` phailwan, - chitraloka.com | Kannada Movie News, Reviews | Image

phailwan,

  • 8 ಭಾಷೆಗಳಲ್ಲಿ ಬರ್ತಾನೆ ಪೈಲ್ವಾನ್ ಕಿಚ್ಚ

    sudeep's phailwan in 8 different languages

    ಕನ್ನಡದಲ್ಲೀಗ ಬಹುಭಾಷಾ ಸಿನಿಮಾಗಳು ಹೊಸದೇನೂ ಅಲ್ಲ. ಆದರೀಗ ಕಿಚ್ಚ ಸುದೀಪ್, ಬಹುಭಾಷೆಯಲ್ಲೂ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಕಿಚ್ಚ ಸುದೀಪ್‍ರ ಪೈಲ್ವಾನ್ ಸಿನಿಮಾ ಒಂದಲ್ಲ, ಎರಡಲ್ಲ.. 8 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ, ಬೋಜ್‍ಪುರಿ (ಬಿಹಾರದ ಭಾಷೆ), ಬೆಂಗಾಲಿಯಲ್ಲೂ ಪೈಲ್ವಾನ್ ಸಿನಿಮಾ ತೆರೆ ಕಾಣಲಿದೆ.

    ಸುದೀಪ್ ಚಿತ್ರಗಳಿಗೆ ಉತ್ತರ ಭಾರತದಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ಹೀಗಾಗಿಯೇ ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಕೃಷ್ಣ. ಡಿಸೆಂಬರ್‍ನಲ್ಲಿ ಪೈಲ್ವಾನ್ ಚಿತ್ರದ ಟೀಸರ್‍ವೊಮಂದನ್ನು ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಶೂಟಿಂಗ್ ಜೊತೆ ಜೊತೆಯಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೆಯುತ್ತಿವೆ. ಲೋಕಸಭೆ ಚುನಾವಣೆಗೆ ಮುನ್ನ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಕೃಷ್ಣ.

  • Demand For Phailwan Just From Posters!

    pjailwan movi image

    There is demand for Sudeep's new film Phailwan with just the launch of the posters! Surprising but true, but the demand for the distribution, release in other states, dubbing and remake enquires have started pouring in just from the release of the two posters of the film. The film is yet to be officially launched.

    Kiccha Sudeep's new movie Phailwan has been announced and the official trailer will be launched on his birthday which is on September 2nd. Two days ago two poster designs have been released. The movie is directed by Cinematographer turned director Krishna.

    Speaking to Chitraloka director Krishna said, "Being a cinematographer I had the wish to produce a film. I came to this filed from the movie Heart Beats and was lucky to work as a cinematographer for the movie Ranga SSLC. From Mungaru Male I came to limelight. Till now I have worked with major actors and my dream was to direct a movie. In 2014 I directed Gajakasari starring Yash produced by Jayanna which was a big hit. After this I directed Hebbuli starring Sudeep produced by Raghunath and Umapathi which again became a hit. After that I wanted to produce a movie under my banner. Sudeep supported me a lot and now I am doing the movie Phailwan which is starting in October."

    Sudeep was shooting for The Villain in Thailand when the photo shoot for Phailwan was done. Krishna said, "We wanted to do the photoshoot and The Villian shooting was going on in Thailand. We went to Bangkok and did some photo shoots which we wanted to release for Sudeep's birthday and announce the title of our movie. The posters which we have released is not the first look of the movie. The first look will be released soon. This movie is connected to phailwans and boxing. Sudeep is getting training to build up his body and local trainers are training him now. Only after the shooing of The Villain schedule ss completed will we do the proper photoshoot and release it." Krishna would only say that Sudeep is doing the role of a boxer but did not reveal more. 

    For this movie international makeup artistes and boxing trainers will be introduced in Kannada. "The body what you are going to see of Sudeep on screen will be different. This movie is not a remake but an original story. When I narrated a thread to Sudeep he approved and asked me to develop the story and now it has been finalised. Since The Villian shooting is in progress we don’t want to approach other cast members now. Once it is done we will announce the final star cast" said Krishna.

    Related Articles :-

    ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

     

  • Kabir Duhan Singh to act in 'Phailwan'

    kabir duhan singh to act in sudeep's phailwan

    Actor Kabir Duhan Singh who acted in films like 'Hebbuli' and 'Atiratha' is all set to play a prominent role in Sudeep's new film 'Phailwan' to be directed by S Krishna.

    Though Kabir's role in the film is not divulged, sources say he plays a prominent role in the film and Kabir has been working out hard in the gym to tone his body. Now his body is in full shape and the actor is ready to face the camera.

    'Phailwan' is being produced by Swapna Krishna and written and directed by S Krishna. Karunakar is the cameraman, while Arjun Janya is the music director

  • Pailwaan Kusthi Look Poster For Kichcha Fans

    pailwaan kusthi look poster for sudeep fans

    Ever since Abhinaya Chakravarthy Kichcha Sudeepa starrer ‘Pailwaan’ took off, it has raised the expectations to another level. With the latest news being the movie releasing in eight languages including Kannada, the movie lovers especially the fans of Kichcha Sudeepa are eagerly waiting for a glimpse of Pailwaan.

    Owing to the demands of Kichcha Sudeepa fans, the Pailwaan film team headed by its director Krishna has planned for an exclusive kusthi look poster from film showcasing the star in action.

    The director has announced that Pailwaan Kusthi poster will be released on Saturday by 6.30 pm and that it is exclusively done due to the demands of Kichcha fans. He had also thanked the fans for pushing him into it.  

