` sanjana chidanand - chitraloka.com | Kannada Movie News, Reviews | Image

sanjana chidanand

 • ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  sanjana's is pre planned gimmick

  ದರ್ಶನ್ ಚಿತ್ರಗಳಲ್ಲಿ ಬಿಲ್ಡಪ್ ಜಾಸ್ತಿಯಿರುತ್ತೆ.. ಇದು ನಟಿ ಸಂಜನಾ ಹೇಳಿರೋ ಮಾತು. ಇಷ್ಟಕ್ಕೂ ಸಂಜನಾ ಹೇಳಿರೋ ಮಾತಿನ ಹಿಂದಿನ ಮರ್ಮವೇನು..? ಸಂಜನಾ ಈ ಹೇಳಿಕೆ ನೀಡಿದ್ದಾರಲ್ಲಾ.. ಇದು ಆಕಸ್ಮಿಕವಲ್ಲ. ಸಂಜನಾ ಉದ್ದೇಶಪೂರ್ವಕವಾಗಿಯೇ ಬಿಲ್ಡಪ್ ಉತ್ತರ ಕೊಟ್ಟಿದ್ದಾರೆ ಎನ್ನುವುದು ಚಿತ್ರಲೋ ಡಾಟ್ ಕಾಮ್​ಗೆ ಖಚಿತವಗಿದೆ.

  ಸಂಜನಾ ಹೇಳಿಕೆ ನೀಡಿರೋದು ಕಲೡೞ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ. ನಿರೂಪಕ ಅಕುಲ್ ಬಾಲಾಜಿ. ಅದು ರೆಕಾರ್ಡೆಡ್ ಕಾರ್ಯಕ್ರಮ. ಆ ದಿನ ಇಂಥಹ ಪ್ರಶ್ನೆಗಳು ಬರುತ್ತವೆ ಎನ್ನುವುದು ಸಂಜನಾಗೆ ಗೊತ್ತಿತ್ತು. ಇಂತಹ ಪ್ರಶ್ನೆಗಳಿಗೆ ದೊಡ್ಡ ಸೆಲಬ್ರಿಟಿಗಳ ಹೆಸರು ಬಳಸಿಕೊಳ್ಳಬೇಕೆಂದು ಸಂಜನಾ ನಿರ್ಧರಿಸಿಯೂ ಆಗಿತ್ತು. ಅದನ್ನು ಅಲ್ಲಿದ್ದ ಕೆಲವರ ಜೊತೆ ಹೇಳಿಕೊಂಡಿದ್ದರು ಎನ್ನುವ ವಿಚಾರವನ್ನು  ಕೂಡಾ ಚಿತ್ರಲೋಕ ಡಾಟ್ ಕಾಮ್ ಸುದ್ದಿಮೂಲಗಳು ಸ್ಪಷ್ಟಪಡಿಸಿವೆ.

  ಸಂಜನಾರ ನಿರ್ಧಾರದ ಬಗ್ಗೆ ಕೆಲವರು ಬುದ್ದಿಮಾತನ್ನು ಹೇಳಿದ್ದಾರೆ. ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ. ಟೀಕಿಸುತ್ತಾರೆ ಎಂದೆಲ್ಲ ತಿಳಿಸಿದ್ದಾರೆ. ಆದರೆ ಸಂಜನಾ ನನಗೆ ಬೇಕಿರುವುದೇ ಅದು. ಮಿನಿಮಮ್ ಒಂದು ವಾರ ಸುದ್ದಿಯಲ್ಲಿರುತ್ತೇನೆ. ಅದು ನೆಗೆಟಿವ್ ಆದರೂ ಆಗಲೀ, ಪಾಸಿಟಿವ್ ಆದರೂ ಆಗಲಿ. ನಾನು ಪ್ರಚಾರದಲ್ಲಿರುತ್ತೇನೆ ಎಂದಿದ್ದಾರೆ.

  ಅಲ್ಲಿಗೆ ಸಂಜನಾರ ಈ ಮಾತಿನ ಹಿಂದಿರೋದು ಪ್ರಚಾರದ ಹುಚ್ಚೇ ಹೊರತು ಮತ್ತೇನೂ ಅಲ್ಲ ಅನ್ನೋದು ಪಕ್ಕಾ ಆಗಿದೆ. ಆಕೆಯ ನಿರೀಕ್ಷೆಯಂತೆಯೇ ಈಗ ದರ್ಶನ್ ಅಭಿಮಾನಿಗಳು ಸಂಜನಾಗೆ ಝಾಡಿಸುತ್ತಿದ್ದಾರೆ. ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಗುತ್ತಿದೆ. ಆಕೆಯ ಪ್ರಚಾರದ ಬಯಕೆಯೂ ಈಡೇರಿದೆ. ಸಿಂಪಲ್ಲಾಗಿ ಹೇಳಬೇಕೆಂದರೆ, ಸಂಜನಾ ದರ್ಶನ್ ಹೆಸರಲ್ಲಿ ಪ್ರಚಾರದ ಬೇಳೆ ಬೇಯಿಸಿಕೊಂಡಿದ್ದಾರೆ.

  ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರೋದು ಇಷ್ಟೆ. ಆಕೆಗೆ ದರ್ಶನ್ ಹೆಸರು ಹೇಳಿ ಫೇಮಸ್ ಆಗುವ, ಸುದ್ದಿಯಾಗುವ ಹುಚ್ಚು. ಸುದ್ದಿಯನ್ನು ತಾವೇ ಸೃಷ್ಟಿಸಿಕೊಂಡು, ಬೇಕೆಂದೇ ಮಾಡಿಕೊಳ್ಳುವ ಹುಚ್ಚು ಮನಸ್ಸುಗಳನ್ನು ನಿರ್ಲಕ್ಷಿಸುವುದೇ ಉತ್ತಮ ಅಲ್ಲವೇ..?

 • ಚಿತ್ರಲೋಕ ಹೇಳಿದ್ದನ್ನೇ ಪ್ರಥಮ್ ಹೇಳಿದಾಗ..

  pratham reveals what chitraloka exposed

  ಸಂಜನಾ ಅವರ ಬಿಲ್ಡಪ್ ದರ್ಶನ್ ಹೇಳಿಕೆ ಸಡನ್ನಾಗಿ ಬಂದಿದ್ದೇನೂ ಅಲ್ಲ. ಆ ಹೇಳಿಕೆ ಕೊಡುವಾಗ ಪ್ಲಾನ್ ಹಾಕಿಕೊಂಡೇ ಹೇಳಿದ್ದರು. ಅಂಥಾದ್ದೊಂದು ಸ್ಟೇಟ್‍ಮೆಂಟ್ ಕೊಡುವಾಗ ಅವರಿಗೆ ಅದು ಹೋಗುವ ರೀತಿ, ವಿವಾದವಾಗುವ ಬಗೆ ಎಲ್ಲದರ ಅರಿವೂ ಇತ್ತು. ಕೇವಲ ಸುದ್ದಿಯಲ್ಲಿರುವ ಕಾರಣಕ್ಕಾಗಿ ಸಂಜನಾ ಅಂತಹ ಹೇಳಿಕೆ ಕೊಟ್ಟಿದ್ದರು ಎನ್ನುವುದನ್ನು ಚಿತ್ರಲೋಕ ನಿನ್ನೆಯಷ್ಟೇ ವರದಿ ಮಾಡಿತ್ತು. ಈಗ ಆ ಮಾತಿಗೆ ಪುಷ್ಠಿ ನೀಡುವಂತೆ ಪ್ರಥಮ್ ಕೂಡಾ ಅದೇ ಮಾತು ಹೇಳಿದ್ದಾರೆ. ಅಂದಹಾಗೆ ಪ್ರಥಮ್, ಸಂಜನಾ ಜೊತೆಗೆ ಅದೇ ಶೋನಲ್ಲಿ ಪಾಲ್ಗೊಂಡಿದ್ದ ನಟ.

  ಶೋ ಮುಗಿದ ಮೇಲೆ ಮಾತನಾಡುವಾಗ ನನ್ನ ಎದುರೇ ಒಬ್ಬರು ಸಂಜನಾಗೆ ಹೇಳಿದರು. ಟ್ರಸ್ಟ್ ಮೀ, ಇಟ್ಸ್ ವಿಲ್ ಬಿ ಬಿಗ್ಗೆಸ್ಟ್ ಟ್ರೋಲ್ ಎವರ್ ಎಂದರು. ಆಗ ಸಂಜನಾ ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ಏನು ಹೇಳಿದ ಗೊತ್ತಾ..? ಒಳ್ಳೆಯದೋ.. ಕೆಟ್ಟದ್ದೋ.. ನನಗೆ ಬೇಡ. ಇವಳ ಹೆಸರು ಪಬ್ಲಿಸಿಟಿಯಲ್ಲಿರಬೇಕು. ಇವಳು ದರ್ಶನ್ ಹೆಸರು ಹೇಳಿರೋದ್ರಿಂದ ಒಂದು ವಾರ ಇವಳ ಹೆಸರು ಪಬ್ಲಿಸಿಟಿಯಲ್ಲಿ ಇರುತ್ತಾ..? ಜಸ್ಟ್ ಚಿಲ್ ಎಂದ.

  ಆದರೆ, ಇದರ ಬಗ್ಗೆ ಪ್ರಥಮ್ ಬಳಿ ಏನೂ ಸಾಕ್ಷಿ ಇಲ್ಲವಂತೆ. ನನಗೆ ಹೊಡೆದಾಗಲೇ ಸಾಕ್ಷಿ ಇಟ್ಟುಕೊಳ್ಳದ ದಡ್ಡನಾನು, ಇದಕ್ಕೆಲ್ಲಿಂದ ಸಾಕ್ಷಿ ತರಲಿ ಎಂದಿದ್ದಾರೆ ಪ್ರಥಮ್. ದರ್ಶನ್ ಮೇಲೇಕೆ ಪ್ರೀತಿ ಎಂಬ ಬಗ್ಗೆಯೂ ಪ್ರಥಮ್ ಬರೆದುಕೊಂಡಿದ್ದಾರೆ. ಪ್ರಥಮ್ ಅವರನ್ನು ಪ್ರಥಮ್ ಸರ್ ಎಂದು ಕರೆದ ಮೊದಲ ವ್ಯಕ್ತಿ ದರ್ಶನ್ ಅಂತೆ. ಹಾಗಾಗಿ ದರ್ಶನ್ ಅವರನ್ನು ತುಂಬಾ ಗೌರವಿಸುತ್ತೇನೆ. 

  ಅವರ ಬಗ್ಗೆ ಹಾಗೆ ಹೇಳಿದಾಗ ಸಹಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಪ್ರಥಮ್.

  Related Articles :-

  ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್ 

  ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

 • ತೆಲುಗಿಗೆ ಹಾರಿದ ಬಿಗ್‍ಬಾಸ್ ಸಂಜನಾ

  big boss sanjana flies tollywood

  ಬಿಗ್‍ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಸಂಜನಾ, ಈಗ ತೆಲುಗಿನತ್ತ ಹೊರಟಿದ್ದಾರೆ. ತೆಲುಗಿನಲ್ಲಿ ಸಿಕ್ಕ ಅವಕಾಶಕ್ಕಾಗಿ ಕನ್ನಡದ ರಿಯಾಲಿಟಿ ಶೋದಿಂದ ಹೊರಬಂದಿದ್ದಾರೆ ಸಂಜನಾ.

  ಕನ್ನಡ ಕಿರುತೆರೆಯಲ್ಲಿ ಕಾಮಿಡಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸುತ್ತಿದ್ದದ್ದ ಸಂಜನಾಗೆ, ತೆಲುಗು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದು ಸಿಕ್ಕಿದೆಯಂತೆ. ಹೀಗಾಗಿ ಅನಿವಾರ್ಯವಾಗಿ ರಿಯಾಲಿಟಿ ಶೋದಿಂದ ಹೊರಬರಬೇಕಾಯಿತು ಎಂದಿದ್ದಾರೆ ಸಂಜನಾ.

  ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿರುವಾಗ ತೆಲುಗಿನಲ್ಲಿ ಸೀರಿಯಲ್ ಒಪ್ಪಿಕೊಂಡಿದ್ದು  ಏಕೆ ಎಂಬ ಬಗ್ಗೆ ಸಂಜನಾ ಮಾತನಾಡಿಲ್ಲ.

 • ದರ್ಶನ್ ಅಂದ್ರೆ ಬಿಲ್ಡಪ್ - ಸಂಜನಾ

  sanjana chidanand darshan image

  ಇತ್ತೀಚೆಗಷ್ಟೇ ಕಲರ್ಸ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ ಶೋ ಅಫ್ ಎಂದರೆ ಯಶ್ ನೆನಪಾಗ್ತಾರೆ ಎಂದು ಹೇಳಿದ್ದ ರಶ್ಮಿಕಾ, ಯಶ್ ಅಭಿಮಾನಿಗಳ ಕಟು ಟೀಕೆಗೆ ಗುರಿಯಾಗಿದ್ದರು. ನಂತರ ಅವರು ಕ್ಷಮೆ ಕೇಳಿದ್ದು, ಯಶ್ ಕೂಡಾ ಮಧ್ಯ ಪ್ರವೇಶಿಸಿ ಅಭಿಮಾನಿಗಳನ್ನು ಶಾಂತರಾಗಿಸಿದ್ದು ಈಗ ಮುಗಿದ ಅಧ್ಯಾಯ. ಈಗ ಅಂತಾದ್ದೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ ನಟಿ ಸಂಜನಾ. ಈ ಸಂಜನಾ ಗಂಡ ಹೆಂಡತಿ ಖ್ಯಾತಿಯ ಸಂಜನಾ ಅಲ್ಲ. ಇತ್ತೀಚೆಗೆ ಬಿಗ್ಬಾಸ್ ಮೂಲಕ ಖ್ಯಾತಿಗೆ ಬಂದ ಸಂಜನಾ. 

  ಪ್ರಥಮ್ ಮತ್ತು ಭುವನ್ ನಡುವಿನ ಜಗಳದಲ್ಲಿ ಪದೇ ಪದೇ ಪ್ರಸ್ತಾಪವಾಗಿದ್ದ ಹೆಸರು ಈ ಸಂಜನಾ ಅವರದ್ದು. ಈ ಸಂಜನಾ ಅದೇ ಕಲರ್ಸ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ ಅಕುಲ್ ಬಾಲಾಜಿಯ ರ್ಯಾಪಿಡ್ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಹಾಗೆ ಉತ್ತರ ಕೊಡುವಾಗ ಬಿಲ್ಡಪ್ ಎಂದರೆ ಯಾರು ನೆನಪಾಗ್ತಾರೆ ಎಂದು ಹೇಳಬೇಕಿತ್ತು. ಆಗ ಸಂಜನಾ ಕೊಟ್ಟಿರುವ ಉತ್ತರ ದರ್ಶನ್ ಅವರದ್ದು.

  ಕಾರ್ಯಕ್ರಮ ಪ್ರಸಾರವಾಗಿದ್ದೇ ತಡ. ದರ್ಶನ್ ಅಭಿಮಾನಿಗಳು ಸಂಜನಾ ಅವರ ವಿರುದ್ಧ ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ. ಸಂಜನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಟಿ ಸಂಜನಾ ದರ್ಶನ್ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

  ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನನಗೆ ಆ ಸ್ವಾತಂತ್ರ್ಯವಿದೆ ಎನ್ನುವುದು ಕಾಲೆಳೆದವರಿಗೆ ಸಂಜನಾ ಕೊಟ್ಟಿರುವ ಉತ್ತರ.

   

 • ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  sanjana chidananad apologies to darshan

  ಬಿಲ್ಡಪ್ ದರ್ಶನ್ ವಿವಾದ ಅಂತ್ಯವಾಗುತ್ತಾ..? ಏಕೆಂದರೆ, ಸಂಜನಾ ಕೂಡಾ ರಶ್ಮಿಕಾ ಅವರಂತೆಯೇ ಈಗ ದರ್ಶನ್ ಕ್ಷಮೆ ಕೇಳಿದ್ದಾರೆ. ಟಿವಿ ಶೋನಲ್ಲಿ ದರ್ಶನ್ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬಿಲ್ಡಪ್ ತಗೋತಾರೆ ಎಂದು ಹೇಳಿ ವಿವಾದಕ್ಕೀಡಾಗಿದ್ದ ಸಂಜನಾ ಈಗ ಕ್ಷಮೆ ಕೇಳಿದ್ದಾರೆ.

