ. ಮುಹೂರ್ತ, ಆಡಿಯೋ ರಿಲೀಸ್, ಟ್ರೇಲರ್, ಟೀಸರ್‍ಗಳ ಬಿಡುಗಡೆಗೆ ಸಂಭ್ರಮಿಸೋ ಚಿತ್ರತಂಡಗಳ ಮಧ್ಯೆ ಸೀತಾರಾಮ ಕಲ್ಯಾಣ ಚಿತ್ರತಂಡ ವಿಭಿನ್ನವಾಗಿ 100 ದಿನಗಳ ಶೂಟಿಂಗ್ ಮುಗಿದಿದ್ದಕ್ಕೆ ಸಂಭ್ರಮಾಚರಣೆ ಇಟ್ಟುಕೊಂಡಿತ್ತು.

  ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ನಾಯಕಿಯಾಗಿರೋ ಚಿತ್ರಕ್ಕೆ ಹರ್ಷ ನಿರ್ದೇಶನವಿದೆ. ಚಿತ್ರದಲ್ಲಿ 130ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರಂತೆ.

  ಇದು ಇತ್ತೀಚೆಗೆ ಕನ್ನಡದಲ್ಲಿ ಬಂದಿರುವ ಅತಿದೊಡ್ಡ ಫ್ಯಾಮಿಲಿ ಸ್ಟೋರಿ ಎಂದು ಹೇಳಿಕೊಂಡರು ನಿಖಿಲ್. ಇದು ರೀಮೇಕ್ ಅಲ್ಲ, ಅಪ್ಪಟ ನಮ್ಮ ಮಣ್ಣಿನ ಸೊಗಡಿರುವ ಸ್ವಮೇಕ್ ಸಿನಿಮಾ ಎಂದರು ನಿರ್ದೇಶಕ ಹರ್ಷ. ಹೆಚ್ಚೂ ಕಡಿಮೆ 100 ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹರಿದಿದ್ದು ಸಂಭ್ರಮ, ಸಡಗರದ ಹೊಳೆ.

 • ಸೀತಾರಾಮ ಕಲ್ಯಾಣ.. ಪೈಸಾ ವಸೂಲ್ ಸಿನಿಮಾ

  seetharama kalyana is family entertainer

  ನಿಖಿಲ್ ಕುಮಾರಸ್ವಾಮಿ ಅಭಿನಯದ 2ನೇ ಸಿನಿಮಾ ಇದೇ ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ. ಯುವರಾಜ ನಿಖಿಲ್‍ಗೆ ಡಿಂಪಲ್ ರಾಣಿ ರಚಿತಾ ರಾಮ್ ಜೋಡಿ. ಎ.ಹರ್ಷ ನಿರ್ದೇಶನದ ಭಾರಿ ನಿರೀಕ್ಷೆಯ ಸಿನಿಮಾ ಇದು. 

  ಚಿತ್ರದಲ್ಲಿ ಎಲ್ಲವೂ ಇದೆ. ಎಲ್ಲರೂ ಥ್ರಿಲ್ ಆಗುವಂತಹ ಆ್ಯಕ್ಷನ್, ಖುಷಿಯಾಗುವಂತಹ ಲವ್ ಸ್ಟೋರಿ, ಎಮೋಷನ್, ಕಾಮಿಡಿ.. ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿರುವ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಸಿನಿಮಾ ಎಂಬ ಭರವಸೆ ಕೊಟ್ಟಿದ್ದಾರೆ ಹರ್ಷ.

  ಪ್ರೀತಿ-ಪ್ರೇಮ-ಪ್ರಣಯಕ್ಕೆ ನಿಖಿಲ್-ರಚಿತಾ, ಕಾಮಿಡಿಗೆ ಚಿಕ್ಕಣ್ಣ, ಸಾಧು, ನಯನಾ, ಶಿವರಾಜ್ ಕೆ.ಆರ್.ಪೇಟೆ ಇದ್ದರೆ, ಸಾಹಸ ನಿರ್ದೇಶನ ರಾಮ್-ಲಕ್ಷ್ಮಣ್ ಜೋಡಿಯದ್ದು. ಒಟ್ಟಾರೆ ಮಜಾ ಮೂವಿ ಎನ್ನುತ್ತಿದೆ ಚಿತ್ರತಂಡ.

 • ಸೀತಾರಾಮ ಕಲ್ಯಾಣದಲ್ಲಿ ಇಂಥಾ ಸ್ಪೆಷಲ್ಲುಗಳೂ ಇವೆ..!

  specialties of seetharama kalyana

  ಸೀತಾರಾಮ ಕಲ್ಯಾಣ... ಮುಖ್ಯಮಂತ್ರಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನಿರ್ಮಾಣದ, ನಿಖಿಲ್ ಕುಮಾರಸ್ವಾಮಿ ಅಭಿನಯದ 2ನೇ ಸಿನಿಮಾ. ನಿಖಿಲ್‍ಗೆ ಜೊತೆಯಾಗಿರುವುದು ರಚಿತಾ ರಾಮ್. ನಿರ್ದೇಶಕ ಎ. ಹರ್ಷ. ಹರ್ಷ ಇದುವರೆಗೆ ಮಾಡಿರುವುದೆಲ್ಲ ಮಾಸ್ ಸಿನಿಮಾಗಳೇ. ಕೌಟುಂಬಿಕ ಕಥೆಗಳಿಗೆ ಮಾಸ್ ಟಚ್ ಕೊಟ್ಟು ಕಥೆ ಹೇಳುವ ಶೈಲಿ ಹರ್ಷಗೆ ಕರತಲಾಮಲಕ. ಇಷ್ಟೆಲ್ಲ ಇದ್ದರೂ ಈ ಚಿತ್ರದಲ್ಲಿ ಇದಕ್ಕೆ ತದ್ವಿರುದ್ಧವಾದ ವಿಶೇಷಗಳಿವೆ.

