ಪೈಲ್ವಾನ್‍ಗೂ ಮೊದಲು ಬಂದ ಸಿನಿಮಾಗಳಿಗೂ, ಪೈಲ್ವಾನ್‍ಗೂ ಇರುವ ಅತಿ ದೊಡ್ಡ ವ್ಯತ್ಯಾಸ ಸುದೀಪ್‍ರ ಫಿಟ್‍ನೆಸ್. ಹುರಿಗಟ್ಟಿದ ದೇಹ, ಕಟ್ಟುಮಸ್ತಾದ ತೋಳು, ಮೀನಖಂಡ ಉಬ್ಬಿರುವಂತ ಕಾಲು, ಅಗಲಗೊಂಡಿರುವ ಎದೆ, ಮಡಿಕೆಯಾಗಿರುವ ಹೊಟ್ಟೆ.. ಎಲ್ಲವೂ ಡಿಫರೆಂಟ್. ಅದೆಲ್ಲವನ್ನೂ ಸುದೀಪ್ ಏಕಾಏಕಿ ಸಾಧಿಸಿದ್ದಲ್ಲ. ಅದರ ಹಿಂದೆ ಸುದೀರ್ಘ ಶ್ರಮವಿದೆ.
`ವಿಲನ್ ಮಾಡುವಾಗ ಸ್ವಲ್ಪ ದಪ್ಪಗಾಗಿದೆ. ಓವರ್ ವೇಯ್ಟ್ ಎನ್ನಬಹುದು. ಆದರೆ, ಪೈಲ್ವಾನ್ ಒಪ್ಪಿಕೊಂಡಾಗ ದೈಹಿಕವಾಗಿ ಸಿದ್ಧವಾಗುವುದಕ್ಕಿಂತ ಮಾನಸಿಕವಾಗಿ ಸಿದ್ಧವಾಗಬೇಕು. ಪೈಲ್ವಾನ್‍ಗೆ ಮೊದಲು ಅನುಸರಿಸಿದ ಜಿಮ್, ಲೈಫ್‍ಸ್ಟೈಲ್ ಎಲ್ಲವೂ ಶಿಸ್ತುಬದ್ಧ. ಊಟದಲ್ಲಿ ಉಪ್ಪು, ಖಾರ ಇರಲಿಲ್ಲ. ಸ್ವೀಟ್ ಮುಟ್ಟುವಂತೆಯೇ ಇರಲಿಲ್ಲ. ಲಿಕ್ಕರ್ ದೂರ ದೂರ. ದಿನಕ್ಕೆ 5 ಹೊತ್ತು ಊಟ. ಆದರೆ, ಇಷ್ಟೇ ಗ್ರಾಂ ತಿನ್ನಬೇಕು ಎನ್ನುವ ಷರತ್ತು. ನಿದ್ದೆಯೂ ಅಷ್ಟೇ. ಟ್ರೈನರ್ ಹೇಳಿದ್ದಕ್ಕಿಂತ ನಿಮಿಷವೂ ಹೆಚ್ಚಾಗುವಂತಿಲ್ಲ. ಕಡಿಮೆಯೂ ಆಗುವಂತಿಲ್ಲ. ಹೀಗೆ ಅನುಸರಿಸಿದ ಶಿಸ್ತುಬದ್ಧ ಡಯಟ್ ಕೊಟ್ಟ ದೇಹ ಇದು' ಎನ್ನುತ್ತಾರೆ ಸುದೀಪ್.
ಪೈಲ್ವಾನ್ ಕನ್ನಡದ ಸಿನಿಮಾ ಎನ್ನುವುದಕ್ಕಿಂತ ಭಾರತೀಯ ಸಿನಿಮಾ ಎನ್ನುವ ಸುದೀಪ್, ಕೃಷ್ಣ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ಪೈಲ್ವಾನ್ ಹಬ್ಬದ ವಾತಾವರಣ ಸೃಷ್ಟಿಸಿದೆ.
ಅಂದಹಾಗೆ ಪೈಲ್ವಾನ್ ಶುರು ಮಾಡಿದಾಗ 89 ಕೆಜಿ ತೂಕವಿದ್ದ ಸುದೀಪ್, ತಮ್ಮ ದೇಹದ ತೂಕವನ್ನು 73 ಕೆಜಿಗೆ ಇಳಿಸಿಕೊಂಡರಂತೆ. ಅಂದ್ರೆ 16 ಕೆಜಿ ತೂಕ ಇಳಿಕೆ.