    The director while saying that he has loved the work on the look poster, further adds that he has a small surprise from his team in it. It's a kusthi look poster. Kusthi poster and more will be released soon post the teaser which is on its way,” director Krishna says.

  • ಒಂದು ಪೋಸ್ಟರ್, ಎರಡು ಟೀಸರ್.. ಕಿಚ್ಚನ ಹಬ್ಬ..

    sudeep gets special gifts on his borthday

    ಕಿಚ್ಚ ಸುದೀಪ್‍ಗೆ ಹುಟ್ಟುಹಬ್ಬ. ಅಭಿಮಾನಿಗಳಿಗೆ ಕಿಚ್ಚನ ಹಬ್ಬ. ಈ ಬಾರಿಯ ಹಬ್ಬಕ್ಕೆ ಎರಡು ಚಿತ್ರಗಳ ನಿರ್ಮಾಪಕರು, ವಿಶೇಷ ಟೀಸರ್‍ವೊಂದನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

    ಹೆಬ್ಬುಲಿ ನಿರ್ದೇಶಿಸಿದ್ದ ಕೃಷ್ಣ, ಸುದೀಪ್ ಅವರಿಗಾಗಿ ಪೈಲ್ವಾನ್ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ಕಟ್ಟುಮಸ್ತಾದ ಹುರಿಗಟ್ಟಿದ ದೇಹದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಪ್ನ ಕೃಷ್ಣ ನಿರ್ಮಾಣದ ಪೈಲ್ವಾನ್ ಟೀಸರ್‍ನಲ್ಲಿ ಸುದೀಪ್ ಅವರನ್ನು ನೋಡುವುದೇ ಒಂದು ಸೊಗಸು.

    ಇನ್ನು ಕೋಟಿಗೊಬ್ಬ3 ಚಿತ್ರದ ಟೀಸರ್ ಕೂಡಾ ಹೊರಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವಂತಿದೆ. ಚಿಮ್ಮಿದ ನಾಣ್ಯದಲ್ಲಿ ಸುದೀಪ್ ಮುಖ ಬರುವಂತೆ ಮಾಡಿರುವ ಟೀಸರ್, ಮೆಚ್ಚುವಂತಿದೆ.

    ಇನ್ನು ತೆಲುಗಿನ ಸೈರಾ ನರಸಿಂಹರೆಡ್ಡಿ ಚಿತ್ರ ತಂಡವೂ ಕೂಡಾ ಸುದೀಪ್ ಅವರ ಪೋಸ್ಟರ್‍ನ್ನು ರಿಲೀಸ್ ಮಾಡಿ ಶುಭ ಕೋರಿದೆ. ಚಿರಂಜೀವಿ ಅವರು ಪ್ರಧಾನ ಪಾತ್ರದಲ್ಲಿರೋ ಸ್ವಾತಂತ್ರ್ಯ ಹೋರಾಟಗಾರನ ಕಥೆ ಹೊಂದಿರುವ ಚಿತ್ರದಲ್ಲಿ ಸುದೀಪ್, ಸೈರಾಗೆ ನೆರವು ನೀಡುವ ರಾಜನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಕಬೀರ್ ಸಾಧನೆಗೆ ಜೈಹೋ ಎಂದ ಕಿಚ್ಚ

    sudeep applauds kabir's commitment

    ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಸುದೀಪ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸುತ್ತಿರುವುದು ಕಬೀರ್ ದುಹಾನ್ ಸಿಂಗ್. ಹೆಬ್ಬುಲಿಯಾಗಿ ಸುದೀಪ್ ಎದುರು ವಿಲನ್ ಆಗಿ ಮಿಂಚಿದ್ದ ಕಬೀರ್, ಈಗ ಮತ್ತೊಮ್ಮೆ ಪೈಲ್ವಾನ್‍ಗಾಗಿ ತಯಾರಾಗುತ್ತಿದ್ದಾರೆ. 

    ಕೇವಲ 12 ವಾರಗಳಲ್ಲಿ 6 ಪ್ಯಾಕ್ ಮಾಡಿರುವ ಕಬೀರ್, ಮೈಯ್ಯನ್ನು ಹುರಿಗೊಳಿಸಿದ್ದಾರೆ. ಕಬೀರ್‍ರ ಶ್ರಮಕ್ಕೆ ಶರಣಾಗಿರುವುದು ಕಿಚ್ಚ ಸುದೀಪ್. ನಿಮ್ಮ ಕಮಿಟ್‍ಮೆಂಟ್‍ಗೊಂದು ಹ್ಯಾಟ್ಸಾಫ್ ಎಂದಿರುವ ಸುದೀಪ್‍ಗೆ  ನಿಮ್ಮ ಚಾರ್ಮ್‍ಗೆ ನಾನೂ ಸರಿಹೊಂದಬೇಕಿದೆ. ನಿಮ್ಮ ಹಾರೈಕೆ ಇರಲಿ ಎಂದಿದ್ದಾರೆ. ನಿಮ್ಮ ಬದ್ಧತೆ, ಪರಿಶ್ರಮಕ್ಕೆ ನಾನು ಸರಿದೂಗುವುದಿಲ್ಲ, ನಿಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಸುದೀಪ್.

    ಕಬೀರ್‍ರ ಬದ್ಧತೆ ನಿರ್ದೇಶಕ ಕೃಷ್ಣ ಅವರಿಗೂ ಇಷ್ಟವಾಗಿ ಹೋಗಿದೆ. ಅವರ ಪಾತ್ರ ನೆಗೆಟಿವ್ ಶೇಡ್‍ನಲ್ಲಿದೆ ಎನ್ನುವ ಕೃಷ್ಣ, ಅವರು ವಿಲನ್ ಎಂದು ಹೇಳೋದಿಲ್ಲ. ಕುತೂಹಲವನ್ನು ಕಾಯ್ದಿರಿಸಲಾಗಿದೆ.

