` ananthu vs nushruth, - chitraloka.com | Kannada Movie News, Reviews | Image

ananthu vs nushruth,

 • Complaint Against Anantu Vs Nusrat

  ananthu vs nusruth

  A police complaint has been filed against the Kannada film Ananth vs Nusrat. An advocate has filed a complaint at the Vidhana Soudha police station today. The complaint says that the photo shoot for the film was held inside the High Court Building which is illegal.

  The complaint has been submitted along with the photographs and news reports about the film. The film star Vinay Rajkumar in the lead role in which he plays an advocate. Shooting for the film started a few weeks ago. Shooting and photography is not allowed inside the High Court building.

 • Last Schedule For Anantu Vs Nusrath

  ananthu vs nusrath last schedule

  The last schedule of shooting for Anantu Vs Nusrath starring Vinay Rajkumar has started. It is being held in a specially constructed set of a trial court. Vinay plays an  advocate in the film named Anantha Krishna Kramadharitthaya.

  Nusrat Fathima Baig is the name of the female lead character. The film is directed by debutante Sudheer Shanbogue. The film is said to be a legal thriller with much of the scenes being shot in a court room set.

  After Siddartha and Run Anthony, Vinay has taken time to select his next film knowing that much rides on it. Anantu Vs Nusrath has created a buzz ever since its name was announced.

   

 • Latha Hegade's Photo Shoot Held For Ananthu V/s Nusrath

  ananthu vs nusruth

  Vinay Rajakumar's third film 'Ananthu Versus Nusrath' was launched early this month. Though the movie was launched the heroine for the film was not selected. Now Latha Hegade has not only been selected as the heroine,  but the photo shoot was also held on Saturday.

  The photo shoot of Nusrath's character played by Latha Hegade was held at the Cottonpet Darga in Bangalore on Saturday. Latha Hegade and others were present.

  While, Latha Hegade is portraying the title role of Nusrath, Vinay Rajakumar will be seen as Ananthu. The film is a love story set in the court backdrop. Debuntane Sridhar Shanbhogue is not only directing the film, but also has scripted it. The shooting for the film which is being produced by Manikya Productions will be starting from the month of October.

   

 • ಅನಂತು v/s ನುಸ್ರತ್ ವಿರುದ್ಧ ಕೇಸ್

  case aganist ananthu vs nusruth

  ವಿನಯ್ ರಾಜ್‍ಕುಮಾರ್ ಆಭಿನಯದ ಅನಂತು v/s ನುಸ್ರತ್ ಕಾನೂನು ಸಮರ ಎದುರಿಸುವ ಸಮಸ್ಯೆಗೆ ಸಿಲುಕಿದೆ. ಚಿತ್ರದ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

  ಚಿತ್ರದ ಫೋಟೋಶೂಟ್‍ನ್ನು ಹೈಕೋರ್ಟ್ ಬಿಲ್ಡಿಂಗ್‍ನಲ್ಲಿ ಮಾಡಿರುವುದು ಕಾನೂನು ಬಾಹಿರ ಎಂದು ವಕೀಲರೊಬ್ಬರು ದೂರು ನೀಡಿದ್ದಾರೆ. ಚಿತ್ರತಂಡ ರಿಲೀಸ್ ಮಾಡಿದ್ದ ಫೋಟೋಗಳು ಹಾಗೂ ಪೋಸ್ಟರ್‍ಗಳನ್ನೇ ದಾಖಲೆಗಳನ್ನಾಗಿ ನೀಡಲಾಗಿದೆ. ಇತ್ತೀಚೆಗೆ ಇದು ವಿವಾದವಾಗಿತ್ತು. ಆದರೆ, ವಕೀಲರ ಪರಿಷತ್ ಇದನ್ನು ಸಮರ್ಥಿಸಿಕೊಂಡಿತ್ತು. 

 • ಮಗನ ಚಿತ್ರಕ್ಕೆ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಶುಭ ಹಾರೈಕೆ

  vinay rajkumar's new movie

  ಸಿದ್ಧಾರ್ಥ ನಂತರ ವಿನಯ್ ರಾಜ್​ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ಅನಂತು ವರ್ಸಸ್ ನುಸ್ರತ್. ಲಾಯರ್ ವೇಷದಲ್ಲಿ ಕಾಣಿಸಿಕೊಳ್ತಿರೋ ವಿನಯ್ ರಾಜ್​ಕುಮಾರ್​ಗೆ ಇದು 3ನೇ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ವಿಶೇಷವೆಂದರೆ, ಮಗನ ಚಿತ್ರದ ಮುಹೂರ್ತಕ್ಕೆ ಅಪ್ಪ, ಚಿಕ್ಕಪ್ಪ ಮತ್ತು ದೊಡ್ಡಪ್ಪ ಸಾಕ್ಷಿಯಾಗಿದ್ದು.

  ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರಕ್ಕೆ ಅಪ್ಪ ರಾಘವೇಂದ್ರ ರಾಜ್​ಕುಮಾರ್, ದೊಡ್ಡಪ್ಪ ಶಿವರಾಜ್ ಕುಮಾರ್, ಮತ್ತು ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಶುಭ ಹಾರೈಸಿದರು. ಸುಧೀರ್ ಶಾನ್​ಭೋಗ್ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೋಡಕ್ಷನ್ ನಿರ್ಮಾಣವಾಗುತ್ತಿದೆ.

  Related Articles :-

  ಲಾಯರ್ ಆದರಾ ವಿನಯ್ ರಾಜ್​ಕುಮಾರ್..?

 • ಲಾಯರ್ ಒಬ್ಬನ ಪ್ರೀತಿ ನಿವೇದನೆ ಹೀಗಿರುತ್ತೆ ನೋಡಿ.

  love songs of a lawyer in ananthu vs nushruth

  ಪ್ರೀತಿಯನ್ನು ಹೇಳಿಕೊಳ್ಳೋಕೆ ಇದುವರೆಗೆ ಹೂವು, ಹಣ್ಣು, ಸೂರ್ಯ, ಚಂದ್ರ, ಚಾಕೊಲೇಟು, ಮಂಜು, ಮಳೆಯನ್ನಷ್ಟೇ ನೋಡಿದ್ದ ಪ್ರೇಕ್ಷಕರಿಗೆ ಇದು ಹೊಸ ಭಾಷೆಯ ಪ್ರೀತಿ. ಅಪ್ಪಟ ಲಾಯರ್ ಭಾಷೆಯ ಪ್ರೀತಿ. ಹೀಗೂ ಲವ್ ಸಾಂಗ್ ಬರೆಯಬಹುದಾ ಎಂದು ಅಚ್ಚರಿ ಹುಟ್ಟಿಸುವಂತೆ ಒಂದು ಹಾಡು ಕಟ್ಟಿಕೊಟ್ಟಿದೆ ಅನಂತು V/s ನುಸ್ರತ್ ಸಿನಿಮಾ ತಂಡ.

  ಈಗ ತಾನೇ ಜಾರಿಯಾಗಿದೆ ಪ್ರೀತಿ ಎಂದು ಶುರುವಾಗುವ ಹಾಡಿನಲ್ಲಿ ಬಳಸಿರುವುದ ಅಪ್ಪಟ ಕೋರ್ಟ್ ಭಾಷೆ. ವಿಚಾರಣೆಯ ಹಂತ, ಪೂರ್ವಾಪರ, ಕಾನೂನು, ಆರೋಪಿ, ವಾದ ಮಂಡನೆ, ಮುಂದೂಡಿಕೆ, ಕರಾರು, ದಾಖಲಾತಿ, ಮೀಸಲಾತಿ, ಹಾಜರಾತಿ, ಪ್ರಕರಣ, ಜಾಮೀನು.. ಹೀಗೆ ಅಪ್ಪಟ ಕೋರ್ಟಿನಲ್ಲಿ ಬಳಸುವ ಪದಗಳನ್ನೇ ಇಟ್ಟುಕೊಂಡು ಚೆಂದದ ಹಾಡು ಕಟ್ಟಿಕೊಟ್ಟಿದ್ದಾರೆ ಗೀತ ಸಾಹಿತಿ ಸಿದ್ದು ಕೋಡಿಪುರ ಮತ್ತು ಸಂಗೀತ ನಿರ್ದೇಶಕ ಸುನಾದ್ ಗೌತಮ್.

