` pailwan, - chitraloka.com | Kannada Movie News, Reviews | Image

pailwan,

  • ಪೈಲ್ವಾನ್ ಫ್ಯಾನ್ಸ್ ಅಬ್ಬರಕ್ಕೆ ಥಿಯೇಟರೇ ನಾಪತ್ತೆ..!

    pailwan movie craze, flex and hoardings cover theaters

    ಕಿಚ್ಚ ಸುದೀಪ್ ಬಾಕ್ಸರ್ ಮತ್ತು ಕುಸ್ತಿ ಪಟುವಾಗಿ ನಟಿಸಿರುವ ಪೈಲ್ವಾನ್ ರಿಲೀಸ್ ಆಗುತ್ತಿದೆ. ಅದೂ 5 ಭಾಷೆಗಳಲ್ಲಿ.. 4000ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಸುದೀರ್ಘ ಗ್ಯಾಪ್ ನಂತರ ಬರುತ್ತಿರುವುದಕ್ಕೋ ಏನೋ.. ಅಭಿಮಾನಿಗಳ ಉತ್ಸಾಹ ಈ ಬಾರಿ ಮೇರೆ ಮೀರಿದೆ. ಸಂಭ್ರಮಕ್ಕೆ ಎಣೆಯೂ ಇಲ್ಲ.. ಮಿತಿಯೂ ಇಲ್ಲ.

    ರಾಜ್ಯದ ಹಲವು ಥಿಯೇಟರುಗಳಲ್ಲಿ ಅಭಿಮಾನಿಗಳು ವಾರಕ್ಕೆ ಮೊದಲೇ ಅಲಂಕಾರ ಆರಂಭಿಸಿದ್ದಾರೆ. ಕಟೌಟು, ಬ್ಯಾನರು, ಹಾರ, ಪೋಸ್ಟರು ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಲವು ಥಿಯೇಟರುಗಳಲ್ಲಿ ಥಿಯೇಟರುಗಳ ಬೋರ್ಡು ಕೂಡಾ ಕಾಣುತ್ತಿಲ್ಲ. ಇದು ಥಿಯೇಟರ್ ಎಂದು ಗೊತ್ತಾಗುವುದು ಅದನ್ನು ಮುಚ್ಚಿರುವ ಪೋಸ್ಟರ್‍ಗಳಿಂದಲೇ.  ಕೃಷ್ಣ ನಿರ್ದೇಶನದ ಚಿತ್ರ ಪೈಲ್ವಾನ್ ಹಬ್ಬವಾಗುತ್ತಿದೆ.

  • ಪೈಲ್ವಾನ್ ಬಜೆಟ್ 45 ಕೋಟಿ..!

    what is pailwan movie budget

    ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ಚಿತ್ರದ ಬಜೆಟ್ ಸೀಕ್ರೆಟ್ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರದ ಪೋಸ್ಟರ್, ಫೋಟೋ ಗ್ರಾಫಿಕ್ಸ್ ಸೃಷ್ಟಿ ಎನ್ನುವವರಿಗೂ ಉತ್ತರ ಕೊಟ್ಟಿದ್ದಾರೆ. ಚಿತ್ರದ ಕೆಲವು ಫೋಟೋಗಳನ್ನು ರಿಲೀಸ್ ಮಾಡಿರುವ ಪೈಲ್ವಾನ್ ಚಿತ್ರತಂಡ, ಸುದೀಪ್ ಅವರ ಡೆಡಿಕೇಷನ್ ಏನು ಅನ್ನೋದನ್ನು ಹೇಳಿಕೊಂಡಿದೆ. ಇದನ್ನೂ ಮೀರಿ ಟೀಕೆ ಮಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂಬ ಸಂದೇಶವನ್ನೂ ಕೊಟ್ಟಿದೆ ಪೈಲ್ವಾನ್ ಟೀಂ.

    ಅಂದಹಾಗೆ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಬಜೆಟ್ 45 ಕೋಟಿಯಂತೆ. ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದ್ದು, ಈಗಾಗಲೇ 9 ಭಾಷೆಗಳಿಂದ ಚಿತ್ರಕ್ಕೆ 30 ಕೋಟಿ ಡಿಮ್ಯಾಂಡ್ ಬಂದಿದೆಯಂತೆ. ಪೈಲ್ವಾನ್ ಸಿನಿಮಾ, ತೆಲುಗು, ತಮಿಳು, ಮರಾಠಿ, ಬೆಂಗಾಳಿ, ಪಂಜಾಬಿ, ಭೋಜ್‍ಪುರಿಯಲ್ಲೂ ತೆರೆ ಕಾಣುತ್ತಿದೆ. 

  • ಪೈಲ್ವಾನ್ ಮೆಚ್ಚಿದ ಸುಲ್ತಾನ್ ಸಲ್ಮಾನ್..!

    sultan praises pailwan

    ಪೈಲ್ವಾನ್.. ನಮ್ಮ ಕಿಚ್ಚ ಸುದೀಪ್ ಅಭಿನಯದ ಸಿನಿಮಾ. ಸುಲ್ತಾನ್, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಸಿನಿಮಾ. ಆ ಚಿತ್ರವೂ ಕೂಡಾ ಬಾಕ್ಸಿಂಗ್ ಪಟುವೊಬ್ಬನ ಕಥೆ ಹೊಂದಿತ್ತು. ಕುಸ್ತಿ, ರಸ್ಲಿಂಗ್, ಒಂದು ಲವ್ ಸ್ಟೋರಿ, ತಾಯಿ ಪ್ರೇಮ.. ಹೀಗೆ ಎಲ್ಲವನ್ನೂ ಒಳಗೊಂಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಕಿಚ್ಚನ ಪೈಲ್ವಾನ್. ಸಂಕ್ರಾಂತಿ ಹಬ್ಬಕ್ಕೆಂದೇ ಸುದೀಪ್ ಮತ್ತು ಕೃಷ್ಣ ನೀಡಿರುವ ಉಡುಗೊರೆ ಚಿತ್ರದ ಟೀಸರ್.

    ಹುರಿಗಟ್ಟಿದ ಮೈ, ಅಖಾಡದ ಮಣ್ಣಿನಲ್ಲಿ ಮಿರಿ ಮಿರಿ ಮಿಂಚುವ ದೇಹದ ಸುದೀಪ್, ಆ ಕುಸ್ತಿ.. ಎಲ್ಲವೂ ಇದೆಲ್ಲವನ್ನೂ ಮಾಡಿರೋದು ಕಿಚ್ಚನಾ ಎಂದು ಹುಬ್ಬೇರಿಸುವಂತಿವೆ. ಅಷ್ಟರಮಟ್ಟಿಗೆ ಬದಲಾಗಿ ಹೋಗಿದ್ದಾರೆ ಕಿಚ್ಚ. 