  ಡ್ಯುಯೆಟ್ ಸಾಂಗ್ ಇಲ್ಲ - ಚಿತ್ರದ ಹಾಡುಗಳು ಹೃದಯ ತಟ್ಟುವಂತಿವೆ. ಪ್ರೇಮಗೀತೆಗಳಿವೆ. ಆದರೆ, ಚಿತ್ರದಲ್ಲಿ ಡ್ಯುಯೆಟ್ ಸಾಂಗ್ ಇಲ್ವಂತೆ..!

  ಕನಸಿನ ಹಾಡೂ ಇಲ್ಲ - ಹೀರೋ.. ಹೀರೋಯಿನ್ ಎಲ್ಲೋ ಇರ್ತಾರೆ. ಹಾಡು ಬರುತ್ತೆ. ಅವರು ಇನ್ನೆಲ್ಲೋ ಹೋಗ್ತಾರೆ.. ಮತ್ತೆಲ್ಲೋ ಹಾಡಿ ಕುಣಿಯುತ್ತಾರೆ. ಅದರೆ, ಈ ಚಿತ್ರದಲ್ಲಿ ಅಂತಹ ಕನಸಿನ ಹಾಡೂ ಇಲ್ಲ. ಅದಕ್ಕೆ ಕಾರಣ ಇಷ್ಟೆ. ಚಿತ್ರದಲ್ಲಿನ ಪ್ರತಿಯೊಂದರಲ್ಲೂ ಲೋಕಲ್ ಟೇಸ್ಟ್ ಇರಬೇಕು ಅನ್ನೋದು.

  ಹಾಡುಗಳೆಲ್ಲ ಮೇಲ್ ವರ್ಷನ್ ಹಾಡುಗಳು - ಅದು ಇನ್ನೊಂದು ಸ್ಪೆಷಲ್. ಫಿಮೇಲ್ ಧ್ವನಿ ಇಲ್ವೇ ಇಲ್ಲ. ಅರರೇ.. ಏನಿದು ಅಂದ್ರೆ.. ನಿರ್ದೇಶಕ ಹರ್ಷ.. ಸ್ಕ್ರಿಪ್ಟ್ ಇರೋದೇ ಹಾಗೆ ಅಂತಾರೆ. 

  ಒಟ್ಟಿನಲ್ಲಿ ಹಾಡು, ನೃತ್ಯಗಳ ಬಗ್ಗೆ ಭಾರಿ ಕೇರ್‍ಫುಲ್ ಆಗಿರುವ ಕೊರಿಯೋಗ್ರಾಫರ್ ಕೂಡಾ ಆಗಿದ್ದ ಹರ್ಷ, ಈ ಚಿತ್ರದಲ್ಲಿ ಬೇರೆಯದ್ದೇ ಟಚ್ ಕೊಟ್ಟಿದ್ದಾರೆ. ಸಿನಿಮಾ ಜನವರಿ 25ಕ್ಕೆ ರಿಲೀಸ್ ಆಗಲಿದೆ.

   

 • ಹೊಸಬರ ಚಿತ್ರಕ್ಕೆ ಹೆಚ್‍ಡಿಕೆ ಪುತ್ರ ಲಹರಿ ಪುತ್ರ ನಿರ್ಮಾಪಕರು..!

  nikhil kumaraswamy image

  ನಿಖಿಲ್ ಕುಮಾರಸ್ವಾಮಿ ನಿರ್ಮಾಪಕರಾಗುತ್ತಿದ್ದಾರೆ. ಅವರ ಜೊತೆಯಲ್ಲಿರೋದು ಲಹರಿ ಸಂಸ್ಥೆಯ ಚಂದ್ರು ಮನೋಹರ್. ಇವರಿಬ್ಬರೂ ಸೇರಿ ಎನ್‍ಕೆ ಎಂಟರ್‍ಟೈನ್‍ಮೆಂಟ್ ಬ್ಯಾನರ್‍ನಲ್ಲಿ ಸಂಗೀತ್ ಅನ್ನೋ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಸಾದ್ ಖಾನ್ ಅವರು ಹೇಳಿರೋ ಕಥೆ ಇಷ್ಟವಾಗಿದೆ. ಈಗ ಚಿತ್ರಕಥೆಯ ಕೆಲಸ ನಡೆಯುತ್ತಿದೆ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಸರಣಿಯ ವೆಬ್ ಸಿರೀಸ್ ಪೋಸ್ಟ್ ಪ್ರೊಡಕ್ಷನ್‍ನಲ್ಲಿರುವ ಸಾದ್ ಖಾನ್, ಅದು ಮುಗಿದ ನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

  ಈ ಚಿತ್ರದಲ್ಲಿ ನಿಖಿಲ್ ನಟಿಸುತ್ತಿಲ್ಲ. ಹೊಸಬರೇ ಇರಲಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದೇ ಈ ಚಿತ್ರ ಆರಂಭಿಸಿದ್ದೇವೆ ಎಂದಿದ್ದಾರೆ ನಿಖಿಲ್. ನವೆಂಬರ್‍ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery