ರಾಮ ರಾಮಾ ರೇ..ಒಂದು ಸಿನಿಮಾ ಗೆಲ್ಲಬೇಕಾದರೆ, ಸ್ಟಾರ್ ಗಳೇ ಇರಬೇಕಿಲ್ಲ. ಗಟ್ಟಿ ಕಥೆ ಇದ್ದರೂ ಗೆಲ್ಲಬಹುದು ಎಂದು ಸಾಬೀತು ಮಾಡಿದ್ದ ಸಿನಿಮಾ.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ಖೈದಿಯೊಬ್ಬ ಬದುಕಲೇಬೇಕೆಂದು ಆಸೆಯಿಂದ ಜೈಲಿನಿಂದ ತಪ್ಪಿಸಿಕೊಂಡು ಬರುವ ಕಥೆ, ಪೊಲೀಸರಿಂದ ತಪ್ಪಿಸಿಕೊಂಡು ಓಡುವಾಗ ಗಲ್ಲು ಹಾಕುವ ಕೆಲಸ ಮಾಡಿದ್ದವನ ಜೊತೆಗಿನ ಸ್ನೇಹದ ಕಥೆಯೇ ರಾಮ ರಾಮಾ ರೇ.
ಸತ್ಯಪ್ರಕಾಶ್ ನಿರ್ದೇಶನದ ಆ ಚಿತ್ರ ಸದ್ದಿಲ್ಲದೆ ಬಂದು ಸುದ್ದಿ ಮಾಡಿತ್ತು. ಈಗ ಆ ಚಿತ್ರದ ಅನುಭವಗಳನ್ನು ನಿರ್ದೇಶಕ ಸತ್ಯ ಪ್ರಕಾಶ್ ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾದ ಆ ಪುಸ್ತಕ ಬಿಡುಗಡೆಯಾಗಲಿದೆ. ಓದಿ..ಆನಂದಿಸಿ.