    ಹೀಗಾಗಿಯೇ.. ಪೈಲ್ವಾನನ ಟೀಸರ್ ಅಭಿಮಾನಿಗಳಿಗಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜರನ್ನೂ ಬಡಿದೆಬ್ಬಿಸಿದೆ. ಪೈಲ್ವಾನ್ ಟೀಸರ್‍ಗೆ ವ್ಹಾವ್ ಎಂದಿರೋದು ಸಲ್ಮಾನ್. ಇದನ್ನು ಸ್ವತಃ ನಿರೀಕ್ಷಿಸಿರದೇ ಇದ್ದ ಸುದೀಪ್‍ಗೆ ಇದು ಅತಿದೊಡ್ಡ ಸರ್‍ಪ್ರೈಸ್. 

    ಇಷ್ಟೇ ಅಲ್ಲ, ತೆಲುಗು, ತಮಿಳು, ಬಾಲಿವುಡ್‍ನ ನಿರ್ದೇಶಕರು, ನಟರು ಪೈಲ್ವಾನ್ ಟೀಸರ್‍ನ್ನು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ಕಲಾವಿದರೂ, ತಂತ್ರಜ್ಞರು ಪೈಲ್ವಾನ್ ಟೀಸರ್ ನೋಡಿ.. ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಬೆನ್ನು ತಟ್ಟಿದ್ದಾರೆ. 

    ಅಂದಹಾಗೆ.. ಇದು ಟೀಸರ್ ಮಾತ್ರ. ಟ್ರೇಲರ್ ಬಾಕಿ ಇದೆ. ಸಿನಿಮಾ ಇನ್ನೂ ಬರಬೇಕಿದೆ.

  • ಪೈಲ್ವಾನ್ ಮೈಕಟ್ಟು.. ಆ ಬಾಯ್ ಫ್ರೆಂಡ್‍ಗೆ ಆಪತ್ತು..!

    interesting sory of husband and wife after watching pailwan

    ಪೈಲ್ವಾನ್ ಚಿತ್ರದಲ್ಲಿ ಎಲ್ಲರ ಕಣ್ಣು ಕುಕ್ಕಿರುವುದು ಸುದೀಪ್ ಅವರ ಮೈಕಟ್ಟು. ಪೈಲ್ವಾನ್‍ಗೆ ತಕ್ಕಂತೆ ಬಾಡಿ ಶೇಪ್ ಮಾಡಿಕೊಂಡಿರುವ ಸುದೀಪ್, ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದ್ದಾರೆ. ಕೃಷ್ಣ, ಸ್ವಪ್ನಾ ಕೃಷ್ಣ ಎಲ್ಲರೂ ಥ್ರಿಲ್ಲಾಗಿದ್ದಾರೆ. ಆದರೆ ಇಲ್ಲೊಬ್ಬ ಸ್ವತಃ ಸುದೀಪ್ ಅಭಿಮಾನಿಯಾಗಿರೋ ಯುವಕನೊಬ್ಬ ಯಾಕಪ್ಪಾ.. ಸುದೀಪಣ್ಣ ಹಿಂಗೆಲ್ಲ ಬಾಡಿ ಬಿಲ್ಡ್ ಮಾಡ್ಕೋಬೇಕಿತ್ತು ಅಂತಾ ಕಣ್ಣೀರು ಹಾಕ್ತಿದ್ದಾನೆ.

    ಸಿನಿಮಾ ನೋಡಿಕೊಂಡು ಮನೆಗೆ ಬಂದು ಹೆಂಡತಿಗೆ ಕಣ್ಣ ಮಣಿಯೇ.. ಕಣ್ಣು ಹೊಡೆಯೇ.. ಎಂದು ಹಾಡಲು ಹೋದವನಿಗೆ ಆತನ ಹೆಂಡತಿ.. ನೋಡಿ..ಆ ಸಿನಿಮಾಗಾಗಿ ಸುದೀಪ್ ಅದೆಷ್ಟು ವರ್ಕೌಟ್ ಮಾಡಿದ್ದಾರೆ. ಅವರು ಸಿನಿಮಾಗಾಗಿ ಅಷ್ಟೆಲ್ಲ ಕಷ್ಟಪಟ್ಟಿದ್ದಾರೆ. ನೀವು ಇದ್ದೀರ.. ಒಂದಿನವಾದ್ರೂ ಬೇಗ ಎದ್ದು ಜಾಗಿಂಗ್ ಮಾಡಿ, ವ್ಯಾಯಾಮ ಮಾಡ್ತೀರ. ದಿನಾ 10 ಗಂಟೆ ಗೊರಕೆ ಹೊಡ್ಕೊಂಡು ನಿದ್ದೆ ಮಾಡ್ತೀರಿ ಎಂದು ಸ್ವಾಟೆ ತಿವಿದಿದ್ದಾಳೆ. ಕಿಚ್ಚನ ಅಭಿಮಾನಿಯೊಬ್ಬ ತನ್ನ ಸ್ಟೇಟಸ್‍ನಲ್ಲಿ ಇದನ್ನು ಹಾಕಿಕೊಂಡು ಪ್ರತಿದಿನ ವ್ಯಾಯಾಮ ಮಾಡ್ತೀನಿ ಅಂತಾ ಪ್ರತಿಜ್ಞೆ ಮಾಡಿದ್ದಾನೆ.

  • ಪೈಲ್ವಾನ್ ರಿಲೀಸ್ ಮುಂದೆ ಹೋಗೋಕೆ ಕಾರಣ ಇಲ್ಲಿವೆ

    reasons why pailwan release got postponed

    ಈ ಮೊದಲು ಘೋಷಣೆ ಮಾಡಿದ್ದಂತೆ ಪೈಲ್ವಾನ್ ಸಿನಿಮಾ ಆಗಸ್ಟ್ 29ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಈಗ ಸೆಪ್ಟೆಂಬರ್ 12ಕ್ಕೆ ಮುಂದೂಡಲ್ಪಟ್ಟಿದೆ. ಜುಲೈ 27ಕ್ಕೆ ಪ್ಲಾನ್ ಮಾಡಿಕೊಂಡಿದ್ದಂತೆ ಆಡಿಯೋ ರಿಲೀಸ್ ಕೂಡ ಆಗುತ್ತಿಲ್ಲ. ಅದೂ ಕೂಡಾ ಆಗಸ್ಟ್‍ಗೆ ಮುಂದೂಡಲ್ಪಟ್ಟಿದೆ. ಇದೆಲ್ಲದಕ್ಕೂ ಕಾರಣಗಳಿವೆ.

    ಮೊದಲನೆಯ ಕಾರಣ ಪ್ರಭಾಸ್ ಅಭಿಯನಯದ ಸಾಹೋ ರಿಲೀಸ್. ಸಾಹೋ ಆಗಸ್ಟ್ 15ಕ್ಕೆ ಬರಬೇಕಿತ್ತು. ಬದಲಿಗೆ 2 ವಾರ ಮುಂದಕ್ಕೆ ಹೋಯ್ತು. ಇದರಿಂದಾಗಿ ಪೈಲ್ವಾನ್ ರಿಲೀಸ್‍ಗೆ ದೊಡ್ಡ ಪ್ರಾಬ್ಲಂ ಎದುರಾಯ್ತು.

    ಕರ್ನಾಟಕದಲ್ಲಷ್ಟೇ ರಿಲೀಸ್ ಮಾಡುವುದಾಗಿದ್ದರೆ ಸಮಸ್ಯೆ ಇರಲಿಲ್ಲ. ತಮಿಳುನಾಡು ಹಾಗೂ ಕೇರಳದಲ್ಲೂ ನೋ ಪ್ರಾಬ್ಲಂ. ಆದರೆ, ಹಿಂದಿ ಹಾಗೂ ತೆಲುಗಿನಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು. ಥಿಯೇಟರುಗಳ ಪ್ರಾಬ್ಲಂ ಎದುರಾಯ್ತು ಎನ್ನುತ್ತಾರೆ ಕೃಷ್ಣ. ಹೀಗಾಗಿಯೇ ಎಲ್ಲ ಭಾಷೆಗಳ ವಿತರಕರ ಜೊತೆ ಡಿಸ್ಕಸ್ ಮಾಡಿಯೇ ಸೆಪ್ಟೆಂಬರ್ 12ನ್ನು ಫೈನಲೈಸ್ ಮಾಡಿದ್ದಾರೆ.

    ತೆಲುಗಿನಲ್ಲಿ ಮಿನಿಮಮ್ 400 ಥಿಯೇಟರ್ ಹಾಗೂ ಹಿಂದಿಯಲ್ಲಿ 1500 ಥಿಯೇಟರುಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ಒಟ್ಟಾರೆ 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಪೈಲ್ವಾನ್ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿರು ಪೈಲ್ವಾನ್ ತಂಡ, ಇದಕ್ಕಾಗಿಯೇ ಬಿಡುಗಡೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಾಪಕಿ. ಕನ್ನಡದ ದುಬಾರಿ ಬಜೆಟ್‍ನ ಚಿತ್ರವನ್ನು ರಿಲೀಸ್ ಮಾಡಲು ಹೊರಟಾಗ ಬಿಸಿನೆಸ್ ದೃಷ್ಟಿಯಿಂದ ಎರಡು ಹೆಜ್ಜೆ ಹಿಂದೆ ಸರಿದು ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ ಕೃಷ್ಣ.

  • ಪೈಲ್ವಾನ್ ವಿರುದ್ಧ ಅಪಪ್ರಚಾರಕ್ಕೆ ಕಿಚ್ಚ ಹೇಳಿದ್ದೇನು..?

    sudeep's dignified reaction to negative publicity

    ಕಿಚ್ಚ ಸುದೀಪ್ ಅವರ ಪೈಲ್ವಾನ್ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಕೆಲವು ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರಕ್ಕೆ ಕೈ ಹಾಕಿದ್ದಾರೆ. ಕನ್ನಡದಲ್ಲಷ್ಟೆ ಅಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಪ್ರೇಕ್ಷಕ ಮಹಾಪ್ರಭು ಗೆದ್ದಾ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ. ಆದರೆ, ವಿಘ್ನ ಸಂತೋಷಿಗಳು ಎಲ್ಲೆಲ್ಲೂ ಇರುತ್ತಾರೆ ಅಲ್ವೇ. ಅಂತಹವರು ಸುದೀಪ್ ಅವರಂತಹ ಸ್ಟಾರ್ ನಟರನ್ನೂ ಬಿಟ್ಟಿಲ್ಲ. ಇದಕ್ಕೆಲ್ಲ ನೀವು ಉತ್ತರ ಕೊಡಿ ಎಂದು ಆಗ್ರಹಿಸಿದ ಅಭಿಮಾನಿಗಳಿಗೆ ಸುದೀಪ್ ಹೇಳಿರುವುದು ಇಷ್ಟು.

    `ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರನ್ನು ಆಡಿಕೊಳ್ಳಲು ಬಿಟ್ಟು ಬಿಡಿ. ಅವರ ಸಂತೋಷ ಅವರಿಗೆ. ಇಷ್ಟಕ್ಕೂ ಅವರು ಯಾಕೆ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾರೆ ಹೇಳಿ.. ನಾವು ಏನನ್ನಾದರೂ ಅದ್ಭುತವಾದದ್ದನ್ನು ಮಾಡಿ ತೋರಿಸಿದಾಗ. ಅವರನ್ನೆಲ್ಲ ಸೈಡಿಗಿಡಿ. ಚಿತ್ರವನ್ನು ಎಂಜಾಯ್ ಮಾಡಿ'

    ಹಲವು ಕಡೆ ಚಿತ್ರಮಂದಿರವೇ ಕಾಣದಷ್ಟು ಬ್ಯಾನರುಗಳು, ಅಭಿಮಾನಿಗಳ ಸಂದೇಶಗಳು ತುಂಬಿಕೊಂಡಿವೆ. ಮತ್ತೊಂದೆಡೆ ಪೈರಸಿ ಕ್ರಿಮಿನಲ್ಸ್ ಕಾಟವೂ ಇದೆ. ಇಷ್ಟೆಲ್ಲ ಇದ್ದರೂ ಚಿತ್ರಮಂದಿರಗಳು ತುಂಬಿ ತುಳುಕುತ್ತಿರುವುದೇ ಪೈಲ್ವಾನ್ ಮಾಡಿರುವ ಅತಿ ದೊಡ್ಡ ಸಾಧನೆ.

  • ಪೈಲ್ವಾನ್, ಕೆಜಿಎಫ್‍ಗಿಂತ ದೊಡ್ಡ ಮೊತ್ತಕ್ಕೆ ಸೇಲ್

    pailwan audio rights sold for record breaking amount

    ಕಳೆದ ವರ್ಷ ತೆರೆ ಕಂಡು ಅಬ್ಬರಿಸಿದ್ದ ಕೆಜಿಎಫ್-ಚಾಪ್ಟರ್ 1, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಚಿತ್ರವಾಗಿದ್ದ ಕೆಜಿಎಫ್ ಚಿತ್ರದ ಆಡಿಯೋ ಹಕ್ಕುಗಳೂ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದವು.

    ಈಗ ಆ ದಾಖಲೆಯನ್ನು ಸುದೀಪ್ ಅಭಿನಯದ ಪೈಲ್ವಾನ್ ಹಿಂದಿಕ್ಕಿದೆ. ಐದೂ ಭಾಷೆಗಳಲ್ಲಿ ಪೈಲ್ವಾನ್ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿರಿಸುವ ಲಹರಿ ಸಂಸ್ಥೆ, ಎಷ್ಟು ಮೊತ್ತಕ್ಕೆ ಖರೀದಿಯಾಗಿದೆ ಎನ್ನುವ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಆದರೆ, ಕೆಜಿಎಫ್‍ಗಿಂತ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವುದಂತೂ ಪಕ್ಕಾ.

    ಜುಲೈ 27ಕ್ಕೆ ಪೈಲ್ವಾನ್ ಆಡಿಯೋ ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ದಿನವೂ ಜುಲೈ 27.

  • ಪೈಲ್ವಾನ್‍ಗೆ ಪವರ್ ಸ್ಟಾರ್ ಪವರ್

    puneeth to be chief guest for pailwan audio release

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿರುವ ಚಿತ್ರವಿದು. 5 ಭಾಷೆಗಳಲ್ಲಿ ಸಿದ್ಧವಾಗಿರುವ ಪೈಲ್ವಾನ್ ಸೆಪ್ಟೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದುರ್ಗದಲ್ಲಿ ಆಡಿಯೋ ರಿಲೀಸ್.

    ಪೈಲ್ವಾನ್ ಆಡಿಯೋ ಬಿಡುಗಡೆಗೆ ಸುನಿಲ್ ಶೆಟ್ಟಿ ಕೂಡಾ ಬರುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಾರ್ಯಕ್ರಮದ ಸ್ಪೆಷಲ್ ಗೆಸ್ಟ್ ಆಗಿ ಬರುತ್ತಿರುವುದು ಪುನೀತ್ ರಾಜ್‍ಕುಮಾರ್. ಇದು ಸಹಜವಾಗಿಯೇ ಚಿತ್ರತಂಡದ ಖುಷಿ ಹೆಚ್ಚಿಸಿದೆ.

    ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನವಿದ್ದು, ಆಕಾಂಕ್ಷಾ ಸಿಂಗ್ ನಾಯಕಿ.

  • ಪೈಲ್ವಾನ್‍ಗೆ ಮುಂಬೈ ಮಳೆಯೇ ಪ್ರಾಬ್ಲಂ..!

    mumbai rain disturba pailwan's work

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಫೈನಲ್ ಟಚ್ ಹಂತದಲ್ಲಿದೆ. ಪ್ಲಾನ್ ಪ್ರಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿಲ್ಲ. ಬದಲಿಗೆ ಕಿಚ್ಚನ ಹುಟ್ಟುಹಬ್ಬಕ್ಕೆ ಬರಲಿದೆ. ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬ. ಅದಕ್ಕೆ 3 ದಿನ ಮೊದಲು ಪೈಲ್ವಾನ್ ರಿಲೀಸ್ ಆಗಲಿದೆ. ಕುರುಕ್ಷೇತ್ರ ಚಿತ್ರವೂ ಹಬ್ಬಕ್ಕೆ ಬರುತ್ತಿರುವುದು ಚಿತ್ರವನ್ನು ಮುಂದೂಡಲು ಮತ್ತೊಂದು ಕಾರಣ.

    ಇಷ್ಟಕ್ಕೂ ಪೈಲ್ವಾನ್‍ಗೆ ತೊಡಕಾಗಿರುವುದು ಗ್ರಾಫಿಕ್ಸ್ ಕೆಲಸ. ಗ್ರಾಫಿಕ್ಸ್‍ಗೆ ತೊಡಕಾಗಿರುವುದು ಮುಂಬೈ ಮಳೆ. ಮುಂಬೈನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಗ್ರಾಫಿಕ್ಸ್ ಕೆಲಸಗಳು ಅಂದುಕೊಂಡಂತೆ ವೇಗವಾಗಿ ಆಗುತ್ತಿಲ್ಲ. ಗ್ರಾಫಿಕ್ಸ್‍ಗೆ ಟ್ರಾಫಿಕ್ ಪ್ರಾಬ್ಲಂ.

    ಹೀಗಾಗಿ ಈಗಲೇ ಇಂಥದ್ದೇ ದಿನ ರಿಲೀಸ್ ಎಂದು ಹೇಳುವುದು ಕಷ್ಟ. ಗ್ರಾಫಿಕ್ಸ್ ಕೆಲಸ ಮುಗಿದ ಮೇಲಷ್ಟೇ ಉಳಿದ ಮಾತು ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಕೃಷ್ಣ.

  • ಪೈಲ್ವಾನ್‍ಗೆ ಶನಿವಾರ ಕುಂಭಳಕಾಯ್

    pailwan shooting to complete this week

    ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದೆ. ಇದೇ ಶನಿವಾರ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಸುದೀಪ್, ದೇಹವನ್ನು ಹುರಿಗಟ್ಟಿಸಿಕೊಂಡು ಕುಸ್ತಿ ಪಟು ಮತ್ತು ಬಾಕ್ಸಿಂಗ್ ಪಟುವಾಗಿ ನಟಿಸಿರುವ ಸಿನಿಮಾ ಪೈಲ್ವಾನ್.

    ಹೆಬ್ಬುಲಿ ಕೃಷ್ಣ ನಿರ್ದೇಶನದ ಸಿನಿಮಾಗೆ, ಅವರ ಪತ್ನಿ ಸ್ವಪ್ನಾ  ನಿರ್ಮಾಪಕಿ. 

    ಸುದೀಪ್ ಮತ್ತು ಆಕಾಂಕ್ಷಾ ಸಿಂಗ್ ಮೇಲಿನ ಡ್ಯುಯೆಟ್ ಹಾಡನ್ನು ಮುಂಬೈನಲ್ಲಿ ಚಿತ್ರೀಕರಿಸುತ್ತಿರುವ ಚಿತ್ರತಂಡ, ಶೂಟಿಂಗ್ ಮುಗಿದ ನಂತರವೂ ಅಲ್ಲಿಯೇ ಉಳಿಯಲಿದೆ. ಕಾರಣ, ಪೈಲ್ವಾನ್ ಚಿತ್ರದ ಮಾರ್ಕೆಟಿಂಗ್ ಕೆಲಸ. 

    ಒಟ್ಟಿಗೇ ಹಲವು ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಇರುವುದರಿಂದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮತ್ತು ವಿತರಣೆ ಬಗ್ಗೆಯೂ ಈಗಲೇ ತಲೆಕೆಡಿಸಿಕೊಂಡಿದೆ ಚಿತ್ರತಂಡ.

  • ಪೈಲ್ವಾನ್‍ಗೆ ಶಾರೂಕ್ ಟಚ್, 1 ನಿಮಿಷಕ್ಕೆ 20 ಲಕ್ಷ..!!!

    pailwan's vfx at sharukhkhan;s red chillies studioes

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಎಲ್ಲವೂ ಬಿಡುವಿಲ್ಲದೆ ನಡೆಯುತ್ತಿವೆ. ಇದರ ಜೊತೆ ಪೈಲ್ವಾನ್ ಚಿತ್ರಕ್ಕೆ ಶಾರೂಕ್ ಖಾನ್ ಟಚ್ ಸಿಕ್ಕಿದೆ. ಶಾರೂಕ್ ಒಡೆತನದ ರೆಡ್ ಚಿಲ್ಲೀಸ್‍ನಲ್ಲಿ ಪೈಲ್ವಾನ್ ಚಿತ್ರಕ್ಕೆ ಸ್ಪೆಷಲ್ ಎಫೆಕ್ಟ್ ಮಾಡಿಸಲಾಗುತ್ತಿದೆ.

    ಬಾಲಿವುಡ್‍ನಲ್ಲಿ ಶಾರೂಕ್ ಖಾನ್‍ರ ರೆಡ್ ಚಿಲ್ಲೀಸ್‍ಗೆ ಒಳ್ಳೆಯ ಹೆಸರಿದೆ. ದುಬಾರಿ ಎನ್ನುವುದು ನಿಜವಾದರೂ, ಕ್ವಾಲಿಟಿ ಹಾಗೆಯೇ ಇರುತ್ತೆ. ಹೀಗಾಗಿ, ಸ್ಪೆಷಲ್ ಎಫೆಕ್ಟ್‍ಗಳನ್ನು ರೆಡ್ ಚಿಲ್ಲೀಸ್‍ನಲ್ಲಿಯೇ ಮಾಡಿಸಲಾಗುತ್ತಿದೆ. ದುಬಾರಿ ಎಂದರೆ ಎಷ್ಟು ಗೊತ್ತೇ.. 1 ನಿಮಿಷದ ಸ್ಪೆಷಲ್ ಎಫೆಕ್ಟ್‍ಗೆ 20 ಲಕ್ಷ ರೂ.

    ಚಿತ್ರದ ಬಜೆಟ್ ದುಬಾರಿಯಾಯಿತು ಎನ್ನುವುದೇನೋ ನಿಜ. ಆದರೆ, ಕ್ವಾಲಿಟಿ ಮುಖ್ಯ. ಹೀಗಾಗಿ ಅಲ್ಲಿಯೇ ರೆಡಿ ಮಾಡಿಸುತ್ತಿದ್ದೇವೆ. ಎಲ್ಲ ಭಾಷೆಗಳ ಡಬ್ಬಿಂಗ್ ಕೂಡಾ ನಡೆಯುತ್ತಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡುವುದು ನಮ್ಮ ಪ್ಲಾನ್ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  • ಪೈಲ್ವಾನ್‍ನ ಈ ಪಟ್ಟು ಕುಸ್ತಿಪಟುಗಳೂ ಅಬ್ಬಾ ಎಂದರು..!

    pan india foes gaga over sudepp's pailwan

    ಎದುರಾಳಿಯ ಸೊಂಟಕ್ಕೆ ಕೈ ಹಾಕಿ, ಬೆನ್ನ ಹಿಂದಿನಿಂದ ಬಲವಾಗಿ ಹಿಡಿಯಬೇಕು. ಎದುರಾಳಿಯೂ ಅಷ್ಟೇ ಎತ್ತರದವನಾಗಿದ್ದರೆ, ಅದು ಇನ್ನೂ ಕಷ್ಟ. ಆತನನ್ನು ಬಲವಾಗಿ ಮಿಸುಕಲೂ ಸಾಧ್ಯವಾಗದಂತೆ ಹಿಡಿದು, ಬಲವಾಗಿ ಮೇಲೆತ್ತಿ, ನಮ್ಮ ಬೆನ್ನನ್ನೂ ಹಿಂದಕ್ಕೆ ಬಾಗಿಸಿ ಎದುರಾಳಿಯನ್ನು ಕೆಡವಬೇಕು. ಅಪ್ಪಿತಪ್ಪಿಯೂ ಆ ಹಂತದಲ್ಲಿ ನಮ್ಮ ಬೆನ್ನು ನೆಲಕ್ಕೆ ಸೋಕಬಾರದು. ಇದು ಕುಸ್ತಿಯ ಪಟ್ಟುಗಳಲ್ಲಿ ಒಂದು. ಅದನ್ನು ಭೀಮಪಟ್ಟು ಎನ್ನುತ್ತಾರೆ. ಕುಸ್ತಿಯಲ್ಲಿ ಪ್ರಧಾನ ಹಂತಗಳಲ್ಲಿರುವವರು ಮಾತ್ರವೇ ಬಳಸುವ ಬಿಗಿಯಾದ ಪಟ್ಟು ಅದು. ಅದನ್ನು ಸುದೀಪ್ ಪೈಲ್ವಾನ್ ಚಿತ್ರದಲ್ಲಿ ಮಾಡಿದ್ದಾರೆ. ಕುಸ್ತಿಪಟುಗಳೂ ಅಬ್ಬಾ ಎಂದಿರುವುದು ಈ ಕಾರಣಕ್ಕೆ. ಈ ಸ್ಟಂಟ್ ಹಿಂದಿರುವ ಶ್ರಮ, ಪರಮ ರೋಚಕ ಕಥೆ ಅಂಥದ್ದು.

    ಅದಕ್ಕಾಗಿ ಸುದೀಪ್ 9 ತಿಂಗಳು ತಯಾರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಸ್ಟಂಟ್‍ಗೆ ಸುದೀಪ್ ಡ್ಯೂಪ್ ಬಳಸಿಲ್ಲ. ಆದರೆ, ಬಾಲಿವುಡ್‍ನಲ್ಲಿ ಅಂತಹ ದೃಶ್ಯಗಳಿಗೆ ಡ್ಯೂಪ್ ಬಳಸಲಾಗಿದೆ. ಸುದೀಪ್ ತಮ್ಮ ಇಡೀ ಶ್ರಮವನ್ನು ಆ ಪಾತ್ರ ಮತ್ತು ಕುಸ್ತಿಯ ಮೇಲೆ ಹಾಕಿದ್ದಾರೆ ಎಂದು ಪೈಲ್ವಾನ್‍ನ ಆ ಪಟ್ಟಿನ ಕಥೆ ಹೇಳಿದ್ದಾರೆ ನಿರ್ದೇಶಕ ಕೃಷ್ಣ.

    ಚಿತ್ರದಲ್ಲಿ ದೇಸಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಇದ್ದು, ಎರಡನ್ನೂ ಮಾಡಿದ್ದಾರಂತೆ ಬಾದ್‍ಷಾ ಪೈಲ್ವಾನ್ ಕಿಚ್ಚ.

  • ಪ್ರಭಾಸ್‍ಗೆ ದರ್ಶನ್ ಅಲ್ಲ, ಪೈಲ್ವಾನ್ ಎದುರಾಳಿ..!

    pailwan vs saaho at box office

    ಕುರುಕ್ಷೇತ್ರ ಸಿನಿಮಾ ಆಗಸ್ಟ್ 2ನೇ ತಾರೀಕು ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಒಂದು ವಾರ ಹಿಂದಕ್ಕೆ ಹೋಗಿ ಪ್ರೇಕ್ಷಕರ ಎದುರು ಬರುತ್ತಿದೆ. ಮೊದಲಿನಂತೆ ಆಗಿದ್ದರೆ ಕುರುಕ್ಷೇತ್ರಕ್ಕೆ ಪ್ರಭಾಸ್ ಅಭಿನಯದ ಸಾಹೋ ಫೈಟ್ ಕೊಡಬೇಕಿತ್ತು. ಒಂದೇ ವಾರದ ಗ್ಯಾಪಲ್ಲಿ ಸಾಹೋ ಎದುರಾಗುತ್ತಿತ್ತು. ಆಗಸ್ಟ್ 15ಕ್ಕೆ ಪ್ರಭಾಸ್ ಅಭಿನಯದ ಸಾಹೋ ರಿಲೀಸ್ ಆಗುತ್ತಿತ್ತು.

    ಆದರೆ ಈಗ ಸಾಹೋ ರಿಲೀಸ್ ಮುಂದಕ್ಕೆ ಹೋಗಿದೆ ಎಂಬ ಸುದ್ದಿಗಳಿವೆ. ಆಗಸ್ಟ್ 15ರ ಬದಲು 29ಕ್ಕೆ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.

    ಹಾಗೇನಾದರೂ ಆದರೆ, ಪ್ರಭಾಸ್ ಚಿತ್ರಕ್ಕೆ ಸುದೀಪ್‍ರ ಪೈಲ್ವಾನ್ ಮುಖಾಮುಖಿಯಾಗಲಿದೆ. ಬಾಹುಬಲಿ 2 ನಂತರ ಪ್ರಭಾಸ್ ನಟಿಸಿರುವ ಯಾವುದೆ ಚಿತ್ರ ತೆರೆಕಂಡಿಲ್ಲ. ಸುದೀಪ್ ಕೂಡ ದೊಡ್ಡ ಗ್ಯಾಪ್ ನಂತರವೇ ತೆರೆಗೆ ಬರುತ್ತಿದ್ದಾರೆ. ಅದರಲ್ಲೂ ವಿಶೇಷ ಪಾತ್ರ, ಗೆಟಪ್‍ನಲ್ಲಿ. ಹೀಗಾಗಿ ಪೈಲ್ವಾನ್ ವರ್ಸಸ್ ಸಾಹೋ ವಾರ್ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಿಗಂತೂ ಇದೆ.

  • ಬಂದ ನೋಡು ಪೈಲ್ವಾನ್..

    banda nodo pailwan song

    ಪೈಲ್ವಾನ್ ತೋಳು ನೋಡು ಉಕ್ಕು.. ಒಂದೇ ಏಟು ಸಾಕು.. ದೇವ್ರೇ ನಿಂಗೆ ದಿಕ್ಕು..  ಬಂದ ನೋಡು ಪೈಲ್ವಾನ್..

    ಪೈಲ್ವಾನ್ ಚಿತ್ರದ ಥೀಮ್ ಮ್ಯೂಸಿಕ್ ಇರುವ ಹಾಡಿದು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಮೊದಲ ಖುಷಿ ಕೊಟ್ಟಿದೆ ಪೈಲ್ವಾನ್ ಟೀಂ. ಪೋಸ್ಟರುಗಳು ಹಾಗೂ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಪೈಲ್ವಾನ್ ಚಿತ್ರದ ಲಿರಿಕಲ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

    ಕಿಚ್ಚ ಸುದೀಪ್ ಹುರಿಗಟ್ಟಿದ ದೇಹ ಇಡೀ ಹಾಡಿನಲ್ಲಿ ಎದ್ದು ಕಂಡರೆ, ಬ್ಯಾಕ್‍ಗ್ರೌಂಡ್‍ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ ಅರ್ಜುನ್ ಜನ್ಯ. ಮ್ಯೂಸಿಕ್ಕು ಕಿಕ್ಕೇರಿಸುತ್ತಿದೆ ಎನ್ನುವುದು ಅಭಿಮಾನಿಗಳ ಒನ್‍ಲೈನ್ ಕಾಂಪ್ಲಿಮೆಂಟ್.

    ಕೃಷ್ಣ ನಿರ್ದೇಶನದ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಇಡೀ ಚಿತ್ರದಲ್ಲಿ ಈ ಹಾಡು ಪದೇ ಪದೇ ಬರಲಿದ್ದು, ಇಡೀ ಚಿತ್ರದ ಥೀಮ್ ಸಾಂಗ್ ಇದು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಐದೂ ಭಾಷೆಯಲ್ಲಿ ಲಿರಿಕಲ್ ವಿಡಿಯೋ ಬಂದಿದೆ.

  • ಬಾರೋ ಪೈಲ್ವಾನ.. ಹಾಡು ಸೂಪರೋ ಅಣ್ಣಾ

    baro pailwan creates sensation

    ಪೈಲ್ವಾನ್ ಚಿತ್ರದ ಮತ್ತೊಂದು ಸಾಂಗ್ ಇದು. ಬಾರೋ ಪೈಲ್ವಾನ.. ಹಾಡಿದು. ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಈ ಪೈಲ್ವಾನ್‍ಗೆ.. ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ.. ಎಂದು ಶುರುವಾಗುವ ಹಾಡು ತಾರಕಕ್ಕೆ ಹೋಗುವುದು ಬಾರೋ ಪೈಲ್ವಾನ್ ಎಂಬ ಬ್ಯಾಕ್‍ಗ್ರೌಂಡ್ ಸೌಂಡ್ ಶುರುವಾದಾಗ..

    ಇದು ಪೈಲ್ವಾನ್‍ನ ಇಂಟ್ರೊಡಕ್ಷನ್ ಸಾಂಗ್. ಹೆಜ್ಜೆ ಹಾಕಿರೋದು ಸುದೀಪ್ ಒಬ್ಬರೇ ಅಲ್ಲ, ಸುನಿಲ್ ಶೆಟ್ಟಿ ಕೂಡಾ ಸ್ಟೆಪ್ಪು ಹಾಕಿದ್ದಾರೆ. ಐದೂ ಭಾಷೆಯಲ್ಲಿ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದ್ದು, ಕನ್ನಡವೊಂದರಲ್ಲೇ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ.

    ಅರ್ಜುನ್ ಜನ್ಯ ಮ್ಯೂಸಿಕ್ಕು ಒನ್ಸ್ ಎಗೇಯ್ನ್ ಕಿಕ್ಕೇರಿಸುತ್ತಿದ್ದರೆ, ವಿಜಯ್ ಪ್ರಕಾಶ್, ಕೈಲಾಷ್ ಖೇರ್ ಮತ್ತು ಚಂದನ್ ಶೆಟ್ಟಿಯವರ ವಾಯ್ಸ್ ಕಿವಿಯಲ್ಲಿ ಮಾರ್ದನಿಸುವಂತಿದೆ. ಸಾಹಿತ್ಯ ಕೃಪೆ ನಾಗೇಂದ್ರ ಪ್ರಸಾದ್ ಅವರದ್ದು.

    ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣಾ ಅವರೇ ನಿರ್ಮಾಪಕಿ. ಹಾಡಿನ ಜೋಷ್ ಮತ್ತು ಫೋರ್ಸ್ ಬಗ್ಗೆ ಸೆಲಬ್ರಿಟಿಗಳು ಮತ್ತು ಫ್ಯಾನ್ಸ್ ಫಿದಾ ಆಗಿದ್ದಾರೆ. ಅರ್ಜುನ್ ಜನ್ಯಾಗೆ ಹೆಚ್ಚು ಸ್ಕೋರ್ ಕೊಟ್ಟಿದ್ದಾರೆ.

  • ಬೆಂಗಳೂರಲ್ಲೇ ಪೈಲ್ವಾನ್ ಆಡಿಯೋ ಹಬ್ಬ

    oailwan audio release in bangalore

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಇಷ್ಟು ಹೊತ್ತಿಗೆ ಆಗಿ ಹೋಗಿರಬೇಕಿತ್ತು. ಆಡಿಯೋ ರಿಲೀಸ್‍ಗೆ ಚಿತ್ರದುರ್ಗದಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನವೇ ಆಗಬೇಕಿದ್ದ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿತ್ತು. ಕಾರಣ, ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದ ಪ್ರವಾಹ. ಇಡೀ ರಾಜ್ಯ ಕಷ್ಟದಲ್ಲಿರುವಾಗ ಆಡಿಯೋ ರಿಲೀಸ್ ಸರಿಯಲ್ಲ ಎಂದುಕೊಂಡು ಕಾರ್ಯಕ್ರಮ ಮುಂದೂಡಿದ್ದರು.

    ಈಗ ಚಿತ್ರತಂಡ ಆಡಿಯೋ ರಿಲೀಸ್‍ನ್ನು ಬೆಂಗಳೂರಿನಲ್ಲೇ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬಹುಶಃ ಆಗಸ್ಟ್ 18ರಂದು ಆಡಿಯೋ ರಿಲೀಸ್ ಆಗಬಹುದು.

    ಚಿತ್ರದುರ್ಗದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಎಲ್ಲವೂ ಫಿಕ್ಸ್ ಆಗಿತ್ತು. ಅತಿಥಿಯಾಗಿ ಪುನೀತ್ ರಾಜ್‍ಕುಮಾರ್ ಬರಬೇಕಿತ್ತು. ಕಲಾವಿದರೂ ಡೇಟ್ಸ್ ಹೊಂದಿಸಿಕೊಂಡಿದ್ದರು. ಈಗ ಬೆಂಗಳೂರಿನಲ್ಲಿ ನಡೆದರೆ, ಮತ್ತೆ ಎಲ್ಲವನ್ನೂ ಮೊದಲಿನಿಂದಲೇ ಪ್ಲಾನ್ ಮಾಡಬೇಕು. ನಿರ್ದೇಶಕ ಕೃಷ್ಣ, ಸುದೀಪ್, ನಿರ್ಮಾಪಕಿ ಸ್ವಪ್ನಾ ಕೃಷ್ಣ ಈ ಕುರಿತು ಮಾತುಕತೆ ನಡೆಸುತ್ತಿದ್ದಾರೆ.

  • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

    sudeep's daughters first reaction on pailwan

    ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

    ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

  • ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ ಸುದೀಪ್

    sudeep to learn martial arts in thailan

    ಕಿಚ್ಚ ಸುದೀಪ್ ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ. ಕುಸ್ತಿ, ಬಾಕ್ಸಿಂಗ್ ಜೊತೆ ಮಾರ್ಷಲ್ ಆಟ್ರ್ಸ್‍ನ್ನೂ ಕಲಿತು ಬರಲಿದ್ದಾರೆ ಸುದೀಪ್. ಇದಕ್ಕಾಗಿ ಅವರು ಥೈಲ್ಯಾಂಡ್‍ಗೆ ಹೋಗುತ್ತಿದ್ದಾರೆ. ಅಲ್ಲಿ 2ರಿಂದ 3  ವಾರಗಳ ಕಾಲ ಇದ್ದು, ಮಾರ್ಷಲ್ ಆಟ್ರ್ಸ್ ಬೇಸಿಕ್ ಕಲಿತುಬರಲಿದ್ದಾರೆ.

    ಅಂದಹಾಗೆ ಸುದೀಪ್ ಇಷ್ಟೆಲ್ಲ ತಯಾರಿ ನಡೆಸುತ್ತಿರುವುದು ಪೈಲ್ವಾನ್ ಚಿತ್ರಕ್ಕಾಗಿ. ಈಗ ಬೆಂಗಳೂರಿನಲ್ಲೇ ಬೆವರು ಹರಿಸುತ್ತಿರುವ ಸುದೀಪ್, ಮಾರ್ಷಲ್ ಆಟ್ರ್ಸ್ ಕಲಿಯೋಕೆ ಹೋಗುವ ಮುನ್ನ ಫಿಟ್ ಆಗಿರಬೇಕು. ಆ ಫಿಟ್‍ನೆಸ್ ಬಂದ ನಂತರವೇ ಮಾರ್ಷಲ್ ಆಟ್ರ್ಸ್ ತರಬೇತಿ ಶುರುವಾಗಲಿದೆ.

    ಚಿತ್ರದ ಚಿತ್ರೀಕರಣ ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಲಿದೆ. ಸುದೀಪ್ ಅವರ ಮಾರ್ಷಲ್ ಆಟ್ರ್ಸ್ ಕಲೆ ಪ್ರೇಕ್ಷಕರಿಗೆ ಪರಿಚಯವಾಗುವುದು ಚಿತ್ರದ ಕ್ಲೈಮಾಕ್ಸ್‍ನಲ್ಲಿ. ಉಳಿದಂತೆ ಚಿತ್ರದ ಚಿತ್ರೀಕರಣ ಸರಾಗವಾಗಿ ನೆರವೇರಲಿದೆ. ಮಾತಿನ ಭಾಗ ಮುಗಿಸಿಕೊಳ್ಳಲಿದ್ದೇವೆ. ಸದ್ಯಕ್ಕೆ ವಿಲನ್ ಚಿತ್ರೀಕರಣ ಮುಗಿಯುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  • ಮುಚ್ಚಿದ್ದ ಥಿಯೇಟರ್ ಓಪನ್ ಮಾಡಿಸಿದ ಪೈಲ್ವಾನ್..!

    pailwan brings good news to kannada film industry

    ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಥಿಯೇಟರ್ ಜಾಗ ಮಾಲ್ಗಳಾಗಿವೆ. ಮಲ್ಟಿಪ್ಲೆಕ್ಸುಗಳಾಗಿವೆ. ಅತ್ತ ಗ್ರಾಮೀಣ ಪ್ರದೇಶಕ್ಕೆ ಹೋದರೆ.. ಅಲ್ಲಿ ಇನ್ನೊಂದು ಸಮಸ್ಯೆ. ಕೆಲವು ಚಿತ್ರಮಂದಿರಗಳು ಬೇರೇನೂ ಮಾಡಲು ಸಾಧ್ಯವಾಗದೆ ಬಾಗಿಲು ಮುಚ್ಚುತ್ತಿವೆ. ಗಡಿ ಭಾಗದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರುಗಳೇ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪೈಲ್ವಾನ್ ಉತ್ತರ ಕೊಟ್ಟಿದೆ.

    ಗ್ರಾಮೀಣ ಭಾಗದಲ್ಲಿ ಮುಚ್ಚಲ್ಪಟ್ಟಿದ್ದ ಕೆಲವು ಚಿತ್ರಮಂದಿರಗಳು ಪೈಲ್ವಾನ್ ಚಿತ್ರಕ್ಕಾಗಿ ರೀ-ಓಪನ್ ಆಗಿವೆ. ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೈದರಾಬಾದ್ ಕರ್ನಾಟಕ, ಕೋಲಾರದಲ್ಲಿ ಕೆಲವು ಚಿತ್ರಮಂದಿರಗಳು ಪೈಲ್ವಾನನಿಗಾಗಿ ಮತ್ತೆ ಬಾಗಿಲು ತೆರೆದಿವೆ. ಅದರಲ್ಲೂ ಗ್ರಾಮೀಣ ಪ್ರದೇಶಧ ‘ಸಿ' ಸೆಂಟರ್ ಟಾಕೀಸುಗಳು ಮತ್ತೆ ಪ್ರದರ್ಶನ ಆರಂಭಿಸಿವೆ.

    ಪೈಲ್ವಾನ್ ಮಾದರಿಯ ಇನ್ನೂ ಹಲವು ಚಿತ್ರಮಂದಿರಗಳು ಬಂದರೆ ಚಿತ್ರರಂಗಕ್ಕೆ ಖಂಡಿತಾ ಶುಭ ಸೂಚನೆಯಾಗಲಿದೆ. ಪೈಲ್ವಾನ್ 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದು, 3000ಕ್ಕೂ ಹೆಚ್ಚು ಸೆಂಟರ್ನಲ್ಲಿ ಶೋ ಇವೆ. ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್ಗೆ ಹೆಬ್ಬುಲಿ ಕೃಷ್ಣ ನಿರ್ದೇಶಕ.

  • ಮೊದಲ ದಿನವೇ 10 ಕೋಟಿ ಕ್ಲಬ್ ಸೇರಿದ ಪೈಲ್ವಾನ್

    pailwan joins 10 crore club on first day itself

    5 ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲೆಡೆಯಿಂದ ಮೆಚ್ಚುಗೆ ಸ್ವೀಕರಿಸುತ್ತಿರುವ ಸಿನಿಮಾ ಪೈಲ್ವಾನ್. ಕ್ಲಾಸ್ ಮತ್ತು ಮಾಸ್.. ಎರಡೂ ವರ್ಗದ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಏಕಕಾಲಕ್ಕೆ ಶಹಬ್ಬಾಸ್ ಎನಿಸಿಕೊಂಡಿರುವ ಪೈಲ್ವಾನ್ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. 10 ಕೋಟಿ ಕ್ಲಬ್ ಸೇರಿದೆ.

    ಇದು ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಮೊದಲ ದಿನದ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಈಗಲೂ ಸುದೀಪ್-ಶಿವಣ್ಣ ನಟಿಸಿದ್ದ ದಿ ವಿಲನ್ ಚಿತ್ರದ ಹೆಸರಲ್ಲಿಯೇ ಇದೆ. ಅದು ಫಸ್ಟ್ ಡೇ 20 ಕೋಟಿ ಕಲೆಕ್ಷನ್ ಮಾಡಿತ್ತು.

    ಕಲೆಕ್ಷನ್ ಭರ್ಜರಿಯಾಗಿ ಆಗಿದೆ ಎನ್ನುವುದು ಸತ್ಯ. ಆದರೆ ಎಷ್ಟು ಎನ್ನುವುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಪಕ್ಕಾ ಲೆಕ್ಕ ಸಿಗೋಕೆ ಇನ್ನೂ ಟೈಂ ಬೇಕು. ಎಲ್ಲ ಭಾಷೆಗಳಲ್ಲೂ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಒಂದು ವಾರ ಹೀಗೆಯೇ ಕಂಟಿನ್ಯೂ ಆದರೆ, ಹಾಕಿದ ಬಂಡವಾಳ ನಮ್ಮ ಕೈ ಸೇರಲಿದೆ ಎಂದಿದ್ದಾರೆ ನಿರ್ದೇಶಕ ಕೃಷ್ಣ. ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರೇ ನಿರ್ಮಾಪಕಿ.

    ಅಂದಹಾಗೆ ಪೈಲ್ವಾನ್ ಚಿತ್ರಕ್ಕೆ ಸುಮಾರು 45 ಕೋಟಿ ಖರ್ಚಾಗಿದೆಯಂತೆ.