  ವಿನಯ್ ರಾಜ್‍ಕುಮಾರ್, ಲತಾ ಹೆಗ್ಡೆ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ವಿನಯ್, ಲಾಯರ್ ಅನಂತ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಡ್ಜ್ ನುಸ್ರತ್ ಫಾತಿಮಾ  ಪಾತ್ರದಲ್ಲಿ ಕಾಣಿಸಿಕೊಂಡಿರೋದು ಲತಾ ಹೆಗ್ಡೆ. ಹಾಸ್ಯ ಮಿಶ್ರಿತ ನವಿರು ಪ್ರೇಮಕಥೆಗೆ ಸುಧೀರ್ ಶಾನ್‍ಬೋಗ್ ನಿರ್ದೇಶನವಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ರೆಡಿಯಾಗುತ್ತಿದೆ.

 • ವರ್ಷದ ಕೊನೆ ಸಿನಿಮಾ ಆಗುತ್ತಾ ಅನಂತು V/s ನುಸ್ರತ್..?

  ananthu vs nushruth may release this year end

  ಅನಂತು V/s ನುಸ್ರತ್. ವಿನಯ್ ರಾಜ್‍ಕುಮಾರ್, ಲತಾ ಹೆಗಡೆ ಕಾಂಬಿನೇಷನ್‍ನ ಸಿನಿಮಾ. ಸುಧೀರ್ ಶಾನುಭೋಗ್ ನಿರ್ದೇಶನದ ಈ ಸಿನಿಮಾ, ವರ್ಷದ ಕೊನೆಯ ಸಿನಿಮಾ ಆಗುವ ಸಾಧ್ಯತೆಗಳಿವೆ. ಚಿತ್ರವನ್ನು ಡಿಸೆಂಬರ್ 28ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

  ಅನಂತು  V/s   ನುಸ್ರತ್ ಚಿತ್ರವನ್ನು ಡಿಸೆಂಬರ್ ಆರಂಭದಲ್ಲೇ ರಿಲೀಸ್ ಮಾಡಬೇಕಿತ್ತು. ಸ್ಟಾರ್ ನಟರ ಚಿತ್ರಗಳೊಂದಿಗೆ ಕ್ಲಾಶ್ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಮುಂದೆ ಮುಂದೆ ಹೋಗಿರುವ ಸಿನಿಮಾ, ಕೆಜಿಎಫ್ ರಿಲೀಸ್ ಆದ ನಂತರದ ವಾರದಲ್ಲಿ ರಿಲೀಸ್ ಆಗಲಿದೆ. ಚಿತ್ರದ ಟ್ರೇಲರ್, ಹಾಡುಗಳು ಜನಮೆಚ್ಚುಗೆ ಗಳಿಸಿದ್ದು, ಜಡ್ಜ್ ಮತ್ತು ಲಾಯರ್ ನಡುವಣ ಲವ್‍ಸ್ಟೋರಿ ಚಿತ್ರದಲ್ಲಿದೆ.

 • ವಿನಯ್ ರಾಜ್‍ಕುಮಾರ್ ಜೊತೆ ಕಿಲಾಡಿ ನಯನಾ..

  nayana in ananthu vs nusruth

  ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಯನಾ. ಹಾಸ್ಯದಲ್ಲಂತೂ ಎತ್ತಿದ ಕೈ. ಹೀಗಾಗಿಯೇ ಚಿತ್ರರಂಗದಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗ ನಯನಾ, ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು V/S ನುಸ್ರತ್‍ನಲ್ಲಿ ನಟಿಸುತ್ತಿದ್ದಾರೆ.

  ಅನಂತು.. ಚಿತ್ರದಲ್ಲಿ ಲತಾ ಹೆಗಡೆ ನಾಯಕಿ. ನಯನಾ ಅವರದ್ದು ಶಾಂತಿಲಕ್ಷ್ಮಿ ಎಂಬ ಪಾತ್ರ. ಕಾಮಿಡಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಧೀರ್ ನಿರ್ದೇಶನದ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

 • ಹೈಕೋರ್ಟ್‍ನಲ್ಲಿ ವಿನಯ್ ರಾಜ್‍ಕುಮಾರ್ ಫೋಟೋ ವಿವಾದ

  shooting in high court creates controversy

  ಇತ್ತೀಚೆಗಷ್ಟೇ ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ಮುಹೂರ್ತವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಹೀಗಿರೋವಾಗ್ಲೇ ಚಿತ್ರಕ್ಕೊಂದು ವಿವಾದ ಅಂಟಿಕೊಂಡಿದೆ. ಅದು ಚಿತ್ರದ ಫೋಟೋಶೂಟ್‍ಗೆ ಸಂಬಂಧಿಸಿದ್ದು.

  ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಫೋಟೋಶೂಟ್ ಹೈಕೋರ್ಟ್ ಆವರಣ ಮತ್ತು ಲೈಬ್ರೆರಿಯಲ್ಲಿ ನಡೆಸಲಾಗಿದೆ. ವಿವಾದಕ್ಕೆ ಕಾರಣವಾಗಿರುವುದು ಇದೇ ವಿಚಾರ. ಏಕೆಂದರೆ, ಹೈಕೋರ್ಟ್ ಆವರಣದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧ.

  ಭದ್ರತೆಗಾಗಿ ಹೈಕೋರ್ಟ್ ಆವರಣದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ನಡೆಯುವ ಧ್ವಜಾರೋಹಣದಲ್ಲಿ ಮಾಧ್ಯಮಗಳು ಕ್ಯಾಮೆರಾ ತರಬಹುದು, ವಿಡಿಯೋ ಶೂಟ್ ಮಾಡಬಹುದು. ನಿವೃತ್ತ ನ್ಯಾಯಮೂರ್ತಿಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಕೂಡಾ ಇದಕ್ಕೆ ಅವಕಾಶವಿದೆ. ಆದರೆ, ಅನಂತು ವ/ಸ ನುಸ್ರತ್ ಫೋಟೋಶೂಟ್ ನಡೆದಿರುವುದು ರಿಜಿಸ್ಟ್ರಾರ್ ಗಮನಕ್ಕೆ ಬಂದಿಲ್ಲ.

  ಈ ಕುರಿತು ವಕೀಲ ಜಿ.ಆರ್. ಮೋಹನ್ ಎಂಬುವರು ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕೇಳಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಈ ಕುರಿತು ಬಾರ್ ಅಸೋಸಿಯೇಷನ್ ಅವರನ್ನು ಸಂಪರ್ಕಿಸಿದಾಗ ಗೊತ್ತಾಗಿರುವುದು ಇಷ್ಟು. ರಾಜ್ ಕುಟುಂಬ ಅನುಮತಿಯಿಲ್ಲದೆ ಶೂಟ್ ಮಾಡಿಲ್ಲ. ಫೋಟೋ ಶೂಟ್‍ಗೆ ಅನುಮತಿಗಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದರು. ಕನ್ನಡ ಮತ್ತು ಕರ್ನಾಟಕಕ್ಕೆ ಇಷ್ಟು ದೊಡ್ಡ ಸೇವೆ ಮಾಡಿರುವ ರಾಜ್ ಕುಟುಂಬದವರ ಮನವಿಗೆ ಇಲ್ಲ ಎನ್ನುವುದು ನಮಗೆ ಸಾಧ್ಯವಿರಲಿಲ್ಲ. ಹೀಗಾಗಿ ಅನುಮತಿ ಕೊಟ್ಟೆವು. ಅವರು ಸಂಘದ ಲೈಬ್ರೆರಿ ಕೋಣೆಯಲ್ಲಿ ಹಾಗೂ ಸಂಘದ ಆವರಣದಲ್ಲಿ ಶೂಟ್ ಮಾಡಿದ್ದಾರೆ. ಇದರಲ್ಲಿ ಪ್ರಮಾದವೇನೂ ಆಗಿಲ್ಲ ಎಂದಿದ್ದಾರೆ.

  ಅಲ್ಲದೆ ಶೂಟಿಂಗ್ ನಡೆದಿರುವುದು ಆಗಸ್ಟ್ 15ರಂದು. ಸ್ವಾತಂತ್ರ್ಯ ದಿನಾಚರಣೆಯ ರಜೆ ವೇಳೆ ನಡೆದಿರುವ ಶೂಟಿಂಗ್‍ನಲ್ಲಿ ಭದ್ರತಾ ಲೋಪವೇನೂ ಆಗಿಲ್ಲ ಎಂಬ ವಾದವೂ ಇದೆ.