` krishnadop, - chitraloka.com | Kannada Movie News, Reviews | Image

krishnadop,

  • ನಿಖಿಲ್ ಚಿತ್ರಕ್ಕೆ ಪೈಲ್ವಾನ್ ಕೃಷ್ಣ ಆ್ಯಕ್ಷನ್ ಕಟ್

    pailwan director's next with nikhil ?

    ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ನಿರ್ದೇಶಕರಾಗಿ ಪೈಲ್ವಾನ್ ಕೃಷ್ಣ ಆಯ್ಕೆಯಾಗಿದ್ದಾರೆ. ಸುದ್ದಿ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಗಾಂಧಿನಗರದಲ್ಲೀಗ ಅದೇ ಸುದ್ದಿ. ಲೈಕಾ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ನಿಖಿಲ್ ಹೀರೋ. ಕೃಷ್ಣ ಡೈರೆಕ್ಟರ್ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಗಜಕೇಸರಿ, ಹೆಬ್ಬುಲಿ, ಪೈಲ್ವಾನ್.. ಹೀಗೆ ಸತತ ಗೆಲುವು ಕಂಡಿರುವ ಕೃಷ್ಣ, 4ನೇ ಚಿತ್ರವಾಗಿ ನಿಖಿಲ್ ಚಿತ್ರ ನಿರ್ದೇಶಿಸಲಿದ್ದಾರಂತೆ. ಈಗಾಗಲೇ ಈ ಕುರಿತು ಒಂದಿಷ್ಟು ಮಾತುಕತೆಗಳೂ ನಡೆದಿವೆ ಎನ್ನಲಾಗಿದ್ದು, ಶೀಘ್ರದಲ್ಲೇ ಅಧಿಕೃತ ವರ್ತಮಾನ ಹೊರಬೀಳುವ ಸಾಧ್ಯತೆ ಇದೆ.

  • ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

    pailwanan first look

    ಕಿಚ್ಚ ಸುದೀಪ್ `ಪೈಲ್ವಾನ'ರಾಗುತ್ತಿದ್ದಾರೆ. ಅದೂ ಅಂತಿಂಥ ಪೈಲ್ವಾನ ಅಲ್ಲ. ಗರಡಿ ಮನೆಯ ಕಟ್ಟಾಳು. ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಗರಡಿ ಮನೆಯ ಮಣ್ಣು ಮೆತ್ತಿಕೊಂಡಿರುವ ಹುರಿಗಟ್ಟಿದ ದೇಹದ ಸುದೀಪ್‍ರನ್ನು ನೋಡಿದವರು ವ್ಹಾವ್ ಎಂದಿದ್ದಾರೆ. 

    ಪೈಲ್ವಾನ ಚಿತ್ರದ ಸಂಪೂರ್ಣ ಕಥೆಯೇ ಪೈಲ್ವಾನನ ಕ್ರೀಡೆಯ ಕಥೆ. ದಾವಣಗೆರೆ, ವಿಜಯಪುರ, ಬಾಗಲಕೋಟೆಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮೊದಲ ಚಿತ್ರದಲ್ಲಿ ಯೋಧನೊಬ್ಬನ ಕಥೆ ಹೇಳಿದ್ದ ಕೃಷ್ಣ, ಎರಡನೇ ಚಿತ್ರದಲ್ಲಿ ಪೈಲ್ವಾನನ ಕಥೆ ಆರಿಸಿಕೊಂಡಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಎರಡನೇ ಅವಕಾಶ ಕೊಡುತ್ತೆ. ಹಾಗೆ ತನಗೆ ಸಿಕ್ಕ ಸೆಕೆಂಡ್ ಚಾನ್ಸ್‍ನ್ನು ದಕ್ಕಿಸಿಕೊಳ್ಳಲು ನಾಯಕ ಏನೇನೆಲ್ಲ ಮಾಡಿ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದು ಗುಟ್ಟು ಬಿಟ್ಟಿದ್ದಾರೆ ಕೃಷ್ಣ.

    ಕನ್ನಡ ಸಿನಿಮಾಗಳಲ್ಲಿ ಗರಡಿ ಮನೆಗಳು ಅಪರೂಪವೇನಲ್ಲ. ಆದರೆ, ಗರಡಿ ಮನೆಯ ಪೈಲ್ವಾನನ ಕಥೆಯೇ ಸಿನಿಮಾ ಆಗಿಲ್ಲ. ಹೀಗಾಗಿಯೇ ಪೈಲ್ವಾನ ಸುದೀಪ್ ಹೇಗಿರ್ತಾರೋ ನೋಡಬೇಕು ಎಂಬ ಅಭಿಮಾನಿಗಳ ತುಡಿತ ಜೋರಾಗಿದೆ.

