` pailwan, - chitraloka.com | Kannada Movie News, Reviews | Image

pailwan,

  • 'Pailwaan' To Start By January End

    pailwan to start this month end

    Actor Sudeep has confirmed that his next film 'Pailwaan' which is being directed and produced by S Krishna is all set to go on floors during January end.

    Sudeep himself has clarified in his tweeter account about his schedule this year. There was some wrong news in the media about Sudeep's schedule this year. Sudeep himself tweeted and clarified about his schedule.

    'A wrong interpretation of my shooting schedule or probably wrong news reaching the gentleman who wrote this. 'Kotigobba 3' starts in the first half of 2018. Very happy with director Karthik and Soorappa Babu's enthu regarding the project. Joining them soon post Krishna's Pailwaan starting January end' tweeted Sudeep.

  • ಅಕ್ಟೋಬರ್​ನಲ್ಲೇ ಪೈಲ್ವಾನ್ ರಿಲೀಸ್..!

    pailwan will release in oct?

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ನಾಯಕಿಯ ಆಯ್ಕೆಯೇ ಆಗಿಲ್ಲ. ಚಿತ್ರತಂಡ ಇನ್ನೂ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಅಭಿಮಾನಿಗಳಿಗೆ ಚಿತ್ರತಂಡ ಕೊಟ್ಟಿರೋದು ಒಂದೇ ಒಂದು ಫಸ್ಟ್ ಲುಕ್ ಪೋಸ್ಟರ್ ಮಾತ್ರ. ಹೀಗಿರುವಾಗ ಆಗಲೇ ರಿಲೀಸ್ ಡೇಟ್ ಫಿಕ್ಸಾಗೋಯ್ತಾ..? ಸಿನಿಮಾನ ಆಕ್ಟೋಬರ್​ನಲ್ಲೇ ರಿಲೀಸ್ ಮಾಡ್ತಾರಾ..? ಹೇಗೆ ಸಾಧ್ಯ..? ಸೆಪ್ಟೆಂಬರ್ ಮುಗಿಯೋಕೆ ವಾರವೂ ಇಲ್ಲ. ಹೇಗೆ..? ಹೇಗೆ..? ಹೇಗೆ..?

    ಉತ್ತರ ಇಲ್ಲಿದೆ. ಸಿನಿಮಾ ಅಕ್ಟೋಬರ್​ನಲ್ಲೇ ರಿಲೀಸ್ ಅಂತಾ ಹೇಳಿರೋದು ಚಿತ್ರತಂಡ ಅಲ್ಲ. ನಿರ್ದೇಶಕ ಕೃಷ್ಣ ಅಥವಾ ನಾಯಕ ಸುದೀಪ್ ಸೇರಿದಂತೆ  ಯಾರೊಬ್ಬರೂ ಇನ್ನೂ ಚಿತ್ರದ ರಿಲೀಸ್ ಬಗ್ಗೆ ಮಾತನಾಡಿಯೇ ಇಲ್ಲ. ಇಂಥಾದ್ದೊಂದು ಎಡವಟ್ಟು ಮಾಡಿರೋದು ಬುಕ್ ಮೈ ಶೋ. 

    ಬುಕ್ ಮೈ ಶೋನಲ್ಲಿ ಪೈಲ್ವಾನ್ ಚಿತ್ರ ಅಕ್ಟೋಬರ್​ನಲ್ಲಿ ರಿಲೀಸ್ ಎಂದು ಅನೌನ್ಸ್ ಮಾಡಲಾಗಿದೆ. ಇದು ಹೇಗಾಯ್ತು ಅನ್ನೋದು ಪೈಲ್ವಾನ್ ತಂಡಕ್ಕಂತೂ ಗೊತ್ತಿಲ್ಲ. ಬುಕ್ ಮೈ ಶೋದವರೇ ಉತ್ತರ ಕೊಡಬೇಕು.

  • ಕಿಚ್ಚನನ್ನು ಜಿಮ್‍ಗೆ ಕಳಿಸಿದ್ದೇ ಇವರು..!

    sudeep's intense workout for pailwan

    ಕಿಚ್ಚ ಸುದೀಪ್, ಒಂದು ಲೆಕ್ಕಾಚಾರದಲ್ಲಿ  ಜಿಮ್ ದ್ವೇಷಿ ಎಂದರೂ ತಪ್ಪಲ್ಲ. ಫಿಟ್‍ನೆಸ್‍ಗೆ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾಡಿದರೆ ಸಾಕು ಎನ್ನುತ್ತಿದ್ದ ಸುದೀಪ್, ಈಗ ಸಿಕ್ಸ್‍ಪ್ಯಾಕ್ ಬೆನ್ನು ಹತ್ತಿದ್ದಾರೆ. ಹಾಗಂತ ಸುದೀಪ್‍ರನ್ನು ಜಿಮ್‍ಗೆ ಹೋಗುವಂತೆ ಮಾಡಿದ್ದು ನಿರ್ದೇಶಕ ಕೃಷ್ಣ ಒಬ್ಬರೇ ಎಂದುಕೊಂಡರೆ ಅದು ತಪ್ಪಾದೀತು. ಪೈಲ್ವಾನ್ ಚಿತ್ರದ ಸ್ಕ್ರಿಪ್ಟ್‍ನ ಜೊತೆಯಲ್ಲೇ ಸುದೀಪ್‍ರನ್ನು ಜಿಮ್‍ಗೆ ಹೋಗುವಂತೆ ಪ್ರೇರೇಪಿಸಿದ ಇನ್ನೊಬ್ಬರು ವ್ಯಕ್ತಿಯೂ ಇದ್ದಾರೆ. 

    ಸುದೀಪ್ ಅವರ ಪ್ರೀತಿಯ ಪತ್ನಿ ಪ್ರಿಯಾ ಅವರೇ ಸುದೀಪ್ ಅವರು ಜಿಮ್‍ಗೆ ಹೋಗುವಂತೆ ಮಾಡಿದವರು. ಇದನ್ನು ಸ್ವತಃ ಸುದೀಪ್ ಅವರೇ ಹೇಳಿಕೊಂಡಿರೋದು ವಿಶೇಷ. ತಮ್ಮ ಜಿಮ್ ಟ್ರೈನರ್ ಜೀತ್ ದೇವಯ್ಯ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿರುವ ಸುದೀಪ್, ತಮ್ಮನ್ನು ಜಿಮ್‍ಗೆ ಹೋಗುವಂತೆ ಮಾಡಲು ಪ್ರೇರೇಪಿಸಿದ ಪತ್ನಿ ಪ್ರಿಯಾಗೆ ಥ್ಯಾಂಕ್ಸ್ ಹೇಳಿದ್ದಾರೆ.

    ತಮ್ಮ ಪರ್ಸನಲ್ ಟ್ರೈನರ್ ಜೀತ್ ದೇವಯ್ಯ ಅವರನ್ನು ಪರಿಚಯಿಸುತ್ತಲೇ, ಯಾಕೆ ಎಲ್ಲರೂ ತಮ್ಮ ತಮ್ಮ ಜಿಮ್ ಟ್ರೈನರ್‍ನ್ನು ಭೂತ, ದೆವ್ವಗಳಂತೆ ನೋಡುತ್ತಾರೆ ಅನ್ನೋದು ನನಗೂ ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿದೆ ಎಂದಿದ್ದಾರೆ ಸುದೀಪ್.

    ಅದಕ್ಕೆ ಜೀತ್ ದೇವಯ್ಯನವರು ಹೇಳಿರುವುದು ಇಷ್ಟು. ` ಒಳ್ಳೆಯ ವ್ಯಕ್ತಿತ್ವ ಇರುವ ಒಬ್ಬ ಜೆಂಟಲ್‍ಮ್ಯಾನ್ ಜೊತೆ ಕೆಲಸ ಮಾಡುತ್ತಿದ್ದೇನೆ. ನಿಧಾನವಾಗಿ ಕೆಲಸ ಶುರುವಾಗಿದೆ. ಗುರಿ ಮುಟ್ಟುತ್ತೇವೆ ಎಂಬ ನಂಬಿಕೆಯಿದೆ'.

  • ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

    pailwanan first look

    ಕಿಚ್ಚ ಸುದೀಪ್ `ಪೈಲ್ವಾನ'ರಾಗುತ್ತಿದ್ದಾರೆ. ಅದೂ ಅಂತಿಂಥ ಪೈಲ್ವಾನ ಅಲ್ಲ. ಗರಡಿ ಮನೆಯ ಕಟ್ಟಾಳು. ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಗರಡಿ ಮನೆಯ ಮಣ್ಣು ಮೆತ್ತಿಕೊಂಡಿರುವ ಹುರಿಗಟ್ಟಿದ ದೇಹದ ಸುದೀಪ್‍ರನ್ನು ನೋಡಿದವರು ವ್ಹಾವ್ ಎಂದಿದ್ದಾರೆ. 

