ಸುದೀಪ್ ತಮ್ಮ ಪೈಲ್ವಾನ್ ಬಿಡುಗಡೆಗೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರಿಗೆ ಪ್ರಶ್ನೆ ಕೇಳಲು ಕಾತುರಗೊಂಡಿದ್ದವರಿಗೆ ಸೋಷಿಯಲ್ ಮೀಡಿಯಾದ ಮೂಲಕವೇ ಸಿಕ್ಕಿದ್ದಾರೆ. ಸ್ಟಾರ್ ನಟರು, ನಿರ್ದೇಶಕರು ಸುದೀಪ್ ಅವರಿಗೆ ಕೇಳಿದ ಪ್ರಶ್ನೆ ಮತ್ತು ಆ ಎಲ್ಲ ಪ್ರಶ್ನೆಗಳಿಗೆ ಸುದೀಪ್ ನೀಡಿರುವ ಉತ್ತರ ಇಲ್ಲಿದೆ.
ರಕ್ಷಿತ್ ಶೆಟ್ಟಿ : ನಿಮ್ಮ ವರ್ಕೌಟ್ ಮತ್ತು ಡಯಟ್ ಪ್ಲಾನ್ ಹಂಚಿಕೊಳ್ಳಬಹುದಾ..?
ಸುದೀಪ್ ; ಹಾಯ್ ರಕ್ಷಿತ್, ಬರೀ ಕಥೆ ಬರೆಯೋದ್ರಲ್ಲಿ, ಅವನೇ ಶ್ರೀಮನ್ನಾರಾಯಣ ಸಂಭಾಷಣೆ ಇಂಪ್ರೂವ್ ಮಾಡೋದು, 777 ಚಾರ್ಲಿ ಆ್ಯಕ್ಟಿಂಗ್ ಮಾಡ್ಕೊಂಡ್ ಇದ್ರೆ ಹೇಗೆ..? ಮೊದಲು ಜಿಮ್‍ಗೆ ಹೋಗಬೇಕು, ಉಳಿದದ್ದು ನಂತರ ಹೇಳ್ತೇನೆ
ಸಿಂಪಲ್ ಸುನಿ : ನಿಮಗೆ ಕಿಚ್ಚ ಸುದೀಪ್ ಎಂದು ಕರೆದರೋ ಇಷ್ಟಾನೋ.. ಪೈಲ್ವಾನ್ ಸುದೀಪ್ ಎಂದು ಕರೆದರೆ ಇಷ್ಟಾನೋ..?
ಸುದೀಪ್ : ನಿಮ್ಮ ಕನ್ನಡದ ಟ್ವೀಟ್‍ಗಳು ನನಗಿಷ್ಟ. ಪ್ರೀತಿಯಿಂದ ಹೇಗೆ ಕರೆದರೂ ಇಷ್ಟವಾಗುತ್ತೆ.
ರಿಷಬ್ ಶೆಟ್ಟಿ : ಪೈಲ್ವಾನ್ ಕಥೆ ಕೇಳಿದಾಗ ಯಾವ ವಿಷಯ ಎಕ್ಸೈಟಿಂಗ್ ಎನಿಸಿತು. ಒನ್‍ಲೈನ್‍ನಲ್ಲಿ ಹೇಳ್ತಿರಾ..?
ಸುದೀಪ್ : ಅದನ್ನು ನಾನು ನಿಮ್ಮ ಬಳಿಯೇ ಕಲಿಯಬೇಕು. ದೊಡ್ಡ ದೊಡ್ಡ ವಿಷಯವನ್ನು ಚಿಕ್ಕದಾಗಿ ಹೇಳ್ತೀರಿ. ಚಿಕ್ಕದಾಗಿ ಹೇಳೋದು ಹೇಗೆ ಅನ್ನೋದನ್ನ ನಿಮ್ಮ ಬಳಿಯೇ ಕಲಿಯಬೇಕು.
ಕಾರ್ತಿಕ್ ಗೌಡ : ಕುಸ್ತಿ ಇಷ್ಟವೋ..? ಬಾಕ್ಸಿಂಗ್ ಇಷ್ಟವೋ..?
ಸುದೀಪ್ : ಯಾಕೆ ನೆನಪಿಸಿ ನೆನಪಿಸಿ ಗಾಯದ ಮೇಲೆ ಬರೆ ಎಳೆಯುತ್ತೀರಿ. ಶೂಟಿಂಗ್ ಶುರುವಾಗುವ ಮುನ್ನ ಎರಡರ ಮೇಲೂ ಆಸಕ್ತಿ ಇತ್ತು. ಆದರೆ, ಶೂಟಿಂಗ್ ಶುರುವಾದ ಮೇಲೆ ಮುಗಿದರೆ ಸಾಕಪ್ಪಾ ಎನ್ನುವಂತಾಗಿ ಹೋಯ್ತು.
ಸ್ವಪ್ನಾ ಕೃಷ್ಣ : ನಿಮ್ಮ ಪ್ರಕಾರ ಪೈಲ್ವಾನ್ ಯಾರು..?
ಸುದೀಪ್ : ಪ್ರಾಜೆಕ್ಟ್ ಶುರುವಾದಾಗ ನಾನೇ ಪೈಲ್ವಾನ್ ಆಗಿದ್ದೆ. ಚಿತ್ರೀಕರಣ ಶುರುವಾದ ಮೇಲೆ ನಿರ್ಮಾಪಕರು ಪೈಲ್ವಾನ್ ಎನಿಸಿತು. ನಂತರ ಅರ್ಜುನ್ ಜನ್ಯಾ ಮತ್ತು ವಿತರಕರು ಪೈಲ್ವಾನ್ ರೀತಿ ಕಾಣಿಸಿದ್ರು. ಈಗ ಪ್ರೇಕ್ಷಕರು ಪೈಲ್ವಾನ್ ಎನಿಸುತ್ತಿದೆ.
ಅಭಿಮಾನಿ : ಕ್ರಿಕೆಟ್ ಆಟಗಾರರ ಬಯೋಪಿಕ್ ಮಾಡುವ ಅವಕಾಶ ಬಂದರೆ ಯಾವ ಆಟಗಾರನ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೀರಿ..?
ಸುದೀಪ್ : ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ.
ಪ್ರಿಯಾ ಸುದೀಪ್ : ಹಲೋ ಬ್ಯುಸಿ ಹಸ್ಬೆಂಡ್.. ಮನೆಗೆ ಯಾವಾಗ ಬರುತ್ತೀರಿ..?
ಸುದೀಪ್ : ಶೀಘ್ರದಲ್ಲೇ ಬರುತ್ತೇನೆ. ಸದ್ಯಕ್ಕೆ ದಬಾಂಗ್-3ಗಾಗಿ ಸಲ್ಮಾನ್ ಖಾನ್ ವಶದಲ್ಲಿದ್ದೇನೆ. ಅವರು ಕಳಿಸಿದ ಕೂಡಲೇ ಬರುತ್ತೇನೆ.