  • ಪೈಲ್ವಾನ್ ಮುಗಿದರೂ.. ಕಿಚ್ಚನಿಗದು ಅರ್ಥವಾಗಲೇ ಇಲ್ಲ..!

    sudeep completes phailwan shooting

    ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿದಿದೆ. ಇದನ್ನು ಖುಷಿಯಿಂದ ಹೇಳಿಕೊಂಡಿರೋ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಒಂದು ಅಭಿನಂದನಾ ಪತ್ರವನ್ನೇ ಬರೆದುಬಿಟ್ಟಿದ್ದಾರೆ. ಚಿತ್ರದ ನಿರ್ದೇಶಕ ಕೃಷ್ಣಪ್ಪ, ಬಾಕ್ಸಿಂಗ್ ಸೀಕ್ವೆನ್ಸ್ ಕಂಪೋಸ್ ಮಾಡಿದ ಲಾರ್ನೆಲ್ ಸ್ಟುವೆಲ್, ಕುಸ್ತಿ ದೃಶ್ಯಗಳನ್ನು ಸಂಯೋಜಿಸಿದ ವಿಜಯ್ ಮಾಸ್ಟರ್, ಒಟ್ಟಾರೆ ಚಿತ್ರದ ಸಾಹಸ ನಿರ್ದೇಶನ ಮಾಡಿದ ರವಿವರ್ಮ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರನ್ನೂ ಕೊಂಡಾಡಿದ್ದಾರೆ ಕಿಚ್ಚ ಸುದೀಪ್.

    ನನಗೆ ಕುಸ್ತಿ ಮತ್ತು ಬಾಕ್ಸಿಂಗ್ ಕಥೆ ಆಧರಿಸಿದ ಸಿನಿಮಾಗಳನ್ನು ನೋಡುವಾಗ, ನನಗೆ ಇಂಥದ್ದೊಂದು ಕಥೆ, ಚಾನ್ಸ್ ಸಿಗಬಾರದೇ ಎಂದುಕೊಳ್ಳುತ್ತಿದೆ. ಕೃಷ್ಣಪ್ಪ, ಒಂದೇ ಚಿತ್ರದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡರ ಪರಿಚಯವನ್ನೂ ಮಾಡಿಕೊಟ್ಟರು. ನಾನು ಸ್ಟುವೆಲ್‍ರ ಗುರ್ ವಾಯ್ಸ್‍ನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕುಸ್ತಿ ದೃಶ್ಯಗಳಲ್ಲಿಯೂ ನನ್ನ ಮುಖದ ಮೇಲಿನ ನಗು ಮಾಸದಂತೆ ನೋಡಿಕೊಂಡ  ವಿಜಯ್ ಮಾಸ್ಟರ್‍ಗೆ ಅಭಿನಂದನೆ. ಹೆಚ್ಚು ಕಡಿಮೆ  ನನ್ನೊಂದಿಗೇ ವೃತ್ತಿ ಜೀವನ ಆರಂಭಿಸಿದ ರವಿವರ್ಮಾ ಸಾಧನೆ ನನಗೆ ಈಗಲೂ ಒಂದು ಬೆರಗು. ಇಡೀ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ಕಿಚ್ಚ.

    ಇಷ್ಟೆಲ್ಲ ಆದ ಮೇಲೆ ಅವರಿಗೆ ಅರ್ಥವಾಗದೇ ಹೋದ, ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು ಒಂದೇ ಒಂದು.ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರದಲ್ಲಿರುತ್ತೆ..? 

  • ಪೈಲ್ವಾನ್ ರಿಲೀಸ್ ಮುಂದೆ ಹೋಗೋಕೆ ಕಾರಣ ಇಲ್ಲಿವೆ

    reasons why pailwan release got postponed

    ಈ ಮೊದಲು ಘೋಷಣೆ ಮಾಡಿದ್ದಂತೆ ಪೈಲ್ವಾನ್ ಸಿನಿಮಾ ಆಗಸ್ಟ್ 29ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಈಗ ಸೆಪ್ಟೆಂಬರ್ 12ಕ್ಕೆ ಮುಂದೂಡಲ್ಪಟ್ಟಿದೆ. ಜುಲೈ 27ಕ್ಕೆ ಪ್ಲಾನ್ ಮಾಡಿಕೊಂಡಿದ್ದಂತೆ ಆಡಿಯೋ ರಿಲೀಸ್ ಕೂಡ ಆಗುತ್ತಿಲ್ಲ. ಅದೂ ಕೂಡಾ ಆಗಸ್ಟ್‍ಗೆ ಮುಂದೂಡಲ್ಪಟ್ಟಿದೆ. ಇದೆಲ್ಲದಕ್ಕೂ ಕಾರಣಗಳಿವೆ.