    ಪೈಲ್ವಾನ ಚಿತ್ರದ ಸಂಪೂರ್ಣ ಕಥೆಯೇ ಪೈಲ್ವಾನನ ಕ್ರೀಡೆಯ ಕಥೆ. ದಾವಣಗೆರೆ, ವಿಜಯಪುರ, ಬಾಗಲಕೋಟೆಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮೊದಲ ಚಿತ್ರದಲ್ಲಿ ಯೋಧನೊಬ್ಬನ ಕಥೆ ಹೇಳಿದ್ದ ಕೃಷ್ಣ, ಎರಡನೇ ಚಿತ್ರದಲ್ಲಿ ಪೈಲ್ವಾನನ ಕಥೆ ಆರಿಸಿಕೊಂಡಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಎರಡನೇ ಅವಕಾಶ ಕೊಡುತ್ತೆ. ಹಾಗೆ ತನಗೆ ಸಿಕ್ಕ ಸೆಕೆಂಡ್ ಚಾನ್ಸ್‍ನ್ನು ದಕ್ಕಿಸಿಕೊಳ್ಳಲು ನಾಯಕ ಏನೇನೆಲ್ಲ ಮಾಡಿ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದು ಗುಟ್ಟು ಬಿಟ್ಟಿದ್ದಾರೆ ಕೃಷ್ಣ.

    ಕನ್ನಡ ಸಿನಿಮಾಗಳಲ್ಲಿ ಗರಡಿ ಮನೆಗಳು ಅಪರೂಪವೇನಲ್ಲ. ಆದರೆ, ಗರಡಿ ಮನೆಯ ಪೈಲ್ವಾನನ ಕಥೆಯೇ ಸಿನಿಮಾ ಆಗಿಲ್ಲ. ಹೀಗಾಗಿಯೇ ಪೈಲ್ವಾನ ಸುದೀಪ್ ಹೇಗಿರ್ತಾರೋ ನೋಡಬೇಕು ಎಂಬ ಅಭಿಮಾನಿಗಳ ತುಡಿತ ಜೋರಾಗಿದೆ.

  • ಪೈಲ್ವಾನ್ ಕಿಚ್ಚನ ಹೊಸ ಕಥೆ

    pailwan first look

    ಪೈಲ್ವಾನ್, ಸುದೀಪ್ ಅಭಿನಯದ ಈ ಚಿತ್ರ ಶೂಟಿಂಗ್ ಶುರುವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲ್ಲ. ಆದರೆ, ಪೈಲ್ವಾನ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ಹೀಗಾಗಿ ನಾಯಕಿಯ ಆಯ್ಕೆ ನಿಧಾನವಾಗುತ್ತಿದೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಇನ್ನೂ ಪೈನಲ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಕೃಷ್ಣ.

    ಸುದೀಪ್ ಅವರಿಗೆ ಪೈಲ್ವಾನ್ ಆಗಿ ರೂಪುಗೊಳ್ಳಲು ತರಬೇತಿ ಕೂಡಾ ನೀಡಲಾಗುವುದಂತೆ. ಅದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯಂತೆ. ಪೈಲ್ವಾನ್ ಚಿತ್ರಕ್ಕೆ ಸುದೀಪ್ ಪೈಲ್ವಾನ್ ತರಬೇತಿ ಪಡೆದುಕೊಂಡೇ ಬಣ್ಣ ಹಚ್ಚಲಿದ್ದಾರೆ ಕಿಚ್ಚ.

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಹೆಬ್ಬುಲಿಯಲ್ಲಿ ಅದ್ಭುತ ಸಾಹಸ ಸಂಯೋಜಿಸಿದ್ದ ರವಿವರ್ಮ, ಪೈಲ್ವಾನ್‍ಗೆ ಸಾಹಸ ನಿರ್ದೇಶಕ. ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಎಲ್ಲ ತಯಾರಿಯೂ ಮುಗಿದರೆ, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.

    Related Articles :-

    ಪೈಲ್ವಾನ್ ಸುದೀಪ್​ಗೆ ಸೆಲಬ್ರಿಟಿಗಳ ಬಹುಪರಾಕ್..!

    ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

  • ಪೈಲ್ವಾನ್ ಕ್ರೇಝ್ ಈಗಲೇ ಶುರು

    pailwan craze

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗೇ ಇನ್ನೂ ಶುರುವಾಗಿಲ್ಲ. ಆಗಲೇ ಕ್ರೇಝ್ ಸೃಷ್ಟಿಸಿಬಿಟ್ಟಿದೆ. ಕನ್ನಡದಲ್ಲಿ ಸುದೀಪ್ ಚಿತ್ರಗಳು, ಸುದೀಪ್ ಸ್ಟೈಲ್ ಹೀಗೆ ಕ್ರೇಝ್ ಸೃಷ್ಟಿಸುತ್ತವೆ.

    ಕಳೆದ ಬಾರಿ ಹೆಬ್ಬುಲಿ ಚಿತ್ರದ ಹೇರ್‍ಸ್ಟೈಲ್ ಇಂಥಾದ್ದೊಂದು ಕ್ರೇಝ್ ಸೃಷ್ಟಿಸಿತ್ತು. ಈಗ ಪೈಲ್ವಾನ್ ಚಿತ್ರದ ಗೆಟಪ್ ಅಂಥಾದ್ದೊಂದು ಹವಾ ಎಬ್ಬಿಸಿದೆ. ಅಭಿಮಾನಿಗಳು ಪೈಲ್ವಾನ್ ಗೆಟಪ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಕಿಚ್ಚನಿಗೇ ಟ್ವೀಟ್ ಮಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಪೈಲ್ವಾನ್ ಗೆಟಪ್ ಹಾಕಿಸುತ್ತಿದ್ದಾರೆ. ಹೆಣ್ಣು ಮಕ್ಕಳೂ ಸುದೀಪ್ ಸ್ಟೈಲ್‍ನಲ್ಲಿ ಪೈಲ್ವಾನ್ ಗೆಟಪ್‍ಗೆ ಫೋಸ್ ಕೊಟ್ಟಿದ್ದಾರೆ.

    ಇನ್ನೊಮ್ಮೆ ಕೇಳ್ಕೊಳಿ, ಪೈಲ್ವಾನ್ ಚಿತ್ರದ ಶೂಟಿಂಗೇ ಇನ್ನೂ ಶುರುವಾಗಿಲ್ಲ. ರಿಲೀಸ್ ಹೊತ್ತಿಗೆ ಪೈಲ್ವಾನ್ ಅದ್ಯಾವ ಕ್ರೇಝ್ ಸೃಷ್ಟಿಸುತ್ತದೋ..ಬಲ್ಲವರಿಲ್ಲ.

  • ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ ಸುದೀಪ್

    sudeep to learn martial arts in thailan

    ಕಿಚ್ಚ ಸುದೀಪ್ ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ. ಕುಸ್ತಿ, ಬಾಕ್ಸಿಂಗ್ ಜೊತೆ ಮಾರ್ಷಲ್ ಆಟ್ರ್ಸ್‍ನ್ನೂ ಕಲಿತು ಬರಲಿದ್ದಾರೆ ಸುದೀಪ್. ಇದಕ್ಕಾಗಿ ಅವರು ಥೈಲ್ಯಾಂಡ್‍ಗೆ ಹೋಗುತ್ತಿದ್ದಾರೆ. ಅಲ್ಲಿ 2ರಿಂದ 3  ವಾರಗಳ ಕಾಲ ಇದ್ದು, ಮಾರ್ಷಲ್ ಆಟ್ರ್ಸ್ ಬೇಸಿಕ್ ಕಲಿತುಬರಲಿದ್ದಾರೆ.

    ಅಂದಹಾಗೆ ಸುದೀಪ್ ಇಷ್ಟೆಲ್ಲ ತಯಾರಿ ನಡೆಸುತ್ತಿರುವುದು ಪೈಲ್ವಾನ್ ಚಿತ್ರಕ್ಕಾಗಿ. ಈಗ ಬೆಂಗಳೂರಿನಲ್ಲೇ ಬೆವರು ಹರಿಸುತ್ತಿರುವ ಸುದೀಪ್, ಮಾರ್ಷಲ್ ಆಟ್ರ್ಸ್ ಕಲಿಯೋಕೆ ಹೋಗುವ ಮುನ್ನ ಫಿಟ್ ಆಗಿರಬೇಕು. ಆ ಫಿಟ್‍ನೆಸ್ ಬಂದ ನಂತರವೇ ಮಾರ್ಷಲ್ ಆಟ್ರ್ಸ್ ತರಬೇತಿ ಶುರುವಾಗಲಿದೆ.

    ಚಿತ್ರದ ಚಿತ್ರೀಕರಣ ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಲಿದೆ. ಸುದೀಪ್ ಅವರ ಮಾರ್ಷಲ್ ಆಟ್ರ್ಸ್ ಕಲೆ ಪ್ರೇಕ್ಷಕರಿಗೆ ಪರಿಚಯವಾಗುವುದು ಚಿತ್ರದ ಕ್ಲೈಮಾಕ್ಸ್‍ನಲ್ಲಿ. ಉಳಿದಂತೆ ಚಿತ್ರದ ಚಿತ್ರೀಕರಣ ಸರಾಗವಾಗಿ ನೆರವೇರಲಿದೆ. ಮಾತಿನ ಭಾಗ ಮುಗಿಸಿಕೊಳ್ಳಲಿದ್ದೇವೆ. ಸದ್ಯಕ್ಕೆ ವಿಲನ್ ಚಿತ್ರೀಕರಣ ಮುಗಿಯುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  • ಸಿಕ್ಸ್ ಪ್ಯಾಕ್‍ಗಾಗಿ ಜಿಮ್‍ಗೆ ಹೊರಟ ಸುದೀಪ್

    sudeep's intense workout

    ಹಿಂದಿಯಲ್ಲಿ ಒಂದು ನಂಬಿಕೆಯಿದೆ. ಸಲ್ಮಾನ್ ಖಾನ್ ಚಿತ್ರಗಳಲ್ಲಿ ಅವರ ದೇಹ ಪ್ರದರ್ಶನವಾಗದೇ ಇದ್ದರೆ, ಸಿನಿಮಾ ಗೆಲ್ಲುವುದು ಡೌಟು ಎಂಬ ನಂಬಿಕೆಯದು. ಹೀಗಾಗಿ ಸಲ್ಲು ಚಿತ್ರಗಳಲ್ಲಿ ಅಂಥಾದ್ದೊಂದು ಸೀನ್ ಸೆಕೆಂಡುಗಳ ಲೆಕ್ಕದಲ್ಲಾದರೂ ಬಂದು ಹೋಗಿರುತ್ತೆ. ಹಿಂದಿಯಲ್ಲಿ ಹೃತಿಕ್, ಶಾರೂಕ್, ಕನ್ನಡದಲ್ಲಿ ದುನಿಯಾ ವಿಜಯ್, ಪುನೀತ್, ದರ್ಶನ್ ಮೊದಲಾದವರು ಈಗಾಗಲೇ ತಮ್ಮ ಸಿಕ್ಸ್‍ಪ್ಯಾಕ್‍ನ್ನು ಸಿನಿಮಾಗಳಲ್ಲಿ ತೋರಿಸಿದ್ದಾರೆ. ಆದರೆ, ಅದರಿಂದ ದೂರವೇ ಇದ್ದವರು ಸುದೀಪ್. 

    ದೇಹವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಹೀಗಿದ್ದರೂ, ಸುದೀಪ್ ತಮ್ಮ ದೇಹವನ್ನು ಯಾವುದೇ ಚಿತ್ರಗಳಲ್ಲಿಯೂ ಪ್ರದರ್ಶನ ಮಾಡಿದವರಲ್ಲ. ಆ ಕಾಲ ಈಗ ಹತ್ತಿರವಾಗುತ್ತಿದೆ. ಏಕೆಂದರೆ, ಅವರೀಗ ಪೈಲ್ವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

    ಅದು ಕೃಷ್ಣ ನಿರ್ದೇಶನದ ಚಿತ್ರ. ಒಬ್ಬ ಪೈಲ್ವಾನ್ ಹೇಗೆಂದರೆ ಹಾಗೆ ಇರೋಕೆ ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ನಿಯಮಗಳಿವೆ. ಈವರೆಗೂ ಮಾಡಿದ್ದ ಪಾತ್ರಗಳಲ್ಲಿ ದೇಹ ತೋರಿಸಬೇಕಾದ ಅಗತ್ಯ ಇರಲಿಲ್ಲ. ಆದರೆ, ಈ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲೇಬೇಕಿದೆ ಎಂದಿದ್ದಾರೆ ಕಿಚ್ಚ. 

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery