ಪತ್ರಕರ್ತೆ, ಲಂಕೇಶ್ ಪತ್ರಿಕೆಯ ಸಂಪಾದಕಿ, ವಿಚಾರವಾದಿಯಾಗಿದ್ದ, ನಾಡು ಕಂಡ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಅವರ ಮನೆಯ ಎದುರೇ ಹತ್ಯೆ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಒಬ್ಬರೇ ವಾಸಿಸುತ್ತಿದ್ದ ಗೌರಿ, ರಾತ್ರಿ 8 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಹಂತಕರ ಪತ್ತೆಗೆ 3 ವಿಶೇಷ ತಂಡ ರಚಿಸಲಾಗಿದೆ. ಖುದ್ದು ಡಿಜಿಯವರೇ ತನಿಖೆಯ ಉಸ್ತುವಾರಿ ನೋಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು, ವಿವಿಧ ಸಂಘಟನೆಗಳು ಹತ್ಯೆಗೆ ಆಘಾತ ವ್ಯಕ್ತಪಡಿಸಿವೆ.
ಒಂದೇ ನಿಮಿಷ..7 ಬಾರಿ ಫೈರಿಂಗ್..!
ಮೂವರು ಅಥವಾ ನಾಲ್ವರು ದುಷ್ಕರ್ಮಿಗಳು ಇಡೀ ದಿನ ಹೊಂಚು ಹಾಕಿ ಕೊಂದಿರಬಹುದು. ದುಷ್ಕರ್ಮಿಗಳು ಹಾರಿಸಿದ ಗುಂಡುಗಳು, ಗೌರಿ ಲಂಕೇಶ್ ಅವರ ಎದೆ ಹಾಗೂ ಹೊಟ್ಟೆಯನ್ನ ಸೀಳಿವೆ. ತುಂಬಾ ಹತ್ತಿರದಿಂದಲೇ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಕೇವಲ ಒಂದು ನಿಮಿಷದಲ್ಲಿ 7 ಬಾರಿ ಫೈರಿಂಗ್ ಮಾಡಿದ್ದಾರೆ.2 ಬುಲೆಟ್ ಹಣೆಗೆ, ಇನ್ನು ನಾಲ್ಕು ಗುಂಡು ಎದೆಗೆ ಹೊಕ್ಕಿವೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಎದುರು ನೋಡಲಾಗುತ್ತಿದೆ