  • ಕಿಚ್ಚನ ಚಿತ್ರಕ್ಕೆ ಬರುತ್ತಿದ್ದಾರೆ ಸುನಿಲ್ ಶೆಟ್ಟಿ

    suneil shetty in phailwan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಸುನಿಲ್ ಶೆಟ್ಟಿ ಆಯ್ಕೆಯಾಗಿದ್ದಾರೆ. ನಟಿಸುವುದು ಪಕ್ಕಾ. ಆದರೆ, ಸುನಿಲ್ ಶೆಟ್ಟಿ ಪಾತ್ರ ಏನು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 

    ಸುನಿಲ್ ಶೆಟ್ಟಿ ನಟಿಸೋಕೆ ಒಪ್ಪಿದ್ದಾರೆ. ಪಾತ್ರ ಇನ್ನಷ್ಟೇ ಫೈನಲೈಸ್ ಆಗಬೇಕು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಸುನಿಲ್ ಶೆಟ್ಟಿ ಸರ್ ಬರುತ್ತಿರುವುದೇ ನನಗೊಂದು ಎಕ್ಸೈಟ್‍ಮೆಂಟ್ ಎಂದಿದ್ದಾರೆ ಸುದೀಪ್.

    ಸುನಿಲ್ ಶೆಟ್ಟಿ, ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಮೂಲ ಕಾರಣ, ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವೆ ಇರುವ ಸ್ನೇಹ. ಸೆಲಬ್ರಿಟಿ ಕ್ರಿಕೆಟ್ ಲೀಗ್‍ನಿಂದ ಶುರುವಾದ ಸ್ನೇಹ ನಿರಂತರವಾಗಿ ಮುಂದುವರೆಯುತ್ತಿದೆ. ಆ ಸ್ನೇಹವೇ ಸುನಿಲ್ ಶೆಟ್ಟಿಯವರನ್ನು ಕನ್ನಡ ಚಿತ್ರರಂಗದತ್ತ ಕರೆತಂದಿದೆ. ಪೈಲ್ವಾನ್ ಚಿತ್ರದ ಚಿತ್ರೀಕರಣ ಮೇ 17ರಿಂದ ಶುರುವಾಗಲಿದೆ.

    Related Articles :-

    Sunil Shetty To Act In 'Phailwan'

  • ಕಿಚ್ಚನ ಪೈಲ್ವಾನ್ ಶುರುವಾಯ್ತು

    phailwan started on ugadi festival

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಓಂಕಾರ ಬಿದ್ದಿದೆ. ಚಿತ್ರಕ್ಕೆ ಹನುಮಂತನಗರದ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕಿಚ್ಚ ಸುದೀಪ್ ಅಭಿನಯದ ಮೊದಲ ದೃಶ್ಯಕ್ಕೆ ಪ್ರಿಯಾ ಸುದೀಪ್ ಕ್ಲಾಪ್ ಮಾಡಿದರು.

    ಚಿತ್ರವನ್ನು ನಿರ್ದೇಶಿಸುತ್ತಿರುವುದು ಹೆಬ್ಬುಲಿ ಕೃಷ್ಣ. ಸ್ವಪ್ನ ಕೃಷ್ಣ ನಿರ್ಮಾಪಕಿ. ಇನ್ನುಳಿದಂತೆ ಹೆಬ್ಬುಲಿ ಚಿತ್ರತಂಡವೇ ಈ ಚಿತ್ರದಲ್ಲೂ ಕೆಲಸ ಮಾಡಲಿದೆ.

    ಹೆಬ್ಬುಲಿಯಲ್ಲಿ ಸುದೀಪ್‍ರನ್ನು ಸೈನಿಕನಾಗಿ ತೋರಿಸಿದ್ದ ಕೃಷ್ಣ, ಈ ಚಿತ್ರದಲ್ಲಿ ಸುದೀಪ್ ಅವರನ್ನು ಬಾಕ್ಸರ್ ಆಗಿ ತೋರಿಸಲಿದ್ದಾರೆ.

  • ಕುಸ್ತಿ ಪೈಲ್ವಾನ್ ಆಗ್ತಾರಾ ದರ್ಶನ್..?

    will darshan act as phailwan

    ಕಿಚ್ಚ ಸುದೀಪ್ ಪೈಲ್ವಾನ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಕುಸ್ತಿ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಕಥೆಗಳು ಬೇರೆಯಾದರೂ, ಇಬ್ಬರೂ ಚಿತ್ರದಲ್ಲಿ ಪೈಲ್ವಾನರೇ. ಈಗ ದರ್ಶನ್ ಕೂಡಾ ಪೈಲ್ವಾನನ ಕಥೆ ಆಧರಿಸಿದ ಸಿನಿಮಾ ಮಾಡುತ್ತಿದ್ದಾರಾ..? ಸದ್ಯಕ್ಕೆ ಇದು ಕುತೂಹಲಕ್ಕೆ ಮಾತ್ರ ಸೀಮಿತ.

    ದರ್ಶನ್, ಡಿ.ಉಮಾಪತಿ, ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ 53ನೇ ಸಿನಿಮಾ ಸೆಟ್ಟೇರುತ್ತಿದೆ. ಆ ಚಿತ್ರಕ್ಕೆ ರಾಬರ್ಟ್ (ಚೌಕ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು), ವಜ್ರಮುನಿ, ಕಾಟೇರ ಹೆಸರುಗಳು ಲಿಸ್ಟಿನಲ್ಲಿವೆ. ಯಾವುದೂ ಫೈನಲ್ ಆಗಿಲ್ಲ. 

    ಪಟ್ಟಿಯಲ್ಲಿ ಕಾಟೇರ ಅನ್ನೋ ಹೆಸರು ಇರೋದೇ ದರ್ಶನ್ ಪೈಲ್ವಾನ್ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಅನುಮಾನ ಮೂಡೋಕೆ ಕಾರಣ. ಕಾಟೇರ ಅನ್ನೋದು ದಾವಣಗೆರೆ ಸಮೀಪದಲ್ಲಿದ್ದ ಪೈಲ್ವಾನ್‍ನ ಹೆಸರು. 

    ಅದೂ ಅಂತಿಂತಾ ಪೈಲ್ವಾನ್ ಅಲ್ಲ, ಒಂದ್ಸಲ ಊಟಕ್ಕೆ ಕುಂತ್ರೆ 35 ಚಪಾಯಿ, 20 ರೊಟ್ಟಿ, ಎರಡುಮೂರು ಕೋಳಿ, 15 ಕಲ್ಲಂಗಡಿ ಜ್ಯೂಸ್ ಕುಡಿಯೋ ಜಟ್ಟಿಯಂತೆ. ಹಾಗಾದರೆ, ಇದು ಕೂಡಾ ಜಟ್ಟಿಯ ಕಥೆ ಆಧರಿಸಿದ ಸಿನಿಮಾನಾ..?

    ಸದ್ಯಕ್ಕೆ ಎಲ್ಲವೂ ಸೀಕ್ರೆಟ್. ಒಂದು ನಿರ್ದಿಷ್ಟ ಹಂತಕ್ಕೆ ಬರುವವರೆಗೆ ಯಾವುದೂ ಅಧಿಕೃತವಲ್ಲ

  • ದಿಗ್ಗಜರ ನಡುವೆ ಪೈಲ್ವಾನ್ ಸುದೀಪ್

    sudeep's phailwam photos

    ಪೈಲ್ವಾನ್.. ಸುದೀಪ್ ಬಾಕ್ಸರ್ ಆಗಿ ನಟಿಸುತ್ತಿರುವ ಚಿತ್ರ, ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಚಿತ್ರದಲ್ಲಿ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರ, ಚಿತ್ರದ ಕಥೆಯ ಕುರಿತು ನಿರೀಕ್ಷೆ ಹೆಚ್ಚುತ್ತಿದೆ.

    ಅದಕ್ಕೆ ಕಾರಣವಾಗಿರೋದು ಚಿತ್ರತಂಡದಿಂದ ಹೊರಬಿದ್ದ ಫೋಟೋಗಳು. ಮೊದಲು ಬಿಡುಗಡೆಯಾಗಿದ್ದ ಪೋಟೋದಲ್ಲಿ ಆಟೋರಾಜ ಶಂಕರ್‍ನಾಗ್ ಅಭಿಮಾನಿಗಳ ಬಳಗ ಅನ್ನೋ ಫೋಟೋ ಕಾಣಿಸಿಕೊಂಡಿತ್ತು. ಹಾಗಿದ್ದರೆ ಸುದೀಪ್ ಶಂಕ್ರಣ್ಣನ ಫ್ಯಾನ್ ಆಗಿರ್ತಾರೆ ಅನ್ನೋ ನಿರೀಕ್ಷೆ ಹುಟ್ಟಿಸಿತ್ತು. ಈಗ ಇನ್ನೊಂದು ಫೋಟೋ ಹೊರಬಿದ್ದಿದೆ.

    ಈ ಫೋಟೋದಲ್ಲಿ ಡಾ.ರಾಜ್, ವಿಷ್ಣು, ಅಂಬಿ, ರವಿಚಂದ್ರನ್, ಶಂಕರ್‍ನಾಗ್, ವಜ್ರಮುನಿ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ಪೋಸ್ಟರ್‍ಗಳಿವೆ. ಆ ಪೋಸ್ಟರ್‍ಗಳ ಮುಂದೆ ನಿಂತು ಚಿತ್ರತಂಡದೊಂದಿಗೆ ಫೋಸ್ ಕೊಟ್ಟಿರೋದು ಕಿಚ್ಚ ಸುದೀಪ್.

    ಹಾಗಾದರೆ, ಚಿತ್ರದ ಕಥೆ, ಸುದೀಪ್ ಪಾತ್ರ ಹೇಗಿರಬಹುದು. ನಿಮ್ಮ ಊಹೆಗೆ ಬಿಟ್ಟಿದ್ದು.

  • ನಾಡಧ್ವಜಕ್ಕೆ ಪೈಲ್ವಾನ್ ನಮಸ್ಕಾರ - ಅಭಿಮಾನಿಗಳ ಜೈಕಾರ

    sudeep's gesture wins many hearts

    ರಾಜ್ಯಾದ್ಯಂತ ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮ. ಪೈಲ್ವಾನ್ ಚಿತ್ರದ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿರುವ ಕಿಚ್ಚ ಸುದೀಪ್ ಮತ್ತು ಪೈಲ್ವಾನ್ ಚಿತ್ರತಂಡ, ಅಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಚಿತ್ರೀಕರಣದ ಜಾಗದಲ್ಲೇ ಪೈಲ್ವಾನ್ ಚಿತ್ರತಂಡದ ಸದಸ್ಯರೆಲ್ಲ ಸೇರಿ, ಧ್ವಜಾರೋಹಣ ಮಾಡಿದ್ದಾರೆ. ತಾಯಿ ಭುವನೇಶ್ವರಿ ಭಾವಚಿತ್ರವನ್ನು ಪೂಜಿಸಿದ್ದಾರೆ.

    ಈ ಸಂದರ್ಭದಲ್ಲಿ ಸುದೀಪ್, ನಾಡಧ್ವಜದ ಎದುರು ಬರಿಗಾಲಿನಲ್ಲಿ ವಿನೀತರಾಗಿ ನಿಂತು ಕೈ ಮುಗಿಯುತ್ತಿರುವ ಫೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 

  • ಪೈಲ್ವಾನನ ಗರಡಿಯಲ್ಲಿ ಜೈ ಆಂಜನೇಯ

    phailwan sets in hyderabad

    ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್‍ನ ಪೈಲ್ವಾನ್ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಕುಸ್ತಿ ದೃಶ್ಯಗಳ ಶೂಟಿಂಗ್‍ಗೆಂದೇ 8 ಸೆಟ್ ಹಾಕಲಾಗಿದೆ. ಒಂದೊಂದು ಸೆಟ್ ಕೂಡಾ ಅದ್ಭುತ.. ಅದ್ಧೂರಿ.. 

    ಕುಸ್ತಿಯ ಅಖಾಡ, ಗರಡಿ ಮನೆಯ ಅಖಾಡ, ಆಂಜನೇಯದ ವಿಗ್ರಹ, ಅರಮನೆಯ ಎದುರಿನ ಅಖಾಡ, ಬಾಕ್ಸಿಂಗ್ ರಿಂಗ್.. ಹೀಗೆ ತರಹೇವಾರಿ ಸೆಟ್‍ಗಳು ಸಿದ್ಧವಾಗಿವೆ. ಸೆಟ್‍ಗಳನ್ನು ನೋಡುತ್ತಿದ್ದರೆ ಚಿತ್ರದ ದೃಶ್ಯಗಳು ಹೇಗಿರಬಹುದು ಎಂಬ ಕಲ್ಪನೆ ಪ್ರೇಕ್ಷಕರ ಕಣ್ಣೆದುರು ಸುಳಿದು ಹೋಗುವುದು ಖಂಡಿತಾ.

  • ಪೈಲ್ವಾನನ ಶೂಟಿಂಗ್ ಶುರು

    phailwan shooting starts

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಿತ್ರದ ಶೂಟಿಂಗ್‍ನ ಒಂದಷ್ಟು ಫೋಟೋಗಳನ್ನು ಸ್ವತಃ ಕಿಚ್ಚ ಸುದೀಪ್ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಫೋಟೋಗಳನ್ನು ನೋಡಿದ್ರೆ, ಸುದೀಪ್ ಚಿತ್ರದಲ್ಲಿ ಶಂಕರ್‍ನಾಗ್ ಅಭಿಮಾನಿಯಾಗಿರಬಹುದಾ ಅನ್ನೋ ಅನುಮಾನ ಬರೋದು ಸುಳ್ಳಲ್ಲ. ಏಕೆಂದರೆ ಆ ಬೋರ್ಡ್‍ನಲ್ಲಿ ಆಟೋರಾಜ ಶಂಕರ್‍ನಾಗ್ ಗೆಳೆಯರ ಬಳಗ ಅನ್ನೋ ಬೋರ್ಡ್ ಇದೆ. ಭುವನೇಶ್ವರಿ ನಗರದ ಅಡ್ರೆಸ್ ಇದೆ. ಉಳಿದದ್ದು ಸಿನಿಮಾ ನೋಡಿದ ಮೇಲೆ ಹೇಳಬೇಕು.

    ನಾಯಕಿಯಾಗಿ ಆಕಾಂಕ್ಷಾ ಸಿಂಗ್ ಎಂಬ ನಟಿ ನಟಿಸುತ್ತಿದ್ದಾರೆ. ನಾನು ಮೂಲತಃ ಮುಂಬೈನವಳು. ಕನ್ನಡದ ನಟರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಸುದೀಪ್ ಬಗ್ಗೆ ತಿಳಿದ ಮೇಲೆ ಖುಷಿಯಾಯಿತು. ಅವರಿಂದ ಕಲಿಯುವುದು ತುಂಬಾ ಇದೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ. ನಮ್ಮಂತಹವರ ಕೆರಿಯರ್‍ಗೆ ಸುದೀಪ್ ಅವರ ಜೊತೆ ನಟಿಸುವುದರಿಂದ ಪ್ಲಸ್ ಆಗುತ್ತೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ.

  • ಪೈಲ್ವಾನನಿಗೆ ಆಕಾಂಕ್ಷಾ ಜೋಡಿ

    phialwan gets his heroine

    ಕಿಚ್ಚ ಸುದೀಪ್ ಅಲ್ಲಲ್ಲ ಪೈಲ್ವಾನ್ ಸುದೀಪ್‍ಗೆ ತಕ್ಕ ಜೋಡಿ ಕೊನೆಗೂ ಸಿಕ್ಕಾಗಿದೆ. ರಾಜಸ್ಥಾನ ಮೂಲದ ಆಕಾಂಕ್ಷಾ ಸಿಂಗ್ ಎಂಬ ಸುಂದರಿ, ಕಿಚ್ಚನಿಗೆ ಜೊತೆಗಾತಿಯಾಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಆಕಾಂಕ್ಷಾ ವೃತ್ತಿಯಲ್ಲಿ ಮಾಡೆಲ್. ಈಗಾಗಲೇ ಕೆಲವು ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

    ಹಿಂದಿಯಲ್ಲಿ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಅಲಿಯಾ ಭಟ್ ಗೆಳತಿಯಾಗಿ, ತೆಲುಗಿನ ಮಳ್ಳಿರಾವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿಯಲ್ಲಿ ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ ಧಾರಾವಾಹಿ ಮೂಲಕ ತೆರೆಗೆ ಬಂದ ಆಕಾಂಕ್ಷಾ ಕೆಲವು ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಈಗ ಪೈಲ್ವಾನನಿಗೆ ಜೊತೆಯಾಗಲು ಕನ್ನಡಕ್ಕೆ ಬರುತ್ತಿದ್ದಾರೆ.

    ಆಕಾಂಕ್ಷಾ ಅವರನ್ನು ಅಡಿಷನ್ ಮೂಲಕ ಆಯ್ಕೆ ಮಾಡಿದ್ದೇವೆ. ನಮ್ಮ ಚಿತ್ರದ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಕೃಷ್ಣ.

     

     

     

  • ಪೈಲ್ವಾನ್ ಅಂದ್ರೆ ಪೈಲ್ವಾನ್.. ಸ್ಪೆಷಲ್ ಪೈಲ್ವಾನ್

    sudeep's phailwan speciality

    ಪೈಲ್ವಾನ್. ಹೆಬ್ಬುಲಿ ನಂತರ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಮತ್ತೆ ಒಟ್ಟಾಗಿರುವ ಸಿನಿಮಾ. ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸುತ್ತಿರುವುದು ಒಂದು ವಿಶೇಷವಾದರೆ, ಸುನಿಲ್ ಶೆಟ್ಟಿ ನಟಿಸುತ್ತಿರುವುದು ಇನ್ನೊಂದು ಬೋನಸ್. ಆದರೆ, ಸುನಿಲ್ ಶೆಟ್ಟಿ ಅವರದ್ದು ವಿಲನ್ ಪಾತ್ರ ಅಲ್ಲವಂತೆ. ಹಾಗಾದರೆ ಮತ್ತೇನು ಎಂದು ಕೇಳಿದರೆ, ಚಿತ್ರದ ಹಲವು ವಿಶೇಷಗಳನ್ನು ಹೊರಹಾಕಿದ್ದಾರೆ ನಿರ್ದೇಶಕ ಕೃಷ್ಣ.

    ಸುನಿಲ್ ಶೆಟ್ಟಿ ಅವರದ್ದು ಚಿತ್ರದಲ್ಲಿ ಪ್ರಮುಖ ಪಾತ್ರ. ವಿಲನ್ ಅಲ್ಲ. ಅವರ ಪಾತ್ರ ತುಂಬಾ ಸಾಫ್ಟ್ ಆಗಿದೆ.ಚಿತ್ರದಲ್ಲಿ ಖಳನಟರಾಗಿ ನಟಿಸುತ್ತಿರುವುದು ಕಬೀರ್ ಖಾನ್, ಶಶಾಂಕ್. 

    ಸುದೀಪ್ ಎರಡು ಶೇಡ್‍ನಲಿ ಕಾಣಿಸಿಕೊಳ್ತಾರೆ. ಒಂದು ಪಾತ್ರ ಸ್ಲಿಮ್ ಆಗಿದ್ದರೆ, ಇನ್ನೊಂದು ಪಾತ್ರ ಜಟ್ಟಿಯದ್ದು. ಹಾಗಂತ ಡಬಲ್ ಆ್ಯಕ್ಟಿಂಗ್ ಅಲ್ಲ.ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‍ನಲ್ಲಿಯೇ ನಡೆಯಲಿದೆ. ಹೈದರಾಬಾದ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸೆಟ್ ಹಾಕಲಾಗುತ್ತಿದೆ.

  • ಪೈಲ್ವಾನ್ ಕಿಚ್ಚನ ತೂಕ ಈಗ ಎಷ್ಟು..?

    kiccha sudeep looses his weight for phailwan

    ಕನ್ನಡದಲ್ಲಿ ಫಿಟ್‍ನೆಸ್ ಮೈಂಟೇನ್ ಮಾಡುವ ಕೆಲವೇ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಅವರು ಮೊದಲಿನಿಂದಲೂ ತೀರಾ ದಪ್ಪಗೂ ಆಗಿಲ್ಲ. ತೀರಾ ತೆಳ್ಳಗೂ ಆಗಿಲ್ಲ. ಎಲ್ಲ ಓಕೆ.. ಕಿಚ್ಚ ಸುದೀಪ್ ಈಗ ಎಷ್ಟು ಕೆಜಿ ತೂಕವಿದ್ದಾರೆ..? 

    89 ಕೆಜಿ ತೂಗುತ್ತಿದ್ದ ಸುದೀಪ್, ಈಗ 73 ಕೆಜಿಗೆ ಇಳಿದಿದ್ದಾರೆ. 36 ಇದ್ದ ಎದೆಯ ಸುತ್ತಳತೆ ಈಗ 31.5ಕ್ಕೆ ಇಳಿದಿದೆ. ಎಲ್ಲದಕ್ಕೂ ಕಾರಣ.. ಪೈಲ್ವಾನ್ ಸಿನಿಮಾ. ಪೈಲ್ವಾನ್ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ಸುದೀಪ್, ಇದಕ್ಕೆ ಸ್ಫೂರ್ತಿ ನೀಡಿದ ಪೈಲ್ವಾನ್ ಚಿತ್ರತಂಡ ಹಾಗೂ ನಟ ಕಬೀರ್ ದುಲ್ಹನ್ ಸಿಂಗ್‍ಗೆ ಥ್ಯಾಂಕ್ಸ್ ಹೇಳಿದ್ದಾರೆ.

  • ಪೈಲ್ವಾನ್ ಜೊತೆ ಸುನಿಲ್ ಶೆಟ್ಟಿ

    suniel shetty joins phailwaan team

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಚಿತ್ರೀಕರಣಕ್ಕೆ ಈಗ ಸುನಿಲ್ ಶೆಟ್ಟಿ ಬಂದಿದ್ದಾರೆ.

    ಸುನಿಲ್ ಶೆಟ್ಟಿ, ಪೈಲ್ವಾನ್ ಸಿನಿಮಾಗೆ 30 ದಿನಗಳ ಕಾಲ್‍ಷೀಟ್ ಕೊಟ್ಟಿದ್ದಾರೆ. ಬುಧವಾರದಿಂದ ಚಿತ್ರೀಕರಣಲ್ಲಿ ಪಾಲ್ಗೊಂಡಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರು, ಎರಡೂ ಕಡೆ ಚಿತ್ರೀಕರಣ ನಡೆಯಲಿದೆ. ಸುದೀಪ್‍ಗೆ ಜೋಡಿಯಾಗಿ ನಟಿಸುತ್ತಿರುವುದು ಆಕಾಂಕ್ಷಾ ಸಿಂಗ್.

    ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವಣ ಗೆಳೆತನವೇ ಕಾಲ್‍ಷೀಟ್ ಸಿಗೋಕೆ ಕಾರಣ. ಸುದೀಪ್ ಬಾಲಿವುಡ್‍ಗೆ ಹೋಗುವ ಮೊದಲಿನಿಂದಲೂ, ಅವರಿಗೆ ಸುನಿಲ್ ಶೆಟ್ಟಿ ಜೊತೆ ಗೆಳೆತನ ಇತ್ತು. ಅವರು ಖುಷಿಯಾಗಿ ಒಪ್ಪಿಕೊಂಡು, ಚಿತ್ರೀಕರಣಕ್ಕೂ ಬಂದಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ದೇಶಕ ಕೃಷ್ಣ.

  • ಪೈಲ್ವಾನ್ ನೋಡಿದ ಚಿತ್ರರಂಗದ ಸ್ಟಾರ್ಸ್

    celebs appreciate pailwan

    ಪೈಲ್ವಾನ್ ಚಿತ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಎಲ್ಲೆಡೆ ಪೈಲ್ವಾನ್ ಹವಾ. ಬಂದಾ ನೋಡೋ ಪೈಲ್ವಾನ್ ಹಾಡು ಗೆದ್ದಾ ನೋಡೋ ಪೈಲ್ವಾನ್ ಆಗಿದೆ. ದೊರೆಸಾನಿ, ಕಣ್ಮಣಿಯೇ ಹಾಡು ಟ್ರೆಂಡ್ ಸೃಷ್ಟಿಸಿವೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಫುಲ್ ಹ್ಯಾಪಿ. ಈ ನಡುವೆ ಚಿತ್ರರಂಗದ ಹಲವರು ಸ್ವತಃ ಥಿಯೇಟರಿಗೆ ಹೋಗಿ ಪೈಲ್ವಾನ್ ನೋಡಿ ಕಿಚ್ಚ ಸುದೀಪ್ ಮತ್ತು ಕೃಷ್ಣಗೆ ಶಹಬ್ಬಾಸ್ ಎಂದಿದ್ದಾರೆ.

    ಸಿಂಪಲ್ ಸುನಿ : ಆಟದ ಜೊತೆ ಭಾವನಾತ್ಮಕ ಸಂಬಂಧಗಳು ಬೆರೆತಿರುವ ಸಿನಿಮಾ. ಮನೆಮಂದಿಯೆಲ್ಲ ನೋಡಬೇಕಾದ ಚಿತ್ರ ಪೈಲ್ವಾನ್.

    ರಿಷಬ್ ಶೆಟ್ಟಿ : ಅಭಿಮಾನಿಗಳ ನಡುವೆ ಶಿಳ್ಳೆಗಳ ಅಬ್ಬರದಲ್ಲಿ ನಾನಿದ್ದೇನೆ. ಕಾಮಿಡಿ ಟೈಮಿಂಗ್, ಮದುವೆ ವಾರ್ಷಿಕೋತ್ಸವದ ದಿನ ಅಕ್ಕಪಕ್ಕದವರನ್ನು ಕರೆದು ಹೇಳೋ ಡೈಲಾಗ್ ಸೂಪರ್.

    ಪವನ್ ಒಡೆಯರ್ : ಸಿನಿಮಾ ಸೂಪರ್. ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವನ್ನು ತುಂಬಾ ಚೆನ್ನಾಗಿ ಹೇಳಲಾಗಿದೆ.

    ಅಶಿಕಾ ರಂಗನಾಥ್ : ಸುದೀಪ್ ಸರ್, ನೀವಂತೂ ವಂಡರ್‍ಫುಲ್.  ಸಿನಿಮಾ ಸೂಪರ್. ನಿಮ್ಮ ಡೆಡಿಕೇಷನ್ ನೋಡುತ್ತಿದ್ದರೆ, ನಮ್ಮಂತಹವರಿಗೆ ಸ್ಫೂರ್ತಿ.

    ಮಾನ್ವಿತಾ ಕಾಮತ್ : ಖಂಡಿತಾ ಫ್ಯಾಮಿಲಿ ಎಂಟರ್‍ಟೇನರ್ ಸಿನಿಮಾ. ಕಿಚ್ಚ ಸುದೀಪ್ ಪರಿಶ್ರಮ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿದೆ.

    ಇನ್ನು ಸಿನಿಮಾ ನೋಡಿ ಪರ್ಸನಲ್ ಆಗಿ ಸುದೀಪ್ ಅವರಿಗೆ ಕಂಗ್ರಾಟ್ಸ್ ಹೇಳಿರುವವರ ಸಂಖ್ಯೆಯೂ ದೊಡ್ಡದಿದೆ.

     

  • ಪೈಲ್ವಾನ್ ಮುಗಿದರೂ.. ಕಿಚ್ಚನಿಗದು ಅರ್ಥವಾಗಲೇ ಇಲ್ಲ..!

    sudeep completes phailwan shooting

    ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿದಿದೆ. ಇದನ್ನು ಖುಷಿಯಿಂದ ಹೇಳಿಕೊಂಡಿರೋ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಒಂದು ಅಭಿನಂದನಾ ಪತ್ರವನ್ನೇ ಬರೆದುಬಿಟ್ಟಿದ್ದಾರೆ. ಚಿತ್ರದ ನಿರ್ದೇಶಕ ಕೃಷ್ಣಪ್ಪ, ಬಾಕ್ಸಿಂಗ್ ಸೀಕ್ವೆನ್ಸ್ ಕಂಪೋಸ್ ಮಾಡಿದ ಲಾರ್ನೆಲ್ ಸ್ಟುವೆಲ್, ಕುಸ್ತಿ ದೃಶ್ಯಗಳನ್ನು ಸಂಯೋಜಿಸಿದ ವಿಜಯ್ ಮಾಸ್ಟರ್, ಒಟ್ಟಾರೆ ಚಿತ್ರದ ಸಾಹಸ ನಿರ್ದೇಶನ ಮಾಡಿದ ರವಿವರ್ಮ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರನ್ನೂ ಕೊಂಡಾಡಿದ್ದಾರೆ ಕಿಚ್ಚ ಸುದೀಪ್.

    ನನಗೆ ಕುಸ್ತಿ ಮತ್ತು ಬಾಕ್ಸಿಂಗ್ ಕಥೆ ಆಧರಿಸಿದ ಸಿನಿಮಾಗಳನ್ನು ನೋಡುವಾಗ, ನನಗೆ ಇಂಥದ್ದೊಂದು ಕಥೆ, ಚಾನ್ಸ್ ಸಿಗಬಾರದೇ ಎಂದುಕೊಳ್ಳುತ್ತಿದೆ. ಕೃಷ್ಣಪ್ಪ, ಒಂದೇ ಚಿತ್ರದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡರ ಪರಿಚಯವನ್ನೂ ಮಾಡಿಕೊಟ್ಟರು. ನಾನು ಸ್ಟುವೆಲ್‍ರ ಗುರ್ ವಾಯ್ಸ್‍ನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕುಸ್ತಿ ದೃಶ್ಯಗಳಲ್ಲಿಯೂ ನನ್ನ ಮುಖದ ಮೇಲಿನ ನಗು ಮಾಸದಂತೆ ನೋಡಿಕೊಂಡ  ವಿಜಯ್ ಮಾಸ್ಟರ್‍ಗೆ ಅಭಿನಂದನೆ. ಹೆಚ್ಚು ಕಡಿಮೆ  ನನ್ನೊಂದಿಗೇ ವೃತ್ತಿ ಜೀವನ ಆರಂಭಿಸಿದ ರವಿವರ್ಮಾ ಸಾಧನೆ ನನಗೆ ಈಗಲೂ ಒಂದು ಬೆರಗು. ಇಡೀ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ಕಿಚ್ಚ.

    ಇಷ್ಟೆಲ್ಲ ಆದ ಮೇಲೆ ಅವರಿಗೆ ಅರ್ಥವಾಗದೇ ಹೋದ, ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು ಒಂದೇ ಒಂದು.ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರದಲ್ಲಿರುತ್ತೆ..? 

  • ಪೈಲ್ವಾನ್ ಸುದೀಪ್ ಹ್ಯಾಪಿ 

    phailwan first schedule shooting completed

    ಒಂದು ಕಡೆ ವಿಲನ್, ಮತ್ತೊಂದು ಕಡೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಸುದೀಪ್, ಆಗಲೇ ಪೈಲ್ವಾನ್ ಚಿತ್ರತಂಡದಿಂದಲೂ ಗುಡ್‍ನ್ಯೂಸ್ ಕೊಟ್ಟಿದ್ದಾರೆ. ಸುದೀಪ್ ಬಾಕ್ಸರ್ ಆಗಿ ನಟಿಸುತ್ತಿರುವ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ.

    ಮೇ 18ರಂದು ಚೆನ್ನೈನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಶುರುವಾಗಿತ್ತು. ಕೃಷ್ಣ ನಿರ್ದೇಶನದ ಸಿನಿಮಾದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸುದೀಪ್.

    ಅಂದಹಾಗೆ ಪೈಲ್ವಾನ್ ಚಿತ್ರದ 2ನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ. 2ನೇ ಹಂತದ ಚಿತ್ರೀಕರಣದಲ್ಲಿ ಸುನಿಲ್ ಶೆಟ್ಟಿ, ಸುದೀಪ್ ಜೊತೆ ನಟಿಸಲಿದ್ದಾರೆ.