    ಮೊದಲನೆಯ ಕಾರಣ ಪ್ರಭಾಸ್ ಅಭಿಯನಯದ ಸಾಹೋ ರಿಲೀಸ್. ಸಾಹೋ ಆಗಸ್ಟ್ 15ಕ್ಕೆ ಬರಬೇಕಿತ್ತು. ಬದಲಿಗೆ 2 ವಾರ ಮುಂದಕ್ಕೆ ಹೋಯ್ತು. ಇದರಿಂದಾಗಿ ಪೈಲ್ವಾನ್ ರಿಲೀಸ್‍ಗೆ ದೊಡ್ಡ ಪ್ರಾಬ್ಲಂ ಎದುರಾಯ್ತು.

    ಕರ್ನಾಟಕದಲ್ಲಷ್ಟೇ ರಿಲೀಸ್ ಮಾಡುವುದಾಗಿದ್ದರೆ ಸಮಸ್ಯೆ ಇರಲಿಲ್ಲ. ತಮಿಳುನಾಡು ಹಾಗೂ ಕೇರಳದಲ್ಲೂ ನೋ ಪ್ರಾಬ್ಲಂ. ಆದರೆ, ಹಿಂದಿ ಹಾಗೂ ತೆಲುಗಿನಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು. ಥಿಯೇಟರುಗಳ ಪ್ರಾಬ್ಲಂ ಎದುರಾಯ್ತು ಎನ್ನುತ್ತಾರೆ ಕೃಷ್ಣ. ಹೀಗಾಗಿಯೇ ಎಲ್ಲ ಭಾಷೆಗಳ ವಿತರಕರ ಜೊತೆ ಡಿಸ್ಕಸ್ ಮಾಡಿಯೇ ಸೆಪ್ಟೆಂಬರ್ 12ನ್ನು ಫೈನಲೈಸ್ ಮಾಡಿದ್ದಾರೆ.

    ತೆಲುಗಿನಲ್ಲಿ ಮಿನಿಮಮ್ 400 ಥಿಯೇಟರ್ ಹಾಗೂ ಹಿಂದಿಯಲ್ಲಿ 1500 ಥಿಯೇಟರುಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ಒಟ್ಟಾರೆ 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಪೈಲ್ವಾನ್ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿರು ಪೈಲ್ವಾನ್ ತಂಡ, ಇದಕ್ಕಾಗಿಯೇ ಬಿಡುಗಡೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಾಪಕಿ. ಕನ್ನಡದ ದುಬಾರಿ ಬಜೆಟ್‍ನ ಚಿತ್ರವನ್ನು ರಿಲೀಸ್ ಮಾಡಲು ಹೊರಟಾಗ ಬಿಸಿನೆಸ್ ದೃಷ್ಟಿಯಿಂದ ಎರಡು ಹೆಜ್ಜೆ ಹಿಂದೆ ಸರಿದು ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ ಕೃಷ್ಣ.

  • ಪೈಲ್ವಾನ್ ಸುದೀಪ್​ಗೆ ಸೆಲಬ್ರಿಟಿಗಳ ಬಹುಪರಾಕ್..!

    phailwan first look

    ಸುದೀಪ್ ಅಭಿನಯದ ಹೊಸ ಚಿತ್ರ ಪೈಲ್ವಾನ್​ನ ಮೊದಲ ಪೋಸ್ಟರ್ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾ ರಂಗದವರಲ್ಲೂ ರೋಮಾಂಚನ ಸೃಷ್ಟಿಸಿದೆ. ಹೆಬ್ಬುಲಿ ಕೃಷ್ಣ ನಿರ್ದೇಶಿಸುತ್ತಿರುವ ಪೈಲ್ವಾನ್ ಚಿತ್ರದ ಪೋಸ್ಟರ್​ಗೆ ಸ್ಯಾಂಡಲ್​ವುಡ್​ನ ನಟರು, ನಿರ್ಮಾಪಕರು, ನಿರ್ದೇಶಕರು ಕೊಂಡಾಡಿದ್ದಾರೆ.

    ಕಿಚ್ಚನ 'ಪೈಲ್ವಾನ್' ಲುಕ್ ನೋಡಿ ಜಗ್ಗೇಶ್, ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್, ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವಾತ್ಸವ್, ನವೀನ್ ಕೃಷ್ಣ, ರಾಹುಲ್, ನಿರ್ದೇಶಕ ಪ್ರೇಮ್, ನಿರ್ಮಾಪಕ ಕಾರ್ತಿಕ್ ಗೌಡ,  ಸೇರಿದಂತೆ ಬಾಲಿವುಡ್ ಮಂದಿ ಕೂಡಾ ಪೈಲ್ವಾನ್ ಲುಕ್​ನ್ನು ಮೆಚ್ಚಿಕೊಂಡಿದ್ದಾರೆ. 

    ಜಗ್ಗೇಶ್ ಅವರಂತೂ ‘ಹುಟ್ಟುಹಬ್ಬದ ದಿನ ಹೊಸ ಭರವಸೆ ಮೂಡಿಸುವವನು ನಿಜವಾದ ಸಾಧಕ’ ಎಂದು ಹೊಗಳಿದ್ದಾರೆ. ರಕ್ಷಿತ್ ಶೆಟ್ಟಿಗೆ ಪೈಲ್ವಾನ್' ಚಿತ್ರದ ಪೋಸ್ಟರ್ ‘'2018ನೇ ವರ್ಷದ ನಿರೀಕ್ಷೆ ಹೆಚ್ಚಿಸಿದೆ. ಸಾಹೇಬನ ಸುಂದರಿ ಶಾನ್ವಿ ಶ್ರೀವಾಸ್ತವ್ ಅವರಂತೂ ಕಿಚ್ಚನ ಲುಕ್ಕಿಗೆ ಕ್ಲೀನ್ ಬೋಲ್ಡ್.  ನವೀನ್ ಕೃಷ್ಣ, ನೀನಾಸಂ ಸತೀಶ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ನಟರು ಪೋಸ್ಟರ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. 

    ನಿರ್ದೆಶಕದ ಪ್ರೇಮ್ ಒಂದೇ ಮಾತಿನಲ್ಲಿ ಸೂಪರ್ ಡಾರ್ಲಿಂಗ್ ಎಂದಿದ್ದರೆ, ಹೇಗೆ ಕಾಣ್ತಾರೋ ಎಂಬ ಟೆನ್ಷನ್ ಇತ್ತು. ಪೋಸ್ಟರ್ ನೋಡಿದ ಮೇಲೆ ಖುಷಿಯಾಯ್ತು ಎಂದಿದ್ದಾರೆ ನಿರ್ಮಾಪಕ ಕಾರ್ತಿಕ್ ಗೌಡ. 

    ಅಭಿಮಾನಿಗಳಂತೂ ಪೈಲ್ವಾನ್ ಚಿತ್ರದ ಪೋಸ್ಟರ್, ಹುಟ್ಟುಹಬ್ಬಕ್ಕೆ ಹೋಳಿಗೆ ಬಡಿಸಿದ ಹಾಗಾಗಿದೆ.

    Related Articles :-

    Demand For Phailwan Just From Posters!

    ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

  • ಪೈಲ್ವಾನ್‍ನ ಈ ಪಟ್ಟು ಕುಸ್ತಿಪಟುಗಳೂ ಅಬ್ಬಾ ಎಂದರು..!

    pan india foes gaga over sudepp's pailwan

    ಎದುರಾಳಿಯ ಸೊಂಟಕ್ಕೆ ಕೈ ಹಾಕಿ, ಬೆನ್ನ ಹಿಂದಿನಿಂದ ಬಲವಾಗಿ ಹಿಡಿಯಬೇಕು. ಎದುರಾಳಿಯೂ ಅಷ್ಟೇ ಎತ್ತರದವನಾಗಿದ್ದರೆ, ಅದು ಇನ್ನೂ ಕಷ್ಟ. ಆತನನ್ನು ಬಲವಾಗಿ ಮಿಸುಕಲೂ ಸಾಧ್ಯವಾಗದಂತೆ ಹಿಡಿದು, ಬಲವಾಗಿ ಮೇಲೆತ್ತಿ, ನಮ್ಮ ಬೆನ್ನನ್ನೂ ಹಿಂದಕ್ಕೆ ಬಾಗಿಸಿ ಎದುರಾಳಿಯನ್ನು ಕೆಡವಬೇಕು. ಅಪ್ಪಿತಪ್ಪಿಯೂ ಆ ಹಂತದಲ್ಲಿ ನಮ್ಮ ಬೆನ್ನು ನೆಲಕ್ಕೆ ಸೋಕಬಾರದು. ಇದು ಕುಸ್ತಿಯ ಪಟ್ಟುಗಳಲ್ಲಿ ಒಂದು. ಅದನ್ನು ಭೀಮಪಟ್ಟು ಎನ್ನುತ್ತಾರೆ. ಕುಸ್ತಿಯಲ್ಲಿ ಪ್ರಧಾನ ಹಂತಗಳಲ್ಲಿರುವವರು ಮಾತ್ರವೇ ಬಳಸುವ ಬಿಗಿಯಾದ ಪಟ್ಟು ಅದು. ಅದನ್ನು ಸುದೀಪ್ ಪೈಲ್ವಾನ್ ಚಿತ್ರದಲ್ಲಿ ಮಾಡಿದ್ದಾರೆ. ಕುಸ್ತಿಪಟುಗಳೂ ಅಬ್ಬಾ ಎಂದಿರುವುದು ಈ ಕಾರಣಕ್ಕೆ. ಈ ಸ್ಟಂಟ್ ಹಿಂದಿರುವ ಶ್ರಮ, ಪರಮ ರೋಚಕ ಕಥೆ ಅಂಥದ್ದು.

    ಅದಕ್ಕಾಗಿ ಸುದೀಪ್ 9 ತಿಂಗಳು ತಯಾರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಸ್ಟಂಟ್‍ಗೆ ಸುದೀಪ್ ಡ್ಯೂಪ್ ಬಳಸಿಲ್ಲ. ಆದರೆ, ಬಾಲಿವುಡ್‍ನಲ್ಲಿ ಅಂತಹ ದೃಶ್ಯಗಳಿಗೆ ಡ್ಯೂಪ್ ಬಳಸಲಾಗಿದೆ. ಸುದೀಪ್ ತಮ್ಮ ಇಡೀ ಶ್ರಮವನ್ನು ಆ ಪಾತ್ರ ಮತ್ತು ಕುಸ್ತಿಯ ಮೇಲೆ ಹಾಕಿದ್ದಾರೆ ಎಂದು ಪೈಲ್ವಾನ್‍ನ ಆ ಪಟ್ಟಿನ ಕಥೆ ಹೇಳಿದ್ದಾರೆ ನಿರ್ದೇಶಕ ಕೃಷ್ಣ.

    ಚಿತ್ರದಲ್ಲಿ ದೇಸಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಇದ್ದು, ಎರಡನ್ನೂ ಮಾಡಿದ್ದಾರಂತೆ ಬಾದ್‍ಷಾ ಪೈಲ್ವಾನ್ ಕಿಚ್ಚ.

  • ರಿಲೀಸ್ ದಿನವೇ ದಾಖಲೆ ಬರೆಯಲಿದ್ದಾನೆ ಪೈಲ್ವಾನ್

    pailwan all set to write a record on release day

    ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ರಿಲೀಸ್ ದಿನವೇ ಹೊಸ ದಾಖಲೆ ಬರೆಯಲಿದೆ. 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಪೈಲ್ವಾನ್, ಅತೀ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಲಿದೆ. ಸದ್ಯಕ್ಕೆ ಈ ದಾಖಲೆ ಕೆಜಿಎಫ್ ಹೆಸರಿನಲ್ಲಿದೆ.

    ಹಿಂದಿಯಲ್ಲಿ ಝೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದು, 3000ಕ್ಕೂ ಹೆಚ್ಚು ಸ್ಕ್ರೀನ್ ಕೊಡುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿವಾರಾಹಿ ಚಲನಚಿತ್ರಂ ಮತ್ತು ವೈನಾಟ್ ಸ್ಟುಡಿಯೋ ವಿತರಣೆ ಹಕ್ಕು ಪಡೆದುಕೊಂಡಿವೆ. ಮಲಯಾಳಂನಲ್ಲಿ ಪಲ್ಲವಿ ಸ್ಟುಡಿಯೋಸ್ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ.

    ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರ ಸೆಟ್ಟೇರಿದ ದಿನವೇ ವಿತರಣೆ ಹಕ್ಕಿಗೆ ಬುಕ್ಕಿಂಗ್ ಮಾಡಿದ್ದ ಕಾರ್ತಿಕ್ ಗೌಡ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಸುದೀಪ್, ಆಕಾಂಕ್ಷಾ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಮೊದಲಾದವರು ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕರಾದರೆ, ಸ್ವಪ್ನಾ ಕೃಷ್ಣ ನಿರ್ಮಾಪಕಿ.

  • ಸಿಕ್ಸ್ ಪ್ಯಾಕ್‍ಗಾಗಿ ಜಿಮ್‍ಗೆ ಹೊರಟ ಸುದೀಪ್

    sudeep's intense workout

    ಹಿಂದಿಯಲ್ಲಿ ಒಂದು ನಂಬಿಕೆಯಿದೆ. ಸಲ್ಮಾನ್ ಖಾನ್ ಚಿತ್ರಗಳಲ್ಲಿ ಅವರ ದೇಹ ಪ್ರದರ್ಶನವಾಗದೇ ಇದ್ದರೆ, ಸಿನಿಮಾ ಗೆಲ್ಲುವುದು ಡೌಟು ಎಂಬ ನಂಬಿಕೆಯದು. ಹೀಗಾಗಿ ಸಲ್ಲು ಚಿತ್ರಗಳಲ್ಲಿ ಅಂಥಾದ್ದೊಂದು ಸೀನ್ ಸೆಕೆಂಡುಗಳ ಲೆಕ್ಕದಲ್ಲಾದರೂ ಬಂದು ಹೋಗಿರುತ್ತೆ. ಹಿಂದಿಯಲ್ಲಿ ಹೃತಿಕ್, ಶಾರೂಕ್, ಕನ್ನಡದಲ್ಲಿ ದುನಿಯಾ ವಿಜಯ್, ಪುನೀತ್, ದರ್ಶನ್ ಮೊದಲಾದವರು ಈಗಾಗಲೇ ತಮ್ಮ ಸಿಕ್ಸ್‍ಪ್ಯಾಕ್‍ನ್ನು ಸಿನಿಮಾಗಳಲ್ಲಿ ತೋರಿಸಿದ್ದಾರೆ. ಆದರೆ, ಅದರಿಂದ ದೂರವೇ ಇದ್ದವರು ಸುದೀಪ್. 

    ದೇಹವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಹೀಗಿದ್ದರೂ, ಸುದೀಪ್ ತಮ್ಮ ದೇಹವನ್ನು ಯಾವುದೇ ಚಿತ್ರಗಳಲ್ಲಿಯೂ ಪ್ರದರ್ಶನ ಮಾಡಿದವರಲ್ಲ. ಆ ಕಾಲ ಈಗ ಹತ್ತಿರವಾಗುತ್ತಿದೆ. ಏಕೆಂದರೆ, ಅವರೀಗ ಪೈಲ್ವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

    ಅದು ಕೃಷ್ಣ ನಿರ್ದೇಶನದ ಚಿತ್ರ. ಒಬ್ಬ ಪೈಲ್ವಾನ್ ಹೇಗೆಂದರೆ ಹಾಗೆ ಇರೋಕೆ ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ನಿಯಮಗಳಿವೆ. ಈವರೆಗೂ ಮಾಡಿದ್ದ ಪಾತ್ರಗಳಲ್ಲಿ ದೇಹ ತೋರಿಸಬೇಕಾದ ಅಗತ್ಯ ಇರಲಿಲ್ಲ. ಆದರೆ, ಈ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲೇಬೇಕಿದೆ ಎಂದಿದ್ದಾರೆ ಕಿಚ್ಚ. 

  • ಸೆನ್ಸಾರ್ ಪರೀಕ್ಷೆಯಲ್ಲಿ ಗೆದ್ದ ಪೈಲ್ವಾನ

    pailwan censore u/a

    ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಸಿಕ್ಸ್‍ಪ್ಯಾಕ್ ಮಾಡಿಕೊಂಡೇ ನಟಿಸಿರುವ ಚಿತ್ರ ಪೈಲ್ವಾನ್. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ಸಿಂಗ್ ದುಲ್ಹನ್, ಚಿಕ್ಕಣ್ಣ,  ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕ. ಸ್ವಪ್ನಾ ಕೃಷ್ಣ ನಿರ್ಮಾಪಕಿ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರ, ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

    ಕನ್ನಡದ ಬಹುನಿರೀಕ್ಷೆಯ ಚಿತ್ರವೀಗ ಸೆನ್ಸಾರ್ ಪರೀಕ್ಷೆ ಪಾಸ್ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ.