` gauri lankesh, - chitraloka.com | Kannada Movie News, Reviews | Image

gauri lankesh,

 • ಗೌರಿ ಲಂಕೇಶ್, ಕಲಬುರ್ಗಿ ಹೊಸ ಸಿನಿಮಾ - EXCLUSIVE

  praveen to produce movie on gauri lankesh

  ಗೌರಿ ಲಂಕೇಶ್ ಮತ್ತು ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ, ದೇಶಾದ್ಯಂತ ಸಂಚಲನ ಸೃಷ್ಟಿಸಿರುವುದು ಗುಟ್ಟೇನಲ್ಲ. ಒಂದು ಸಿನಿಮಾಗೆ ಆಗಬಹುದಾದ ಎಲ್ಲ ಅಂಶಗಳೂ ಈ ಹತ್ಯೆ ಪ್ರಕರಣದಲ್ಲಿವೆ. ಎರಡೂ ಪ್ರಕರಗಳಲ್ಲಿ ಇದುವರೆಗೆ ಸಣ್ಣದೊಂದು ಕ್ಲೂ ಸಹ ಸಿಕ್ಕಿಲ್ಲ. ಹೀಗಿರುವಾಗಲೇ ಅವರ ಹತ್ಯೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಚಿತ್ರರಂಗ ಉತ್ಸುಕತೆ ತೋರಿದೆ.

  ನಿರ್ಮಾಪಕ ಪ್ರವೀಣ್ ಕುಮಾರ್ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. 

  ಚಿತ್ರದ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಸ್ಕ್ರಿಪ್ಟ್ ಕೆಲಸ ಮುಗಿದ ಮೇಲೆ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ.

  ಅಂದಹಾಗೆ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿರುವುದು ನಿರ್ಮಾಪಕ ಪ್ರವೀಣ್ ಕುಮಾರ್. ಪಾಂಡುರಂಗ ವಿಠಲ, ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ, ಪಾಪಿಗಳ ಲೋಕದಲ್ಲಿ, ಮಹರ್ಷಿ..ಹೀಗೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಪ್ರವೀಣ್ ಕುಮಾರ್, ಕತೆಗಾರರೂ ಹೌದು. ಚಿತ್ರದ ಉಳಿದ ವಿವರಗಳನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕು.

  Related Articles :-

  ಗೌರಿ ಲಂಕೇಶ್ ಹತ್ಯೆಯ ಸಿನಿಮಾ

  ಗೌರಿ ಲಂಕೇಶ್​ ಹತ್ಯೆಗೆ ಚಿತ್ರರಂಗದ ಕಂಬನಿ

  Sandalwood condoles the death of Gauri Lankesh

 • Indira Lankesh sends notice to A M R Ramesh

  indira lankesh send notic tp amr ramesh

  Indira Lankesh, mother of the deceased journalist Gauri Lankesh has sent a notice to director A M R Ramesh not to make a film on the late journalist and if the film is made, then a defamation case to the tune of Rs 10 crores will be filed on Ramesh.

  After the death of Gauri Lankesh, A M R Ramesh had announced that he will make a film on her. Though Ramesh had announced that he will do a film, he had not specified when the film will be made. Meanwhile, Gauri's mother Indira Lankesh has sent a notice to Ramesh regarding the film.

  However, Ramesh has said that he will do the film for sure. 'The issue is in public domain and everybody is independent to do a film. Right now I am just doing research and the police are still investigating the case, The film will start once the case is concluded' says Ramesh.

 • Praveen To Produce Movie on Gauri Lankesh

  praveen to produce a movie on gauri lankesh

  Producer Ramakrishna (Praveen) has come forward to produce a film on murders of Gauri Lankesh and MM Kalaburgi. The title has been registered. Prof MM Kalburgi was murdered two years ago while Gauri Lankesh was murdered recently. The assassination of Gauri Lankesh created national and international news. The killers are still not identified or found in both cases. Producer Praveen is making film on this subject. 

  Producer Praveen told Chitraloka 'Title has registered the titles with the Karnataka Film Chamber of Commerce. The script for the films are being finalised and shooting will be announced shortly.'

  Related Articles :-

  ಗೌರಿ ಲಂಕೇಶ್, ಕಲಬುರ್ಗಿ ಹೊಸ ಸಿನಿಮಾ - EXCLUSIVE

  ಗೌರಿ ಲಂಕೇಶ್ ಹತ್ಯೆಯ ಸಿನಿಮಾ

   

 • Sandalwood condoles the death of Gauri Lankesh

  gauri lankesh condolence

  Many Sandalwood celebrities condoles the death of Gauri Lankesh who was shot dead by miscreants near her residence in Rajarajeshwari Nagar in Bangalore on Tuesday night.

  Many Sandalwood celebrities including Upendra, Priyanka Upendra, Dhananjay, Anu Prabhkar, Malavika and others condoled the death of the editor of the famous tabloid 'Lankesh'.

  'Duniya' Vijay who was shooting for his new film 'Kanaka' has observed a few minutes silence and has mourned the death of Gauri Lankesh.

 • ಗೌರಿ ಲಂಕೇಶ್​ ಹತ್ಯೆಗೆ ಚಿತ್ರರಂಗದ ಕಂಬನಿ

  tweets on gauri lankesh

  ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ ಪ್ರಕಾಶ್ ರೈ, ಸೃಜನ್ ಲೋಕೇಶ್, ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

  ಚಿತ್ರನಟ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಜಗ್ಗೇಶ್, ರಕ್ಷಿತಾ ಪ್ರೇಮ್, ಸಂಜನಾ ಗರ್ಲಾನಿ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಬೆಂಗಳೂರಿನ ನೆಮ್ಮದಿಗೆ ಒಳ್ಳೆಯದಲ್ಲ. ನೆಮ್ಮದಿಯ ಸಮಾಜಕ್ಕೆ ಇದು ಉತ್ತಮವಲ್ಲ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

  Related Articles :-

  Sandalwood condoles the death of Gauri Lankesh

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

 • ಗೌರಿ ಲಂಕೇಶ್ ಹತ್ಯೆಯ ಸಿನಿಮಾ

  movie on gauri lankesh

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿದೆ. ದೇಶ, ವಿದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ದಿಜೀವಿಗಳು ಖಂಡಿಸುತ್ತಿದ್ದಾರೆ. ಕೊಂದವರು ಯಾರು..? ಏಕೆ ಕೊಂದರು..? ಎಂಬ ಬಗ್ಗೆ ಎಸ್‍ಐಟಿ ಅಧಿಕಾರಿಗಳಿಗೇ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಬುದ್ದಿಜೀವಿಗಳು ಬಲಪಂಥೀಯರ ಮೇಲೆ, ಬಲಪಂಥೀಯರು ನಕ್ಸಲೀಯರ ಮೇಲೆ ದೂರುತ್ತಿದ್ದಾರಾದರೂ, ತನಿಖೆಯಲ್ಲಿ ಮಹತ್ವದ ಪ್ರಗತಿ ಎನ್ನುವುದು ಇನ್ನೂ ಆಗಿಲ್ಲ.

  ಈಗಿರುವಾಗಲೇ ಎ ಎಂ ಆರ್ ರಮೇಶ್, ಸಿನಿಮಾ ಮಾಡಲು ಹೊರಟಿದ್ದಾರೆ. ನೈಜ ಕಥೆಯ ಚಿತ್ರಗಳಿಗೆ ಹೆಸರಾಗಿರುವ ರಮೇಶ್, ಗೌರಿ ಲಂಕೇಶ್ ಹತ್ಯೆಯ ಪ್ರತಿ ವಿವರವನ್ನೂ ಕಲೆ ಹಾಕುತ್ತಿದ್ದಾರೆ. ಮೂವರು ವಿಚಾರವಾದಿಗಳ ಹತ್ಯೆ, ಒಂದೇ ಗನ್ನು, ಒಂದೇ ರೀತಿಯ ಕೊಲೆ, ಮನೆ ಮುಂದೆಯೇ ಕೊಲೆ..ಇವಿಷ್ಟೂ ನನ್ನನ್ನು ಗಮನ ಸೆಳೆದ ಅಂಶಗಳು. ಈ ಹಿನ್ನೆಲೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ ಎನ್ನುತ್ತಾರೆ ರಮೇಶ್.

  ತನಿಖೆ ಮುಗಿಯುವ ಮುನ್ನ ಇವರೇ ಹಂತಕರು ಎಂದು ಜಡ್ಜ್‍ಮೆಂಟ್ ಕೊಡುವುದು ತಪ್ಪು ಎನ್ನುವ ರಮೇಶ್, ಹತ್ಯೆ ಮಾಡಿದ್ದನ್ನು ಖಂಡಿಸುತ್ತಾರೆ. ಆದರೆ, ಕೊಲೆಗಾರರು ಯಾರು ಎಂಬುದೇ ಗೊತ್ತಿಲ್ಲದೇ ಇರುವಾಗ, ಸಿನಿಮಾ ಹೇಗೆ ಮಾಡ್ತಾರೆ ಅನ್ನೋದೇ ದೊಡ್ಡ ಕುತೂಹಲ. ಗೌರಿ ಹತ್ಯೆಯ ಸಂಚಿನಷ್ಟೇ ನಿಗೂಢ.

 • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

  gauri lankesh murdered

  ಪತ್ರಕರ್ತೆ, ಲಂಕೇಶ್ ಪತ್ರಿಕೆಯ ಸಂಪಾದಕಿ, ವಿಚಾರವಾದಿಯಾಗಿದ್ದ, ನಾಡು ಕಂಡ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಅವರ ಮನೆಯ ಎದುರೇ ಹತ್ಯೆ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಒಬ್ಬರೇ ವಾಸಿಸುತ್ತಿದ್ದ ಗೌರಿ, ರಾತ್ರಿ 8 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. 

  ಹಂತಕರ ಪತ್ತೆಗೆ 3 ವಿಶೇಷ ತಂಡ ರಚಿಸಲಾಗಿದೆ. ಖುದ್ದು ಡಿಜಿಯವರೇ ತನಿಖೆಯ ಉಸ್ತುವಾರಿ ನೋಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು, ವಿವಿಧ ಸಂಘಟನೆಗಳು ಹತ್ಯೆಗೆ ಆಘಾತ ವ್ಯಕ್ತಪಡಿಸಿವೆ. 

  ಒಂದೇ ನಿಮಿಷ..7 ಬಾರಿ ಫೈರಿಂಗ್..!

  ಮೂವರು ಅಥವಾ ನಾಲ್ವರು ದುಷ್ಕರ್ಮಿಗಳು ಇಡೀ ದಿನ ಹೊಂಚು ಹಾಕಿ ಕೊಂದಿರಬಹುದು. ದುಷ್ಕರ್ಮಿಗಳು ಹಾರಿಸಿದ ಗುಂಡುಗಳು, ಗೌರಿ ಲಂಕೇಶ್ ಅವರ ಎದೆ ಹಾಗೂ ಹೊಟ್ಟೆಯನ್ನ ಸೀಳಿವೆ. ತುಂಬಾ ಹತ್ತಿರದಿಂದಲೇ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಕೇವಲ ಒಂದು ನಿಮಿಷದಲ್ಲಿ 7 ಬಾರಿ ಫೈರಿಂಗ್ ಮಾಡಿದ್ದಾರೆ.2 ಬುಲೆಟ್ ಹಣೆಗೆ, ಇನ್ನು ನಾಲ್ಕು ಗುಂಡು ಎದೆಗೆ ಹೊಕ್ಕಿವೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಎದುರು ನೋಡಲಾಗುತ್ತಿದೆ