  ನಾನು ಆ ಮಾತನ್ನು ದರ್ಶನ್​ ಅವರಿಗಾಗಲೀ, ದರ್ಶನ್ ಅಭಿಮಾನಿಗಳಾಗಲಿ ನೋವಾಗಲಿ ಎಂದು ಹೇಳಿದ್ದಲ್ಲ. ಅಕುಲ್ ಅವರು ಕೇಳಿದ ಪ್ರಶ್ನೆಗೆ ಸಡನ್ನಾಗಿ ಬಂದ ಉತ್ತರ ಹೇಳಿದೆ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ ಸಂಜನಾ.

  Related Articles:-

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

 • ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್ 

  pratham seeks apology to darshan

  ಎಲ್ಲ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ. ಕ್ಷಮಿಸಿ ದರ್ಶನ್ ಸರ್, ನಿಮಗೆ ಅಗೌರವ ಮಾಡಿದ ನಾಲಾಯಕ್ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ದಯವಿಟ್ಟು ಕ್ಷಮಿಸಿ. ಈಗಲೂ ಸ್ಕ್ರೀನ್ ಶೇರ್ ಮಾಡ್ತಾ ಇರೋದಕ್ಕೆ ನನಗೆ ನನ್ನ ಮೇಲೆಯೇ ನಾಚಿಕೆ ಇದೆ. ನಾನು ಈ ಕಾರಣಕ್ಕೆ ಆ ಹೆಣ್ಣಿನ ರೂಪದಲ್ಲಿರೋ ಕಸದ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಹಿಂಸೆ.

  ಇದು ದರ್ಶನ್ ಮತ್ತು ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ಕ್ಷಮೆ ಕೇಳಿರುವ ಪರಿ.

  ಅಂದ ಹಾಗೆ ಪ್ರಥಮ್ ಈ ಮಾತು ಹೇಳಿರೋದು ಸಂಜನಾ ಅವರ ಬಿಲ್ಡಪ್ ವಿವಾದದ ಬಗ್ಗೆ. ಸಂಜನಾ ಕ್ಷಮೆ ಕೇಳಿದ ನಂತರ, ಸಂಜನಾ ಅವರ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ, ಅವರ ಜೊತೆ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಕೂಡಾ ಬೇಜಾರು ಮಾಡಿಕೊಂಡಿದ್ದಾರೆ.

  Related Articles :-

  ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

   

 • ಬಿಗ್‍ಬಾಸ್ ಸಂಜನಾ ಎಂಗೇಜ್ ಆದ್ರು..!

  sanjana chidanand to be engaged soon

  ಬಿಗ್‍ಬಾಸ್ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದವರು ಸಂಜನಾ. ಬಿಗ್‍ಬಾಸ್‍ನಲ್ಲಿಯೇ ಇದ್ದ ಪ್ರಥಮ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದಾರಂತೆ ಅನ್ನೋದು ಸುದ್ದಿಯಾಗಿತ್ತು. ನಂತರ, ಭುವನ್ ಜೊತೆ ಲವ್‍ನಲ್ಲಿದ್ದಾರೆ ಅನ್ನೋದು ಇನ್ನೊಂದು ಸುದ್ದಿಯಾಯ್ತು. ಈಗ, ಅವರು ಯಾರೂ ಅಲ್ಲ. ಸಂಜನಾ ಅವರನ್ನು ಮದುವೆಯಾಗುತ್ತಿರುವ ಹುಡುಗ ಗೌರವ್.

  ಗೌರವ್, ಸಂಜನಾ ಅವರ ಬಾಲ್ಯದ ಗೆಳೆಯ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದಿರುವ ಸಂಜನಾ, ಶೀಘ್ರದಲ್ಲಿಯೇ ಎಂಗೇಜ್‍ಮೆಂಟ್ ನಡೆಯಲಿದೆ ಎಂದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery